` yogaraj bhat, - chitraloka.com | Kannada Movie News, Reviews | Image

yogaraj bhat,

  • Yogaraj Bhatt's New Film Titled Mugulunage

    yogaraj bhatt ganesh image

    Yogaraj Bhatt's new film starring Ganesh is all set to be launched in the month of December. Meanwhile, the film has been titled as 'Mugulunage'.

    The new film has four heroines and Amulya, 'Jackie' Bhavana, Nikitha Narayan and Ashitha have been roped into play the female leads of the film.The new film is jointly produced by Golden Movies as well as Yogaraj Movies.

    The shooting for 'Mugulunage' will be held in Bangalore, Pondicherry, Mysore and other places. Sugnan is the cameraman, while V Harikrishna is the music director. Yogaraj Bhatt himself has written the story, screenplay and dialogues of the film.

  • Yogaraj Bhatt's New film Titled Nanna Hesare Anuraagi

    nanna hesare anuraagi image

    Yogaraj Bhatt is thorough with his new film 'Dana Kayonu' starring Vijay and Priyamani in prominent roles. The film is in the post production stage and Bhatt has announced a new film called 'Nanna Hesare Anuraagi'.

    'Nanna Hesare Anuraagi' marks the debut of Akash Nagpal son of an educationalist called Suresh Nagpal. Akash has studied acting in America and is looking forward to act in a film. Suresh Nagpal himself is producing the film for his son.

    Apart from direction, Yogaraj Bhatt himself has written the story, screenplay and dialogues of the film.V Harikrishna has scored the music and Gnanamurthy is likely to be the cinematographer of the film.

    The film is going on floors soon.

  • Yogaraj Bhatt's Song for PUC Students

    yogaraj bhat image

    Earlier, Yogaraj Bhatt had written a song about the Lok Sabha elections which was held two years back. Now the director turned actor has written another song regarding the recent IInd PUC Chemistry question paper leak scandal.

    While the IInd PUC Chemistry question paper leak is making headlines almost everyday, Yogaraj Bhatt has written a song on the question paper leak. The lyrics is written for a tune from his latest film 'Dana Kayonu'. The tune is composed by V Harikrishna and Yogaraj Bhatt, 'Duniya' Vijay and Chetan Soska has sung the song.

  • Yograj Bhat Directing 3 Kannada Films This Year

    yogaraj bhat image

    In a career of a dozen years since Mani, ace director Yogaraj Bhat has directed only eight films. But 2015 will be very different. He will be directing a total of three films this year. His latest film Vaastu Prakara starring Jaggesh, Rakshit Shetty and others is expected to release this month end.

    He will start shooting for his film with Ganesh immediately after that. The tentative start of his first film with Ganesh since Gaalipata is slated for March 28. In July, Bhat is directing an action film with newcomers. Immediately after that in October, he has another film with newcomers which is a romantic comedy.

  • Yograj Bhat Shaking And Jaggesh Thrilled 

    chouka film song

    The Alladsu Alladsu song from Chowka is becoming the new sensational song in Sandalwood. Written by Yograj Bhat with music by Harikrishna and sung by Vijay Prakash the song has already become a hit.

    Senior actor Jaggesh is also very happy with the song and has commented that it is one of the best song with folk effect that he has heard in a while. The multistarrer Chowka is nearing release. Lifeu Tonic Bottle Kudiyok Munche Alladsu has taken the internet by storm. The film is directed by Tharun Sudhir and is the 50th film under Dwarakish Chitra banner.

    Related Articles :-

    Chauka Releasing On January 19th

    Chauka Releasing on December 23rd

    Chauka Likely To Release On October 28th

    Chauka Heroines Revealed - Exclusive

    Chauka Songs to be Released on August 15th

    Deepa Sannidhi is Prajwal's Heroine in Chauka - Exclusive

    Chauka Characters Revealed

    Five Music Directors for Chauka

    Five Cinematographers for Chauka? - Exclusive

    Chauka Launching on January 01st

    Dwarkish's 50th Film is Chauka

  • ಅನಂತನಾಗ್ ಸೂಪರ್ ಹಿಟ್

    ಅನಂತನಾಗ್ ಸೂಪರ್ ಹಿಟ್

    ಅನಂತನಾಗ್ ಮತ್ತೊಮ್ಮೆ ಹೀರೋ ಆಗಿದ್ದಾರೆ. ಅದು ಗಾಳಿಪಟದಲ್ಲಿ. ಅರೆ ಚಿತ್ರದ ಹೀರೋ ಗಣೇಶ್ ಅಲ್ಲವಾ ಎನ್ನಬೇಡಿ. ಗಣೇಶ್ ಹೀರೋ. ಡೌಟಿಲ್ಲ. ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್.. ಹೀಗೆ ಎಲ್ಲರೂ ಇದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನ.. ಎಲ್ಲವೂ ಇದ್ದು ಚಿತ್ರದಲ್ಲಿ ಪ್ರೇಕ್ಷಕರಿಗೆ ಅನಂತನಾಗ್ ಅವರ ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಉಘೇ ಎಂದಿದ್ದಾರೆ.

    ಕನ್ನಡ ಮೇಷ್ಟ್ರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಅನಂತನಾಗ್, ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಂತೂ ಪ್ರೇಕ್ಷಕರ ಕಣ್ಣಂಚು ಒದ್ದೆಯಾಗಿಸಿದ್ದಾರೆ.

    ಭಟ್ಟರ ಚಿತ್ರಗಳಲ್ಲಿ ಅನಂತ್ ನಾಗ್ ಹೆಚ್ಚೂ ಕಡಿಮೆ ಖಾಯಮ್ಮಾಗಿರುತ್ತಾರೆ. ಮುಂಗಾರು ಮಳೆ, ಗಾಳಿಪಟ, ಪಂಚರಂಗಿ, ವಾಸ್ತುಪ್ರಕಾರ.. ಹೀಗೆ ಬಹುತೇಕ ಎಲ್ಲ ಚಿತ್ರಗಳಲ್ಲೂ ಇದ್ದ ಅನಂತನಾಗ್ ಗಾಳಿಪಟ 2 ದಲ್ಲಿ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಪ್ರೇಕ್ಷಕರನ್ನು ಭಾವುಕರನ್ನಾಗಿಸಿದ್ದಾರೆ. ಅನಂತ್ ಅವರಿಗೇ ಮಾತು ಮೌನದಲ್ಲಿ ಪೈಪೋಟಿ ನೀಡಿರುವುದು ಗಣೇಶ್.

    ಗೋಧಿಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಅನಂತನಾಗ್ ನೆನಪಾಗುತ್ತಾರೆ.

  • ಅಂಬಿ ಹುಟ್ಟುಹಬ್ಬಕ್ಕೆ ಭಟ್ಟರ ಸಾಂಗು

    yogaraj bhatt's lyrical tribute

    ಅಂಬರೀಷ್.. ಮಾತಿನಲ್ಲಿ ಒರಟು.. ಆದರೆ ಹೃದಯವಂತ. ಆವಾಜು ಹಾಕೋದ್ರಲ್ಲಿ ಸ್ಟ್ರಾಂಗು.. ಚಿತ್ರರಂಗದವರೇ ಆಗಲೀ, ಪತ್ರಕರ್ತರೇ ಆಗಲೀ.. ರಾಜಕಾರಣದಲ್ಲಿರುವವರೇ ಆಗಲೀ.. ಅಪ್ಪಟ ಮಂಡ್ಯ ಸಂಸ್ಕøತದಲ್ಲಿಯೇ ಮಾತನಾಡುವ ಅಂಬರೀಷ್ ಅವರ ವ್ಯಕ್ತಿತ್ವ ಕಲರ್‍ಫುಲ್. 

    ಅಂಬರೀಷ್ ಅವರನ್ನು ಹತ್ತಿರದಿಂದ ನೋಡಿರುವವರಲ್ಲಿ ಯೋಗರಾಜ್ ಭಟ್ಟರೂ ಒಬ್ಬರು. ಅಂಬರೀಷ್‍ಗೆ ಬೊಂಬೆ ಆಡ್ಸೋನು ಎಂಬ ಲೈಫ್‍ಟೈಂ ಸಾಂಗು ಕೊಟ್ಟಿದ್ದ ಭಟ್ಟರು, ಈಗ ಅಂಬಿ ಹುಟ್ಟುಹಬ್ಬಕ್ಕೆ ಒಂದು ಸ್ಪೆಷಲ್ ಹಾಡನ್ನೂ ಕೊಟ್ಟಿದ್ದಾರೆ.

    ಬರ್ತ್ ಡೇ ಎಂಬುದು ಭಗವಂತನ ದೈವ.. ಅಂಬ್ರೀಸಣ್ಣ 66.. ಸಿಕ್ಸರ್ ಮೇಲೆ ಸಿಕ್ಸರ್..

    ಮಂಡ್ಯದ ಗಂಡಿಗಿನ್ನೂ ಜಸ್ಟ್ 16.. ಲೆಕ್ಕಕ್ಕೆ ಹೇಳ್ತಾರಪ್ಪೋ 66..

    ಕೋಟಿ ಕಾಲ ಬಾಳಲಿ ಹಾಯಾಗಿ ಇವ್ರು

    ಇವ್ರಿಗೆ ಲೈಫು ಅನ್ನೋದು ಒಂದು ಸುಂದರ ಟೂರು

    ನಂಬಿದ ಮಂದಿಗೆ ದಿಲ್‍ದಾರು ಕಾಣಯ್ಯೋ..

    ಮನಸು ತುಂಬಾ ಸ್ಮೂತು.. ಅವಾಜು ಸ್ಟ್ರಾಂಗಯ್ಯೋ..

    ದೋಸ್ತಿಲಿ ಇವರೇ ನಂಬರ್ ಒನ್ ಒನ್ನಯ್ಯ

    ಪ್ರೀತಿಗೆ ಇನ್ನೊಂದು ಹೆಸರೇ ಅಂಬರೀಷ್ ಅಣ್ಣಯ್ಯ

    ಬೇರೆ ಯಾರಿಗೈತೆ ಇಷ್ಟು ದೊಡ್ಡ ಹೃದಯ

    ಹುಟ್ಟಿದ ಹಬ್ಬಕ್ಕೆ ಇವ್ರಿಗೆ ಶುಭಾಶಯ

    ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದ ಹಾಡಿನ ಟ್ಯೂನ್‍ನ್ನೇ ಬಳಸಿರುವ ಭಟ್ಟರು, ಹಾಡನ್ನು ಶಶಾಂಕ್ ಶೇಷಗಿರಿ ಅವರಿಂದ ಹಾಡಿಸಿದ್ದಾರೆ. ಹಾಡು.. ಅಂಬರೀಷ್‍ರ ವ್ಯಕ್ತಿತ್ವವನ್ನು ಪದಗಳಲ್ಲಿ ಹಿಡಿದಿಟ್ಟಿದೆ.

  • ಈ ವಯಸ್ಸಲ್ ಏನ್ಮಾಡೋದೋ ಗೊತ್ತಾಗೋದಿಲ್ಲ.. ತಪ್ಪು ನಮ್ದಲ್ಲ

    panchatantra's second song released

    ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ ಅನ್ನೋ ಹಾಡು ಬಿಟ್ಟು, ಚಳಿಗಾಲದಲ್ಲಿ ನೋಡುಗರ ಮೈ ಬೆಚ್ಚಗಾಗಿಸಿದ್ದ ಯೋಗರಾಜ್ ಭಟ್ಟರು, ಪಂಚತಂತ್ರ ಚಿತ್ರದ 2ನೇ ಹಾಡಿನಲ್ಲಿ ಬಿಸಿಯಾದ ಮೈ ಕುಣಿದು ಕುಪ್ಪಳಿಸುವಂತೆ ಮಾಡಿಬಿಟ್ಟಿದ್ದಾರೆ. ಈ ವಯಸ್ಸಲ್ ಏನ್ಮಾಡೋದೋ ಗೊತ್ತಾಗೋದಿಲ್ಲ.. ಇಪ್ಪತ್ತನಾಲ್ಕು ಗಂಟೆ ಸಾಕಾಗ್ತಾ ಇಲ್ಲ.. ಅನ್ನೋ ಹಾಡು ಹುಡುಗ/ಹುಡುಗಿಯರನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ. ಹಾಗೆ ನೋಡಿದರೆ ಭಟ್ಟರ ಈ ಹಾಡು, ಯುವಕ/ಯುವತಿಯರ ಮನಸ್ಸಿನಲ್ಲಿ ಆಗಾಗ್ಗೆ ಸುಳಿದು ಹೋಗುವ ಪದಗಳೇ. 

    ದೊಡ್ಡವರ ಬಗೆಗಿನ ಯುವಕರ ಕಂಪ್ಲೇಂಟುಗಳೇ ಹಾಡಿನಲ್ಲಿರೋ  ಪದಗಳು. ತಾವು ಯುವಕರಾಗಿದ್ದಾಗ ಅನುಭವಿಸಿದ್ದ ಮತ್ತು ತಮ್ಮ ಮಕ್ಕಳು ಇನ್ನಷ್ಟು ದೊಡ್ಡವರಾದ ಮೇಲೆ ಅನುಭವಿಸಬೇಕಿರುವ ಎಲ್ಲವನ್ನೂ ಪದಗಳಲ್ಲೇ ಹಿಡಿದಿಟ್ಟಿದ್ದಾರೆ ಭಟ್ಟರು. ಅದನ್ನು ಅಷ್ಟೇ ಚೆಂದವಾಗಿ ಹಾಡಿರೋದು ಹರಿಕೃಷ್ಣ. ಸಿಂಪಲ್ಲಾಗ್ ಹೇಳಬೇಕಂದ್ರೆ, ಇದು ಅಪ್ಪಟ ಪಾರ್ಟಿ ಸಾಂಗ್. 

  • ಎಣ್ಣೆ ಪಾಲ್ಟಿ ಮಾಡ್ತಿಲಾ.. : ಗಾಲಿಪಟ 2ನ ಮೂಲನೇ ಸಾಂಗು ಇವತ್ತು ಲಿಲೀಸು..!

    ಎಣ್ಣೆ ಪಾಲ್ಟಿ ಮಾಡ್ತಿಲಾ.. : ಗಾಲಿಪಟ 2ನ ಮೂಲನೇ ಸಾಂಗು ಇವತ್ತು ಲಿಲೀಸು..!

    ಇದು ಖಂಡಿತಾ ಟೈಪಿಂಗ್ ಮಿಸ್ಟೇಕ್ ಅಲ್ಲ. ತಡವರಿಸುವಿಕೆಗೆ ದಿವ್ಯೌಷಧಿ ಸಿಗದೇ ಹುಡುಕಾಡಿದಾಗ ಡಾಕ್ಟರ ಹಿಡಿತಕ್ಕೂ ಸಿಗದೆ ಆದ ದುಷ್ಟ್ಪರಿಣಾಮವಿದು. ಅಂದಹಾಗೆ ಇವತ್ತು.. ಅಂದ್ರೆ ಆಗಸ್ಟ್ 14ನೇ ತಾರೀಕು ಸಂಜೆ 5ಕ್ಕೆ ರಿಲೀಸು.

    ಬರೆದಿರೋದು ಯೋಗರಾಜ್ ಭಟ್ಟರು. ಹಾಡಿರೋದು ವಿಜಯ್ ಪ್ರಕಾಶ್. ಮ್ಯೂಸಿಕ್ಕು ಅರ್ಜುನ್ ಜನ್ಯ ಅವರದ್ದು.

    ಯೋಗರಾಜ್ ಭಟ್ ಎಣ್ಣೆ ಸಾಂಗು ಎಂದರೆ.. ಕುಡುಕರು ನಮ್ಮನ್ನೂ ಸೀರಿಯಸ್ ಆಗಿ ತಗೊಳ್ಳೋವ್ರು ಇದ್ದಾರಲ್ಲ ಎಂದು ಖುಷಿಯಾಗಿ ಎರಡು ಪೆಗ್ ಹೆಚ್ಚಿಗೇ ಹಾಕ್ತಾರೆ. ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು..

    ನಾವ್ ಮನೆಗ್ ಹೋಗೋದಿಲ್ಲ..

    ಬಾಯಾರಿದೆ ಬೈಬೇಡಿ.. ಒಂಚೂರೇ ನಾ ಕುಡಿದೆನು..

    ಗ್ಲಾಸು ಗ್ಲಾಸಿಗೆ ತಾಗೋ ಟೈಮಲಿ..

    ಹಾಲು ಕುಡ್ದ ಮಕ್ಳೆ ಬದುಕಲ್ಲ..

    ಹೊಡಿ ಒಂಭತ್..

    ಹೀಗೆ ಎಣ್ಣೆ ಹೊಡೆಯುವವರಿಗಾಗಿಯೇ ಹಲವು ಹಾಡುಗಳಿವೆ. ಆದರೆ.. ಭಟ್ಟರ ಹಾಡುಗಳ ಕಿಕ್ಕೇ ಬೇರೆ. ಈಗ ಗಾಳಿಪಟ 2 ಚಿತ್ರದ ದೇವ್ಲೇ ದೇವ್ಲೇ ಹಾಡು ರಿಲೀಸ್ ಆಗುತ್ತಿದೆ.

    ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ಸಂಯುಕ್ತಾ ಮೆನನ್, ಅನಂತ್ ನಾಗ್, ರಂಗಾಯಣ ರಘು ನಟಿಸಿರೋ ಚಿತ್ರಕ್ಕೆ ರಮೇಶ್ ರೆಡ್ಡಿ ನಿರ್ಮಾಪಕರು. ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿರೋ ಗಾಳಿಪಟ 2 ಚಿತ್ರ ಯೋಗರಾಜ್ ಭಟ್-ಗಣೇಶ್ ಕಾಂಬಿನೇಷನ್‍ನಿಂದಾಗಿಯೇ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ.

  • ಒಂದಾಗುತ್ತಿದ್ದಾರೆ ಶಿವರಾಜ್ ಕುಮಾರ್, ಯೋಗರಾಜ್ ಭಟ್

    shivarajkumar and yograj bhatt team up

    ಶಿವರಾಜ್ ಕುಮಾರ್ ಮತ್ತು ಯೋಗರಾಜ್ ಭಟ್ ಒಟ್ಟಿಗೇ ಸಿನಿಮಾ ಮಾಡೋದ್ಯಾವಾಗ..? ಇದು ಅಭಿಮಾನಿಗಳ ಪ್ರಶ್ನೆಯಷ್ಟೇ ಆಗಿರಲಿಲ್ಲ, ಚಿತ್ರರಂಗದಲ್ಲಿ ಹಲವರನ್ನು ಕಾಡುತ್ತಿದ್ದ ಪ್ರಶ್ನೆಯೂ ಆಗಿತ್ತು. ಕಥೆ ಚೆನ್ನಾಗಿದ್ದರೆ, ಇಷ್ಟವಾದರೆ, ಹೊಸಬರ ಚಿತ್ರಗಳಿಗೂ ಸೈ ಎನ್ನುವ ಶಿವರಾಜ್ ಕುಮಾರ್, ಈ ಬಾರಿ ಯೋಗರಾಜ್ ಭಟ್ ಅವರ ಚಿತ್ರಕ್ಕೆ ಕಥೆಯನ್ನೂ ಕೇಳದೆ ಓಕೆ ಎಂದಿದ್ದಾರಂತೆ.

    ಶಿವರಾಜ್ ಕುಮಾರ್ ಓಕೆ ಹೇಳಿದ್ದೇ ತಡ, ಬೇರೆಲ್ಲ ಸಿನಿಮಾ ಕೆಲಸಗಳನ್ನು ಬದಿಗಿಟ್ಟು ಶಿವರಾಜ್ ಕುಮಾರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಸಿದ್ಧಪಡಿಸಲು ಪೆನ್ನು ಪೇಪರ್ ಕೈಗೆತ್ತಿಕೊಂಡಿದ್ದಾರೆ ಯೋಗರಾಜ್ ಭಟ್. ಚಿತ್ರದ ಒನ್‍ಲೈನ್ ಕಥೆಯನ್ನು ಶಿವರಾಜ್ ಕುಮಾರ್ ಅವರಿಗೆ ತಿಳಿಸಿದ್ದಾರೆ.

    ಒಂದು ಆ್ಯಕ್ಷನ್ ಬೇಸ್ಡ್ ಸಿನಿಮಾ ಮಾಡುವ ಯೋಜನೆಯಲ್ಲಿರುವ ಭಟ್ಟರು, ಶಿವಣ್ಣ ಚಿತ್ರಕ್ಕೆ ಎಂಥಾ ಕಥೆ ಹೆಣೆಯಬಹುದು ಎಂಬ ಕುತೂಹಲ ಹಲವರಲ್ಲಿದೆ. ಭಟ್ಟರು ಸದ್ಯಕ್ಕೆ ಪ್ರದೀಪ್, ಇಶಾನ್ ಚಿತ್ರವನ್ನು ಪಕ್ಕಕ್ಕಿಟ್ಟು, ಶಿವರಾಜ್ ಕುಮಾರ್ ಚಿತ್ರದಲ್ಲಿ ಬ್ಯುಸಿಯಾಗಿ ಹೋಗಿದ್ದಾರೆ.

    ಚಿತ್ರದ ಮುಹೂರ್ತ ಯಾವಾಗ.? ಶೂಟಿಂಗ್ ಯಾವಾಗ..? ರಿಲೀಸ್ ಯಾವಾಗ..? ಸದ್ಯಕ್ಕೆ ಇದು ಭಟ್ಟರಿಗೂ ಗೊತ್ತಿಲ್ಲ. ವೇಯ್ಟ್ ಮಾಡಿ.

  • ಕುದುರೆಮುಖದಲ್ಲಿ ಭಟ್ಟರ 2ನೇ ಗಾಳಿಪಟ

    yogaraj bhat in kudremukha for gaalipata 2 shooting

    ಗಾಳಿಪಟ ಅನ್ನೊ ಸೂಪರ್ ಡ್ಯೂಪರ್ ಹಿಟ್ ಕೊಟ್ಟಿದ್ದ ಯೋಗರಾಜ್ ಭಟ್, ಈಗ ಗಾಳಿಪಟ 2 ಮಾಡುತ್ತಿದ್ದಾರೆ. ಹೆಸರು ಬಿಟ್ಟರೆ, ಮತ್ಯಾವುದೇ ಲಿಂಕ್ ಇಲ್ಲ ಎಂದಿರುವ ಭಟ್ಟರು, ಇಲ್ಲಿಯೂ ಮೂವರೂ ಹೀರೋಗಳನ್ನೇ ಹಾಕಿಕೊಂಡಿದ್ದಾರೆ.

    ಗಣೇಶ್ ಮತ್ತು ವೈಭವಿ ಅಭಿನಯದ ರೊಮ್ಯಾಂಟಿಕ್ ಹಾಡಿನ ಶೂಟಿಂಗಿಗಾಗಿ ಕುದುರೆಮುಖದಲ್ಲಿರೋ ಭಟ್ಟರ ಟೀಂ, ಹಾಡನ್ನು ರಿಚ್ ಆಗಿ ಶೂಟ್ ಮಾಡುತ್ತಿದೆ. ನಾತಿಚರಾಮಿ ಖ್ಯಾತಿಯ ರಮೇಶ್ ರೆಡ್ಡಿ ನಿರ್ಮಾಣದ ಗಾಳಿಪಟ 2ನಲ್ಲಿ ಗಣೇಶ್ ಜೊತೆಗೆ ಪವನ್ ಕುಮಾರ್, ದಿಗಂತ್, ಶರ್ಮಿಳಾ ಮಾಂಡ್ರೆ ಮೊದಲಾದವರು ನಟಿಸುತ್ತಿದ್ದಾರೆ. ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ.

  • ಕುಲದಲ್ಲಿ ಕೀಳ್ಯಾವುದೋ.. ಶಿವಣ್ಣ.. ಭಟ್ರು..

    yogaraj bhat shivanna movie

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಕಾಂಬಿನೇಷನ್‍ನಲ್ಲಿ ಸಿನಿಮಾ ಬರಲಿದೆ. ಪಂಚತಂತ್ರ ಮುಗಿಸಿದ ನಂತರ ಭಟ್ಟರು ಶಿವರಾಜ್‍ಕುಮಾರ್ ಸಿನಿಮಾ ನಿರ್ದೇಶಿಸಲಿದ್ದಾರೆ ಅನ್ನೋದು ಗುಟ್ಟೇನಲ್ಲ. ಈಗ ಆ ಚಿತ್ರಕ್ಕೆ ಟೈಟಲ್ ಫಿಕ್ಸಾಗಿದೆ ಅನ್ನೋ ಸುದ್ದಿ ತೇಲಿ ಬರುತ್ತಿದೆ.

    ಸ್ಟಾರ್ ಹೀರೋ, ಸ್ಟಾರ್ ಡೈರೆಕ್ಟರ್ ಕಾಂಬಿನೇಷನ್ ಚಿತ್ರಕ್ಕೆ ಅಣ್ಣಾವ್ರ ಸತ್ಯ ಹರಿಶ್ಚಂದ್ರ ಚಿತ್ರದ ಹಾಡಿನ ಸಾಲನ್ನು ಇಟ್ಟುಕೊಳ್ಳಲು ನಿರ್ಧರಿಸಿದ್ದಾರಂತೆ ಭಟ್ಟರು. ಕುಲದಲ್ಲಿ ಕೀಳ್ಯಾವುದೋ.. ಅನ್ನೋ ಸಾಲನ್ನೇ ಚಿತ್ರಕ್ಕೆ ಇಟ್ಟುಕೊಳ್ಳಲು ತೀರ್ಮಾನಿಸಿದ್ದಾರಂತೆ. 

    ಸಿನಿಮಾದಲ್ಲಿ ರಾಷ್ಟ್ರೀಯ ಏಕತೆ, ಜಾತಿಮತಭೇದ ಬಿಟ್ಟು ಜನ ಒಂದಾಗಿ ಬಾಳಬೇಕು ಎನ್ನುವ ಸಂದೇಶವಿದೆಯಂತೆ. ಹೀಗಾಗಿಯೇ ಚಿತ್ರಕ್ಕೆ ಕುಲದಲ್ಲಿ ಕೀಳ್ಯಾವುದೋ ಟೈಟಲ್ ಇಡಲು ತೀರ್ಮಾನಿಸಲಾಗಿದೆಯಂತೆ. ಭಟ್ಟರು ಈ ಬಾರಿ ಆ್ಯಕ್ಷನ್ ಥ್ರಿಲ್ಲರ್ ಕಥೆ ಹೇಳಲಿದ್ದಾರಂತೆ. ರಾಶಿ ಬ್ರದರ್ಸ್ ಲಾಂಚನದಲ್ಲಿ ಬರಲಿರೋ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿರುವ ಸಾಧ್ಯತೆ ಇದೆ.

  • ಕೆಡಿ ಭಟ್ಟರ ಕರಟಕ ದಮನಕ ಮಂತ್ರ..

    ಕೆಡಿ ಭಟ್ಟರ ಕರಟಕ ದಮನಕ ಮಂತ್ರ..

    ಶಿವಣ್ಣ ಮತ್ತು ಪ್ರಭುದೇವ ಒಟ್ಟಾಗಿ ನಟಿಸುತ್ತಿರೋ ಯೋಗರಾಜ್ ಭಟ್ ನಿರ್ದೇಶನದ ಚಿತ್ರಕ್ಕೆ ಕುಲದಲ್ಲಿ ಮೇಲ್ಯಾವುದೋ.. ಅನ್ನೋ ತಾತ್ಕಾಲಿಕ ಟೈಟಲ್ ಇಟ್ಟುಕೊಳಲಾಗಿತ್ತು. ಈಗ ಕರಕಟ ದಮನಕ ಅನ್ನೋ ಹೆಸರು ಬಂದಿದೆ. ಜೊತೆಗೆ ಕೆಡಿ ಅನ್ನೋ ಪದಗಳನ್ನ ಇಂಗ್ಲಿಷಿನಲ್ಲಿ ತೋರಿಸಿ ಇನ್ನೇನೋ ಹುಳ ಬಿಟ್ಟಿದ್ದಾರೆ ಭಟ್ಟರು. ಇದು ಟೈಟಲ್ಲಾ.. ಅಂದ್ರೆ ಯಾವನಿಗ್ಗೊತ್ತು ಅನ್ನೋ ಸ್ಟೈಲಲ್ಲಿ ಪರಮಾತ್ಮನ ಪೋಸು ಕೊಡ್ತಾರೆ.

    ಶಿವಣ್ಣ+ಪ್ರಭುದೇವ+ಯೋಗರಾಜ್ ಭಟ್+ರಾಕ್ ಲೈನ್ ವೆಂಕಟೇಶ್ ಅವರ ಪ್ಲಸ್ಸು ಪ್ಲಸ್ಸುಗಳ ಮಿಲನದಲ್ಲಿ ಕರಟಕ ಯಾರು? ದಮನಕ ಯಾರು? ಶೂಟಿಂಗಂತೂ ಶುರುವಾಗಿದೆ. 

  • ಗಣೇಶ್ ಪರಿಚಯ ಆಯ್ತಾ..? ನಕ್ರಾ? ಅತ್ರಾ?

    ಗಣೇಶ್ ಪರಿಚಯ ಆಯ್ತಾ..? ನಕ್ರಾ? ಅತ್ರಾ?

    ಕಲಾವಿದರಿಗೆ ಬಹಳ ಅಪರೂಪವಾಗಿ ಒಲಿಯುವ ಕಲೆ ಅದು. ನಗಿಸುತ್ತಲೇ ಅಳಿಸುವ ಕಲೆ. ನೋಡುಗರನ್ನು ನಗಿಸುತ್ತಲೇ ಭಾವುಕರನ್ನಾಗಿಸುವ ಕಲೆ. ಅದನ್ನು ಗಣೇಶ್ ಅದ್ಭುತವಾಗಿ ಮಾಡುತ್ತಾರೆ. ಗಾಳಿಪಟ 2 ಚಿತ್ರದ ಅವರ ಪಾತ್ರ ಪರಿಚಯ ನೋಡಿದವರಿಗೆ ಮತ್ತೊಮ್ಮೆ ಗಣೇಶ್ ದರ್ಶನವಾಗಿದೆ.

    ನಗುವಿನೊಂದಿಗೇ ಶುರುವಾಗುತ್ತೆ ಗಣಿಯ ಪರಿಚಯ. ಕನ್ನಡಿಗ.. ಆದರೆ ಕನ್ನಡ ಬರಲ್ಲ. ಕಾಪಿ ಹೊಡೆಯೋಕೆ  ಕ್ವಶ್ಚನ್ ಯಾವ್ದು.. ಆನ್ಸರ್ ಯಾವ್ದು ಎನ್ನುವುದೂ ಗೊತ್ತಿಲ್ಲದ ಪ್ರತಿಭಾವಂತ. ಮಧ್ಯದಲ್ಲೊಂದು ಯುವ ಜನಾಂಗ ರೋಮಾಂಚಿತರಾಗುವ ವಿಚಿತ್ರ ಲವ್ ಸ್ಟೋರಿ..  ನಗು ನಗಿಸುತ್ತಲೇ ಸಾಗುವ ಟೀಸರ್.. ಸನ್ನಿವಶೇವೇನೆಂದು ಗೊತ್ತಾಗದೇ ಹೋದರೂ ಗಣಿ ಅವರ ಆ ದೃಶ್ಯ ನೋಡಿದರೆ ಭಾವುಕರಾಗುವುದು ಗ್ಯಾರಂಟಿ.

    ಗಾಳಿಪಟ 2 ಚಿತ್ರದ ಗಣಿ ಪಾತ್ರದ ಪರಿಚಯ ಇದು. ರಿಯಲ್ ಸ್ಟಾರ್ ಉಪೇಂದ್ರ ಗಣಿ ಪಾತ್ರದ ಪರಿಚಯದ ಟೀಸರ್ ರಿಲೀಸ್ ಮಾಡಿದ್ದಾರೆ. ಜುಲೈ 31ಕ್ಕೆ ಟ್ರೇಲರ್ ರಿಲೀಸ್ ಮಾಡಿ ಆಗಸ್ಟ್ 12ಕ್ಕೆಲ್ಲ ಸಿನಿಮಾ ತೆರೆ ಮೇಲೆ ತರೋದು ಗಾಳಿಪಟ 2 ಚಿತ್ರದ ಪ್ಲಾನ್.

    ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಅನಂತ್ ನಾಗ್, ರಂಗಾಯಣ ರಘು, ಪದ್ಮಜಾ ರಾವ್, ಬುಲೆಟ್ ಪ್ರಕಾಶ್ ಮೊದಲಾದವರಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಅದ್ಧೂರಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ.

  • ಗಣೇಶ್`ಗೆ ಕನ್ನಡ ಹೇಳಿಕೊಡ್ತಾರಾ ಕನ್ನಡ ವಿದ್ಯಾರ್ಥಿನಿ ವೈಭವಿ..?

    ಗಣೇಶ್`ಗೆ ಕನ್ನಡ ಹೇಳಿಕೊಡ್ತಾರಾ ಕನ್ನಡ ವಿದ್ಯಾರ್ಥಿನಿ ವೈಭವಿ..?

    ಗಾಳಿಪಟದಲ್ಲೂ ಅಷ್ಟೆ, ಗಣಿ ಪಾತ್ರಕ್ಕೆ ಕನ್ನಡ ಬರ್ತಾ ಇರಲ್ಲ. ಆದರೆ, ಟೀಚರ್ ಡೈಸಿ ಬೋಪಣ್ಣ ಮೇಲೆ ಪ್ರೀತಿ ಹುಟ್ಟುತ್ತೆ. ನನಗೆ ಕನ್ನಡ ಬರದೇ ಇರೋದಕ್ಕೆ ಕಾರಣ ನಾನಲ್ಲ, ನನ್ನ ಅಪ್ಪ ಎನ್ನುವ ನಾಯಕ ಕಷ್ಟಪಟ್ಟು ಕನ್ನಡ ಕಲಿತು ನಾಯಕಿಯ ಹೃದಯ ಗೆಲ್ತಾನೆ. ಇಲ್ಲಿಯೂ ಗಣಿ ಸ್ಟೂಡೆಂಟು.

    ಅಂದಹಾಗೆ ಗಣಿಯ ಎದುರು ಜೋಡಿಯಾಗಿರೋದು ವೈಭವಿ ಶಾಂಡಿಲ್ಯ. ಚಿತ್ರದಲ್ಲಿ ವೈಭವಿಯವರದ್ದು ಕನ್ನಡವನ್ನು ಪ್ರೀತಿಸುವ ವಿದ್ಯಾರ್ಥಿನಿಯ ಪಾತ್ರ. ಶ್ವೇತಾ ಅನ್ನೋದು ವೈಭವಿಯ ಹೆಸರು. ಭಾಷೆಯನ್ನು ಪ್ರೀತಿಸುವ, ಆರಾಧಿಸುವ ವ್ಯಕ್ತಿತ್ವ ಶ್ವೇತಾಳದ್ದು. ಸಿನಿಮಾದಲ್ಲಿ ಕನ್ನಡವನ್ನು ಪ್ರೀತಿಸುವ ಹುಡುಗಿಯ ಪಾತ್ರ ಮಾಡಿರುವ ವೈಭವಿಗೆ ರಿಯಲ್ ಲೈಫಲ್ಲಿ ಕನ್ನಡ ಬರಲ್ಲ.  ಏಕೆಂದರೆ ಮೂಲ ಮುಂಬೈ.

    ನನಗೆ ಕನ್ನಡ ಬರಲ್ಲ. ಆದರೆ ನಾನು ಮಾಡುವ ಚಿತ್ರ ಮತ್ತು ಪಾತ್ರದ ಕುರಿತು ತಿಳಿದುಕೊಳ್ಳೋದು ನನ್ನ ಆದ್ಯತೆಯಾಗಿತ್ತು. ಅದಕ್ಕಾಗಿಯೇ ಗಾಳಿಪಟ ಚಿತ್ರವನ್ನು ನೋಡಿದೆ. ಒಂದ್ಸಲ ಸಬ್ ಟೈಟಲ್ ಜೊತೆ ನೋಡಿ, ಇನ್ನೊಂದ್ಸಲ ಸಬ್ ಟೈಟಲ್ ಇಲ್ಲದೆ ನೋಡಿದೆ. ಚಿತ್ರ ಇಷ್ಟವಾಯಿತು. ಯೋಗರಾಜ್ ಭಟ್ ಅವರ ವರ್ಕಿಂಗ್ ಸ್ಟೈಲ್ ಕೂಡಾ ಗೊತ್ತಾಯ್ತು ಎಂದಿದ್ದಾರೆ ವೈಭವಿ.

    ಯೋಗರಾಜ್ ಭಟ್ ಅವರ ಬಳಿ ಸೀನ್ ಮತ್ತು ಡೈಲಾಗ್ ಮೊದಲೇ ತೆಗೆದುಕೊಂಡು ಸಂಪೂರ್ಣ ಸಿದ್ಧವಾಗಿಯೇ ಸೆಟ್‍ಗೆ ಹೋಗುತ್ತಿದೆ. ಅವರು ಬರೆಯುವ ಒಂದೊಂದು ಸಾಲೂ ಮುತ್ತು ಪೋಣಿಸಿದಂತೆ. ಹೀಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡು ನನ್ನ ಬೆಸ್ಟ್ ಕೊಟ್ಟಿದ್ದೇನೆ ಎನ್ನುತ್ತಾರೆ ವೈಭವಿ.

    ಗಣೇಶ್ ಜೊತೆ ನಟಿಸಿದ್ದು ಒಂಥರಾ ಸುಂದರ ಅನುಭವ. ಈ ಚಿತ್ರ ನನಗೆ ಖಂಡಿತಾ ಬ್ರೇಕ್ ಕೊಡಲಿದೆ ಎನ್ನುವುದು ವೈಭವಿ ಅವರ ವಿಶ್ವಾಸ.

  • ಗಾಳಿಪಟ 2 ಹೌಸ್`ಫುಲ್ ಹೌಸ್`ಫುಲ್ ಹೌಸ್`ಫುಲ್ 

    ಗಾಳಿಪಟ 2 ಹೌಸ್`ಫುಲ್ ಹೌಸ್`ಫುಲ್ ಹೌಸ್`ಫುಲ್ 

    ಗಾಳಿಪಟ 2 ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ. ಎಲ್ಲೆಡೆ ಚಿತ್ರಮಂದಿರಗಳು ಹೌಸ್‍ಫುಲ್ ಆಗಿವೆ. ಕೆಲವು ಥಿಯೇಟರುಗಳಲ್ಲಂತೂ ಪ್ರೇಕ್ಷಕರು ಗೊಂದಲದಿಂದಾಗಿ ಗಲಾಟೆಯೂ ಆಗಿವೆ. ಮೊದಲ ದಿನವೇ ಭರ್ಜರಿ ಯಶಸ್ಸಿನ ಸುಳಿವು ಕೊಟ್ಟಿದ್ದಾರೆ ಭಟ್-ಗಣಿ ಜೋಡಿ. ಗಾಳಿಪಟ 2 ಯೋಗರಾಜ್ ಭಟ್ ಮತ್ತು ಗಣೇಶ್ ಒಟ್ಟಿಗೇ ಮಾಡಿರುವ 4ನೇ ಸಿನಿಮಾ. ಈ ಹಿಂದಿನ ಎಲ್ಲ ಚಿತ್ರಗಳೂ ಸಕ್ಸಸ್ ಆಗಿರುವ ಹಿನ್ನೆಲೆಯಲ್ಲಿ ಗಾಳಿಪಟ 2 ಮೇಲೆ ಭರ್ಜರಿ ನಿರೀಕ್ಷೆಯೂ ಇತ್ತು.

    ಏಕೆಂದರೆ ಗಾಳಿಪಟ ಹೆಸರಿಗೇ ಅಂತದ್ದೊಂದು ಚರಿತ್ರೆ ಇದೆ. ಭಟ್-ಗಣೇಶ್ ಜೋಡಿಯ ಗಾಳಿಪಟ ಚಿತ್ರದ ಟೈಟಲ್ ಇಟ್ಟುಕೊಂಡ ಮೇಲೆ ಚಿತ್ರ ಯಾವುದೇ ಕಾರಣಕ್ಕೂ ಕಡಿಮೆ ಎನ್ನಿಸಬಾರದು ಅನ್ನೋದು ನನ್ನ ಆಸೆಯಾಗಿತ್ತು. ಅದರಂತೆಯೇ ಚಿತ್ರ ಚೆನ್ನಾಗಿ ಬಂದಿದೆ ಎಂದು ಖುಷಿ ಹಂಚಿಕೊಂಡಿರೋದು ರಮೇಶ್ ರೆಡ್ಡಿ. ಗಾಳಿಪಟ ಟೈಟಲ್`ಗೆ ಒಂದು ಘನತೆ ಇದೆ. ಅದಕ್ಕೆ ಅಪವಾದವಾಗದಂತೆ ಸಿನಿಮಾ ಮಾಡಿದ್ದೇವೆ ಎಂದಿರೋ ರಮೇಶ್ ರೆಡ್ಡಿ ಚಿತ್ರಕ್ಕೆ ದೇಶವಿದೇಸಗಳಲ್ಲಿ 800+ ಮತ್ತು ಕರ್ನಾಟಕವೊಂದರಲ್ಲೇ 225ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ರಿಲೀಸ್ ಮಾಡಿದ್ದಾರೆ. ಗಾಳಿಪಟ ಅನ್ನೋದು ನನ್ನ ಪಾಲಿಗೆ ಸಿನಿಮಾ ಅಲ್ಲ. ಅದೊಂದು ಎಮೋಷನ್ ಎಂದಿದ್ದಾರೆ ಗಣೇಶ್.

  • ಗಾಳಿಪಟ 2ಗೆ ಕುಟುಂಬ ಸಮೇತ ಪ್ರಮಾಣ ಪತ್ರ

    ಗಾಳಿಪಟ 2ಗೆ ಕುಟುಂಬ ಸಮೇತ ಪ್ರಮಾಣ ಪತ್ರ

    ಯೋಗರಾಜ್ ಭಟ್ ನಿರ್ದೇಶನದ ಇನ್ನೇನು ರಿಲೀಸ್ ಆಗಬೇಕಿರುವ ಚಿತ್ರ ಗಾಳಿಪಟ 2. ಮತ್ತೊಮ್ಮೆ ಗಣೇಶ್, ದಿಗಂತ್ ಜೊತೆಗೂಡಿ ನಿರ್ದೇಶಿಸಿರುವ ಸಿನಿಮಾ. ಲೂಸಿಯಾ ಪವನ್‍ರನ್ನು ಈ ಚಿತ್ರದಿಂದ ಹೀರೋ ಮಾಡುತ್ತಿರೋ ಭಟ್ಟರ ಜೊತೆಗೆ ಗಾಳಿಪಟ ಹಾರಿಸೋಕೆ ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಇದ್ದಾರೆ. ಇವರೆಲ್ಲರಿಗೂ ಸೀನಿಯರ್ ಗುರುವಾಗಿ ಅನಂತ್ ನಾಗ್ ಇದ್ದಾರೆ. ಈಗ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದ್ದು ಯು ಸರ್ಟಿಫಿಕೇಟ್ ಪಡೆದುಕೊಂಡಿದೆ.

    ಇದು ಹೊಸದೇನಲ್ಲ. ವಿಚಿತ್ರವೂ ಅಲ್ಲ. ಭಟ್ಟರ ಸಿನಿಮಾಗಳು ಸಕುಟುಂಬ ಸಮೇತರಾಗಿ ನೋಡುವಂತೆಯೇ ಇರುತ್ತವೆ. ದ್ವಂದ್ವಾರ್ಥ ಇರಲ್ಲ. ಅಶ್ಲೀಲತೆಯೂ ಇರಲ್ಲ. ಎಂದಿನಂತೆ ತಮಾಷೆಯಾಗಿಯೇ ಸೀರಿಯಸ್ ಕಥೆ ಹೇಳುವ ಭಟ್ಟರು ಸಿನಿಮಾ ಯಾವಾಗ ರಿಲೀಸ್ ಮಾಡ್ತಾರೆ? ಅದನ್ನು ನಿರ್ಮಾಪಕ ರಮೇಶ್ ರೆಡ್ಡಿ ಮಾತ್ರ ಹೇಳಬೇಕು.

  • ಗಾಳಿಪಟ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್

    ಗಾಳಿಪಟ ಟಿಕೆಟ್ ಬುಕ್ಕಿಂಗ್ ಸ್ಟಾರ್ಟ್

    ಕನ್ನಡ ಸಿನಿಮಾಗಳಿಗೆ ಈಗ ಇಡೀ ವಿಶ್ವದಾದ್ಯಂತ ದೊಡ್ಡ ಮಾರ್ಕೆಟ್ ಸೃಷ್ಟಿಯಾಗಿದೆ. ಹೀಗಾಗಿಯೇ ಗಣೇರ್ಶ ಮತ್ತು ಯೋಗರಾಜ್ ಭಟ್ ಜೋಡಿಯ ಗಾಳಿಪಟ 2 ಚಿತ್ರ ಆಸ್ಟ್ರೇಲಿಯಾ, ಅಮೆಇರಕ ಸೇರಿದಂತೆ ವಿಶ್ವದ ಹಲವೆಡೆ ಏಕಕಾಲದಲ್ಲಿ ರಿಲೀಸ್ ಆಗುತ್ತಿದೆ. ಬುಕ್ಮೈ ಶೋನಲ್ಲೂ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಅದೂ ಜೋರಾಗಿಯೇ ಇದೆ. ಭಟ್ಟರು ಮತ್ತು ಗಣಿ ಜೋಡಿ ಮತ್ತೊಮ್ಮೆ ದಾಖಲೆ ಬರೆಯೋಕೆ ಸಿದ್ಧವಾಗಿದೆ. ಹೀಗಾಗಿಯೇ ಚಿತ್ರಕ್ಕೆ ಮಾರ್ನಿಂಗ್ ಶೋ 6 ಗಂಟೆಗೇ ಶುರು ಮಾಡಲು ಸಿದ್ಧತೆಯಾಗುತ್ತಿದೆ.

    ಗಣೇಶ್ & ಭಟ್ಟರ ಕಾಂಬಿನೇಷನ್ ಜೊತೆ ಶರ್ಮಿಳಾ ಮಾಂಡ್ರೆ-ಪವನ್, ದಿಗಂತ್-ಸಂಯುಕ್ತಾ ಮೆನನ್ ಜೋಡಿಯೂ ಇದೆ. ಗಾಳಿಪಟ ಬಂದಾಗ ಗಣೇಶ್ ಅವರಿಗೆ ಒಂದು ಕೋಟಿ ಸಂಭಾವನೆ ಕೊಡಲಾಗಿತ್ತು.ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ದಾಖಲೆ ಇವತ್ತಿಗೂ ಗಣೇಶ್ ಹೆಸರಲ್ಲೆ ಇದೆ. ಆ ಗಾಳಿಪಟ 175 ದಿನ ಓಡಿತ್ತು. ಈಗ ಈ ಗಾಳಿಪಟ ಬಾಕ್ಸಾಫೀಸಿನಲ್ಲಿ ಹೊಸ ದಾಖಲೆ ಬರೆಯೋಕೆ ಸಿದ್ಧವಾಗಿ ನಿಂತಿದೆ.

    ಆಗಸ್ಟ್ 12ರಂದು ವಿಶ್ವದೆಲ್ಲೆಡೆ ಗಾಳಿಪಟ 2 ಹಾರಲಿದೆ. ಒಂದು ಕ್ಯೂಟ್ ಲವ್ ಸ್ಟೋರಿಯಂತೂ ಪಕ್ಕಾ. ಜೊತೆಗೆ ಸ್ನೇಹ ಸಂದೇಶವೂ ಇರಲಿದೆ. ಭಟ್ಟರ ಜೊತೆ ಈ ಬಾರಿ ಸಂಗೀತದ ಮೋಡಿ ಮಾಡಿರುವುದು ಅರ್ಜುನ್ ಜನ್ಯಾ. ಗಾಳಿಪಟ ಹಾರೋದು ನೋಡೋಕೆ ರೆಡಿಯಾಗಿ..

  • ಗಾಳಿಪಟ-2 : ಶರಣ್, ರಿಷಿ ಔಟ್. ಗಣೇಶ್, ದಿಗಂತ್ ಇನ್

    breaking news from gaalipata 2 team

    ಗಾಳಿಪಟ-2, ಯೋಗರಾಜ್ ಭಟ್ಟರ ಚಿತ್ರ. ಶೂಟಿಂಗ್ ಶುರುವಾಗಬೇಕಿರುವ ಚಿತ್ರದಲ್ಲಿ ಒಂದು ಅನಿರೀಕ್ಷಿತ ಬದಲಾವಣೆಯಾಗಿದೆ. ಪ್ಲಾನ್ ಪ್ರಕಾರ ಚಿತ್ರದಲ್ಲಿ ಶರಣ್, ರಿಷಿ ಹಾಗೂ ಪವನ್ ಕುಮಾರ್ ನಾಯಕರು. ಆದರೆ, ಈಗ ಆ ಮೂವರಲ್ಲಿ ಇಬ್ಬರು ಹೊರಹೋಗಿದ್ದಾರೆ. ಶರಣ್ ಮತ್ತು ರಿಷಿ. ಇಬ್ಬರು ಒಳಗೆ ಬಂದಿದ್ದಾರೆ ಗಣೇಶ್ ಮತ್ತು ದಿಗಂತ್. ಅದಕ್ಕೆಲ್ಲ ಕಾರಣ ಸ್ಕ್ರಿಪ್ಟ್.

    ನಿರ್ಮಾಪಕ ಮಹೇಶ್ ದಾನಣ್ಣವರ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಡೆವಲಪ್ ಆಗುತ್ತಾ ಹೋದಂತೆ ಈ ಪಾತ್ರಗಳಿಗೆ ಗಣೇಶ್ ಮತ್ತು ದಿಗಂತ್ ಅವರೇ ಸೂಕ್ತ ಎನ್ನಿಸೋಕೆ ಶುರುವಾಯ್ತು. ಹೀಗಾಗಿ ಬದಲಾವಣೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

    ಶರಣ್ ತುಂಬಾ ಒಳ್ಳೆಯ ನಟ. ಅವರು ಈ ಚಿತ್ರಕ್ಕಾಗಿ ಕೆಲವು ತಿಂಗಳು ಕೆಲಸ ಮಾಡಿದ್ದಾರೆ. ನಾವು ಈ ಚಿತ್ರದಲ್ಲಿ ಶರಣ್ ಅವರನ್ನು ಮಿಸ್ ಮಾಡಿಕೊಂಡರೂ, ಗಾಳಿಪಟ-2 ಮುಗಿದ ಮೇಲೆ ಶರಣ್-ಯೋಗರಾಜ್ ಭಟ್ ಕಾಂಬಿನೇಷನ್‍ನಲ್ಲಿ ಹೊಸ ಸಿನಿಮಾ ಶುರು ಮಾಡುತ್ತಿದ್ದೇನೆ ಎಂದಿದ್ದಾರೆ ಮಹೇಶ್.

    ಯೋಗರಾಜ್ ಭಟ್ಟರ ಸೋದರ ಮೃತಪಟ್ಟಿದ್ದು, ಸದ್ಯಕ್ಕೆ ಹುಟ್ಟೂರಿನಲ್ಲಿದ್ದಾರೆ. ಹೀಗಾಗಿ ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.

  • ಗಾಳಿಪಟ-2ಗೆ ಪ್ರಭುದೇವ ಡ್ಯಾನ್ಸ್ ಪವರ್..?

    will yogaraj bhat be a part of gaalipata 2

    ಪಂಚತಂತ್ರ ಸಕ್ಸಸ್ ಬಳಿಕ ಯೋಗರಾಜ್ ಭಟ್ ಕೈಗೆತ್ತಿಕೊಂಡಿರೋ ಸಿನಿಮಾ ‘ಗಾಳಿಪಟ-2. ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ತಾರಾಗಣದಲ್ಲಿ ಬದಲಾವಣೆ ಮಾಡಿಕೊಂಡು ಸುದ್ದಿಯಾಗಿದ್ದ ಯೋಗರಾಜ್ ಭಟ್, ಈಗ ತಮ್ಮ ಟೀಂಗೆ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವಗೆ ಆಹ್ವಾನ ಕೊಟ್ಟಿದ್ದಾರೆ.

    ಈಗಾಗಲೇ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಮಹೇಶ್ ದಾನಣ್ಣವರ್ ಪ್ರಭುದೇವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದಾರಂತೆ. ಮಾತುಕತೆಯೂ ನಡೆದಿದೆಯಂತೆ. 2002ರಲ್ಲಿ ಹೆಚ್2ಒ ಚಿತ್ರದಲ್ಲಿ ನಟಿಸಿದ್ದ ಪ್ರಭುದೇವ,ಆನಂತರ ಕನ್ನಡದಲ್ಲಿ ನಟಿಸಿಲ್ಲ. ಸದ್ಯಕ್ಕೆ ದಬಾಂಗ್-3ಯಲ್ಲಿ ಬ್ಯುಸಿಯಾಗಿರುವ ಪ್ರಭುದೇವ, ಭಟ್ಟರ ಚಿತ್ರಕ್ಕೆ ಓಕೆ ಎಂದಿದ್ದಾರೆ ಎಂಬ ಸುದ್ದಿಗಳಿವೆ.

    ಗಣೇಶ್, ದಿಗಂತ್, ಪವನ್ ಕುಮಾರ್, ಆದಿತಿ ಪ್ರಭುದೇವ, ಸೋನಲ್ ಮಂಥೆರೋ, ಶರ್ಮಿಳಾ ಮಾಂಡ್ರೆ ನಟಿಸುತ್ತಿರುವ ಚಿತ್ರವಿದು. ಸೆಪ್ಟೆಂಬರ್ನಿಂದ ಶೂಟಿಂಗ್ ಶುರುವಾಗಲಿದ್ದು, ಮಲೆನಾಡಿನಲ್ಲಿಯೇ ಚಿತ್ರೀಕರಣಕ್ಕೆ ಪ್ಲಾನ್ ಮಾಡಿದ್ದಾರೆ ಯೋಗರಾಜ್ ಭಟ್.