ಯೋಗರಾಜ್ ಭಟ್ಟರ ಸಿನಿಮಾ ಎಂದ ಮೇಲೆ ಒಂದಿಷ್ಟು ತರಲೆ.. ವೇದಾಂತ.. ಇರಲೇಬೇಕು. ಚಿತ್ರ ವಿಚಿತ್ರ ಅನ್ನಿಸುವಂತಾದ್ದು ಏನೊಂದಾದರೂ ಇರಲಾಕಾ ಬೇಕು. ಗಾಳಿಪಟ 2 ನಲ್ಲೂ ಅಂತಹದ್ದೊಂದು ಬರೋಬ್ಬರಿ ತರಲೆ ಪಂಚ್ ಇಟ್ಟೇ ಹಾಡಿನ ಟೀಸರ್ ಬಿಟ್ಟಾರಾ ಯೋಗರಾಜ್ ಭಟ್ರು. ಇದು ಗಾಳಿಪಟ 2 ಚಿತ್ರದಿಂದ ಹೊರಬರುತ್ತಿರೋ ಮೊದಲನೇ ಸಾಂಗ್ನ ಟೀಸರು.
ಫೇಲ್ ಆಗುವ ಹುಡುಗ ಒಂದೊಂದೇ ಸಬ್ಜೆಕ್ಟ್ ಹೋಯ್ತು.. ಹೋಯ್ತು.. ಅಂತ ಗೆಳೆಯನಿಗೆ ಹೇಳ್ತಿರೋವಾಗ.. ಟೋಟಲ್ ಆಗಿ ಹೋಯ್ತ್ ಅಂತಾ ಹೇಳ್ಬಾರ್ದಾ ಎನ್ನೋ ಸಲಹೆ.. ಬಿಡಿ ಬಿಡಿಯಾಗಿ ಹೇಳಿದ್ರೆ ಯಾವ್ದಾದ್ರೂ ಒಂದ್ ಪಾಸಾಗೇತಿ ಅಂದ್ಕೋತಾರೆ ಅನ್ನೋ ಬುದ್ದಿವಂತನ ಮಾತಿನೊಂದಿಗೆ ಹಾಡಿನ ಟೀಸರ್ ಕೊಟ್ಟಿದ್ದಾರೆ ಭಟ್ಟರು. ಜೊತೆಗೆ ಬಾಯ್ ಬಡ್ಕೊಳ್ಳೋ ಸ್ಟೂಡೆಂಟ್ಸು.
ಭಟ್ಟರೊಂದಿಗೆ 2ನೇ ಗಾಳಿಪಟ ಹಾರಿಸ್ತಿರೋದು ಗಣೇಶ್, ಅನಂತ ನಾಗ್, ದಿಗಂತ್, ಲೂಸಿಯಾ ಪವನ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ.. ಮತ್ತಿತರರು. ಬುಲೆಟ್ ಪ್ರಕಾಶ್ ನಟಿಸೊರೋ ಕೊನೆಯ ಸಿನಿಮಾ ಇದು.
ಉಮಾ ಎಂ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾವಿದು. ಅರ್ಜುನ್ ಜನ್ಯಾ ಸಂಗೀತ ಇದೆ. ಹಾಡು ರಿಲೀಸ್ ಆಗೋದು ಏಪ್ರಿಲ್ 21ಕ್ಕೆ. ಕಾಯ್ತಾ ಇರಿ.