` kcc cup, - chitraloka.com | Kannada Movie News, Reviews | Image

kcc cup,

 • ಮೈಸೂರಿನಲ್ಲಿ ಕೆಸಿಸಿ ಕಪ್ ಸೀಸನ್ 3 : ಯಾರೆಲ್ಲ ಸ್ಟಾರ್ಸ್ ಬರ್ತಾರೆ?

  ಮೈಸೂರಿನಲ್ಲಿ ಕೆಸಿಸಿ ಕಪ್ ಸೀಸನ್ 3 : ಯಾರೆಲ್ಲ ಸ್ಟಾರ್ಸ್ ಬರ್ತಾರೆ?

  ಕನ್ನಡ ಚಲನಚಿತ್ರ ಕಪ್. ಇದು 3ನೇ ಸೀಸನ್. ಈ ಬಾರಿ ಮೈಸೂರಿನಲ್ಲಿಯೇ ನಡೆಯಲಿದೆ. ಫೆಬ್ರವರಿ 11 ಮತ್ತು 12ರಂದು ಮೈಸೂರಿನ ಶ್ರೀಕಂಠದತ್ತ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿರೋ ಕ್ರಿಕೆಟ್‍ನಲ್ಲಿ ಒಟ್ಟು 6 ಟೀಂಗಳು ಭಾಗವಹಿಸಲಿವೆ. ಅಂದಹಾಗೆ ಇದು 10-10 ಓವರುಗಳ ಪಂದ್ಯ ಅಷ್ಟೆ.

  ಒಟ್ಟು ಟೂರ್ನಿಯಲ್ಲಿ 6 ತಂಡಗಳಿರುತ್ತವೆ. ತಂಡದ ಕ್ಯಾಪ್ಟನ್ ಯಾರು? ಯಾವ ಟೀಮಿನಲ್ಲಿ ಯಾರ್ ಯಾರು ಅನ್ನೊ ವಿವರಗಳನ್ನೆಲ್ಲ ಜನವರಿ 26ಕ್ಕೆ ಹೇಳುತ್ತೇವೆ. 9 ಮಂದಿ ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಒಪ್ಪಿಗೆ ಕೊಟ್ಟಿದ್ದಾರೆ, ಅವರಲ್ಲಿ 6 ಮಂದಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಕ್ರಿಕೆಟ್‍ನಲ್ಲಿ ಆಸಕ್ತಿ ಇರುವ ಬೇರೆ ಭಾಷೆಗಳ ನಟರು, ಕಾರ್ಪೊರೇಟ್ ಕಂಪೆನಿಯವರು, ರಾಜಕಾರಣಿಗಳೂ ತಂಡದಲ್ಲಿರುತ್ತಾರೆ ಎಂದಿದ್ದಾರೆ ಕಿಚ್ಚ ಸುದೀಪ್.

  ಚಿತ್ರರಂಗದವರೆಲ್ಲ ಒಟ್ಟಿಗೇ ಸೇರಿಕೊಳ್ಳೋಕೆ ಇದೊಂದು ಅವಕಾಶ ಅಷ್ಟೆ ಎಂದಿರುವ ಸುದೀಪ್ ಪುನೀತ್ ಅವರನ್ನು ಸ್ಮರಿಸಿಕೊಂಡರು. ಕಳೆದ ಬಾರಿ ಅವರೂ ಒಂದು ತಂಡದ ನಾಯಕರಾಗಿದ್ದರು. ಈ ಬಾರಿಯೂ ಎಂದಿನಂತೆ ಪ್ರತಿಯೊಬ್ಬರನ್ನೂ ಆಹ್ವಾನಿಸಿದ್ದೇವೆ. ಎಲ್ಲರಿಗೂ ಸ್ವಾಗತ. ಆದರೆ ಬರದೇ ಇರುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಚಿತ್ರರಂಗ ನನ್ನ ಸ್ವತ್ತಲ್ಲ ಎಂದರು ಸುದೀಪ್. ಈ ಬಾರಿ ಶಿವಣ್ಣ ಟೂರ್ನಿಯಲ್ಲಿ ಆಡುವುದು ಅನುಮಾನ ಎಂದ ಸುದೀಪ್ ವೈಯಕ್ತಿಕ ಕಾರಣಗಳಿಂದ ಎಂದಿದ್ದಾರಂತೆ.

 • ಹೊಯ್ಸಳ, ಒಡೆಯರ್, ಗಂಗ, ವಿಜಯನಗರ, ಕದಂಬ, ರಾಷ್ಟ್ರಕೂಟ.. ಇವರೆಲ್ಲ ಕ್ರಿಕೆಟರ್ಸ್

  ಹೊಯ್ಸಳ, ಒಡೆಯರ್, ಗಂಗ, ವಿಜಯನಗರ, ಕದಂಬ, ರಾಷ್ಟ್ರಕೂಟ.. ಇವರೆಲ್ಲ ಕ್ರಿಕೆಟರ್ಸ್

  ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ, ಆರ್,ಸಿ.ಬಿ. ಫ್ಯಾನ್ಸ್ ಹೃದಯ ಗೆದ್ದಿದ್ದ ಹೀರೋ ಕ್ರಿಸ್ ಗೇಲ್, ಮಿಸ್ಟರ್ ಐಪಿಎಲ್ ಎಂದೇ ಖ್ಯಾತರಾಗಿರುವ ಸುರೇಶ್ ರೈನಾ, ದ.ಆಫ್ರಿಕಾ ಕ್ರಿಕೆಟ್`ಗೆ ಹೊಸ ಶಕ್ತಿ ತುಂಬಿದ ಹರ್ಷಲ್ ಗಿಬ್ಸ್, ತಿಲಕರತ್ನೆ ದಿಲ್ಷಾನ್, ಎಸ್.ಬದರೀನಾಥ್ .. ಇವರೆಲ್ಲ ಕರ್ನಾಟಕವನ್ನಾಳಿದ ಖ್ಯಾತ ರಾಜ ವಂಶದ ಹೆಸರಿನ ತಂಡಗಳಲ್ಲಿ ಕ್ರಿಕೆಟ್ ಆಡಲಿದ್ದಾರೆ. ಇವರಿಗೆಲ್ಲ ಕ್ಯಾಪ್ಟನ್ ಆಗಿರುತ್ತಾರೆ ಶಿವ ರಾಜ್ ಕುಮಾರ್, ಕಿಚ್ಚ ಸುದೀಪ್, ಉಪೇಂದ್ರ, ಗಣೇಶ್, ಡಾಲಿ ಧನಂಜಯ್.. ಇದು ಕನ್ನಡ ಚಲನಚಿತ್ರ ಕ್ರಿಕೆಟ್ ಪಂದ್ಯಾವಳಿ ಹೈಲೈಟ್ಸ್. ಈಗ ಯಾವ್ಯಾವ ಆಟಗಾರರು ಯಾವ್ಯಾವ ತಂಡದಲ್ಲಿರ್ತಾರೆ ನೋಡೋಣ.

  ಹೊಯ್ಸಳ ಈಗಲ್ಸ್: ನಾಯಕ ಸುದೀಪ್, ಕ್ರಿಸ್ ಗೇಲ್, ಸಾಗರ್ ಗೌಡ, ಅನುಪ್ ಭಂಡಾರಿ, ನಾಗಾರ್ಜುನ ಶರ್ಮಾ, ಅರ್ಜುನ್ ಬಚ್ಚನ್, ವಿಶ್ವ, ಮಂಜು ಪಾವಗಡ, ಸುನಿಲ್ ಗೌಡ, ತರುಣ್ ಸುಧೀರ್, ರೋಹಿತ್ ಗೌಡ, ರಿತೇಶ್ ಭಟ್ಕಳ್, ಅಭಿಷೇಕ್ ಬಾಡ್ಕರ್.

  ಒಡೆಯರ್ ಚಾರ್ಜರ್ಸ್ : ಶಿವರಾಜ್ ಕುಮಾರ್ (ನಾಯಕ), ಬ್ರಿಯನ್ ಲಾರಾ,  ಅರ್ಜುನ್ ಯೋಗಿ, ನಿರೂಪ್ ಭಂಡಾರಿ, ಸಿಎಂ ಹರ್ಷ, ರಾಮ್ ಪವನ್, ವಿಜಯ್, ಗಣೇಶ್ ರಾಜ್, ಮಧು, ಮೋಹಿತ್, ರಾಹುಲ್ ಪ್ರಸನ್ನ, ಆರ್ಯನ್, ತಮನ್ ಎಸ್.

  ಗಂಗ ವಾರಿಯರ್ಸ್ : ಕೃಷ್ಣ (ನಾಯಕ)  ಡಾಲಿ ಧನಂಜಯ್ , ಸುರೇಶ್ ರೈನಾ, ಕೃಷ್ಣ , ಕರಣ್ ಆರ್ಯ, ನವೀನ್ ರಘು, ವೈಭವ್ ರಾಮ್, ಮಲ್ಲಿಕಾ ಚರಣ್ ವಾಡಿ, ನರೇಶ್ ಗಾಂಧಿ, ಸುದರ್ಶನ್, ಸುನಿಲ್ ರಾವ್, ಸಿಂಪಲ್ ಸುನಿ, ಪ್ರಸನ್ನ, ಪ್ರವೀಶ್, ಶಿವಕುಮಾರ್ ಬಿ.ಯು.

  ವಿಜಯನಗರ ಪೇಟ್ರಿಯಾಟ್ಸ್ : ಪ್ರದೀಪ್ (ನಾಯಕ) ಉಪೇಂದ್ರ, ಹರ್ಷಬ್ ಗಿಬ್ಸ್,ತ್ರಿವಿಕ್ರಮ್, ಗರುಡಾ ರಾಮ್, ವಿಕಾಸ್, ಧರ್ಮ ಕೀರ್ತಿ ರಾಜ್, ವಿಟ್ಟಲ್ ಕಾಮತ್, ಕಿರಣ್, ಸಚಿನ್, ಮಹೇಶ್, ಆದರ್ಶ್, ರಜತ್ ಹೆಗ್ಡೆ,

  ಕದಂಬ ವಾರಿಯರ್ಸ್ : ಗಣೇಶ್ (ನಾಯಕ), ತಿಲಕರತ್ನೆ ದಿಲ್ಶಾನ್, ವ್ಯಾಸರಾಜ್, ಲೋಕಿ, ಪ್ರತಾಪ್ ವಿ, ಯೋಗೇಶ್, ಪವನ್ ಒಡೆಯರ್, ಪ್ರೀತಮ್ ಗುಬ್ಬಿ, ರಕ್ಷಿತ್ ಎಸ್, ರಿಶಿ ಬೋಪಣ್ಣ, ರಾಜೀವ್ ಹನು.

  ರಾಷ್ಟ್ರಕೂಟ ಪ್ಯಾಂಥರ್ಸ್ : ಜಯರಾಮ್ ಕಾರ್ತಿಕ್ (ನಾಯಕ), ಧ್ರುವ ಸರ್ಜಾ, ಎಸ್ ಬದ್ರಿನಾಥ್, ವಿನೋದ್ ಕಿಣಿ, ಚಂದನ್ ಕುಮಾರ್, ಸಂಜಯ್, ಪ್ರತಾಪ್ ನಾರಾಯಣ್, ಮನು ಅಯ್ಯಪ್ಪ, ಅಕಲ್ ಆನಂದ್, ಜಗ್ಗಿ, ಸೈಯ್ಯದ್, ನಿಹಾಲ್ ಉಲ್ಲಾಳ್, ಅನೀಶ್ವರ್ ಗೌತಮ್,