` vijayananda - chitraloka.com | Kannada Movie News, Reviews | Image

vijayananda

  • Vijayananda Movie Review, Chitraloka Rating - 3.5/5

    Vijayananda Movie Review, Chitraloka Rating - 3.5/5

    Vijayananda’ is a tale of inspiration to youths

    Biopic is not a completely new genre in Kannada cinema and many biopics have been made till date. This week’s release ‘Vijayananda’ is the first of its kind as it is a biopic of business magnate Dr Vijay Sankeshwar made in five different languages.

    ‘Vijayananda’ traces the success story of Vijay Sankeshwar from a small town boy to the owner of India’s largest Logistics Company. The film starts with Vijay Sankeshwar (Nihal Rajput) bringing a semi automatic printing machine from Bombay to his native town Gadag. The Sankeshwars were a big name in the printing business at that time in Northern part of Karnataka and Vijay wants to expand it much against the wishes of his father. Vijay succeeds in expanding the publishing business. He slowly ventures to logistics business in spite of opposition from his family and other competitors.

    The film revolves around how Vijay Sankeshwar succeeds in the business by establishing a successful logistics company from just one truck and venturing into politics and other businesses forms the crux of the film.

    As told earlier, the film tells the success story of Vijay Sankeshwar and spans around five decades. The film ends in 2015 when Vijay Sankeshwar another successful newspaper called ‘Vijayavani’ and makes it number one in the market. The first half of the film moves on quickly and it is the second half which is a bit slow. The director could have trimmed the film for a few minutes, to make it an easy watch.

    Vijayananda’ is a richly made film with good technical values. The film has good music and background music by Gopisundar and cinematography by Keerthan Poojary. Director Rishika Sharma’s apt script is another highlight of the film.

    However, it is the artists who make the film a good watch. Nihal Rajput who is seen in the role of Vijay Sankeshwar in the film carries the film on his shoulders. Ananth Nag and Prakash Belawadi in the roles of B G Sankeshwar and Rama Rao are a treat to watch. Ravichandran has nothing much to do in the film. The other artists have given ample support for the film.

    Totally, ‘Vijayananda’ is a nice watch to the entire family and particularly an inspiration to the youths.

  • ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ವಿಜಯಾನಂದ ಜೋಡಿ

    ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ವಿಜಯಾನಂದ ಜೋಡಿ

    ರಿಷಿಕಾ ಶರ್ಮ ಮತ್ತು ನಿಹಾಲ್ ರಜಪೂತ್. ವಿಜಯ್ ಸಂಕೇಶ್ವರ್ ಬಯೋಪಿಕ್ ವಿಜಯಾನಂದ ಚಿತ್ರದ ನಿರ್ದೇಶಕಿ ರಿಷಿಕಾ ಹಾಗೂ ಹೀರೋ ನಿಹಾಲ್ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ರಿಷಿಕಾ-ನಿಹಾಲ್ ಈಗ ವಿವಾಹ ಜೀವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ನಾನು ಮತ್ತು ನಿಹಾಲ್ ಫೆಬ್ರವರಿಯಲ್ಲಿ ಮದುವೆಯಾಗಲಿದ್ದೇವೆ. ನಮ್ಮಿಬ್ಬರದು ಸುಮಾರು 9 ವರ್ಷಗಳ ಸ್ನೇಹ. ಪ್ರೀತಿಯ ನೆಲೆಗಟ್ಟಿನ ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದೇವೆ. ಹರಸಿ ಹಾರೈಸಿ, ಪ್ರೀತಿ ವಿಶ್ವಾಸ ಸದಾ ಎದುರು ನೋಡುವ ನಿಮ್ಮ ರಿಷಿಕಾ-ನಿಹಾಲ್ ಎಂದು ಬರೆದುಕೊಂಡಿದ್ದಾರೆ ರಿಷಿಕಾ ಮತ್ತು ನಿಹಾಲ್.

    ಫೆಬ್ರವರಿ 15ರಂದು ಮಲ್ಲೇಶ್ವರದ ಟಿಟಿಡಿ ಕಲ್ಯಾಣ ಮಂಟಪದಲ್ಲಿ ಮದುವೆ ನೆರವೇರಲಿದೆ. ಫೆ.17ರಂದು ಧಾರವಾಡದಲ್ಲಿ ಆರತಕ್ಷತೆ.

  • ವಿಜಯಾನಂದ ಮೆಚ್ಚಿಕೊಂಡ ಪ್ರೇಕ್ಷಕರು

    ವಿಜಯಾನಂದ ಮೆಚ್ಚಿಕೊಂಡ ಪ್ರೇಕ್ಷಕರು

    ಈ ವಾರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಚಿತ್ರ ವಿಜಯಾನಂದ. ಚಿತ್ರವನ್ನು ನೋಡಿದ ಪ್ರೇಕ್ಷಕ ಪ್ರಭು ವಿಜಯಾನಂದ ಚಿತ್ರವನ್ನು ಮೆಚ್ಚಿ ಕೊಂಡಾಡುತ್ತಿದ್ದಾನೆ. ಒಂದು ಸಿನಿಮಾ ಯಾವ ರೀತಿ ಪ್ರೇಕ್ಷಕರನ್ನು ಸೆಳೆಯಬಲ್ಲದೋ.. ಅದನ್ನೂ ಮೀರಿ ಸಿನಿಮಾ ಸ್ಫೂರ್ತಿ ತುಂಬುತ್ತಿದೆ. ಅಫ್‍ಕೋರ್ಸ್.. ವಿಜಯ ಸಂಕೇಶ್ವರ ಎಂಬ ಹುಡುಗ, ದೇಶವೇ ಮೆಚ್ಚುವ ಉದ್ಯಮಪತಿಯಾಗಿದ್ದೇ ರೋಚಕ ಮತ್ತು ರೋಮಾಂಚಕ.

    ಹುಬ್ಬಳ್ಳಿಯ ಹುಡುಗ ವಿಜಯ್ 1 ಲಾರಿ ಖರೀದಿಸಿ, 2 ಲಾರಿ ಖರೀದಿಸಿ.. ಅದನ್ನು ಮೂರು..4..10.. ಹೀಗೆ ವಿಸ್ತರಿಸಿ ವಿಆರ್‍ಎಲ್ ಎಂಬ ಸಂಸ್ಥೆಯನ್ನೇ ಕಟ್ಟಿದ್ದು, ವಿಜಯ ಕರ್ನಾಟಕ, ವಿಜಯವಾಣಿ, ವಿಜಯ ಟೈಮ್ಸ್, ದಿಗ್ವಿಜಯ ಟಿವಿ ಎಂಬ ಸುದ್ದಿ ಸಂಸ್ಥೆ ಕಟ್ಟಿದ್ದು.. ಪ್ರತಿಯೊಂದು ಹೆಜ್ಜೆಯೂ ಸ್ಫೂರ್ತಿದಾಯಕವೇ. ಇದೆಲ್ಲ ಹೇಗೆ ಸಾಧ್ಯವಾಯ್ತು ಅನ್ನೋ ಕುತೂಹಲವಿದ್ದ ಪ್ರೇಕ್ಷಕರಿಗೆ ಸಿನಿಮಾದಲ್ಲಿ ಹೇಳುವ ಕಥೆ ಮನ ಮುಟ್ಟಿದೆ.

    ಅನಂತನಾಗ್, ರವಿಚಂದ್ರನ್, ವಿನಯಾ ಪ್ರಸಾದ್ ನಟಿಸಿರುವ ಚಿತ್ರದಲ್ಲಿ ನಿಹಾಲ್ ವಿಜಯ ಸಂಕೇಶ್ವರ ಪಾತ್ರದಲ್ಲಿ ನಟಿಸಿದ್ದಾರೆ. ಸಿರಿ ಪ್ರಹ್ಲಾದ್, ಭರತ್ ಬೋಪಣ್ಣ, ಅರ್ಚನಾ ಕೊಟ್ಟಿಗೆ ಮೊದಲಾದವರು ನಟಿಸಿರುವ ಚಿತ್ರಕ್ಕೆ ರಿಷಿಕಾ ಶರ್ಮಾ ನಿರ್ದೇಶಕಿ

    ಇನ್ನೂ ವಿಶೇಷವೆಂದರೆ ಇಡೀ ಚಿತ್ರತಂಡದವರಿಗೆ.. ನಿಹಾಲ್, ಸಿರಿ ಪ್ರಹ್ಲಾದ್, ನಿರ್ದೇಶಕಿ ರಿಷಿಕಾ.. ಹೀಗೆ ಎಲ್ಲರಿಗೂ ವಿಜಯ ಸಂಕೇಶ್ವರ ಎಂಬ ಹೆಸರೇ ಸ್ಫೂರ್ತಿ. ನಟಿಸುವವರೆಲ್ಲ ಪ್ರೀತಿಯಿಂದ ಅಭಿಮಾನದಿಂದ ನಟಿಸಿರುವುದು ಇಡೀ ಚಿತ್ರದಲ್ಲಿ ಎದ್ದು ಕಾಣುತ್ತದೆ.

  • ವಿಜಯಾನಂದ ವೀಕ್ಷಿಸಿದ ಮೂರು ಸಾವಿರ ಮಠದ ಸ್ವಾಮೀಜಿ ಮತ್ತು ವಿದ್ಯಾರ್ಥಿಗಳು

    ವಿಜಯಾನಂದ ವೀಕ್ಷಿಸಿದ ಮೂರು ಸಾವಿರ ಮಠದ ಸ್ವಾಮೀಜಿ ಮತ್ತು ವಿದ್ಯಾರ್ಥಿಗಳು

    ವಿಜಯಾನಂದ ಸಂಕೇಶ್ವರ್ ಅವರ ಜೀವನವೇ ಸ್ಫೂರ್ತಿದಾಯಕ ಕಥೆ. ಅವರ ಜೀವನದ ಬಗ್ಗೆ ಕೇಳಿದ್ದೆವು. ಈ ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಚಿತ್ರ ನೋಡಿದಾಗ ಶೂನ್ಯದಿಂದ ಸಾಧನೆ, ಶ್ರಮದಿಂದ ಯಶಸ್ಸಿನ ಶಿಖರ ತಲುಪಬಹುದು ಎಂಬ ಕಥೆಯನ್ನು ವಾಸ್ತವದಲ್ಲಿ ಹೇಳಲಾಗಿದೆ. ನಿಜಕ್ಕೂ ಇದೊಂದು ಸ್ಫೂರ್ತಿದಾಯಕ ಸಿನಿಮಾ. ಈ ಮಾತನ್ನು ಹೇಳಿದ್ದು ಮೂರುಸಾವಿರ ಮಠದ ಮಠಾಧೀಶರಾದ ಡಾ.ಶ್ರೀ ಗುರುಸಿದ್ದಾರಾಜ ಯೋಗೀಂದ್ರ ಜಗದ್ಗುರು.

    ಡಾ.ವಿಜಯ ಸಂಕೇಶ್ವರ ಅವರ ಸಿನಿಮಾ ಈ ವಾರ ರಿಲೀಸ್ ಆಗಿ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ನೋಡಿದವರು ವಿಜಯ ಸಂಕೇಶ್ವರರ ಬಗ್ಗೆ ಇದ್ದ ಅಭಿಮಾನವನ್ನು ನೂರ್ಮಡಿಗೊಳಿಸಿಕೊಂಡಿದ್ದಾರೆ. ಮಠದ ಶ್ರೀಗಳು ಸಿನಿಮಾವನ್ನು ಪ್ರಾದ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ನೋಡಿ ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

    ಮೂರು ಸಾವಿರ ಮಠದ ವಿದ್ಯಾವರ್ಧಕ ಸಂಘದ ನಿರ್ದೇಶಕ ಸದಾನಂದ ಡಂಗನವರ ಚಿತ್ರಕ್ಕೆ ಸರ್ಕಾರ ಶೇ.100ರಷ್ಟು ತೆರಿಗೆ ವಿನಾಯಿತಿ ಘೋಷಿಸಬೇಕು. ಈ ಸಿನಿಮಾ ಎಲ್ಲ ಯುವಜನತೆಗೆ ಸ್ಫೂರ್ತಿ, ಮಾದರಿ, ಪ್ರೇರಣೆ. ಸಂಕೇಶ್ವರರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧಿಸಿದ ಸಾಧನೆ ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದು ಶ್ಲಾಘಿಸಿದರು. ಹುಬ್ಬಳ್ಳಿಯ ಪಿವಿಆರ್‍ನಲ್ಲಿ ಸ್ವಾಮೀಜಿಗಳ  ಜೊತೆ ಸಂಘದ ಚೇರ್ಮನ್ ಅರವಿಂದ ಕುಬಸದ, ನಿರ್ದೇಶಕ ಸದಾನಂದ ಡಂಗನವರ, ಪ್ರಿನ್ಸಿಪಾಲರಾದ ಬಸವರಾಜ ಸಾಲಿಮಠ, ರಾಜು ಟಿ.ಪವಾರ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಸಿನಿಮಾ ವೀಕ್ಷಿಸಿದರು.

  • ವಿಜಯಾನಂದ ಸಿನಿಮಾ ಹುಟ್ಟಿದ್ದು ಹೇಗೆ?

    ವಿಜಯಾನಂದ ಸಿನಿಮಾ ಹುಟ್ಟಿದ್ದು ಹೇಗೆ?

    ಬೇರೆ ಬೇರೆ ಪ್ರಾಜೆಕ್ಟ್‍ಗಳಿಗೆ ಕೆಲಸ ಮಾಡುತ್ತಿದ್ದಾಗ ನಟ ನಿಹಾಲ್ ಅವರೇ ಕೊಟ್ಟ ಐಡಿಯಾ ಇದು. ವಿಜಯ್ ಸಂಕೇಶ್ವರರ ಬಯೋಪಿಕ್ ಏಕೆ ಮಾಡಬಾರದು ಎಂದು ಕೇಳಿದರು. ಹೌದಲ್ವಾ ಎನಿಸಿತು. ನೋಡುತ್ತಾ ಹೋದರೆ.. ಥ್ರಿಲ್ ಆಗುವಂತ ಕತೆ ಇದೆ. ಕೋಟಿ ಕೋಟಿ ಹಣ ಇಟ್ಟುಕೊಂಡು ಇಂಡಸ್ಟ್ರಿಗೆ ಬಂದವರಲ್ಲ. ಜೀರೋದಿಂದ ಹೀರೋ ಆದವರು. ದೇಶವೇ ಮೆಚ್ಚುವ ಕನ್ನಡಿಗನೊಬ್ಬನ ಸಾಧನೆಯ ಕಥೆಯನ್ನು ನಾವೇಕೆ ಹೇಳಬಾರದು ಎನ್ನಿಸಿತು. ಸಿನಿಮಾ ಶುರುವಾಯಿತು ಎನ್ನುತ್ತಾರೆ ರಿಷಿಕಾ ಶರ್ಮ.

    ಸಿನಿಮಾ ಶುರುವಾಗಿದ್ದು ವಿಆರ್‍ಎಲ್ ಸಂಸ್ಥೆಯಿಂದಲ್ಲ. ಬೇರೆ ನಿರ್ಮಾಪಕರಿದ್ದರು. ಅವರೂ ಕೂಡಾ ಸಂಕೇಶ್ವರರ ಅಭಿಮಾನಿಗಳೇ. ಆನಂದ್ ಸಂಕೇಶ್ವರ ಅವರು ಸಿನಿಮಾ ಇಂಡಸ್ಟ್ರಿಗೆ ಬರುತ್ತೇನೆ ಎಂದಾಗ ತಮ್ಮ ತಂದೆಯ ಕಥೆಯನ್ನೇ ಏಕೆ ಸಿನಿಮಾ ಮಾಡಬಾರದು ಎಂದುಕೊಂಡರು. ಆ ನಿರ್ಮಾಪಕರನ್ನೂ ಕೇಳಿದರು. ಅವರೂ ಖುಷಿಯಿಂದಲೇ ಓಕೆ ಎಂದರು. ಸಿನಿಮಾ ಶುರುವಾಯಿತು ಎನ್ನುತ್ತಾರೆ ರಿಷಿಕಾ.

    ನಿಹಾಲ್ ಕೂಡಾ ಉತ್ತರ ಕರ್ನಾಟಕದವರೇ. ಅವರಿಗೂ ಸಂಕೇಶ್ವರ ಅಂದರೆ ಸ್ಫೂರ್ತಿ. ಸಿರಿ ಪ್ರಹ್ಲಾದ್ ಕೂಡಾ ಉತ್ತರ ಕರ್ನಾಟಕದ ಹುಡುಗಿಯೇ. ಬಹುತೇಕ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಮಂದಿಯೇ ಹೆಚ್ಚಿದ್ದಾರೆ. ನಿರ್ದೇಶಕಿ ರಿಷಿಕಾ ಶರ್ಮ ನಿರ್ದೇಶನವನ್ನಷ್ಟೇ ಅಲ್ಲ, ಕಾಸ್ಟ್ಯೂಮ್ ಹಾಗೂ ಆರ್ಟ್ ಡೈರೆಕ್ಷನ್ ಕೂಡಾ ನಿಭಾಯಿಸಿದ್ದಾರೆ. ಹಲವು ಕನಸುಗಳಿಗೆ ಜೀವ ಕೊಟ್ಟ, ಹಲವು ಕನಸುಗಾರರಿಗೆ ಸ್ಫೂರ್ತಿ ನೀಡಿದ ವಿಜಯ ಸಂಕೇಶ್ವರರ ಜೀವನಗಾಥೆ ವಿಜಯಾನಂದ ಇಂದಿನಿಂದ ಥಿಯೇಟರುಗಳಲ್ಲಿ ಕಂಗೊಳಿಸಲಿದೆ.

  • ಸಿರಿ ಪ್ರಹ್ಲಾದ್, ಲಲಿತಾ ಸಂಕೇಶ್ವರ್ ಆಗಿ ಬದಲಾಗಿದ್ದು ಹೇಗೆ?

    ಸಿರಿ ಪ್ರಹ್ಲಾದ್, ಲಲಿತಾ ಸಂಕೇಶ್ವರ್ ಆಗಿ ಬದಲಾಗಿದ್ದು ಹೇಗೆ?

    ವಿಜಯ ಸಂಕೇಶ್ವರರ ಜೀವನದ ಯಶೋಗಾಥೆಯಲ್ಲಿ ಅವರ ಪತ್ನಿ ಲಲಿತಾ ಅವರದ್ದು ಸಿಂಹಪಾಲು. ವಿಜಯ್ ಸಂಕೇಶ್ವರ್ 2ನೇ ಲಾರಿ ಖರೀದಿಸಿದ್ದು ಮತ್ತು ಸಾಲ ಮಾಡಿದ್ದು ಲಲಿತಾ ಅವರ ಹೆಸರಿನಲ್ಲೇ. ಮೊದಲನೆಯ ಲಾರಿ ಸಾಹಸದ ಮೊದಲ ಮೆಟ್ಟಿಲಾದರೆ, 2ನೇ ಲಾರಿ ಜೀವನದ ಯಶೋಗಾಥೆಯ ಮೊದಲ ಹೆಜ್ಜೆ. ಲಲಿತಾ ಅವರಿಗೂ ಕನಸುಗಳಿತ್ತು. ವಿಜಯ್ ಅವರಿಗೂ ಕನಸುಗಳಿದ್ದವು. ಪತಿಯ ಕನಸುಗಳಿಗೆ ನೀರೆರೆಯುತ್ತಾ ಬೆನ್ನೆಲುಬಾಗಿ ನಿಂತವರು ಲಲಿತಾ ಸಂಕೇಶ್ವರ್. ಕುಟುಂಬದ ಹೊಣೆಯನ್ನಷ್ಟೇ ಅಲ್ಲ, ಪತ್ನಿಯಾಗಿ, ತಾಯಿಯಾಗಿ ವಿಜಯ್ ಸಂಕೇಶ್ವರ್ ಅವರಿಗೆ ಹೆಗಲಿಗೆ ಹೆಗಲಾದರು. ಆ ಪಾತ್ರದಲ್ಲಿ ನಟಿಸಿರುವುದು ಸಿರಿ ಪ್ರಹ್ಲಾದ್.

    ವಿಜಯ್ ಸಂಕೇಶ್ವರ್ ಅವರ ಬಯೋಪಿಕ್ ತಯಾರಾಗುತ್ತಿದೆ ಅನ್ನೋದು ನನಗೆ ಮೊದಲು ಗೊತ್ತಾಗಿದ್ದು ನನ್ನ ತಂದೆಯಿಂದ. ಅವರಿಗೂ, ನನಗೂ ಇಬ್ಬರಿಗೂ ವಿಜಯ್ ಸಂಕೇಶ್ವರ್ ಎಂದರೇನೇ ಒಂದು ವಿಶೇಷ. ಹಾಗಾಗಿಯೇ ಅಪ್ಪ ಹೇಳುತ್ತಿದ್ದಂತೆಯೇ ನಾನೇ ಚಿತ್ರತಂಡಕ್ಕೆ ಕಾಂಟ್ಯಾಕ್ಟ್ ಮಾಡಿದೆ. ಅಡಿಷನ್‍ಗೆ ಹೆಸರು ಸೇರಿಸಿದೆ. ವಿಜಯಾನಂದ ಚಿತ್ರದಲ್ಲಿ ಸಣ್ಣ ಪಾತ್ರವಾದರೂ ಸರಿ, ಮಾಡೋಕೆ ಸಿದ್ಧಳಾಗಿದ್ದೆ. ಆದರೆ ಲಲಿತಾ ಅವರ ಪಾತ್ರವೇ ಸಿಕ್ಕಿತು ಎಂದು ಥ್ರಿಲ್ಲಾಗುತ್ತಾರೆ ಸಿರಿ ಪ್ರಹ್ಲಾದ್.

    ನಾನೂ ಉತ್ತರ ಕರ್ನಾಟಕದವಳೇ. ಆದರೆ ಬೆಳೆದಿದ್ದು ಮೈಸೂರಿನಲ್ಲಿ. ಹೀಗಾಗಿ ವರ್ಕ್‍ಶಾಪ್ ಅಗತ್ಯವಾಗಿತ್ತು. ಲಲಿತಾ ಮೇಡಂ ಜೊತೆಗೆ ಕಾಲ ಕಳೆಯುತ್ತಾ ಹೋದಂತೆ ಅವರ ಸರಳತೆ ಇಷ್ಟವಾಯಿತು. ಅವರೊಂದಿಗೆ ನಾನು ನನ್ನ ಕುಟುಂಬದಂತೆಯೇ ಇದ್ದೆ. ಚಿತ್ರದಲ್ಲಿ ನನ್ನದು ಮೂರು ಶೇಡ್ ಇದೆ. ಮೂರು ವಯಸ್ಸಿನ ಕಥೆಯಿದು. ಕಥೆ, ಕಾಲಕ್ಕೆ ತಕ್ಕಂತೆ ವೇಷ, ಬಾಡಿ ಲಾಂಗ್ವೇಜ್ ಎಲ್ಲವೂ ಬದಲಾಗುತ್ತೆ. ಡೈರೆಕ್ಟರ್ ಆ ವಿಷಯದಲ್ಲಿ ಪರ್ಫೆಕ್ಟ್ ಆಗಿದ್ದರು ಎಂದು ರಿಷಿಕಾ ಶರ್ಮಾ ಮತ್ತು ಆನಂದ ಸಂಕೇಶ್ವರ ಅವರಿಗೆ ಥ್ಯಾಂಕ್ಸ್ ಹೇಳುತ್ತಾರೆ ಸಿರಿ ಪ್ರಹ್ಲಾದ್.

    ಚಿತ್ರಕ್ಕೆ ಯು ಪ್ರಮಾಣ ಪತ್ರ ಸಿಕ್ಕಿದ್ದು, ನಾಳೆ ಬಿಡುಗಡೆಯಾಗುತ್ತಿದೆ. ನಿಹಾಲ್, ಸಿರಿ ಪ್ರಹ್ಲಾದ್, ಅನಂತನಾಗ್, ರವಿಚಂದ್ರನ್ ಸೇರಿದಂತೆ ದಿಗ್ಗಜ ನಟರೇ ಚಿತ್ರದಲ್ಲಿ ನಟಿಸಿದ್ದಾರೆ.