ಈ ವಾರ 4 ಸಿನಿಮಾ ಸಖತ್ ಸೌಂಡ್ ಮಾಡುತ್ತಿವೆ. ಒಂದೊಂದು ಚಿತ್ರವೂ ಒಂದೊಂದು ರೀತಿಯಲ್ಲಿ. ಕಾನ್ಸೆಪ್ಟ್ ಬೇರೆ.. ಡೈರೆಕ್ಟರ್ ಬೇರೆ.. ಕಥೆಯ ಆತ್ಮವೇ ಬೇರೆ..
ಹರಿಕಥೆ ಅಲ್ಲ ಗಿರಿಕಥೆ : ಇದು ರಿಷಬ್ ಶೆಟ್ಟಿ ಸಿನಿಮಾ. ಹಾಗಂತ ಈ ಚಿತ್ರಕ್ಕೆ ಅವರು ಡೈರೆಕ್ಟರ್ ಅಲ್ಲ, ಹೀರೋ ಮಾತ್ರ. ಅನಿರುದ್ಧ್ ಮಹೇಶ್ ಮತ್ತು ಕರಣ್ ಅನಂತ್ ಎಂಬ ಇಬ್ಬರು ಹೊಸಬರಿಗೆ ಡೈರೆಕ್ಟರ್ ಕ್ಯಾಪ್ ತೊಡಿಸಿದ್ದಾರೆ. ವಿಡಂಬನೆ ಮತ್ತು ಹಾಸ್ಯದ ಟ್ರ್ಯಾಕ್‍ನಲ್ಲೇ ಸಾಗುವ ಕಥೆಯಲ್ಲಿ ರಿಷಬ್ ಎದುರು ರಚನಾ ಇಂದರ್ ಮತ್ತು ತಪಸ್ವಿನಿ ಪೂಣಚ್ಚ ಹೀರೋಯಿನ್ಸ್. ಹೊನ್ನವಳ್ಳಿ ಕೃಷ್ಣ ಮತ್ತು ಪ್ರಮೋದ್ ಶೆಟ್ಟಿ ಇನ್ನೆರಡು ಪ್ರಧಾನ ಪಾತ್ರದಲ್ಲಿದ್ದಾರೆ. ವಾಸುಕಿ ವೈಭವ್ ಹಾಡುಗಳು ಸಖತ್ ಹಿಟ್ ಆಗಿವೆ.
ತುರ್ತು ನಿರ್ಗಮನ : ಒಬ್ಬ ವ್ಯಕ್ತಿ ಸಡನ್ ಆಗಿ ಸಾಯುತ್ತಾನೆ. ಸತ್ತ ಮೇಲೆ ಅವನಿಗೆ ಮತ್ತೆ ಬದುಕುವ ಆದರೆ ಮೂರೇ ಮೂರು ದಿನ ಮಾತ್ರ ಬದುಕುವ ಅವಕಾಶ ಸಿಗುತ್ತದೆ. ಆಗ ಆತ ಏನು ಮಾಡಬಹುದು? ಒಂದು ವಿಭಿನ್ನ ಕಥೆಯನ್ನು ಅಷ್ಟೇ ವಿಭಿನ್ನವಾಗಿ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಳ್ಳದೆ, ಔಟ್ ಆಫ್ ದಿ ಬಾಕ್ಸ್ ಶೈಲಿಯಲ್ಲಿ ಹೇಳಿರೋದು ಹೇಮಂತ್ ಕುಮಾರ್. ರಾಜ್ ಬಿ.ಶೆಟ್ಟಿ, ಸುನಿಲ್, ಸುಧಾರಾಣಿ.. ಹೀಗೆ ಪ್ರತಿಭಾವಂತರ ದಂಡೇ ಚಿತ್ರದಲ್ಲಿದೆ.
ತ್ರಿವಿಕ್ರಮ : ಹೀರೋಯಿನ್ ಹೆಸರು ತ್ರಿಷಾ. ಹೀರೋ ವಿಕ್ರಂ. ಅವರಿಬ್ಬರ ಹೆಸರು ಕೂಡಿದಾಗ ಸೃಷ್ಟಿಯಾದ ಕಥೆಯೇ ತ್ರಿವಿಕ್ರಮ. ರವಿಚಂದ್ರನ್ ಅವರ 2ನೇ ಮಗ ವಿಕ್ರಂ ಅವರ ಮೊದಲ ಚಿತ್ರ. ಮಿಡ್ಲ್ ಕ್ಲಾಸ್ ಹುಡುಗನ ಲವ್ ಸ್ಟೋರಿ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾಗೆ ರಾಮ್ಕೋ ಸೋಮಣ್ಣ ಪ್ರೊಡ್ಯೂಸರ್. ರವಿಚಂದ್ರನ್ ಪುತ್ರನ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ದೊಡ್ಡದಾಗಿದೆ.
ಬಡ್ಡೀಸ್ : ಇದು ಕಾಲೇಜ್ ಸ್ಟೂಡೆಂಟ್ಸ್ ಲೈಫ್ ಸ್ಟೋರಿ. ಯೂಥ್‍ಫುಲ್ ಕಥೆ. ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಗುರುತೇಜ ಶೆಟ್ಟಿ ನಿರ್ದೇಶನದ ಸಿನಿಮಾ ವಿಶೇಷ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ.