` kantara 2, - chitraloka.com | Kannada Movie News, Reviews | Image

kantara 2,

 • ಕಾಂತಾರ 2 ಆಲೋಚನೆ ಸದ್ಯಕ್ಕೆ ಇಲ್ಲ : ರಿಷಬ್ ಶೆಟ್ಟಿ

  ಕಾಂತಾರ 2 ಆಲೋಚನೆ ಸದ್ಯಕ್ಕೆ ಇಲ್ಲ : ರಿಷಬ್ ಶೆಟ್ಟಿ

  ಎಲ್ಲೆಡೆ ಕಾಂತಾರ 2 ಸಿನಿಮಾ ಮಾಡ್ತಾರೆ. ದೈವ ಅಪ್ಪಣೆ ಕೊಟ್ಟಿದೆ. ಅಣ್ಣಪ್ಪ, ಪಂಜುರ್ಲಿ ದೈವ, ಮಂಜುನಾಥ ಸ್ವಾಮಿ ಒಪ್ಪಿಗೆ ಸಿಕ್ಕಿದೆ. ಕಾರ್ಣಿಕದ ಒಪ್ಪಿಗೆ ಪಡೆದಿದ್ದಾರೆ. ಜನವರಿಯಲ್ಲಿ ಕಾಂತಾರ 2 ಶುರುವಾಗಲಿದೆ.  ಹೊಂಬಾಳೆಯವರೇ ಕಾಂತಾರ 2 ಸಿನಿಮಾ ಕೂಡಾ ಮಾಡುತ್ತಿದ್ದಾರೆ.. ಎಂಬೆಲ್ಲ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಕಾಂತಾರ ಸೃಷ್ಟಿಕರ್ತ ರಿಷಬ್ ಶೆಟ್ಟಿ ನೋ ಎಂದಿದ್ದಾರೆ. ಕಾಂತಾರ 2 ಮಾಡುವ ಆಲೋಚನೆ ಸದ್ಯಕ್ಕೆ ಇಲ್ಲ. ಆ ರೀತಿಯ ಯಾವುದೇ ಆಲೋಚನೆ ಇದ್ದರೆ ಖಂಡಿತಾ ನಾನೇ ಅಧಿಕೃತವಾಗಿ ತಿಳಿಸುತ್ತೇನೆ ಎಂದಿದ್ದಾರೆ ರಿಷಬ್ ಶೆಟ್ಟಿ.

  ಸದ್ಯಕ್ಕೆ ನಾನು ಮಂಗಳೂರು, ಉಡುಪಿಯಲ್ಲಿದ್ದೇವೆ. ದೈವಗಳ ಹರಕೆ ತೀರಿಸುತ್ತಿದ್ದೇವೆ. ಈ ಯಶಸ್ಸು ಸಿಕ್ಕಿದ್ದು ದೈವಗಳ ಆಶೀರ್ವಾದದಿಂದ. ಹೀಗಾಗಿಯೇ ನಾನು, ನನ್ನ ಪತ್ನಿ, ಕಾಂತಾರ ಚಿತ್ರತಂಡದವರೆಲ್ಲ ದೈವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇವೆ. ಈ ವೇಳೆ ದೈವ ಎದುರು ಬಂದಾಗ ನನ್ನಲ್ಲಿ ಈಗಲೂ ರೋಮಾಂಚನವಾಗುತ್ತೆ. ದೈವ ಕಣ್ಣುಗಳ ಹುಬ್ಬು ಹಾರಿಸಿ ಹೇಗೆ ಎನ್ನುವಂತೆ ನೋಡಿದಾಗ ಅದನ್ನು ವರ್ಣಿಸಲು ನನ್ನಲ್ಲಿ ಪದಗಳಿಲ್ಲ. ಇದು ನನ್ನದಲ್ಲ. ನಿನಗೆ ಸಲ್ಲಬೇಕಾದ ಯಶಸ್ಸು ಎಂದು ಪಾದಗಳಿಗೆ ನಮಸ್ಕರಿಸುವುದಷ್ಟೇ ನನ್ನಿಂದಾಗುವ ಕೆಲಸ ಎಂದಿರೋ ರಿಷಬ್ ಶೆಟ್ಟಿ, ಕಾಂತಾರ 2 ಪ್ಲಾನ್‍ನ್ನು ತಳ್ಳಿ ಹಾಕಿದ್ದಾರೆ.

 • ಕಾಂತಾರ 2ಗಾಗಿ ಕಲರಿಪಯಟ್ಟು ಕಲಿಯುತ್ತಿದ್ದಾರಂತೆ ರಿಷಬ್ ಶೆಟ್ಟಿ..!

  ಕಾಂತಾರ 2ಗಾಗಿ ಕಲರಿಪಯಟ್ಟು ಕಲಿಯುತ್ತಿದ್ದಾರಂತೆ ರಿಷಬ್ ಶೆಟ್ಟಿ..!

  ಕಾಂತಾರ ಚಿತ್ರದ ಸೀಕ್ವೆಲ್ ಅಥವಾ ಅವರೇ ಹೇಳುತ್ತಿರುವಂತೆ ಪ್ರೀಕ್ವೆಲ್ ಮಾಡಲು ತಯಾರಿ ಜೋರಾಗಿದೆ. ನಿರೀಕ್ಷೆಯಂತೂ ಮುಗಿಲು ಮುಟ್ಟಿದೆ. ರಿಷಬ್ ಶೆಟ್ಟಿಯವರೇನೋ ಕಥೆಯನ್ನು ಸಿದ್ಧ ಮಾಡಿಕೊಂಡಿದ್ದಾರೆ. ಹೊಂಬಾಳೆಯವರು ಪ್ರೊಡಕ್ಷನ್ ಕೆಲಸಗಳ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಾಂತಾರ ಚಿತ್ರದ ಮುಹೂರ್ತವಾದ ಸ್ಥಳದಲ್ಲಿಯೇ ಕಾಂತಾರ 2 ಮುಹೂರ್ತವೂ ನೆರವೇರಲಿದೆ. ಇದರ ನಡುವೆ ರಿಷಬ್ ಶೆಟ್ಟಿ ಕಲರಿಪಯಟ್ಟು ಮತ್ತು ಕುದುರೆ ಸವಾರಿಗಳನ್ನೂ ಕಲಿಯುತ್ತಿದ್ದಾರಂತೆ.

  ರಿಷಬ್ ಶೆಟ್ಟಿ, ಕಾಂತಾರ ಚಿತ್ರಕ್ಕಾಗಿ ದೈವ ನೃತ್ಯವನ್ನು ಪ್ರಾಕ್ಟೀಸ್ ಮಾಡಿದ್ದರು. ಈಗ ಕಾಂತಾರ 2 ಚಿತ್ರಕ್ಕಾಗಿ ಕಲರಿಪಯಟ್ಟುನಂತಹ ಸಮರ ಕಲೆ ಮತ್ತು ಕುದುರೆ ಸವಾರಿ ಕಲಿಯುತ್ತಿರುವುದು ಏಕೆ..? ಹಾಗಾದರೆ ಸಾಹಸ ದೃಶ್ಯಗಳು ಭರ್ಜರಿಯಾಗಿರುತ್ತವಾ.. ನಿರೀಕ್ಷೆಗಳು ಜೋರಾಗಿವೆ. ಕಲರಿಪಯಟ್ಟು ಕೇರಳದ ಸಮರ ಕಲೆ. ಈಗ ನಾವು ನೋಡಿರುವ ಕಾಂತಾರ ಚಿತ್ರವೂ 70-80ರ ದಶಕದ ಕಥೆ. ಇದಕ್ಕೂ ಹಿಂದೆ ಎಂದರೆ.. ಎಷ್ಟು ಹಿಂದೆ.. ಸ್ವಾತಂತ್ರ್ಯ ಪೂರ್ವದ ಕಥೆಯೂ ಇರುತ್ತದಾ.. ನಿರೀಕ್ಷೆ ಮಾಡಿಕೊಳ್ಳೋದಷ್ಟೆ. ಒಂದಂತೂ ಸತ್ಯ, ಕಾಂತಾರ 2 ಕೂಡಾ, ಕಾಂತಾರಕ್ಕಿಂತ ವಿಭಿನ್ನವಾಗಿರಲಿದೆ. ಇವೆಲ್ಲದರ ಮಧ್ಯೆ ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಅಮೆರಿಕಕ್ಕೆ ಹಾರಿದ್ದಾರೆ.

 • ಕ್ರಿ.ಶ.400ರ ಕಾಲಘಟ್ಟದ ಕಥೆ ಕಾಂತಾರ 2

  ಕ್ರಿ.ಶ.400ರ ಕಾಲಘಟ್ಟದ ಕಥೆ ಕಾಂತಾರ 2

  ಕಾಂತಾರ ಚಿತ್ರದ ಪ್ರೀಕ್ವೆಲ್ ಘೋಷಣೆಯಾಗಿದ್ದೇ ತಡ, ಚಿತ್ರದ ಬಗ್ಗೆ ಕುತೂಹಲ ಗರಿಗೆದರುತ್ತಿದೆ. ಕ್ರಿ.ಶ.400ರ ಕಾಲಘಟ್ಟದ ಕಥೆ ಇರಲಿದ್ದು, ಕಥೆ ಹಿಂದೆ ಹಿಂದೆ ಹೋಗಲಿದೆ. ಅಂದರೆ ನೆಮ್ಮದಿಯಿಲ್ಲದ ರಾಜ ಪಂಜುರ್ಲಿಯನ್ನು ತನ್ನ ರಾಜ್ಯಕ್ಕೆ ಕರೆತರುವ ಕಥೆ ಇರಲಿದೆ ಎನ್ನಲಾಗಿದೆ. ಕಾಂತಾರ 2' ಚಿತ್ರದಲ್ಲಿ ರಿಷಬ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ 11 ಕೆಜಿ ದೇಹತೂಕವನ್ನು ಕಮ್ಮಿ ಮಾಡಿಕೊಳ್ಳಲಿದ್ದಾರೆ.

  ಕಥೆ & ಚಿತ್ರಕಥೆ ಬರೆಯುವ ಸಲುವಾಗಿ ರಿಷಬ್ ಶೆಟ್ಟಿ ಮತ್ತು ಚಿತ್ರದ ಬರಹಗಾರರಾದ ಅನಿರುದ್ಧ್ ಮಹೇಶ್, ಶನೀಲ್ ಗುರು & ಟೀಮ್ ಈಗಾಗಲೇ ಮಂಗಳೂರಿನಲ್ಲಿ ಬೀಡುಬಿಟ್ಟಿದೆ. ಮುಖ್ಯವಾಗಿ ಮಂಗಳೂರಿನಲ್ಲೇ ವಾಸ್ತವ್ಯ ಹೂಡುವುದಕ್ಕೂ ಒಂದು ಕಾರಣವಿದೆ. 'ಕಾಂತಾರ' ಕಥೆಯು ಕರಾವಳಿ ಹಿನ್ನೆಲೆಯಲ್ಲಿ ಸಾಗುವುದರಿಂದ, ತಂಡ ಕೂಡ ಅಲ್ಲಿಯೇ ಉಳಿದುಕೊಂಡಿದೆ.

  ಮೂಲಗಳ ಪ್ರಕಾರ, 'ಕಾಂತಾರ 2' ಚಿತ್ರದ ಬಜೆಟ್ 150 ಕೋಟಿ ರೂ. ಎನ್ನಲಾಗುತ್ತಿದೆ. ಕಾಂತಾರ ಸೆನ್ಸೇಷನ್ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಕಾಂತಾರ 2 ಮೇಲೆ ಭಾರಿ ನಿರೀಕ್ಷೆಗಳಿವೆ. ಆ ಕಾರಣಕ್ಕಾಗಿಯೇ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ.