` bagheera, - chitraloka.com | Kannada Movie News, Reviews | Image

bagheera,

  • ಬಘೀರ ನಂತರ ಶ್ರೀಮುರಳಿ ಹೊಸ ಪ್ಲಾನ್

    ಬಘೀರ ನಂತರ ಶ್ರೀಮುರಳಿ ಹೊಸ ಪ್ಲಾನ್

    ರೋರಿಂಗ್ ಸ್ಟಾರ್ ಶ್ರೀಮುರಳಿ ಬಘೀರ ನಂತರ ಮತ್ತಷ್ಟು ಆಕ್ಟಿವ್ ಆಗುತ್ತಿದ್ದಾರೆ. ಬಘೀರ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದ್ದು ಶೇ.40ರಷ್ಟು ಶೂಟಿಂಗ್ ಮುಗಿದಿದೆಯಂತೆ. ನಿರ್ದೇಶಕ ಡಾ.ಸೂರಿ ಸದ್ದಿಲ್ಲದೆ ಚಿತ್ರೀಕರಣ ಮಾಡಿಕೊಂಡು ಹೋಗುತ್ತಿದ್ದಾರೆ. ಪ್ರಶಾಂತ್ ನೀಲ್ ಬರೆದಿರುವ ಕಥೆ. ಬಘೀರ ಚಿತ್ರಕ್ಕೆ ಹೊಂಬಾಳೆ ಸಿನಿಮಾ ಹಣ ಹೂಡುತ್ತಿದೆ. ಹೀಗಿರುವಾಗಲೇ ಇನ್ನಷ್ಟ ಆಕ್ಟಿವ್ ಆಗಿದ್ದಾರೆ ಶ್ರೀಮುರಳಿ.

    ಬಘೀರ ನಂತರ ನಟಿಸುವ ಸಿನಿಮಾ ಬಗ್ಗೆ ಶ್ರೀಮುರಳಿ ಹೊಸ ಬ್ಯಾನರ್‍ವೊಂದರ ಜೊತೆ ಮಾತುಕತೆಯಾಗಿದೆಯಂತೆ. ಇತ್ತೀಚೆಗೆ ಹನುಮಾನ್ ಟೀಸರ್ ನೋಡಿ ಥ್ರಿಲ್ಲಾಗಿದ್ದು ಗೊತ್ತಿದೆ ತಾನೇ. ಆದಿಪುರುಷ್ ಟೀಸರ್ ಅಲ್ಲ, ಹನುಮಾನ್ ಟೀಸರ್. ಆ ಚಿತ್ರದ ಟೀಂನ ಹಾಲೇಶ್ ಕೂಗುಂಡಿ ಅವರ ಜೊತೆ ಶ್ರೀಮುರಳಿ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಹನುಮಾನ್ ಟೀಂನಲ್ಲಿದ್ದ ಹಾಲೇಶ್ ಕೂಗುಂಡಿಯವರಿಗೆ ಇದು ಮೊದಲ ನಿರ್ದೇಶನ. ಚಿತ್ರಕ್ಕೆ ಬ್ರಾಂಡ್ ಕಾರ್ಪೊರೇಟ್ಸ್ ಪ್ರೊಡಕ್ಷನ್ಸ್ ಪ್ರೈವೇಟ್ ಸಂಸ್ಥೆ ನಿರ್ಮಾಣದ ಹೊಣೆ ಸಿಕ್ಕಿದ್ದು, ಇದು ದಾವಣಗೆರೆಯ ಮೂಲದ ಯುವಕರ ಬ್ಯಾನರ್ ಎಂಬುದು ವಿಶೇಷ. ಹೀಗಾಗಿಯೇ ಚಿತ್ರದ ಪೋಸ್ಟರ್‍ನ್ನು ಶಾಮನೂರು ಶಿವಶಂಕರಪ್ಪ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.

  • ಬಘೀರ ಶೂಟಿಂಗ್`ನಲ್ಲಿ ಶ್ರೀಮುರಳಿಗೆ ಗಾಯ

    ಬಘೀರ ಶೂಟಿಂಗ್`ನಲ್ಲಿ ಶ್ರೀಮುರಳಿಗೆ ಗಾಯ

    ಬಘೀರ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೇ ವರ್ಷ ರಿಲೀಸ್ ಮಾಡುವ ಪ್ಲಾನ್ ಚಿತ್ರತಂಡಕ್ಕೂ ಇದೆ. ಹೊಂಬಾಳೆ ಬ್ಯಾನರ್`ನ ಸಿನಿಮಾಗೆ ಶ್ರೀಮುರಳಿ ಹೀರೊ. ಡಾ.ಸೂರಿ ನಿರ್ದೇಶನದ ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ರಾಕ್ ಲೈನ್ ಸ್ಟುಡಿಯೋದಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಬಿದ್ದು ಶ್ರೀಮುರಳಿ ಕಾಲಿಗೆ ಪೆಟ್ಟಾಗಿದೆ. ಮೊಣಕಾಲಿಗೆ ಪೆಟ್ಟಾಗಿದ್ದು ಶ್ರೀಮುರಳಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಚಿತ್ರೀಕರಣ ವೇಗವಾಗಿ ಸಾಗುತ್ತಿದ್ದು, ಚಿತ್ರೀಕರಣ ಕೊನೆಯ ಹಂತದಲ್ಲಿತ್ತು. ಇನ್ನೊಂದೆರಡು ದಿನ ಶೂಟಿಂಗ್ ಮುಗಿದಿದ್ದರೆ ಚಿತ್ರೀಕರಣವೇ ಮುಗಿಯುತ್ತಿತ್ತು. ಈ ವೇಳೆ ಹೀಗಾಗಿದ್ದು ಚಿತ್ರೀಕರಣವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಹಾಗೆಂದು ಶ್ರೀಮುರಳಿಯವರಿಗೆ ಗಂಭೀರ ಗಾಯಗಳೇನೂ ಆಗಿಲ್ಲ. ಆದರೆ ಸದ್ಯಕ್ಕೆ ರಿಸ್ಕ್ ತೆಗೆದುಕೊಂಡು ಚಿತ್ರೀಕರಣಕ್ಕೆ ಹೋಗುವ ಸ್ಥಿತಿಯಲ್ಲಿ ಶ್ರೀಮುರಳಿ ಇಲ್ಲ.

    ಈ ಹಿಂದೆ ಮದಗಜ ಚಿತ್ರೀಕರಣ ವೇಳೆಯಲ್ಲಿಯೂ ಶ್ರೀಮುರಳಿ ಪೆಟ್ಟು ಮಾಡಿಕೊಂಡಿದ್ದರು. ಆಗಲೂ ಮೊಣಕಾಲಿಗೇ ಪೆಟ್ಟು ಬಿದ್ದಿತ್ತು. ಅದೇ ಕಾಲಿಗೆ ಮತ್ತೆ ಪೆಟ್ಟಾಗಿರುವುದು ಆತಂಕ ಸೃಷ್ಟಿಸಿದೆ.

  • ಬಘೀರ ಶ್ರೀಮುರಳಿಗೆ ರುಕ್ಮಿಣಿ ಹೀರೋಯಿನ್

    ಬಘೀರ ಶ್ರೀಮುರಳಿಗೆ ರುಕ್ಮಿಣಿ ಹೀರೋಯಿನ್

    ಪ್ರಶಾಂತ್ ನೀಲ್-ಹೊಂಬಾಳೆ ಮತ್ತೊಮ್ಮೆ ಒಂದಾಗಿರುವ ಚಿತ್ರ ಬಘೀರ. ಡಾ.ಸೂರಿ ನಿರ್ದೇಶನದ ಚಿತ್ರಕ್ಕೆ ಶ್ರೀಮುರಳಿ ಹೀರೋ. ಚಿತ್ರಕ್ಕೆ ಕಥೆ ಬರೆದಿರುವುದು ಕೆಜಿಎಫ್ ಪ್ರಶಾಂತ್ ನೀಲ್. ಬಘೀರ ಚಿತ್ರದ ಲೇಟೆಸ್ಟ್ ಅಪ್‍ಡೇಟ್ ಬಂದಿದ್ದು, ಚಿತ್ರದ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ.

    ರುಕ್ಮಿಣಿ ವಸಂತ್ ಅವರ ಒಂದು ಚಿತ್ರವೂ ಇನ್ನೂ ಬಿಡುಗಡೆಯಾಗಿಲ್ಲ. ಮೊದಲನೇ ಸಿನಿಮಾ ರಕ್ಷಿತ್ ಶೆಟ್ಟಿ ಜೊತೆಗಿನ ಸಪ್ತ ಸಾಗರದಾಚೆಯೆಲ್ಲೋ.. ನಿರ್ದೇಶಕ ಹೇಮಂತ್ ರಾವ್. 2ನೇ ಸಿನಿಮಾ ಬಾನದಾರಿಯಲ್ಲಿ. ಗಣೇಶ್ ಹೀರೋ ಆದರೆ ಡೈರೆಕ್ಟರ್ ಪ್ರೀತಂ ಗುಬ್ಬಿ. 3ನೇ ಸಿನಿಮಾ ಕೂಡಾ ಸ್ಟಾರ್ ನಟ ಶ್ರೀಮುರಳಿ. ಡೈರೆಕ್ಟರ್ ಡಾ.ಸೂರಿ. ಕಥೆ ಪ್ರಶಾಂತ್ ನೀಲ್. ಬ್ಯಾನರ್ ಹೊಂಬಾಳೆ.

    ಬಘೀರ ನನಗೆ ತುಂಬಾ ವಿಶೇಷವಾದದ್ದು. ಪ್ರಶಾಂತ್ ನೀಲ್ ಕಥೆ ಮತ್ತು ಡಾ.ಸೂರಿಯವರ ನರೇಷನ್ ಎರಡೂ ಇಷ್ಟವಾಯಿತು. ಚಿತ್ರದ ನನ್ನ ಪಾತ್ರವನ್ನು ಸೂರಿ ಹೇಳುತ್ತಿದ್ದಂತೆಯೇ ನಾನು ಗಗನದಲ್ಲಿ ತೇಲುವುದಕ್ಕೆ ಶುರು ಮಾಡಿದೆ. ಪಾತ್ರವೇ ಹಾಗಿದೆ ಎಂದು ಥ್ರಿಲ್ ಆಗಿದ್ದಾರೆ ರುಕ್ಮಿಣಿ ವಸಂತ್.

  • ಬಘೀರನಿಗೆ ಇನ್ನೊಬ್ಬ ಸೂಪರ್ ಕಾಪ್ ಸಾಥ್

    ಬಘೀರನಿಗೆ ಇನ್ನೊಬ್ಬ ಸೂಪರ್ ಕಾಪ್ ಸಾಥ್

    ಬಘೀರ. ಶ್ರೀಮುರಳಿ ಅಭಿನಯದ ಸಿನಿಮಾ. ಶೂಟಿಂಗ್ ಕೊನೆಯ ಹಂತದಲ್ಲಿರುವಾಗ ಅಚಾತುರ್ಯ ನಡೆದು ಸದ್ಯಕ್ಕೆ ಕಾಲಿನ ಆಪರೇಷನ್ ಅಗಿರುವ ಶ್ರೀಮುರಳಿ ರೆಸ್ಟ್`ನಲ್ಲಿದ್ದಾರೆ. ಹೀಗಿರುವಾಗಲೇ ಚಿತ್ರಕ್ಕೆ ಇನ್ನೊಬ್ಬ ಸೂಪರ್ ಕಾಪ್ ಎಂಟ್ರಿಯಾಗಿದೆ. ಫಹಾದ್ ಫಾಸಿಲ್. ಮಲಯಾಳಂನ ಈ ನಟ ಇತ್ತೀಚೆಗೆ ಕಮಲ್ ಹಾಸನ್ ಅಭಿನಯದ ವಿಕ್ರಂ ಚಿತ್ರದಲ್ಲೂ ಸೂಪರ್ ಕಾಪ್ ಪಾತ್ರ ಮಾಡಿದ್ದರು. ಬಘೀರದಲ್ಲಿ ಶ್ರೀಮುರಳಿ ಅವರದ್ದೂ ಪೊಲೀಸ್ ಪಾತ್ರವೇ. ಫಹಾದ್ ಫಾಸಿಲ್ ಸಿಬಿಐ ಆಫೀಸರ್ ಪಾತ್ರದಲ್ಲಿ ನಟಿಸುತ್ತಿದ್ದಾರೆಂಬ ಮಾಹಿತಿ ಇದೆ.

    ನಟ ಫಹಾದ್ ಫಾಸಿಲ್ ಈಗಾಗಲೇ ಕನ್ನಡದ ನಿರ್ದೇಶಕ ಪವನ್ಕುಮಾರ್ರ ‘ಧೂಮಂ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಇದರ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ‘ಬಘೀರ’ ಸಿನಿಮಾ ಮೂಲಕ ಅವರು ಮತ್ತೊಬ್ಬ ಕನ್ನಡ ನಿರ್ದೇಶಕರ ಸಿನಿಮಾದಲ್ಲಿ ಕೆಲಸ ಮಾಡುವಂತಾಗಿದೆ. ‘ಧೂಮಂ’ ಮತ್ತು ‘ಬಘೀರ’ ಸಿನಿಮಾಗಳೆರಡೂ ಒಂದೇ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ. ಇದು ಸಹ ಅವರು ‘ಬಘೀರ’ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರುವುದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

    ಬಘೀರ ಚಿತ್ರದಲ್ಲಿ ನಟಿಸುತ್ತಿರುವುದು ನಿಜ. ಆದರೆ ಅದು ವಿಲನ್ ಪಾತ್ರ ಅಲ್ಲ. ಪ್ರಮುಖ ಪಾತ್ರ ಎನ್ನುತ್ತಿದೆ ಚಿತ್ರತಂಡ. ಆ ಪ್ರಕಾರವೇ ಫಹಾದ್ ಅವರು ಸಿಬಿಐ ಆಫೀಸರ್ ಆಗಿ ನಟಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಚಿತ್ರಕ್ಕೆ ಪ್ರಶಾಂತ್ ನೀಲ್ ಕಥೆಯಿದ್ದು, ಡಾ.ಸೂರಿ ನಿರ್ದೇಶನವಿದೆ.

  • ಶ್ರೀಮುರಳಿ ಈಸ್ ಬ್ಯಾಕ್

    ಶ್ರೀಮುರಳಿ ಈಸ್ ಬ್ಯಾಕ್

    ಬಘೀರ ಚಿತ್ರದ ಚಿತ್ರೀಕರಣ ವೇಳೆಯಲ್ಲೇ ಗಾಯಗೊಂಡಿದ್ದ ನಟ ಶ್ರೀಮುರಳಿ ಚೇತರಿಸಿಕೊಂಡಿದ್ದಾರೆ. ಬಘೀರ ಚಿತ್ರದ ಸೆಟ್ನಲ್ಲಿ ಗಾಯಗೊಂಡು ಎಡ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ನಟ ಶ್ರೀ ಮುರಳಿ ಅವರು ಚೇತರಿಸಿಕೊಂಡಿದ್ದು, ಮತ್ತೆ ಚಿತ್ರೀಕರಣಕ್ಕೆ ಮರಳಿದ್ದಾರೆ.

    ಬಘೀರ. ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ. ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಪ್ರಶಾಂತ್ ನೀಲ್ ಮತ್ತು ಶ್ರೀಮುರಳಿ ಉಗ್ರಂ ನಂತರ ಮತ್ತೊಮ್ಮೆ ಅಫಿಷಿಯಲ್ಲಾಗಿ ಒಟ್ಟಾಗಿರುವ ಚಿತ್ರ ಬಘೀರ. ಹೀಗಾಗಿಯೇ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. ಬಹುಭಾಷಾ ಸಿನಿಮಾ ಬಘೀರದ ಭಾರಿ ನಿರೀಕ್ಷೆಗಳಿವೆ.

    ಯಶ್ ಮತ್ತು ರಮ್ಯಾ ಅಭಿನಯದ ಲಕ್ಕಿ ಚಿತ್ರ ನಿರ್ದೇಶಿಸಿದ್ದ ಡಾ. ಸೂರಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಎಜೆ ಶೆಟ್ಟಿ ಅವರ ಛಾಯಾಗ್ರಹಣವಿದೆ. ಮೂರು ತಿಂಗಳ ವಿರಾಮದ ನಂತರ ನಟ ಈಗ ಸೆಟ್ಗೆ ಮರಳಿದ್ದಾರೆ ಮತ್ತು ಶ್ರೀ ಮುರಳಿ ಅವರು ಹಿರಿಯ ನಟ ಪ್ರಕಾಶ್ ರಾಜ್ ಅವರೊಂದಿಗೆ ಕೆಲವು ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎಂದು  ಚಿತ್ರತಂಡ ಮಾಹಿತಿ ನೀಡಿದೆ. ಶ್ರೀಮುರಳಿ ಎದುರು ರುಕ್ಮಿಣಿ ವಸಂತ್ ನಾಯಕಿಯಾಗಿದ್ದು, ಚಿತ್ರದಲ್ಲಿ ರಂಗಾಯಣ ರಘು, ಅಚ್ಯುತ್ , ಪುನೀತ್ ರುದ್ರನಾಗ್ ಮೊದಲಾದವರು ನಟಿಸಿದ್ದಾರೆ.

  • ಹೇಗಿದೆ ಬಘೀರ ಪೋಸ್ಟರ್?

    ಹೇಗಿದೆ ಬಘೀರ ಪೋಸ್ಟರ್?

    ಬಘೀರ. ಶ್ರೀಮುರಳಿ ನಟಿಸುತ್ತಿರೋ ಹೊಂಬಾಳೆ ಬ್ಯಾನರ್ ಸಿನಿಮಾ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ಡೈರೆಕ್ಟರ್ ಅಲ್ಲ. ಕಥೆಗಾರ. ನಿರ್ದೇಶನದ ಹೊಣೆ ಡಾ.ಸೂರಿಯವರದ್ದು. ಉಗ್ರಂ ಬಳಿಕ ಪ್ರಶಾಂತ್ ನೀಲ್ ಅವರಷ್ಟೇ ಅಲ್ಲ, ಶ್ರೀಮುರಳಿ ಕೂಡ ಕಮ್ ಬ್ಯಾಕ್ ಮಾಡಿದ್ದು ನಿಜ. ಉಗ್ರಂ ಬಳಿಕ ಶ್ರೀಮುರಳಿ ಸೋಲನ್ನೇ ಕಂಡಿಲ್ಲ. ರಥಾವರ, ಮಫ್ತಿ, ಭರಾಟೆ ಮತ್ತು ಮದಗಜ ಚಿತ್ರಗಳು ಗೆದ್ದಿವೆ. ನಿರ್ಮಾಪಕರಿಗೆ ಲಾಭವನ್ನೇ ತಂದುಕೊಟ್ಟಿವೆ. ಆದರೆ.. ಉಗ್ರಂ ಹವಾಗೆ ಹೋಲಿಸಿದರೆ.. ಇನ್ನೂ ಇನ್ನೂ ಇನ್ನೂ ದೊಡ್ಡ ಮಟ್ಟದ ಗೆಲುವು ಬೇಕಿತ್ತು ಎನ್ನುವ ಆಸೆ ಅಭಿಮಾನಿಗಳದ್ದು. ಹೀಗಾಗಿಯೇ ಬಘೀರ ಚಿತ್ರದ ಮೇಲೆ ಭಾರಿ ನಿರೀಕ್ಷೆಗಳಿವೆ.

    ಶ್ರೀಮುರಳಿ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಬಘೀರ ಚಿತ್ರದ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ ಚಿತ್ರತಂಡ. ನೆರಳು ಬೆಳಕಿನ ಶೇಡ್‍ನಲ್ಲಿರೋ ವಿಚಿತ್ರ ಆಯುಧವನ್ನ ಕೈಲಿ ಹಿಡಿದಿರೋ ಉರಿಗಣ್ಣುಗಳ ಶ್ರೀಮುರಳಿ ಪೋಸ್ಟರ್ ಸಖತ್ತಾಗಿಯೇ ಇದೆ. ಆದರೆ ಹಳೆಯ ಪೋಸ್ಟರ್‍ಗೂ ಹೊಸ ಪೋಸ್ಟರ್‍ಗೂ ಅಂತಹ ದೊಡ್ಡ ಮಟ್ಟದ ವ್ಯತ್ಯಾಸಗಳೇನೂ ಕಾಣುತ್ತಿಲ್ಲ. ಇತ್ತೀಚೆಗೆ ಬಘೀರ ಚಿತ್ರದ ಕುರಿತು ಒಳ್ಳೆಯ ಸುದ್ದಿಗಳು ಹೊರಬಿದ್ದಿವೆ. ರುಕ್ಮಿಣಿ ವಸಂತ್ ಹೀರೋಯಿನ್ ಆಗಿ ಸೆಲೆಕ್ಟ್ ಆಗಿದ್ದಾರೆ. ಶೀಘ್ರದಲ್ಲೇ ಶೂಟಿಂಗ್ ಶುರುವಾಗುವ ನಿರೀಕ್ಷೆಯೂ ಇದೆ.