ಹರಿಕಥೆ ಅಲ್ಲ ಗಿರಿಕಥೆ. ಪ್ರೇಕ್ಷಕರು ಇದನ್ನಾಗಲೇ ಶಾರ್ಟ್ & ಸ್ವೀಟ್ ಆಗಿ ಹೆಚ್.ಕೆ.ಜಿ.ಕೆ. ಎನ್ನುತ್ತಿದ್ದಾರೆ. ರಿಷಬ್ ಶೆಟ್ಟಿ ನಟಿಸಿರೋ ಚಿತ್ರದಲ್ಲಿ ಕಾಮಿಡಿ ಬ್ಯಾಕ್‍ಗ್ರೌಂಡ್ ಸ್ಟೋರಿ. ಇದೇ ವಾರ ರಿಲೀಸ್ ಆಗುತ್ತಿರೋ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ನಿರ್ದೇಶಕರಷ್ಟೇ ಅಲ್ಲ, ನಾಯಕಿಯರೂ ಇಬ್ಬಿಬ್ಬರು. ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್. ಈ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್.
ಬಿಗ್‍ಬಾಸ್‍ನಲ್ಲಿ ಮನ್ಸಿಂದ ಯಾರೂನೂ ದೊಡ್ಡೋರಲ್ಲ ಅನ್ನೋ ಸೀರಿಯಸ್ ಹಾಡಿನ ಮೂಲಕ ಕನ್ನಡಿಗರ ಮನೆ ಮನ ತಲುಪಿದ ವಾಸುಕಿ ವೈಭವ್, ಇತ್ತೀಚೆಗೆ ಬಡವ ರಾಸ್ಕಲ್ ಚಿತ್ರದಲ್ಲಿ ಮಾಸ್ ಹಾಡುಗಳನ್ನೂ ಕೊಟ್ಟು ಗೆದ್ದಿದ್ದಾರೆ. ಈಗ ಕಾಮಿಡಿ ಟ್ರ್ಯಾಕ್ ಸಿನಿಮಾ.
ಆ್ಯಕ್ಷನ್ ಮತ್ತು ಎಮೋಷನ್ ಸಿನಿಮಾಗಳಿಗೆ ಸಂಗೀತ ನೀಡುವುದಕ್ಕಿಂತ ದೊಡ್ಡ ಚಾಲೆಂಜ್ ಕಾಮಿಡಿ ಸಿನಿಮಾಗಳಿಗೆ ಮ್ಯೂಸಿಕ್ ನೀಡೋದು. ಜೊತೆಗೆ ಚಿತ್ರದಲ್ಲಿ ಆಗಲೇ ಶೂಟಿಂಗ್ ಆಗಿತ್ತು. ಆ ದೃಶ್ಯಗಳಿಗೆ ತಕ್ಕಂತೆ ಮ್ಯೂಸಿಕ್ ಕೊಡುವುದು ಇನ್ನೂ ದೊಡ್ಡ ಚಾಲೆಂಜ್ ಎನ್ನುವ ವಾಸುಕಿ ವೈಭವ್ ಚಿತ್ರದ ನಿರ್ದೇಶಕರಿಗೆ ಸಂಗೀತದ ಕ್ರೆಡಿಟ್ ಕೊಟ್ಟಿದ್ದಾರೆ. ಅವರಿಗೆ ಏನು ಬೇಕು ಅನ್ನೊದು ಸ್ಪಷ್ಟವಾಗಿ ಗೊತ್ತಿತ್ತು. ಹೀಗಾಗಿ ಕೆಲಸ ಸುಲಭವಾಗುತ್ತಾ ಹೋಯಿತು ಎನ್ನುವ ವಾಸುಕಿ ವೈಭವ್ ಅವರಿಗೆ ಈಗಾಗಲೇ ಚಿತ್ರದ ಎರಡು ಹಾಡುಗಳು ಹಿಟ್ ಆಗಿರೋದು ಖುಷಿ ಕೊಟ್ಟಿದೆ.
ಜೂ.ಮೊನಾಲಿಸಾ ಮತ್ತು ಬಾವರ್ಚಿ ಹಾಡುಗಳು ಹಿಟ್ ಆಗಿವೆ.
ಚಿತ್ರದ ಹಾಡುಗಳಿಗೆ ಸಾಹಿತ್ಯ ಕೊಟ್ಟಿರೋದು ಯೋಗರಾಜ್ ಭಟ್, ಸತ್ಯ ಪ್ರಕಾಶ್, ತ್ರಿಲೋಕ್ ವಿಕ್ರಂ ಮತ್ತು ಕಲ್ಯಾಣ್.