ನಾನು ಬದುಕಿರಬಹುದು..
ಪ್ರಾಯಶಃ ಇಲ್ಲ ಕನಸಿರಬಹುದಿದು..
ಪ್ರಾಯಶಃ ಇಲ್ಲ ಸರಿ ಇರಬಹುದು.
ಭಾಗಶಃ ಇಲ್ಲ ಸೆರೆ ಇರಬಹುದಿದು.
ಮೂಲತಃ ಜೀವ ವಿಲವಿಲ ಎನ್ನುತಲೇ ಒಲವನು ಹುಡುಕುತಿದೆ.. ಪ್ರಾಯಶಃ..
ಹಾಡಿನ ಸಾಹಿತ್ಯ ಕೇಳಿದವರಿಗೆ ಇದು ಜಯಂತ ಕಾಯ್ಕಿಣಿಯವರದ್ದೇನೋ ಅನ್ನಿಸಿದರೂ.. ಅದು ಸುಳ್ಳು. ಸಾಹಿತ್ಯ ಯೋಗರಾಜ್ ಭಟ್ಟರದು. ಇತ್ತೀಚೆಗೆ ಇಂತಹ ಮಾಧುರ್ಯದ ಗೀತೆಗಳನ್ನು ಬರೆಯದೆ ಸ್ವಲ್ಪ ದೂರವೇ ಉಳಿದಿದ್ದ ಕವಿ ಯೋಗರಾಜ್ ಭಟ್ ಮತ್ತೊಮ್ಮೆ ಬಂದಿದ್ದಾರೆ. ಪ್ರಾಯಶಃ..
ಗಾಳಿಪಟ 2 ಚಿತ್ರದ ಹಾಡು ರಿಲೀಸ್ ಮಾಡಿದ ಕಿಚ್ಚ ಸುದೀಪ್ ಇಂತಹ ಹಾಡನ್ನು ಕೇಳದೆ ಯಾವುದೋ ಕಾಲವಾಗಿತ್ತು ಎಂದ ಮಾತಿನಲ್ಲಿ ಪ್ರಾಯಶಃ ಅತಿಶಯೋಕ್ತಿ ಇರಲಿಲ್ಲ.
ಭಟ್ಟರ ಭಾವತೀವ್ರತೆಯ ಪದಗಳಿಗೆ ಪ್ರಾಯಶಃ ಅದ್ಭುತ ಸಂಗೀತ ಕೊಟ್ಟಿರೋದು ಅರ್ಜುನ್ ಜನ್ಯ ಅವರಾದರೆ.. ಪ್ರಾಯಶಃ ಅಷ್ಟೇ ತೀವ್ರತೆಯಿಂದ ಹಾಡಿರೋದು ಸೋನು ನಿಗಮ್. ರಮೇಶ್ ರೆಡ್ಡಿ ನಿರ್ಮಾಣದ ಚಿತ್ರ ಗಾಳಿಪಟ 2, ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್-ಶರ್ಮಿಳಾ ಮಾಂಡ್ರೆ ಜೋಡಿಯಾಗಿರೋ ಚಿತ್ರದಲ್ಲಿ ಚೆಂದದ ಪ್ರೇಮಕಥೆಯೊಂದು ಕೈ ಬೀಸಿ ಕರೆಯುತ್ತಿದೆ.