` hubbali dhaba, - chitraloka.com | Kannada Movie News, Reviews | Image

hubbali dhaba,

  • Hubbali Dhaba Movie Review, Chitraloka Rating 3.5/5

    Hubbali Dhaba Movie Review, Chitraloka Rating 3.5/5

    Film: Hubli Dhaba

    Director: Srinivasa Raju

    Cast: Naveen Chandra, P Ravishankar, Naina Ganguly, Makarand Deshpande, Pooja Gandhi, Divya Pillai, Aiyappa, Ravi Kale

    Certificate: A

    Duration: 128 minutes

    Platform: Theatres

    The taste of Dandupalya in Hubli 

    One of the most notorious criminal gangs of Karnataka, the Dandupalya, have been mentioned numerous times in films. Director Srinivasa Raju, over the last ten years has already made three films on the gang. He has covered every angle of the gang including the claim that they were innocents framed by the police. Now, in this new film, he goes a step further and reimagines them in completely different settings. This is an expansion of the story that is purely fictional.

    The characters he created in his previous films come back to life here doing the bidding of his creative mind. They are as bloodthirsty as ever and as dangerous and dishonorable. It was these qualities that shocked and awed the audience and Raju decided to cater to them once more. He succeeds in this attempt. Hubli Dhaba is the kind of film that will quench the thirst of audiences who like to see blood and gore and extreme violence on screen.  

    The director brings a new storyline to the Dandupalya gang. This is his fourth film with those characters. From the controversial first film that was an unpolished spree of killings and lust, to ‘3’ which was a stylized update which overturned the story of the gang from being perpetrators to victims, Raju has exploited the saga for all its silver screen’s worth. If you thought everything that could be said about the film has already been said, here comes Hubli Dhaba, which expands the story further.

    Three different plot lines run parallel in this new film. A mysterious death in a young couple’s home results in the informant becoming the suspect. In the second a drug dealer is on a major consignment transport mission. In the third, the Dandupalya gang is being transported for their capital punishment. Police investigator Chalapathi (Ravishankar reprising his role from the earlier movies) is investigating the murder. A dhaba in Hubballi is where the plots should eventually converge. The narrative shifts between one plot to the other without missing a heartbeat. This fast narrative takes you from one interesting scene to the next and keeps you hooked.

    If you are a fan of this franchise, you know what to expect and the director makes sure it is delivered. While there is ample action and bloodshed, the climax fight leaves even the hardened action film fan stunned. Ravishankar peaks as an actor here.

    Naveen Chandra, Naina Ganguly and Divya Pillai add the risqué element to the otherwise blood sport. A raunchy item song, a Osho Rajaneesh doppelganger and other such characters fill up the gaps in the narrative. The narrative does not beat around the bush and goes directly for the jugular from the word go.

    Srinivasa Raju has managed to up the technical quotient of these films with every outing. Even though it is a film made to pique the baser elements, care is taken to present it in a stylish manner. The cinematography, background score and editing are firmly grounded and provide the film with a good framework. Hubli Dhaba may not be the kind of film that works for everyone. Its ‘A’ certificate is richly deserved. But if you have enjoyed the earlier films in this series and like the genre, this is a worthy addition to the list.

  • ದಂಡುಪಾಳ್ಯ ಗ್ಯಾಂಗ್ ಸೇಡು ತೀರಿಸಿಕೊಳ್ಳಲು ಬಂದಾಗ ಹುಬ್ಬಳ್ಳಿ ಡಾಬಾ

    ದಂಡುಪಾಳ್ಯ ಗ್ಯಾಂಗ್ ಸೇಡು ತೀರಿಸಿಕೊಳ್ಳಲು ಬಂದಾಗ ಹುಬ್ಬಳ್ಳಿ ಡಾಬಾ

    ದಂಡುಪಾಳ್ಯ ಗ್ಯಾಂಗ್ 10 ವರ್ಷಗಳ ನಂತರ ಮತ್ತೆ ಪ್ರತ್ಯಕ್ಷವಾಗುತ್ತದೆ. ಸೇಡು ತೀರಿಸಿಕೊಳ್ಳೋದೇ ಆ ಗ್ಯಾಂಗ್ ಗುರಿ. ಆಫೀಸರುಗಳ ವಿರುದ್ಧ ಸಂಚು ಹೂಡುವ ಗ್ಯಾಂಗ್. ಅವಕಾಶ ಸಿಕ್ಕಾಗ ಹಿಂಸೆಯ ವೈಭವೀಕರಣ ಮೆರೆಯುತ್ತದೆ. ಇದರ ನಡುವೆ ಒಂದು ಲವ್ ಸ್ಟೋರಿ ಇದೆ. ಪ್ರೇಮ, ಕಾಮಗಳ ನಡುವೆ ಒಂದು ಸೇಡಿನ ಕಥೆ. ಕ್ಲೈಮಾಕ್ಸ್‍ನಲ್ಲಿ ಹಿಂಸೆ ಅತೀ ಅತೀ ಎನ್ನುವಷ್ಟು ಇದೆ.. ಹೀಗೆ ಹೇಳುತ್ತಾ ಹೋಗುತ್ತಾರೆ ನಿರ್ದೇಶಕ ಶ್ರೀನಿವಾಸ್ ರಾಜು.

    ಅವರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಟ್ರೇಲರಿನಲ್ಲಿ ನೀವು ನೋಡಿರುವ ಹಿಂಸೆ ಏನೇನೂ ಅಲ್ಲ. ಆದರೆ ಆ ಹಿಂಸೆಗೂ ಜಸ್ಟಿಫಿಕೇಷನ್ ಸಿಗುತ್ತೆ ಎನ್ನುವ ಶ್ರೀನಿವಾಸ್ ರಾಜು ಕಥೆಯಲ್ಲಿ ಮನರಂಜನೆ ಮಾತ್ರವನ್ನೇ ಹುಡುಕಿ. ಲಾಜಿಕ್ ಮತ್ತು ಮೆಸೇಜ್ ಹೇಳೋದು ನನ್ನ ಕೆಲಸ ಅಲ್ಲ. ಕಥೆ ಹೇಳುವುದಷ್ಟೇ ನನ್ನ ಕೆಲಸ ಎನ್ನುವ ಶ್ರೀನಿವಾಸ್ ರಾಜುಗೆ ತಮ್ಮ ಕೆಲಸದ ಬಗ್ಗೆ ಕನ್‍ಫ್ಯೂಷನ್ಸ್ ಇಲ್ಲ.

    ಟ್ರೇಲರಿನಲ್ಲಿ ಮುತ್ತಿನ ಮಳೆಯೂ ಇದೆ. ರಕ್ತದ ಹೊಳೆಯೂ ಇದೆ. ನವೀನ್ ಚಂದ್ರ, ದಿವ್ಯಾ ಪಿಳ್ಳೈ, ಅನನ್ಯಾ ರಾಜ್, ನೈನಾ ಗಂಗೂಲಿ, ರಾಜಾ ರವೀಂದರ್, ನಾಗಾಬಾಬು, ಅಯ್ಯಪ್ಪ ಶರ್ಮಾ, ಮಕರಂದ ದೇಶಪಾಂಡೆ, ರವಿಕಾಳೆ ಎಲ್ಲರೂ ಇದ್ದಾರೆ. ಮಳೆ ಹುಡುಗಿ ಪೂಜಾ ಗಾಂಧಿ, ಚಲಪತಿ ಪಾತ್ರದಲ್ಲಿ ರವಿಶಂಕರ್ ಚಿತ್ರದ ಇನ್ನೊಂದು ಹೈಲೈಟ್ಸ್. ಪ್ರೇಮ್ ಕುಮಾರ್ ಪಾಂಡೆ, ಅಖಿಲೇಶ್ ರೆಡ್ಡಿ, ಸುಬ್ಬಾರೆಡ್ಡಿ ನಿರ್ಮಾಣದ ಹುಬ್ಬಳ್ಳಿ ಡಾಬಾ ಇಂದಿನಿಂದ ಚಿತ್ರಮಂದಿರದಲ್ಲಿರುತ್ತದೆ.

  • ದಂಡುಪಾಳ್ಯಕ್ಕಿಂತ ಹೆಚ್ಚಿನ ಹಿಂಸೆಯ ಚಿತ್ರವಂತೆ ಹುಬ್ಬಳ್ಳಿ ಡಾಬಾ

    ದಂಡುಪಾಳ್ಯಕ್ಕಿಂತ ಹೆಚ್ಚಿನ ಹಿಂಸೆಯ ಚಿತ್ರವಂತೆ ಹುಬ್ಬಳ್ಳಿ ಡಾಬಾ

    ಹುಬ್ಬಳ್ಳಿ ಡಾಬಾ. ಶ್ರೀನಿವಾಸ ರಾಜು ನಿರ್ದೇಶನದ ಸಿನಿಮಾ. ದಂಡುಪಾಳ್ಯ, ಶಿವಂ, ಕಥೆ-ಚಿತ್ರಕಥೆ-ಸಂಭಾಷಣೆ ನಿರ್ದೇಶನದ ಚಿತ್ರ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ನವೆಂಬರ್ 4 ರಂದು ತೆರೆಗೆ ಬರಲಿದೆ.

    ಇದೊಂದು ಮರ್ಡರ್ ಮಿಸ್ಟರ್ ಸ್ಟೋರಿ. ಹಿಂಸೆ ಹೆಚ್ಚಾಗಿಯೇ ಇದೆ. ಕ್ಲೈಮಾಕ್ಸ್‍ನಲ್ಲಿ ಆ ಹಿಂಸೆಯನ್ನು ನೋಡುತ್ತೇವೆ. ಚಿತ್ರದುದ್ದಕ್ಕೂ ಇಲ್ಲ. ಚಿತ್ರದ ಕಥೆಗೆ ಪೂರಕವಾಗಿಯೇ ಇದೆ. ಅದಕ್ಕೆ ಅರ್ಥವೂ ಇದೆ. ಈ ರೀತಿಯ ಹಿಂಸೆ ಕೂಡಾ ಇರುತ್ತಾ ಎಂದು ಪ್ರೇಕ್ಷಕರು ಶಾಕ್ ಆಗುತ್ತಾರೆ ಎಂದು ಓಪನ್ ಆಗಿಯೇ ಹೇಳಿದ್ದಾರೆ ಶ್ರೀನಿವಾಸ್ ರಾಜು.

    ಪೂಜಾಗಾಂಧಿ , ನವೀನ್ ಚಂದ್ರ, ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ, ರವಿಶಂಕರ್, ರಾಜಾ ರವೀಂದರ್, ಅಯ್ಯಪ್ಪ ಶರ್ಮಾ, ರವಿ ಕಾಳೆ, ಪೆಟ್ರೋಲ್ ಪ್ರಸನ್ನ, ನಾಗಾಬಾಬು .. ಹೀಗೆ ಬೃಹತ್ ತಾರಾಗಣವೇ ಇರುವ ಚಿತ್ರ. ಚಿತ್ರದ ಕಥೆಯಿರುವುದು ನಡೆಯುವುದು ಹೈವೇಯಲ್ಲಿ.  ಹಾರರ್ ಮತ್ತು ಮರ್ಡರ್ ಎರಡೂ ಸ್ಟೋರಿ ಇರುವ ಥ್ರಿಲ್ಲರ್ ಕಥೆ. ಇದು ಫ್ಯಾಮಿಲಿ ಸಿನಿಮಾ ಅಲ್ಲ ಎನ್ನುವುದನ್ನೂ ಮುಕ್ತವಾಗಿಯೇ ಹೇಳಿಕೊಳ್ಳುವ ಶ್ರೀನಿವಾಸ ರಾಜುಗೆ ತಮ್ಮ ಪ್ರೇಕ್ಷಕರಾರು ಎನ್ನುವ ಗ್ಯಾರಂಟಿ ಇದೆ.  ಚಿತ್ರದ ತಗ್ಗೋದಿಲ್ಲ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು ಪುಷ್ಪದ ತಗ್ಗದಲೇ.. ಸ್ಟೈಲನ್ನೇ ಇಟ್ಟುಕೊಂಡು ಮಾಡಿರುವ ಹಾಡು. ಹಿಟ್ ಆಗಿದೆ. ಪ್ರೇಮ್ ಕುಮಾರ್ ಪಾಂಡೆ, ಎನ್.ಅಖಿಲೇಶ್ ರೆಡ್ಡಿ ಹಾಗೂ ಪಿ.ವಿ.ಸುಬ್ಬಾ ರೆಡ್ಡಿ ಚಿತ್ರದ ನಿರ್ಮಾಪಕರು. ಚಿತ್ರ ನವೆಂಬರ್ 4ರಂದು ರಿಲೀಸ್ ಆಗಲಿದೆ.

  • ಬಿಡುಗಡೆಯಾಯಿತು "ಹುಬ್ಬಳ್ಳಿ ಡಾಬಾ" ಚಿತ್ರದ ಸುಂದರ ಹಾಡು .

    ಬಿಡುಗಡೆಯಾಯಿತು "ಹುಬ್ಬಳ್ಳಿ ಡಾಬಾ" ಚಿತ್ರದ ಸುಂದರ ಹಾಡು .

    ವಿಭಿನ್ನ ಕಥೆಯ ಈ ಚಿತ್ರ ನವೆಂಬರ್ 4 ರಂದು ತೆರೆಗೆ. 

    ಭದ್ರಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಶ್ರೀನಿವಾಸರಾಜು ನಿರ್ದೇಶನದ, ಚರಣ್ ಅರ್ಜುನ್ ಸಂಗೀತ ನೀಡಿರುವ "ಹುಬ್ಬಳ್ಳಿ ಡಾಬಾ"  ಚಿತ್ರದ ಹಾಡೊಂದು‌ ಆದಿತ್ಯ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.  

    ಡಾ||ವಿ.ನಾಗೇಂದ್ರಪ್ರಸಾದ್ ಈ ಹಾಡನ್ನು ಬರೆದಿದ್ದಾರೆ. ಮೋಹನ ಭೋಗರಾಜು ಹಾಡಿರುವ ಈ  ಹಾಡು ಮೆಚ್ಚುಗೆ ಪಡೆಯುತ್ತಿದೆ.  ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ನವೆಂಬರ್ 4 ರಂದು ತೆರೆಗೆ ಬರಲಿದೆ. 

    "ದಂಡುಪಾಳ್ಯ", " ಶಿವಂ" ಸೇರಿದಂತೆ ವಿಭಿನ್ನ ರೀತಿಯ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನಿವಾಸರಾಜು ಅವರ ನಿರ್ದೇಶನದ 10ನೇ ಚಿತ್ರವಿದು. ನಿರ್ದೇಶಕರೆ ಕಥೆ ಹಾಗೂ ಚಿತ್ರಕಥೆ ಬರೆದಿದ್ದಾರೆ. 

    "ಹುಬ್ಬಳ್ಳಿ ಡಾಬಾ" ಚಿತ್ರ ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿದ್ದು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದೆ. ನವೆಂಬರ್ 4 ರಂದು ಎರಡೂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

    ನವೀನ್ ಚಂದ್ರ, ದಿವ್ಯ ಪಿಳ್ಳೈ, ಅನನ್ಯ ಸೇನ್ ಗುಪ್ತ, ರವಿಶಂಕರ್, ರಾಜಾ ರವೀಂದರ್, ಅಯ್ಯಪ್ಪ ಶರ್ಮ, ನಾಗಾ ಬಾಬು, ಪೃಥ್ವಿ, ಪೂಜಾ ಗಾಂಧಿ, ರವಿ ಕಾಳೆ, ಪೆಟ್ರೋಲ್ ಪ್ರಸನ್ನ, ಡ್ಯಾನಿ ಕುಟ್ಟಪ್ಪ, ಮುನಿರಾಜು, ಜೈದೇವ್ ಮೋಹನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

    ವೆಂಕಟ್ ಪ್ರಸಾದ್ ಛಾಯಾಗ್ರಹಣ, ಗ್ಯಾರಿ ಬಿ.ಹೆಚ್ ಸಂಕಲನ ಹಾಗೂ ವೆಂಕಟ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ಹುಬ್ಬಳ್ಳಿ ಡಾಬಾಗೆ ಇಳಯರಾಜಾ ಕೊಟ್ಟ ಕಾಣಿಕೆ ಏನು?

    ಹುಬ್ಬಳ್ಳಿ ಡಾಬಾಗೆ ಇಳಯರಾಜಾ ಕೊಟ್ಟ ಕಾಣಿಕೆ ಏನು?

    ಹುಬ್ಬಳ್ಳಿ ಡಾಬಾ. ಇದೇ ವಾರ ರಿಲೀಸ್ ಆಗುತ್ತಿರೋ ಸಿನಿಮಾ. ನನ್ನವನು, ಕೋಟೆ, ದಂಡುಪಾಳ್ಯ, ಕೋಟೆ, ಶಿವಂ ಖ್ಯಾತಿಯ ಶ್ರೀನಿವಾಸರಾಜು ನಿರ್ದೇಶನದ ಸಿನಿಮಾ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬರುತ್ತಿರುವ ಸಿನಿಮಾದಲ್ಲಿ ರವಿಶಂಕರ್ ಚಲಪತಿ ಅನ್ನೋ ಇನ್ಸ್‍ಪೆಕ್ಟರ್ ಪಾತ್ರ ಮಾಡಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಇಳಯರಾಜ ಒಂದು ಉಡುಗೊರೆ ಕೊಟ್ಟಿದ್ದಾರೆ.

    ಸಂಗೀತ ನಿರ್ದೇಶಕ ಇಳಯರಾಜಾ ಅವರು 80ರ ದಶಕದಲ್ಲಿ ಸಂಗೀತ ನೀಡಿದ್ದ ಹಾಡಿನ ಟ್ಯೂನ್ ಬಳಕೆಗೆ ಓಕೆ ಎಂದಿದ್ದಾರೆ. ನಾನು ಇಳಯರಾಜಾ ಅಭಿಮಾನಿ. ಹೀಗಾಗಿ ಇದು ನನಗೆ ದೊಡ್ಡ ವಿಷಯ. ಹಾಡು ಚಿತ್ರದಲ್ಲಿ ಖಂಡಿತಾ ಬೇರೆಯೇ ಇಂಪ್ಯಾಕ್ಟ್ ಮಾಡುತ್ತೆ ಎನ್ನುತ್ತಾರೆ ಶ್ರೀನಿವಾಸ ರಾಜು.

    ಅಂದಹಾಗೆ ಈ ಚಿತ್ರಕ್ಕೂ ದಂಡುಪಾಳ್ಯ ಚಿತ್ರಕ್ಕೂ ಸಣ್ಣ ಲಿಂಕ್ ಇದೆ. ದಂಡುಪಾಳ್ಯದ ಪಾತ್ರಗಳು ಇಲ್ಲಿಯೂ ಬರುತ್ತವೆ. ನವೀನ್ ಚಂದ್ರ, ದಿವ್ಯಾ ಪಿಳ್ಳೈ, ಅನನ್ಯಾ ಸೇನ್ ಗುಪ್ತಾ ನಾಯಕಿಯರು. ರವಿಶಂಕರ್, ಪೂಜಾಗಾಂಧಿ, ರವಿಕಾಳೆ, ಅಯ್ಯಪ್ಪ ಶರ್ಮಾ, ಮಕರಂದ ದೇಶಪಾಂಡೆ ಸೇರಿದಂತೆ ಆಲ್‍ಮೋಸ್ಟ್ ದಂಡುಪಾಳ್ಯ ಗ್ಯಾಂಗ್ ಈ ಚಿತ್ರದಲ್ಲಿಯೂ ಇದೆ.