` sangeetha sringeri, - chitraloka.com | Kannada Movie News, Reviews | Image

sangeetha sringeri,

 • 777 Charlie Movie Review, Chitraloka Rating 4/5

  777 Charlie Movie Review, Chitraloka Rating 4/5

  It is a bow Wow experience

  Film: 777 Charlie

  Director: Kiranraj K

  Duration: 166 minutes

  Cast: Charlie, Rakshit Shetty, Sangeetha Sringeri, Raj B Shetty, Danish Sait

  Stars: 4

  “All his life he tried to be a good person. Many times, however, he failed. For after all, he was only human. He wasn’t a dog.”

  A lonely factory worker who has no purpose in life beyond his work, cigarettes, idlis and beer, embarks on an emotional roller-coaster journey of friendship, love and bonding with a Labrador.

  Rakshit Shetty as that factory worker and Charlie the Labrador make this a 166-minute long experience that ceases to be a mere cinematic experience. This is life and what makes us human.

  Animals in Indian films are restricted to the revenge seeking female snakes, elephants as a hero’s bodyguard and more frequently the faithful dog chipping in in a fight. With 777 Charlie, director Kiranraj K breaches new ground and explores that aspect of the human-animal story which we always wanted to see in films but never had the opportunity till now. Yes, this film is not just special in Kannada; it is a landmark, for its content, in the Indian film context too. 

  The first half of the film is a comedy drama involving Charlie and Dharma (Rakshit Shetty). It is a laugh riot and the experience of having the whole theatre laugh simultaneously has to be experienced to understand. It was a long time ago this happened. The second half is more emotional as the human who has lost all his family finds not just a companion but a family member. Well, the dog being a dog could not have given anything but love in return.

  The emotional bonding between the two, predictably starts with the comedy, turns to emotional heart-melting incidents and finally to a tear-jerking climax. A few scenes in the film are repetitive but the delightful journey makes everything worthwhile.

  The production values of this film are the best money and talent put together could provide. It is top notch and 777 Charlie a very good contribution to the Indian film world from Sandalwood.

  The performances are beyond applause. Rakshit and Charlie both deliver award-winning performances. Every character is neatly etched by Kiranraj and you can see that in the performances of the actors be it Raj B Shetty or Sangeetha Sringeri.

  777 Charlie could not have arrived at a more appropriate time. This is one of the finest moments for the Kannada film industry. Kudos to the entire team for their conviction and determination in what they have achieved.

  S Shyam Prasad 

 • 777 ಚಾರ್ಲಿ ನೋಡಿದ ಸಿಎಂ ಬೊಮ್ಮಾಯಿ & ಟೀಂ

  777 ಚಾರ್ಲಿ ನೋಡಿದ ಸಿಎಂ ಬೊಮ್ಮಾಯಿ & ಟೀಂ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ವಾನ ಪ್ರಿಯರು. ಅವರ ಮನೆಯಲ್ಲಿ ಸಾಕಿದ್ದ ನಾಯಿ ಮೃತಪಟ್ಟಾಗ ಅವರು ಮಗುವನ್ನೇ ಕಳೆದುಕೊಂಡವರಂತೆ ಕಣ್ಣೀರಿಟ್ಟಿದ್ದನ್ನು ಕರ್ನಾಟಕ ನೋಡಿದೆ. ಇದೇ ಪ್ರೀತಿಯಿಂದ 777 ಚಾರ್ಲಿ ನೋಡಿದ್ದಾರೆ ಸಿಎಂ ಬೊಮ್ಮಾಯಿ. ಬೊಮ್ಮಾಯಿ ಜೊತೆ ಸಚಿವರಾದ ಆರ್.ಅಶೋಕ್, ಡಿ.ಸುಧಾಕರ್, ಬಿ.ಸಿ.ನಾಗೇಶ್, ಶಾಸಕ ರಘುಪತಿ ಭಟ್ ಸೇರಿದಂತೆ ಹಲವರು ಸಿನಿಮಾ ನೋಡಿದರು.

  ನನಗೆ ನಾಯಿಗಳೆಂದರೆ ಪ್ರೀತಿ. ನನ್ನ ಮನೆಯಲ್ಲೀಗ ದಿಯಾ ಅನ್ನೋ ಹೆಸರಿನ ನಾಯಿ ಇದೆ. ಸಿನಿಮಾದಲ್ಲಿ ಚಾರ್ಲಿ ಹೇಗೆ ಅಪ್ಪಿಕೊಳ್ಳುತ್ತದೋ.. ನಾನು ಮನೆಗೆ ಹೋದಾಗ ನನ್ನ ದಿಯಾ ಕೂಡಾ ಹಾಗೆಯೇ ಅಪ್ಪಿಕೊಳ್ಳುತ್ತದೆ ಎಂದರು ಬೊಮ್ಮಾಯಿ. ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಕರೆಯನ್ನೂ ಕೊಟ್ಟರು. ನಿರ್ದೇಶಕ ಕಿರಣ್ ರಾಜ್, ರಕ್ಷಿತ್ ಶೆಟ್ಟಿಯವರನ್ನು ಬಾಯ್ತುಂಬಾ ಹೊಗಳಿದರು.

 • ಪೊಲೀಸರ ಹೃದಯವನ್ನೂ ಗೆದ್ದ ಚಾರ್ಲಿ ಬಾಕ್ಸಾಫೀಸ್'ನ್ನೂ ಗೆದ್ದ

  ಲೀಸರ ಹೃದಯವನ್ನೂ ಗೆದ್ದ ಚಾರ್ಲಿ ಬಾಕ್ಸಾಫೀಸ್'ನ್ನೂ ಗೆದ್ದ

  777 ಚಾರ್ಲಿ ಸಿನಿಮಾ ನೋಡಿ ಹೊರಗೆ ಬರುವವರ ಕಣ್ಣು ಒದ್ದೆಯಾಗುತ್ತಿದೆ. ಒಂದು ಭಾವುಕತೆ ಆವರಿಸಿಕೊಳ್ಳುತ್ತದೆ. ಕೆಲವರು ಬಿಕ್ಕಳಿಸುತ್ತಾರೆ. ಒಂದು ಕಾಲದಲ್ಲಿ ತಾಯಿ, ತವರು, ತಂಗಿ ಸೆಂಟಿಮೆಂಟ್ ಚಿತ್ರಗಳೇ ಮೆರೆಯುತ್ತಿದ್ದ ಕಾಲದಲ್ಲಿ ಇಂಥಾದ್ದೊಂದು ಕಣ್ಣೀರ ಧಾರೆ ಹರಿದಿತ್ತು. ಈಗ ಒಂದು ನಾಯಿಯ ಕಥೆ ಕಣ್ಣೀರು ತರಿಸುತ್ತಿರುವುದು ವಿಶೇಷ. 777 ಚಾರ್ಲಿ ಗೆದ್ದಿದ್ದಾಗಿದೆ.

  ಮಂಗಳೂರು ಪೊಲೀಸರು ತಮ್ಮ ಶ್ವಾನದಳಕ್ಕೆ ಸೇರಿದ ನಾಯಿಗೆ ಚಾರ್ಲಿ ಎಂದೇ ನಾಮಕರಣ ಮಾಡಿದ್ದಾರೆ. ಸಿನಿಮಾದಲ್ಲಿ ಚಾರ್ಲಿಯಾಗಿ ನಟಿಸಿರುವವಳು ಲ್ಯಾಬ್ರಡಾರ್ ರಿಟ್ರೈವರ್ ತಳಿಯ ನಾಯಿ. ಪೊಲೀಸರ ಬಳಿ ಸೇರಿದ ಈ ನಾಯಿಯೂ ಅಷ್ಟೆ, ಅದೇ ತಳಿಯದ್ದು. ಬಂಟ್ವಾಳದಿಂದ ತರಿಸಿರುವ ನಾಯಿ. 20 ಸಾವಿರ ಕೊಟ್ಟು ಈ ನಾಯಿ ಖರೀದಿಸಿದ್ದಾರಂತೆ. ಇನ್ನೊಂದಾರು ತಿಂಗಳ ನಂತರ ತರಬೇತಿ ಶುರು ಮಾಡಲಿದ್ದಾರೆ. ಈ ನಾಯಿಗೆ ಬಾಂಬ್ ನಿಷ್ಕ್ರಿಯ ದಳದಲ್ಲಿ ಬಾಂಬ್ ಪತ್ತೆ ಹಚ್ಚುವ ತರಬೇತಿ ನೀಡಲಿದ್ದಾರೆ ಪೊಲೀಸರು.

  ಅಂದಹಾಗೆ ಇದೆಲ್ಲದರ ಮಧ್ಯೆ ಬಾಕ್ಸಾಫೀಸ್‍ನಲ್ಲೂ ಭರ್ಜರಿ ಸದ್ದು ಮಾಡಿದೆ 777 ಚಾರ್ಲಿ. ಎಲ್ಲ ಕಡೆಯೂ ಹೌಸ್‍ಫುಲ್ ಪ್ರದರ್ಶನ ಕಂಡಿದೆ. ಚಿತ್ರಕ್ಕೆ ಹಾಗೂ ತಮ್ಮ ಪಾತ್ರಕ್ಕೆ ಸಿಕ್ಕ ರಿಯಾಕ್ಷನ್ಸ್ ಬಗ್ಗೆ ನಟ ರಕ್ಷಿತ್ ಶೆಟ್ಟಿ ಖುಷಿಯಾಗಿದ್ದರು. ಈಗ ನಿರ್ಮಾಪಕ ರಕ್ಷಿತ್ ಶೆಟ್ಟಿಯೂ ಖುಷಿಯಾಗಿದ್ದಾರೆ. ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಓಪನಿಂಗ್ ಅದಕ್ಕೆ ಕಾರಣ. ಏಕೆಂದರೆ ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲ. ಕಿರಣ್ ರಾಜ್ ನಿರ್ದೇಶನದ ಸಿನಿಮಾ ಬೇರೆಯದೇ ಜಾನರ್ ಸ್ಟೋರಿ. ಹೀಗಾಗಿ.. ಹೊಸತನದ ಪ್ರಯೋಗ ಕೂಡಾ ಒಳ್ಳೆಯ ಕಲೆಕ್ಷನ್ ಮಾಡಿರುವುದು ಸಹಜವಾಗಿಯೇ ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಖುಷಿ ಕೊಟ್ಟಿದೆ.

 • ಬಾಕ್ಸಾಫೀಸ್ : 50 ಕೋಟಿ ದಾಟಿತಾ 777 ಚಾರ್ಲಿ?

  ಬಾಕ್ಸಾಫೀಸ್ : 50 ಕೋಟಿ ದಾಟಿತಾ 777 ಚಾರ್ಲಿ?

  777 ಚಾರ್ಲಿ. ರಿಲೀಸ್ ಆದ ನಂತರ ಸಂಚಲನ ಸೃಷ್ಟಿಸಿದ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಆದ ಚಿತ್ರ. ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದ 777 ಚಾರ್ಲಿ, ಉಳಿದ ಭಾಷೆಗಳಲ್ಲಿ ನಿಧಾನವಾಗಿ ಬೇರೂರುತ್ತಿದೆ.

  ಕನ್ನಡದಲ್ಲಿ ಮೊದಲ ವಾರ ಇದ್ದ ಚಿತ್ರಮಂದಿರ ಮತ್ತು ಸ್ಕ್ರೀನ್‍ಗಳ ಸಂಖ್ಯೆ 2ನೇ ವಾರಕ್ಕೆ ಇನ್ನಷ್ಟು ಹೆಚ್ಚಿದೆ. ಸಕ್ಸಸ್ ಇರೋದೇ ಅಲ್ಲಿ. ಇನ್ನು ಮಲಯಾಳಂ ಮತ್ತು ತೆಲುಗಿನಲ್ಲಿ ಚಿತ್ರಕ್ಕೆ ನಿರೀಕ್ಷೆಯಂತೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಎರಡೂ ಭಾಷೆಗಳಲ್ಲಿ ಚಿತ್ರದ ಕಲೆಕ್ಷನ್ ಎರಡು ಕೋಟಿ ದಾಡಿ ಮುನ್ನುಗ್ಗುತ್ತಿದೆ. ತಮಿಳಿನಲ್ಲಿ ನಿಧಾನಕ್ಕೆ ಕಚ್ಚಿಕೊಳ್ಳುತ್ತಿದೆ. ಕಲೆಕ್ಷನ್ ಒಂದು ಕೋಟಿ ದಾಟಿದೆ. ಹಿಂದಿಯಲ್ಲಿ ಮೆಟ್ರೋ ಸಿಟಿಗಳಲ್ಲಿ ಚಿತ್ರಕ್ಕೆ ವಂಡರ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ.

  ಬೆಂಗಳೂರಿನಲ್ಲಿ ಈಗಲೂ 400 ಸ್ಕ್ರೀನ್‍ಗಳಲ್ಲಿ 777 ಚಾರ್ಲಿ ಇದೆ. ಚಾರ್ಲಿ ಹೀರೋ ಆಗಿರೋ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯೂ ನಾಯಕ ಎಂದರೆ ತಪ್ಪಾಗಲಿಕ್ಕಿಲ್ಲ. ಕಿರಣ್ ರಾಜ್ ನಿರ್ದೇಶನದ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದ್ದು, ಒಟ್ಟಾರೆ ಕಲೆಕ್ಷನ್ 40 ಕೋಟಿ ದಾಟಿದೆ. 50 ಕೋಟಿಯ ಸಮೀಪದಲ್ಲಿದೆ. ಈ ವೀಕೆಂಡ್‍ನಲ್ಲಿ 50 ಕೋಟಿಯನ್ನು ದಾಟಿ ಮುಂದೆ ಹೋಗುವ ಎಲ್ಲ ಸಾಧ್ಯತೆಗಳೂ ಇವೆ.

 • ಬಾಕ್ಸಾಫೀಸ್`ನಲ್ಲಿ ಚಾರ್ಲಿ ಚಮತ್ಕಾರ : ಸಿಂಪಲ್ಲಾಗ್ ಒಂದ್ ಹಿಟ್ ಸ್ಟೋರಿ

  ಬಾಕ್ಸಾಫೀಸ್`ನಲ್ಲಿ ಚಾರ್ಲಿ ಚಮತ್ಕಾರ : ಸಿಂಪಲ್ಲಾಗ್ ಒಂದ್ ಹಿಟ್ ಸ್ಟೋರಿ

  ಯಾವುದೇ ಸಿನಿಮಾ ರಿಲೀಸ್ ಆದಾಗ.. ಅದರಲ್ಲೂ ಸ್ಟಾರ್ ಸಿನಿಮಾ ಆಗಿದ್ದಾಗ.. ಮೊದಲ ದಿನ ಅದ್ಧೂರಿ ಕಲೆಕ್ಷನ್ ಫಿಕ್ಸ್ ಇರುತ್ತೆ. ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ 777 ಚಾರ್ಲಿ ರಿಲೀಸ್ ಆದಾಗಲೂ ಅದು ಭಿನ್ನವಾಗಿರಲಿಲ್ಲ. ಮೊದಲ ದಿನವೇ ಆರೂವರೆ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಆದರೆ, ಮ್ಯಾಜಿಕ್ ಶುರುವಾಗಿದ್ದು ಆಮೇಲೆ. ಚಾರ್ಲಿಯ ಅಭಿನಯಕ್ಕೆ ಫಿದಾ ಆದ ಪ್ರೇಕ್ಷಕರು ಭಾವುಕರಾಗುತ್ತಾ ಹೋದಂತೆ ಬಾಕ್ಸಾಫೀಸ್ ತುಂಬುತ್ತಾ ಹೋಯ್ತು. ಈಗ 50 ಕೋಟಿ ಮುನ್ನುಗ್ಗುತ್ತಿರುವ ಕಲೆಕ್ಷನ್, ಚಮತ್ಕಾರವನ್ನೇ ಮಾಡಿದೆ.

  2ನೇ ವಾರದ ಅಂತ್ಯಕ್ಕೆ ಆಗಿರುವ ಕಲೆಕ್ಷನ್ ಮೊದಲ ದಿನದ ಕಲೆಕ್ಷನ್‍ಗಿಂತ ಹೆಚ್ಚು. ಥಿಯೇಟರು ಮತ್ತು ಸ್ಕ್ರೀನ್‍ಗಳ ಸಂಖ್ಯೆಯೂ ಹೆಚ್ಚು. ಹೌಸ್‍ಫುಲ್ ಶೋಗಳ ಸಂಖ್ಯೆಯೂ ಹೆಚ್ಚು. ಇನ್ನೂ ಸಿಂಪಲ್ಲಾಗಿ ಹೇಳಬೇಕೆಂದರೆ ಮೊದಲ ವಾರಕ್ಕಿಂತ 2ನೇ ವಾರದ ಕಲೆಕ್ಷನ್ ಹೆಚ್ಚು.

  ಮೂಲಗಳ ಪ್ರಕಾರ ಚಾರ್ಲಿ ಬಾಕ್ಸಾಫೀಸ್ ಕಲೆಕ್ಷನ್ 60 ಕೋಟಿ ದಾಟಿದೆ. ಇದು ವಿಶ್ವದ ಎಲ್ಲೆಡೆಯ ಲೆಕ್ಕಾಚಾರ. ಇದು ಕೇವಲ ಕರ್ನಾಟಕದ ಶೋಗಳ ಕಥೆ ಅಲ್ಲ, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ, ಉ.ಭಾರತ ಸೇರಿದಂತೆ ವಿಶ್ವದೆಲ್ಲೆಡೆಯ ಸ್ಟೋರಿ ಇದೇ. ಇದು ಸಿಂಪಲ್ಲಾಗ್ ಒಂದು ಹಿಟ್ ಸ್ಟೋರಿ.

 • ಸಂಗೀತಾ ಶೃಂಗೇರಿ ಹೇಳಿದ ಚಾರ್ಲಿ ಕಥೆಗಳು

  ಸಂಗೀತಾ ಶೃಂಗೇರಿ ಹೇಳಿದ ಚಾರ್ಲಿ ಕಥೆಗಳು

  ಸಂಗೀತಾ ಶೃಂಗೇರಿ. ಕನ್ನಡಿಗರು ಈಕೆಯನ್ನು ಮೊದಲು ಗುರುತಿಸಿದ್ದು ಪಾರ್ವತಿದೇವಿಯಾಗಿದೆ. ಹರಹರ ಮಹಾದೇವ ಧಾರಾವಾಹಿಯ ಪಾತ್ರದ ಮೂಲಕ. ಇನ್ನು ಮುಂದೆ ಅವರನ್ನು ದೇವಿಕಾ ಆಗಿ ಗುರುತಿಸುತ್ತಾರೆ. 777 ಚಾರ್ಲಿ ಚಿತ್ರದ ನಾಯಕಿ ಸಂಗೀತಾ ಶೃಂಗೇರಿ ಪಾತ್ರದ ಹೆಸರದು.

  ದೇವಿಕಾ ಪಾತ್ರದ ಬಗ್ಗೆ ಕಿರಣ್ ರಾಜ್ ಹೇಳಿದಾಗ ಈ ಮನುಷ್ಯ ಒಂದೊಂದು ಪಾತ್ರಕ್ಕೂ ಎಷ್ಟು ಮಹತ್ವ ಕೊಡ್ತಾರಲ್ವಾ ಎಂದು ಇಷ್ಟವಾಯಿತು. ಆದರೆ ನಟಿಸುವಾಗ ಅದರ ಕಷ್ಟ ಅರಿವಾಯಿತು. ಕಿರಣ್ ಅವರಿಗೆ ಅವರು ಹೇಳಿದ ದೃಶ್ಯ ಅವರ ಕಲ್ಪನೆಗೆ ತಕ್ಕಂತೆಯೇ ಬರಬೇಕು. ನಾವು ಬದಲಿಸುವುದಾಗಲೀ, ಇಂಪ್ರೂವ್ ಮಾಡುವುದಾಗಲೀ ಇಷ್ಟವಾಗುತ್ತಿರಲಿಲ್ಲ. ಅವರು ಹೇಳಿದ್ದು ಆಗಬೇಕು, ಅಷ್ಟೆ. ಆದರೆ, ಅದನ್ನೆಲ್ಲ ತೆರೆ ಮೇಲೆ ನೋಡಿದಾಗ ನನ್ನ ಪಾತ್ರದ ಬಗ್ಗೆ ನನಗೇ ಖುಷಿಯಾಯಿತು. ನನ್ನ ಬಗ್ಗೆಯೇ ನನಗೆ ಹೆಮ್ಮೆಯಾಯಿತು.

  ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಏನೂ ಇಲ್ಲ. ಆದರೆ ಆ ಪಾತ್ರಕ್ಕೆ ಬಹಳ ಮಹತ್ವ ಇದೆ. ಗ್ಲಾಮರ್‍ಗೋಸ್ಕರ ಇರುವ ಪಾತ್ರ ನನ್ನದಲ್ಲ.

  ಚಿತ್ರದ ಇನ್ನೊಂದು ಚಾಲೆಂಜ್ ಚಾರ್ಲಿ. ಪ್ರತೀ ಸೀನ್‍ನ್ನೂ ಚೆನ್ನಾಗಿಯೇ ಅಭಿನಯಿಸಬೇಕು. ಚಾರ್ಲಿಯ ಯಾವ ದೃಶ್ಯ ಸರಿಯಾಗಿ ಸೆರೆಯಾಗುತ್ತೋ.. ಹೇಳೋಕಾಗಲ್ಲ. ಹೀಗಾಗಿ ನಾನಾಗಲೀ, ರಕ್ಷಿತ್ ಶೆಟ್ಟಿ ಅವರಾಗಲೀ, ರಾಜ್ ಬಿ.ಶೆಟ್ಟಿ, ದ್ಯಾನಿಷ್ ಸೇಠ್, ಬಾಬ್ಬಿ ಸಿಂಹ.. ಎಲ್ಲರೂ ಅಲರ್ಟ್ ಆಗಿರುತ್ತಿದ್ದೆವು.

  ಈ ಚಿತ್ರಕ್ಕಾಗಿ 2 ವರ್ಷದಿಂದ ಯಾವುದೇ ಆಫರ್ ಒಪ್ಪಿಕೊಂಡಿಲ್ಲ. ಹಾಗಂತ ನನಗೆ ಬೇಸರವೇನಿಲ್ಲ. ಚಿತ್ರದ ಮೇಲೆ, ಕಥೆಯ ಮೇಲೆ ಹಾಗೂ ನನ್ನ ಪಾತ್ರದ ಮೇಲೆ ನನಗೆ ನಂಬಿಕೆ ಇದೆ.

  ರಕ್ಷಿತ್ ಶೆಟ್ಟಿ ವ್ಯಕ್ತಿತ್ವವೇ ಇಷ್ಟವಾಯಿತು. ಅವರು ನಟಿಸುತ್ತಿರಲಿಲ್ಲ. ಪರಕಾಯ ಪ್ರವೇಶ ಮಾಡಿದ್ದರು. ಎಷ್ಟೋ ಬಾರಿ ನಾನು 40 ಟೇಕ್ ತೆಗೆದುಕೊಂಡಿದ್ದರೂ, ಅವರು ಬೇಸರ ಮಾಡಿಕೊಂಡಿರಲಿಲ್ಲ.

  ಹೀಗೆ ಹೇಳುತ್ತಾ ಹೋಗುವ ಸಂಗೀತಾಗೆ 777 ಚಾರ್ಲಿ ಮೇಲೆ ಭಾರಿ ಭರವಸೆ ಇದೆ. 777 ಚಾರ್ಲಿ ನಂತರ ಮಾರಿಗೋಲ್ಡ್`ನಲ್ಲಿ ನಟಿಸುತ್ತಿದ್ದಾರೆ. ಲಕ್ಕಿಮ್ಯಾನ್ ಚಿತ್ರದಲ್ಲಿ ಪುನೀತ್ ಜೊತೆಯೂ ನಟಿಸಿದ್ದಾರೆ.