` shiva 143, - chitraloka.com | Kannada Movie News, Reviews | Image

shiva 143,

  • Shiva 143 Movie Review, Chitraloka Rating 3.5/5

    Shiva 143 Movie Review, Chitraloka Rating 3.5/5

    Film: Shiva 143 

    Director: Anil Kumar TM 

    Cast: Dheeren Ramkumar, Manvitha Kamath, Charan Raj, Shobraj, Avinash, Chikkanna

    Duration: 2 hours 23 minutes 

    Stars: 3.5 

    A love story dripping in blood 

    Shiva 143 is an official remake of the Telugu film Rx 100. The film in Kannada is special because it launches another grandson of Dr Rajkumar, Dheeren Ramkumar as hero. He is the son of actor Ramkumar.

    If you have seen Rx 100 you will know how much violence it showcases. The film is filled with bloody fights, violent scenes and killings. However at heart the story is a romance with lots of action.

    The overload of carnage throughout the film numbs the extraordinary climax a bit. The ‘A’ certificate is richly deserved. Otherwise, this is an uncommon love story, the likes of which we have not seen in a long time.

    Dheeren makes it a memorable debut and has good screen presence and acting prowess to last the long run. He looks like a young Raghavendra Rajkumar with a shade of Sri Murali thrown in. The genes show up.

    The film starts with a vengeful Shiva (Dheeren) trying to destroy anything and everything that belongs to the local politician Narasimha (Avinash). His foster dad Appajij (Charan Raj) is a friend of Narasimha, but still has a lot of misunderstanding with him. The audiences are subject to some suspense but without revealing what it is about at all. In the middle of this, love blossoms between Shiva and Narasimha’s daughter (played by Manvitha). By the interval, you expect a regular story turn. 

    Even till the interval, the story holds on to a gripping narrative. Post interval the film slacks a bit but recovers brilliantly with superb plot twists. Right to the climax, the audiences are treated to unexpected changes in the story. 

    The presence of seasoned actors like Shobraj, Avinash and Charan Raj adds additional credibility to the narration. Nonetheless, the two main actors; Dheeren and Manvitha ably carry the special story without a glitch. Kudos to Manvitha for handling this role like a pro. 

    Director Anil Kumar has handled the technical aspects of the film commendably. There isn’t much to complain about. His job was to redo an existing product which he does without a hitch. Providing a little more pauses to emotional scenes may have made them more effective.

    Shiva 143 will surely win the hearts of those who expect the unexpected. But be warned of the blood fest. For Kannada audience who are not familiar with Rx 100, this is a weekend treat.

  • ಆಗಸ್ಟ್ 26ಕ್ಕೆ ಶಿವ ಬರ್ತಾನೆ : ರಾಮ್ ಕುಮಾರ್ ಪುತ್ರನ ಎಂಟ್ರಿಗೆ ಡೇಟ್ ಫಿಕ್ಸ್

    ಆಗಸ್ಟ್ 26ಕ್ಕೆ ಶಿವ ಬರ್ತಾನೆ : ರಾಮ್ ಕುಮಾರ್ ಪುತ್ರನ ಎಂಟ್ರಿಗೆ ಡೇಟ್ ಫಿಕ್ಸ್

    ರಾಜ್ ಫ್ಯಾಮಿಲಿಯ ಇನ್ನೊಂದು ಕುಡಿ ಧೀರೇನ್ ರಾಮಕುಮಾರ್. ಧಿರೇನ್ ನಟಿಸಿರೋ ಮೊದಲ ಸಿನಿಮಾ ಶಿವ 143. ಜಯಣ್ಣ ಬ್ಯಾನರ್ ಮೂಲಕ ಲಾಂಚ್ ಆಗುತ್ತಿರೋ ಚಿತ್ರ ಈಗಾಗಲೇ ಕುತೂಹಲ ಹುಟ್ಟಿಸಿದೆ.

    ಧಿರೇನ್ ಎದುರು ನಾಯಕಿಯಾಗಿ ನಟಿಸಿರೋದು ಮಾನ್ವಿತಾ ಕಾಮತ್. ಸಿಕ್ಕಾಪಟ್ಟೆ ಹಾಟ್ ಆಗಿ.. ಮೈ ಬೆಚ್ಚಗಾಗುವಂತೆ ನಟಿಸಿರೋ ಮಾನ್ವಿತಾ ಚಿತ್ರದುದ್ದಕ್ಕೂ ಧಿರೇನ್ ಮೇಲೆ ಮುತ್ತಿನ ಮಳೆ ಸುರಿಸಿದ್ದಾರೆ. ಅನಿಲ್ ಕುಮಾರ್ ನಿರ್ದೇಶಿಸಿರುವ ಸಿನಿಮಾ ರಿಲೀಸ್ ಡೇಟ್ ಘೋಷಿಸಿಕೊಂಡಿದೆ. ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

  • ಇಂದು ಶಿವ 143 ನೋಡೋಕೆ ಬರ್ತಾರೆ ಶಿವಣ್ಣ ದಂಪತಿ

    ಇಂದು ಶಿವ 143 ನೋಡೋಕೆ ಬರ್ತಾರೆ ಶಿವಣ್ಣ ದಂಪತಿ

    ಶಿವ 143 ರಿಲೀಸ್ ಆಗಿದೆ. ಧಿರೇನ್ ರಾಮಕುಮಾರ್ ಅಭಿನಯದ ಮೊದಲ ಸಿನಿಮಾ ಇದು. ಮಾಸ್.ಆ್ಯಕ್ಷನ್.ರೊಮ್ಯಾನ್ಸ್.ಲವ್... ಎಲ್ಲವೂ ಇರುವ ಚಿತ್ರ ಹೊಸ ಮಾಸ್ ಹೀರೋಗೆ ಜನ್ಮ ಕೊಟ್ಟಿದೆ. ಧಿರೇನ್ ಮತ್ತು ಮಾನ್ವಿತಾ ಕಾಮತ್ ಇಬ್ಬರೂ ಶಿವ-ಮಧು ಪಾತ್ರವನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ರಾಜ್ ಕುಟುಂಬದ ಕುಡಿಯಾಗಿ ಅಂತಾದ್ದೊಂದು ಪಾತ್ರ ಒಪ್ಪಿಕೊಂಡ ಧಿರೇನ್ ಮತ್ತು ಅಂತಹ ನಾಯಕಿಯ ಪಾತ್ರಕ್ಕೆ ಓಕೆ ಎಂದು ನಟಿಸಿದ ಮಾನ್ವಿತಾ ಕಾಮತ್ ಇಬ್ಬರ ಧೈರ್ಯವನ್ನೂ ಮೆಚ್ಚಿಕೊಳ್ಳಲೇಬೇಕು.

    ಚಿತ್ರರಂಗದಲ್ಲಿ ಹಿರಿ ಕಿರಿಯರೆನ್ನದೆ ಎಲ್ಲರಿಗೂ ಶುಭ ಕೋರುವ ಪ್ರತಿಯೊಬ್ಬರ ಚಿತ್ರದ ಗೆಲುವನ್ನೂ ಸಂಭ್ರಮಿಸುವ ಶಿವಣ್ಣ ಸೋದರಳಿಯನ ಚಿತ್ರ ನೋಡೋಕೆ ಇವತ್ತು ಚಿತ್ರಮಂದಿರಕ್ಕೇ ಬರುತ್ತಿದ್ದಾರೆ. ದಂಪತಿ ಸಮೇತ.

    ಮೆಜೆಸ್ಟಿಕ್‍ನ ಸಂತೋಷ್ ಚಿತ್ರಮಂದಿರಕ್ಕೆ ಇಂದು ಶಿವಣ್ಣ ಹಾಗೂ ಗೀತಾ ಶಿವರಾಜಕುಮಾರ್ ಬಂದು ಶಿವ 143 ವೀಕ್ಷಿಸಲಿದ್ದಾರೆ. ಅಭಿಮಾನಿಗಳ ಜೊತೆ. ಸಮಯ ಸಂಜೆ 7 ಗಂಟೆಗೆ.

    ಜಯಣ್ಣ-ಭೋಗೇಂದ್ರ-ಡಾ.ಸೂರಿ ನಿರ್ಮಾಣದ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನವಿದೆ. ಚಿತ್ರಕ್ಕೆ ಬಿಡುಗಡೆಗೂ ಮುನ್ನ ಕನ್ನಡ ಚಿತ್ರರಂಗದ ಸ್ಟಾರ್ ನಟರು ಶುಭ ಕೋರಿದ್ದರು. ರಾಜ್ ಫ್ಯಾಮಿಲಿಯವರಷ್ಟೇ ಅಲ್ಲದೆ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಹಿರಿಯರೆಲ್ಲ ಧಿರೇನ್‍ಗೆ ಸ್ವಾಗತ ಕೋರಿದ್ದರು. ಈಗ ಪ್ರೇಕ್ಷಕರೂ ಉಘೇ ಎಂದಿದ್ದಾರೆ. 

  • ಕನ್ನಡ ಇಂಡಸ್ಟ್ರಿ ಇಷ್ಟು ಬೋಲ್ಡ್ ಹೀರೋಯಿನ್ ನೋಡಿಲ್ಲ: ಮಾನ್ವಿತಾ ಕಾಮತ್

    ಕನ್ನಡ ಇಂಡಸ್ಟ್ರಿ ಇಷ್ಟು ಬೋಲ್ಡ್ ಹೀರೋಯಿನ್ ನೋಡಿಲ್ಲ: ಮಾನ್ವಿತಾ ಕಾಮತ್

    ಕೆಂಡಸಂಪಿಗೆಯ ಮುಗ್ಧ ಪ್ರೇಮಿ, ಟಗರು ಚಿತ್ರದ ಸ್ವಲ್ಪ ಬೋಲ್ಡ್ ಎನ್ನಿಸುವಂತಾ ಅಭಿನಯದ ಮೂಲಕ ಮನಸ್ಸು ಗೆದ್ದವರು ಮಾನ್ವಿತಾ ಕಾಮತ್. ಆದರೆ ಶಿವ 143 ಚಿತ್ರದಲ್ಲಿನ ಅವರ ಪಾತ್ರ ಹಾಗಲ್ಲ.

    ಈ ಚಿತ್ರದಲ್ಲಿ ಬೋಲ್ಡ್ ಆಗಿ ನಟಿಸಿದ್ದೇನೆ. ಎಷ್ಟು ಬೋಲ್ಡ್ ಎಂದರೆ ಕನ್ನಡ ಚಿತ್ರರಂಗದಲ್ಲಿ ಇಷ್ಟು ಬೋಲ್ಡ್ ಆಗಿ ನಟಿಸಿರುವ ಇನ್ನೊಬ್ಬ ಹೀರೋಯಿನ್‍ನ್ನು ನೀವು ನೋಡಿರಲು ಸಾಧ್ಯವಿಲ್ಲ. ನಾಯಕಿಯ ಪಾತ್ರ ಎಷ್ಟು ಬೋಲ್ಡ್ ಎಂದರೆ ಎಕ್ಸ್‍ಪೋಸಿಂಗ್ ಅಷ್ಟೇ ಅಲ್ಲ, ವರ್ತನೆಯಲ್ಲೂ ಬೋಲ್ಡ್. ಪಾತ್ರಕ್ಕೇನೋ ನ್ಯಾಯ ಒದಗಿಸಿದ್ದೇನೆ. ಆದರೆ ಸಿನಿಮಾ ನೋಡಿದವರು ನನ್ನನ್ನೂ ದ್ವೇಷಿಸಲು ಶುರು ಮಾಡಬಹುದು. ಅಷ್ಟು ಭಯ ನನಗೆ ಇದೆ. ಆ ದ್ವೇಷ ಅಳಿಸುವುದೇ ನನಗಿರೋ ಸವಾಲು ಎಂದಿದ್ದಾರೆ ಮಾನ್ವಿತಾ ಕಾಮತ್.

    ಶಿವ 143 ಇದೇ ಶುಕ್ರವಾರ ರಿಲೀಸ್ ಅಗುತ್ತಿದೆ. ಧಿರೇನ್ ರಾಮಕುಮಾರ್ ಮೊದಲ ಸಿನಿಮಾ ಶಿವ 143. ಇದು ತೆಲುಗಿನ ಆರ್ ಎಕ್ಸ್ 100 ಚಿತ್ರದ ರೀಮೇಕ್. ತೆಲುಗಿನಲ್ಲಿ ಆ ಪಾತ್ರದಲ್ಲಿ ನಟಿಸಿದ್ದವರು ಪಾಯಲ್ ರಜಪೂತ್. ಆದರೆ ನಾನು ನನ್ನದೇ ಸ್ಟೈಲಿನಲ್ಲಿ ನಟಿಸಿದ್ದೇನೆ. ಚಿತ್ರದಲ್ಲಿ ನನ್ನದು ಮಧು ಹೆಸರಿನ ಪಾತ್ರ. ಆ ಮಧು ಪಾತ್ರದ ಇಮೇಜ್‍ನಿಂದ ಹೊರಬರಲು ಕೂಡಾ ಪ್ಲಾನ್ ಮಾಡಬೇಕು ಎಂದಿದ್ದಾರೆ ಮಧು ಅಲಿಯಾಸ್ ಮಾನ್ವಿತಾ ಕಾಮತ್.

  • ನಂತಕ್ ಬಾ ನಂತಕ್ ಬಾ.. : ಶಿವ 143ಗೆ ಹೊಸ ಕಿಕ್ಕು

    ನಂತಕ್ ಬಾ ನಂತಕ್ ಬಾ.. : ಶಿವ 143ಗೆ ಹೊಸ ಕಿಕ್ಕು

    ಶಿವ 143 ರಿಲೀಸ್ ಆಗುವುದಕ್ಕೆ ಮುನ್ನವೇ ನೋಡುಗರೆಲ್ಲರ ಕಣ್ಣರಳುವಂತೆ ಮಾಡಿರುವ ಸಿನಿಮಾ. ಈಗಾಗಲೇ ಮಳೆ ಹನಿಯೇ ಹಾಡು ನೋಡುಗರ ಮೈಮನ ಬೆಚ್ಚಗಾಗಿಸಿದೆ. ಅದನ್ನು ಒಪ್ಪಿಕೊಳ್ಳೋ ಮುನ್ನ ಸಾಕಷ್ಟು ಯೋಚನೆ ಮಾಡಿಯೇ ಒಪ್ಪಿಕೊಂಡೆ. ನಿರ್ದೇಶಕರ ಮೇಲೆ ನನಗಿದ್ದ ಕಾನ್ಫಿಡೆನ್ಸ್ ಆ ಪಾತ್ರ ಒಪ್ಪಿಕೊಳ್ಳುವಂತೆ ಮಾಡಿತು ಎಂದಿದ್ದರು ಮಾನ್ವಿತಾ. ಚಿತ್ರದಲ್ಲಿ ಉದ್ದಕ್ಕೂ ಧಿರೇನ್ ತುಟಿಯನ್ನು  ಮುತ್ತು ಕೊಟ್ಟೇ ಒದ್ದೆಯಾಗಿಸಿರುವ ಮಾನ್ವಿತಾ ಜೋಡಿಯ ಈ ಹಾಡನ್ನು ನೋಡಿರುವವರ ಸಂಖ್ಯೆ 10 ಲಕ್ಷಕ್ಕೂ ಹೆಚ್ಚು.

    ಈಗ ಇನ್ನೊಂದು ಹಾಡು ಬರುತ್ತಿದೆ. ಇವತ್ತೆ. ನಂತಕ್ ಬಾ ನಂತಕ್ ಬಾ.. ಹಾಡು ರಿಲೀಸ್ ಆಗುತ್ತಿದೆ ಎಂದು ಘೋಷಿಸಿದ್ದಾರೆ ನಿರ್ದೇಶಕ ಅನಿಲ್ ಕುಮಾರ್. ಅರ್ಜುನ್ ಜನ್ಯಾ ಸಂಗೀತದಲ್ಲಿ ಮಂಗ್ಲಿ ಹಾಡಿರುವ ಹಾಡಿದು. ಸಖತ್ ರೊಮ್ಯಾಂಟಿಕ್ ಆಗಿರುತ್ತೆ ಅನ್ನೋದ್ರಲ್ಲಿ ಡೌಟಿಲ್ಲ. ಈ ಹಾಡಿಗೆ ಅನಿಲ್ ಕುಮಾರ್ ಅವರೇ ಸಾಹಿತ್ಯವನ್ನೂ ಬರೆದಿದ್ದಾರೆ. ಜಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಬರುತ್ತಿರುವ ಈ ಸಿನಿಮಾ ಹವಾ ಎಬ್ಬಿಸೋದ್ರಲ್ಲಿ ಅನುಮಾನವಿಲ್ಲ.

  • ಪ್ರೇಮಿಯ ಪ್ರೇಮ ಘರ್ಜನೆ : ಶಿವ 143 ಟ್ರೇಲರ್ ಬಂತು

    ಪ್ರೇಮಿಯ ಪ್ರೇಮ ಘರ್ಜನೆ : ಶಿವ 143 ಟ್ರೇಲರ್ ಬಂತು

    ಅವನೊಬ್ಬ ರೌಡಿ. ಚಾರ್ಮಿಂಗ್ ಇರುವ ರೌಡಿ. ಅವನ ಮೇಲೆ ಅವಳಿಗೆ ಮೋಹವಾಗುತ್ತೆ. ಪ್ರೇಮವಲ್ಲ.. ಮೋಹ.. ಕಾಮ.. ಆದರೆ ಪ್ರೀತಿಯ ಹೆಸರಲ್ಲಿ ಒಂದಾಗುತ್ತಾರೆ. ಅದಾದ ಮೇಲೆ ನಡೆಯುವ ಪ್ರೀತಿ-ಪ್ರೇಮ-ದ್ರೋಹ-ಸೇಡು-ದ್ವೇಷದ ಕಥೆಯೇ ಶಿವ 143. ಟ್ರೇಲರ್ ನೋಡಿದವರಿಗೆ ಬೆರಗು ಹುಟ್ಟಿಸುವುದು ಧಿರೇನ್ ರಾಮಕುಮಾರ್. ಹೊಸಬ ಎಂದು ಅನ್ನಿಸಲ್ಲ. ಮಾನ್ವಿತಾ ಕಾಮತ್ ಮೈಚಳಿ ಟ್ಟು ಮೈಬಿಸಿ ಏರಿಸಿದ್ದಾರೆ.

    ಅನಿಲ್ ಕುಮಾರ್ ನಿರ್ದೇಶನದ ಟ್ರೇಲರಿನಲ್ಲಿ ಓಂ ಚಿತ್ರದ ಹಿನ್ನೆಲೆಯೂ ಇದೆ. ಓಂ ಮ್ಯೂಸಿಕ್ಕೂ ಇದೆ. ಧಿರೇನ್-ಮಾನ್ವಿತಾ ಜೊತೆ ಚಿತ್ರದಲ್ಲಿ ಹಿರಿಯ ಕಲಾವಿದರ ದಂಡೇ ಇದೆ. ಅರ್ಜುನ್ ಜನ್ಯಾ ಹಾಡುಗಳು ಈಗಾಗಲೇ ಗುಂಯ್ ಗುಂಯ್ ಗುಡುತ್ತಿವೆ. ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿರೋ ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರ ರಾಜ್ ಕುಟುಂಬದ ಇನ್ನೊಂದು ಕುಡಿಯನ್ನು ತೆರೆಗೆ ತರುತ್ತಿದೆ.

  • ಫ್ಯಾಮಿಲಿ ಲಗ್ಗೇಜ್ ಪಕ್ಕಕ್ಕಿಟ್ಟೇ ನಟಿಸಿದ್ದೇನೆ : ಧೀರನ್ ರಾಮಕುಮಾರ್

    ಫ್ಯಾಮಿಲಿ ಲಗ್ಗೇಜ್ ಪಕ್ಕಕ್ಕಿಟ್ಟೇ ನಟಿಸಿದ್ದೇನೆ : ಧೀರನ್ ರಾಮಕುಮಾರ್

    ಶಿವ 143. ರಾಮಕುಮಾರ್ ಪುತ್ರ ಧೀರನ್ ರಾಮಕುಮಾರ್ ಅಭಿನಯದ ಮೊದಲ ಸಿನಿಮಾ. ಈಗ ಥಿಯೇಟರಿನಲ್ಲಿರೋ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶಕ. ಜಯಣ್ಣ-ಭೋಗೇಂದ್ರ-ಡಾ.ಸೂರಿ ನಿರ್ಮಾಣದ ಚಿತ್ರದಲ್ಲಿ ಧೀರನ್ ಎದುರು ಮಾನ್ವಿತಾ ಕಾಮತ್ ನಾಯಕಿ. ಡಾ.ರಾಜ್ ಕುಟುಂಬದ 3ನೇ ತಲೆಮಾರಿನ ಕುಡಿ ಧೀರನ್ ರಾಮಕುಮಾರ್.

    ಡಾ.ರಾಜ್-ಪಾರ್ವತಮ್ಮ ದಂಪತಿಯ ಮೊಮ್ಮಗ. ಶಿವಣ್ಣ,ರಾಘಣ್ಣ,ಅಪ್ಪುಗೆ ಅಳಿಯ. ರಾಮಕುಮಾರ್-ಪೂರ್ಣಿಮಾ ದಂಪತಿಯ ಮಗ. ವಿನಯ್ ರಾಜಕುಮಾರ್ ಅವರಿಗೆ ಸೋದರಳಿಯನಾದರೆ ಹಾಗೂ ಧನ್ಯಾ ರಾಮಕುಮಾರ್`ಗೆ ಅಣ್ಣ. ಇಷ್ಟೆಲ್ಲ ಫ್ಯಾಮಿಲಿ ಹಿನ್ನೆಲೆಯಿರೋ ಧೀರನ್ ತಮ್ಮ ಸಿನಿಮಾ ಬಗ್ಗೆ ಹೇಳೋದೇ ಬೇರೆ.

    ಆ ಲಗ್ಗೇಜ್ ಇಟ್ಟುಕೊಂಡು ಹೋದರೆ ಕೆಲಸ ಮಾಡೋಕೆ ಆಗಲ್ಲ. ಅದನ್ನೆಲ್ಲ ಪಕ್ಕಕ್ಕಿಟ್ಟು ಇಷ್ಟಪಟ್ಟು ಕಷ್ಟಪಟ್ಟು ಕೆಲಸ ಮಾಡಬೇಕು. ಅಷ್ಟೆ. ನಾವು ಖಾಲಿ ಕಾಗದದ ಥರಾ ಇದ್ರೆ ನಿರ್ದೇಶಕರು ನಮ್ಮಿಂದ ಕೆಲಸ ತೆಗೆಸ್ತಾರೆ. ನಾವು ಗೇಜ್ ಇಟ್ಕೊಂಡು ಹೋದ್ರೆ ನಿರ್ದೇಶಕರು ಲಿಮಿಟ್ ಹಾಕಿಕೊಳ್ತಾರೆ. ನಾವು ನಟರಾಗೋಕೆ ಆಗಲ್ಲ ಎನ್ನುತ್ತಾರೆ ಧೀರನ್.

    ಸಿನಿಮಾದಲ್ಲಿ ತಾತ, ಅಪ್ಪ, ಮಾವಂದಿರ ಜೊತೆ ನಟಿಸಿದ್ದ ಕಲಾವಿದರು ನನ್ನ ಜೊತೆಯಲ್ಲೂ ನಟಿಸಿದ್ದಾರೆ. ಅವರ ಎದುರು ನಟಿಸುವಾಗ ಆರಂಭದಲ್ಲಿ ನರ್ವಸ್ ಆಗಿದ್ದೆ ಎನ್ನುವ ಧೀರನ್ ನಿರ್ದೇಶಕರಿಗೆ ಎಲ್ಲ ಕ್ರೆಡಿಟ್ ಕೊಟ್ಟಿದ್ದಾರೆ.

  • ಶಿವ 143 ಚಿತ್ರದ ಕಥೆ ಏನು?

    ಶಿವ 143 ಚಿತ್ರದ ಕಥೆ ಏನು?

    ಅವನೊಬ್ಬ ರೌಡಿ. ಅವಳು ಶ್ರೀಮಂತನ ಮಗಳು. ಅವಳಿಗೆ ಅವನ ಮೇಲೆ ಪ್ರೀತಿ ಹುಟ್ಟುತ್ತೆ. ಅವರಿಬ್ಬರೂ ಒಂದಾಗುತ್ತಾರೆ. ಲವ್ ಮಾಡ್ತಾರೆ. ರೊಮ್ಯಾನ್ಸ್ ಮಾಡ್ತಾರೆ. ಖುಲ್ಲಂ ಖುಲ್ಲ.. ಬೀಡುಬೀಸಾಗಿ ಒಂದಾಗಿ ಬಿಡ್ತಾರೆ. ಅವನಿಗಿಂತ ಅವಳೇ ಬೋಲ್ಡ್. ಆದರೆ.. ಕ್ಲೈಮಾಕ್ಸ್ ಹೊತ್ತಿಗೆ ಅವಳ ವರ್ತನೆ..ವ್ಯಕ್ತಿತ್ವವೇ ಬದಲಾಗಿ ಹೋಗುತ್ತೆ. ಅವಳಿಗೆ ಬೇಕಿದ್ದುದು ಅವನಾ.. ಅವನ ದೇಹವಾ.. ಅವನ ಪ್ರೀತಿಯಾ.. ಅದು ಆಕರ್ಷಣೆಯಾ.. ಅವಳು ಮಾಡೋದು ಮೋಸವಾ.. ಮುಂದೆ..

    ಶಿವ 143 ಚಿತ್ರದ ಈ ಕಥೆ ತೆಲುಗಿನ ಆರ್‍ಎಕ್ಸ್ 100 ಚಿತ್ರದ ರೀಮೇಕ್. ವೊರಿಜಿನಲ್ ಸಿನಿಮಾ ಹೀರೋ ಧಿರೇನ್‍ಗೆ ಇಷ್ಟವಾಗಿತ್ತಂತೆ. ಮನೆಯವರೂ ಓಕೆ ಎಂದರು. ಜಯಣ್ಣ-ಭೋಗೇಂದ್ರ ಹಾಗೂ ಡಾ.ಸೂರಿ ನಿರ್ಮಾಪಕರಾದರು. ಅನಿಲ್ ನಿರ್ದೇಶಕರಾದರು. ಧಿರೇನ್-ಮಾನ್ವಿತಾ ಜೋಡಿಯಾದರು. ಶಿವ 143 ಈಗ ರಿಲೀಸ್ ಆಗುವುದಕ್ಕೆ ರೆಡಿ.

    ಸದ್ಯಕ್ಕೆ ಶಿವ 143 ಚಿತ್ರತಂಡ ಒಂದು ಟೀಸರ್ ಮತ್ತೊಂದು ಹಾಡು ತೋರಿಸಿದೆ. ಹಾಡಿನಲ್ಲಂತೂ ಮುತ್ತಿನ ಮತ್ತಿನ ಮಳೆಯಲ್ಲಿ ಧಿರೇನ್-ಮಾನ್ವಿತಾ ತೋಯ್ದು ಹೋಗಿದ್ದಾರೆ. ರೊಮ್ಯಾನ್ಸ್‍ನ್ನೂ ಹೀಗೂ ತೋರಿಸಬಹುದು ಎಂಬಂತೆ ಕಟ್ಟಿಕೊಟ್ಟಿದ್ದಾರೆ ಅನಿಲ್ ಕುಮಾರ್. ಕಥೆಯಲ್ಲಿ ಸ್ವಲ್ಪ ಬದಲಾವಣೆ ಆಗಿದೆ ಎಂದಿರುವ ಅನಿಲ್ ಚಿತ್ರ ಪ್ರೇಕ್ಷಕರಿಗೆ  ಥ್ರಿಲ್ ಕೊಡಲಿದೆ ಎಂದಿದ್ದಾರೆ.

     

  • ಶಿವನಿಗೆ ಬಹುಪರಾಕ್ ಎಂದ ಶಿವಣ್ಣ

    ಶಿವನಿಗೆ ಬಹುಪರಾಕ್ ಎಂದ ಶಿವಣ್ಣ

    ಶಿವರಾಜಕುಮಾರ್ ಮತ್ತು ಗೀತಾ ದಂಪತಿ ಶಿವ 143 ಚಿತ್ರ ನೋಡಿ ಫಿದಾ ಆಗಿದ್ದಾರೆ. ರಾಜ್ಯಾದ್ಯಂತ ಯಶಶ್ವಿ ಪ್ರದರ್ಶನ ಕಾಣುತ್ತಿರೋ ಚಿತ್ರಕ್ಕೆ ಕೆಜಿ ರಸ್ತೆಯಲ್ಲಿರೋ ಸಂತೋಷ್ ಮುಖ್ಯ ಚಿತ್ರಮಂದಿರ. ಅಲ್ಲಿಯೇ ಶಿವ 143 ಚಿತ್ರವನ್ನು ಅಭಿಮಾನಿಗಳ ಜೊತೆ ವೀಕ್ಷಿಸಿದರು ಶಿವಣ್ಣ ಮತ್ತು ಗೀತಾ.

    ಚಿತ್ರದಲ್ಲಿ ಹೀರೋನನ್ನು ದಾರಿ ತಪ್ಪಿದ ಮಗ ಎಂಬಂತೆ ತೋರಿಸಲಾಗಿದೆ. ಅಂದಹಾಗೆ ಚಿತ್ರಕ್ಕೆ ಮೊದಲು ಇಟ್ಟಿದ್ದ ಟೈಟಲ್ಲೇ ಅದು. ದಾರಿ ತಪ್ಪಿದ ಮಗ. ಅಲ್ಲದೆ ನಾಯಕಿಯ ಪಾತ್ರದ ಹೆಸರು ಮಧು. ಅದು ಓಂ ಚಿತ್ರದ ನಾಯಕಿಯ ಹೆಸರು. ಆ ಎರಡನ್ನೂ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಪ್ಪಾಜಿಯವರ ದಾರಿ ತಪ್ಪಿದ ಮಗನಿಂದ ಶುರುವಾಗಿ ಓಂವರೆಗೆ ಲಿಂಕ್ ಮಾಡಿರುವುದು ಚೆನ್ನಾಗಿದೆ ಎಂದಿದ್ದಾರೆ ಶಿವಣ್ಣ.

    ಧಿರೇನ್ ಜ್ಯೂನಿಯರ್ ಶಿವಣ್ಣ ಆಗೋದು ಬೇಡ. ಅವನೂ ಸಿನಿಮಾದಲ್ಲಿ ಯಾರನ್ನೂ ಇಮಿಟೇಟ್ ಮಾಡಿಲ್ಲ. ಚೆನ್ನಾಗಿ ನಟಿಸಿದ್ದಾನೆ. ಅವನು ಧಿರೇನ್ ಆಗಿಯೇ ಜನಪ್ರಿಯನಾಗಲಿ ಎಂದು ಹಾರೈಸಿದ್ದಾರೆ ಶಿವಣ್ಣ. ಕ್ಲೈಮಾಕ್ಸ್‍ನಲ್ಲಿ ಒಂದೊಳ್ಳೆ ಸಂದೇಶವೂ ಇದೆ. ಅದು ಇಷ್ಟವಾಯಿತು ಎಂದಿದ್ದಾರೆ ಶಿವಣ್ಣ.

  • ಶುರುವಾಯ್ತು ಶಿವನ ಅಬ್ಬರ : ದುಷ್ಮನ್ ಕೂಡಾ ಮೆಚ್ಚುವ ಲವ್ ಸ್ಟೋರಿ

    ಶುರುವಾಯ್ತು ಶಿವನ ಅಬ್ಬರ : ದುಷ್ಮನ್ ಕೂಡಾ ಮೆಚ್ಚುವ ಲವ್ ಸ್ಟೋರಿ

    ಕೆಟ್ಟ ಫ್ಯಾಮಿಲಿನಲ್ಲಿ ಒಳ್ಳೆಯವನು ಹುಟ್ಟುಬಹುದು. ಆದರೆ ಒಳ್ಳೆ ಫ್ಯಾಮಿಲಿಯಲ್ಲಿ ಇಂತಹವನು ಹುಟ್ಟಬಾರದು..

    ಹುಚ್ಚ.. ಹುಚ್ಚು ಪ್ರೇಮಿ ಅವನು..

    ಅವನ ಲವ್ ಸ್ಟೋರಿ ಕೇಳ್ತಿದ್ರೆ ದುಷ್ಮನ್ ಆದ ನಾನೇ ದಂಗಾಗಿಬಿಟ್ಟೆ. ಎಷ್ಟು ಕುಡಿದ್ರೂ ನಷೆ ಏರ್ತಿಲ್ಲ..

    ಇಷ್ಟು ಡೈಲಾಗುಗಳ ಮಧ್ಯೆ ಓಪನ್ ಆಗಿದ್ದಾನೆ ಶಿವ. ಶಿವ 143.

    ಇದು ರಾಮ್`ಕುಮಾರ್ ಪುತ್ರ ಧಿರೇನ್ ರಾಮಕುಮಾರ್ ಮೊದಲ ಸಿನಿಮಾ. ಜಯಣ್ಣ ಬ್ಯಾನರ್‍ನಲ್ಲಿ ಹೀರೋ ಆಗಿ ಎಂಟ್ರಿ ಕೊಡ್ತಿದ್ದಾರೆ ಧಿರೇನ್. ಈಗಾಗಲೇ ಚಿತ್ರದ ಮಳೆ ಹನಿಯೇ.. ಹಾಡು ಬಿಡುಗಡೆಯಾಗಿತ್ತು. ನೋಡಿದವರೆಲ್ಲ ಬೆಚ್ಚಗಾಗುವಂತೆ ಮುತ್ತಿನ ಮಳೆ ಸುರಸಿದ್ದರು ಧಿರೇನ್ ಮತ್ತು ಮಾನ್ವಿತಾ ಕಾಮತ್. ಈಗ ದಂಗಾಗುವಂತೆ ಎಂಟ್ರಿ ಕೊಟ್ಟಿದ್ದಾರೆ.

    ಅನಿಲ್ ಕುಮಾರ್ ನಿರ್ದೇಶನ ಮಾಡಿರುವ ಚಿತ್ರ ಶಿವ 143. ಮಾಸ್ ಹೀರೋ ಆಗುವ ಎಲ್ಲ ಸೂಚನೆಗಳನ್ನೂ ಧಿರೇನ್ ಕೊಟ್ಟಿದ್ದಾರೆ. ಆಗಸ್ಟ್ 26ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.