ಒಬ್ಬ ನಟನ ನಟನೆಯನ್ನು ಇನ್ನೊಬ್ಬ ನಟ ಹೊಗಳಿದಾಗ, ಇಷ್ಟಪಟ್ಟಾಗ ಸಿಗುವ ಖುಷಿಯೇ ಬೇರೆ. ಒಬ್ಬ ನಿರ್ದೇಶಕನಿಗೂ ಅಷ್ಟೆ, ಇನ್ನೊಬ್ಬ ನಿರ್ದೇಶಕರು ಆತನ ನಿರ್ದೇಶನ ಹೊಗಳಿದಾಗ ಸಿಗುವ ಆತ್ಮತೃಪ್ತಿಯೇ ಬೇರೆ. ಸದ್ಯಕ್ಕೆ ಅಂತಾ ಖುಷಿಯಲ್ಲಿರೋದು ಅಜನೀಶ್ ಲೋಕನಾಥ್.
ಸದ್ಯಕ್ಕೆ ದೇಶದಾದ್ಯಂತ ಟ್ರೆಂಡಿಂಗ್‍ನಲ್ಲಿರೋದು ಅಜನೀಶ್ ಲೋಕನಾಥ್ ಕಂಪೋಸ್ ಮಾಡಿರುವ ರಾರಾ ರಕ್ಕಮ್ಮ ಸಾಂಗ್. ವಿಕ್ರಾಂತ್ ರೋಣ ಚಿತ್ರದ ಬ್ರಾಂಡ್ ಅಂಬಾಸಿಡರ್ ಆಗಿರೋ ಹಾಡು ಜನರಿಗೆ ಅದೆಷ್ಟು ಇಷ್ಟವಾಗಿದೆಯೆಂದರೆ, ಸಿಕ್ಕ ಸಿಕ್ಕ ಕಡೆ ಅಭಿಮಾನಿಗಳು ಹಾಡಿ ಕುಣಿಯುತ್ತಿದ್ದಾರೆ. ಸುದೀಪ್, ಜಾಕ್ವೆಲಿನ್ ಅಷ್ಟೆ ಅಲ್ಲ, ಬೇರೆ ಬೇರೆ ಸಿನಿಮಾ ತಾರೆಗಳು ಸ್ಟೆಪ್ ಹಾಕುತ್ತಿದ್ದಾರೆ. ಇದರ ನಡುವೆ ಸಂಗೀತ ನಿರ್ದೇಶಕ ಗುರುಕಿರಣ್, ಅಜನೀಶ್ ಲೋಕನಾಥ್ ಅವರನ್ನು ಸಂದರ್ಶನ ಮಾಡಿದ್ದಾರೆ.
ಈಗ ಇನ್ನೊಬ್ಬ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ರಾರಾ ರಕ್ಕಮ್ಮ ಹಾಡಿನ ಮ್ಯೂಸಿಕ್ ನುಡಿಸಿ ಥ್ರಿಲ್ಲಾಗಿ ಅಜನೀಶ್‍ಗೆ ವಿಷ್ ಮಾಡಿದ್ದಾರೆ. ಸದ್ಯಕ್ಕಂತೂ ಅಜನೀಶ್ ಖುಷಿಯ ಉತ್ತುಂಗದಲ್ಲಿದ್ದಾರೆ. ಏಕೆಂದರೆ ಈಗಿನ್ನೂ 777 ಚಾರ್ಲಿ ಸೂಪರ್ ಹಿಟ್ ಆಗಿದ್ದು, ಆ ಚಿತ್ರದ ಮ್ಯೂಸಿಕ್ ಹೀರೋ ಕೂಡಾ ಅವರೇ.