` Sonal Monteiro - chitraloka.com | Kannada Movie News, Reviews | Image

Sonal Monteiro

 • ಕೋಮಲ್ ಚಿತ್ರಕ್ಕೂ ಸೋನಲ್ ಹೀರೋಯಿನ್ : ಸಿಕ್ಕಾಪಟ್ಟೆ ಬ್ಯುಸಿ

  ಕೋಮಲ್ ಚಿತ್ರಕ್ಕೂ ಸೋನಲ್ ಹೀರೋಯಿನ್ : ಸಿಕ್ಕಾಪಟ್ಟೆ ಬ್ಯುಸಿ

  ಸುಮಾರು ವರ್ಷಗಳ ಗ್ಯಾಪ್ ನಂತರ ಚಿತ್ರರಂಗಕ್ಕೆ ವಾಪಸ್ ಆಗಿರುವ ಕೋಮಲ್, ಒಂದೆಡೆ ತಮ್ಮದೇ ಬ್ಯಾನರ್`ನಲ್ಲಿ ಒಂದು ಸಿನಿಮಾ ಮಾಡುತ್ತಿದ್ದಾರೆ. ಮತ್ತೊಂದೆಡೆ ರೋಲೆಕ್ಸ್ ಅನ್ನೋ ಚಿತ್ರಕ್ಕೂ ಓಕೆ ಎಂದಿದ್ದಾರೆ. ಶ್ರೀನಿವಾಸ್ ಮಂಡ್ಯ ನಿರ್ದೇಶನದ ರೋಲೆಕ್ಸ್ ಚಿತ್ರಕ್ಕೆ ಹೀರೋಯಿನ್ ಆಗಿ ಬಂದಿರೋದು ಸೋನಲ್ ಮಂಥೆರೋ. ಕಥೆ ವಿಭಿನ್ನವಾಗಿದೆ. ಕೋಮಲ್ ಅವರ ಜೊತೆ ತುಂಬಾ ಎಂಜಾಯ್ ಮಾಡಿಕೊಂಡು ನಟಿಸುತ್ತಿದ್ದೇನೆ ಎಂದಿದ್ದಾರೆ ಸೋನಲ್ ಮಂಥೆರೋ.

  ಸೋನಲ್ ಅವರನ್ನು ಚಿತ್ರರಂಗ ಪಂಚತಂತ್ರದ ಬೆಡಗಿ ಎಂದೇ ಗುರುತಿಸುತ್ತೆ. ಯೋಗರಾಜ್ ಭಟ್ಟರ ಚಿತ್ರ ಕೊಟ್ಟ ಕ್ರೆಡಿಟ್ ಅದು. ಇತ್ತೀಚೆಗೆ ಬನಾರಸ್ ಮೂಲಕ ಅಲೆ ಎಬ್ಬಿಸಿದ್ದ ಚೆಲುವೆ ಸೋನಲ್ ಮಂಥೆರೋ. ಇದೆಲ್ಲದರ ಜೊತೆಗೆ ಸೋನಲ್ ಮಂಥೆರೋ ಕೈತುಂಬಾ ಚಿತ್ರಗಳಿವೆ. ಒಂದಲ್ಲ..ಎರಡಲ್ಲ..ಹಲವಾರು..ಒಂದೊಂದೂ ವಿಭಿನ್ನ.

  ರಾಬರ್ಟ್ ಚಿತ್ರದ ನಂತರ ಮತ್ತೊಮ್ಮೆ ವಿನೋದ್ ಪ್ರಭಾಕರ್ ಜೊತೆ ಮಾದೇವದಲ್ಲಿ ಜೊತೆಯಾಗಿದ್ದಾರೆ ಸೋನಲ್. ತನುಷ್ ಶಿವಣ್ಣ ನಟಿಸಿರೋ ಮಿ.ನಟ್ವರ್`ಲಾಲ್ ಚಿತ್ರವೂ ರೆಡಿಯಾಗಿದೆ. ಎರಡೂ ಚಿತ್ರಗಳು ರಿಲೀಸ್ ಆಗುವ ಹಂತಲ್ಲಿವೆ. ಸರೋಜಿನಿ ಎಂಬ ಚಿತ್ರದಲ್ಲಿ ಸರೋಜಿನಿ ನಾಯ್ಡು ಪಾತ್ರ ಮಾಡುತ್ತಿದ್ದಾರೆ. ಅರ್ಧ ಚಿತ್ರೀಕರಣ ಮುಗಿದಿದೆ. ಡಾರ್ಲಿಂಗ್ ಕೃಷ್ಣ ಜೊತೆಗಿನ ಶುಗರ್ ಫ್ಯಾಕ್ಟರಿ ಮುಂದಿನ ವಾರ  ರಿಲೀಸ್ ಆಗುತ್ತಿದೆ. ಬಿ.ಸಿ.ಪಾಟೀಲರ ಗರಡಿಗೆ ಸೋನಲ್ ಅವರೇ ಹೀರೋಯಿನ್. ಉಪೇಂದ್ರರ ಬುದ್ದಿವಂತ 2 ಚಿತ್ರಕ್ಕೂ ಸೋನಲ್ ಅವರೇ ಹೀರೋಯಿನ್. ಟೋಟಲ್ಲಿ ಸೋನಲ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

 • ಬನಾರಸ್ ಭಾರತ್ ಮಾತಾ ಮಂದಿರದ ಕಥೆ

  banaras image

  ರು ವರ್ಷಗಳ ಹಿಂದೆ ಮೊಘಲರ ದಾಳಿಯಲ್ಲಿ ನಜ್ಜುಗುಜ್ಜಾಗಿದ್ದ ಪುಣ್ಯಕ್ಷೇತ್ರವಿದು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಪುನರುಜ್ಜೀವನಗೊಂಡು ನಳನಳಿಸುತ್ತಿರುವ ಕ್ಷೇತ್ರ ವಾರಾಣಸಿ. ಇಂತಹ ಕ್ಷೇತ್ರದಲ್ಲಿ ಭಾರತ್ ಮಾತಾ ಮಂದಿರವಿದೆ. ಹೌದು, ಭಾರತ್ ಮಾತಾ ಮಂದಿರ.

  ವಾರಾಣಸಿಯಲ್ಲಿ ಭಾರತ್‍ಮಾತಾ ಮಂದಿರವಿದೆ. ಅದು ಸಂಪೂರ್ಣ ಅಮೃತಶಿಲೆಯಲ್ಲಿ ಕೆತ್ತಿದ ಅಖಂಡ ಭಾರತದ ಭೂಪಟ. ಪ್ರತಿದಿನ ಅಲ್ಲಿ ಭೂಪಟಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕಾಶಿಗೆ ಹೋಗುವ ಬಹುತೇಕರಿಗೆ ಆ ವಿಷಯವೇ ಗೊತ್ತಿಲ್ಲ. ನಮ್ಮ ಚಿತ್ರದಲ್ಲಿ ಅದನ್ನೂ ತೋರಿಸಿದ್ದೇವೆ ಎನ್ನುತ್ತಾರೆ ಬನಾರಸ್ ಚಿತ್ರದ ನಿರ್ದೇಶಕ ಜಯತೀರ್ಥ.

  ಕಾಶಿ ಕಾರಿಡಾರ್ ಆಗುವುದಕ್ಕೂ ಮೊದಲು ಚಿತ್ರೀಕರಣಗೊಂಡಿದ್ದ ಸಿನಿಮಾ ಇದು. ಹಳೆಯ ಕಾಶಿಯ ಓಣಿಓಣಿಗಳನ್ನೂ ನೋಡಬಹುದು. ಚಿತ್ರಕ್ಕೊಂದು ಡಿವೈನ್ ಟಚ್ ಇದೆ. ಕಾಶಿಯಲ್ಲಿ ನಡೆಯುವ ಪ್ರೇಮಕಥೆಗೆ ಆ ಹಿನ್ನೆಲೆ ಬೇಕಿತ್ತು ಎನ್ನುತ್ತಾರೆ ಜಯತೀರ್ಥ. ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹೀರೋ ಆಗಿ ನಟಿಸಿರುವ ಚಿತ್ರದಲ್ಲಿ ಸೋನಲ್ ಮಂಥೆರೋ ನಾಯಕಿ.

 • ಹೆಣ್ಣು ಹಡೆಯಲು ಬ್ಯಾಡ.. : ಜಾನಪದ ಹಾಡಿನ ಗುಂಗು ಹತ್ತಿಸಿದ ಬನಾರಸ್..!

  banaras movie image

  ಹೆಣ್ಣು ಹಡೆಯಲು ಬ್ಯಾಡ..

  ಹೆರವರಿಗೆ ಕೊಡಬ್ಯಾಡ..

  ಹೆಣ್ಣು ಹೋಗುವಾಗ ಅಳಬ್ಯಾಡ..

  ಹೆಣ್ಣು ಹೋಗುವಾಗ ಅಳಬ್ಯಾಡ ಹಡೆದವ್ವ..

  ಸಿಟ್ಟಾಗಿ ಶಿವನ ಬೈಬ್ಯಾಡ..

  ಹೀಗೆ ಶುರುವಾಗುವ ಹಾಡು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಮತ್ತು ಅದು ನಮ್ಮದೇ ಲೋಕ ಎನ್ನುವುದು ಈ ಹಾಡಿನ ವಿಶಿಷ್ಟತೆ. ತಾಯಿ ಮತ್ತು ಮಗಳ ಬಾಂಧವ್ಯವನ್ನು.. ಹೆಣ್ಣು ಮಕ್ಕಳನ್ನು ಹಡೆದ ಮೇಲೆ ಅನುಭವಿಸುವ ನೋವು, ತಳಮಳಗಳನ್ನೆಲ್ಲ ಹಾಡಿನಲ್ಲಿ ತಂದಿಟ್ಟಿರೋ ಈ ಜನಪದ ಗೀತೆ ಇರೋದು ಬನಾರಸ್ ಚಿತ್ರದಲ್ಲಿ.

  ಜನಪದ ಗೀತೆಯನ್ನೇ ಯಥಾವತ್ತಾಗಿ ಬಳಸಿಕೊಂಡು ವ್ಹಾವ್ ಎನ್ನುವಂತೆ ಮಾಡಿದ್ದಾರೆ ನಿರ್ದೇಶಕ ಜಯತೀರ್ಥ. ಆ ಜನಪದ ಗೀತೆಯನ್ನು ಅಷ್ಟೇ ಚೆಂದವಾಗಿ ಹೃದಯಕ್ಕೆ ಮುಟ್ಟುವಂತೆ ಹಾಡಿರುವುದು ಹರ್ಷಿಕಾ ದೇವನಾಥ್. ಜನಪದ ಸಂಗೀತವನ್ನೇ ಬಳಸಿಕೊಂಡಿರೋ ಅಜನೀಶ್ ಲೋಕನಾಥ್, ಅದನ್ನು ಪುಟ್ಟ ಪುಟ್ಟ ಕಾರ್ಟೂನುಗಳಲ್ಲಿ ತೋರಿಸಿರೋ ಜಯತೀರ್ಥ ಕೇಳುಗರನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತಾರೆ. ಅಂದಹಾಗೆ ಇದು ಜಮೀರ್ ಖಾನ್ ಅವರ ಪುತ್ರ ಝೈದ್ ಖಾನ್ ಮತ್ತು ಸೋನಲ್ ಮಂಥೆರೋ ನಟಿಸಿರೋ ಬನಾರಸ್ ಚಿತ್ರದ ಹಾಡು. ಸಿನಿಮಾ ಸಿದ್ಧವಾಗಿದೆ.

  ಝೈದ್-ಸೋನಲ್ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸಪ್ನಾ ರಾಜ್, ಭರತ್ ಅಲಿ ಮೊದಲಾದವರು ನಟಿಸಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಮತ್ತು ಮುಝಮಿಲ್ ಅಹ್ಮದ್ ಖಾನ್ ನಿರ್ಮಿಸಿರುವ ಚಿತ್ರ ಬನಾರಸ್ ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ.