` hodare hogu, - chitraloka.com | Kannada Movie News, Reviews | Image

hodare hogu,

 • ರೆಮೋ ಚಿತ್ರದ ವಿರಹಗೀತೆ : ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ..

  ರೆಮೋ ಚಿತ್ರದ ವಿರಹಗೀತೆ : ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ..

  ರೆಮೋ. ಪವನ್ ಒಡೆಯರ್ ನಿರ್ದೇಶನದ ಮ್ಯೂಸಿಕಲ್ ಲವ್ ಸ್ಟೋರಿ. ಇಶಾನ್ ಮತ್ತು ಆಶಿಕಾ ರಂಗನಾಥ್ ಜೋಡಿದ ರೇಮೋ ನವೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ. ಸಿ.ಆರ್.ಮನೋಹರ್ ನಿರ್ಮಾಣದ ಚಿತ್ರ ಹಲವು ದೇಶಗಳಲ್ಲಿ ಚಿತ್ರೀಕರಣವಾಗಿರುವ ಅದ್ಧೂರಿ ಲವ್ ಸ್ಟೋರಿ. ಸಂಗೀತದ ಜೊತೆ ಜೊತೆಯಲ್ಲೇ ಸಾಗುವ ಪ್ರೇಮಕಥೆ. ಚಿತ್ರದ ಹಾಡು ಈಗ ರಿಲೀಸ್ ಆಗಿದೆ.

  ಹೋದರೆ ಹೋಗು..

  ಯಾರಿಗೆ ಬೇಕು..

  ಪ್ರೀತಿಗೆ ನಂದೊಂದು..

  ಶ್ರದ್ಧಾಂಜಲಿ..

  ಜಾರದು ಒಂದು..

  ಕಂಬನಿ ಬಿಂದು..

  ಎಂದಿಗೂ ನಿನಗಾಗಿ..

  ಕಣ್ಣಂಚಲಿ..

  ಹಾಡಿಗೆ ಪ್ರತಿ ಪದಕ್ಕೂ ಭಾವ ತುಂಬಿ ಹಾಡಿದ್ದಾರೆ ಶ್ರೇಯಾ ಘೋಷಲ್. ಪ್ರೀತಿಯನ್ನು ತೊರೆದು ಹೋದ ಪ್ರೇಮಿಗೆ ಇನ್ನೆಂದೂ ನಿನಗಾಗಿ ಕಾಯಲಾರೆ. ನಿನಗಾಗಿ ಕಣ್ಣೀರು ಹಾಕಲಾರೆ ಎಂದು ಪ್ರಿಯತಮೆ ಹಾಡುವ ಹಾಡು. ಅರ್ಜುನ್ ಜನ್ಯ ಮ್ಯೂಸಿಕ್ ಹಾಡಿಗೆ ತಕ್ಕಂತೆ ಮೆಲೋಡಿಯಾಗಿಯೇ ಇದೆ. ಕವಿರಾಜ್ ಪ್ರೀತಿಯನ್ನೆಲ್ಲ ಪೆನ್ನಿಗೆ ತುಂಬಿ ಅಕ್ಷರರೂಪಕ್ಕಿಳಿಸಿದ್ದಾರೆ. ಡೊಳ್ಳು ಚಿತ್ರದ ಮೂಲಕ ಅಂತಾರಾಷ್ಟ್ರೀಯ ಖ್ಯಾತಿ ಪಡೆದ, ರಾಷ್ಟ್ರ ಪ್ರಶಸ್ತಿಯನ್ನೂ ಗೆದ್ದ ಪವನ್ ಒಡೆಯರ್ ಚಿತ್ರವಿದು. ನವೆಂಬರ್ 25ಕ್ಕೆ ರಿಲೀಸ್.