` golden star ganesh, - chitraloka.com | Kannada Movie News, Reviews | Image

golden star ganesh,

 • ಕಾಶಿ ಕುಮಾರಿ ಕನ್ನಡತಿಯಾಗೇಬಿಟ್ರು..!

  shanvi srivatsav dubs in kannada for the first time

  ಶಾನ್ವಿ ಶ್ರೀವಾಸ್ತವ್ ಕನ್ನಡಿಗರಿಗೆ ಚಿರಪರಿಚಿತ ಮುಖ. ಈಗಾಗಲೇ ದರ್ಶನ್, ಯಶ್, ಶ್ರೀಮುರಳಿ, ರಮೇಶ್, ಚಿರಂಜೀವಿ ಸರ್ಜಾ.. ಹೀಗೆ ಹಲವು ನಾಯಕರ ಜೊತೆ ನಟಿಸಿದ್ದಾರೆ.ಆದರೆ ಶಾನ್ವಿಯವರ ಮೂಲ ಕರ್ನಾಟಕ ಅಲ್ಲ. ಉತ್ತರ ಪ್ರದೇಶದ ಪುಣ್ಯಸ್ಥಳ ಕಾಶಿ, ಶಾನ್ವಿಯವರ ಹುಟ್ಟೂರು.

  ಈ ಕಾಶಿ ಕುಮಾರಿ ಕನ್ನಡಕ್ಕೆ ಬಂದಿದ್ದು ಚಂದ್ರಲೇಖ ಚಿತ್ರದ ಮೂಲಕ. ಅದಾದ ಮೇಲೆ ಹಲವು ಚಿತ್ರಗಳಲ್ಲಿ ನಟಿಸಿದ ಶಾನ್ವಿ, ಕನ್ನಡ ಕಲಿತರಾದರೂ.. ಕನ್ನಡದಲ್ಲಿಯೇ ಡಬ್ ಮಾಡುವಷ್ಟು ವಿಶ್ವಾಸ ಬಂದಿಲ್ಲ. ಆದರೆ ಮುಂದೊಂದು ದಿನ ಕನ್ನಡದಲ್ಲಿ ಡಬ್ ಮಾಡಿಯೇ ಮಾಡ್ತೀನಿ ಎಂದಿದ್ದರು. ಈಗ ಆ ಮಾತು ಉಳಿಸಿಕೊಂಡಿದ್ದಾರೆ.

  ಗಣೇಶ್ ಜೊತೆಗೆ ಗೀತಾ ಚಿತ್ರದಲ್ಲಿ ಶಾನ್ವಿಯವರದ್ದು ಮೇಯ್ನ್ ರೋಲ್. ಪ್ರಿಯಾ ಅನ್ನೋ ಸಾಫ್ಟ್‍ವೇರ್ ಎಂಜಿನಿಯರ್ ಆಗಿ ನಟಿಸಿರುವ ಶಾನ್ವಿ, ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ. ಗೀತಾ ಚಿತ್ರದಲ್ಲಿ ಕನ್ನಡ ಚಳವಳಿಯ ಪಾತ್ರವೂ ದೊಡ್ಡದು. ವಿಜಯ ನಾಗೇಂದ್ರ ನಿರ್ದೇಶನದ ಗೀತಾ ಇದೇ ವಾರ ರಿಲೀಸ್ ಆಗುತ್ತಿದೆ.

 • ಕಿಚ್ಚನೂ, ಗಣಿನೂ.. ಸಂಬಂಧಿಕರಂತೆ..!

  sudeep, ganesh are relatives

  ಕಿಚ್ಚ ಸುದೀಪ್ ಮತ್ತು ಗಣೇಶ್ ಬಂಧುಗಳು. ಅದರಲ್ಲೇನಿದೆ ವಿಶೇಷ. ಚಿತ್ರರಂಗದಲ್ಲಿರೋವ್ರೆಲ್ಲ ಹಾಗೆಯೇ ಇದ್ದಾರೆ ಅಂದ್ಕೊಂಡ್ರೆ ಅದು ತಪ್ಪು. ಇದು ಬಂಧು ಬಳಗದ ಬಂಧುತ್ವದ ಕಥೆ. ಇತ್ತೀಚೆಗೆ ಕೆಸಿಸಿ ಟೂರ್ನಿಯಲ್ಲಿ ಜೊತೆಯಲ್ಲಿದ್ದ ವೇಳೆ, ಸುದೀಪ್‍ಗೆ ಗೊತ್ತಾಗಿರುವ ಸತ್ಯ ಇದು.

  ಗಣೇಶ್, ಸುದೀಪ್ ಅವರಿಗೆ ದೂರದ ಸಂಬಂಧಿಯಾಗಬೇಕಂತೆ. ಅದನ್ನು ಖುಷಿಯಿಂದ ಹಂಚಿಕೊಂಡಿರೋ ಸುದೀಪ್, ನನ್ನ ಮನೆಯಲ್ಲೀಗ ಗೋಲ್ಡ್ ಇದೆ. ನಾನೀಗ ಶ್ರೀಮಂತ ಎಂದಿದ್ದಾರೆ.

 • ಗಣೇಶ್ ಕನ್ನಡಕ ಹುಡುಕೋ ಕೆಲಸ ಶುರು

  where is my kannadaka launched

  ಗೋಲ್ಡನ್ ಸ್ಟಾರ್ ಗಣೇಶ್, ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಒಟ್ಟಿಗೇ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ವೇರ್ ಈಸ್ ಮೈ ಕನ್ನಡಕ ಚಿತ್ರ ಶುರುವಾಗಿಬಿಟ್ಟಿದೆ. ಮಹಾಲಕ್ಷ್ಮಿ ಲೇಔಟ್‍ನಲ್ಲಿರೋ ಪಂಚಮುಖಿ ದೇವಸ್ಥಾನದಲ್ಲಿ ಶುಭ ಮುಹೂರ್ತದಲ್ಲಿ ಚಿತ್ರ ಶುರುವಾಗಿದೆ. ಗಣೇಶ್ ಹಿರೋಯಿನ್ ಯಾರು ಗೊತ್ತಾ..? ಪತ್ರಲೇಖ ಎಂಬ ಬಾಲಿವುಡ್ ಚೆಲುವೆ.

  ಹಿಂದಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರೋ ರಾಜ್-ದಾಮಿನಿ ದಂಪತಿ ಚಿತ್ರದ ನಿರ್ದೇಶಕರು. ನನಗೆ ತುಂಬಾ ಇಂಪ್ರೆಸ್ ಮಾಡಿದ್ದು ಚಿತ್ರದ ಕಥೆ ಎಂದು ಹೇಳಿದ್ದಾರೆ ಗಣೇಶ್. ಅರ್ಬಾಜ್ ಖಾನ್ ಜೊತೆ ನಟಿಸುತ್ತಿರುವುದಕ್ಕೆ ಥ್ರಿಲ್ಲಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮುಹೂರ್ತ ಈಗಲೇ ಆಗಿದ್ದರೂ, ಚಿತ್ರೀಕರಣ ಶುರುವಾಗುವುದು ಏಪ್ರಿಲ್ ತಿಂಗಳಲ್ಲಿ. 

 • ಗಣೇಶ್ ಕನ್ನಡಕಕ್ಕೆ ಸಲ್ಮಾನ್ ಖಾನ್ ಅಣ್ಣ

  arbaaz khan enters film industry through where is my kannadaka

  ವೇರ್ ಈಸ್ ಮೈ ಕನ್ನಡಕ ಚಿತ್ರಕ್ಕೆ ಗಣೇಶ್ ಹೀರೋ. ಈಗ ಆ ಚಿತ್ರದ ಇನ್ನೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಅಣ್ಣ ಅರ್ಬಾಜ್ ಖಾನ್ ಕೂಡಾ ನಟಿಸುತ್ತಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ ಆಗಲಿದೆ.

  ರಾಜ್ ಮತ್ತು ದಾಮಿನಿ ಜೋಡಿ ನಿರ್ದೇಶನದ ಚಿತ್ರದ ಚಿತ್ರೀಕರಣ ಏಪ್ರಿಲ್‍ನಿಂದ ಶುರುವಾಗಲಿದೆ. ಸಲ್ಮಾನ್ ಖಾನ್ ಅಭಿನಯದ ದಬಾಂಗ್ 2 ನಿರ್ದೇಶಿಸಿದ್ದ ಅರ್ಬಾಜ್ ಖಾನ್, ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.

  Related Articles :-

  Ganesh's New Film Is 'Where Is My Kannadaka'

 • ಗಣೇಶ್ ಗೀತಾಗೆ ಆಟೋ ಸ್ಟಾರ್ಸ್ ಪ್ರಚಾರ

  auto drivers campaign for geetha

  ಗೋಲ್ಡನ್ ಸ್ಟಾರ್ ಅಭಿನಯದ ಗೀತಾ ಚಿತ್ರದ ಪ್ರಚಾರಕ್ಕೆ ಗಣೇಶ್ ಅವರಿಗಿಂತ ಮೊದಲು ಆಟೋ ಸ್ಟಾರ್ಸ್ ಕೈ ಹಾಕಿದ್ದಾರೆ. ಸೆ.27ರಂದು ರಿಲೀಸ್ ಆಗುತ್ತಿರುವ ಚಿತ್ರವನ್ನು ಆಟೋ ಚಾಲಕರೇ ಪ್ರಚಾರ ಮಾಡುತ್ತಿದ್ದಾರೆ.

  ಅದಕ್ಕೆ ಕಾರಣ ಚಿತ್ರದ ಟೈಟಲ್ ಗೀತಾ. ಗೀತಾ, ಶಂಕರ್ ನಾಗ್ ಚಿತ್ರ. ಹೀಗಾಗಿಯೇ ಶಂಕರ್ ನಾಗ್ ಪುತ್ಥಳಿಗೆ ಮಾಲಾರ್ಪಣೆ ಮಾಡಿರುವ ಆಟೋ ಚಾಲಕರು ಗೀತಾ ಚಿತ್ರದ ಪೋಸ್ಟರ್ ಮೆರವಣಿಗೆ ಮಾಡಿದ್ದಾರೆ. ಗಣೇಶ್ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಮಾಡಿ ಶುಭ ಕೋರಿದ್ದಾರೆ.

 • ಗಣೇಶ್ ಗೀತಾಗೆ ಪವರ್ ಸ್ಟಾರ್ ಕನ್ನಡ ಪವರ್

  puneeth sings a song for ganesh's geetha

  ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ, ಸೆಪ್ಟೆಂಬರ್ ಕೊನೆ ವಾರ ರಿಲೀಸ್ ಆಗಲು ಸಜ್ಜಾಗಿದೆ. ಹೀಗಾಗಿ ಚಿತ್ರದ ಫೈನಲ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಈಗ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸಾಥ್ ಕೊಟ್ಟಿದ್ದಾರೆ.

  ಚಿತ್ರದಲ್ಲಿ `ಕನ್ನಡ ಕನ್ನಡ ಕನ್ನಡವೇ ಸತ್ಯ.. ಎಂಬ ಹಾಡಿದೆ. ಆ ಹಾಡಿಗೆ ಧ್ವನಿ ನೀಡಿದ್ದಾರೆ ಪುನೀತ್. ಅಂದಹಾಗೆ ಗೀತಾ ಸಿನಿಮಾ ಲವ್ ಸ್ಟೋರಿಯೇ ಆದರೂ, ಇಡೀ ಚಿತ್ರ ನಡೆಯುವುದು ಗೋಕಾಕ್ ಚಳವಳಿ ಹಿನ್ನೆಲೆಯಲ್ಲಿ. ಹೇಗೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಜೊತೆಗೆ ಶಂಕರ್‍ನಾಗ್ ಕ್ಲಾಸಿಕ್ ಚಿತ್ರದ ಟೈಟಲ್ ಬೇರೆ. ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶಕ.

  ತಮ್ಮ ಜೊತೆ ಸಹಾಯಕ ನಿರ್ದೇಶಕರಾಗಿದ್ದ, ಗೆಳೆಯ ವಿಜಯ್ ನಾಗೇಂದ್ರ ಅವರ ಈ ಚಿತ್ರಕ್ಕೆ, ಈ ಹಾಡು ಬರೆದಿರುವುದು ಸಂತೋಷ್ ಆನಂದ್‍ರಾಮ್. ಗೆಳೆಯನ ಸಾಹಸಕ್ಕೆ ಬೆನ್ನೆಲುಬಾಗಿದ್ದಾರೆ ಸಂತೋಷ್. ಶಿಲ್ಪಾ ಗಣೇಶ್ ಅವರೇ ನಿರ್ಮಾಣದ ಹೊಣೆ ಹೊತ್ತಿದ್ದು, ಹಾಡು, ಸಿನಿಮಾ ಎರಡೂ ಕುತೂಹಲ ಹುಟ್ಟಿಸಿದೆ. ಚಿತ್ರದಲ್ಲಿ ಗಣೇಶ್‍ಗೆ ಒಬ್ಬರಲ್ಲ.. ಇಬ್ಬರಲ್ಲ.. ಮೂವರು ಹೀರೋಯಿನ್ಸ್. ಶಾನ್ವಿ ಶ್ರೀವಾಸ್ತವ್, ಪ್ರಗ್ಯಾ ಮಾರ್ಟಿನ್ ಮತ್ತು ಪಾರ್ವತಿ ಅರುಣ್.

 • ಗಣೇಶ್ ಮಗಳೂ ಕೂಡಾ ಚಿತ್ರರಂಗಕ್ಕೆ..

  ganesh family

  ಮೊನ್ನೆ ಮೊನ್ನೆಯಷ್ಟೇ ನಟ ಉಪೇಂದ್ರ ಮಗಳು ಚಿತ್ರರಂಗಕ್ಕೆ ಬಂದ ಸುದ್ದಿ ಓದಿದ್ದೀರಿ. ನಟ ದರ್ಶನ್ ಮಗ ಕೂಡಾ ತೆರೆಯ ಮೇಲೆ ಕಾಣಿಸಿಕೊಂಡಿದ್ದಾಗಿದೆ. ಈಗ ಗಣೇಶ್ ಪುತ್ರಿಯ ಸರದಿ. ಗಣೇಶ್ ಮಗಳು ಚಾರಿತ್ರ್ಯ ಚಮಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲೊಂದು ಪುಟ್ಟ ಮಗುವಿನ ಪಾತ್ರಕ್ಕೆ ಕ್ಯೂಟ್ ಆಗಿರುವ ಚೂಟಿ ಹುಡುಗಿ ಬೇಕಿತ್ತು. ನಿರ್ದೇಶಕರು ಚಾರಿತ್ರ್ಯಳನ್ನೇ ಆಯ್ಕೆ ಮಾಡಿಕೊಂಡರು ಎಂದಿದ್ದಾರೆ ಗಣೇಶ್.

  ಹೇಗಿದ್ದಾಳೆ ಚಾರಿತ್ರ್ಯ ಎಂದು ತಲೆ ಕೆಡಿಸಿಕೊಳ್ಳಬೇಕಿ. ಸಣ್ಣ ಫ್ಲ್ಯಾಷ್‍ಬ್ಯಾಕ್ ನೆನಪು ಮಾಡಿಕೊಳ್ಳಿ. ಅಮೂಲ್ಯ ಮದುವೆಯಲ್ಲಿ ದೊಡ್ಡವರನ್ನೆಲ್ಲ ದಂಗುಬಡಿಸುವಂತೆ ಓಡಾಡಿದ್ದ, ಕುಣಿದು ಕುಪ್ಪಳಿಸಿದ್ದ ಆ ಪುಟಾಣಿಯೇ  ಹುಡುಗಿಯೇ ಚಾರಿತ್ರ್ಯ. 

 • ಗಣೇಶ್ ಮನೆಯಲ್ಲಿ ಹೊಸ ದೇವದಾಸ್..!

  devdas at ganesh house

  ಗಣೇಶ್​ಗೂ, ದೇವದಾಸ್​ಗೂ ಅವಿನಾಭಾವ ಸಂಬಂಧ. ಅದು ಮುಂಗಾರು ಮಳೆ ಎಫೆಕ್ಟ್. ಆ ಚಿತ್ರದಲ್ಲಿ ದೇವದಾಸು ಅನ್ನೋ ಮೊಲದ ಪಾತ್ರ ತುಂಬಾನೇ ಹಿಟ್ ಆಗಿತ್ತು. ಒಂದರ್ಥದಲ್ಲಿ ದೇವದಾಸ್ ಚಿತ್ರದ ಇನ್ನೊಂದು ಪೋಷಕ ನಟ ಅಂದರೆ ತಪ್ಪಾಗಲಿಕ್ಕಿಲ್ಲ. 

  ಗಣೇಶ್ ತಮ್ಮ ಮಗ ವಿಹಾನ್​ಗೆ ಒಂದು ಪುಟ್ಟ ಮೊಲವನ್ನ ಗಿಫ್ಟಾಗಿ ಕೊಟ್ಟಿದ್ದಾರೆ. ಆ ಮೊಲಕ್ಕೆ ದೇವದಾಸ್ ಅಂತಾನೇ ಹೆಸರಿಟ್ಟಿದ್ದಾರೆ.  ಮುಂಗಾರು ಮಳೆಯಲ್ಲಿ ದೇವದಾಸ್​ ಮೊಲಕ್ಕೆ ಗಣೇಶ್ ಹೊಡೆದಿದ್ದ ಡೈಲಾಗ್​ಗಳು ಹಿಟ್ ಆಗಿದ್ದವು. ಗಣೇಶ್ ಮಗ ವಿಹಾನ್ ಕೂಡಾ, ಅವನ ದೇವದಾಸ್​ಗೆ ಹಾಗೇ ಡೈಲಾಗ್ ಹೊಡೀತಾನಾ..? ಗೋಲ್ಡನ್ ಸ್ಟಾರೇ ಹೇಳಬೇಕು.

 • ಗಣೇಶ್ ವಾಕಿಂಗ್ ವಿತ್ ಲಾರಿ ಟೈರ್..!

  ganesh workout

  ಗೋಲ್ಡನ್ ಸ್ಟಾರ್​ ಯಾಕಪ್ಪಾ ಲಾರಿ ಟೈರ್ ಜೊತೆ ವಾಕ್ ಮಾಡೋಕೆ ಹೋದ್ರು ಅಂತಾ ಗಾಬರಿಯಾಗ್ಬೇಡಿ. ಅದು ಗೋಲ್ಡನ್ ಸ್ಟಾರ್ ತಮ್ಮ ಮುಂದಿನ ಚಿತ್ರಕ್ಕೆ ತಯಾರಾಗುತ್ತಿರುವ ಪರಿ. ದೇಹವನ್ನು ದಂಡಿಸಿ, ಫಿಟ್​ನೆಸ್ ಕಾಪಾಡಿಕೊಳ್ಳಲು ಬೆವರು ಸುರಿಸುತ್ತಿರುವ ಗಣೇಶ್, ಪ್ರತಿದಿನ ಬಸ್ ಅಥವಾ ಲಾರಿಯ ಟೈರ್​ನ್ನು ಹಿಡಿದು ವಾಕಿಂಗ್ ಮಾಡುತ್ತಿದ್ಧಾರೆ. ಅದು ದಿಬ್ಬದಿಂದ ಕೆಳಗಿಳಿಯೋದು, ಕೆಳಗಿನಿಂದ ದಿಬ್ಬ ಹತ್ತೋದ್ರ ಮೂಲಕ ಕೊಬ್ಬು ಕರಗಿಸುತ್ತಿದ್ದಾರೆ.

  ರಾಜರಾಜೇಶ್ವರಿ ನಗರದಲ್ಲಿರುವ ತಮ್ಮ ಮನೆಯ ಎದುರೇ ಪ್ರತಿದಿನ ಲಾರಿ ಟೈರ್ ಜೊತೆ ಸರ್ಕಸ್ ಮಾಡುತ್ತಿರುವ ಗಣೇಶ್, ಜಿಮ್​ನಲ್ಲಿಯೂ ಬೆವರು ಹರಿಸುತ್ತಿದ್ದಾರೆ. ಸ್ಕಿಪ್ಪಿಂಗ್ ಕೂಡಾ ಮಾಡುತ್ತಿದ್ದಾರೆ. ಮುಗಳುನಗೆ ಯಶಸ್ಸಿನಲ್ಲಿ ತೇಲುತ್ತಿರುವ ಗಣೇಶ್, ಆರೆಂಜ್ ಮತ್ತು ಚಮಕ್ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 • ಗಣೇಶ್ ಸೋದರನಿಗೆ ರವಿಚಂದ್ರನ್ ಚಿತ್ರದ ಟೈಟಲ್

  ganesh's brother gets ravichandran movie title

  ಗೋಲ್ಡನ್ ಸ್ಟಾರ್ ಗಣೇಶ್ ಅವರ ಇನ್ನೊಬ್ಬ ಸಹೋದರನ ಸಿನಿಮಾ ರಂಗ ಪ್ರವೇಶವಾಗಿದೆ. ಈಗಾಗಲೇ ಮಹೇಶ್ ಎಂಬ ಗಣೇಶ್ ಅವರ ಸೋದರ ಹೀರೋ ಆಗಿ ಬಂದಿದ್ದಾಗಿದೆ. ಈಗ ಮತ್ತೊಬ್ಬ ಸೋದರ ಸೂರಜ್ ಕೃಷ್ಣ ಚಿತ್ರರಂಗಕ್ಕೆ ಬಂದಿದ್ದಾರೆ. ಭಾರ್ಗವ ಅವರ ಶಿಷ್ಯ ಶ್ರೀನಿವಾಸ್ ಶಿವಾರ ನಿರ್ದೇಶನದ ಚಿತ್ರದಲ್ಲಿ ಸೂರಜ್ ಹೀರೋ. ಚಿತ್ರದ ಹೆಸರು ನಾನೇ ರಾಜ.

  ನಾನೇ ರಾಜ, ರವಿಚಂದ್ರನ್ ಆರಂಭಿಕ ದಿನಗಳಲ್ಲಿ ನಟಿಸಿದ್ದ ಕನ್ನಡ ಸಿನಿಮಾ. ರವಿಚಂದ್ರನ್, ಅಂಬಿಕಾ, ಅಂಬರೀಷ್ ನಟಿಸಿದ್ದ ಚಿತ್ರವದು. 1984ರಲ್ಲಿ ತೆರೆ ಕಂಡಿದ್ದ ಸಿನಿಮಾ. ಈಗ ಆ ಟೈಟಲ್ ಸಿನಿಮಾದಲ್ಲಿ ಗಣೇಶ್ ಸೋದರ ಸೂರಜ್ ನಟಿಸುತ್ತಿದ್ದಾರೆ. ಸೋನಿಕಾ ಗೌಡ ನಾಯಕಿಯಾಗಿದ್ದು, ಇದೊಂದು ಪಕ್ಕಾ ಹಳ್ಳಿ ಸ್ಟೋರಿ ಎನ್ನಲಾಗಿದೆ.

 • ಗಣೇಶ್ ಹಾರರ್ ಸಿನಿಮಾ ಮಾಡಲು ಅವಳೇ ಕಾರಣ..!

  ganesh's daughter is reason for his scceptance

  ಗಣೇಶ್ ಎಂದರೆ ನಗು, ಕಾಮಿಡಿ, ಗಣೇಶ್ ಎಂದರೆ ಲವ್, ರೊಮ್ಯಾನ್ಸ್.. ಗಣೇಶ್ ಚಿತ್ರಗಳೆಂದರೆ ಇಂಪಾದ ಹಾಡು, ಕಣ್ಣು ತಂಪಾಗಿಸುವ ಹಸಿರು.. ಆದರೆ, ಇಂತಿಪ್ಪ ಗಣೇಶ್ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಮಾಡೋಕೆ ಹೊರಟಿದ್ದಾರೆ. ನಾಗಣ್ಣ ನಿರ್ದೇಶನದಲ್ಲಿ ಹಾರರ್ ಸಿನಿಮಾ ಮಾಡೋಕೆ ಗಣೇಶ್ ಒಪ್ಪಿಕೊಂಡುಬಿಟ್ಟಿದ್ದಾರೆ.

  ಇಷ್ಟಕ್ಕೂ ಗಣೇಶ್ ಇಂಥಾದ್ದೊಂದು ಹಾರರ್ ಸಿನಿಮಾ ಮಾಡೋಕೆ ಕಾರಣ ಅವರ ಮಗಳಂತೆ. ಗಣೇಶ್ ಇವತ್ತಿಗೂ ಒಬ್ಬನೇ ಕುಳಿತು ಹಾರರ್ ಸಿನಿಮಾ ನೋಡಲ್ಲ. ಅಂಥಾದ್ದರಲ್ಲಿ ಹಾರರ್ ಸಿನಿಮಾದಲ್ಲಿ ನಟಿಸ್ತಾರೆ ಅಂದ್ರೆ ಅದಕ್ಕೆ ಕಾರಣ ಅವರ ಮಗಳ ಡಿಮ್ಯಾಂಡು. ಮಗಳಿಗೆ ಹಾರರ್ ಚಿತ್ರಗಳೆಂದರೆ ಸಿಕ್ಕಾಪಟ್ಟೆ ಇಷ್ಟ. ಹೀಗಾಗಿ ಅಪ್ಪನೂ ಹಾರರ್ ಸಿನಿಮಾ ಮಾಡಬೇಕು ಎಂದು ದುಂಬಾಲು ಬಿದ್ದಿದ್ದಾಳೆ. ಅದೇ ಸಮಯಕ್ಕೆ ನಾಗಣ್ಣನವರ ಕಡೆಯಿಂದ ಕಥೆ ಸಿಕ್ಕಿದೆ. ಗಣೇಶ್ ಓಕೆ ಎಂದುಬಿಟ್ಟಿದ್ದಾರೆ. 

  ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ಇದನ್ನೆಲ್ಲ ಹಂಚಿಕೊಂಡಿದ್ದಾರೆ ಗಣೇಶ್. ಅಫ್‍ಕೋರ್ಸ್.. ಮಗಳ ಆಜ್ಞೆಯನ್ನು ನಿರಾಕರಿಸುವ ಅಪ್ಪ ಯಾವನಿದ್ದಾನು ಜಗದಲ್ಲಿ...

 • ಗಣೇಶ್-ಸುನಿ ಸಖತ್

  ganesh - suni combination's next titled sakkath

  ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಕಾಂಬಿನೇಷನ್ನಿನ ಹೊಸ ಸಿನಿಮಾ ಸಖತ್ ಆಗಿದೆ. ಸಖತ್ತಾಗಿರುತ್ತೆ ಬಿಡ್ರಿ.. ಒಳ್ಳೆ ಕಾಂಬಿನೇಷನ್ನು.. ಅದೇ ರೀ ಸಖತ್..

  ಹೌದ್ರೀ.. ನಾನೂ ಅದನ್ನೇ ಹೇಳಿದ್ದು. ಆ ಸುನಿ ಪೆನ್ನಲ್ಲಿ ಸಖತ್ತು.. ಈ ಗಣೇಶು ಡೈಲಾಗಲ್ಲಿ ಸಖತ್ತು.. ಒಳ್ಳೆ ಕಾಂಬಿನೇಷನ್ನು.. ಅಯ್ಯೋ.. ಹಂಗಲ್ರೀ.. ಅವರ ಹೊಸ ಸಿನಿಮಾ ಟೈಟಲ್ಲೇ ಸಖತ್.

  ಅರೇ.. ಹೌದಾ.. ಈ ಸುನಿನೇ ಹಿಂಗೆ ಬಿಡಪ್ಪಾ.. ಏನೇನೋ ಮಾಡ್ತಿರ್ತಾರೆ.. ಅತ್ತ ಸುನಿ ಅವತಾರ ಪುರುಷನಿಗೆ ಫೈನಲ್ ಟಚ್ ಕೊಡುತ್ತಿದ್ದರೆ, ಇತ್ತ ಗಣೇಶ್ ಭಟ್ಟರೊಂದಿಗೆ ಗಾಳಿಪಟ ಹಾರಿಸುತ್ತಿದ್ದಾರೆ. ಈ ಸೈಕಲ್  ಗ್ಯಾಪಲ್ಲೇ ಹೊಸ ಸುನಿ-ಗಣೇಶ್ ಹೊಸ ಚಿತ್ರ `ಸಖತ್'ಗೆ ಬುನಾದಿ ಹಾಕಿದ್ದಾರೆ. ಭರಾಟೆ ಸುಪ್ರೀತ್ ನಿರ್ಮಾಣದ `ಸಖತ್'ಗೆ ನಾಯಕಿಯಾಗಿರೋದು ಸುರಭಿ ಅನ್ನೋ ಚೆಲುವೆ.

   

 • ಗಣೇಶ್.. ಭಯ ಹುಟ್ಟಿಸ್ತಾರಂತೆ..!

  ganesh's next is horror movie

  ಗೋಲ್ಡನ್ ಸ್ಟಾರ್ ಗಣೇಶ್, ಮುಂಗಾರು ಮಳೆಯಿಂದ ಅಮರಪ್ರೇಮಿಯಾದವರು. ಅದಕ್ಕೂ ಮುನ್ನ ಕಾಮಿಡಿ ಟೈಂ ಗಣೇಶ್ ಆಗಿದ್ದವರು. ಶಾಲೆ, ಕಾಲೇಜು ದಿನಗಳಲ್ಲಿ ಎಚ್ಚಮನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದವರು. ಆದರೆ, ಚಿತ್ರರಂಗಕ್ಕೆ ಬಂದ ಮೇಲೆ ಗಣೇಶ್ ಹೃದಯಕ್ಕೆ ಕೈ ಹಾಕುವ ಪಾತ್ರಗಳಲ್ಲಿ ನಟಿಸಿದರೇ ಹೊರತು, ಹೃದಯ ಬಡಿತವನ್ನು ಹೆಚ್ಚಿಸುವ ಚಿತ್ರಗಳಲ್ಲಿ ನಟಿಸಲೇ ಇಲ್ಲ. ಈಗ ಅಂಥಾದ್ದೊಂದು ಅವಕಾಶ ಗಣೇಶ್ ಅವರನ್ನು ಹುಡುಕಿಕೊಂಡು ಬಂದಿದೆ.

  ಗಣೇಶ್, ಇದೇ ಮೊದಲ ಬಾರಿಗೆ ನಾಗಣ್ಣ ನಿರ್ದೇಶನದ ಚಿತ್ರದಲ್ಲಿ ನಟಿಸೋಕೆ ಯೆಸ್ ಎಂದಿದ್ದಾರೆ. ಅದು ಹಾರರ್ ಸಿನಿಮಾ. ಅರ್ಥಾತ್ ಭಯ ಹುಟ್ಟಿಸುವ ಚಿತ್ರ. 

  ಸದ್ಯಕ್ಕೆ ಗಣೇಶ್ ಆರೆಂಜ್ ಚಿತ್ರದಲ್ಲಿ ಬ್ಯುಸಿಯಾಗಿದ್ದರೆ, ನಾಗಣ್ಣ ಕುರುಕ್ಷೇತ್ರದಲ್ಲಿ ಬ್ಯುಸಿ. ಜೂನ್ ಕೊನೆಯ ವಾರದಲ್ಲಿ ಗಣೇಶ್ ಹಾರರ್ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ.

 • ಗಣೇಶ್‍ಗೆ 10 ವರ್ಷದ ಬಳಿಕೆ 75 ಲಕ್ಷ

  ganesh wins 75 lakhs compensation

  ಗೋಲ್ಡನ್ ಸ್ಟಾರ್ ಗಣೇಶ್‍ಗೆ 10 ವರ್ಷಗಳ ಹಿಂದೆಯೇ ಸಿಗಬೇಕಿದ್ದ 75 ಲಕ್ಷ, ಈಗ ಸಿಕ್ಕಿದೆ. 2008ರಲ್ಲಿ ತೆರೆಗೆ ಬಂದಿದ್ದ ಚೆಲುವಿನ ಚಿತ್ತಾರ ಚಿತ್ರ ನೆನಪಿದೆ ತಾನೇ.. ಆ ಚಿತ್ರದ ನಿರ್ಮಾಪಕರು ಹಾಗೂ ಮೋಕ್ಷ ಅಗರಬತ್ತಿ ಕಂಪೆನಿ ನಡುವೆ 3 ತಿಂಗಳ ಪ್ರಚಾರದ ಒಪ್ಪಂದವಾಗಿತ್ತು.  ಆದರೆ ಮೋಕ್ಷ ಅಗರಬತ್ತಿ ಕಂಪೆನಿಯವರು ಒಪ್ಪಂದ ಮುಗಿದ ನಂತರವೂ ಗಣೇಶ್ ಫೋಟೋ ಬಳಸುವುದನ್ನು ಕೈಬಿಡಲಿಲ್ಲ. ಹೀಗಾಗಿ ಗಣೇಶ್ ಕೋರ್ಟ್ ಮೆಟ್ಟಿಲೇರಿದ್ದರು.

  2008ರಲ್ಲಿಯೇ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದ ತೀರ್ಪು ಈಗ ಹೊರಬಿದ್ದಿದೆ. ಮೋಕ್ಷ ಅಗರಬತ್ತಿ ಕಂಪೆನಿಯವರು ಗಣೇಶ್‍ಗೆ 75 ಲಕ್ಷ ನೀಡುವಂತೆ ಕೋರ್ಟ್ ಆದೇಶ ಕೊಟ್ಟಿದೆ. ನಿರ್ದೇಶಕ ನಾರಾಯಣ್ ಇದಕ್ಕೆ ಹೊಣೆ ಎಂಬ ಮೋಕ್ಷ ಕಂಪೆನಿ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ. ಒಟ್ಟಿನಲ್ಲಿ ಗಣೇಶ್‍ಗೆ 10 ವರ್ಷಗಳ ನಂತರ, ಅವರಿಗೆ ಬರಬೇಕಿದ್ದ 75 ಲಕ್ಷ ಸಿಗುತ್ತಿದೆ. ಜೊತೆಗೆ ಕಲಾವಿದರ ಫೋಟೋಗಳನ್ನು ಅವರ ಒಪ್ಪಿಗೆ ಇಲ್ಲದೆ ಬಳಸುವುದು ಅಪರಾಧ ಎಂಬ ಸಂದೇಶವನ್ನೂ ಈ ಆದೇಶ ನೀಡಿದೆ.

  Related Articles :-

  Ganesh Wins Compensation In Photo Misuse Case

 • ಗಾಳಿಪಟ 2 - ನಿರ್ಮಾಪಕ, ಕಲಾವಿದರ ಬದಲಾವಣೆಯ ಪ್ರವಾಹ..!

  ramesh reddy takes over gaalipata 2

  ಗಾಳಿಪಟ 2 ಚಿತ್ರ ತಂಡದಲ್ಲಿ ದಿಢೀರ್ ದಿಢೀರನೆ ಬದಲಾವಣೆಗಳಾಗುತ್ತಿವೆ. ಯೋಗರಾಜ್ ಭಟ್ ನಿರ್ದೇಶನದ ಚಿತ್ರ ಶುರುವಾದಾಗಲೇ ಹೀರೋಗಳ ಬದಲಾವಣೆಯಾಗಿತ್ತು. ಶರಣ್, ರಿಷಿ ಬದಲಾಗಿ.. ಗಣೇಶ್, ದಿಗಂತ್ ಬಂದಿದ್ದರು. ಈಗ ನಾಯಕಿಯರು ಹಾಗೂ ನಿರ್ಮಾಪಕರ ಬದಲಾವಣೆಯಾಗಿದೆ.

  ಆದಿತಿ ಪ್ರಭುದೇವ, ಸೋನಲ್ ಮಂಥೆರೋ ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಹಾಗೂ ಸಂಯುಕ್ತಾ ಮೆನನ್ ಬಂದಿದ್ದಾರೆ. ಬದಲಾವಣೆಯಾಗದೆ ಉಳಿದಿರುವುದು ಶರ್ಮಿಳಾ ಮಾಂಡ್ರೆ.

  ನಿರ್ಮಾಪಕರಾಗಿದ್ದ ಮಹೇಶ್ ದಾನಣ್ಣವರ್ ಸ್ಥಾನಕ್ಕೆ ರಮೇಶ್ ರೆಡ್ಡಿ ನುಂಗ್ಲಿ ಬಂದಿದ್ದಾರೆ. ಪಡ್ಡೆಹುಲಿ, ನಾತಿಚರಾಮಿ, 100 ಚಿತ್ರಗಳ ನಿರ್ಮಾಪಕರಾಗಿರುವ ರಮೇಶ್ ರೆಡ್ಡಿ ನುಂಗ್ಲಿ ಸೂರಜ್ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

  ಗಣೇಶ್ ಎದುರು ವೈಭವಿ ನಾಯಕಿ. ಇವರು ತಮಿಳು, ಮರಾಠಿಯಲ್ಲಿ ಹೆಸರು ಮಾಡಿರುವ ಹುಡುಗಿ. ಶರಣ್ ಎದುರು ರಾಜ್ ವಿಷ್ಣು ಚಿತ್ರದಲ್ಲಿ ನಾಯಕಿಯಾಗಿದ್ದವರು. ಸಂಯುಕ್ತಾ ಮೆನನ್, ಮಲಯಾಳಂ ಚೆಲುವೆ. ಇವರು ದಿಗಂತ್‍ಗೆ ಜೋಡಿಯಾಗಲಿದ್ದಾರೆ. ಶರ್ಮಿಳಾ ಮಾಂಡ್ರೆ, ಪವನ್‍ಗೆ ಜೋಡಿಯಾಗಲಿದ್ದು, ನಿಶ್ವಿಕಾ ನಾಯ್ಡು ಗೆಸ್ಟ್ ರೋಲ್‍ನಲ್ಲಿ ಬರಲಿದ್ದಾರೆ.

  ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ನಾಯಕರಾಗಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.

  ಇಷ್ಟಕ್ಕೂ ಇಷ್ಟೆಲ್ಲ ಬದಲಾವಣೆಗೆ ಕಾರಣ, ಪ್ರವಾಹ. ಪ್ರವಾಹ ಬಂದು ಚಿತ್ರೀಕರಣ ತಡವಾಗಿ, ಡೇಟ್ಸ್‍ಗಳು ಹೊಂದಾಣಿಕೆಯಾಗದೆ ಅನಿವಾರ್ಯವಾಗಿ ಕಲಾವಿದರ ಬದಲಾವಣೆಯಾಗಿದೆ ಎಂದಿದ್ದಾರೆ ಯೋಗರಾಜ್ ಭಟ್

 • ಗೀತಾ ಕೊಟ್ಟ ಆತ್ಮವಿಶ್ವಾಸ.. ಕನ್ನಡತಿಯಾದರು ಶಾನ್ವಿ..!

  geetha movie gave me confidence

  ಅವನೇ ಶ್ರೀಮನ್ನಾರಾಯಣ. ರಕ್ಷಿತ್ ಶೆಟ್ಟಿ-ಪುಷ್ಕರ್ ಕಾಂಬಿನೇಷನ್ನಿನಲ್ಲಿ ಬರುತ್ತಿರೋ ಅತಿ ದೊಡ್ಡ ಸಿನಿಮಾ. 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ಶಾನ್ವಿ ಶ್ರೀವಾಸ್ತವ್ ಹೀರೋಯಿನ್. ಅವರು ಕಾಶಿಯ ಚೆಲುವೆ. ಕನ್ನಡ ಗೊತ್ತಿಲ್ಲ. ಆದರೆ ಗೀತಾ ಚಿತ್ರ ಕೊಟ್ಟಿರುವ ಕಾನ್ಫಿಡೆನ್ಸ್ ಹೇಗಿದೆ ಎಂದರೆ, ತಮ್ಮ ಚಿತ್ರಗಳಿಗೆ ತಾವೇ ಡಬ್ ಮಾಡೋಕೆ ಮುಂದಾಗಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಲಕ್ಷ್ಮಿ ಪಾತ್ರಕ್ಕೂ ಅವರೇ ಡಬ್ ಮಾಡಿದ್ದಾರೆ.

  ಗೀತಾ ಚಿತ್ರದಲ್ಲಿನ ಅವರ ವಾಯ್ಸ್‍ಗೆ ಸಿಕ್ಕ ಮೆಚ್ಚುಗೆಯೇ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೂ ಡಬ್ ಮಾಡಲು ಪ್ರೇರಣೆ ನೀಡಿದೆಯಂತೆ. ಡೈಲಾಗ್‍ಗಳು ಉದ್ದುದ್ದ ಇದ್ದವು. ಶೂಟಿಂಗ್ ವೇಳೆ ಅದನ್ನೇ ಚಾಲೆಂಜ್ ಆಗಿ ತೆಗೆದುಕೊಂಡೆ. ಈಗ ಡಬ್ ಮಾಡಿದ್ದೇನೆ. ನನಗೀಗ ಕನ್ನಡ ಚೆನ್ನಾಗಿಯೇ ಬರುತ್ತೆ ಎನ್ನುವ ಶಾನ್ವಿ ಶ್ರೀವಾಸ್ತವ್, ಈಗ ಕಾಶಿ ಹುಡುಗಿಯೇನಲ್ಲ. ಕನ್ನಡತಿಯೇ.

 • ಗೀತಾ ನಿರ್ಮಾಪಕರಿಗೆ ಪತ್ನಿ ಕೊಟ್ಟ ಶಾಕ್..!

  geetha movie producer's wife gives hima shock

  ಗೀತಾ. ಗಣೇಶ್ ಅಭಿನಯದ ಜನ ಮೆಚ್ಚುಗೆ ಪಡೆದಿರುವ ಈ ಚಿತ್ರಕ್ಕೆ ಪ್ರೇಕ್ಷಕ ಬಹುಪರಾಕ್ ಎಂದಿದ್ದಾನೆ. ಚಿತ್ರದ ಕಥೆ, ಗೋಕಾಕ್ ಕನ್ನಡ ಚಳವಳಿ, ಆ ಕಥೆಯನ್ನು ನವಿರಾದ ಪ್ರೇಮಕಥೆಯೊಂದಿಗೆ ಹೇಳಿರುವ ರೀತಿ, ನಿರ್ದೇಶಕ ವಿಜಯ್ ನಾಗೇಂದ್ರ ಅವರ ಪ್ರತಿಭೆಯೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ತಮ್ಮ ಸಿನಿಮಾ ವಿಭಿನ್ನವಾಗಿದೆ ಎಂದು ಹೆಮ್ಮೆಯಿಂದ ಬೀಗುತ್ತಿದ್ದ ನಿರ್ಮಾಪಕ ಸೈಯದ್ ಸಲಾಂ ಅವರಿಗೆ ಅವರ ಪತ್ನಿ ಕೇಳಿರುವ ಆ ಒಂದು ಪ್ರಶ್ನೆ ಶಾಕ್ ಕೊಟ್ಟಿದೆ. ಹೌದಲ್ವಾ.. ನನಗ್ಯಾಕೆ ಇದು ಮೊದಲೇ ಹೊಳೀಲಿಲ್ಲ ಎಂದು ಯೋಚಿಸುವಂತೆ ಮಾಡಿದೆ.

  ಇಷ್ಟಕ್ಕೂ ಸೈಯದ್ ಸಲಾಂ ಅವರ ಪತ್ನಿ ಸೈಯದ್ ಹಸೀನಾ  ಸಲಾಂ ಕೇಳಿದ ಪ್ರಶ್ನೆ ಕುತೂಹಲಕಾರಿಯಾಗಿದೆ.

  `ಅದೇಕೆ ನೀವು ನಿಮ್ಮ ಮೂರು ಚಿತ್ರಗಳಲ್ಲಿ ಒಂದೇ ಕಥೆಯನ್ನು ಹೇಳಿದ್ದೀರಿ. ಬೇರೆ ಕಥೆ ಹೇಳಬಾರದೆ' ಎಂದಿದ್ದಾರೆ. ಅದು ಹೇಗೆ ಎಂದವರಿಗೆ ಹಸೀನಾ ಅವರು ಕೊಟ್ಟಿರುವ ವಿವರಣೆ ಶಾಕ್ ಕೊಟ್ಟಿದೆ.

  ಸೈಯದ್ ಸಲಾಂ ಅವರ ಮೊದಲ ಸಿನಿಮಾ ಲೈಫು ಇಷ್ಟೇನೇ. ಆ ಚಿತ್ರದಲ್ಲಿ ಹೀರೋ ದಿಗಂತ್‍ಗೆ ಲವ್ ಮೇಲೆ ಲವ್ವುಗಳಾಗುತ್ತವೆ. ಕೊನೆಗೆ

  ಹೀರೋ ಮದುವೆಯಾಗುವುದು 6ನೇ ಗರ್ಲ್ ಫ್ರೆಂಡ್ ಜೊತೆ.

  ಇನ್ನು 2ನೇ ಸಿನಿಮಾ ಮುಗುಳುನಗೆ. ಆ ಚಿತ್ರದಲ್ಲಿ ಗಣೇಶ್ ಮೂವರನ್ನು ಲವ್ ಮಾಡ್ತಾರೆ. ಅವರೆಲ್ಲರನ್ನೂ ಬಿಟ್ಟು.. ಮದುವೆಯಾಗುವುದು ನಾಲ್ಕನೇ ಗೆಳತಿ ಅಮೂಲ್ಯರನ್ನು.

  ಈಗ ನೋಡಿದರೆ.. ಗೀತಾದಲ್ಲಿ ಕೂಡಾ ಹಾಗೆಯೇ ಆಗಿದೆ. ಮೂವರು ಹೀರೋಯಿನ್ಸ್. ಪ್ರೀತಿ ಒಬ್ಬರ ಜೊತೆಗೆ.. ಮದುವೆ.. ???

  ಸೈಯದ್ ಸಲಾಂ ನಿರ್ಮಾಪಕರಾದರೂ ಒಳ್ಳೆಯ ಸಾಹಿತ್ಯ ಪ್ರೇಮಿ. ಕಥೆ, ಕಾದಂಬರಿ ಇಷ್ಟಪಡುವವರು. ಮನೆಯಲ್ಲೇ ಒಂದು ಲೈಬ್ರರಿ ಇಟ್ಟುಕೊಂಡಿರುವ ಸೈಯದ್ ಸಲಾಂ ಅವರಿಗೆ, ತಮಗೆ ಹೊಳೆಯದ ಈ ಹೋಲಿಕೆ ತಮ್ಮ ಪತ್ನಿಗೆ ಹೊಳೆದಿದ್ದು ನೋಡಿ ಖುಷಿಗೊಂಡಿದ್ದಾರೆ. ನನ್ನ ಚಿತ್ರಗಳ ಹೀರೋಯಿನ್ಸ್ ಎಷ್ಟೇ ಇರಲಿ, ನನಗೆ ನೀನೊಬ್ಬಳೇ ನಾಯಕಿ ಎಂದು ಪತ್ನಿಗೆ ಹೇಳಿದರಾ..? ಹೇಳಿರ್ತಾರೆ ಬಿಡಿ...

 • ಗೀತಾ ಪ್ರೀತಿ ಕಥೆನಾ..? ಕನ್ನಡ ಹೋರಾಟದ ಕಥೆನಾ..?

  geetha trailer released

  ಗೀತಾ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಒಬ್ಬರಲ್ಲ.. ಇಬ್ಬರಲ್ಲ.. ಮೂವರು ಹೀರೋಯಿನ್ಗಳಿರೋ ಚಿತ್ರವಿದು.ಗಣೇಶ್ ಎದುರು ಶಾನ್ವಿ ಶ್ರೀವಾಸ್ತವ, ಪ್ರಯಾಗ ಮಾರ್ಟಿನ್, ಪಾರ್ವತಿ ಅರೂಣ್ ಇದ್ಧಾರೆ. ದೇವರಾಜ್, ಸುಧಾರಾಣಿ, ರಂಗಾಯಣ ರಘು, ಅಚ್ಯುತ್ ಕುಮಾರ್.. ಹೀಗೆ ಘಟಾನುಘಟಿಗಳ ದಂಡೇ ಇದೆ. ವಿಜಯ್ ನಾಗೇಂದ್ರ ನಿರ್ದೇಶನದ ಚೊಚ್ಚಲ ಸಿನಿಮಾವಿದು.

  ಈಗಾಗಲೇ ಪುನೀತ್ ಹಾಡಿನಿಂದ ಕನ್ನಡಿಗ.. ಕನ್ನಡಿಗ.. ಎನ್ನುವ ಸೆನ್ಸೇಷನ್ ಸೃಷ್ಟಿಸಿರುವ ಗೀತಾ ಟ್ರೇಲರ್ ನೋಡಿದವರಿಗೆ ಒಂದು ಕುತೂಹಲ ಹುಟ್ಟುವುದು ಸಹಜ. ಚಿತ್ರದಲ್ಲಿರೋದು ಪ್ರೇಮ ಕಥೆನಾ..? ಅಥವಾ ಕನ್ನಡಿಗರ ಸ್ವಾಭಿಮಾನದ ಹೋರಾಟದ ಕಥೆನಾ..? ರಾಜ್ ಭಾಗವಹಿಸಿದ್ದ ಗೋಕಾಕ್ ಚಳವಳಿಗೂ, ಗೀತಾ ಚಿತ್ರಕ್ಕೂ ಏನು ಸಂಬಂಧ..? ಇದು 80ರ ದಶಕದ ಕಥೆನಾ.. ಅಥವಾ ಈಗಿನ ಕಾಲದ ಲವ್ ಸ್ಟೋರಿನಾ..?

  ಸೈಯದ್ ಸಲಾಂ, ಶಿಲ್ಪಾ ಗಣೇಶ್ ನಿರ್ಮಾಣದ ಗೀತಾ ಇಂತಹ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲಿಗೆ ಚಿತ್ರ ಅರ್ಧ ಗೆದ್ದಂತೆ. ಟ್ರೇಲರ್ ಉದ್ದೇಶವೇ ಅದು, ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸುವುದು. ಸೆನ್ಸಾರ್ ಮೆಚ್ಚುಗೆ ಪಡೆದಿರುವ ಸಿನಿಮಾ ಇದೇ ತಿಂಗಳ ಕೊನೆಯಲ್ಲಿ 27ನೇ ತಾರೀಕು ರಿಲೀಸ್ ಆಗುತ್ತಿದೆ.

 • ಗೀತಾ ಹೆಸರೊಂದೇ ಅಲ್ಲ.. ಹೀರೋನಲ್ಲೂ ಶಂಕರ್ ನೆನಪು..!

  link between ganesh and shankaer nag in geetha

  ಗೀತಾ ಸೆ.26ರಂದು ರಿಲೀಸ್ ಆಗುತ್ತಿರುವ ಚಿತ್ರ. ಗೀತಾ, ಕನ್ನಡ ಚಿತ್ರರಂಗದ ಕ್ಲಾಸಿಕ್‍ಗಳಲ್ಲಿ ಒಂದು. ಶಂಕರ್‍ನಾಗ್ ನಟಿಸಿ ನಿರ್ದೇಶಿಸಿದ್ದ ಚಿತ್ರವದು. ಇಂದಿಗೂ ಆ ಚಿತ್ರ, ಕಥೆ, ಹಾಡು ಪ್ರೇಕ್ಷಕರ ಮನಸ್ಸಿನಲ್ಲಿ ಅಮರವಾಗಿರುವಾಗ ಅದೇ ಹೆಸರಿನ ಚಿತ್ರದಲ್ಲಿ ಗಣೇಶ್ ಅಭಿನಯಿಸಿದ್ದು ಸಹಜವಾಗಿಯೇ ಶಂಕರ್ ನಾಗ್ ನೆನಪು ತರಿಸಿತ್ತು.

  ಆ ಗೀತಾ ಚಿತ್ರದಲ್ಲಿ ಶಂಕರ್ ನಾಗ್ ಹೆಸರು ಸಂಜಯ್. ಆದರೆ, ಈ ಗೀತಾ ಚಿತ್ರದಲ್ಲಿ ಹೀರೋ ಗಣೇಶ್ ಹೆಸರೇ ಶಂಕರ್. ಆ ಮೂಲಕ ಶಂಕರ್ ಆಗಿ ನಟಿಸಿರುವ ಗಣೇಶ್, ಶಂಕರ್ ನಾಗ್‍ರನ್ನು ಆ ಮೂಲಕ ನೆನಪಿಸಿಕೊಂಡಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನದ ಚೊಚ್ಚಲ ಚಿತ್ರದಲ್ಲಿ ಗೋಕಾಕ್ ಚಳವಳಿಯ ಕಥೆಯೂ ಇದೆ.

  ಇನ್ನೂ ಒಂದು ವಿಶೇಷವೆಂದರೆ ಗೋಕಾಕ್ ಚಳವಳಿಯ ನೇತೃತ್ವ ವಹಿಸಿದ್ದವರು ಡಾ.ರಾಜ್. ಆಗಿನ ಕಾಲದ ದೃಶ್ಯಗಳೂ ಇವೆ. ಡಾ.ರಾಜ್ ಅವರಷ್ಟೇ ಅಲ್ಲ, ಶಂಕರ್ ನಾಗ್ ಸೇರಿದಂತೆ ಆಗಿನ ಎಲ್ಲ ಸ್ಟಾರ್‍ಗಳೂ ಚಳವಳಿಯಲ್ಲಿ ನಟಿಸಿದ್ದರು.

  ಮತ್ತೊಂದು ವಿಶೇಷ, ಶಂಕರ್‍ನಾಗ್‍ರ ಗೀತಾ ಚಿತ್ರಕ್ಕೆ ಅರುಂಧತಿ ನಾಗ್ ಜೊತೆಯಾಗಿದ್ದರು. ಚಿತ್ರಕಥೆಯಲ್ಲಿ ಅರುಂಧತಿ ನಾಗ್ ಕೆಲಸ ಮಾಡಿದ್ದರು. ಗಣೇಶ್‍ರ ಈ ಗೀತಾ ಚಿತ್ರಕ್ಕೆ ಗಣೇಶ್ ಅವರ ಪತ್ನಿ ಶಿಲ್ಪಾ ಕೆಲಸ ಮಾಡಿದ್ದಾರೆ. ನಿರ್ಮಾಪಕಿಯಾಗಿ.

 • ಗೋಕಾಕ್ ಚಳವಳಿಯಲ್ಲಿ ಕಣ್ಣೀರಿಟ್ಟಿದ್ದರು ಡಾ.ರಾಜ್. ಇಂದು..?

  gokak movement and dr rajkumar emotions in geetha movie

  ಡಾ.ರಾಜ್ ಕುಮಾರ್, ಕನ್ನಡದ ಧ್ರುವತಾರೆ. ಕನ್ನಡವನ್ನು, ಕನ್ನಡತನವನ್ನು ಎತ್ತಿ ಹಿಡಿದ ಕಲಾವಿದ. ಇಂತಹ ಡಾ.ರಾಜ್, ಗೋಕಾಕ್ ಚಳವಳಿಯ ಕಾಲದಲ್ಲಿ ವೇದಿಕೆಯಲ್ಲೇ ಕಣ್ಣೀರಿಟ್ಟಿದ್ದರು. ಅವರ ಕಣ್ಣಿರಿಗೆ ಕಾರಣವೂ ಇತ್ತು.

  `ಕರ್ನಾಟಕದಲ್ಲಿ ಕನ್ನಡಿಗರು, ಕನ್ನಡಿಗರಾದ ನಾವೇ.. ಕನ್ನಡವನ್ನು ಉಳಿಸಿ ಎಂದು ಕನ್ನಡಿಗರನ್ನೇ ಕೇಳಬೇಕಾದ ಪರಿಸ್ಥಿತಿ ಬಂದಿದೆ. ಅಧಿಕಾರದಲ್ಲಿರುವುವವರು ಕನ್ನಡಿಗರೇ ಆದರೂ ಬಾಯಿಬಡಿದುಕೊಂದು ಕೇಳಬೇಕಾದ ಪರಿಸ್ಥಿತಿ ಬರಬಾರದಿತ್ತು' ಎಂದು ಚಳವಳಿಯಲ್ಲಿ ಬಹಿರಂಗ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದರು ರಾಜ್.

  ಅದೆಲ್ಲವನ್ನೂ ಗೀತಾ ಚಿತ್ರದಲ್ಲಿ ಪರಿಣಾಮಕಾರಿಯಾಗಿಯೇ ಬಳಸಿಕೊಳ್ಳಲಾಗಿದೆ. 1982ರಲ್ಲಿ ಕನ್ನಡ, ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಕೂಗೆದ್ದಿತ್ತು. ಈಗಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆಗಲೂ ಕನ್ನಡ ವಿರೋಧಿ ಮನಸ್ಸುಗಳು ಕರ್ನಾಟಕದಲ್ಲಿದ್ದವು. ಈಗಲೂ ಇವೆ. ಹೀಗಾಗಿಯೇ ಗೀತಾ ಚಿತ್ರ ಅತ್ಯಂತ ಪ್ರಸ್ತುತವೆನ್ನಿಸುವುದು.

  ವಿಜಯ್ ನಾಗೇಂದ್ರ ನಿರ್ದೇಶನದಲ್ಲಿ ಗೋಕಾಕ್ ಚಳವಳಿಯ ಹಿನ್ನೆಲೆಯನ್ನು ಚೆಂದವಾಗಿ ಕಟ್ಟಿಕೊಡಲಾಗಿದೆ. ಸಿನಿಮಾ ಥಿಯೇಟರುಗಳಲ್ಲಿದೆ. 

Shivarjun Movie Gallery

KFCC 75Years Celebrations and Logo Launch Gallery