` actor praveen, - chitraloka.com | Kannada Movie News, Reviews | Image

actor praveen,

  • Love 360 To Be remade in Tamil and Telugu

    Love 360 To Be remade in Tamil and Telugu

    Director Shashank has an early festival gift. Love 360 his latest directorial which is also produced under this Shashank Cinemas banner has found takers in Tamil and Telugu. In fact, a big production house has signed on to remake the film in the two languages. 

    This is a big boost for Shashank who showed the guts to produce the film with newcomers. Praveen, the lead actor is a new comer from Hospete. He is from a non-film background whose father was a doctor. Rachana Inder, of the Love Mocktail fame is the leading lady. Love 360 had a tepid start at the box office but went on from strength to strength on the back of very good word of mouth publicity. 

    Shashank has said that the final details of the remake deal is being worked out and details of the production house and cast would be revealed in a few days. 

  • ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

    ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

    ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ ಬಿಡುಗಡೆಯಾಗಿದೆ. ಚಿತ್ರ ಇದೇ ಆಗಸ್ಟ್ 19 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ಶಶಾಂಕ್ ನನ್ನ ಅಚ್ಚುಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಅವರ ನಿರ್ದೇಶನದಲ್ಲಿ ನಾನು ನಟಿಸಬೇಕಿತ್ತು. ಕಾರಣಾಂತರದಿಂದ ಆಗಿಲ್ಲ. ಮುಂದೆ ನಮಿಬ್ಬರ ಕಾಂಬಿನೇಶನ್ ನಲ್ಲಿ ಚಿತ್ರ ಬರುತ್ತದೆ. ಸದ್ಯ ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಟ್ರೇಲರ್ ನೋಡಿದೆ. ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೆ" ಹಾಡಂತೂ ನನಗೆ ಬಹಳ ಇಷ್ಟ. ನಾಯಕ, ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಾನು ಬಿಡುಗಡೆ ದಿನದಂದೇ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಅಭಿಮಾನಿಗಳ

    ಜೊತೆಗೆ ನೋಡುತ್ತೇನೆ ಎಂದರು ನಟ ಶಿವರಾಜಕುಮಾರ್.

    ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದಗಳು. ಚಿತ್ರ ಆಗಸ್ಟ್ ೧೯ರಂದು ತೆರೆ ಕಾಣಲಿದೆ. ಅದಕ್ಕೂ ಮುನ್ನ ನಾವು ಬೇರೆ ಬೇರೆ ಊರುಗಳಿಗೆ ಭೇಟಿ ನೀಡುತ್ತಿದ್ದೇವೆ. ಹೋದ ಕಡೆ ಸಿಗುತ್ತಿರುವ

    ಅಭೂತಪೂರ್ವ ಬೆಂಬಲಕ್ಕೆ‌ ಮನತುಂಬಿ ಬಂದಿದೆ. ಖ್ಯಾತ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಯವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ನೂರೈವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳನ್ನು ಜನಪ್ರಿಯಗೊಳಿಸಿರುವ ಕನ್ನಡ ಕಲಾ ರಸಿಕರು ಚಿತ್ರವನ್ನೂ ಗೆಲಿಸುತ್ತಾರೆಂಬ ನಂಬಿಕೆ ಇದೆ ಎಂದರು ನಿರ್ದೇಶಕ ಶಶಾಂಕ್.

    ನನ್ನ ಸ್ನೇಹಿತನೊಬ್ಬ, "ನೀನು ಹೀರೋ ತರಹ ಇಲ್ಲ. ನಿನ್ನ ಸಿನಿಮಾ ಯಾರು ನೋಡುತ್ತಾರೆ ಅಂದಿದ್ದ". ಆ ಮಾತು‌ ನನ್ನ ಮನಸ್ಸಿನಲ್ಲೇ ಇತ್ತು. ಆದರೆ ಈಗ ಬೇರೆ ಬೇರೆ ಊರುಗಳಿಗೆ, ಅದರಲ್ಲೂ ಕಾಲೇಜುಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ನನ್ನನ್ನು ಗುರುತಿಸುತ್ತಿರುವ ರೀತಿ ಕಂಡು ಆಶ್ಚರ್ಯವಾಗಿದೆ. ಹೆಣ್ಣುಮಕ್ಕಳಂತೂ ನಾವು ನಿಮ್ಮ ಅಭಿಮಾನಿಗಳು. ನಿಮ್ಮ ಚಿತ್ರದ ಹಾಡುಗಳು ತುಂಬಾ ‌ಚೆನ್ನಾಗಿದೆ. ನೀವು ತುಂಬಾ ಚೆನ್ನಾಗಿ ಕಾಣುತ್ತೀರಾ ಎನ್ನುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ನಿರ್ದೇಶಕ ಶಶಾಂಕ್ ಸರ್. ಅವರಿಗೆ ಹಾಗೂ ನನಗೆ ಬೆಂಬಲ ನೀಡುತ್ತಿರುವ ನನ್ನ‌ ತಾಯಿ ಹಾಗೂ ಅಂಕಲ್ ಗೆ ಧನ್ಯವಾದ ಎಂದರು ನಾಯಕ ಪ್ರವೀಣ್.

    ನಾಯಕಿ ರಚನಾ ಇಂದರ್ ಸಹ ಚಿತ್ರಕ್ಕೆ ಬಿಡುಗಡೆ ಪೂರ್ವದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಗೆ ಸಂತಸಪಟ್ಟರು. ನಟರಾದ ಡ್ಯಾನಿ ಕುಟ್ಟಪ್ಪ ಹಾಗೂ ಮಹಂತೇಶ್ ಸಹ ಚಿತ್ರದ ಕುರಿತು ಮಾತನಾಡಿದರು.

  • ತಮಿಳು, ತೆಲುಗಿಗೆ ಹೊರಟ ಲವ್ 360

    ತಮಿಳು, ತೆಲುಗಿಗೆ ಹೊರಟ ಲವ್ 360

    ಶಶಾಂಕ್ ನಿರ್ದೇಶನದ ಪ್ರವೀಣ್-ರಚನಾ ಇಂದರ್ ನಟನೆಯ ಕ್ಯೂಟ್ ಲವ್ ಸ್ಟೋರಿ ಲವ್ 360. ಇಬ್ಬರು ಮುಗ್ಧ ಪ್ರೇಮಿಗಳ ಪ್ರೇಮಕಥೆಯನ್ನು ಅಷ್ಟೇ ತೇಜೋಹಾರಿಯಾಗಿ ಹೇಳಿ ಗೆದ್ದವರು ಶಶಾಂಕ್. ಆರಂಭದಲ್ಲಿ ಪಿಕ್ ಅಪ್ ಆಗಲು ಸಮಯ ತೆಗೆದುಕೊಂಡರೂ ಸ್ಲೋಮೋಷನ್ ಹಿಟ್ ಹಾದಿಗೆ ಬಂದ ಚಿತ್ರ ಲವ್ 360. ಒಲವೇ ನೀನು ಗೆಳತಿಯೇ.. ಹಾಡಂತೂ ಪ್ರೇಮಿಗಳ ಹೃದಯಗೀತೆಯಾಗಿ ಹೋಗಿದೆ. ರಚನಾ ಇಂದರ್ ಮುಗ್ಧತೆ ಪ್ರವೀಣ್ ಹೃದಯದೊಳಗಿನ ಪ್ರೀತಿಯ ತೀವ್ರತೆಗೆ ಪ್ರೇಕ್ಷಕರೂ ಹಾಡುತ್ತಿದ್ದಾರೆ.. ಒಲವೇ ನೀನು ಗೆಳತಿಯೇ..

    ಹೀಗಿರುವಾಗಲೇ ಚಿತ್ರಕ್ಕೆ ದೊಡ್ಡ ಮಟ್ಟದ ಡಿಮ್ಯಾಂಡ್ ಸೃಷ್ಟಿಯಾಗಿದೆ. ಲವ್ 360ಯನ್ನು ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣದ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ. ಮಾತುಕತೆಯೂ ಶುರುವಾಗಿದೆ. ಅಂದಹಾಗೆ ಈ ಚಿತ್ರವನ್ನು ಗೆಲುವಿನ ಹಾದಿಗೆ ತಂದವರು ಪ್ರೇಕ್ಷಕರೇ. ಸಿನಿಮಾ ನೋಡಿದವರು ಮೆಚ್ಚಿದವರು ಮಾಡಿದ ಬಾಯಿಮಾತಿನ ಪ್ರಚಾರವೇ ಲವ್ 360 ಚಿತ್ರವನ್ನು ಇಡೀ ಚಿತ್ರರಂಗ ಮಾತನಾಡುವಂತೆ ಮಾಡಿದೆ.

    ಈ ಚಿತ್ರದ ಮೂಲಕ ಪ್ರವೀಣ್ ಎಂಬ ಹೊಸ ಹೀರೋ ಕನ್ನಡಕ್ಕೆ ದಕ್ಕಿದ್ದರೆ, ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ತಮ್ಮೊಳಗೆ ಎಂತಹ ಕಲಾವಿದೆ ಇದ್ದಾಳೆ ಅನ್ನೋದನ್ನ ಸಾಬೀತು ಮಾಡಿದ್ದಾರೆ. 

  • ಪ್ರೀತಿಯ ಮನವಿಗೆ ತಲೆಬಾಗಿದ ಪ್ರೇಕ್ಷಕ : ಗೆಲುವಿನ ಹಾದಿಯಲ್ಲಿ ಲವ್ 360

    ಪ್ರೀತಿಯ ಮನವಿಗೆ ತಲೆಬಾಗಿದ ಪ್ರೇಕ್ಷಕ : ಗೆಲುವಿನ ಹಾದಿಯಲ್ಲಿ ಲವ್ 360

    ಲವ್ 360. ಇದೇ ಶುಕ್ರವಾರ ರಿಲೀಸ್ ಆಗಿದ್ದ ಸಿನಿಮಾ. ಶಶಾಂಕ್ ನಿರ್ದೇಶನವಿದ್ದ ಕಾರಣಕ್ಕೆ ನಿರೀಕ್ಷೆಯೂ ಜೋರಾಗಿತ್ತು. ಹೊಸಬರಾದ ಪ್ರವೀಣ್ ಮತ್ತು ರಚನಾ ಇಂದರ್ ನಾಯಕ ನಾಯಕಿಯರಾಗಿದ್ದ ಚಿತ್ರ ಲವ್ 360 ಬಗ್ಗೆ ಟ್ರೆಂಡಿಂಗ್ ಕೂಡಾ ಇತ್ತು. ಅದರಲ್ಲೂ ಜಗವೇ ನೀನು ಗೆಳತಿಯೇ.. ಹಾಡು ಪ್ರೇಮಿಗಳ ಹೃದಯಗೀತೆಯಾಗಿತ್ತು. ಆದರೆ ಮೊದಲ 2 ದಿನ ನಿರೀಕ್ಷೆಗೆ ತಕ್ಕಂತೆ ಜನರೇ ಬಂದಿರಲಿಲ್ಲ. ಆಗ ನಿರ್ದೇಶಕ ಶಶಾಂಕ್ ಪ್ರೇಕ್ಷಕರಿಗೆ ಮನವಿ ಮಾಡಿದ್ದರು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ದಯವಿಟ್ಟು ನೋಡಿ. ನೀವು ಬರದೇ ಹೊದರೆ ಥಿಯೇಟರಿಂದ ತೆಗೆಯುತ್ತಾರೆ. ನೀವು ಖಂಡಿತಾ ಇಷ್ಟಪಡುತ್ತೀರಿ. ಜಗವೇ ನೀನು ಗೆಳತಿಯೇ ಹಾಡು ಇರುವ ಸಿನಿಮಾ ಇದು ಎಂದು ಕೇಳಿಕೊಂಡಿದ್ದರು. ಶಶಾಂಕ್ ಮನವಿ ಕೆಲಸ ಮಾಡಿದೆ. ಈಗ ಚಿತ್ರ ಗೆಲುವಿನ ಹಾದಿಗೆ ಬಂದಿದೆ.

    ನಾನು ಪ್ರೇಕ್ಷಕರನ್ನು ದೂರುವುದಿಲ್ಲ. ಚಿತ್ರ ನೋಡಿದವರೆಲ್ಲ ಮೆಚ್ಚಿಕೊಂಡಿರುವಾಗ ಜನರು ಬಾರದೇ ಇದ್ದದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದ್ದಂತೂ ನಿಜ. ಆದರೆ ಈಗ ಪಿಕಪ್ ಆಗಿದೆ. ಬೆಂಗಳೂರು, ದಾವಣಗೆರೆ, ವಿಜಯಪುರ ಸೇರಿದಂತೆ ಎಲ್ಲ ಕಡೆ ಉತ್ತಮ ರೆಸ್ಪಾನ್ಸ್ ಇದೆ ಎಂದಿದ್ದಾರೆ ಶಶಾಂಕ್.

    ಸೆಕೆಂಡ್ ಹಾಫ್‍ನಲ್ಲಿ 1.10 ನಿಮಿಷ ಇದೆ. ಆದರೆ ಅಷ್ಟೂ ಅವಧಿಯಲ್ಲಿರೋದು ಕೇವಲ 30 ನಿಮಿಷ ಡೈಲಾಗ್. ಉಳಿದದ್ದೆಲ್ಲವನ್ನೂ ದೃಶ್ಯಗಳೇ ಹೇಳುತ್ತವೆ. ಇದು ಥಿಯೇಟರ್ ಪ್ರೇಕ್ಷಕರಿಗಾಗಿಯೇ ಮಾಡಿರುವ ಸಿನಿಮಾ. ಜನ ನೋಡಲಿಲ್ಲ, ಇಷ್ಟ ಪಡಲಿಲ್ಲ ಎಂದಾಗ ನಾನು ಜನರನ್ನು ದೂರುವುದಿಲ್ಲ. ಆದರೆ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂದು ದೂರುವವರು ಖಂಡಿತಾ ಈ ಚಿತ್ರ ನೋಡಿ ಎಂದಿದ್ದಾರೆ ಶಶಾಂಕ್.

    ಲವ್ 360 ಕೇವಲ ಲವ್ ಸ್ಟೋರಿಯಲ್ಲ. ಅಲ್ಲೊಂದು ಕ್ರೈಂ ಮತ್ತು ಥ್ರಿಲ್ಲರ್ ಸ್ಟೋರಿಯೂ ಇದೆ. ಪ್ರೇಕ್ಷಕರು ನಿಧಾನವಾಗಿಯೇ ಥಿಯೇಟರಿಗೆ ಬರುತ್ತಿದ್ದು, ಚಿತ್ರ ಗೆಲುವಿನ ಹಾದಿಗೆ ಬಂದಿರುವುದು ತಂಡದ ಖುಷಿ ಹೆಚ್ಚಿಸಿದೆ.

    ಇತ್ತೀಚೆಗೆ ಬಾಲಿವುಡ್‍ನಲ್ಲಿ ನಮ್ಮ ಚಿತ್ರ ಇಷ್ಟವಾಗದಿದ್ದರೆ ನೊಡಬೇಡಿ ಎಂಬ ಅಹಂಕಾರ ಮಾತುಗಳನ್ನಾಡಿ ಚಿತ್ರದ ಕಲೆಕ್ಷನ್ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರೀತಿಯ ಮನವಿಗೆ ಖಂಡಿತಾ ಪ್ರೇಕ್ಷಕರು ಸ್ಪಂದಿಸುತ್ತಾರೆ. ಮತ್ತದು ಒಳ್ಳೆಯ ಸಿನಿಮಾ ಆಗಿದ್ದರೆ ಚಿತ್ರವನ್ನೂ ಗೆಲ್ಲಿಸುತ್ತಾರೆ ಎಂಬುದಕ್ಕೆ ಲವ್ 360 ಸಾಕ್ಷಿ.

  • ಮೆಲೋಡಿ ಮೆರವಣಿಗೆ : ಲವ್ 360 ಹಾಡುಗಳ ಮೋಡಿ

    ಮೆಲೋಡಿ ಮೆರವಣಿಗೆ : ಲವ್ 360 ಹಾಡುಗಳ ಮೋಡಿ

    ಶಶಾಂಕ್ ಚಿತ್ರಗಳೇ ಹಾಗೆ.. ಚೆಂದದ ಕಥೆಯ ಜೊತೆ ಜೊತೆಗೇ  ಮೆಲೋಡಿ ಹಾಡುಗಳ ಮೆರವಣಿಗೆಯೂ ಇರುತ್ತದೆ. ಮೊಗ್ಗಿನ ಮನಸ್ಸು ಚಿತ್ರದಿಂದ ಆರಂಭವಾದ ಶಶಾಂಕ್ ಮತ್ತು ಮೆಲೋಡಿ ಹಾಡುಗಳ ಜುಗಲ್‍ಬಂಧಿ ಈಗಲೂ ಮುಂದುವರೆದಿದೆ. ಇದೇ ವಾರ ಬಿಡುಗಡೆಯಾಗುತ್ತಿರೋ ಲವ್ 360 ಚಿತ್ರದ ಹಾಡುಗಳೆಲ್ಲವೂ ಮೆಲೋಡಿ.. ಮೆಲೋಡಿ.. ಮೆಲೋಡಿ.. ಕೇಳುತ್ತಾ ಕೇಳುತ್ತಾ ಗುನುಗುನುಗುಟ್ಟಬೇಕು.. ಮೆಲೋಡಿಗಳ ಶಕ್ತಿಯೇ ಅದು.

    ಸಿದ್ಧ್ ಶ್ರೀರಾಮ್ ಹಾಡಿರುವ ಜಗವೇ ನೀನು.. ಗೆಳತಿಯೇ ಹಾಡು ಗುಂಗು ಹಿಡಿಸಿದ್ದರೆ, ಸಂಜಿತ್ ಹೆಗ್ಡೆ ಹಾಡಿರುವ ಸಖಿಯೇ ಸಾವರಿಸು.. ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತಿದೆ. ಭೋರ್ಗರೆದು ಕಡಲು.. ಹಾಡಿನ ಮ್ಯಾಜಿಕ್ಕೇ ಬೇರೆ.. ಇದರ ಮಧ್ಯೆ ಯೋಗರಾಜ್ ಭಟ್ಟ ಜಜಾಂಗ್ ಜಾಂಗ್ ಹಾಡು ಮಾತ್ರ ಸ್ವಲ್ಪ ಡಿಫರೆಂಟು. ಆದರೆ.. ಲವ್ ಪಾರ್ಟಿಗೆ ಹೇಳಿ ಮಾಡಿಸಿರೋ ಹಾಡು. ಪ್ರೀತಿ ಸಕ್ಸಸ್ ಆದವರಿಗೂ.. ಫೇಲ್ಯೂರ್ ಆದವರಿಗೂ ಏಕಕಾಲಕ್ಕೆ ರೀಚ್ ಆಗಬಲ್ಲ ಗೀತೆ..

    ಇದು ಶಶಾಂಕ್ ಮತ್ತು ಅರ್ಜುನ್ ಜನ್ಯ ಅವರ ಹ್ಯಾಟ್ರಿಕ್ ಮೋಡಿ. ಜರಾಸಂಧ ಮತ್ತು ಮುಂಗಾರುಮಳೆ 2 ನಂತರ ಇಬ್ಬರೂ ಮತ್ತೊಮ್ಮೆ ಜೊತೆಯಾಗಿದ್ದಾರೆ. ಚಿತ್ರದ ಹಾಡುಗಳು ಹಿಟ್ ಆಗಿವೆ. ಅದರಲ್ಲೂ ಜಗವೇ ನೀನು.. ಆ ಹಾಡನ್ನು ಹೇಗೆ ಚಿತ್ರೀಕರಿಸಬಹುದು ಎಂಬ ಕುತೂಹಲ ಹಲವರಲ್ಲಿದೆ. ನಿಮಗೆ ನಿರಾಶೆ ಮಾಡುವುದಿಲ್ಲ. ಇಡೀ ಚಿತ್ರದಲ್ಲಿ ಪ್ರತಿ ಪಾತ್ರಕ್ಕೂ ಒಂದೊಂದು ಥೀಮ್ ಮ್ಯೂಸಿಕ್ ಇದೆ. ಈ ಚಿತ್ರದ ಹಾಡು ಮತ್ತು ಸಂಗೀತದ ಮೂಲಕ ಅರ್ಜುನ್ ಜನ್ಯ ಹೊಸ ಸ್ಟಾಂಡರ್ಡ್ ಸೃಷ್ಟಿಸಲಿದ್ದಾರೆ. ಇಡೀ ಚಿತ್ರ ಒಂದು ಭಾವನೆಗಳ ಪಯಣ ಎನ್ನುವುದು ಶಶಾಂಕ್ ಕೊಡುವ ಭರವಸೆ.

    ಶಶಾಂಕ್ ಕೊಟ್ಟಿರುವ ಯಾವ ಭರವಸೆಗಳೂ ಇದುವರೆಗೆ ಹುಸಿಯಾಗಿಲ್ಲ. ಅದರಲ್ಲೂ ಲವ್ ಸ್ಟೋರಿಗಳದ್ದು. ಈ ಬಾರಿ ಪ್ರವೀಣ್ ಮತ್ತು ರಚನಾ ಇಂದರ್‍ರಂತಹ ಮುದ್ದು ಮುದ್ದಾದ ಜೋಡಿಯೊಂದು ಸಿಕ್ಕಿದೆ. ಚಿತ್ರಕ್ಕೆ ಶಶಾಂಕ್ ಅವರಷ್ಟೇ ಅಲ್ಲ, ಡಾ.ಮಂಜುಳಾ ಮೂರ್ತಿ ಕೂಡಾ ನಿರ್ಮಾಪಕರು

  • ಲವ್ 360 ಲಾಸ್ ಆಗಲಿಲ್ಲ... ಆದರೆ..

    ಲವ್ 360 ಲಾಸ್ ಆಗಲಿಲ್ಲ... ಆದರೆ..

    ಲವ್ 360. ಪ್ರೇಕ್ಷಕರಿಗೆ ಪ್ರೀತಿಯ ಬೇರೆಯದೇ ಅನುಭವ ನೀಡಿದ ಚಿತ್ರ. ಒಲವೇ ನೀನು ಗೆಳತಿಯೇ.. ಹಾಡಂತೂ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿ ಹೋಗಿತ್ತು. ರಚನಾ ಇಂದರ್ ಮತ್ತು ಪ್ರವೀಣ್ ಅಭಿನಯದ ಸಿನಿಮಾ ಪ್ರೀತಿಯ ಬೇರೊಂದು ಎತ್ತರವನ್ನು ತೋರಿಸಿತ್ತು. ಆರಂಭದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಚಿತ್ರ, ಶಶಾಂಕ್ ಮನವಿಯ ನಂತರ ಮೇಲೆದ್ದಿತ್ತು. ಸಿನಿಮಾ ಲಾಭದ ಹಳಿಗೆ ಬಂದಿತ್ತು.

    ಲವ್ 360 ಸಿನಿಮಾ ಕೈ ಕಚ್ಚಲಿಲ್ಲ. ನಷ್ಟವಂತೂ ಆಗಲಿಲ್ಲ. ಸಿನಿಮಾ ಬಿಡುಗಡೆಗೆ ಮುನ್ನವೇ ಹಾಕಿದ ಬಂಡವಾಳದ ಶೇ.75ರಷ್ಟು ಹಣ ಬಂದಿತ್ತು. ಉಳಿದ ಶೇ.25ರಷ್ಟು ಬಂಡವಾಳ ಥಿಯೇಟರಿಂದ ಬರಬೇಕಿತ್ತು. 2ನೇ ವಾರ ಚಿತ್ರ ಪಿಕಪ್ ಆಯಿತು. ಆದರೆ.. ಹಾಕಿದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ ಅನ್ನೋದಷ್ಟೇ ಬೇಸರ ಎನ್ನುತ್ತಾರೆ ಶಶಾಂಕ್.

    ಲವ್ 360 ಮುಗಿದ ಬೆನ್ನಲ್ಲೇ ಡಾರ್ಲಿಂಗ್ ಕೃಷ್ಣ ಜೊತೆ ಮೊದಲೇ ಘೋಷಿಸಿದ್ದಂತೆ ಹೊಸ ಚಿತ್ರ ಘೋಷಣೆ ಮಾಡಿದ್ದಾರೆ. ಇನ್ನೊಂದೆರಡು ಮೂರು ದಿನಗಳಲ್ಲಿ ನಾಯಕಿಯ ಫೈನಲೈಸ್ ಮಾಡುತ್ತೇವೆ. ಇದು ನನ್ನ ಬ್ಯಾನರ್‍ನಲ್ಲೇ ತಯಾರಾಗುವ ಸಿನಿಮಾ. ಕ್ಯಾನ್‍ವಾಸ್ ದೊಡ್ಡದು. ಅದ್ಧೂರಿ ಬಜೆಟ್ ಅಂತೂ ಇರುತ್ತೆ ಎಂದಿದ್ದಾರೆ ಶಶಾಂಕ್.