ತಬಲಾ ನಾಣಿ ನಿರ್ಮಾಪಕರಾಗುತ್ತಿದ್ದಾರೆ. ನಿರ್ಮಾಣದ ಸಾಹಸದಲ್ಲಿ ತಬಲಾ ನಾಣಿ ಜೊತೆಗೆ ಅವರ ಸ್ನೇಹಿತರೂ ಕೈಜೋಡಿಸಿದ್ದಾರೆ. ಹೀರೋ ಆಗಿರೋದು ಪ್ರೇಮ್. ನಾಯಕಿ ಮಾನ್ವಿತಾ ಕಾಮತ್. ಡೈರೆಕ್ಟರ್ ಅಥರ್ವ್ ಆರ್ಯ. ಜೂಜಾಟ, ಗುಬ್ಬಚ್ಚಿ ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇದೆ.
ಇದು ತಂದೆ ಮಗಳ ಸಂಬಂಧ ಸಾರುವ ಕಥೆ. ತಂದೆಯೊಬ್ಬ ಕುಟುಂಬದಲ್ಲಿ ಮಹತ್ವ ಕಳೆದುಕೊಂಡಾಗ, ಪ್ರೀತಿಯಿಂದ, ಆರೈಕೆಯಿಂದ ವಂಚಿತನಾದಾಗ ಅನುಭವಿಸುವ ನೋವು ಹೇಗಿರುತ್ತೆ ಅನ್ನೋದೇ ಕಥೆ. ಇಲ್ಲಿ ಮಾನ್ವಿತಾಗೆ ತಬಲಾ ನಾಣಿ ತಂದೆ. ಸಂಜಯ್, ಜೀವಿತಾ, ರಂಗಿತರಂಗ ಖ್ಯಾತಿಯ ಅರವಿಂದ್, ವಿಜಯ್ ಚೆಂಡೂರ್, ಮಿಮಿಕ್ರಿ ಗೋಪಿ, ಅರುಣ್ ಬಾಲರಾಜ್, ಬಲರಾಜ್ವಾಡಿ, ವರ್ಧನ್ ತೀರ್ಥಹಳ್ಳಿ, ಗಿರೀಶ್ ಜತ್ತಿ, ಪಟೇಲ್ ಅಣ್ಣಯ್ಯಪ್ಪ ಮೊದಲಾದವರು ನಟಿಸುತ್ತಿದ್ದಾರೆ. ಸಿನಿಮಾಗಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ.
ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಪ್ರೇಮ್ ಮಾನ್ವಿತಾ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ತಂದೆ ಮಗಳ ಕಥೆಯಲ್ಲಿ ಹೀರೋ ಪಾತ್ರವೇನು ಎಂಬ ಕುತೂಹಲವಂತೂ ಖಂಡಿತಾ ಇದೆ.