` chaithra achar, - chitraloka.com | Kannada Movie News, Reviews | Image

chaithra achar,

  • ಸಪ್ತ ಸಾಗರದಾಚೆಗೆ ಬಂದಳು ಇನ್ನೊಬ್ಬ ಸುಪ್ತ ಸುಂದರಿ

    ಸಪ್ತ ಸಾಗರದಾಚೆಗೆ ಬಂದಳು ಇನ್ನೊಬ್ಬ ಸುಪ್ತ ಸುಂದರಿ

    ಸಪ್ತಸಾಗರದಾಚೆಯೆಲ್ಲೋ.. ರಕ್ಷಿತ್ ಶೆಟ್ಟಿ ಮತ್ತು ಹೇಮಂತ್ ರಾವ್ ಕಾಂಬಿನೇಷನ್‍ನಲ್ಲಿ ಬರುತ್ತಿರೋ ಹೊಸ ಸಿನಿಮಾ. ಅರ್ಧ ಚಿತ್ರೀಕರಣ ಮುಗಿದಿದೆ. ಇನ್ನರ್ಧ ಬಾಕಿಯಿದೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ನಂತರ ರಕ್ಷಿತ್-ರಾವ್ ಜೋಡಿ ಮತ್ತೊಮ್ಮೆ ಒಂದಾಗಿರುವುದೇ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈ ಚಿತ್ರಕ್ಕೀಗ ಇನ್ನೊಬ್ಬ ಸುಪ್ತ ಸುಂದರಿಯ ಪ್ರವೇಶವಾಗಿದೆ. ರುಕ್ಮಿಣಿ ವಸಂತ್ ಅವರ ಜೊತೆಗೆ ಚೈತ್ರಾ ಜೆ.ಆಚಾರ್ ನಾಯಕಿಯಾಗಿ ಸುರಭಿ ಪಾತ್ರಧಾರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    ನನ್ನದ ಸುರಭಿ ಅನ್ನೋ ಹೆಸರಿನ ಪಾತ್ರ. ಹೇಮಂತ್ ರಾವ್ ಕರೆ ಮಾಡಿದಾಗ ಬೇರಾವುದೋ ಚಿತ್ರಕ್ಕೆ ಕಾಲ್ ಮಾಡಿದ್ದಾರೆ ಎಂದುಕೊಂಡೆ. ಸಪ್ತಸಾಗರದಾಚೆಯೆಲ್ಲೋ.. ಚಿತ್ರಕ್ಕೆ ನೀವೂ ಒಬ್ಬರು ಹೀರೋಯಿನ್ ಎಂದಾಗ ಆದ ಖುಷಿ ಅಷ್ಟಿಷ್ಟಲ್ಲ. ಏಕೆಂದರೆ ಹೇಮಂತ್ ರಾವ್ ನನ್ನ ಫೇವರಿಟ್ ಡೈರೆಕ್ಟರ್. ಥಿಯೇಟರಿನಲ್ಲಿ ಆ ಚಿತ್ರವನ್ನು 6 ಸಲ ನೋಡಿದ್ದೇನೆ. ಆಗ ನಾನು ಎಂಜಿನಿಯರಿಂಗ್ ಫೈನಲ್ ಸೆಮಿಸ್ಟರ್‍ನಲ್ಲಿದ್ದೆ. ಈಗ ನನ್ನ ಕನಸಿನ ಡೈರೆಕ್ಟರ್ ಜೊತೆ ಕೆಲಸ ಮಾಡೋದು, ರಕ್ಷಿತ್ ಶೆಟ್ಟಿಯವರ ಜೊತೆ ನಟಿಸೋದು ಅಂದ್ರೆ ಎಕ್ಸೈಟ್‍ಮೆಂಟ್ ಇದ್ದೇ ಇರುತ್ತಲ್ವಾ ಎನ್ನುತ್ತಾರೆ ಚೈತ್ರಾ.

    ಸುರಭಿಯದ್ದು ಸಾದಾಸೀದಾ ಪಾತ್ರ. ಆದರೆ ಜೀವನ ಅವಳ ಜೊತೆ ಸಾದಾಸೀದಾ ಇರಲ್ಲ. ಸುರಭಿ & ಮನು (ರಕ್ಷಿತ್ ಶೆಟ್ಟಿ) ಮಧ್ಯೆ ಒಂದು ವಿಶೇಷ ಸಂಬಂಧ ಏರ್ಪಡುತ್ತೆ. ಅದು ಪ್ರೇಕ್ಷಕರ ಹೃದಯ ತಟ್ಟುತ್ತೆ ಎನ್ನುತ್ತಾರೆ ಹೇಮಂತ್ ರಾವ್.

    ರುಕ್ಮಿಣಿ ಪಾತ್ರ 2010ರಲ್ಲಿ ಮನು ಜೀವನಕ್ಕೆ ಎಂಟ್ರಿ ಕೊಟ್ಟರೆ,ಸುರಭಿಯ ಪಾತ್ರ 10 ವರ್ಷಗಳ ನಂತರ ಬರುತ್ತಂತೆ. ಕೊರೊನಾ ಕಾಲವೂ ಚಿತ್ರದಲ್ಲಿದೆಯಂತೆ. ಹೇಮಂತ್ ರಾವ್ ಚಿತ್ರ ಎಂದ ಮೇಲೆ ನಿರೀಕ್ಷೆ ಸಹಜವೇ ಬಿಡಿ.