ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾಗಳಲ್ಲಿ ಒಬ್ಬರಿಗಿಂತ ಹೆಚ್ಚು ಹೀರೋಯಿನ್ಸ್ ಇರುವುದು ಹೊಸದೇನಲ್ಲ. ಇತ್ತೀಚೆಗೆ ಮುಗುಳುನಗೆ ಚಿತ್ರದಲ್ಲಿ ಮೂರ್ ಮೂರು ಜನ ಹೀರೋಯಿನ್ಸ್ ಇದ್ದರು. ಆಶಿಕಾ ರಂಗನಾಥ್, ನಿಖಿತಾ ನಾರಾಯಣನ್, ಅಪೂರ್ವ ಅರೋರಾ ನಾಯಕಿಯರಾಗಿದ್ದರು. ಕೊನೆಯದಾಗಿ ಅಮೂಲ್ಯ 4ನೇ ನಾಯಕಿಯಾಗಿ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದರು. ಈಗ ಅದೇ ತ್ರಿಬ್ಬಲ್ ರೈಡಿಂಗ್ಲ್ಲೂ ಆಗುತ್ತಾ ಅನ್ನೋ ಕುತೂಹಲ ಹುಟ್ಟಿಸಿದ್ದಾರೆ ಡೈರೆಕ್ಟರ್ ಮಹೇಶ್ ಗೌಡ. ಅಂದಹಾಗೆ ಗಣೇಶ್ ಈ ಚಿತ್ರದಲ್ಲಿ ಸಕಲಕಲಾವಲ್ಲಭ. ಆತನ ಮಾತಿಗೆ..ಮೋಡಿಗೆ ಹುಡುಗಿಯರು ಫಿದಾ ಆಗುತ್ತಾರೆ. ಆದರೆ.. ಆಮೇಲೆ ಆಗುವುದೇ ಬೇರೆ..
ಗಣೇಶ್ ಚಿತ್ರಗಳಲ್ಲಿ ಕಾಮಿಡಿ, ಲವ್ ಸ್ಟೋರಿ ಟ್ರ್ಯಾಕ್, ಚೆಂದವಾದ ಹಾಡುಗಳು, ಸುಂದರ ಹೀರೋಯಿನ್ ಇರುವ ನಿರೀಕ್ಷೆ ಇದೆ. ತ್ರಿಬ್ಬಲ್ ರೈಡಿಂಗ್ ಕೂಡಾ ಹಾಗೆಯೇ ಇದೆ. ತ್ರಿಬಲ್ ರೈಡಿಂಗ್ನಲ್ಲಿ ಈಗಾಗಲೇ ಒಬ್ಬರಲ್ಲ, ಮೂರ್ ಜನ ಇದ್ದಾರೆ. ಎಲ್ಲರ ಜೊತೆಯಲ್ಲೂ ಲವ್ ಟ್ರ್ಯಾಕ್ ಇದೆ. ಗಣೇಶ್ ಎದುರು ಆದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘಾ ಶೆಟ್ಟಿ ಹೀರೋಯಿನ್ಸ್. ಇವರಲ್ಲದೆ ಚಿತ್ರದ ಕೊನೆಯಲ್ಲಿ ನಾಯಕಿ ಬರುತ್ತಾರೆ ಎಂದಿದ್ದಾರೆ ಮಹೇಶ್ ಗೌಡ. ಆ ನಾಯಕಿ ಯಾರು ಅನ್ನೋದನ್ನು ಸಸ್ಪೆನ್ಸ್ ಆಗಿಟ್ಟಿದ್ದಾರೆ. ಪ್ರೀತಿ ಮತ್ತು ಕುಟುಂಬದ ಕಥೆಯೊಂದಿಗೆ ಬಂದಿರುವ ನಿರ್ದೇಶಕರುತಮ್ಮ ಪಾತ್ರಗಳಿಗೆ ಜೀವ ತುಂಬುವ ಕೆಲವೇ ಕೆಲವು ನಟರಲ್ಲಿ ಗಣೇಶ್ ಸಹ ಒಬ್ಬರು.
ಚಮಕ್ ನಂತರ ಟ್ರಿಬಲ್ ರೈಡಿಂಗ್ನಲ್ಲಿ ಗಣೇಶ್ ಮತ್ತೊಮ್ಮೆ ಡಾಕ್ಟರ್ ಆಗಿದ್ದಾರೆ. ಯೋಗರಾಜ್ ಭಟ್, ದುನಿಯಾ ಸೂರಿಯವರ ಜೊತೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದ ಮಹೇಶ್ ಗೌಡ, ಈ ಹಿಂದೆ ವಿನೋದ್ ಪ್ರಭಾಕರ್ ಅವರಿಗೆ ರಗಡ್ ಚಿತ್ರವನ್ನು ನಿರ್ದೇಶಿಸಿದ್ದರು. ಆಗ ಆಕ್ಷನ್ ನೀಡಿದ್ದ ಡೈರೆಕ್ಟರ್, ಈಗ ಲವ್ ಬ್ರೇಕಪ್ ಕಾಮಿಡಿ ಸಿನಿಮಾ ಮಾಡಿದ್ದಾರೆ. ಸಾಧು ಕೋಕಿಲ, ರವಿಶಂಕರ್, ಶರತ್ ಲೋಹಿತಾಶ್ವ, ಶೋಭರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಚಿತ್ರದ ತಾರಾಬಳಗವಿದೆ. ರಾಮ್ ಗೋಪಾಲ್ ನಿರ್ಮಾಣದ ತ್ರಿಬಲ್ ರೈಡಿಂಗ್ ಈಗ ಥಿಯೇಟರಿನಲ್ಲಿದೆ. 4ನೇ ಹೀರೋಯಿನ್ ಯಾರು ಅನ್ನೋದು ಪ್ರೇಕ್ಷಕರಿಗೂ ಗೊತ್ತಾಗಿರುತ್ತೆ. ಅ ಥ್ರಿಲ್ನ್ನ ಥಿಯೇಟರಲ್ಲೇ ಅನುಭವಿಸಿ.
ಎಲ್ಲರನ್ನೂ ಮೋಡಿ ಮಾಡೋ ಹುಡುಗ ಸಕಲಕಲಾವಲ್ಲಭ. ಈ ಚಿತ್ರದಲ್ಲಿಯೂ ಹಾಗೆಯೇ ಮೂರು ಹುಡುಗಿಯರನ್ನ ಪ್ರೀತಿಯ ಬಲೆಗೆ ಬೀಳಿಸಿಕೊಳ್ಳೋ ಹುಡುಗ. ನಂತರ ಯಾವ ರೀತಿ ಆ ಪ್ರೀತಿಯ ಬಲೆಯಿಂದ ಹೊರ ಬರುತ್ತಾನೆ ಎನ್ನುವುದೇ ಚಿತ್ರದ ಕಥೆ. ಕಾಮಿಡಿ ಮತ್ತು ಪ್ರೀತಿ ಎರಡೂ ಸಖತ್ತಾಗಿದೆ ಎಂದಿದ್ದಾರೆ ಗಣೇಶ್