` vaarisu, - chitraloka.com | Kannada Movie News, Reviews | Image

vaarisu,

  • ಸಂಕ್ರಾಂತಿಗೆ  ಕನ್ನಡ ಚಿತ್ರಗಳೇ ಚಿತ್ರಮಂದಿರಗಳಿಂದ ಔಟ್

    ಸಂಕ್ರಾಂತಿಗೆ  ಕನ್ನಡ ಚಿತ್ರಗಳೇ ಚಿತ್ರಮಂದಿರಗಳಿಂದ ಔಟ್

    ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳೇ ಚಿತ್ರಮಂದಿರ ಸಿಗದೆ ಒದ್ದಾಡುತ್ತಿವೆ. ಇದು ಪ್ರತಿ ಬಾರಿಯೂ ವಿಚಿತ್ರದಂತೆ ಕಾಣುತ್ತಿರುವ ಸತ್ಯವೂ ಹೌದು. ಬೇರೆ ಬೇರೆ ಭಾಷೆಗಳ ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳು ಬಂದಾಗ ಮೊದಲಿಗೆ ಪೆಟ್ಟು ತಿನ್ನುವುದೇ ಕನ್ನಡದ ಚಿತ್ರಗಳು. ಈ ಬಾರಿಯೂ ಹಾಗೆಯೇ ಆಗುತ್ತಿದೆ. ಈ ಸಂಕ್ರಾಂತಿಗೆ ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳ ಶೋಗಳನ್ನೇ ಮುಲಾಜಿಲ್ಲದೆ ಕಿತ್ತು ಹಾಕಲಾಗಿದೆ. ಇದ್ದುದರಲ್ಲಿ ಫೈಟ್ ಕೊಡುತ್ತಿರುವ ಏಕೈಕ ಸಿನಿಮಾ ವೇದ.

    ತಮಿಳಿನ ವಾರಿಸು ಚಿತ್ರಕ್ಕೆ 760 ಹಾಗೂ ತುನಿವು ಚಿತ್ರಕ್ಕೆ 525 ಶೋ ನೀಡಲಾಗಿದೆ. ಒಂದು ವಿಜಯ್ ಚಿತ್ರವಾದ್ರೆ, ಮತ್ತೊಂದು ಅಜಿತ್ ಸಿನಿಮಾ. ಇದು ಬೆಂಗಳೂರಿನ ಶೋಗಳ ಲೆಕ್ಕ. ಇಬ್ಬರೂ ತಮಿಳು ಸೂಪರ್ ಸ್ಟಾರ್ ನಟರು. ಇಡೀ ರಾಜ್ಯದ ಥಿಯೇಟರುಗಳ ಲೆಕ್ಕಕ್ಕೆ ಬಂದರೆ ವಾರಿಸುಗೆ 150ಕ್ಕೂ ಹೆಚ್ಚು ಹಾಗೂ ತುನಿವುಗೆ 100ಕ್ಕೂ ಹೆಚ್ಚು ಥಿಯೇಟರ್ಸ್ ಸಿಕ್ಕಿವೆ.

    ಇನ್ನು ತೆಲುಗಿನ ಚಿರಂಜೀವಿ ಮತ್ತು ಬಾಲಕೃಷ್ಣ ಚಿತ್ರಗಳದ್ದೂ ಇದೇ ಕಥೆ. ಚಿರಂಜೀವಿ ಮತ್ತು ರವಿತೇಜ ಕಾಂಬಿನೇಷನ್ನಿನ ವಾಲ್ತೇರು ವೀರಯ್ಯ ಚಿತ್ರಕ್ಕೆ 150+ ಥಿಯೇಟರ್ಸ್ ಸಿಕ್ಕಿದ್ದರೆ, ಇದೇ ಮೊದಲ ಬಾರಿ ಬಾಲಕೃಷ್ಣ, ದುನಿಯಾ ವಿಜಯ್ ಅಭಿನಯದ ವೀರಸಿಂಹರೆಡ್ಡಿ ಚಿತ್ರ ಕೂಡಾ 150ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ.

    ಇವುಗಳ ಮಧ್ಯೆ ಗಟ್ಟಿಯಾಗಿ ನಿಂತಿರುವುದು ವೇದ ಮಾತ್ರ. ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಸ್ಕ್ರೀನ್ ವೇದ ಚಿತ್ರಕ್ಕೆ ಸಿಕ್ಕಿವೆ. ಉಳಿದಂತೆ ಯಾವ ಚಿತ್ರಗಳೂ ಒಂದಂಕಿಗಿಂತ ಹೆಚ್ಚು ಶೋಗಳನ್ನು ಪಡೆದುಕೊಂಡಿಲ್ಲ.