` virant rona, - chitraloka.com | Kannada Movie News, Reviews | Image

virant rona,

  • ಜಾಕ್ ಮಂಜುಗೆ `ಜಾಕ್'ಪಾಟ್ : ವಿಕ್ರಾಂತ್ ರೋಣ ಫಸ್ಟ್ ಡೇ ಕಲೆಕ್ಷನ್ ಎಷ್ಟು?

    ಜಾಕ್ ಮಂಜುಗೆ `ಜಾಕ್'ಪಾಟ್ : ವಿಕ್ರಾಂತ್ ರೋಣ ಫಸ್ಟ್ ಡೇ ಕಲೆಕ್ಷನ್ ಎಷ್ಟು?

    ಗರಗರಗರಗರ ಗಗ್ಗರ ಜರ್ಬ.. ಪಿರನಲ್ಕುರಿ ನೆತ್ತರ ಪರ್ಬ..

    ರಾ.. ರಾ.. ರಕ್ಕಮ್ಮ.. ರಾ.. ರಾ.. ರಕ್ಕಮ್ಮ.. ಯಕ್ಕಸಕ್ಕ ಯಕ್ಕಸಕ್ಕ..

    ಗುಮ್ಮ ಬಂದ ಗುಮ್ಮ..

    ಹೀಗೆ ಹಲವು ಸೆನ್ಸೇಷನ್ ಹುಟ್ಟುಹಾಕಿದ್ದ ವಿಕ್ರಾಂತ್ ರೋಣ ಸುದೀಪ್ ಅವರ ಇದುವರೆಗಿನ ಎಲ್ಲ ಚಿತ್ರಗಳ ದಾಖಲೆಯನ್ನೂ ಮೀರಿ ಅದ್ಧೂರಿ ಬಿಡುಗಡೆ ಕಂಡಿತ್ತು. ಮೊದಲ ದಿನ ನಡೆದದ್ದು ಒಂಭತ್ತೂವರೆ ಸಾವಿರಕ್ಕೂ ಹೆಚ್ಚು ಶೋಗಳು. ರಾಜ್ಯದಲ್ಲಿಯೇ ಎರಡೂವರೆ ಸಾವಿರ ಶೋಗಳು. ಅದ್ಧೂರಿ.. ಅಬ್ಬರ..

    ಊರ್ವಶಿ ಚಿತ್ರಮಂದಿರಕ್ಕೆ ಖುದ್ದು ಪತ್ನಿ ಪ್ರಿಯಾ ಸುದೀಪ್ ಮತ್ತು ಕಿಚ್ಚನ ರಾಜಕುಮಾರಿ ಮಗಳು ಸಾನ್ವಿ ಸುದೀಪ್ ಬಂದಿದ್ದರು. ಪ್ರಿಯಾ ಅವರೊಂದಿಗೆ ನಿರೂಪ್ ಭಂಡಾರಿ ಕೂಡಾ ಚಿತ್ರಮಂದಿರದಲ್ಲೇ ಕೂತು ಸಿನಿಮಾ ನೋಡಿದರು. ಸುದೀಪ್ ಅವರ ಆರೋಗ್ಯ ಕೈಕೊಟ್ಟಿರುವ ಕಾರಣ ಸಾನ್ವಿ ಮಧ್ಯಾಹ್ನದ ಶೋಗೆ ಬಂದರು.

    ಊರ್ವಶಿ ಚಿತ್ರಮಂದಿರವೊಂದರ ಕಲೆಕ್ಷನ್ನೇ 25 ಲಕ್ಷಕ್ಕೂ ಹೆಚ್ಚು ಎನ್ನಲಾಗುತ್ತಿದೆ. ಎಲ್ಲ ಶೋಗಳೂ ಹೌಸ್‍ಫುಲ್. ಇನ್ನೊಂದು ಪ್ರಮುಖ ಚಿತ್ರಮಂದಿರ ವೀರೇಶ್‍ನಲ್ಲಿ ಎರಡು ಸ್ಕ್ರೀನ್ ಇವೆ. 2ಡಿ ಮತ್ತು 3ಡಿ ಎರಡರಲ್ಲೂ ನೋಡಬಹುದು. ಎರಡೂ ಸೇರಿ ಮೊದಲ ದಿನ ನಡೆದದ್ದು ಒಟ್ಟು 12 ಶೋಗಳು. ಎಲ್ಲ ಶೋಗಳೂ ಹೌಸ್‍ಫುಲ್. ರಾಜ್ಯದ ವಿವಿಧೆಡೆ ಕೂಡಾ ಅದ್ಭುತ ಪ್ರದರ್ಶನ ಕಂಡಿವೆ. ಎಲ್ಲೆಡೆ ಹೌಸ್‍ಫುಲ್ ಶೋಗಳು. ಇನ್ನು 2ನೇ ದಿನದ ಶೋಗಳೂ ಆಗಲೇ ಹೌಸ್‍ಫುಲ್ ಆಗುತ್ತಿವೆ. ವಿಮರ್ಶಕರಷ್ಟೇ ಅಲ್ಲ, ಚಿತ್ರ ನೋಡಿ ಬಂದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಹೊಗಳುತ್ತಿದ್ದಾರೆ. ತೆಲಂಗಾಣ, ಆಂಧ್ರದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

    ಮೊದಲ ದಿನವೇ 55ರಿಂದ 60 ಕೋಟಿ ಕಲೆಕ್ಷನ್ ಆಗಿದೆ ಎನ್ನುವುದು ಪ್ರಾಥಮಿಕ ಮಾಹಿತಿ. ಕರ್ನಾಟಕದಲ್ಲಿ 15ರಿಂದ 20 ಕೋಟಿ ಕಲೆಕ್ಷನ್ ಎನ್ನಲಾಗಿದೆ.

    ಇದೆಲ್ಲದರಿಂದ ಖುಷಿಯಾಗಿರೋದು ಜಾಕ್ ಮಂಜು. 

  • ವಿಕ್ಟರಿ ರೋಣ : 100 ಕೋಟಿ ಕ್ಲಬ್`ಗೆ ವರ್ಷದ 4ನೇ ಕನ್ನಡ ಸಿನಿಮಾ

    ವಿಕ್ಟರಿ ರೋಣ : 100 ಕೋಟಿ ಕ್ಲಬ್`ಗೆ ವರ್ಷದ 4ನೇ ಕನ್ನಡ ಸಿನಿಮಾ

    ವಿಕ್ರಾಂತ್ ರೋಣ ಚಿತ್ರದ ಟೈಟಲ್ ಬದಲಿಸಬಹುದು. ಏಕೆಂದರೆ ವಿಕ್ಟರಿ ಬಾರಿಸಿರೋ ಚಿತ್ರ ವಿಕ್ಟರಿ ರೋಣ. ಅಂದಹಾಗೆ ಈ ವರ್ಷದಲ್ಲಿ 100 ಕೋಟಿ ಕ್ಲಬ್ ಸೇರಿರುವ 4ನೇ ಕನ್ನಡ ಸಿನಿಮಾ ಆಗಿ ಹೊರಹೊಮ್ಮಿದೆ ವಿಕ್ರಾಂತ್ ರೋಣ. ವಿಕ್ಟರಿ ರೋಣ.

    ರಣಬೀರ್ ಕಪೂರ್, ಶ್ರದ್ಧಾ ಕಪೂರ್, ಅರ್ಜುನ್ ಕಪೂರ್,  ಜಾನ್ ಅಬ್ರಹಾಂತ್ ನಟಿಸಿರೋ ಶಂಷೇರಾ, ಏಕ್ ವಿಲನ್ ನಂತಹ ಚಿತ್ರಗಳನ್ನೆಲ್ಲ ಸೈಡಿಗೆ ಹೊಡೆದು ನುಗ್ಗುತ್ತಿರೋದು ವಿಕ್ಟರಿ ರೋಣ. ಈ ವಾರದ ಅಂತ್ಯಕ್ಕೆ 150 ಕೋಟಿ ಕ್ಲಬ್ ಸೇರುವ ಸಾಧ್ಯತೆಗಳಿವೆ.

    ಅಂದಹಾಗೆ  ಈ ವರ್ಷ 100 ಕೋಟಿ ಕ್ಲಬ್ ಓಪನ್ ಮಾಡಿದ ಮೊದಲ ಕನ್ನಡ ಸಿನಿಮಾ ಜೇಮ್ಸ್.

    ನಂತರ ಕೆಜಿಎಫ್ ಚಾಪ್ಟರ್ 2, ಸಾವಿರ ಕೋಟಿ ಕ್ಲಬ್ ಓಪನ್ ಮಾಡಿತು.

    ಅದಾದ ನಂತರ 777 ಚಾರ್ಲಿ ಕೂಡಾ 150 ಕೋಟಿ ಬಿಸಿನೆಸ್ ಮಾಡಿತು.

    ಈಗ ಕಿಚ್ಚ ಸುದೀಪ್ ಅವರ ವಿಕ್ಟರಿ ರೋಣ ಈ ಗುರಿ ಮುಟ್ಟಿದೆ.

  • ವಿಕ್ರಾಂತ್ ರೋಣನ ಕ್ರಾಂತಿ : 100 ರೂ. 150 ರೂ.

    ವಿಕ್ರಾಂತ್ ರೋಣನ ಕ್ರಾಂತಿ : 100 ರೂ. 150 ರೂ.

    ವಿಕ್ರಾಂತ್ ರೋಣ ಚಿತ್ರ ಹೊಸ ಕ್ರಾಂತಿಯನ್ನೇ ಮಾಡೋಕೆ ಹೊರಟಿದೆ. ಲಾಭಕ್ಕಿಂತ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವುದೇ ದೊಡ್ಡದು ಎಂದು ಹೊರಟಿರುವ ಚಿತ್ರತಂಡ ಈಗ ಚಿತ್ರಕ್ಕೆ ರೇಟ್ ಫಿಕ್ಸ್ ಮಾಡಿದೆ. ಅದೂ 3ಡಿ ಚಿತ್ರಕ್ಕೆ.

    ಸೋಮವಾರದಿಂದ ವಿಕ್ರಾಂತ್ ರೋಣ ಚಿತ್ರವನ್ನು ನೀವು ಮಲ್ಟಿಪ್ಲೆಕ್ಸ್‍ಗಳಲ್ಲಿ ನೋಡಿದರೆ 150 ರೂ. ಸಿಂಗಲ್ ಸ್ಕ್ರೀನ್‍ನಲ್ಲಿ ನೋಡಿದರೆ 100 ರೂ. ಮಾತ್ರ. ವಿಕ್ರಾಂತ್ ರೋಣ ಚಿತ್ರದ 3ಡಿ ಕ್ವಾಲಿಟಿ ಬಗ್ಗೆ ಎಲ್ಲೆಡೆಯೂ ಪ್ರಶಂಸೆ, ಮೆಚ್ಚುಗೆಗಳಿವೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲೆಡೆ ಇಷ್ಟು ಅದ್ಭುತವಾಗಿ ಟೆಕ್ನಾಲಜಿಯನ್ನು ಬಳಸಿಕೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿಯೇ ಚಿತ್ರವನ್ನು ಇನ್ನಷ್ಟು ಪ್ರೇಕ್ಷಕರಿಗೆ ತಲುಪಿಸುವ ಗುರಿ ಹಾಕಿಕೊಂಡು ಹೊರಟಿದ್ದಾರೆ ಜಾಕ್ ಮಂಜು.

    ಅಷ್ಟೇ ಅಲ್ಲ, ಕೆಲವರು ಪೈರಸಿಯಲ್ಲಿ ಸಿನಿಮಾ ನೋಡುತ್ತಿದ್ದಾರಂತೆ. ಪೈರಸಿ ಯಾಕೆ, ಟಿಕೆಟ್ ದರ ನಾವೇ ಕಡಿಮೆ ಮಾಡಿದ್ದೇವೆ. ಬನ್ನಿ, ಥಿಯೇಟರಲ್ಲಿ ನೋಡಿ, ಖುಷಿ ಪಡಿ ಎಂದಿದ್ದಾರೆ ಜಾಕ್ ಮಂಜು.

    ಅಂದಹಾಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು ನಿಗದಿ ಮಾಡುವ ಬಗ್ಗೆ ಖಡಕ್ಕಾಗಿ ಮಾತನಾಡಿದ್ದರು. ಆದೇಶವನ್ನೂ ಪ್ರಕಟಿಸಿ, ಜಾರಿಗೆ ತರುವುದನ್ನು ಮಾತ್ರ ಮರೆತುಬಿಟ್ಟರು. ಈಗ ಸಿನಿಮಾದವರೇ ಆ ನಿರ್ಧಾರಕ್ಕೆ ಬಂದಿದ್ದಾರೆ.