` vasista simha, - chitraloka.com | Kannada Movie News, Reviews | Image

vasista simha,

  • ಗಣರಾಜ್ಯೋತ್ಸವದ ದಿನ ಸಿಂಹ-ಪ್ರಿಯಾ ಕಲ್ಯಾಣ

    ಗಣರಾಜ್ಯೋತ್ಸವದ ದಿನ ಸಿಂಹ-ಪ್ರಿಯಾ ಕಲ್ಯಾಣ

    ಸ್ಯಾಂಡಲ್`ವುಡ್ ಸೆನ್ಸೇಷನ್ ಲವ್ ಬಡ್ರ್ಸ್ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ. ಇವರು ಹೋದಲ್ಲಿ ಬಂದಲ್ಲಿ ಮೀಡಿಯಾಗಳು ಮುತ್ತಿಕೊಳ್ಳುತ್ತಿವೆ. ಆದರೂ ಪರ್ಸನಲ್ ಲೈಫ್‍ನ್ನು ಪರ್ಸನಲ್ಲಾಗಿಯೇ ಇಟ್ಟುಕೊಂಡಿರುವ ಈ ತಾರಾ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ. ನಿಶ್ಚಿತಾರ್ಥ ಆದ ಮೇಲೆ ಶಾಕ್ ಕೊಟ್ಟಿದ್ದ ಸಿಂಹಪ್ರಿಯಾ ಜೋಡಿ ಮದುವೆಯನ್ನು ಮಾತ್ರ ಮೊದಲೇ ಘೋಷಿಸಿದೆ. ಜನವರಿ 26ಕ್ಕೆ ಸಿಂಹ-ಪ್ರಿಯಾ ಕಲ್ಯಾಣ.

    ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಬ್ಬರ ವಿವಾಹ ಕಾರ್ಯಕ್ರಮ ನಡೆಯಲಿದೆ. ಹೊಸ ವರ್ಷದ ಶುರುವಾತಿನಲ್ಲೇ ಇಬ್ಬರ ಮದುವೆಯ ದಿನಾಂಕ ಘೋಷಣೆಯಾಗಿದೆ. ಇಡೀ ದೇಶ ಭಾರತ ಒಕ್ಕೂಟವಾದ ದಿನವನ್ನು ಸಂಭ್ರಮಿಸುತ್ತಿದ್ದರೆ, ಸಿಂಹ-ಪ್ರಿಯಾ ಜೋಡಿ ತಾವು ಒಂದಾಗುವ ದಿನದ ಮುಹೂರ್ತದ ಸಂಭ್ರಮದಲ್ಲಿರುತ್ತಾರೆ.

  • ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿಂಹಪ್ರಿಯಾ ಲವ್ ಸ್ಟೋರಿ

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿಂಹಪ್ರಿಯಾ ಲವ್ ಸ್ಟೋರಿ

    ನಮ್ಮಿಬ್ಬರ ಪ್ರೀತಿ ಶುರುವಾಗಿದ್ದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನೋಡಿದ ಹರಿಪ್ರಿಯಾ ಅವರಿಗೆ ವಸಿಷ್ಠ ಸಿಂಹ ಅವರ ಪಾತ್ರ ಇಷ್ಟವಾಯಿತು. ನಟನೆ ಇಷ್ಟವಾಯಿತು. ವಿಷ್ ಮಾಡಿದ್ರು. ಫೋನ್ ಮಾಡಿದ್ರು. ಮತ್ತೆ ಮತ್ತೆ ಫೋನ್ ಮಾಡ್ತಾ ಹೋದ್ರು. ಮಾತನಾಡ್ತಾ ಹೋದ್ರು. ಮಧ್ಯೆ ಕೊರೊನಾ ಬಂತು. ಸಿಕ್ಕಾಪಟ್ಟೆ ಬಿಡುವು ಸಿಕ್ಕಿತು. ಇಷ್ಟು ಸುದೀರ್ಘ ಮಾತುಕತೆಯ ಮಧ್ಯೆ ಇಬ್ಬರ ಮಧ್ಯೆ ಪ್ರೀತಿ ಶುರುವಾಗಿದ್ದು ಹೇಗೆ..? ಇಬ್ಬರಿಗೂ ಗೊತ್ತಿಲ್ಲ.

    ಜನವರಿ 26ರಂದು ಮೈಸೂರಿನಲ್ಲಿ ಮದುವೆಯಾಗುತ್ತಿರುವ ಹಿನ್ನೆಲೆ, ಸಿಂಹ ಪ್ರಿಯಾ ಜೋಡಿ ಪ್ರೆಸ್ ಮೀಟ್ ಕರೆದಿತ್ತು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಸಿಷ್ಠ ಸಿಂಹ ನಾನು ನಾಯಿಮರಿ ಕೊಟ್ಟು ಪಟಾಯಿಸಿಕೊಳ್ಳಲಿಲ್ಲ ಎಂಬ ಯೂಟ್ಯೂಬರ್ಸ್ ಕಾಲ್ಪನಿಕ ವರದಿಗಳನ್ನು ಚೇಡಿಸುತ್ತಲೇ ಪ್ರೀತಿ ಆದ ಮೇಲೆ ನಾಯಿಮರಿ ಕೊಟ್ಟೆ ಎಂದರು. ನನಗೆ ಮೈಸೂರು ಇಷ್ಟ. ಮೈಸೂರಿನ ಹುಡುಗ. ಹೀಗಾಗಿ ಮೈಸೂರಿನಲ್ಲಿಯೇ ಮದುವೆಯಾಗುತ್ತಿದ್ದೇವೆ. ಬೆಂಗಳೂರಿನಲ್ಲಿ ಆರತಕ್ಷತೆ ಇದೆ ಎಂದರು. ಹರಿಪ್ರಿಯಾ ಅವರಿಗೆ ವಸಿಷ್ಠ ಸಿಂಹ ಫ್ಯಾನ್ ಅಂತೆ. ಮನಸುಗಳ ಮಾತು ಮಧುರ ನೋಡಿ ನಟನೆಯನ್ನು ಇಷ್ಟಪಟ್ಟೆ.  ಉಗ್ರಂ ಚಿತ್ರ ನೋಡಿ ಅವರ ಅಭಿಮಾನಿಯಾದೆ. ಸೂಜಿದಾರ ಸಿನಿಮಾ ನೋಡಿ ಕಳೆದೇ ಹೋಗ್ಬಿಟ್ಟೆ. ಅವರ ಟ್ಯಾಲೆಂಟ್ ಇಷ್ಟವಾಯಿತು. ನನ್ನ ಕಷ್ಟದ ದಿನಗಳಲ್ಲಿ ಅವರು ನನ್ನ ಜೊತೆಗಿದ್ದರು. ನಮ್ಮಿಬ್ಬರದೂ ಎರಡೂವರೆಮೂರು ವರ್ಷದ ಪ್ರೀತಿ ಎನ್ನುವ ವಸಿಷ್ಠ ಸಿಂಹ ಮೊದಲು ಪ್ರಪೋಸ್ ಮಾಡಿದ್ದು ನಾನೇ ಎಂದರು.

    ನಮ್ಮಿಬ್ಬರ ಪ್ರೀತಿ ಹೆಚ್ಚಾಗಿದ್ದು ಲಾಕ್ ಡೌನ್ ಕಾಲದಲ್ಲಿ. ಸಿಂಹ ನನಗೆ ಪ್ರಪೋಸ್ ಮಾಡಿದ್ದು ಅಪ್ಪ ತೀರಿ ಹೋದ ದಿನ. ನನಗೂ ಹೇಳಿಕೊಳ್ಳೋ ಆಸೆ ಇತ್ತು. ಮದುವೆ ಆದ ಮೇಲೆ  ಸಿನಿಮಾವನ್ನೇನೂ ಬಿಡಲ್ಲ. ಆದರೆ ಬ್ರೇಕ್ ತೆಗೆದುಕೊಳ್ತೇನೆ. ಮದುವೆ, ಮ್ಯಾರೇಜ್ ಲೈಫ್‍ನ್ನ ಎಂಜಾಯ್ ಮಾಡಬೇಕು. ಆನಂತರ ಒಳ್ಳೆಯ ಕಥೆ, ಪಾತ್ರ ಸಿಕ್ಕರೆ ನಟಿಸುತ್ತೇನೆ ಎಂದರು ಹರಿಪ್ರಿಯಾ. ಜನವರಿ 26ಕ್ಕೆ ಮದುವೆ, ಮೈಸೂರಿನಲ್ಲಿ. ಜನವರಿ 28ಕ್ಕೆ ಆರತಕ್ಷತೆ, ಬೆಂಗಳೂರಿನಲ್ಲಿ.

  • ಪ್ರಭುದೇವ ಜೊತೆ ವಸಿಷ್ಠ ಸಿಂಹ : ತಮಿಳಿಗೆ ಎಂಟ್ರಿ

    ಪ್ರಭುದೇವ ಜೊತೆ ವಸಿಷ್ಠ ಸಿಂಹ : ತಮಿಳಿಗೆ ಎಂಟ್ರಿ

    ವಸಿಷ್ಠ ಸಿಂಹ ಈಗಾಗಲೇ ಕನ್ನಡ, ತೆಲುಗಿನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಈಗ ತಮಿಳಿಗೂ ಹೊರಟಿದ್ದಾರೆ. ತಮಿಳಿನ ವೂಲ್ಫ್ ಹೆಸರಿನ ಸಿನಿಮಾದಲ್ಲಿ ವಸಿಷ್ಠ ಸಿಂಹ ಅವರದ್ದು ಪ್ರಮುಖ ಪಾತ್ರ. ಅಂದಹಾಗೆ ಈ ಚಿತ್ರದ ಹೀರೋ ಪ್ರಭುದೇವ. ವೆಂಕಟೇಶ್ ಅನ್ನೋವ್ರು ನಿರ್ದೇಶಿಸುತ್ತಿರೋ ವೂಲ್ಫ್ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಹೊಂದಿದೆ. ವಸಿಷ್ಠ ಸಿಂಹ ಅವರದ್ದು ಪ್ರಮುಖ ಪಾತ್ರವಾಗಿದ್ದು ಪ್ರಭುದೇವ ಜೊತೆಗೆ ಚಿತ್ರದಲ್ಲಿ ಅಂಜು ಕುರಿಯನ್, ಅನುಸೂಯ ಭಾರದ್ವಾಜ್, ಲಕ್ಷ್ಮೀ ರೈ, ಶ್ರೀಗೋಪಿಕಾ.. ಮೊದಲಾದವರು ನಟಿಸಿದ್ದಾರೆ. ವೂಲ್ಫ್ ಮಾರ್ಚ್‍ನಲ್ಲಿ ತೆರೆ ಕಾಣಲಿದೆ.

    ವಸಿಷ್ಠ ಸಿಂಹ ಲವ್ ಲೀ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಕೇಶವ್ ಪ್ರಸಾದ್ ನಿರ್ದೇಶನದ ಲವ್ ಲೀ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಇದರ ಜೊತೆಯಲ್ಲೇ ಜನವರಿ 26ಕ್ಕೆ ಹರಿಪ್ರಿಯಾ ಅವರ ಜೊತೆ ಹಸೆಮಣೆ ಏರಲಿದ್ದಾರೆ. ಒಟ್ಟಿನಲ್ಲಿ ವಸಿಷ್ಠ ಸಿಂಹ ಅವರಿಗೆ ಶುಭಕಾಲ ಶುರುವಾಗಿದೆ.

  • ವಸಿಷ್ಠ ಸಿಂಹ-ಹರಿಪ್ರಿಯಾ ಜೋಡಿಯ ಯದಾಯದಾಹಿ..

    ವಸಿಷ್ಠ ಸಿಂಹ-ಹರಿಪ್ರಿಯಾ ಜೋಡಿಯ ಯದಾಯದಾಹಿ..

    ಯದಾ ಯದಾಹಿ.. ಇದು ಹೊಸ ಸಿನಿಮಾ. ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ. ಟ್ರೇಲರ್ ಹೊರಬಿದ್ದಿದೆ. ಅಪ್ಪಟ ಮರ್ಡರ್ ಥ್ರಿಲ್ಲರ್. ಜೂನ್ 2ಕ್ಕೆ ರಿಲೀಸ್ ಆಗಲಿರುವ ಚಿತ್ರ ತೆಲುಗಿನ ಎವರು ಚಿತ್ರದ ರೀಮೇಕ್. ತೆಲುಗಿಗಿಂತ ತುಸು ಭಿನ್ನವಾಗಿ ತೋರುತ್ತಿದೆ. ಜೊತೆಗೆ ಕಣ್ಣುಗಳಲ್ಲೇ ಮಾತನಾಡುವ ಹರಿಪ್ರಿಯಾ-ವಸಿಷ್ಠ ಸಿಂಹ ಜೋಡಿ, ಜೊತೆಗೆ ದಿಗಂತ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ.

    ಕ್ಷಣಕ್ಕೊಮ್ಮೆ ಕೇಳುತ್ತಿರುವ ಕಥೆ ಸುಳ್ಳು ಎಂದು ಪ್ರೇಕ್ಷಕ ದಿಗ್ಭ್ರಮೆಗೊಳಗಾಗುವಂತೆ ಇರುವ ಕಥೆ ಯದಾ ಯದಾಹಿ ಚಿತ್ರದಲ್ಲಿದೆ. ಮದುವೆಗೂ ಮೊದಲೇ ಶುರುವಾಗಿದ್ದ ಸಿನಿಮಾ ಮದುವೆಯ ನಂತರ ರಿಲೀಸ್ ಆಗುತ್ತಿರುವುದು ವಿಶೇಷ.

    ದಾ ಯದಾ ಹಿ' ಸಿನಿಮಾವನ್ನು ಜಾಕ್ ಮಂಜು ಅವರು ತಮ್ಮ ಶಾಲಿನಿ ಎಂಟರ್ಪ್ರೈಸಸ್ ಮೂಲಕ ರಿಲೀಸ್ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಸಾಂಗನ್ನು ಕಿಚ್ಚ ಸುದೀಪ್ ಅವರು ಬಿಡುಗಡೆ ಮಾಡಿದ್ದರು. ಈಗ ಟ್ರೇಲರ್ ಕೂಡ ರಿಲೀಸ್ ಆಗಿದೆ. ವಿಶೇಷವೆಂದರೆ, ಈ ಸಿನಿಮಾದ ಹಾಡೊಂದಕ್ಕೆ ವಸಿಷ್ಠಸಿಂಹ ಹಾಗೂ ಹರಿಪ್ರಿಯ ದನಿಯಾಗಿದ್ದಾರೆ. 'ಯದಾ ಯದಾ ಹಿ' ಸಿನಿಮಾಗೆ ತೆಲುಗಿನ ಅಶೋಕ ತೇಜ ಅವರು ನಿರ್ದೇಶನ ಮಾಡಿದ್ದು, ರಾಜೇಶ್ ಅಗರವಾಲ್  ನಿರ್ಮಾಪಕ.

    ವಸಿಷ್ಠ, ದಿಗಂತ್ ಹಾಗೂ ನಾನು. ಇಲ್ಲಿ ಮೂವರು ಕೂಡ ಒಬ್ಬರಿಗಿಂತ ಒಬ್ಬರು ಬುದ್ದಿವಂತರು, ಚಾಣಾಕ್ಷರು. ಮೂವರೂ ಸ್ಪರ್ಧೆಗೆ ಬಿದ್ದವರಂತೆ ನಟಿಸಿದ್ದೇವೆ. ನನ್ನದು ಅಭಿನಯಕ್ಕೆ ಹೆಚ್ಚು ಅವಕಾಶ ಇರುವಂಥ ಪಾತ್ರ. ತುಂಬಾ ಸವಾಲಿನಿಂದ ಕೂಡಿತ್ತು. ಸಿನಿಮಾನೂ ಕ್ಲಾಸ್ ಆಗಿ ಮೂಡಿಬಂದಿರುವುದರಿಂದ ಪ್ರೇಕ್ಷಕರಿಗೂ ಕುತೂಹಲ ಕೆರಳಿಸುತ್ತಾ ಹೋಗುತ್ತದೆ ಎಂದು ಥ್ರಿಲ್ಲಾಗಿದ್ದಾರೆ ಹರಿಪ್ರಿಯ.

    ವಸಿಷ್ಠ ಅವರು ತಮ್ಮ ಪಾತ್ರಕ್ಕಿಂತ ಹೆಚ್ಚು ದಿಗಂತ್ ಪಾತ್ರದ ಬಗ್ಗೆ ಮಾತನಾಡಿದ್ದು ವಿಶೇಷ. ಇಲ್ಲಿ ದಿಗಂತ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಬೇರೆಯದೇ ದಿಗಂತ್ ಅವರನ್ನ ನೋಡುತ್ತೀರಿ. ಯದಾ ಯದಾ ಹಿ' ಸಿನಿಮಾದಲ್ಲಿ ಪ್ರೀತಿ, ಮೋಸ, ದ್ವೇಷ ಎಲ್ಲವೂ ಇದೆ ಎಂದಿದ್ದಾರೆ ವಸಿಷ್ಠ ಸಿಂಹ .