` bv manjayya, - chitraloka.com | Kannada Movie News, Reviews | Image

bv manjayya,

 • ಬಿ.ವಿ.ಮಂಜಯ್ಯ : ಕಾಶ್ಮೀರಿ ಪಂಡಿತ.. ನಟ..

  ಬಿ.ವಿ.ಮಂಜಯ್ಯ : ಕಾಶ್ಮೀರಿ ಪಂಡಿತ.. ನಟ..

  ಕೆ.ವಿ.ಮಂಜಯ್ಯ. ಕನ್ನಡದಲ್ಲಿ 40ಕ್ಕೂ ಹೆಚ್ಚು ವರ್ಷಗಳಿಂದ ಚಿತ್ರರಂಗದಲ್ಲಿರುವವರು. 1974ರಿಂದ ಚಿತ್ರರಂಗದಲ್ಲಿರುವವರು.

  ಶಂಕರ್ ನಾಗ್ ಜೊತೆ ಹೆಚ್ಚು ಕೆಲಸ ಮಾಡಿದ್ದವರು. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದವರು. 150ಕ್ಕೂ ಅಧಿಕ ಚಿತ್ರರಂಗಗಳಲ್ಲಿ ಮ್ಯಾನೇಜರ್ ಆಗಿದ್ದವರು. ಮ್ಯಾನೇಜರ್ ಆಗಿಯೇ ರಾಜ್ಯ ಪ್ರಶಸ್ತಿ ಗಳಿಸಿದ್ದವರು.

  ಅಂದಹಾಗೆ ಚಿಕ್ಕಮಗಳೂರು ಜಿಲ್ಲೆ ಹೊಸತಾರೆ ಹೋಬಳಿ, ಕೊಡುವಳ್ಳಿ ಗ್ರಾಮದವರು. ವೆಂಕಟಕೃಷ್ಣಯ್ಯ ಪುತ್ರ. ಓದಿದ್ದು ಬಿಎ. ಮಾಡಿದ್ದು ನಾಟಕ.

  ಆದರೆ ಇನ್ನೂ ಒಂದು ವಿಷಯ ಗೊತ್ತಿರಲಿ. ಇವರು ಮೂಲತಃ ಕಾಶ್ಮೀರಿ ಪಂಡಿತರು. ಇವರ ಪೂರ್ವಜರು ವಲಸೆ ಬಂದು ಇಲ್ಲಿ ನೆಲೆಸಿದವರು. ಸಹಾವಾಸಿ ಬ್ರಾಹ್ಮಣರು. ಇವರಿಗೆ ಆಶ್ರಯ ನೀಡಿದ್ದು ಶೃಂಗೇರಿ ಮಠ. ಇವರು ಅತೀ ಹೆಚ್ಚು ಕೆಲಸ ಮಾಡಿದ್ದು ಕೂಡಾ ಶಂಕರ್`ನಾಗ್ ಮತ್ತು ಅನಂತನಾಗ್ ಜೊತೆಯಲ್ಲಿ. ಅವರ ಪೂರ್ವಜರೂ ಕೂಡಾ ಕಾಶ್ಮೀರಿ ಪಂಡಿತರ ಮೂಲದವರು.

  ಬಿ.ವಿ.ಮಂಜಯ್ಯನವರ ಜೀವನಗಾಥೆ ಚಿತ್ರಲೋಕದಲ್ಲಿ ಇಂದಿನಿಂದ ಶುರುವಾಗಲಿದೆ. ಪ್ರತೀ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬಿ.ವಿ.ಮಂಜಯ್ಯ ಮಾತನಾಡಲಿದ್ದಾರೆ. 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ, 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಮ್ಯಾನೇಜರ್ ಆಗಿದ್ದ ಮಂಜಯ್ಯ ಅನುಭವಗಳಲ್ಲಿ ಚಿತ್ರರಂಗದ ಇತಿಹಾಸವೇ ಇದೆ. ಚಿತ್ರೋದ್ಯಮ ಬದಲಾಗಿದ್ದಕ್ಕೆಲ್ಲ ಸಾಕ್ಷಿಯಾದವರು ಬಿ.ವಿ.ಮಂಜಯ್ಯ. ಶಂಕರ್ ನಾಗ್, ಅನಂತನಾಗ್, ವಿಷ್ಣುವರ್ಧನ್, ಅಂಬರೀಷ್, ಪ್ರಭಾಕರ್ ಸೇರಿದಂತೆ.. ಹಲವು ಕಲಾವಿದರ ಜೊತೆಯಲ್ಲಿ ನಟಿಸಿರುವ ಬಿ.ವಿ.ಮಂಜಯ್ಯ ನಡೆದಾಡುವ ಚಿತ್ರೋದ್ಯಮದ ಯುನಿವರ್ಸಿಟಿಯಿದ್ದಂತೆ.