` golden star ganesh, - chitraloka.com | Kannada Movie News, Reviews | Image

golden star ganesh,

  • Will 'Gimmick' and 'Kempegowda 2' Get postponed?

    will gimmick and kempegowds 2 gets postponed

    Darshan starrer 'Kurukshetra 2' which was supposed to release on the 02nd of August has been postponed and will be releasing on the 09th of August. With the film being postponed, there is a question in everybody's mind whether 'Gimmick' and 'Kempegowda 2' will also be postponed?

    Earlier, 'Kurukshetra' and 'Phailwan' was said to release on the 09th of August. So, many teams pushed their release to further dates. But due to various  reasons 'Kurukshetra' got preponed, while 'Phailwan' was postponed. With no releases on the festival day, Ganesh starrer 'Gimmick', Komal's comeback film 'Kempegowda 2' and Raj B Shetty's 'Mahira' planned to release on the 09th of August.

    Now 'Kurukshetra' is back on the same day due to various reasons. With a big film like 'Kurukshetra', will other teams including that of 'Gimmick' and 'Kempegowda 2' dare to release their film on the same day or will they get postponed to further dates is yet to be seen.

  • Yogaraj Bhatt And Ganesh Join Hands

    ganesh, yogaraj bhat image

    After 'Mungaru Male' and 'Galipata', the hit combination of Yogaraj Bhatt and Ganesh has joined hands for yet another film and the film is all set to go on floors in the month of April. Bhatt and Ganesh's last film together was 'Galipata' which was released seven years back. After that there was news that the duo may join hands together yet again. But both were busy with their prior commitments. Now the duo has decided to work together and Bhatt is expected to start the work of the film after 'Vaasthu Prakara' gets released.

    Though not much details about the film has been divulged, it is being said that B Suresha will be producing the film.

  • Yogaraj Bhatt To Do A Film With Ganesh

    yograj bhatt, ganesh image

    After 'Mungaru Male' and 'Galipata', the hit combination of Yogaraj Bhatt and Ganesh has joined hands for yet another film and the film is all set to go on floors in the month of September.

    Bhatt and Ganesh's last film together was 'Galipata' which was released eight years back. After that there was news that the duo may join hands together yet again. But both were busy with their prior commitments. Last year there was a news that Ganesh would be acting in Yogaraj Bhatt's film to be produced by B Suresha. However, the film did not take off.

    Now Yogaraj Bhatt himself has confirmed that he will be doing a film with Ganesh under his banner. The artistes and technicians of the film are yet to be decided.

  • Yogaraj Bhatt's New Film Titled Mugulunage

    yogaraj bhatt ganesh image

    Yogaraj Bhatt's new film starring Ganesh is all set to be launched in the month of December. Meanwhile, the film has been titled as 'Mugulunage'.

    The new film has four heroines and Amulya, 'Jackie' Bhavana, Nikitha Narayan and Ashitha have been roped into play the female leads of the film.The new film is jointly produced by Golden Movies as well as Yogaraj Movies.

    The shooting for 'Mugulunage' will be held in Bangalore, Pondicherry, Mysore and other places. Sugnan is the cameraman, while V Harikrishna is the music director. Yogaraj Bhatt himself has written the story, screenplay and dialogues of the film.

  • Zoom 50 Days Celebrated

    zoom 50 days celebration image

    Ganesh starrer 'Zoom' directed by Prashanth Raj which was released on the 01st of July will be completing 50 days next week. Meanwhile, director Prashanth Raj had organised a 50 days function at the Chowdaiah Memorial Hall on Friday.

    The 50 days event was attended by Ganesh, Prem, Ravishankar Gowda, corporator Yuvaraj, Kashinath, Jayalakshmi and others. Many artistes and technicians who had worked for the film were honoured during this function.

    'Zoom' is written and directed by Prashanth Raj. S S Thaman has composed the songs for the film, while Santhosh Rai Pathaje has worked as a cinematographer for this film.

    Zoom Movie Gallery - View

    Also Read

    Zoom 50 Days Celebrations On August 12th

    Zoom is BBFC Certified

    Zoom Collects 10 Crores In 25 Days

    Zoom Rakes In Five Crores In Three Days

    Zoom Movie Review 

    Zoom To Be Dubbed In French, Korean and Malay languages

    Zoom To Release In Africa Also

    Zoom Trailer To Be Released On The 12th Of June

    Zoom Audio Released

    Murali Sings a Song For Ganesh's Zoom

    Ganesh in Italy For Zoom Shooting

    Kashinath Returns To Zoom as Scientist

     

  • Zoom 50 Days Celebrations On August 12th

    zoom movie image

    Ganesh starrer 'Zoom' directed by Prashanth Raj which was released on the 01st of July will be completing 50 days next week. Meanwhile, director Prashanth Raj has planned to organised 50 days function at the Chowdaiah Memorial Hall in Bangalore on the 12th of August.

    A grand event has been organised on the auspicious day of the Varamhalakshmi festival at Chowdaiah Memorial Hall and many artistes and technicians are expected to be a part of the event. Artistes and technicians who have worked for the film will be honoured there.

    'Zoom' is written and directed by Prashanth Raj. S S Thaman has composed the songs for the film, while Santhosh Rai Pathaje has worked as a cinematographer for this film.

  • Zoom To Be Dubbed In French, Korean and Malay languages

    zoom movie image

    Ganesh and Radhika Pandith starrer Zoom is all set to be released on the 01st of July. The film will be releasing in 11 states as well as many countries simultaneously.Another highlight of the film is, it is all set to be dubbed in French, Korean and Malay languages and the dubbed versions will be releasing by the second week of July. Already the dubbing is under progress and is expected to conclude soon.

    The film is being written and directed by Prashanth Raj. S S Thaman has composed the songs for the film, while Santhosh Rai Pathaje is the cameraman. Ganesh, Radhika Pandith, Kashinath, Sadhu Kokila and others play prominent roles in the film.

    Zoom Movie Gallery - View

    Also See

    Zoom To Release In Africa Also

    Zoom Trailer To Be Released On The 12th Of June

    Zoom Audio Released

    Murali Sings a Song For Ganesh's Zoom

    Ganesh in Italy For Zoom Shooting

    Kashinath Returns To Zoom as Scientist

    Ramya Promotes Aryan in Full Zoom

     

  • Zoom To Release In Africa Also

    zoom movie image

    Kannada films releasing in America, Europe, Australia and Middle East is not a big deal in these days. Now Ganesh starrer Zoom is all set to be released in Africa simultaneously for the very first time. Zoom is all set to be released on the 01st of July and apart from getting released in India, North America, Europe, Middle East and Australia, the film is also being released in Johannesburg and Cape Town (South Africa), Lusaka, Aaccra, Cairo, Kampala, Nairobi, Lagos and Kigali.

    The film is being written and directed by Prashanth Raj. S S Thaman has composed the songs for the film, while Santhosh Rai Pathaje is the cameraman.

    Zoom Movie Gallery - Click

    Also See

    Zoom Trailer To Be Released On The 12th Of June

    Zoom Audio Released

    Murali Sings a Song For Ganesh's Zoom

    Ganesh in Italy For Zoom Shooting

    Kashinath Returns To Zoom as Scientist

  • Zoom Trailer To Be Released On The 12th Of June

    zoom movie image

    Ganesh starrer ‘Zoom’ is scheduled for a July 01st release worldwide. Meanwhile, director Prashanth Raj is all set to release the trailer of the film on the 12th of June. The trailer release is organized in the Urvashi Theater in Bangalore at 6 PM and many stars including Ganesh, Radhika Pandith, Prem and others are expected to be a part of this trailer release function.

     ‘Zoom’ is being written and directed by Prashanth Raj. S S Thaman has composed the songs for the film, while Santhosh Rai Pathaje is the cameraman

  • ಅಂದು ಶಿವಣ್ಣ.. ಇಂದು ಗಣೇಶ್..

    ganesh's daughter in chamak

    ಇದು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಚಿತ್ರದ ಕಥೆ. ಚಿತ್ರದಲ್ಲಿ ಗಣೇಶ್ ಮಗಳು ಚಾರಿತ್ರ್ಯ ನಟಿಸುತ್ತಿರುವ ಸುದ್ದಿ ಹಳೆಯದು. ಈಗ ಆ ಪಾತ್ರದ ಶೂಟಿಂಗ್ ಮುಗಿದಿದೆ. ಚಿತ್ರದಲ್ಲಿ ಚಾರಿತ್ರ್ಯ ಗಣೇಶ್ ಮಗಳಾಗಿ ನಟಿಸುತ್ತಿದ್ದಾರೆ.

    ಚಿತ್ರದಲ್ಲಿ ಚಾರಿತ್ರ್ಯ ಕೆಲವೇ ದೃಶ್ಯಗಳಲ್ಲಿ ಬಂದು ಹೋಗುತ್ತಾರಾದರೂ ಚಿತ್ರದಲ್ಲಿ ಅವು ಪ್ರಮುಖ ದೃಶ್ಯಗಳಂತೆ. ಉದಯರವಿ ಬಂದನು ಎನ್ನುತ್ತಾ ಎಂಟ್ರಿ ಕೊಡುತ್ತಾಳಂತೆ ಚಾರಿತ್ರ್ಯ. ಈ ಹಿಂದೆ ಅಂಡಮಾನ್ ಚಿತ್ರದಲ್ಲಿ ಶಿವರಾಜ್ ಕುಮಾರ್ ಮಗಳು, ಸಿನಿಮಾದಲ್ಲೂ ಮಗಳಾಗಿಯೇ ನಟಿಸಿದ್ದರು. ಈಗ ಗಣೇಶ್ ಟೈಂ.

    Related Articles :-

    Ganesh's Daughter Acts In Chamak

  • ಅನಂತನಾಗ್ ಸೂಪರ್ ಹಿಟ್

    ಅನಂತನಾಗ್ ಸೂಪರ್ ಹಿಟ್

    ಅನಂತನಾಗ್ ಮತ್ತೊಮ್ಮೆ ಹೀರೋ ಆಗಿದ್ದಾರೆ. ಅದು ಗಾಳಿಪಟದಲ್ಲಿ. ಅರೆ ಚಿತ್ರದ ಹೀರೋ ಗಣೇಶ್ ಅಲ್ಲವಾ ಎನ್ನಬೇಡಿ. ಗಣೇಶ್ ಹೀರೋ. ಡೌಟಿಲ್ಲ. ದಿಗಂತ್, ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್.. ಹೀಗೆ ಎಲ್ಲರೂ ಇದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನ.. ಎಲ್ಲವೂ ಇದ್ದು ಚಿತ್ರದಲ್ಲಿ ಪ್ರೇಕ್ಷಕರಿಗೆ ಅನಂತನಾಗ್ ಅವರ ಅಮೋಘ ಅಭಿನಯಕ್ಕೆ ಪ್ರೇಕ್ಷಕರು ಉಘೇ ಎಂದಿದ್ದಾರೆ.

    ಕನ್ನಡ ಮೇಷ್ಟ್ರು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಅನಂತನಾಗ್, ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಂತೂ ಪ್ರೇಕ್ಷಕರ ಕಣ್ಣಂಚು ಒದ್ದೆಯಾಗಿಸಿದ್ದಾರೆ.

    ಭಟ್ಟರ ಚಿತ್ರಗಳಲ್ಲಿ ಅನಂತ್ ನಾಗ್ ಹೆಚ್ಚೂ ಕಡಿಮೆ ಖಾಯಮ್ಮಾಗಿರುತ್ತಾರೆ. ಮುಂಗಾರು ಮಳೆ, ಗಾಳಿಪಟ, ಪಂಚರಂಗಿ, ವಾಸ್ತುಪ್ರಕಾರ.. ಹೀಗೆ ಬಹುತೇಕ ಎಲ್ಲ ಚಿತ್ರಗಳಲ್ಲೂ ಇದ್ದ ಅನಂತನಾಗ್ ಗಾಳಿಪಟ 2 ದಲ್ಲಿ ಪಾತ್ರವನ್ನು ಆವಾಹಿಸಿಕೊಂಡಿದ್ದಾರೆ. ಪ್ರೇಕ್ಷಕರನ್ನು ಭಾವುಕರನ್ನಾಗಿಸಿದ್ದಾರೆ. ಅನಂತ್ ಅವರಿಗೇ ಮಾತು ಮೌನದಲ್ಲಿ ಪೈಪೋಟಿ ನೀಡಿರುವುದು ಗಣೇಶ್.

    ಗೋಧಿಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಅನಂತನಾಗ್ ನೆನಪಾಗುತ್ತಾರೆ.

  • ಅರೆರೆರೆರೇ... ಸಕ್ಕತ್‍ನಲ್ಲಿ ಹನುಮನ ಕಥೆನಾ..?

    what is the story of sakkath

    ಸಿಂಪಲ್ ಸುನಿ, ಗೋಲ್ಡನ್ ಸ್ಟಾರ್ ಕಾಂಬಿನೇಷನ್‍ನ ಸಕ್ಕತ್ ಚಿತ್ರ ಪೋಸ್ಟರ್ ಹೊರಬಿದ್ದಿದ್ದೇ ತಡ.. ಎಲ್ಲರಲ್ಲೂ ಒಂದು ಪ್ರಶ್ನೆ ಮನೆ ಮಾಡಿದೆ. ಕುತೂಹಲ ಹುಟ್ಟಿಸಿದೆ. ಆ ಕುತೂಹಲದ ಕೇಂದ್ರ ಬಿಂದುವಾಗಿರೋದು ಸದ್ಯಕ್ಕೆ ಕಿರುತೆರೆ ಸೆನ್ಸೇಷನ್ ಜವಾರಿ ಹನುಮ.

    ಹಾವೇರಿ ಮೂಲದ ಜವಾರಿ ಹನುಮಮಂತ ಕಿರುತೆರೆಗೆ ಪರಿಚಯವಾಗಿದ್ದು ಝೀ ಸರಿಗಮಪ ಮೂಲಕ. ಅದೇನೋ ಎಂತೋ.. ಕಿರುತೆರೆಯಲ್ಲಿ ಕ್ರಾಂತಿಯನ್ನೇ ಮಾಡಿಬಿಟ್ಟ ಹನುಮಂತ. ಇವತ್ತಿಗೂ ಹನುಮಂತನ ಹಾಡುಗಳಿಗೆ ಕಿರುತೆರೆಯಲ್ಲಿ ಒಳ್ಳೆಯ ಟಿಆರ್‍ಪಿ ಇದೆ.

    ಈಗ ಗಣೇಶ್ ಲುಕ್ ಹೊರಬಿತ್ತಲ್ಲ.. ಅಲ್ಲಿ ಎಲ್ಲರಿಗೂ ಈ ಪ್ರಶ್ನೆ ಮೂಡೋಕೆ ಕಾರಣವಾಗಿದ್ದು ಲುಂಗಿ. ಗಣೇಶ್ ಧರಿಸಿರೋ ಲುಂಗಿ, ಹಾಡುತ್ತಿರುವ ಸ್ಟೈಲು ಎಲ್ಲವೂ ಹನುಮನನ್ನೇ ನೆನಪಿಸಿದೆ. ಹಾಗಾದರೆ.. ಇದು ಆ ಕಥೆನಾ..?

    ಸಿಂಪಲ್ ಸುನಿ ಸಿಂಪಲ್ಲಾಗ್ ಕೇಳಿದ್ರೂ.. ಸೀರಿಯಸ್ಸಾಗ್ ಕೇಳಿದ್ರೂ.. ಏನೂ ಹೇಳಲ್ಲ.

  • ಅರೆರೇ ಗಣೇಶ್.. ಇದೆಂಥಾ ಶಾಕ್..?

    ganesh gives sweet shock to his fans in geetha

    ಗೀತಾ ಚಿತ್ರ ರಿಲೀಸ್ ಆಗಿದೆ. ಗೋಕಾಕ್ ಕನ್ನಡ ಚಳವಳಿಯ ಹಿನ್ನೆಲೆಯಲ್ಲಿ ಅರಳುವ ಪ್ರೇಮ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಒಳ್ಳೆಯ ವಿಮರ್ಶೆಯನ್ನೂ ಪಡೆದಿದೆ. ಒಂದು ನವಿರಾದ ಪ್ರೇಮಕಥೆ, ಕನ್ನಡದ ಐತಿಹಾಸಿಕ ಹೋರಾಟ.. ಈ ಎರಡನ್ನೂ ಅದ್ಭುತವಾಗಿ ಬೆರೆಸಿಕೊಟ್ಟು ಗೆದ್ದಿರುವುದು ವಿಜಯ್ ನಾಗೇಂದ್ರ. ಇಷ್ಟೆಲ್ಲದರ ನಡುವೆಯೂ ಪ್ರೇಕ್ಷಕರಿಗೆ ಹಿತವಾದ ಶಾಕ್ ಕೊಟ್ಟಿದ್ದಾರೆ ನಿರ್ದೇಶಕ ವಿಜಯ್.

    ಚಿತ್ರದಲ್ಲಿ ಗಣೇಶ್ ಪಾತ್ರದ ಹೆಸರು ಶಂಕರ್ ಎನ್ನುವುದು ಗೊತ್ತಾಗಿತ್ತು. ಆದರೆ, ಅಪ್ಪಿ ತಪ್ಪಿಯೂ ಗಣೇಶ್ ಈ ಸಿನಿಮಾದಲ್ಲಿ ಎರಡು ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಿರಲಿಲ್ಲ. ಸಿನಿಮಾ ನೋಡುವಾಗ ಅದೊಂದು ಅಚ್ಚರಿ ಪ್ರೇಕ್ಷಕನಿಗೆ ಆಗದೇ ಇರದು. ತಂದೆ-ಮಗ ಎರಡೂ ಪಾತ್ರಗಳಲ್ಲಿ ಮಿಂಚಿರುವ ಗಣೇಶ್, ಕನ್ನಡ ಹೋರಾಟಗಾರನ ಪಾತ್ರದಲ್ಲಂತೂ ಪರಕಾಯ ಪ್ರವೇಶ ಮಾಡಿದ್ದಾರೆ. ಹಿತವಾದ ಶಾಕ್‍ನ್ನು ಖುಷಿಯಿಂದಲೇ ಸಂಭ್ರಮಿಸುತ್ತಿದ್ದಾರೆ ಪ್ರೇಕ್ಷಕರು.

  • ಅಲ್ಲಿ 96.. ಇಲ್ಲಿ 99.. ಅಲ್ಲಿ ವಿಜಯ್.. ಇಲ್ಲಿ ಗಣೇಶ್

    tamil 96 movie to be remade in kannada

    ಇತ್ತೀಚೆಗೆ ಬಿಡುಗಡೆಯಾದ ವಿಜಯ್ ಸೇತುಪತಿ-ತ್ರಿಷಾ ಅಭಿನಯದ ತಮಿಳು ಸಿನಿಮಾ 96, ದೊಡ್ಡ ಮಟ್ಟದ ಬ್ಲಾಕ್‍ಬಸ್ಟರ್ ಎನಿಸಿಕೊಂಡಿತು. ಈ ಮಧುರ ಪ್ರೇಮಕಥೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿ, ಸಿನಿಮಾ ಹಿಟ್ ಆಗಿದ್ದು ಈಗ ಇತಿಹಾಸ. ಆ ಚಿತ್ರವನ್ನು ಕನ್ನಡದಲ್ಲಿ ಮಾಡಲು ಮುಂದಾಗಿದ್ದಾರೆ ನಿರ್ಮಾಪಕ ರಾಮು.

    ಕನ್ನಡದಲ್ಲಿ 96 ರೀಮೇಕ್‍ಗೆ ನಿರ್ದೇಶನದ ಹೊಣೆ ಹೊತ್ತಿರುವುದು ಪ್ರೀತಂ ಗುಬ್ಬಿ. ಚಿತ್ರಕ್ಕೆ 96 ಬದಲು, 99 ಅನ್ನೋ ಹೆಸರಿಡಲಾಗಿದೆ. ವಿಜಯ್ ಸೇತುಪತಿ ಪಾತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ನಾಯಕಿಯ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಅರ್ಜುನ್ ಜನ್ಯ, ಸಂಗೀತ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

  • ಅಲ್ಲಿ ತಂದೆ ಸಾವು.. ಇಲ್ಲಿ ಕಾಮಿಡಿಯ ನೋವು.. ಗಣೇಶ್ ಹೇಳಿದ ಕಣ್ಣೀರ ಕಥೆ 

    gimmick team reveals heart touching story

    ಒಬ್ಬ ನಟನ ವೃತ್ತಿಪರತೆಗೆ ಆಗಾಗ್ಗೆ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಗಿಮಿಕ್ ಚಿತ್ರದ ಚಿತ್ರೀಕರಣದ ವೇಳೆ ನಾಗಣ್ಣ ಹೇಳಿದ ಕಥೆ ಕೇಳಿದರೆ.. ಕಣ್ಣೀರು ಬಾರದೇ ಇರದು. ಗಿಮಿಕ್ ಚಿತ್ರವನ್ನು ದೊಡ್ಡಬಳ್ಳಾಪುರದ ಬಳಿಯ ಬಂಗಲೆಯೊಂದರಲ್ಲಿ ಶೂಟ್ ಮಾಡುತ್ತಿದ್ದಾಗ, ಗಣೇಶ್ ಅವರಿಗೆ ತಂದೆಯ ಸಾವಿನ ಸುದ್ದಿ ಗೊತ್ತಾಯಿತು. ಆದರೆ, ಗಣೇಶ್ ಆ ದಿನದ ತಮ್ಮ ದೃಶ್ಯಗಳ ಶೂಟಿಂಗ್‍ನ್ನು ಮುಗಿಸಿಯೇ ಹೊರಟರಂತೆ.

    ಅದಕ್ಕೆ ಕಾರಣವಿತ್ತು. ನಮಗೆ ಆ ಬಂಗಲೆ ಶೂಟಿಂಗ್‍ಗೆ ನೀಡಿದ್ದ ಕೊನೆಯ ದಿನವಾಗಿತ್ತು. ಎಲ್ಲ ಕಲಾವಿದರೂ ಅಲ್ಲಿಯೇ ಇದ್ದರು. ಅದನ್ನು ಮುಂದೂಡಿದರೆ.. ಇಡೀ ಚಿತ್ರತಂಡಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿತ್ತು. ಇದನ್ನೆಲ್ಲ ತಿಳಿದುಕೊಂಡಿದ್ದ ಗಣೇಶ್ ತಮ್ಮ ಪಾಲಿನ ದೃಶ್ಯಗಳನ್ನು ಮುಗಿಸಿಯೇ ತಂದೆಯ ಅಂತ್ಯ ಸಂಸ್ಕಾರಕ್ಕೆ ಹೊರಟರು ಎನ್ನುತ್ತಾರೆ ನಾಗಣ್ಣ.

    ತಂದೆಯ ಸಾವಿನ ನೋವಿನ ನಡುವೆ ಆ ದಿನ ಗಣೇಶ್ ನಟಿಸಿದ್ದು ಕಾಮಿಡಿ ದೃಶ್ಯಗಳಲ್ಲಿ ಎನ್ನುವಾಗ ಭಾವುಕರಾಗಿದ್ದರು ನಾಗಣ್ಣ. ಆ ದಿನ ನಟಿಸುವುದು ಸುಲಭವಾಗಿರಲಿಲ್ಲ. ಕಲಾವಿದರ ಮನಸ್ಸು ಡಿಸ್ಟರ್ಬ್ ಆದರೆ ನಟಿಸುವುದು ಎಷ್ಟು ಕಷ್ಟ ಎನ್ನುವುದು ನನಗೆ ಆ ದಿನ ಅರಿವಾಯಿತು ಎಂದಿದ್ದಾರೆ ಗಣೇಶ್. 

    ಗಣೇಶ್ ಅವರ ಈ ಘಟನೆ, ಈ ಹಿಂದೆ.. ಪ್ರೀತಿಯ ಮಗು ಮೃತಪಟ್ಟ ಸುದ್ದಿ ಕೇಳಿಯೂ, ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸಿದ್ದ ಎನ್‍ಟಿಆರ್ ವೃತ್ತಿಪರತೆ ನೆನಪಿಸಿದೆ. ಗಿಮಿಕ್ ಇದೇ ವಾರ ಬಿಡುಗಡೆಯಾಗುತ್ತಿದೆ.

    ನಿರ್ದೇಶಕರಿಗೆ ತಿಳಿದರೂ ಸೀನ್‍ಗೆ ಆ್ಯಕ್ಷನ್ ಕಟ್ ಹೇಳೋಕೆ ಆಗಲ್ಲ ಎಂದು ನಿರ್ದೇಶಕ ನಾಗಣ್ಣರಿಂದಲೂ ವಿಷಯ ಮುಚ್ಚಿಟ್ಟಿದ್ದರಂತೆ ಗಣೇಶ್. ನಿರ್ಮಾಪಕ ದೀಪಕ್ ಸಾಮಿ ಹಾಗೂ ನಟ ರವಿಶಂಕರ್ ಅವರಿಗೆ ಮಾತ್ರ ಗಣೇಶ್ ತಂದೆಯ ಸಾವಿನ ವಿಷಯ ಗೊತ್ತಿತ್ತಂತೆ.

  • ಅವಲಕ್ಕಿ.. ಬುವಲಕ್ಕಿ.. ಚಮಕ್ಕು..ಚಮಕ್ಕು..

    avalakki buvalakki

    ಅವಲಕ್ಕಿ ಪವಲಕ್ಕಿ.. ಕಾಂಚಣ ಮಿಣಮಿಣ.. ಏನ್ ನೆನಪಾಗುತ್ತೆ..? ಕಣ್ಣಾಮುಚ್ಚೆ ಕಾಡೇಗೂಡೆ.. ಉದ್ದಿನಮೂಟೆ.. ಉರುಳೇಹೋಯ್ತು.. ಕಣ್ಣ ಮುಂದೆ ಏನ್ ಬಂತು..? 

    ಗೇರ್ ಗೇರ್ ಮಂಗಣ್ಣ.. ಒಂದೂ ಎರಡು.. ರತ್ತೋ ರತ್ತೋ ರಾಯನ ಮಗಳೇ.. ಅರೆ ಇವೆಲ್ಲ ನಾವು ಚಿಕ್ಕ ವಯಸ್ಸಿನಲ್ಲಿದ್ದಾಗ ಹಾಡುತ್ತಿದ್ದ ಹಾಡುಗಳು ಅಂದ್ಕೊಂಡ್ರಾ..? ನಾವು ಕೇಳಿ, ಹಾಡಿ ಮರೆತಿರಬಹುದು. ಆದರೆ, ಸಿಂಪಲ್ ಸುನಿ ಮರೆತಿಲ್ಲ. ಅವರು ಅವುಗಳನ್ನೇ ಇಟ್ಟುಕೊಂಡು ಹಾಡು ಹೊಸೆದು ಒಂದು ಚಮಕ್ ಕೊಟ್ಟೇಬಿಟ್ಟಿದ್ದಾರೆ.

    ಈ ಎಲ್ಲ ಹಾಡುಗಳನ್ನೂ ಇಟ್ಟುಕೊಂಡು ಒಂದು ಹಾಡು ಮಾಡೋದು ಹೇಗೆ ಸಾಧ್ಯ..? ಅನ್ನೋದು ನಿಮ್ಮ ಪ್ರಶ್ನೆಯಾದರೆ, ಸಿಂಪಲ್ ಸುನಿಗೆ ಸಿಂಪಲ್ಲಾಗಿ ಹೇಳೋಕೆ ಬರೊಲ್ವಾ ಅನ್ನೋ ರೀತಿ ನಕ್ಕಿದ್ದಾರೆ ಸುನಿ. ಹಾಡು ಕೇಳಿದರೆ, ಹೀರೋ-ಹೀರೋಯಿನ್ ಒಬ್ಬರಿಗೊಬ್ಬರು ಸವಾಲು ಹಾಕಿಕೊಳ್ಳೋ ಸ್ಟೈಲ್‍ನಲ್ಲಿರೋ ಹಾಗಿದೆ.

    ಗಣೇಶ್-ರಶ್ಮಿಕಾ ಅದೆಂಥಾ ಚಮಕ್ ಕೊಟ್ಟಿದ್ದಾರೆ ನೋಡೋಣ. ಪೊಗರಿನ ಮೂಟೆ.. ನಮ್ಮ ಚಿಟ್ಟೆ.. ಬಿಟ್ಟೆ ಬಿಟ್ಟೆ.. ಬಿಟ್ಟೆ.. ಬಿಟ್ಟೆ ಡಿ.29ಕ್ಕೆ..

  • ಆ ಗಾಳಿಪಟದ ಈ ಗಾಳಿಪಟದ ಗಣಿಗೂ ಏನು ಡಿಫರೆನ್ಸು?

    ಆ ಗಾಳಿಪಟದ ಈ ಗಾಳಿಪಟದ ಗಣಿಗೂ ಏನು ಡಿಫರೆನ್ಸು?

    ಆ ಗಾಳಿಪಟ ನೋಡಿದ್ದರೆ.. ಗಣಿಯ ಪಾತ್ರ ಖಂಡಿತಾ ನಿಮ್ಮ ಮನಸ್ಸಿನಲ್ಲಿರುತ್ತೆ. ಬೋರ್ಡಿಂಗ್ ಸ್ಕೂಲಿನಲ್ಲಿ ಓದಿರೋ ಕನ್ನಡ ಬರೆಯಲು, ಓದಲು ಬಾರದ ಹುಡುಗ ಗಣಿ. ಮಹಾನ್ ತಿಂಡಿಪೋತ. ಕನ್ನಡವನ್ನು ಕಲಿತು ಪ್ರಿಯತಮೆಗಾಗಿ ಕವಿತೆ ಬರೆಯುವ ಪ್ರೇಮಿ... ಆ ಗಾಳಿಪಟದ ಗಣಿ.

    ಈ ಗಾಳಿಪಟದಲ್ಲೂ ತುಂಬಾ ವ್ಯತ್ಯಾಸವೇನೂ ಇಲ್ಲ. ಹೆಸರು ಕೂಡಾ ಅದೇ, ಗಣಿ. ಗಾಳಿಪಟದಲ್ಲಿ ಮಂಡ್ಯ ಎಂಎಲ್‍ಎ ಮಗ ನಾನು. ಆ ಜೋಡಿ ರಂಗಾಯಣ ರಘು ಮತ್ತು ಪದ್ಮಜಾ ರಾವ್ ಇಲ್ಲಿಯೂ ಅದೇ ಪಾತ್ರದಲ್ಲಿದ್ದಾರೆ. ಅಲ್ಲಿನಂತೆಯೇ ಇಲ್ಲಿಯೂ ತಿಂಡಿಪೋತ ನಾನು. ಚಿತ್ರದ ಮೊದಲಾರ್ಧದಲ್ಲಿ ದುಂಡು ದುಂಡಗೆ ಇರುತ್ತೇನೆ. ನಂತರ ಸಣ್ಣಗಾಗುತ್ತೇನೆ. 8 ಕೆಜಿ ತೂಕ ಹೆಚ್ಚಿಸಿಕೊಂಡು.. ನಂತರ 5 ಕೆಜಿ ಇಳಿಸಿಕೊಂಡು ಫಿಟ್ ಆಗಿದ್ದೇನೆ... ಎಂದೆಲ್ಲ ವಿವರ ಕೊಟ್ಟಿದ್ದಾರೆ ಗಣಿ.

    ಗಾಳಿಪಟದಲ್ಲಿ ಆ ಗಣಿಗೆ ಪ್ರೀತಿಯಾಗೋದು ವಿಧವೆಯಾಗಿರುವ ಡೈಸಿ ಬೋಪಣ್ಣ ಮೇಲೆ. ಇಲ್ಲಿ.. ವೈಭವಿ ಶಾಂಡಿಲ್ಯ ಜೋಡಿ. ಸಿಕ್ಕಾಪಟ್ಟೆ ಮಾಡ್ & ಬೋಲ್ಡ್  ಅನ್ನೋದು ಟ್ರೇಲರಿನಲ್ಲೇ ಗೊತ್ತಾಗಿದೆ. ಭಟ್ರು ಪ್ರತಿ ಪಾತ್ರವನ್ನೂ ಸ್ಪೆಷಲ್ ಆಗಿ ರೂಪಿಸಿದ್ದಾರೆ. ಅವರ ಪಾತ್ರ ಮತ್ತು ಕಲ್ಪನೆ ಯಾವಾಗಲೂ ಔಟ್ ಆಫ್ ದಿ ಬಾಕ್ಸ್ ಎಂದಿರೋ ಗಣಿಗೆ ಇಲ್ಲಿ ದೂದ್‍ಪೇಡ ದಿಗಂತ್ ಮತ್ತು ಪವನ್ ಇಬ್ಬರೂ ಫ್ರೆಂಡ್ಸ್. ಅಲ್ಲಿನಂತೆಯೇ ಇಲ್ಲಿಯೂ ಅನಂತನಾಗ್ ಇದ್ದಾರೆ. ಆ ಗಾಳಿಪಟದಲ್ಲಿ ಇಬ್ಬರು  ನಾಯಕಿಯರ ಅಪ್ಪ ಮತ್ತೊಬ್ಬ ನಾಯಕಿಯ ಮಾವನಾಗಿದ್ದವರು ಇಲ್ಲಿ ಟೀಚರ್. ಆ ಟೀಚರ್ ಸುತ್ತಲೂ ಚೆಂದದ ಕಥೆಯಿದೆ. ಆದರೆ.. ಆ ಗಾಳಿಪಟದ ಅಂಗವೈಕಲ್ಯ ಮತ್ತು ಹಂದಿಬಾಲದ ಕಥೆಯಂತೂ ಅಲ್ಲ ಅನ್ನೋದು ಗಣಿ ಕೊಡೋ ಭರವಸೆ.

    ದನಕಾಯೋದು ಸಿನಿಮಾ ಮಾಡುವಾಗ ಗಾಳಿಪಟ 2 ಚಿತ್ರದ ಕಾನ್ಸೆಪ್ಟ್ ಮೂಡಿತ್ತು. ಅದಕ್ಕೆ ಕಾರಣ ಗಣೇಶ್ ನಟಿಸಿದ್ದ ಮುಂಗಾರು ಮಳೆ 2. ಅದಾದ ಮೇಲೆ ಮುಗುಳುನಗೆ ಚಿತ್ರ ಮಾಡುವಾಗ ಕಥೆ ಒಂದು ಹದಕ್ಕೆ ಬಂತು. ಈಗ ಗಾಳಿಪಟ 2 ಸಿದ್ಧವಾಗಿದೆ. ಗಾಳಿಪಟ 3 ಮಾಡೋಕೂ ಕಥೆಯ ಎಳೆ ಸಿದ್ಧವಾಗಿದೆ ಎನ್ನುತ್ತಿದ್ದಾರೆ ಯೋಗರಾಜ್ ಭಟ್.

    ಯೋಗರಾಜ್ ಭಟ್ ಮತ್ತು ಗಣೇಶ್ ಒಟ್ಟಿಗೇ ಮಾಡುತ್ತಿರೋ 4ನೇ ಸಿನಿಮಾ ಇದು. ಇದಕ್ಕೂ ಮುನ್ನ ಮುಂಗಾರು ಮಳೆ, ಗಾಳಿಪಟ ಮತ್ತು ಮುಗುಳುನಗೆ ಮೂರೂ ಚಿತ್ರಗಳು ಸೂಪರ್ ಹಿಟ್. ಈಗ ಗಾಳಿಪಟ 2. ರಮೇಶ್ ರೆಡ್ಡಿಯವರಂತೂ ಚಿತ್ರದ ಬಗ್ಗೆ ಕೇಳಿಬರುತ್ತಿರುವ ಪಾಸಿಟಿವ್ ಮಾತುಗಳಿಂದ ಖುಷಿಯಾಗಿದ್ದಾರೆ.

  • ಆಗ ಅಣ್ಣಾಬಾಂಡ್.. ಈಗ 99.. ಏನಿದು ಸ್ಪೆಷಲ್..?

    connection between anna bond and 99

    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರದಲ್ಲಿ ಹಲವು ವಿಶೇಷಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಮ್ಯೂಸಿಕಲ್ ಲವ್ ಸ್ಟೋರಿ ಮೂಲಕ ಅರ್ಜುನ್ ಜನ್ಯಾ ಸೆಂಚುರಿ ಸ್ಟಾರ್ ಆಗಿದ್ದಾರೆ. ಗಣೇಶ್‍ಗೆ ಹೀರೋಯಿನ್ ಆಗಿ ನಟಿಸಿರುವುದು ಜಾಕಿ ಭಾವನಾ. ಗಣೇಶ್ ಜೊತೆ ಇದು ಅವರ 2ನೇ ಸಿನಿಮಾ. ನಿರ್ದೇಶಕ ಪ್ರೀತಂ ಗುಬ್ಬಿ ಚಿತ್ರಕ್ಕೆ ಕನ್ನಡದ ಸ್ಪರ್ಶ ಕೊಟ್ಟಿದ್ದಾರೆ.

    ಇದೆಲ್ಲದರ ಜೊತೆಗೆ 99, ಬೇರೆಯದೇ ದಾಖಲೆ ಬರೆಯುತ್ತಿದೆ. 99 ರಿಲೀಸ್ ಆಗುತ್ತಿರುವುದು ಮೇ 1ರಂದು. ಅಂದು ಬುಧವಾರ.

    ಸಾಮಾನ್ಯವಾಗಿ ಕನ್ನಡ ಚಿತ್ರಗಳು ಗುರುವಾರ ಇಲ್ಲವೇ ಶುಕ್ರವಾರ ರಿಲೀಸ್ ಆಗುತ್ತವೆ. 2012ರಲ್ಲಿ ಪುನೀತ್-ಸೂರಿ ಕಾಂಬಿನೇಷನ್ನಿನ ಅಣ್ಣಾಬಾಂಡ್ ಸಿನಿಮಾ ಇದೇ ರೀತಿ, ಮೇ 1ರಂದು, ಬುಧವಾರವೇ ರಿಲೀಸ್ ಆಗಿತ್ತು. ಅದು ಬಿಟ್ಟರೆ, ಈಗ 99 ಅದೇ ದಾಖಲೆ ಬರೆಯುತ್ತಿದೆ. 

  • ಆರೆಂಜ್ ಆರಂಭ

    orange movie starts

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರಶಾಂತ್ ರಾಜ್ ಮತ್ತೊಮ್ಮೆ ಒಂದಾಗಿದ್ದಾರೆ. ಚಮಕ್ ಯಶಸ್ಸಿನ ಝೂಮ್‍ನಲ್ಲಿರುವ ಗಣೇಶ್‍ಗೆ, ಪ್ರಶಾಂತ್ ರಾಜ್ ಜೊತೆ ಇದು 2ನೇ ಚಿತ್ರ. ಸಿನಿಮಾಗೆ ಗಣೇಶ್ ಅವರ ವಿವಾಹ ವಾರ್ಷಿಕೋತ್ಸವದ 10ನೇ ವರ್ಷಾಚರಣೆಯಂದೇ ಮುಹೂರ್ತ ಮಾಡಿರುವುದು ವಿಶೇಷ.

    ರಾಜರಾಜೇಶ್ವರಿ ನಗರದ ದೇವಸ್ಥಾನದಲ್ಲಿ ನಡೆದ ಮುಹೂರ್ತದಲ್ಲಿ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ ಚಿತ್ರತಂಡ. ಚಿತ್ರಕ್ಕೆ ತಂತ್ರಜ್ಞರ ಆಯ್ಕೆಯಷ್ಟೇ ಅಗಿದ್ದು, ಉಳಿದ ಕಲಾವಿದರ ಆಯ್ಕೆ ಅಂತಿಮ ಹಂತದಲ್ಲಿದೆ. 

    ಅಂದಹಾಗೆ ಗಣೇಶ್-ಶಿಲ್ಪಾ ವಿವಾಹ ವಾರ್ಷಿಕೋತ್ಸವಕ್ಕೆ ಗಣೇಶ್ ಅವರ ಖುಷಿಗೆ ಇನ್ನೂ ಒಂದು ಕಾರಣವಿತ್ತು. ಗಣೇಶ್ ಅವರ ಮಗಳು ತಮ್ಮ ಕೈಯ್ಯಾರೆ ರೂಪಿಸಿದ ಗ್ರೀಟಿಂಗ್‍ವೊಂದನ್ನು ತಂದೆ,ತಾಯಿಗೆ ಉಡುಗೊರೆಯಾಗಿ ನೀಡಿದ್ದು ಎಲ್ಲರ ಗಮನ ಸೆಳೆಯಿತು.

     

  • ಆರೆಂಜ್ ಕೂಡಾ ರಾಜಕುಮಾರನಂತೆ ಹಿಟ್ ಆಗಲಿದೆ  - ರಾಜಕುಮಾರಿ ಪ್ರಿಯಾ ಹೇಳ್ತಾರೆ ನೋಡಿ

    orange will be hit like rajakaumara

    ಆರೆಂಜ್. ರಾಜಕುಮಾರಿ ಪ್ರಿಯಾ ಆನಂದ್ ನಟಿಸಿರುವ 2ನೇ ಕನ್ನಡ ಸಿನಿಮಾ. ಈ ಚಿತ್ರದಲ್ಲಿ ಪ್ರಿಯಾ ಅಪ್ಪಟ ಮನೆ ಮಗಳು ಹಾಗೂ ಗ್ಲಾಮರ್ ಗೊಂಬೆ. ಎರಡೂ ರೀತಿಯಲ್ಲಿ ಕಾಣಿಸಿಕೊಳ್ತಾರೆ.

    `ಕನ್ನಡದಲ್ಲಿ ಕಥೆ ಚೆನ್ನಾಗಿರುತ್ತೆ. ಹೀಗಾಗಿಯೇ ನಾನು ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ತೇನೆ. ಆರೆಂಜ್‍ನಲ್ಲೂ ಅಷ್ಟೆ, ಸುಂದರ ಮತ್ತು ಅರ್ಥಪೂರ್ಣ ಕತೆ ಇದೆ. ಆರೆಂಜ್ ಕೂಡಾ ರಾಜಕುಮಾರನಂತೆಯೇ ಹಿಟ್ ಆಗಲಿದೆ' ಇದು ಪ್ರಿಯಾ ಆನಂದ್ ನಿರೀಕ್ಷೆ.

    ಚಿತ್ರದ ಟೈಟಲ್ ಆರೆಂಜ್‍ಗೂ, ನಾಯಕಿಗೂ ಸಿಕ್ಕಾಪಟ್ಟೆ ಸಂಬಂಧವಿದೆ. ಅದೇನು ಅನ್ನೋದನ್ನ ಚಿತ್ರದಲ್ಲಿಯೇ ನೋಡಿ ಅಂತಾರೆ ಪ್ರಿಯಾ ಆನಂದ್. ಗಣೇಶ್ ಮತ್ತು ಪ್ರಶಾಂತ್ ರಾಜ್ ಜೋಡಿ ಮತ್ತೊಮ್ಮೆ ಝೂಮ್ ಮ್ಯಾಜಿಕ್ ಮಾಡುವ ಉತ್ಸಾಹದಲ್ಲಿದೆ.