` kaali controversy, - chitraloka.com | Kannada Movie News, Reviews | Image

kaali controversy,

  • ಕಾಳಿ ಮಾತೆ ವಿವಾದ : ಲೀನಾ ಪರ ಕಿಶೋರ್..ವಿರುದ್ಧ ಮಾಳವಿಕಾ ಅವಿನಾಶ್

    ಕಾಳಿ ಮಾತೆ ವಿವಾದ : ಲೀನಾ ಪರ ಕಿಶೋರ್..ವಿರುದ್ಧ ಮಾಳವಿಕಾ ಅವಿನಾಶ್

    ಲೀನಾ ಮಣಿ ಮೇಕಲೈ ಅವರ ಕಾಳಿ ಪೋಸ್ಟರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಾದ ಸೃಷ್ಟಿಸಿದೆ. ಅತ್ತ ಲೀನಾ ಹಠ ಬಿಟ್ಟಿಲ್ಲ. ಪ್ರಾಣ ಕೊಡೋಕೂ ಸಿದ್ಧ ಎಂದಿದ್ದ ಲೀನಾ, ಬೆನ್ನಲ್ಲೇ ಶಿವ-ಪಾರ್ವತಿ ವೇಷಧಾರಿಗಳು ಧಮ್ ಹೊಡೀತಿರೋ ಫೋಟೋ ಹಾಕಿ ಏನಿವಾಗ ಎನ್ನುತ್ತಿದ್ದಾರೆ. ಅತ್ತ ಪ.ಬಂಗಾಳ ಸಂಸದೆ ಮಹುವಾ ಮೊಯಿತ್ರಾ ವಿವಾದಾತ್ಮಕ ಹೇಳಿಕೆ ನೀಡಿ ರಾಜಕೀಯ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿಯಂತಾ ಮಮತಾ ಬ್ಯಾನರ್ಜಿಯೂ ಮಹುವಾ ಬೆಂಬಲಕ್ಕೆ ನಿಂತಿಲ್ಲ. ಹೀಗಿರುವಾಗ ಲೀನಾ ಬೆಂಬಲಕ್ಕೆ ನಟ ಕಿಶೋರ್ ಬಂದಿದ್ದಾರೆ.

    ಬೇಡರ ಕಣ್ಣಪ್ಪ ಚಿತ್ರದ ಪೋಸ್ಟರ್ ಹಾಕಿ ನನ್ನ ದೇವರು, ನನ್ನ ಭಕ್ತಿ, ನನ್ನ ನೈವೇದ್ಯಗಳು, ನನ್ನ ಹಕ್ಕು. ಅದು ನಮ್ಮ ನಾಡಿನ ಸೌಂದರ್ಯ ಎಂದು ಬರೆದುಕೊಂಡಿದ್ದಾರೆ ಕಿಶೋರ್.

    ಇದಕ್ಕೆ ಕಿಡಿ ಕಾರಿರುವುದು ನಟಿ ಮಾಳವಿಕಾ ಅವಿನಾಶ್. ಬೇಡರ ಕಣ್ಣಪ್ಪ ಶಿವನಿಗೆ ಮಾಂಸ ಅರ್ಪಿಸಿದಾಗ ಮೇಲುಗೈ ಸಾಧಿಸಿದ್ದು ಆತನ ಭಕ್ತಿ. ಅವನಲ್ಲಿ ಮುಗ್ದತೆಯಿತ್ತೇ ಹೊರತು ದುರಹಂಕಾರವಿರಲಿಲ್ಲ. ಈಗ ಅದು ಸ್ತ್ರೀವಾದಿ, ಉದಾರವಾದಿ ವಿಕೃತಿಗಳಿಗೆ ಮಾರ್ಗವಾಗಿದೆ. ಬೇಡರ ಕಣ್ಣಪ್ಪ ಭಗವಂತನಿಗೇ ಕಣ್ಣು ನೀಡಲು ಹೋದ. ಈಗ ಆಕೆ ಕಾಳಿಮಾತೆಗೆ ಕಣ್ಣು ನೀಡುತ್ತಾಳೆಯೇ.. ನಿಮ್ಮ ಅಭ್ಯಾಸ, ದುರ್ಗುಣಗಳನ್ನು ಹೇರಲು ಕಾಳಿ ಮಾತೆ ಸಾಕು ಪ್ರಾಣಿ ಅಲ್ಲ ಎಂದು ಖಾರವಾಗಿಯೇ ಟೀಕಿಸಿದ್ದಾರೆ ಮಾಳವಿಕಾ.

    ಇದರ ನಡುವೆ ಕಿಶೋರ್ ಅಭಿಮಾನಿಯೊಬ್ಬರೇ.. ನಿಮ್ಮ ಮನೆಯ ದೇವರ ಕೋಣೆಯಲ್ಲಿ ಏನಾದರೂ ಮಾಡಿಕೊಳ್ಳಿ. ಆದರೆ ಸಿನಿಮಾದಂತಾ ವಿಷಯ ಬಂದಾಗ ನೀವು ತೋರಿಸುವ ದೇವರು ನಿಮ್ಮ ದೇವರಷ್ಟೇ ಅಲ್ಲ, ಸಮಾಜದ ದೇವರು. ನಾವು ಪ್ರೀತಿಸುವ ದೇವರನ್ನು ನಿಮಗೆ ಬೇಕಾದಂತೆ ಅಸಹ್ಯವಾಗಿ ತೋರಿಸಿ ನನ್ನ ಹಕ್ಕು, ಸ್ವಾತಂತ್ರ್ಯ ಎನ್ನಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.