` aamir khan, - chitraloka.com | Kannada Movie News, Reviews | Image

aamir khan,

 • ಐ ಲವ್ ಇಂಡಿಯಾ. ನನ್ನ ಚಿತ್ರಕ್ಕೆ ಬಾಯ್ಕಾಟ್ ಬೇಡ : ಅಮೀರ್ ಖಾನ್

  ಐ ಲವ್ ಇಂಡಿಯಾ. ನನ್ನ ಚಿತ್ರಕ್ಕೆ ಬಾಯ್ಕಾಟ್ ಬೇಡ : ಅಮೀರ್ ಖಾನ್

  ನಾನು ಭಾರತವನ್ನು ಪ್ರೀತಿಸುತ್ತೇನೆ. ಕೆಲವರು ನಾನು ಭಾರತವನ್ನು ಇಷ್ಟಪಡದ ವ್ಯಕ್ತಿ ಎಂದು ನಂಬಿದ್ದಾರೆ. ಅದು ಅವರ ನಂಬಿಕೆ ಅಷ್ಟೆ. ವಾಸ್ತವ ಅಲ್ಲ. ನಾನು ಭಾರತವನ್ನು ಇಷ್ಟಪಡಲ್ಲ ಅನ್ನೊದೆಲ್ಲ ಸುಳ್ಳು. ನಾನು ಭಾರತವನ್ನು ಪ್ರೀತಿಸುತ್ತೇನೆ. ದಯವಿಟ್ಟು ನನ್ನ ಚಿತ್ರವನ್ನು ಬಾಯ್ಕಾಟ್ ಮಾಡಬೇಡಿ. ನನ್ನ ಸಿನಿಮಾಗಳನ್ನು ನೋಡಿ.

  ಇದು ಅಮೀರ್ ಖಾನ್ ಮಾಡಿಕೊಂಡಿರುವ ಬಹಿರಂಗ ಮನವಿ. ಅಮೀರ್ ಖಾನ್ ಚಿತ್ರ ಲಾಲ್ ಸಿಂಗ್ ಚಡ್ಡಾ ಇದೇ ವಾರ ರಿಲೀಸ್ ಆಗಬೇಕಿದೆ. ಅದಕ್ಕೆ ಮೊದಲೇ ಈ ಚಿತ್ರನ್ನು ನೋಡಬೇಡಿ.  ಬಾಯ್ಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಈ ಹಿನ್ನೆಲೆಯಲ್ಲಿ ಅಮೀರ್ ಖಾನ್ ಬಹಿರಂಗವಾಗಿ ಈ ಮಾತು ಹೇಳಿದ್ದಾರೆ.

  ಬಾಯ್ಕಾಟ್ ಅಭಿಯಾನಕ್ಕೆ ಏನು ಕಾರಣ?

  ಅಮೀರ್ ಖಾನ್ ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಅಸಹಿಷ್ಣುತೆ ಇದೆ. ಈ ದೇಶದಲ್ಲಿ ಇರಲು ಭಯವಾಗುತ್ತಿದೆ ಎಂದು ನನ್ನ ಹೆಂಡತಿ ಹೇಳುತ್ತಾಳೆ. ಆಕೆಯ ಮಾತಿನಲ್ಲಿ ಸತ್ಯವಿದೆ ಎನಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಅದು ಪ್ರಧಾನಿ ಮೋದಿ ವಿರುದ್ಧ ಸಾಹಿತಿಗಳು, ಸೆಲಬ್ರಿಟಿಗಳು ಅಸಹಿಷ್ಣುತೆ ಕಾರಣ ಹೇಳಿ ಪ್ರಶಸ್ತಿಗಳನ್ನೆಲ್ಲ ಹಿಂದಿರುಗಿಸಿ ಹೋರಾಟ ನಡೆಸುತ್ತಿದ್ದ ಕಾಲ. ಆಗ ಅಮೀರ್ ಖಾನ್ ಮಾತಿಗೆ ದೊಡ್ಡ ಪ್ರಚಾರವೂ ಸಿಕ್ಕಿತ್ತು. ಆಗಲೂ ಅಮೀರ್ ಖಾನ್ ಟೀಕೆಗಳನ್ನೆದುರಿಸಿದ್ದರು. ಆದರೆ.. ಅದೊಂದು ವ್ಯವಸ್ಥಿತ ಅಭಿಯಾನ ಎಂಬುದು ಆಮೇಲೆ ಗೊತ್ತಾಗಿತ್ತು.

  ಆನಂತರ ಅದೇ ಬಿಸಿಯಲ್ಲಿ ಪಿಕೆ ಚಿತ್ರದಲ್ಲಿ ಹಿಂದೂ ದೇವರುಗಳಿಗೆ ಅವಮಾನ ಮಾಡಿದ್ದಾರೆ ಎಂಬ ವಿವಾದವೂ ಭುಗಿಲೆದ್ದಿತ್ತು. ಪಿಕೆ ಚಿತ್ರದಲ್ಲಿ ಹಿಂದೂ ಧರ್ಮದ ಮೂಢನಂಬಿಕೆಗಳು, ದೇವರನ್ನು ಲೇವಡಿ ಮಾಡುವ ಅಮೀರ್ ಪಾತ್ರ ಇತರೆ ಧರ್ಮದ ವಿಷಯಗಳನ್ನು ನೆಪಕ್ಕೂ ಮಾತನಾಡುವುದಿಲ್ಲ. ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಕೂಗು ಕೇಳಿ ಬಂದಿತ್ತು.

  ಬೆನ್ನಲ್ಲೇ ಸತ್ಯಮೇವಜಯತೆ ಶೋನಲ್ಲಿ ದೇವರಿಗೆ ಹಾಲಿನ ಅಭಿಷೇಕ ಮಾಡುವ ಬದಲು ಅದನ್ನು ಬಡ ಮಕ್ಕಳಿಗೆ ನೀಡಿ. ಹಾಲನ್ನು ವೇಸ್ಟ್ ಮಾಡಬೇಡಿ ಎಂದು ಕರೆಕೊಟ್ಟಿದ್ದರು. ದೇವರಿಗೆ ಅಭಿಷೇಕ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿಕೆ ನೀಡಿದ್ದರು.

  ಇವೆಲ್ಲವೂ ಒಟ್ಟಾಗಿ ಈಗ ಕಾಡೋಕೆ ಶುರುವಾಗಿವೆ. ಅಮೀರ್ ಖಾನ್ ಚಿತ್ರ ನೋಡುವ ಬದಲು ಆ ಹಣದಲ್ಲಿ ಯಾರಾದರೂ ಬಡವರಿಗೆ ಸಹಾಯ ಮಾಡಿ. ಹಿಂದೂ ವಿರೋಧಿಯ ಚಿತ್ರವನ್ನು ಬಹಿಷ್ಕರಿಸಿ ಎಂಬ ಕೂಗು ಬಲವಾಗಿ ಎದ್ದಿದೆ.

 • ಡ್ಡಾ ಎಫೆಕ್ಟ್ : ಮೊಘಲ್ ಸಿನಿಮಾ ಡ್ರಾಪ್ ಮಾಡಿದ ಅಮೀರ್ ಖಾನ್

  ಡ್ಡಾ ಎಫೆಕ್ಟ್ : ಮೊಘಲ್ ಸಿನಿಮಾ ಡ್ರಾಪ್ ಮಾಡಿದ ಅಮೀರ್ ಖಾನ್

  ಎಲ್ಲ ಕಡೆಯೂ ಈಗ ಬಾಯ್ಕಾಟ್‍ನದ್ದೇ ಚರ್ಚೆ. ಅಮೀರ್ ಖಾನ್ ಚಿತ್ರಕ್ಕಂತೂ ದೊಡ್ಡ ಮಟ್ಟದ ಹೊಡೆತ ಕೊಟ್ಟಿದೆ ಬಾಯ್ಕಾಟ್ ಕ್ಯಾಂಪೇನ್. ಈ ಬಾಯ್ಕಾಟ್ ಎಲ್ಲ ಸೋಷಿಯಲ್ ಮೀಡಿಯಾ ಘರ್ಜನೆಗಷ್ಟೇ ಸೀಮಿತ ಎಂದುಕೊಂಡಿದ್ದವರಿಗೆ ಲಾಲ್ ಸಿಂಗ್ ಚಡ್ಡಾ ಓಪನಿಂಗ್ ಶಾಕ್ ಕೊಟ್ಟಿತ್ತು. ಕಂಡು ಕೇಳರಿಯದ ರೀತಿಯಲ್ಲಿ ಮಕಾಡೆ ಮಲಗಿತ್ತು ಚಡ್ಡಾ. ಅಮೀರ್ ಖಾನ್, ಕರೀನಾ ಕಪೂರ್ ತಮ್ಮ ಹಿಂದೂ ವಿರೋಧಿ ಹೇಳಿಕೆಗಳು ಸೇರಿದಂತೆ ಹಳೆಯ ಪ್ರಮಾದಗಳಿಗೆ ಕೇಳಿದ ಕ್ಷಮೆಗಳು ಕೆಲಸ ಮಾಡಲಿಲ್ಲ. ಪ್ರೇಕ್ಷಕರು ಜಪ್ಪಯ್ಯ ಅನ್ನಲಿಲ್ಲ. ಈಗ ಅದರ ಎಫೆಕ್ಟ್ ಮುಂದಿನ ಚಿತ್ರಕ್ಕೆ ತಟ್ಟಿದೆ ಎಂಬ ಸುದ್ದಿ ಬಂದಿದೆ.

  ಲಾಲ್ ಸಿಂಗ್ ಚಡ್ಡಾ ನಂತರ ಅಮೀರ್ ಖಾನ್ ಮೊಗಲ್ ಸಿನಿಮಾ ಮಾಡಬೇಕಿತ್ತು. ಹಾಗಂತ ಅದು ಮೊಘಲರ ಕಥೆಯೇನೂ ಆಗಿರಲಿಲ್ಲ. ಸಂಗೀತ ಲೋಕದ ಮಾಂತ್ರಿಕನೆಂದೇ ಹೆಸರಾಗಿದ್ದ ಗುಲ್ಷನ್ ಕುಮಾರ್ ಬಯೋಪಿಕ್. ಟಿ-ಸಿರೀಸ್ ಸಂಸ್ಥೆಯ ಸಂಸ್ಥಾಪಕ ಗುಲ್ಷನ್ ಕುಮಾರ್ ಲೈಫ್ ಸ್ಟೋರಿಯನ್ನು ಸಿನಿಮಾ ಮಾಡೋಕೆ ಸುಭಾಷ್ ಕಪೂರ್ ಸಿದ್ಧರಾಗಿದ್ದರು. ಮೊದಲು ಆ ಪಾತ್ರಕ್ಕೆ ಓಕೆ ಎಂದಿದ್ದ ಅಕ್ಷಯ್ ಕುಮಾರ್ ಚಿತ್ರವನ್ನು ಡ್ರಾಪ್ ಮಾಡಿದ್ದರು. ಅದಾದ ಮೇಲೆ ಅಮೀರ್ ಖಾನ್ ಎಸ್ ಎಂದಿದ್ದರು. ನಿರ್ಮಾಣದಲ್ಲೂ ಪಾಲುದಾರಿಕೆಗೆ ಆಸಕ್ತಿ ತೋರಿಸಿದ್ದರು. ಈಗ ಆ ಚಿತ್ರವನ್ನು ಡ್ರಾಪ್ ಮಾಡಲಾಗಿದೆ.

  ಅಮೀರ್ ವೃತ್ತಿ ಜೀವನದಲ್ಲೇ ಅತೀ ದೊಡ್ಡ ಸೋಲು ಎನಿಸಿಕೊಂಡಿರುವ ಲಾಲ್ ಸಿಂಗ್ ಚಡ್ಡಾ ಎಫೆಕ್ಟ್ ನಂತರ ಮೊಗಲ್ ಚಿತ್ರವನ್ನು ಕೈ ಬಿಟ್ಟಿದ್ದಾರೆ ಅಮೀರ್ ಖಾನ್. ಈಗಿನ ಪರಿಸ್ಥಿತಿಯಲ್ಲಿ ಆ ಸಿನಿಮಾ ಮಾಡುವುದರಿಂದ ಲಾಭವಿಲ್ಲ ಎಂಬ ಹಿನ್ನೆಲೆಯಲ್ಲಿ ಚಿತ್ರವನ್ನು ಕೈಬಿಟ್ಟಿದ್ದಾರೆ ಅಮೀರ್ ಖಾನ್.

  ಹಾಗಂತ ಲಾಲ್ ಸಿಂಗ್ ಚಡ್ಡಾ ಅಮೀರ್ ಖಾನ್‍ರನ್ನು ಬೀದಿಗೇನೂ ತಂದಿಲ್ಲ. ಚಿತ್ರಕ್ಕೆ ಹಾಕಿದ ಬಂಡವಾಳ ಆಗಲೇ ವಾಪಸ್ ಬಂದಾಗಿದೆ. ಸಿನಿಮಾ ಸೋತಿರೋದು ಥಿಯೇಟರಲ್ಲಿ ಮಾತ್

 • ಬಾಯ್ಕಾಟ್ ಬಿಸಿಗೆ ಡುಮ್ಕಿ ಹೊಡೆದ ಚಡ್ಡಾ ಮತ್ತೊಂದು ವಿವಾದ

  ಬಾಯ್ಕಾಟ್ ಬಿಸಿಗೆ ಡುಮ್ಕಿ ಹೊಡೆದ ಚಡ್ಡಾ ಮತ್ತೊಂದು ವಿವಾದ

  ಅಮೀರ್ ಖಾನ್ ವೃತ್ತಿ ಜೀವನದ ಕಳೆದ 13 ವರ್ಷಗಳಲ್ಲಿ ಅತ್ಯಂತ ಕಡಿಮೆ ಗಳಿಕೆಯ ಓಪನಿಂಗ್ ಕಂಡ ಚಿತ್ರ ಲಾಲ್ ಸಿಂಗ್ ಚಡ್ಡಾ. ಮೊದಲ ದಿನದ ಗಳಿಕೆ 11 ಕೋಟಿಯ ಆಸುಪಾಸು.

  2ನೇ ದಿನ 1300ಕ್ಕೂ ಹೆಚ್ಚು ಶೋಗಳೇ ಕ್ಯಾನ್ಸಲ್. ಜನರಿಲ್ಲ. ಬುಕ್ಕಿಂಗ್ ಇಲ್ಲ.

  ಅಮೀರ್ ಚಿತ್ರಗಳೆಂದರೆ ಒಂದೆರಡು ದಿನದಲ್ಲಿ 100 ಕೋಟಿ ಕಲೆಕ್ಷನ್‍ನ್ನು ಸಲೀಸಾಗಿ ದಾಟುತ್ತಿದ್ದವು. ಅಮೀರ್`ರ ಹಿಂದಿನ ಚಿತ್ರ ಥಗ್ಸ್ ಆಫ್ ಹಿಂದೂಸ್ತಾನ್‍ನಂತ ಚಿತ್ರವೂ (ವಿಮರ್ಶಕರ ಪ್ರಕಾರ ಇದು ಅಮೀರ್ ಚಿತ್ರಗಳಲ್ಲೇ ಅತ್ಯಂತ ಡಬ್ಬಾ ಸಿನಿಮಾ) ಮೊದಲ ದಿನ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆದರೆ, ಲಾಲ್ ಸಿಂಗ್ ಚಡ್ಡಾ ದಬ್ಬಾಕ್ಕೊಂಡಿದೆ.

  ಇದರ ಮಧ್ಯೆ ಚಡ್ಡಾ ಚಿತ್ರದಲ್ಲೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ದೃಶ್ಯಗಳಿವೆ ಎಂಬ ಆರೋಪ ಕೇಳಿ ಬಂದಿವೆ. ಚಿತ್ರದಲ್ಲಿ ದೇವರ ಪೂಜೆ, ಪಾಠ ಮಾಡೋದ್ರಿಂದ ಮಲೇರಿಯಾ ಬರುತ್ತೆ ಅಂತಾ ತಾಯಿ ಮಗನಿಗೆ ಹೇಳೋ  ದೃಶ್ಯವಿದೆಯಂತೆ. ಅಮೀರ್ ಖಾನ್ ಸಿಖ್ ಪಾತ್ರದಲ್ಲಿ ನಟಿಸಿರೋದ್ರಿಂದ ಇದು ಸಿಖ್ಖರು ಮತ್ತು ಹಿಂದೂಗಳು ಇಬ್ಬರ ಧಾರ್ಮಿಕ ಭಾವನೆಗೂ ಧಕ್ಕೆಯಾಗಿದೆ ಎನ್ನಲಾಗುತ್ತಿದೆ.

  ಇದರ ಜೊತೆಗೆ ಭಾರತೀಯ ಸೈನ್ಯದಲ್ಲಿ ಮಾನಸಿಕ ಅಸ್ವಸ್ಥರನ್ನೇ ಆಗಲೀ, ಮಾನಸಿಕ ಬೆಳವಣಿಗೆಯಾಗದ ವ್ಯಕ್ತಿಗಳನ್ನೇ ಆಗಲಿ ಸೇರಿಸಿಕೊಳ್ಳಲ್ಲ. ಜೊತೆಗೆ ಸೈನ್ಯದಲ್ಲಿ ಸಿಖ್ಖರಿಗೆ  ಗಡ್ಡ ಬಿಡುವ, ಪೇಟಾ ಧರಿಸಲು ಅವಕಾಶವಿದೆ. ಹೀಗಾಗಿ ಚಡ್ಡಾ ಚಿತ್ರ ಭಾರತೀಯ ಸೇನೆಗೂ ಮಾಡಿದ ಅವಮಾನ ಎಂದು ಇಂಗ್ಲೆಂಡ್ ಕ್ರಿಕೆಟಿಗ ಮಾಂಟಿ ಪನೇಸರ್ ಸೇರಿದಂತೆ ಹಲವರು ಕಿಡಿ ಕಾರಿದ್ದಾರೆ.

  ಇನ್ನು ಚಿತ್ರದಲ್ಲಿ ಪಾಕಿಸ್ತಾನೀಯರನ್ನೂ ಹೊಗಳುವ ದೃಶ್ಯವಿದ್ದು ಅದು ಹಿಂದೂಗಳನ್ನು ಇನ್ನಷ್ಟು ಕೆರಳಿಸಿದೆ.

  ಕೆಜಿಎಫ್ ಚಾಪ್ಟರ್ 2 ಚಿತ್ರದ ಪಾರ್ಕಿಂಗ್ ಶುಲ್ಕದ ಬಿಸಿನೆಸ್‍ನ್ನು ಚಡ್ಡಾ ಮುರಿಯಬಹುದು ಎಂಬ ಕಾಮಿಡಿಗಳೂ ಕೇಳಿಬರುತ್ತಿವೆ.

  ಅತ್ತ ರಕ್ಷಾಬಂಧನ್ ಚಿತ್ರವೂ ಇದಕ್ಕೆ ಹೊರತಾಗಿಲ್ಲ. ಅಕ್ಷಯ್ ಕುಮಾರ್ ಚಿತ್ರಕ್ಕೆ ಕಥೆ ಬರೆದಿರುವ ಕನ್ನಿಕಾ ಧಿಲ್ಲೋನ್, ಹಿಂದೂ ದೇವರ ಪೂಜೆ, ಧಾರ್ಮಿಕ ಆಚರಣೆಗಳನ್ನು ಈ ಹಿಂದೆ ಲೇವಡಿ ಮಾಡಿದ್ದವರು. ಹೀಗಾಗಿ ರಕ್ಷಾಬಂಧನ್ ಚಿತ್ರಕ್ಕೂ ಬಿಸಿ ತಟ್ಟಿದ್ದು ಮೊದಲ ದಿನದ ಕಲೆಕ್ಷನ್ 8 ಕೋಟಿ ಸಮೀಪ ಇದೆ. ಇದು ಅಕ್ಷಯ್ ವೃತ್ತಿ ಜೀವನದಲ್ಲಿ ಇತ್ತೀಚೆಗೆ ಸಿಕ್ಕಿರುವ ಅತ್ಯಂತ ಡಲ್ ಓಪನಿಂಗ್.