` vedha - chitraloka.com | Kannada Movie News, Reviews | Image

vedha

 • ಕಲ್ಲು..ಕುಡುಗೋಲು.. ವೇದ ಆಯುಧ ರಹಸ್ಯ

  ಕಲ್ಲು..ಕುಡುಗೋಲು.. ವೇದ ಆಯುಧ ರಹಸ್ಯ

  ಶಿವಣ್ಣ ಲಾಂಗು ಹಿಡಿದರೆ ಸಿನಿಮಾ ಹಿಟ್ಟು ಎನ್ನುವುದು ಚಿತ್ರರಂಗದ ನಂಬಿಕೆ. ಆದರೆ ಇಲ್ಲಿ ಲಾಂಗು ಹಿಡಿದಿಲ್ಲ. ಕುಡುಗೋಲು ಹಿಡಿದಿದ್ದಾರೆ. ಜೊತೆಗೆ ಕಲ್ಲು ಕೂಡಾ ಇದೆ. ವೆಪನ್ಸ್ ಎಂದು ರಿಲೀಸ್ ಮಾಡಿರೋ ಟೀಸರ್‍ನಲ್ಲಿ ಕಾಣಿಸೋದು ಕಲ್ಲು ಮತ್ತು ಕುಡುಗೋಲು. ರಕ್ತಸಿಕ್ತ ಕಥೆ ಇದೆಯೇನೋ ಎಂದು ಅನ್ನಿಸುವ ವೇದದಲ್ಲಿ ಬೇರೆಯದೇ ಒಂದು ಕಥೆಯೂ ಇದೆ ಎಂಬ ಸುಳಿವೂ ಇದೆ.

  ಎ.ಹರ್ಷ ನಿರ್ದೇಶನದ ಚಿತ್ರವಿದು. ಹರ್ಷ-ಶಿವಣ್ಣ ಕಾಂಬಿನೇಷನ್‍ನ 4ನೇ ಚಿತ್ರ ವೇದ. ಇದೇ ಮೊದಲ ಬಾರಿಗೆ ಗೀತಾ ಶಿವರಾಜಕುಮಾರ್ ನಿರ್ಮಾಣ ಮಾಡುತ್ತಿದ್ದು, ಶಿವಣ್ಣ ವೃತ್ತಿ ಜೀವನದ 125ನೇ ಐತಿಹಾಸಿಕ ಚಿತ್ರ ಇದಾಗಲಿದೆ.

  ಶಿವಣ್ಣ ಎದುರು ಗಾನವಿ ಲಕ್ಷ್ಮಣ್, ಉಮಾಶ್ರೀ, ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ರಘು ಶಿವಮೊಗ್ಗ, ಜಗ್ಗಪ್ಪ, ಚೆಲುವರಾಜ್, ವಿನಯ್ ಬಿದ್ದಪ್ಪ, ಭರತ್ ಸಾಗರ್, ಪ್ರಸನ್ನ, ಸಂಜೀವ್, ಕುರಿ ಪ್ರತಾಪ್.. ಹೀಗೆ ದೊಡ್ಡ ತಾರಾಗಣವೇ ಇದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಅಂದಹಾಗೆ ವೇದ ಡಿಸೆಂಬರ್ 23ಕ್ಕೆ ರಿಲೀಸ್ ಆಗುತ್ತಿದೆ.

 • ಗಾನವಿ, ಆದಿತಿ, ಶ್ವೇತಾ ಚೆಂಗಪ್ಪ ಬಗ್ಗೆ ಗೀತಾ ಶಿವ ರಾಜ್ ಕುಮಾರ್ ಮಾತು

  ಗಾನವಿ, ಆದಿತಿ, ಶ್ವೇತಾ ಚೆಂಗಪ್ಪ ಬಗ್ಗೆ ಗೀತಾ ಶಿವ ರಾಜ್ ಕುಮಾರ್ ಮಾತು

  ಶಿವ ರಾಜ್ ಕುಮಾರ್ ಅವರ 125ನೇ ಸಿನಿಮಾ ನಮ್ಮ ಕೈಗೆ ಬಂದಿದ್ದೇ ಒಂದು ರೋಚಕ ಕತೆ. ಮೊದಲು ಯಾರೋ ಒಬ್ಬರು ಬಂದರು. ಮುಹೂರ್ತವೂ ಆಯಿತು. ಆದರೆ ಟೇಕಾಫ್ ಆಗಲಿಲ್ಲ. ಮತ್ತೊಬ್ಬರು ಬಂದರು. ಅವರೂ ಅಷ್ಟೆ. ಕೊನೆಗೆ ನಾವೇ ಸಿನಿಮಾ ಮಾಡುತ್ತೇವೆ ಎಂದಾಗ ಅವರು ಬೇಡ ಎನ್ನಲಿಲ್ಲ. ಅದೃಷ್ಟ ಚೆನ್ನಾಗಿತ್ತು ಎಂದವರು ಗೀತಾ. ಫಸ್ಟ್ ಡೇ ಫಸ್ಟ್ ಶೋ ನೋಡಿ ಮಾತನಾಡುತ್ತಿದ್ದ ಗೀತಾಗೆ ಅಭಿಮಾನಿಗಳು ಮಡಿಲಕ್ಕಿ ತುಂಬಿದ್ದು ವಿಶೇಷವಾಗಿತ್ತು. ಇದೇ ವೇಳೆ ಮಾತನಾಡಿದ ಗೀತಾ

  ಶಿವರಾಜ್ಕುಮಾರ್ ಜೊತೆ ಅದಿತಿ ಸಾಗರ್ ಮತ್ತು ಗಾನವಿ ಇಬ್ಬರಿಗೂ ತುಂಬಾನೇ ಒಳ್ಳೆಯ ಹೆಸರು ಬಂದಿದೆ. ಆ ಇಬ್ಬರು ಹೆಣ್ಣು ಮಕ್ಕಳಿಗೆ ಹೆಸರು ಬಂದಿರುವುದು ತುಂಬಾನೇ ಇಷ್ಟವಾಯಿತು. ಸಿನಿಮಾದಲ್ಲಿ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಶಿವರಾಜ್ಕುಮಾರ್ ಸರಿಸಮಾನಗಿ ನಟಿಸುವುದು ಸ್ವಲ್ಪ ಕಷ್ಟನೇ ಆದರೂ ಅವರು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ನಾನು ಯಾವತ್ತೂ ಸಿನಿಮಾ ರಿಲೀಸ್ಗೆ ಹೆದರಿಕೊಂಡಿರಲಿಲ್ಲ.  ಒಳ್ಳೆಯದಾಗುತ್ತದೆ ಎಂದು ನನಗೆ ಗೊತ್ತಿತ್ತು  ಎಂದಿದ್ದಾರೆ ಗೀತಾ.

  ಶಿವಣ್ಣ ಜೊತೆ ಗಾನವಿ ಲಕ್ಷ್ಮಣ್ ಪತ್ನಿಯಾಗಿ ನಟಿಸಿದ್ದಾರೆ. ಆದಿತಿ ಸಾಗರ್ ಶಿವಣ್ಣ ಮಗಳಾಗಿ ನಟಿಸಿದ್ದಾರೆ. ಹರ್ಷ ಕ್ರೌರ್ಯವನ್ನು ವೈಭವೀಕರಿಸಿದ್ದರೂ, ಚಿತ್ರದ ಮೆಸೇಜ್ ಅದ್ಭುತವಾಗಿದ್ದು ಕ್ರೌರ್ಯ ಓಕೆ ಎನ್ನುವಂತೆ ಪ್ರೇಕ್ಷಕರು ಮೆಚ್ಚುಗೆ ತೋರಿಸಿದ್ದಾರೆ.

 • ವೇದ ಅರ್ಧಶತಕ : ಚಿತ್ರತಂಡದವರಿಗೆ ಗೆಲುವಿನ ಪಾರಿತೋಷಕ

  ವೇದ ಅರ್ಧಶತಕ : ಚಿತ್ರತಂಡದವರಿಗೆ ಗೆಲುವಿನ ಪಾರಿತೋಷಕ

  ಗೀತಾ ಶಿವ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ವೇದ 50 ದಿನ ಪೂರೈಸಿದೆ. ವೇದ ಚಿತ್ರದ ಮೂಲಕ ಶಿವಣ್ಣ ನಿರ್ಮಾಪಕರಾಗಿದ್ದರು. ವೇದ ಅವರ 125ನೇ ಚಿತ್ರ ಕೂಡಾ ಆಗಿತ್ತು. ಹೆಣ್ಣು ಮಕ್ಕಳನ್ನು ಗೌರವಿಸಬೇಕು ಎಂಬ ಸಂದೇಶವನ್ನಿಟ್ಟುಕೊಂಡು ಬಂದಿದ್ದ ಚಿತ್ರ ವಿಶೇಷವಾಘಿ ಹೆಣ್ಣು ಮಕ್ಕಳ ಮನ ಗೆದ್ದಿತ್ತು. ಚಿತ್ರದಲ್ಲಿ ಕೂಡಾ ಶಿವಣ್ಣ ಅವರಿಗಿಂತ ಆದಿತಿ ಸಾಗರ್, ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ, ಉಮಾಶ್ರೀ.. ಹೀಗೆ ಮಹಿಳಾ ಪಾತ್ರಧಾರಿಗಳೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಹರ್ಷ ಜೊತೆ ಇದು 4ನೇ ಸಿನಿಮಾ. ಮೊದಲಿನ ಚಿತ್ರಗಳಿಗಿಂತ ಹೆಚ್ಚು ವೈಬ್ರೇಟ್ ಆಗಿದ್ದ ವೇದ, 50 ದಿನ ಪೂರೈಸಿದ ಸಂಭ್ರಮವನ್ನು ಗೀತಾ ಶಿವ ರಾಜ್ ಕುಮಾರ್ ಹಾಗೂ ಶಿವಣ್ಣ ಇಡೀ ಚಿತ್ರತಂಡದೊಂದಿಗೆ ಹಂಚಿಕೊಂಡರು.

  ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅವರು ನಟಿಸಿರುವ ವೇದ ಸಿನಿಮಾ 50 ದಿನ ಪೂರೈಸಿರುವ ಹಿನ್ನೆಲೆ  ಹಾಗೂ ಚಿತ್ರರಂಗಕ್ಕೆ ಶಿವಣ್ಣ ಕಾಲಿಟ್ಟು 37 ವರ್ಷ ಪೂರೈಸಿರೋ ಹಿನ್ನೆಲೆ ನಾಗವಾರದ ಶಿವರಾಜ್ ಕುಮಾರ್ ನಿವಾಸದಲ್ಲಿ  ಸಕ್ಸಸ್ ಸೆಲೆಬ್ರೇಷನ್ ಕಾರ್ಯಕ್ರಮ ನಡೆಸಲಾಗಿದೆ. ಶಿವಣ್ಣ ಆ್ಯಂಡ್ ಟೀಂ ಎರಡೂ ಕಾರ್ಯಕ್ರಮಗಳನ್ನ ಒಟ್ಟಿಗೆ ಆಚರಿಸಿದೆ. ವೇದ ಸಿನಿಮಾ ನಿಮ್ಮೆಲ್ಲರ ಆಶೀರ್ವಾದದಿಂದ 50 ದಿನ ಪೂರೈಸಿದೆ. ವೇದ ಸಿನಿಮಾ ಈಗ್ಲೂ ಚನ್ನಾಗಿ ಪ್ರದರ್ಶನ ಆಗ್ತಿದೆ. ಹರ್ಷ ಹಾಗು ಟೀಂ ತುಂಬಾ ಚನ್ನಾಗಿ ಕೆಲಸ ಮಾಡಿ ಈ ಸಿನಿಮಾ ಗೆಲ್ಲಿಸಿದ್ದಾರೆ ಎಂದರು ಗೀತಾ ಶಿವರಾಜ್ ಕುಮಾರ್.

  ನಾನು ಹೋದಲ್ಲೆಲ್ಲಾ ಸಿನಿಮಾನ ನೋಡಿ ಮೆಚ್ಚಿಕೊಂಡಿದ್ದಾರೆ.   ನನ್ನ ತಂದೆ ತಾಯಿಗೆ ನಮ್ಮ ವೇದ ಸಿನಿಮಾ ತಂಡಕ್ಕೆ ನನ್ನ ಧನ್ಯವಾದ. ವೇದ ಸಿನಿಮಾದ ಪುಷ್ಪ ಕ್ಯಾರೆಕ್ಟರ್ ತುಂಬಾ ಇಷ್ಟ ಆಯ್ತು.  ನನಗೆ ಆ ಪಾತ್ರ ಮಾಡ್ತೀನಾ ಅನ್ನೋ ಡೌಟ್ ಇತ್ತು. ಗೀತಾ ಶಿವರಾಜ್ ಕುಮಾರ್ ಸ್ವೀಟ್ ಆ್ಯಂಡ್ ಲವ್ಲಿ ಹಾರ್ಟ್ ಇರೋರು.  ಶಿವಣ್ಣ ಎನರ್ಜಿಟಿಕ್ ಅಂತ ನಮ್ಗೆಲ್ಲಾ ಗೊತ್ತು. ಆದ್ರೆ ಗೀತಾ ಶಿವರಾಜ್ ಕುಮಾರ್ ಶಿವಣ್ಣನಿಗಿಂತ ಎನರ್ಜಿಟಿಕ್ ಎಂದರು ನಾಯಕಿ ಗಾನವಿ ಲಕ್ಷ್ಮಣ್.

  ನನಗೂ ಇಬ್ಬರು ಹೆಣ್ಣು ಮಕ್ಖಳಿದ್ದಾರೆ ಎನ್ನುತ್ತಲೇ ಮಾತನಾಡಿದ ಶಿವಣ್ಣ, ಈ 37 ವರ್ಷದ ಜರ್ನಿಯಲ್ಲಿ ನನಗೆ ಹಲವಾರು ಜನ ನೆರವಿಗೆ ನಿಂತಿದ್ದಾರೆ. ನನ್ನ ಮೊದಲ ಚಿತ್ರಕ್ಕೆ ಅಮ್ಮ ನಿರ್ಮಾಪಕಿಯಾದರೆ, 125ನೇ ಚಿತ್ರಕ್ಕೆ ಪತ್ನಿ ನಿರ್ಮಾಪಕಿ ಎಂದು ಖುಷಿಗೊಂಡರು. ಚಿತ್ರತಂಡದ ಎಲ್ಲರಿಗೂ ಬೆಳ್ಳಿ ಪಾರಿತೋಷಕ ನೀಡಿ ಗೌರವಿಸಲಾಯಿತು.

 • ವೇದ ಒಟಿಟಿ ರಿಲೀಸ್ ಡೇಟ್ ಪಕ್ಕಾ..

  ವೇದ ಒಟಿಟಿ ರಿಲೀಸ್ ಡೇಟ್ ಪಕ್ಕಾ..

  2022ರ ಕೊನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ಶುಭ ಸುದ್ದಿ ಕೊಟ್ಟ ವೇದ 50ನೇ ದಿನದತ್ತ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಶಿವಣ್ಣ ಅಭಿನಯದ 125ನೇ ಸಿನಿಮಾ, ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾ.. ಶಿವಣ್ಣ-ಹರ್ಷ ಕಾಂಬಿನೇಷನ್`ನ 4ನೇ ಸಿನಿಮಾ.. ಹೀಗೆ ಹಲವು ವಿಷೇಷತೆಗಳಿದ್ದ ವೇದವನ್ನು ಕನ್ನಡಿಗರು ಬಾಚಿ ತಬ್ಬಿಕೊಂಡರು. ಹೆಣ್ಣು ಮಕ್ಕಳಿಗೆ ಗೌರವಿಸಬೇಕು ಎಂಬ ಸಂದೇಶವಿದ್ದ ರಕ್ತಸಿಕ್ತ ಕಥೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದರು. ಇದೀಗ ವೇದ ತೆಲುಗಿಗೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಹೊಸ ಟ್ರೆಂಡ್ ಸೃಷ್ಟಿಸುವ ಹಾದಿಯಲ್ಲಿದೆ. ಇದೀಗ ಮನೆ ಮನೆಗೆ ಬರುವ ದಿನಾಂಕ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.

  ವೇದ ಚಿತ್ರವನ್ನು ಝೀ ಟಿವಿ ಖರೀದಿಸಿತ್ತು. ಝೀಟಿವಿ ಸಹಯೋಗದಲ್ಲಿಯೇ ನಿರ್ಮಾಣವಾಗಿದ್ದ ವೇದ ಜೀ5ನಲ್ಲಿ ಪ್ರಸಾರವಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ. ಫೆಬ್ರವರಿ 10ರಂದು ವೇದ ಪ್ರಸಾರವಾಗಲಿದೆ. ಶೀಘ್ರದಲ್ಲಿಯೇ ಅಧಿಕೃತವಾಗಿ ಇದನ್ನು ಅಧಿಕೃತವಾಗಿ ಘೋಷಿಸಲಾಗುವುದು.

  ಅಲ್ಲಿಗೆ ಪ್ರೇಕ್ಷಕರು ಇಷ್ಟಪಟ್ಟಿದ್ದ  ಗಿಲಕ್ಕೋ ಶಿವ ಗಿಲಕ್ಕೋ.. ಪುಷ್ಪ ಪುಷ್ಪ ಹಾಡನ್ನು ಅಭಿಮಾನಿಳು ಮನೆಯಲ್ಲಿಯೇ ಅಥವಾ ಮೊಬೈಲಿನಲ್ಲಿಯೇ ನೋಡಬಹುದು. ವೇದ ಶಿವಣ್ಣ ಅವರ 125ನೇ ಚಿತ್ರವಾದರೂ ಮಿಂಚಿದ್ದು ಆದಿತಿ ಸಾಗರ್. ಆ ಮೂಲಕ  ಶಿವರಾಜ್ ಕುಮಾರ್ ಮತ್ತೊಮ್ಮೆ ಪ್ರೇಕ್ಷಕರ ಹೃದಯ ಕದ್ದಿದ್ದರು. ಆದಿತಿ ಸಾಗರ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ, ಗೀತಾ ಪೊನ್ನಪ್ಪ, ಉಮಾಶ್ರೀ.. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಿಂಚಿದ್ದರು. ಇವೆಲ್ಲವುಗಳ ನಡುವೆ ಥಿಯೇಟರಿನಲ್ಲಿ ನೋಡಲು ಸಾಧ್ಯವಾಗದವರಿಗೆ ಈಗ  ಮನೆಯಲ್ಲಿಯೇ ವೇದ ನೋಡುವ ಅವಕಾಶ ಬಂದಿದೆ.

 • ವೇದ ಟೀಸರ್ ನೋಡಿ ದಂಗಾದ ಫ್ಯಾನ್ಸ್

  ವೇದ ಟೀಸರ್ ನೋಡಿ ದಂಗಾದ ಫ್ಯಾನ್ಸ್

  ವೇದ ಚಿತ್ರದ ಟೀಸರ್ ಹೊರಬಿದ್ದಿದೆ. ಶಿವಣ್ಣ ಅಭಿನಯದ 125ನೇ ಸಿನಿಮಾ ವೇದದ ಟೀಸರ್ ನೋಡಿದ ಫ್ಯಾನ್ಸ್ ದಂಗಾಗಿ ಹೋಗಿದ್ದಾರೆ. ಈ ಹಿಂದಿನ ಯಾವ ಚಿತ್ರದ ನೆರಳೂ ಟೀಸರ್‍ನಲ್ಲಿ ಕಾಣುತ್ತಿಲ್ಲ. ಆ ಚಿತ್ರದಂತಿದೆ.. ಈ ಚಿತ್ರದಂತಿದೆ ಎಂದು ಮಾತನಾಡಿಕೊಳ್ಳುತ್ತಿದ್ದವರಿಗೆ ಒಂದೇ ಮಾತಿನಲ್ಲಿ ಉತ್ತರ ಕೊಟ್ಟಿದ್ದಾರೆ ಡೈರೆಕ್ಟರ್ ಹರ್ಷ. ರಾಯಚೂರಿನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

  ಮೊದಲ ಬಾರಿಗೆ ಆಯುಧಗಳ ಝಲಕ್ ಕೊಟ್ಟಿದ್ದ ಹರ್ಷ, ನಂತರ ಗಿಲಕ್ಕೂ ಸಾಂಗ್ ಕೊಟ್ಟು ಥ್ರಿಲ್ ನೀಡಿದ್ದರು. ಈಗ ಟೀಸರ್ ಬಿಟ್ಟಿದ್ದಾರೆ. ಹಂತ ಹಂತವಾಗಿ ಹಾಡುಗಳನ್ನು ಬಿಡುಗಡೆ ಮಾಡಲಿದ್ದಾರೆ. ಟೀಸರ್‍ನ್ನು ವರ್ಣಿಸುವುದಕ್ಕಿಂತ.. ಇದು ಸಂಥಿಂಗ್ ಸ್ಪೆಷಲ್ ಎಂಬ ಸುಳಿವನ್ನಂತೂ ಕೊಟ್ಟಿದೆ. ಗಾನವಿ ಲಕ್ಷ್ಮಣ್, ಉಮಾಶ್ರೀ, ಆದಿತಿ ಸಾಗರ್ ಪ್ರಧಾನ ಪಾತ್ರದಲ್ಲಿರೋ ಚಿತ್ರಕ್ಕೆ ಈಗ ಬಿಟ್ಟಿರುವ ಟೀಸರ್ ಆತ್ಮವಂತೆ. ಇವನು ಹೃದಯ ಹೇಳಿದಂತೆ ಕೇಳುವವನು. ಅವನೊಳಗೊಂದು ನಿಗೂಢ ರಹಸ್ಯ ಬಚ್ಚಿಟ್ಟುಕೊಂಡಿದೆ. ಯಾವುದಕ್ಕೂ ಹೆದರದ ಆತ ಹುಟ್ಟು, ಜೀವನ, ಸಾವುಗಳನ್ನೆಲ್ಲ ಮೀರಿ ಗುರಿಯತ್ತ ಮುನ್ನುಗ್ಗುತ್ತಾನೆ. ಇಂಥಾದ್ದೊಂದು ಕಥೆಯ ಮೇಕಿಂಗ್ ಕೂಡಾ ಅಷ್ಟೇ ಚೆನ್ನಾಗಿದೆ. ಗೀತಾ ಶಿವರಾಜ್ ಕುಮಾರ್ ಈ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ.

 • ವೇದ ಟ್ರೇಲರ್ ರಿಲೀಸ್ : ಡೈಲಾಗ್ ಇಲ್ಲದೆಯೇ ವಂಡರ್

  ವೇದ ಟ್ರೇಲರ್ ರಿಲೀಸ್ : ಡೈಲಾಗ್ ಇಲ್ಲದೆಯೇ ವಂಡರ್

  ಕತ್ತಲು ಬೆಳಕಿನ ಆಟದ ದೃಶ್ಯಗಳು. ಈ ಕಾಲದ್ದಂತೂ ಅಲ್ಲ. ಹೀರೋ ವಿಲನ್‍ಗಳನ್ನು ಚಚ್ಚಿ ಪುಡಿಗಟ್ಟುತ್ತಿದ್ದನ್ನು ನೋಡುತ್ತಿದ್ದವರಿಗೆ.. ಹೀರೋಯಿನ್.. ಆ ಹುಡುಗಿಯೂ ವ್ಹಾವ್ ಎನ್ನುವಂತೆ ಮಚ್ಚು ಬೀಸುತ್ತಾರೆ. ಹಾರಿ ಹಾರಿ ವಿಲನ್‍ಗಳ ಎದೆ ಬಗೆಯುತ್ತಾರೆ. ಯಾಕೆ.. ಏನು.. ಅನ್ನೋ ಸಣ್ಣದೊಂದು ಸುಳಿವು ಕೊಟ್ಟು ಕುತೂಹಲದ ಮೂಟೆಯನ್ನು ದೊಡ್ಡದು ಮಾಡೋಕೆ ಬಿಡುತ್ತಾರೆ ಹರ್ಷ. ವೇದ ಟ್ರೇಲರ್‍ನಲ್ಲಿ ಕಾಣಿಸುವ ಅತಿ ದೊಡ್ಡ ಶಕ್ತಿಯೇ ಅದು. ಎಲ್ಲವನ್ನೂ ತೋರಿಸಿದಂತೆ ಮಾಡಿ.. ಏನನ್ನೂ ತೋರಿಸದೆ ಕುತೂಹಲ ಹುಟ್ಟಿಸುವ ಪರಿ.

  ಶಿವಣ್ಣ, ಗಾನವಿ ಲಕ್ಷ್ಮಣ್, ಉಮಾಶ್ರೀ, ಆದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ.. ಎಲ್ಲರೂ ವಂಡರ್‍ಗಳೇ. ರವಿವರ್ಮ, ವಿಕ್ರಂಮೋರ್, ಚೇತನ್ ಡಿಸೋಜಾ, ಅರ್ಜುನ್ ರಾಜ್ ಸ್ಟಂಟುಗಳು ಟ್ರೇಲರಿನಲ್ಲೇ ಉಸಿರುಗಟ್ಟಿ ನೋಡುವಂತಿವೆ. ಹೆಜ್ಜೆ ಹೆಜ್ಜೆಗೂ ವ್ಹಾವ್ ಎನ್ನಿಸುವುದು ಅರ್ಜುನ್ ಜನ್ಯ ಮ್ಯೂಸಿಕ್ಕು.

  ಗೀತಾ ಶಿವರಾಜ್‍ಕುಮಾರ್ ನಿರ್ಮಾಣದ ಮೊದಲ ಚಿತ್ರ ವೇದ. ಶಿವಣ್ಣ ಕೆರಿಯರ್‍ನ 125ನೇ ಸಿನಿಮಾ ವೇದ. ಕ್ವಾಲಿಟಿಯಲ್ಲಿ ಎಲ್ಲಿಯೂ ಕಾಂಪ್ರೊಮೈಸ್ ಇಲ್ಲದೆ ಮೂಡಿ ಬಂದಿರುವ ವೇದ ಡಿ.23ಕ್ಕೆ ರಿಲೀಸ್

 • ವೇದದಲ್ಲಿ ಹೆಣ್ಣು ಮಕ್ಕಳ ಪವರ್ ತೋರಿಸಿದ್ದೇವೆ : ಹರ್ಷ

  ವೇದದಲ್ಲಿ ಹೆಣ್ಣು ಮಕ್ಕಳ ಪವರ್ ತೋರಿಸಿದ್ದೇವೆ : ಹರ್ಷ

  ವೇದ ಚಿತ್ರದ ಟ್ರೇಲರ್ ನೋಡಿದವರಿಗೆ ಅಚ್ಚರಿ ಹುಟ್ಟಿಸುವುದು ಹೆಣ್ಣು ಮಕ್ಕಳ ಆರ್ಭಟ. ಶಿವಣ್ಣ ಏನೇ ಮಾಸ್ ಹೀರೋ ಇರಬಹುದು, ತಮ್ಮದೇ ನಿರ್ಮಾಣದಲ್ಲಿ ವೇದ ಚಿತ್ರದಲ್ಲಿ ತಮಗಿಂತಲೂ ಹೆಣ್ಣು ಮಕ್ಕಳ ಪಾತ್ರಗಳಿಗೆ ವಿಶೇಷ ಶಕ್ತಿ ಕೊಟ್ಟಿದ್ದಾರೆ. ಗಾನವಿ ಲಕ್ಷ್ಮಣ್, ಶ್ವೇತಾ ಚೆಂಗಪ್ಪ. ಆದಿತಿ ಸಾಗರ್, ವೀಣಾ ಪೊನ್ನಪ್ಪ, ಉಮಾಶ್ರೀ.. ಎಲ್ಲರ ಪಾತ್ರಗಳೂ ಟ್ರೇಲರಿನಲ್ಲೇ ವ್ಹಾವ್ ಎನ್ನಿಸುವಂತಿವೆ.

  ‘ಈ ಸಿನಿಮಾದಲ್ಲಿ ಹೆಣ್ಣು ಮಕ್ಕಳ ಪಾತ್ರಗಳೇ ಪ್ರಮುಖವಾಗಿವೆ. ಗಾನವಿ ಲಕ್ಷ್ಮಣ್, ಅದಿತಿ ಸಾಗರ್, ಶ್ವೇತಾ ಚೆಂಗಪ್ಪ, ವೀಣಾ ಪೊನ್ನಪ್ಪ ಪ್ರಮುಖ ಪಾತ್ರಗಳನ್ನು ಪೋಷಿಸಿದ್ದಾರೆ. ಗಾನವಿ ಶಿವಣ್ಣ ಅವರ ಪತ್ನಿಯಾಗಿ ಪುಷ್ಪ ಎನ್ನುವ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರವೇ ಅದಿತಿ ಸಾಗರ್. ಶ್ವೇತಾ ಚೆಂಗಪ್ಪ ಪಾತ್ರವನ್ನು  ತೆರೆಯಲ್ಲಿಯೇ   ನೋಡಬೇಕು. ರಮಾ ಎನ್ನುವ ಪೊಲೀಸ್ ಪಾತ್ರದಲ್ಲಿ ವೀಣಾ ಪೊನ್ನಪ್ಪ ನಟಿಸಿದ್ದಾರೆ. ಉಮಾಶ್ರೀಯವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳ ಪವರ್ ಏನು ಎಂಬುದು ಮತ್ತು ಹೇಗೆ ವಿಲನ್ ಆಗಿ ಕನ್ವರ್ಟ್ ಆಗುತ್ತಾರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಅಮಾಯಕರ ರೀತಿ ಇರುವಂತಹ ವ್ಯಕ್ತಿಗಳು ಹೇಗೆ ನರ ರೂಪದ ರಾಕ್ಷಸರಾಗುತ್ತಾರೆ ಎಂಬ ವಿಷಯವೂ ಇಲ್ಲಿದೆ ಎನ್ನುತ್ತಾರೆ ಡೈರೆಕ್ಟರ್ ಹರ್ಷ.

  ಹಿಂದಿನ ಸಿನಿಮಾಗಳಲ್ಲಿರೋ ಹಾಗೆ ವಿಭಿನ್ನ ರೀತಿಯ ಗೆಟಪ್ಪುಗಳ ವಿಲನ್‍ಗಳು ಈ ಚಿತ್ರದಲ್ಲಿ ಇಲ್ಲ. ರಂಗಭೂಮಿಯ ಖ್ಯಾತ ನಿರ್ದೇಶಕರೂ ಆಗಿರುವ ನಟ ರಾಘು ಶಿವಮೊಗ್ಗ ಅವರಿಗೆ ವಿಭಿನ್ನ ಪಾತ್ರವಿದೆ. ಹಾಸ್ಯನಟ ಜಗ್ಗಪ್ಪ, ಭರತ್ ಎಲ್ಲರಿಗೂ ವಿಶೇಷ ಪಾತ್ರಗಳಿವೆ. ಪರಿಸ್ಥಿತಿ ಹೇಗೆ ಜನರನ್ನು ವಿಲನ್ ಆಗಿ ಪರಿವರ್ತಿಸುತ್ತದೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇವೆ. ಶಿವಣ್ಣ ಅವರ 125ನೇ ಸಿನಿಮಾ ಆಗಿರುವ ಕಾರಣ, ಕಮರ್ಷಿಯಲ್ ಅಂಶಗಳ ಜೊತೆಯಲ್ಲಿ ಸಂದೇಶವೂ ಇದೆ ಎಂದಿದ್ದಾರೆ ಹರ್ಷ.

  ಚಿತ್ರದಲ್ಲಿ 60-70ರ ದಶಕದ ಕಥೆಯಿದೆ. ಶಿವಣ್ಣ ಅವರದ್ದೇ ಬ್ಯಾನರ್. ಅವರ ಬ್ಯಾನರಿನ ಮೊದಲ ಸಿನಿಮಾ. ಶಿವಣ್ಣ ಅವರ 125ನೇ ಸಿನಿಮಾ. ಹೀಗಾಗಿ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಿದ್ದೇನೆ. ಜನ ಮೆಚ್ಚುತ್ತಾರೆಂಬ ಭರವಸೆಯೂ ಇದೆ ಎಂದ್ದಾರೆ ಹರ್ಷ.

 • ಶಿವಣ್ಣನ ವೇದ ಕ್ರೇಜ್ ಹೇಗಿದೆ?

  ಶಿವಣ್ಣನ ವೇದ ಕ್ರೇಜ್ ಹೇಗಿದೆ?

  ಹ್ಯಾಟ್ರಿಕ್ ಹೀರೋ.. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ವೇದ. ಗೀತಾ ಶಿವರಾಜಕುಮಾರ್ ನಿರ್ಮಾಣದ ಮೊದಲನೇ ಸಿನಿಮಾ ವೇದ.

  ವಜ್ರೇಶ್ವರಿ, ಪೂರ್ಣಿಮಾ, ಪಿಆರ್‍ಕೆ ನಂತರ ರಾಜ್ ಮನೆತನದ ಹೊಸ ಬ್ಯಾನರ್ ಗೀತಾ ಪಿಕ್ಚರ್ಸ್.ಹರ್ಷ-ಶಿವಣ್ಣ ಕಾಂಬಿನೇಷನ್‍ನ 4ನೇ ಸಿನಿಮಾ ವೇದ.

  ಚಿತ್ರದ ಟ್ರೇಲರ್ ರಿಲೀಸ್ ಮಾಡಿ, ಪ್ರೀ-ಈವೆಂಟ್‍ಗೆ ಜೋಶ್ ತಂದವರು ಸುದೀಪ್. ಶಿವಣ್ಣನ ಬ್ರದರ್ ಆಗಿ ಬಂದಿದ್ದೇನೆ ಎನ್ನುವ ಮೂಲಕ ಮತ್ತೊಮ್ಮೆ ನೇರವಾಗಿ ಹಾರ್ಟಿಗೇ ಕೈಹಾಕಿದ ಸುದೀಪ್ ಚಿತ್ರದ ಮೇಲೆ ಸ್ವತಃ ಕುತೂಹಲ ತೋರಿಸಿದ್ದಾರೆ.

  ಹೀಗೆ ಹಲವು ಸ್ಪೆಷಾಲಿಟಿಗಳನ್ನು ಹೊತ್ತು ತರುತ್ತಿರೋ ವೇದ ಕ್ರೇಜ್ ಹೇಗಿದೆ..?

  ಚಿತ್ರದ ಟೀಸರ್‍ನಲ್ಲಿ ಶಿವಣ್ಣನಿಗೇ ಸಡ್ಡು ಹೊಡೆಯುವಂತೆ ಗಾನವಿ, ಶ್ವೇತಾ, ಆದಿತಿ ತೋರಿಸಿರುವ ಸ್ಟಂಟ್ಸ್.. ವ್ಹಾವ್ ಎನ್ನುವಂತಿವೆ. ಚಿತ್ರದ ಪುಷ್ಪ ಪುಷ್ಪ, ಜುಂಜಪ್ಪ ಹಾಡುಗಳು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತಿವೆ. ಪುಷ್ಪ ಹಾಡು ಕೀಟಲೆಯ ಧ್ವನಿಯಲ್ಲಿದ್ದರೆ ಜುಂಜಪ್ಪ.. ಹಾಡಿನಲ್ಲಿ ಜೋಷ್ ಮತ್ತು ಜನಪದದ ಸೊಗಡಿದೆ. ಗಿಲಕ್ಕೋ ಶಿವ ಗಿಲಕ್ಕೂ... ಹಾಡು ಸಖತ್ ಎನ್ನಿಸುತ್ತಿದೆ. ಆಯುಧಗಳಿಗೇ ಒಂದು ಟೀಸರ್, ಆತ್ಮಕ್ಕೇ ಮತ್ತೊಂದು ಟೀಸರ್.. ಹೀಗೆ ವೇದ ಸೃಷ್ಟಿಸುತ್ತಿರುವ ಸಂಚಲನ ಬೇರೆಯದೇ ರೀತಿಯಲ್ಲಿದೆ. ವರ್ಷದ ಕೊನೆಗೆ ವೇದ ಚಿತ್ರದ್ದೇ ಹವಾ.