` diretor prem, - chitraloka.com | Kannada Movie News, Reviews | Image

diretor prem,

  • ‘ದಿ ವಿಲನ್’ ಚಿತ್ರದ ಗುಟ್ಟು ಬಿಚ್ಚಿಟ್ಟರು ಶಿವಣ್ಣ

    Shivanna Let Out A Secret About The Villain

    ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ದಿ ವಿಲನ್ ಚಿತ್ರ ಸೆಟ್ಟೇರಿದ ದಿನದಿಂದ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ ಒಂದೇ. ಚಿತ್ರದ ಕಥೆ ಏನು ಅನ್ನೋದು. ಅದಕ್ಕೆ ತಕ್ಕಂತೆ ಚಿತ್ರದ ಶೂಟಿಂಗ್ ಶುರುವಾಗಿದ್ದರೂ, ಸುದೀಪ್

    ಪೋರ್ಷನ್ನ ದೃಶ್ಯಗಳಷ್ಟೇ ಚಿತ್ರೀಕರಣಗೊಳ್ಳುತ್ತಿವೆ. ಆಗೆಲ್ಲ ಅಭಿಮಾನಿಗಳನ್ನು ಕಾಡುತ್ತಿದ್ದ ಪ್ರಶ್ನೆ. ಇಬ್ಬರು ದೊಡ್ಡ ಸ್ಟಾರ್ಗಳು ನಟಿಸುತ್ತಿರುವ ಚಿತ್ರದಲ್ಲಿ, ಇಬ್ಬರೂ ಮುಖಾಮುಖಿಯಾಗೋದಿಲ್ಲವಾ ಅನ್ನೋದು.

    ಆ ಅನುಮಾನಕ್ಕೆ ಉತ್ತರ ಕೊಟ್ಟಿದ್ದಾರೆ ಶಿವರಾಜ್ ಕುಮಾರ್. ಚಿತ್ರದಲ್ಲಿ ಸುದೀಪ್ ಜೊತೆ ಮುಖಾಮುಖಿಯಾಗುವ ದೃಶ್ಯಗಳಿವೆ. ಇಬ್ಬರೂ ಜೊತೆಯಾಗಿ ಶೂಟಿಂಗ್ನಲ್ಲಿ ಪಾಲ್ಗೊಳ್ಳಬೇಕಾಗುತ್ತೆ ಎಂದಿದ್ದಾರೆ. ಉಡುಪಿಯಲ್ಲಿ ಚಿನ್ನದ ಮಳಿಗೆಯೊಂದರ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್, ಚಿತ್ರದ ಕಥೆ ಏನು..? ಹೇಗಿರುತ್ತೆ

    ಅನ್ನೋ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ. ಚಿತ್ರದಲ್ಲಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಎದುರಾಬದುರು ಬುರುವುದೇ ಇಲ್ಲವೇನೋ ಎಂದು ಟೆನ್ಷನ್ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಒಂದು ರಿಲ್ಯಾಕ್ಸ್ ಕೊಟ್ಟಿದ್ದಾರೆ ಶಿವರಾಜ್ ಕುಮಾರ್.

    Related Articles :-

    ವಿಲನ್ ಪ್ರೇಮ್​ಗೆ ಶಹಬ್ಬಾಸ್ ಎಂದ ಸುದೀಪ್

    Amy Jackson Joins The Villain

    Storm Hampers The Shooting Of The Villain

    Sudeep Joins The Villain Second Schedule

    Mithun Chakraborty Joins The Sets Of The Villain

    Amy Jackson Is The Heroine For The Villain

    Puneeth Visits The Villain Set - Exclusive

    First look Of The Villain Released

    The Villain Starting Next Week

     

     

     

  • Hitler changed to Gandhigiri - Exclusive

    gandhigiri image

    Prem's new film which was earlier titled as 'Hitler' has been changed to 'Gandhigiri'. The film is being directed by Prem's protege Raghu Hassan and is being produced jointly by Vedamurthy and R J Studios.

    Earlier, Raghu Hassan had planned to register the title of the film as 'Hitler'. But director-producer Teshi Venkatesh had already registered that title and had refused to give the title to Raghu Hassan. With no other go, the title of the film has been changed to 'Gandhigiri'. The word is derived from Sanjay Dutt starrer 'Lageraho Munnabhai'.

    Prem and Arundhati Nag had been roped in to play prominent roles in the film. Now Sharmila Mandre is also part of the star cast. The film is all set to be launched this month itself.

  • The Villain Has Houseful Shows in Toronto

    the villain has houseful shows in toronto

    For the first time ever there were houseful shows for a Kannada film in Canada. There were two weekend shows and for both, the tickets were sold out much earlier. A few Kannada films have been released in Canada before along with the US.

    But this is the first time that the response has been so good. This may lead to more Kannada films being released simultaneously in Canada the same time they are released locally in Karnataka. The film, the first big multistarrer in years, has lived up to its expectation as the most awaited Kannada film of the year.

    The combination of Shivarajkumar and Sudeep and director Prem has worked wonders at the box office. At home in Karnataka, the film is turning out to be the highest grossing film of all time in its first week.

  • ಮತ್ತೆ ಶುರುವಾಯ್ತು ವಿಲನ್

    the villain shooting re starts

    ಆ್ಯಮಿ ಜಾಕ್ಸನ್ ಅವರ ವೀಸಾ ಸಮಸ್ಯೆಯಿಂದಾಗಿ ಸ್ವಲ್ಪ ದಿನ ಸ್ಥಗಿತಗೊಂಡಿದ್ದ ದಿ ವಿಲನ್ ಚಿತ್ರದ ಶೂಟಿಂಗ್ ಮತ್ತೆ ಶುರುವಾಗಿದೆ. ಆ್ಯಮಿ ಜಾಕ್ಸನ್ ಮತ್ತೆ ಬಂದಿದ್ದಾರೆ. ಚಿತ್ರತಂಡ ಮತ್ತೆ ಚಿಕ್ಕಮಗಳೂರಿನ ಮಡಿಲು ಸೇರಿದೆ.

    ಇನ್ನೂ 4 ದಿನ ಚಿಕ್ಕಮಗಳೂರಿನಲ್ಲಿ ಶೂಟಿಂಗ್ ಇದ್ದು, ಕಿಚ್ಚ ಸುದೀಪ್ ಹಾಗೂ ಆ್ಯಮಿ ಜಾಕ್ಸನ್ ಜೊತೆಗಿನ ದೃಶ್ಯಗಳನ್ನು ಶೂಟ್ ಮಾಡಿಕೊಳ್ಳಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

    Related Articles :-

    ದಿ ವಿಲನ್ ಆ್ಯಮಿ ಜಾಕ್ಸನ್ ಪ್ರಾಬ್ಲಂ

     

  • ಶಿವಣ್ಣ, ಸುದೀಪ್ ಇಬ್ಬರಲ್ಲಿ ರಿಯಲ್ ವಿಲನ್ ಯಾರು..?

    who is the real villain in the villain

    ದಿ ವಿಲನ್ ಚಿತ್ರದ ಟ್ರೈಲರ್ ಹಾಗೂ ಹಾಡಿನ ಲಿರಿಕಲ್ ವಿಡಿಯೋಗಳನ್ನಷ್ಟೇ ಹೊರಬಿಟ್ಟಿರುವ ದಿ ವಿಲನ್ ಟೀಂ, ಒಂದು ಬಹುದೊಡ್ಡ ಪ್ರಶ್ನೆಯನ್ನು ಹಾಗೆಯೇ ಉಳಿಸಿಬಿಟ್ಟಿದೆ. ಕನ್ನಡ ಚಿತ್ರರಂಗದ ಇಬ್ಬರು ಸೂಪರ್‍ಸ್ಟಾರ್‍ಗಳನ್ನಿಟ್ಟುಕೊಂಡು ದಿ ವಿಲನ್ ಅನ್ನೋ ಟೈಟಲ್ ಇಟ್ಟು ಸಿನಿಮಾ ಮಾಡಿರುವ ಜೋಗಿ ಪ್ರೇಮ್, ಚಿತ್ರದಲ್ಲಿ ವಿಲನ್ ಯಾರು ಅನ್ನೋ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಆ ಗುಟ್ಟನ್ನು ಅಕ್ಟೋಬರ್ 1ರಂದು ರಟ್ಟು ಮಾಡಲಿದ್ದಾರಂತೆ.

    ಅರೆ.. ಸಿನಿಮಾ ರಿಲೀಸ್ ಆಗೋದು ಅಕ್ಟೋಬರ್ 18ಕ್ಕೆ. ಅಕ್ಟೋಬರ್ 1ಕ್ಕೇ ಹೇಗೆ ರಟ್ಟು ಮಾಡ್ತಾರೆ ಅಂತಿರಾ..? ಅದು ಪ್ರೇಮ್ ಸ್ಟೈಲ್. ಅ.1ನೇ ತಾರೀಕು ಚಿತ್ರದ ಇನ್ನೊಂದು ಟ್ರೈಲರ್ ರಿಲೀಸ್ ಆಗಲಿದೆ. ಅದು ಶಿವಣ್ಣ ಮತ್ತು ಸುದೀಪ್ ಪಾತ್ರಗಳು ಮುಖಾಮುಖಿಯಾಗುವ ಟ್ರೈಲರ್. ಅದನ್ನು ಸೂಕ್ಷ್ಮವಾಗಿ ನೋಡಿದರೆ ವಿಲನ್ ಯಾರು ಅನ್ನೋ ಸೀಕ್ರೆಟ್‍ಗೆ ಉತ್ತರ ಸಿಗಲಿದೆ ಎಂದಿದ್ದಾರೆ ಪ್ರೇಮ್.

    ಸಿ.ಆರ್.ಮನೋಹರ್ ನಿರ್ಮಾಣದ ಈ ಅದ್ಧೂರಿ ಸಿನಿಮಾದಲ್ಲಿ ಬಾಲಿವುಡ್, ಹಾಲಿವುಡ್ ತಾರೆಯರೆಲ್ಲ ನಟಿಸಿದ್ದಾರೆ. ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಯಾವಾಗ ಅನ್ನೋದು ಅಕ್ಟೋಬರ್ 2ರಂದು ಗೊತ್ತಾಗಲಿದೆಯಂತೆ.

  • ಸುದೀಪ್, ಪ್ರೇಮ್ ವಿರುದ್ಧ ಫಿಲಂ ಚೇಂಬರ್‍ಗೆ ಕನ್ನಡ ಸಂಘಟನೆ ದೂರು

    kfcc gets complaint against sudeep and prem

    ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್, ಕನ್ನಡ ಧ್ವಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಕನ್ನಡ ಸಂಘಟನೆಯೊಂದು ಫಿಲಂ ಚೇಂಬರ್ ಮೆಟ್ಟಿಲೇರಿದೆ. ಕರ್ನಾಟಕ ಸಂಘಟನೆ ಒಕ್ಕೂಟದ ಅಧ್ಯಕ್ಷ ನಾಗೇಶ್, ಸುದೀಪ್ ಮತ್ತು ಪ್ರೇಮ್ ಫಿಲಂ ಚೇಂಬರ್‍ಗೆ ದೂರು ಸಲ್ಲಿಸಿದ್ದಾರೆ.

    ದಿ ವಿಲನ್ ಚಿತ್ರದ ಒಂದು ದೃಶ್ಯದಲ್ಲಿ ಸುದೀಪ್ ಕನ್ನಡ ಬಾವುಟವನ್ನು ಸೊಂಟಕ್ಕೆ ಸುತ್ತಿಕೊಂಡಿದ್ದಾರೆ. ಇದು ನಾಡಧ್ವಜಕ್ಕೆ ಮಾಡಿದ ಅವಮಾನ. ಹೀಗಾಗಿ ಪ್ರೇಮ್ ಮತ್ತು ಸುದೀಪ್ ಕ್ಷಮೆ ಕೇಳಬೇಕು ಅನ್ನೋದು ನಾಗೇಶ್ ಆಗ್ರಹ. ಇಲ್ಲದೇ ಹೋದರೆ ದಿ ವಿಲನ್ ಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾಗೇಶ್ ದೂರಿನಲ್ಲಿ ಆಗ್ರಹಿಸಿದ್ದಾರೆ.

    ಅಕ್ಟೋಬರ್ 18ರಂದು ರಿಲೀಸ್ ಆಗಿರುವ ದಿ ವಿಲನ್ ಚಿತ್ರ 25 ದಿನ ಪೂರೈಸಿ 50ನೇ ದಿನದತ್ತ ಮುನ್ನುಗ್ಗುತ್ತಿದೆ. ಹೀಗಿರುವಾಗಲೇ ಚಿತ್ರದ ಮೇಲೆ ಮತ್ತೊಂದು ವಿವಾದದ ಹೊಡೆತ ಬಿದ್ದಿದೆ. ಈಗಾಗಲೇ ಚಿತ್ರ ರಿಲೀಸ್ ಆಗಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ. ನೀವು ನಿರ್ದೇಶಕರನ್ನೇ ಸಂಪರ್ಕಿಸಿ ಎಂದು ಹೇಳಿ ಕಳಿಸಿದೆಯಂತೆ ಫಿಲಂ ಚೇಂಬರ್.