` amrutha prem, - chitraloka.com | Kannada Movie News, Reviews | Image

amrutha prem,

 • ಟಗರು ಪಲ್ಯದ ಸೂರ್ಯಕಾಂತಿಯಾದ ಅಮೃತಾ ಪ್ರೇಮ್

  ಟಗರು ಪಲ್ಯದ ಸೂರ್ಯಕಾಂತಿಯಾದ ಅಮೃತಾ ಪ್ರೇಮ್

  ಸೂರ್ಯಕಾಂತಿ ನಾನು.. ನನ್ನ ಸೂರ್ಯ ನೀನು..

  ನೀ ಎತ್ತಾಗೋದ್ರೂ.. ಅತ್ತಾಕಡೆ ತಿರುಗ್ತೀನಿ ನಾನು..

  ಹೊಂಗೆ ನೆರಳಂಗೆ ನಿನ್ನ ಪ್ರೀತಿ ಅಕ್ಕರೆ..

  ನಿನ್ನ ಬಾಳಿನಲ್ಲಿ ನಾನು ಮಂಡ್ಯ ಸಕ್ಕರೆ..

  ಹೂವ ಬಳ್ಳಿ ನಾನು ನಿನ್ನ ಸುತ್ತ ಹಬ್ಬಲೆ..

  ಲೋಕ ನಾಚುವಂತೆ ನಿನ್ನ ನಾನು ತಬ್ಬಲೆ..

  ಹೂ ಅನ್ನು.. ಉಹೂಂ ಅನ್ನಬ್ಯಾಡ..ಮಾಮ..

  ಟಗರುಪಲ್ಯದ ಸೂರ್ಯಕಾಂತಿ ಹಾಡಿದು. ಮಾವನ ಮೇಲಿನ ಪ್ರೀತಿಯನ್ನು ಹೇಳೋ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟಿದೆ ಟಗರುಪಲ್ಯ ಟೀಂ. ಸ್ವತಃ ಧನಂಜಯ ಅವರೇ ಕ್ಯಾಚಿ ಮ್ಯಾಚಿ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಕಂಠ ಕುಣಿಸಿದ್ದು, ವಾಸುಕಿ ವೈಭವ್ ಟ್ಯೂನ್ ಹಾಕಿದ್ದಾರೆ. ಹಳ್ಳಿ ಸೊಗಡಿನ ಕಂಪು ಹೊಂದಿರುವ ಈ ಮೆಲೋಡಿ ಹಾಡಿಗೆ 'ಲವ್ಲಿ ಸ್ಟಾರ್' ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಹೆಜ್ಜೆ ಹಾಕಿದ್ದಾರೆ. ಲಂಗ ದಾವಣಿ ತೊಟ್ಟು ಪಕ್ಕಾ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ.

  ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ‘ಟಗರು ಪಲ್ಯ’ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ನಟಿಯಾಗಿ 'ನೆನಪಿರಲಿ' ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ನಾಗಭೂಷಣ್ 'ಟಗರು ಪಲ್ಯ'ದ ನಾಯಕ. ಈಗಾಗಲೇ ನಾಗಭೂಷಣ್ ಹಾಗೂ ಅಮೃತಾ ಅವರ ಕಾಂಬಿನೇಶನ್ ಭಾರೀ ಕುತೂಹಲವನ್ನು ಸೃಷ್ಟಿ ಮಾಡಿದೆ. ಹಿರಿಯ ಕಲಾವಿದರಾದ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಚಿತ್ರಕ್ಕೆ ಸಾಥ್ ಕೊಟ್ಟಿದೆ.

 • ಟಗರುಪಲ್ಯದ 7 ಸ್ಟಾರ್ ಸುಲ್ತಾನ್ ಬದುಕಿ ಬಿಟ್ಟ..

  ಟಗರುಪಲ್ಯದ 7 ಸ್ಟಾರ್ ಸುಲ್ತಾನ್ ಬದುಕಿ ಬಿಟ್ಟ..

  ಟಗರುಪಲ್ಯ ಚಿತ್ರದಲ್ಲಿನ ಹೈಲೈಟ್ ಪ್ರೇಮ್ ಮಗಳು ಅಮೃತಾ ಪ್ರೇಮ್ ಹೀರೋಯಿನ್ ಆಗಿ ಪರಿಚಿತರಾಗುತ್ತಿದ್ದಾರೆ. ಡಾಲಿ ಧನಂಜಯ್ ಅವರ ಅಂತರಂಗದ ಗೆಳೆಯ ನಾಗಭೂಷಣ್ ಹೀರೋ ಆಗಿದ್ದಾರೆ. ಇವರಿಬ್ಬರ ಜೊತೆಯಲ್ಲಿ ಈ ಚಿತ್ರದ ಇನ್ನೊಂದು ಹೈಲೈಟ್ 7 ಸ್ಟಾರ್ ಸುಲ್ತಾನ್. ಇದ್ಯಾರು 7 ಸ್ಟಾರ್ ಸುಲ್ತಾನ್ ಎನ್ನಬೇಡಿ, ಇದೊಂದು ಟಗರು. ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ ಮೊಹಮ್ಮದ್ ಯುನೂಸ್ ಗಡೇದ ಇದರ ಮಾಲೀಕರು. ಎರಡೂವರೆ ವರ್ಷದ ಹಿಂದೆ ಬಕ್ರೀದ್ ಹಬ್ಬದಲ್ಲಿ ಕುರ್ಬಾನಿಗಾಗಿ ಈ ಟಗರನ್ನು 1.88 ಲಕ್ಷ ರೂ.ಗೆ ಖರೀದಿಸಲಾಗಿತ್ತು.

  ಆದರೆ ಕುರ್ಬಾನಿಗೂ ಮುನ್ನ ಟಗರು ಕಾಳಗದಲ್ಲಿ ಮೊದಲ ಬಹುಮಾನ ಗೆದ್ದಿತ್ತು. ಎರಡೂವರೆ ವರ್ಷದ ಅವಧಿಯಲ್ಲಿ 34 ಸ್ಪರ್ಧೆಗಳಲ್ಲಿ ಸುಲ್ತಾನ್ ಪ್ರಥಮ ಸ್ಥಾನ ಪಡೆದಿದೆ. ಈವರೆಗೆ 20 ಲಕ್ಷಕ್ಕೂ ಅಧಿಕ ಹಣ, ಬುಲೆಟ್, ಹೊಂಡಾ ಬೈಕ್, ಒಂದೂವರೆ ತೊಲ ಚಿನ್ನ ಗೆದ್ದಿದೆ. ಈ ಟಗರಿನ ಡಿಚ್ಚಿ ಹೇಗಿರುತ್ತದೆ ಎಂದರೆ ಒಂದೇ ಹೊಡೆತಕ್ಕೆ ಎದುರಾಳಿ ಹಿಂದೆ ಸರಿಯುತ್ತಿದೆ. ಉದ್ದ ಕೋಡಿನ ಬಿಳಿ ಬಣ್ಣದ ಟಗರಿನ ಖ್ಯಾತಿ ಎಲ್ಲೆಡೆ ಹಬ್ಬಿದೆ. ಇತ್ತೀಚೆಗೆ ಟಗರಿನ ಮಾಲೀಕ ಮಹಮ್ಮದ್ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ  ನೀಡುವುದಾಗಿ ಹೇಳಿಕೊಂಡಿದ್ದರು.

  ಈ ಟಗರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆ ಅಭಿಮಾನಿಗಳೇ ಮಾಲೀಕರಿಗೆ ದುಂಬಾಲು ಬಿದ್ದಿದ್ದಾರೆ. ಕೆಲವರು ಹಣ ಕೊಟ್ಟು ಸ್ವತಃ ಖರೀದಿ ಮಾಡುತ್ತೇವೆ. ಕುರ್ಬಾನಿ ಮಾಡಬೇಡಿ ಎಂದಿದ್ದಾರೆ. ಫೈನಲಿ ಅಭಿಮಾನಿಗಳ ಒತ್ತಾಯ ಗೆದ್ದಿದೆ. 7 ಸ್ಟಾರ್ ಸುಲ್ತಾನ್ ಬದುಕಿದೆ.

 • ನೆನಪಿರಲಿ ಪ್ರೇಮ್ ಮಗಳು ಡಾಲಿ ಚಿತ್ರಕ್ಕೆ ನಾಯಕಿ..!

  ನೆನಪಿರಲಿ ಪ್ರೇಮ್ ಮಗಳು ಡಾಲಿ ಚಿತ್ರಕ್ಕೆ ನಾಯಕಿ..!

  ನೆನಪಿರಲಿ ಪ್ರೇಮ್ ಅವರನ್ನು ನೋಡಿದರೆ ಇನ್ನೂ ವಯಸ್ಸಾಗಿಲ್ಲವೇನೋ ಅನ್ನಿಸೋದು ಸಹಜ. ಆದರೆ ಅವರಿಗೆ ದೊಡ್ಡ ಮಗಳಿದ್ದಾಳೆ ಎನ್ನುವುದು ಗುಟ್ಟೇನಲ್ಲ. ಅಮೃತಾ ಪ್ರೇಮ್. ಇನ್ನೂ ಕಾಲೇಜು ಓದುತ್ತಿರುವ ಅಮೃತಾ ಪ್ರೇಮ್ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಡಾಲಿ ಧನಂಜಯ ನಿರ್ಮಾಣದ ಟಗರು ಪಲ್ಯ ಚಿತ್ರ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ ಅಮೃತಾ ಪ್ರೇಮ್.

  ಚಿತ್ರಕ್ಕೆ ಮುಗ್ಧತೆ ಹಾಗೂ ಹಳ್ಳಿ ಸೊಗಡಿನ ವೇಷಕ್ಕೆ ಹೊಂದಬಲ್ಲ ಹುಡುಗಿಗಾಗಿ ಹುಡುಕುತ್ತಿದ್ದೆವು. ಹೊಸಬರಾಗಿದ್ದರೆ ಚೆನ್ನಾಗಿರುತ್ತಾರೆ ಎಂದಾಗ ಅಮೃತಾ ಪ್ರೇಮ್ ನೆನಪಾಯಿತು. ಪಾತ್ರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ಫೈನಲ್ ಮಾಡಿದೆವು ಎನ್ನುತ್ತಾರೆ ಡಾಲಿ ಧನಂಜಯ್. ಟಗರು ಪಲ್ಯ ಚಿತ್ರಕ್ಕೆ ಡಾಲಿ ನಿರ್ಮಾಪಕರು. ಆದರೆ ಅವರು ನಟಿಸುತ್ತಿಲ್ಲ. ನಾಗಭೂಷಣ್ ಹೀರೋ. ಉಮೇಶ್ ನಿರ್ದೇಶಕ.

  ಫಂಕ್ಷನ್‍ವೊಂದರಲ್ಲಿ ನಿರ್ದೇಶಕ ಉಮೇಶ್ ಅಮೃತಾ ಅವರನ್ನು ನೋಡಿದ್ದರಂತೆ. ಟಗರು ಪಲ್ಯ ಸ್ಕ್ರಿಪ್ಟ್ ಎಲ್ಲ ಮುಗಿದ ಮೇಲೆ ಈ ಪಾತ್ರಕ್ಕೆ ಯಾರು ಸೂಟ್ ಆಗಬಹುದು ಎಂದು ಯೋಚಿಸಿದಾಗ ಅಮೃತಾ ಪ್ರೇಮ್ ಅವರ ಮುಖ ಕಣ್ಮುಂದೆ ಬಂತು. ಮುಗ್ಧತೆ ಮತ್ತು ಹಳ್ಳಿ ಹುಡುಗಿ ಲುಕ್‍ಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ಪ್ರೇಮ್ ಅವರನ್ನು ಕಾಂಟ್ಯಾಕ್ಟ್ ಮಾಡಿದೆವು. ಅವರು ಓಕೆ ಎಂದರು ಎನ್ನುವುದು ಉಮೇಶ್ ಅವರ ಮಾತು.

  ಸಿನಿಮಾ ಅಥವಾ ಬೇರೆ ಯಾವುದೇ ಆಗಿರಬಹುದು, ಅದನ್ನು ಮಗಳ ಆಯ್ಕೆಗೇ ಬಿಟ್ಟಿದ್ದೆ. ಮಗಳು ಸಿನಿಮಾ ಯೆಸ್ ಎಂದಳು. ಟಗರು ಪಲ್ಯ ಸ್ಕ್ರಿಪ್ಟ್ ಇಷ್ಟವಾಯಿತು. ಜೊತೆಗೆ ಡಾಲಿ ಧನಂಜಯ್ ನಿರ್ಮಾಣ ಎನ್ನುವುದು ಕೂಡಾ ಖುಷಿ ಕೊಟ್ಟಿತು. ಅದಾದ ಮೇಲೆ ಮಗಳ ಜೊತೆ ಮಾತನಾಡಿದೆ. ಎಜುಕೇಷನ್ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುತ್ತೇನೆ ಎಂದು ಮಗಳೂ ಭರವಸೆ ಕೊಟ್ಟಳು. ನನ್ನ ಮಗಳು ಒಳ್ಳೆಯ ಕಥೆ, ಬ್ಯಾನರ್ ಮತ್ತು ಒಳ್ಳೆಯ ನಿರ್ದೇಶಕರ ಸಿನಿಮಾ ಮೂಲಕ ಲಾಂಚ್ ಆಗುತ್ತಿದ್ದಾಳೆ ಎಂಬ ಖುಷಿಯಿದೆ ಎಂದಿದ್ದಾರೆ ಪ್ರೇಮ್. ಅಮೃತಾ ಪ್ರೇಮ್ ಫೈನಲ್ ಇಯರ್ ಎಂಜಿನಿಯರಿಂಗ್ ಓದುತ್ತಿದ್ದು, ಅತ್ತ ಎಜುಕೇಷನ್ ಇನ್ನೊಂದೆಡೆ ಸಿನಿಮಾ ವರ್ಕ್‍ಶಾಪ್ ಎರಡರಲ್ಲೂ ಬ್ಯುಸಿಯಾಗಿದ್ದಾರೆ.