ಗಾಳಿಪಟ 2 ಚಿತ್ರ ತಂಡದಲ್ಲಿ ದಿಢೀರ್ ದಿಢೀರನೆ ಬದಲಾವಣೆಗಳಾಗುತ್ತಿವೆ. ಯೋಗರಾಜ್ ಭಟ್ ನಿರ್ದೇಶನದ ಚಿತ್ರ ಶುರುವಾದಾಗಲೇ ಹೀರೋಗಳ ಬದಲಾವಣೆಯಾಗಿತ್ತು. ಶರಣ್, ರಿಷಿ ಬದಲಾಗಿ.. ಗಣೇಶ್, ದಿಗಂತ್ ಬಂದಿದ್ದರು. ಈಗ ನಾಯಕಿಯರು ಹಾಗೂ ನಿರ್ಮಾಪಕರ ಬದಲಾವಣೆಯಾಗಿದೆ.
ಆದಿತಿ ಪ್ರಭುದೇವ, ಸೋನಲ್ ಮಂಥೆರೋ ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಹಾಗೂ ಸಂಯುಕ್ತಾ ಮೆನನ್ ಬಂದಿದ್ದಾರೆ. ಬದಲಾವಣೆಯಾಗದೆ ಉಳಿದಿರುವುದು ಶರ್ಮಿಳಾ ಮಾಂಡ್ರೆ.
ನಿರ್ಮಾಪಕರಾಗಿದ್ದ ಮಹೇಶ್ ದಾನಣ್ಣವರ್ ಸ್ಥಾನಕ್ಕೆ ರಮೇಶ್ ರೆಡ್ಡಿ ನುಂಗ್ಲಿ ಬಂದಿದ್ದಾರೆ. ಪಡ್ಡೆಹುಲಿ, ನಾತಿಚರಾಮಿ, 100 ಚಿತ್ರಗಳ ನಿರ್ಮಾಪಕರಾಗಿರುವ ರಮೇಶ್ ರೆಡ್ಡಿ ನುಂಗ್ಲಿ ಸೂರಜ್ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಗಣೇಶ್ ಎದುರು ವೈಭವಿ ನಾಯಕಿ. ಇವರು ತಮಿಳು, ಮರಾಠಿಯಲ್ಲಿ ಹೆಸರು ಮಾಡಿರುವ ಹುಡುಗಿ. ಶರಣ್ ಎದುರು ರಾಜ್ ವಿಷ್ಣು ಚಿತ್ರದಲ್ಲಿ ನಾಯಕಿಯಾಗಿದ್ದವರು. ಸಂಯುಕ್ತಾ ಮೆನನ್, ಮಲಯಾಳಂ ಚೆಲುವೆ. ಇವರು ದಿಗಂತ್‍ಗೆ ಜೋಡಿಯಾಗಲಿದ್ದಾರೆ. ಶರ್ಮಿಳಾ ಮಾಂಡ್ರೆ, ಪವನ್‍ಗೆ ಜೋಡಿಯಾಗಲಿದ್ದು, ನಿಶ್ವಿಕಾ ನಾಯ್ಡು ಗೆಸ್ಟ್ ರೋಲ್‍ನಲ್ಲಿ ಬರಲಿದ್ದಾರೆ.
ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ನಾಯಕರಾಗಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.
ಇಷ್ಟಕ್ಕೂ ಇಷ್ಟೆಲ್ಲ ಬದಲಾವಣೆಗೆ ಕಾರಣ, ಪ್ರವಾಹ. ಪ್ರವಾಹ ಬಂದು ಚಿತ್ರೀಕರಣ ತಡವಾಗಿ, ಡೇಟ್ಸ್‍ಗಳು ಹೊಂದಾಣಿಕೆಯಾಗದೆ ಅನಿವಾರ್ಯವಾಗಿ ಕಲಾವಿದರ ಬದಲಾವಣೆಯಾಗಿದೆ ಎಂದಿದ್ದಾರೆ ಯೋಗರಾಜ್ ಭಟ್