` nijalingappa - chitraloka.com | Kannada Movie News, Reviews | Image

nijalingappa

  • ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ : ವಿಶೇಷತೆಗಳೇನು?

    puneeth rajkumar image

    ಡಾ.ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರವಾಗಿ ಇಂದು ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ. ಇಂದು ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ. ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಯಲಿದೆ. ಗಾಯಕ ವಿಜಯ ಪ್ರಕಾಶ್ ತಂಡದವರ ಗಾಯನ ಇರಲಿದೆ. ಐದು ಸಾವಿರ ಜನಕ್ಕೆ ಪಾಸ್ ನೀಡಲಾಗುವುದು. ಮುಖ್ಯ ಅತಿಥಿಗಳಾಗಿ ಸುಧಾಮೂರ್ತಿ, ರಜನಿಕಾಂತ್, ಜ್ಯೂನಿಯರ್ ಎನ್ಟಿಆರ್  ಇರಲಿದ್ದಾರೆ.

    ಪುನೀತ್ ಅವರ ಪರವಾಗಿ ಪ್ರಶಸ್ತಿ ಸ್ವೀಕಾರ ಮಾಡಲಿರುವುದು ಅಶ್ವಿನಿ ಪುನೀತ್ ರಾಜಕುಮಾರ್. ಜೊತೆಗೆ ಇಡೀ ದೊಡ್ಮನೆಯ ಎಲ್ಲ ಕುಟುಂಬ ಸದಸ್ಯರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸ್ಪೀಕರ್ ಕಾಗೇರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸುನಿಲ್ ಕುಮಾರ್ ಸೇರಿದಂತೆ ಎಲ್ಲ ಮಂತ್ರಿಗಳು, ಶಾಸಕರು ಭಾಗಿಯಾಗಲಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿ ಪೂರ್ಣ ಬೆಳ್ಳಿಯಲ್ಲಿ ಇರಲಿದೆ. 50 ಗ್ರಾಂ ಚಿನ್ನದ ಪದಕ ಕೂಡ ಇರಲಿದೆ.

    ಕುವೆಂಪು, ಡಾ. ರಾಜಕುಮಾರ್, ಎಸ್ ನಿಜಲಿಂಗಪ್ಪ, ಸಿಎನ್.ಆರ್ ರಾವ್, ಪಂಡಿತ್ ಭೀಮಸೇನ ಜೋಶಿ, ಶಿವಕುಮಾರ ಸ್ವಾಮೀಜಿ, ದೇ. ಜವರೇಗೌಡ ಅವರು ಇದುವರೆಗಿನ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕøತರು. ಸಾರ್ವಜನಿಕರು ಕೂಡಾ ಸಮಾರಂಭದಲ್ಲಿ ಭಾಗವಹಿಸಬಹುದು. ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ವೇದಿಕೆಯಲ್ಲಿ 20 ಗಣ್ಯರಿಗೆ ಮಾತ್ರ ಅವಕಾಶವಿದೆ. ವೇದಿಕೆ ಮುಂಭಾಗದಲ್ಲಿ 500 ವಿಐಐಪಿಗಳ ಆಸನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಇಂದು ಮಧ್ಯಾಹ್ನ 1 ಗಂಟೆಯ ಬಳಿಕ ಕೆ. ಆರ್. ಸರ್ಕಲ್, ವಿಧಾನಸೌಧ, ರಾಜಭವನ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರ  ಮಾರ್ಗ ಬದಲಾವಣೆಯಾಗಿದೆ. ಅನಿವಾರ್ಯವಲ್ಲದಿದ್ದರೆ ಇಂದು ಮಧ್ಯಾಹ್ನದ ನಂತರ ವಿಧಾನಸೌಧ ಭಾಗದಲ್ಲಿ ಹೋಗದೇ ಇರುವುದು ಉತ್ತಮ.