` vikrant rona - chitraloka.com | Kannada Movie News, Reviews | Image

vikrant rona

  • 2ನೇ ವಾರಕ್ಕೆ ವಿಕ್ರಾಂತ್ ರೋಣ : 150 ಕೋಟಿ ಹೊಸ್ತಿಲಲ್ಲಿ..

    2ನೇ ವಾರಕ್ಕೆ ವಿಕ್ರಾಂತ್ ರೋಣ : 150 ಕೋಟಿ ಹೊಸ್ತಿಲಲ್ಲಿ..

    ವಿಕ್ಟರಿ ರೋಣನ ಗೆಲುವಿನ ನಾಗಾಲೋಟ ಮುಂದುವರೆದಿದೆ. ಎಲ್ಲೆಲ್ಲೂ ಚಿತ್ರದ ಬಗ್ಗೆ ಪ್ರಶಂಸೆ ಮತ್ತು ಪಾಸಿಟಿವ್ ಟಾಕ್`ಗಳೇ. ಚಿತ್ರದ ಬಗ್ಗೆ ಶುರುವಾದ ಅಪಪ್ರಚಾರ, ಅಪಸ್ವರಗಳನ್ನೆಲ್ಲ ಮೂಲೆಗುಂಪಾಗಿಸಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈಗ 2ನೇ ವಾರಕ್ಕೆ ಕಾಲಿಟ್ಟಿದೆ.

    ಸಾಮಾನ್ಯವಾಗಿ 2ನೇ ವಾರಕ್ಕೆ ಚಿತ್ರಮಂದಿರ ಮತ್ತು ಶೋಗಳ ಸಂಖ್ಯೆ ಕಡಿಮೆಯಾಗುತ್ತೆ. ಆದರೆ ವಿಕ್ಟರಿ ರೋಣನ ವಿಕ್ಟರಿ ಶೋಗಳ ಸಂಖ್ಯೆ ಹೆಚ್ಚಾಗಿರೋದು ವಿಶೇಷ. ಅಲ್ಲದೆ ಇಂದ ವರಮಹಾಲಕ್ಷ್ಮಿ ಹಬ್ಬ. ಸೋಮವಾರ ಮೊಹರಂ. ನಡುವೆ 4 ದಿನ ರಜೆ. ಇದು ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.

    ಕನ್ನಡದಲ್ಲಿ ವಿಕ್ರಾಂತ್ ರೋಣನ ಕಲೆಕ್ಷನ್ 100 ಕೋಟಿ ಸಮೀಪದಲ್ಲಿದ್ದರೆ, ತೆಲುಗು ಮತ್ತು ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ವಾರವೇ 150 ಕೋಟಿ ದಾಟಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.

  • Vikrant Rona sets OTT on fire 

    Vikrant Rona sets OTT on fire 

    Sudeep starrer Vikrant Rona, which release on Zee 5 OTT for his birthday on September 2 has notched up a record opening. In 24 hours of release, film has witnessed 500 million minutes of streaming. 

    OTT streaming is calculated on how many minutes a content has been watched by all the audience who start watching it put together. 

    Only the Kannada version of the film has been released on September 2. The Telugu version of the film will be released on September 16 in Disney+ Hotstar. The release in Hindi, Tamil and Malayalam has not been announced yet. 

    The 3D version of the film continues to be screened in a few theatres despite the OTT release. The film has become the highest grossing Kannada film for Sudeep. The Anup Bhandari directed film has grossed over Rs.200 crore at the box office.

  • Will Vikrant Rona on OTT match the 3D experience ?

    Will Vikrant Rona on OTT match the 3D experience ?

    Sudeep’s Vikrant Rona, is releasing on an OTT on September 2 to coincide with the actor’s birthday. The film’s USP in theatres was its 3D. The technical brilliance of the film and its 3D effects was universally praised. The 3D version outsold the 2D version in box office ticket sales. That was the pull of the technology. 

    However, OTT releases of films are still majorly watched on phone screens. Vikrant Rona is releasing on Zee5 and as there is no 3D technology available for phones and television telecast, it is to be seen if audience will receive it.

    Those who have already watched the film in 3D may feel they are missing the effects. Those who have watched it in 2D or those who will be watching the film for the first time may not make out much difference. Vikrant Rona will be one of the biggest OTT releases this year and is expected to draw in huge audience interest over the weekend.

    The film released in five languages; Kannada, Telugu, Hindi, Tamil and Malayalam. On September 2, only the Kannada version is releasing in OTT. The release of the other language versions has not yet been announced. 

    Meanwhile fans are also awaiting the announcement of Sudeep’s new film on his birthday. Speculations about Billa Ranga Basha, Ashwathamma and another film by producer N Kumar are all doing the rounds. 

  • ಆಸ್ಕರ್ ಅರ್ಹತಾ ಸುತ್ತಿಗೆ 2 ಕನ್ನಡ ಸಿನಿಮಾ : ಕಿರೀಟ ಸಿಗೋ ಚಾನ್ಸ್ ಇದೆಯಾ?

    ಆಸ್ಕರ್ ಅರ್ಹತಾ ಸುತ್ತಿಗೆ 2 ಕನ್ನಡ ಸಿನಿಮಾ : ಕಿರೀಟ ಸಿಗೋ ಚಾನ್ಸ್ ಇದೆಯಾ?

    ಈ ಬಾರಿಯ ಆಸ್ಕರ್‍ನಲ್ಲಿ ಕನ್ನಡ ಚಿತ್ರಗಳ ಹೊಳಪು ಜೋರಾಗಿದೆ. ಕಾಂತಾರ ಹಾಗೂ ವಿಕ್ರಾಂತ್ ರೋಣ ಚಿತ್ರಗಳು ಮೊದಲ ಸುತ್ತಿನ ಅರ್ಹತೆ ದಾಟಿದ್ದು 301 ಚಿತ್ರಗಳ ಲಿಸ್ಟ್ ಸೇರಿವೆ. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಅತ್ಯುತ್ತಮ ಚಿತ್ರ ಹಾಗೂ ನಟ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಸುತ್ತು ತಲುಪಿದೆ ಎನ್ನಲಾಗಿದೆ. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಕೂಡಾ ನಟನೆ ವಿಭಾಗದಲ್ಲಿಯೇ ಅರ್ಹತೆ ಗಿಟ್ಟಿಸಿದೆ.

    ರಾಜಮೌಳಿ ಅವರ ಆರ್.ಆರ್.ಆರ್. , ಅಲಿಯಾ ಭಟ್ ಅಭಿನಯದ ಗಂಗೂಬಾಯಿ ಕಟವಾಡಿ ಚಿತ್ರಗಳೂ ಅರ್ಹತೆಯ ಸುತ್ತು ದಾಟಿವೆ. ಹಿಂದಿಯಲ್ಲಿ ಸಂಚಲನ ಸೃಷ್ಟಿಸಿದ್ದ ಕಾಶ್ಮೀರ್ ಫೈಲ್ಸ್, ಮಾಧವನ್ ನಟನೆಯ ವಿಜ್ಞಾನಿ ನಂಬಿಯಾರ್ ಬಯೋಪಿಕ್ ರಾಕೆಟ್ರಿ : ದಿ ನಂಬಿ ಎಫೆಕ್ಟ್ ಕೂಡಾ ಆಯ್ಕೆಯಾಗಿವೆ. ತಮಿಳಿನ ಇರವಿನ್ ನಿಜಳ್, ಮಿ.ವಸಂತ ರಾವ್, ದಿ ಕನೆಕ್ಟ್ ಮಾರ್ನಿಂಗ್, ತುಝ್ಕಾ ಸಾಥಿ ಕೀ ನಹೀ ಚಿತ್ರಗಳೂ ಅರ್ಹತಾ ಸುತ್ತು ಪ್ರವೇಶಿಸಿವೆ. ಭಾರತೀಯ ಚಿತ್ರರಂಗದ ಅಧಿಕೃತ ಎಂಟ್ರಿಯಾಗಿರುವ ಗುಜರಾತಿ ಭಾಷೆಯ ಚಲ್ಲೋ ಶೋ ಚಿತ್ರ ಕೂಡಾ ಅರ್ಹತಾ ಸುತ್ತಿಗೆ ತಲುಪಿದೆ. ಒಟ್ಟಾರೆ 11 ಸಿನಿಮಾಗಳೂ ಸೇರಿದಂತೆ 15 ಭಾರತೀಯ ಚಿತ್ರ ಹಾಗೂ ಡಾಕ್ಯುಮೆಂಟರಿಗಳು ಪ್ರಶಸ್ತಿ ಸುತ್ತಿನ ಮೊದಲ ಅರ್ಹತೆ ಪಡೆದಿವೆ. ಒಟ್ಟಾರೆ 301 ಚಿತ್ರಗಳು. ಜನವರಿ 24ರಂದು ಶಾರ್ಟ್ ಲಿಸ್ಟ್ ಚಿತ್ರಗಳು ಅನೌನ್ಸ್ ಆಗಲಿವೆ.

  • ಇಂಡಿಯಾದಲ್ಲೇ ವಿಕ್ರಾಂತ್ ರೋಣನ ಹೊಸ ದಾಖಲೆ : ನಿಮ್ ನಿಮ್ ಭಾಷೆಯಲ್ಲೇ ನೋಡಬಹುದು..!

    ಇಂಡಿಯಾದಲ್ಲೇ ವಿಕ್ರಾಂತ್ ರೋಣನ ಹೊಸ ದಾಖಲೆ : ನಿಮ್ ನಿಮ್ ಭಾಷೆಯಲ್ಲೇ ನೋಡಬಹುದು..!

    ವಿಕ್ರಾಂತ್ ರೋಣ. ಕನ್ನಡದ ಸಿನಿಮಾ. ಹಲವು ಭಾಷೆಗಳಲ್ಲಿ ಡಬ್ ಆಗಿರುವ ಪ್ಯಾನ್ ಇಂಡಿಯಾ ಸಿನಿಮಾ. ಸುದೀಪ್, ನೀತಾ ಜೋಸೆಫ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ಸಿನಿಮಾ ರಿಲೀಸ್ ಆಗುವುದು ಜುಲೈ ಕೊನೆ ವಾರ. ವಿಕ್ರಾಂತ್ ರೋಣ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್‍ನಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಇದರ ಜೊತೆಯಲ್ಲೇ ನೀವು ನಿಮ್ಮದೇ ಭಾಷೆಯಲ್ಲಿ ಸಿನಿಮಾ ನೋಡುವ ಹೊಸ ಟೆಕ್ನಾಲಜಿಯೂ ಈ ಚಿತ್ರದ ಮೂಲಕ ಪರಿಚಯವಾಗುತ್ತಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ.

    ಸಿನಿ ಡಬ್ ಆ್ಯಪ್. ಇದರ ಮೂಲಕ ನೀವು ನಿಮಗಿಷ್ಟವಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ನೀವು ಹಿಂದಿ ವಿಕ್ರಾಂತ್ ರೋಣ ಥಿಯೇಟರಿನಲ್ಲಿ ಕುಳಿತಿದ್ದೀರಿ ಎಂದುಕೊಳ್ಳಿ. ಆದರೆ ನಿಮಗೆ ಹಿಂದಿ ಗೊತ್ತಿಲ್ಲ. ಕನ್ನಡದಲ್ಲಿಯೇ ನೋಡಬೇಕು ಎಂದುಕೊಳ್ಳುತ್ತೀರಿ. ಆಗ ಈ ಸಿನಿ ಡಬ್ ಆ್ಯಪ್ ಮೂಲಕ ನೀವು ಸಿನಿಮಾವನ್ನು ಕನ್ನಡದಲ್ಲಿಯೇ ಕೇಳಬಹುದು. ಈ ಆ್ಯಪ್ ಇದ್ದರೆ ಅದು ನೀವು ಥಿಯೇಟರಿನಲ್ಲಿ ಇರುವ ಟೈಂ ನೋಡಿಕೊಂಡು ಆಪರೇಟ್ ಆಗುತ್ತೆ. ಪೈರಸಿಯಲ್ಲಿ ಆಗಲ್ಲ. ಇದು ನಮ್ಮ ತಂಡದ ಕೆಲಸ ಎಂದು ಇಡೀ ತಂಡದ ಬೆನ್ನು ತಟ್ಟಿದ್ದಾರೆ ಕಿಚ್ಚ ಸುದೀಪ್.

    ಅಂದಹಾಗೆ ಇಂಥಾದ್ದೊಂದು ವ್ಯವಸ್ಥೆ ವಿಶ್ವಸಂಸ್ಥೆಯಲ್ಲಿದೆ. ಅಲ್ಲಿ ಬೇರೆ ಬೇರೆ ದೇಶಗಳ ಪ್ರತಿನಿಧಿಗಳು ತಮ್ಮ ತಮ್ಮ ಭಾಷೆಯಲ್ಲಿ ಮಾತನಾಡಿದರೂ, ಅಲ್ಲಿರೋ ಟೆಕ್ನಾಲಜಿ ಬಳಸಿಕೊಂಡು ತಕ್ಷಣವೇ ಅದು ಅನುವಾದಗೊಂಡು.. ನಿಮಗಿಷ್ಟವಾದ ಭಾಷೆಯಲ್ಲಿ ಕೇಳುವಂತ ವ್ಯವಸ್ಥೆ ಇದೆ. ಕೆಲವು ಕಾರ್ಪೊರೇಟ್ ಕಂಪೆನಿಗಳು ಇದನ್ನು ಈಗಾಗಲೇ ಅಳವಡಿಸಿಕೊಂಡಿವೆ. ಇದನ್ನು ಸಿನಿಮಾದಲ್ಲೂ ಬಳಸಬಹುದು ಅನ್ನೋದು ಕಲ್ಪನೆಯ ರೂಪದಲ್ಲಿತ್ತು. ಈ ಕಲ್ಪನೆಗೆ ಈಗ ಮೂರ್ತ ಸ್ವರೂಪ ನೀಡುತ್ತಿದೆ ಜಾಕ್ ಮಂಜು ಟೀಂ.

    ಇದು ಯಶಸ್ವಿಯಾದರೆ ಇದು ಕನ್ನಡ ಚಿತ್ರರಂಗದ ದಾಖಲೆಯಾಗಿ ಉಳಿಯಲಿದೆ. ಇಡೀ ದೇಶದ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗ ಕೊಡುವ ಕಾಣಿಕೆಯಾಗಲಿದೆ.

  • ಕೆಜಿಎಫ್ ನಂತರ ಶಿವಕುಮಾರ್ ಸೃಷ್ಟಿಸಿದ ವಿಕ್ರಾಂತ್ ರೋಣನ ಜಗತ್ತು..!

    ಕೆಜಿಎಫ್ ನಂತರ ಶಿವಕುಮಾರ್ ಸೃಷ್ಟಿಸಿದ ವಿಕ್ರಾಂತ್ ರೋಣನ ಜಗತ್ತು..!

    ಎಲ್ಲವೂ ಕಾಡು.. ಕಾಡಿನ ಮಧ್ಯೆ ಒಂದು ಜಲಪಾತ.. ಗುಹೆಗಳು.. ಎಲ್ಲವೂ ಕಾಡಿನಂತೆಯೇ ಕಾಣುತ್ತಿದೆ. ಆದರೆ.. ಅದು ಕಾಡಲ್ಲ. ಕಾಡಿನ ತರಾ.. ಏಕೆಂದರೆ ಈ ಕಾಡು ಸೃಷ್ಟಿಸಿದ್ದು ಶಿವಕುಮಾರ್. ಕೆಜಿಎಫ್ ಚಾಪ್ಟರ್ 2ನಲ್ಲಿ ಸಂಚಲನ ಸೃಷ್ಟಿಸಿದ್ದ ಶಿವಕುಮಾರ್ ವಿಕ್ರಾಂತ್ ರೋಣನಿಗಾಗಿ ಸೃಷ್ಟಿಸಿರುವ ಜಗತ್ತು ಇನ್ನೂ ಒಂದು ಕೈಮೇಲೆ ಎನ್ನುವಂತಿದೆ.

    ಈ ಚಿತ್ರಕ್ಕಾಗಿ ಕಾಡಿನ ಸೆಟ್ಟಿಗಾಗಿ 22 ಟ್ರಕ್‍ಗಳಲ್ಲಿ ಗಿಡ ತರಿಸಿಕೊಂಡಿದ್ದೇವೆ ಎನ್ನುತ್ತಾರೆ ಶಿವಕುಮಾರ್. 22 ಟ್ರಕ್ ಸಸಿಗಳು ಎನ್ನುವಾಗಲೇ ಚಿತ್ರದ ದೊಡ್ಡ ಕ್ಯಾನ್‍ವಾಸ್ ಅರ್ಥವಾಗಿ ಬಿಡುತ್ತದೆ. ಗಿಡಗಳನ್ನು ನೋಡಿಕೊಳ್ಳಲೆಂದೇ ಕೆಲವರನ್ನು ಕೆಲಸಕ್ಕಿಟ್ಟಿದ್ದರಂತೆ. ಪ್ರತಿ 20 ದಿನಗಳಿಗೊಮ್ಮೆ ಸೆಟ್`ನ ವಾತಾವರಣ ಬದಲಾಗದಂತೆ ಅಷ್ಟೂ ಗಿಡಗಳನ್ನು ಬದಲಿಸಬೇಕಿತ್ತು. ಮೊದಲು ಚೀನಾದಿಂದ ಕೃತಕ ಗಿಡಗಳನ್ನು ತರಿಸುವ ಪ್ಲಾನ್ ಇತ್ತು. ಕೊರೊನಾ ಎಲ್ಲವನ್ನೂ ಬದಲಿಸಿತು. ಇಲ್ಲಿಯೇ ಫಾರ್ಮ್‍ಗಳಿಂದ ತರಿಸಿಕೊಳ್ಳಲಾಯಿತು. ಕಾಡಿನ ಮಾದರಿಯ ನೆಲವನ್ನು ಸೃಷ್ಟಿಸೋಕೆ ವಿವಿಧ ಲೇಯರ್‍ಗಳನ್ನು ಸೃಷ್ಟಿಸಿ ಸಹಜವೆಂಬಂತೆ ಮಾಡಲಾಯಿತು ಎಂದೆಲ್ಲ ವಿವರ ನೀಡಿದ್ದಾರೆ ಶಿವಕುಮಾರ್.

    ಇದುವರೆಗೆ ರಿಲೀಸ್ ಆಗಿರುವ ಟೀಸರ್, ಟ್ರೇಲರುಗಳಲ್ಲಿಯೇ ಶಿವಕುಮಾರ್ ಸೃಷ್ಟಿಸಿರುವ ಹೊಸ ಜಗತ್ತು ಬೆರಗು ಹುಟ್ಟಿಸಿದೆ. ನಿರ್ದೇಶಕ ಅನೂಪ್ ಭಂಡಾರಿಯವರ ಕನಸಿನ ಲೋಕವನ್ನು ಯಥಾವತ್ತು ಕಟ್ಟಿಕೊಟ್ಟಿದ್ದೇನೆ ಎನ್ನುವ ವಿಶ್ವಾಸ ಶಿವಕುಮಾರ್ ಮಾತಿನಲ್ಲಿದೆ. ಚಿತ್ರಕ್ಕಾಗಿ ಇದೇ ಮಾದರಿಯ ಒಟ್ಟು 14 ಸೆಟ್‍ಗಳನ್ನು ಸೃಷ್ಟಿಸಲಾಗಿತ್ತಂತೆ..

  • ಗರಗರಗರ ಜರ್ಬ : ಅವರೆಲ್ಲರನ್ನೂ ಪರಿಚಯ ಮಾಡ್ಕೊಂಡ್ರಾ?

    ಗರಗರಗರ ಜರ್ಬ : ಅವರೆಲ್ಲರನ್ನೂ ಪರಿಚಯ ಮಾಡ್ಕೊಂಡ್ರಾ?

    ಗರಗರಗರ ಗಗ್ಗರ ಜರ್ಬ

    ಪಿರನಲ್ಕುರಿ ನೆತ್ತರ ಪರ್ಬ..

    ವಿಕ್ರಾಂತ್ ರೋಣ. ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ನೋಡಿದವರೆಲ್ಲ ಫುಲ್ ಖುಷ್. ಅನೂಪ್ ಭಂಡಾರಿ ಸೃಷ್ಟಿಸಿರುವ 3ಡಿ ಜಗತ್ತು ನಮ್ಮ ಅಕ್ಕಪಕ್ಕವೇ ನಡೆಯುತ್ತಿರುವಂತೆ ಭಾಸವಾಗುತ್ತದೆ. ಪ್ರೇಕ್ಷಕರೂ ಖುಷಿ ಖುಷಿ. ಅಂದಹಾಗೆ ಚಿತ್ರದಲ್ಲಿ ವಿಕ್ರಾಂತ್ ರೋಣ ಪ್ರಮುಖ ಪಾತ್ರಧಾರಿ. ಆದರೆ.. ಅವರ ಸುತ್ತಲೂ ಇರೋ ಪಾತ್ರಗಳ ಗತ್ತು ಗೈರತ್ತುಗಳೇ ಬೇರೆ.

    ನಿರೂಪ್ ಭಂಡಾರಿ ಅವರದ್ದು ಇಲ್ಲಿ ಸಂಜೀವ್ ಗಾಂಭಿರ ಅನ್ನೋ ಪಾತ್ರ. ಹೆಸರಲ್ಲಷ್ಟೇ ಗಾಂಭೀರ್ಯ. ಮಿಕ್ಕಂತೆ ಫುಲ್ ತರಲೆ.

    ಪನ್ನ ಅಂದ್ರೆ ಅಪರ್ಣಾ ಬಲ್ಲಾಳ್. ಚಿನಕುರುಳಿ ಪಟಾಕಿ ಹುಡುಗಿ. ನೀತಾ ಅಶೋಕ್ ನಟಿಸಿರುವ ಪಾತ್ರ ಫುಲ್ ಅಡ್ವೆಂಚರಸ್ ಕ್ಯಾರೆಕ್ಟರ್.

    ಈಕೆಯ ಜೊತೆ ಇರುವ ಪಾತ್ರವೇ ಮುನ್ನ. ಈಕೆಯ ಅವಳಿ ಸಹೋದರ. ಸಿದ್ದು ಮೂಲಿಮನಿ ನಟಿಸಿರೋ ಪಾತ್ರ.

    ವಿಶ್ವನಾಥ್ ಬಲ್ಲಾಳ್ ಪಾತ್ರದಲ್ಲಿ ರವಿಶಂಕರ್ ಗೌಡ ನಟಿಸಿದ್ದಾರೆ. ಕಾಮಿಡಿ ಜಾನರ್ ಬಿಟ್ಟು ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಧುಸೂಧನ್ ರಾವ್ ಜನಾರ್ಧನ್ ಗಾಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ರಕ್ಕಮ್ಮನ ಕಥೆ ಬಿಡಿ.. ಯಕ್ಕಸಕ್ಕ.. ಯಕ್ಕಸಕ್ಕ..

  • ಗುಮ್ಮ ಬಂದೇಬಿಟ್ಟ..

    ಗುಮ್ಮ ಬಂದೇಬಿಟ್ಟ..

    ವಿಕ್ರಾಂತ್ ರೋಣ ಚಿತ್ರದ ನಾಲ್ಕನೇ ಹಾಡು ಇದು. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ. ಚಿತ್ರದ ಮೊದಲ ಕುತೂಹಲವೇ ಗುಮ್ಮ. ಏನಿದು ಗುಮ್ಮ ಎಂಬ ಕುತೂಹಲ ಹುಟ್ಟಿಸಿಯೇ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿಸಿದ್ದ ಅನೂಪ್ ಭಂಡಾರಿ ಈಗ ಚಿತ್ರದ 4ನೇ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟಿದ್ದಾರೆ.

    ದ ಡೆವಿಲ್ಸ್ ಫ್ಯುರಿ ಹೆಸರಿನ ಈ ಹಾಡು ವಿಕ್ರಾಂತ್ ರೋಣ ಚಿತ್ರದ ಥೀಮ್ ಸಾಂಗ್ ಕೂಡಾ. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ಸಾಹಿತ್ಯ ನಿರ್ದೇಶಕ ಅನೂಪ್ ಭಂಡಾರಿ ಅವರದ್ದೇ. ಅನೂಪ್, ಅಜನೀಶ್ ಕೂಡಾ ಹಾಡುಗಾರರ ಲಿಸ್ಟಿನಲ್ಲಿದ್ದು, ದೀಪಕ್ ಬ್ಲೂ ಮತ್ತು ಹರ್ಷಿಕಾ ವೇದಾಂತ್ ಹಾಡಿಗೆ ದನಿಗೂಡಿಸಿದ್ದಾರೆ.

    ಈಗಾಗಲೇ ರಾರಾ ರಕ್ಕಮ್ಮ, ರಾಜಕುಮಾರಿ, ಹೇ ಫಕೀರ ಹಾಡುಗಳು ಕ್ರೇಜ್ ಹುಟ್ಟುಹಾಕಿವೆ. ಈಗ ಗುಮ್ಮನ ಟೈಮು.

    ರಂಗಿತರಂಗ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಬಂಡವಾಳ ಹೂಡಿರೋದು ಜಾಕ್ ಮಂಜು. ನಿರೂಪ್ ಭಂಡಾರಿ, ನೀತು ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿರೋ ಚಿತ್ರ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಇನ್ನೊಂದೇ ಒಂದು ವಾರ.. ಗುಮ್ಮನ್ನ ನೋಡೇಬಿಡೋಣ...

  • ಡ್ಯಾನ್ಸ್ ಮಾಡಿ.. ರೀಲ್ಸ್ ಮಾಡಿ.. 25 ಸಾವಿರ ಗೆಲ್ಲಿ : ವಿಕ್ರಾಂತ್ ರೋಣನ ಆಫರ್

    ಡ್ಯಾನ್ಸ್ ಮಾಡಿ.. ರೀಲ್ಸ್ ಮಾಡಿ.. 25 ಸಾವಿರ ಗೆಲ್ಲಿ : ವಿಕ್ರಾಂತ್ ರೋಣನ ಆಫರ್

    ಸಿನಿಮಾ ಥಿಯೇಟರುಗಳಲ್ಲಿ ಇಲ್ಲ. ಆದರೆ ರಕ್ಕಮ್ಮ ಕ್ರೇಜ್ ಕಮ್ಮಿಯಾಗಿಲ್ಲ. 2022ರ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದಾದ ವಿಕ್ರಾಂತ್ ರೋಣನ ಆರ್ಭಟ ಈಗ ಒಟಿಟಿಗಳಲ್ಲಿ ನಡೆಯುತ್ತಿದೆ. ಚಿತ್ರದ ಬಗ್ಗೆ ವಿಶೇಷ ಪ್ರೀತಿಯಿಟ್ಟುಕೊಂಡಿರೋ ಚಿತ್ರತಂಡ ಈಗ ಇನ್ನೊಂದು ಆಫರ್ ಕೊಟ್ಟಿದೆ. ನೀವು ಮಾಡಬೇಕಿರೋದು.. ಇಷ್ಟೆ.

    ರಾ ರಾ ರಕ್ಕಮ್ಮ.. ಹಾಡಿನ ಸ್ಟೆಪ್ ಹಾಕಬೇಕು. ಹಾಡಿನಲ್ಲಿ ಫೇಮಸ್ ಆಗಿರುವ ಹುಕ್ ಸ್ಟೆಪ್ ಮಾಡಿದರೆ ಇನ್ನೂ ಚೆಂದ. ಆ ಹಾಡನ್ನು ವಿಡಿಯೋ ಮಾಡಿ ರೀಲ್ಸ್ ಅಪ್‍ಲೋಡ್ ಮಾಡಿ. ಅದು #ವಿಕ್ರಾಂತ್‍ರೋಣಜೀ5 ನಲ್ಲಿ ಅಪ್‍ಲೋಡ್ ಮಾಡಿ. ವಿಡಿಯೋ ಚೆನ್ನಾಗಿದ್ದರೆ.. ಆಯ್ದ 10 ಮಂದಿಗೆ 25 ಸಾವಿರ ಬಹುಮಾನ ಸಿಗಲಿದೆ. ಜೊತೆಗೆ ಕಿಚ್ಚನ ಅಭಿನಂದನಾ ಪತ್ರವೂ ಕೂಡಾ.

  • ಪ್ರಚಾರದ ಹೊಸ ಲೆವೆಲ್ : ವಿಕ್ರಾಂತ್ ರೋಣನ ದಿಬ್ಬಣ : ದೆಹಲಿಯಲ್ಲಿ ಎಂಪಿಗಳಿಗಾಗಿ..

    ಪ್ರಚಾರದ ಹೊಸ ಲೆವೆಲ್ : ವಿಕ್ರಾಂತ್ ರೋಣನ ದಿಬ್ಬಣ : ದೆಹಲಿಯಲ್ಲಿ ಎಂಪಿಗಳಿಗಾಗಿ..

    ಒಂದು ಚಿತ್ರವನ್ನು ಜನರಿಗೆ ತಲುಪಿಸಬೇಕು ಎಂದರೆ ಪ್ರಚಾರವೂ ಅಷ್ಟೇ ವಿಭಿನ್ನವಾಗಿರಬೇಕು. ವಿಶಿಷ್ಟವಾಗಿರಬೇಕು. ನೋಡುವವರಿಗೆ ವ್ಹಾವ್ ಎನ್ನಿಸುವಂತಿರಬೇಕು. ಆ ಹಾದಿಯಲ್ಲಿ ವಿಕ್ರಾಂತ್ ರೋಣ ಆರಂಭದಿಂದಲೂ ಬೇರೆಯದೇ ಮಜಲು ಹತ್ತಿದ್ದು ಸುಳ್ಳಲ್ಲ.

    ಬುರ್ಜ್ ಖಲೀಫಾದಲ್ಲಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಿದ್ದು ಮೊದಲ ದಾಖಲೆ. ಮುಂಬೈನಲ್ಲಿ ರಕ್ಕಮ್ಮನ ಕಟೌಟ್ ಹಾಕಿದ್ದು ಇನ್ನೊಂದು ದಾಖಲೆ. ಆನಂತರ ಬೇರೆ ಬೇರೆ ರೀತಿಯಲ್ಲಿ ಪ್ರಚಾರದ ಹೊಸ ಹೊಸ ಶಿಖರಗಳನ್ನೇರುತ್ತಾ ಹೋದ ವಿಕ್ರಾಂತ್ ರೋಣ ಈಗ ರಿಲೀಸ್ ಹಂತಕ್ಕೆ ತಲುಪಿದೆ.

    ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಎಲ್ಲೆಡೆ ಪ್ರೀ-ರಿಲೀಸ್ ಈವೆಂಟ್ ಮಾಡಿತ್ತು ವಿಕ್ರಾಂತ್ ರೋಣ ಚಿತ್ರತಂಡ. ಮುಂಬೈನಲ್ಲಿ ವಿಕ್ರಾಂತ್ ರೋಣನ ದಿಬ್ಬಣಕ್ಕೆ ಸಾರಥಿಯಾಗಿದ್ದು ಖುದ್ದು ಸಲ್ಮಾನ್ ಖಾನ್. ಒಂದೊಂದು ಭಾಷೆಯಲ್ಲೂ ಅಲ್ಲಿನ ಸ್ಟಾರ್ ನಟರು, ಸಂಸ್ಥೆಗಳು ಕೈಜೋಡಿಸಿದ್ದು ಮತ್ತೊಂದು ವಿಶೇಷ.

    ಸಿನಿ ಡಬ್ ಆಪ್ ಮೂಲಕ ಪ್ರೇಕ್ಷಕರಿಗೆ ಹೊಸ ತಂತ್ರಜ್ಞಾನವನ್ನೂ ಪರಿಚಯಿಸುತ್ತಿರುವುದು ಚಿತ್ರದ ಹೆಗ್ಗಳಿಕೆ. ಈ ಆಪ್ ಮೂಲಕ ಪ್ರೇಕ್ಷಕರು ತಮಗೆ ಬೇಕಾದ ಭಾಷೆಯಲ್ಲಿ ಸಿನಿಮಾ ನೋಡಬಹುದು. ರಾಕೆಟ್ರಿ ಚಿತ್ರವೂ ಈ ಟೆಕ್ನಾಲಜಿ ಅಳವಡಿಸಿಕೊಂಡಿತ್ತಂತೆ. ಆದರೆ.. ರಾಕೆಟ್ರಿ ಚಿತ್ರಕ್ಕೆ ಪ್ರೇಕ್ಷಕರ ಮಟ್ಟದಲ್ಲಿ ಒಳ್ಳೆಯ ಮಾಸ್ ಸಕ್ಸಸ್ ಸಿಗಲಿಲ್ಲ. ಕ್ಲಾಸ್ ವರ್ಗದ ಜನರಷ್ಟೇ ನೋಡಿ ಮೆಚ್ಚಿದ ಸಿನಿಮಾ ರಾಕೆಟ್ರಿ. ಆದರೆ, ವಿಕ್ರಾಂತ್ ರೋಣ ಫುಲ್ ಮಾಸ್.

    ಇದೆಲ್ಲದರ ಜೊತೆಗೆ ಈಗ ಸಿನಿಮಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಿದೆ. ಯುಎಇಯಲ್ಲಿ ಪ್ರೀಮಿಯರ್ ಶೋ ಇದ್ದು, ಅಲ್ಲಿಗೆ ಸುದೀಪ್ ಅವರೇ ಖುದ್ದು ಹೋಗುತ್ತಿದ್ದಾರೆ.

    ಅದು ಮುಗಿದ ನಂತರ ದೆಹಲಿಗೆ ಬಂದರೆ, ಅಲ್ಲಿ ವಿಕ್ರಾಂತ್ ರೋಣನ ಸ್ವಾಗತಕ್ಕೆ ದೇಶದ ಸಂಸದರು ಇರಲಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗಾಗಿ ದೆಹಲಿಯಲ್ಲಿ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ.

    ಹೀಗೆ ಚಿತ್ರದ ವಿಶೇಷಗಳದ್ದೆಲ್ಲ ಒಂದು ತೂಕವಾದರೆ.. ಚಿತ್ರದ ಪ್ರಚಾರದ್ದೇ ಇನ್ನೊಂದು ತೂಕ. ಇನ್ನೊಂದ್ ದಿನ ವೇಯ್ಟ್ ಮಾಡಿ.. ವಿಕ್ರಾಂತ್ ರೋಣದ ಗುಮ್ಮನನ್ನು ನೋಡಿಯೇ ಬಿಡೋಣ..

  • ಬಂದಾ.. ಬಂದ.. ಫಕೀರ ಬಂದ..

    ಬಂದಾ.. ಬಂದ.. ಫಕೀರ ಬಂದ..

    ರಾ..ರಾ.. ರಕ್ಕಮ್ಮ ಸದ್ದು ದೇಶದಾದ್ಯಂತ ಜೋರಾಗಿದೆ. ರಕ್ಕಮ್ಮ ಎಕ್ಕ..ಸಕ್ಕ.. ಕುಣಿಸುತ್ತಿದ್ದರೆ.. ರಾಜಕುಮಾರಿಯ ಜೋಗುಳ ಬೇರೆಯದೇ ರೀತಿ ಗುನುಗುವಂತಿದೆ. ಈಗ ಮತ್ತೊಂದು ಹಾಡು.. ಫಕೀರನ ಹಾಡು.

    ಈ ಹಾಡು ಸೃಷ್ಟಿಯಾಗಿರುವುದು ಚಿತ್ರದ ಇನ್ನೊಬ್ಬ ಹೀರೋ ನಿರೂಪ್ ಭಂಡಾರಿ ಅವರ ಮೇಲೆ. ಹಳ್ಳಿಗೆ ಬರೋ ಹುಡುಗನ ಮೇಲಿರೋ ಹಾಡಿದು. ಸ್ವಲ್ಪ ತಮಾಷೆಯಾಗಿ, ರೆಟ್ರೋ ಶೈಲಿಯಲ್ಲಿದೆ.

    ನಿರೂಪ್ ಭಂಡಾರಿ ಚಿತ್ರದಲ್ಲಿ ಸಂಜೀವ್ ಗಂಭೀರ್ ಅನ್ನೋ ಪಾತ್ರದಲ್ಲಿ ನಟಿಸಿದ್ದು, ಸುದೀಪ್ ಎದುರು ನಿರೂಪ್ ಪಾತ್ರ ಹೇಗಿರುತ್ತೆ ಅನ್ನೋ ಕುತೂಹಲವಂತೂ ಇದೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ರಿಲೀಸ್ ಆಗುವುದು ಜುಲೈ ಅಂತ್ಯಕ್ಕೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರೋ ಚಿತ್ರ.. ದಿನ ದಿನಕ್ಕೂ ಸೆನ್ಸೇಷನ್ ಆಗುತ್ತಿದೆ.

  • ರಕ್ಕಮ್ಮಾ ಖುಷಿಯಾದ್ಲಮ್ಮ.. ಕನ್ನಡದಲ್ಲೇ ಮಾತಾಡಿದ್ಲಮ್ಮ..

    ರಕ್ಕಮ್ಮಾ ಖುಷಿಯಾದ್ಲಮ್ಮ.. ಕನ್ನಡದಲ್ಲೇ ಮಾತಾಡಿದ್ಲಮ್ಮ..

    ರಾ ರಾ ರಕ್ಕಮ್ಮ.. ಹಾಡು ಸೂಪರ್ ಡ್ಯೂಪರ್ ಹಿಟ್ ಆಗಿಬಿಟ್ಟಿದೆ. ಎಲ್ಲೆಲ್ಲೂ ರಕ್ಕಮ್ಮಳದ್ದೇ ಸದ್ದು. ರಕ್ಕಮ್ಮನಾಗಿ ಜಾಕ್ವೆಲಿನ್ ಫರ್ನಾಂಡಿಸ್ ಸ್ಟೆಪ್ ಹಾಕಿದ ನಂತರ ಅದನ್ನು ರೀಲ್ಸ್ ಮಾಡಿದ್ದು ಸುದೀಪ್. ಅದಾದ ಮೇಲೆ ಶುರುವಾಯ್ತು ರಕ್ಕಮ್ಮನ ಹವಾ. ಸ್ಟಾರುಗಳೂ ಅದೇ ಹಾಡಿಗೆ ಸ್ಟೆಪ್ ಹಾಕ್ತಾರೆ. ಫ್ಯಾನ್ಸ್‍ಗಳೂ ಅದೇ ಹಾಡಿಗೆ ಸ್ಟೆಪ್ ಹಾಕ್ತಾರೆ. ಫಾರಿನ್ನವರೂ ಅದೇ ಹಾಡಿಗೆ ಸ್ಟೆಪ್ ಹಾಕ್ತಿದ್ದಾರೆ.

    ನಮಸ್ಕಾರ ಎಲ್ಲರಿಗೂ.. ರಾ.. ರಾ.. ರಕ್ಕಮ್ಮ ಹಾಡು ದೊಡ್ಡ ಹಿಟ್ ಆಗಿದೆ. ಊರಲ್ಲಿ ಎಲ್ಲ ಇನ್ಮೇಲೆ ಒಂದೇ ಹೆಸರು.. ವಿಕ್ರಾಂತ್ ರೋಣ.. ಎಂದು ಕನ್ನಡದಲ್ಲೇ ಹೇಳಿ ಖುಷಿ ಹೆಚ್ಚಿಸಿದ್ದಾರೆ ರಕ್ಕಮ್ಮ.

    ಅಜನೀಶ್ ಲೋಕನಾಥ್ ಮ್ಯೂಸಿಕ್ಕಿನ ಹಾಡಿಗೆ ನಕಾಶ್ ಅಜೀಝ್, ಸುನಿಧಿ ಚೌಹಾಣ್ ಹಾಡಿದ್ದರೆ, ನಿರ್ದೇಶಕ ಅನೂಪ್ ಭಂಡಾರಿ ಸಾಹಿತ್ಯ ನೀಡಿದ್ದಾರೆ. ಕಿಚ್ಚ ಮತ್ತು ಜಾಕ್ವೆಲಿನ್ ಸ್ಟೆಪ್ಪಿನ ಹಾಡು ಅಭಿಮಾನಿಗಳಿಗೆ ಕಿಕ್ಕೇರಿಸಿದ್ದರೆ, ಅಭಿಮಾನಿಗಳ ಕ್ರೇಜು ಕಿಚ್ಚ ಮತ್ತು ಜಾಕ್‍ಗೆ ಕಿಕ್ಕೇರಿಸಿದೆ.

  • ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು..

    ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು..

    ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಕೆಲವೆಡೆ ಪ್ರೇಕ್ಷಕರ ಡಿಮ್ಯಾಂಡ್ ಮೇಲೆ 3ಡಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂಗಳು ಬರುತ್ತಿವೆ.

    ಇದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗಿರೋ ಅಭಿಪ್ರಾಯಗಳು. ಸಿನಿಮಾ ನೋಡಿದವರು ತಮಗನ್ನಿಸಿದ್ದನ್ನು ಪೋಸ್ಟ್ ಮಾಡಿದ್ದಾರೆ. ಹೀಗೆ ಚಿತ್ರದ ಬಗ್ಗೆ ಹೇಳಿಕೊಂಡಿರುವವರು ಪತ್ರಕರ್ತರಲ್ಲ. ವಿಮರ್ಶಕರೂ ಅಲ್ಲ. ಕೇವಲ ಸಿನಿಮಾ ಪ್ರೇಮಿಗಳು ಮತ್ತು ಪ್ರೇಕ್ಷಕರು ಮಾತ್ರ. ಇಲ್ಲಿ ಹಾಕಿರೋದು ಕೇವಲ ಒಪೀನಿಯನ್ಸ್‍ಗಳನ್ನಷ್ಟೇ..

    ಸುದೀಪ್ ಎಂಟ್ರಿ.. ಆ ಕಾಡು.. ಕಾಡಿನೊಳಗಿನ ಆ ಫೈಟು.. ಚಿಂದಿ ಚಿಂದಿ ಚಿಂದಿ ಬಿಜಿಎಂ..

    ಇಂಟರ್‍ವೆಲ್ ಟ್ವಿಸ್ಟ್ ಕಿ ಥಿಯೇಟರ್ ಬದಲ್ ಆಯ್‍ಪೋಯಿ.. ಇದೆಕ್ಕಡಿ ಮಾಸ್ ಟ್ವಿಸ್ಟ್ ರಾ ಮಾವ..

    ಈ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಇನ್ನೊಂದು ಲೆವೆಲ್ಲಿಗೆ ಹೋಗುತ್ತಿದೆ. ನಾನು ನೋಡಿದ ಬೆಸ್ಟ್ ಇಂಡಿಯನ್ 3ಡಿ ಸಿನಿಮಾ. ಫುಲ್ ಪೈಸಾ ವಸೂಲ್.

    ಇಂಟರ್‍ವಲ್ ಸೀನ್‍ಗೆ ಥಿಯೇಟರ್ ಫುಲ್ ಹಾವಳಿ.. ಬೆಸ್ಟ್ 3ಡಿ ಸಿನಿಮಾ.

    ಇಂಟರ್‍ವೆಲ್ ಊಹಿಸಬಹುದು. ಆದರೆ ಕಿಕ್ ಕೊಡುತ್ತೆ. ರೆಗ್ಯುಲರ್ ಥ್ರಿಲ್ಲರ್ ಸಿನಿಮಾ ಅಲ್ಲ. ಕ್ಲೈಮಾಕ್ಸ್ ಬೆಂಕಿ..

    ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ.. ಟೇಕ್ ಎ ಬೋ..

    ಒಟ್ಟಿನಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರೋ.. ವ್ಯಕ್ತವಾಗಿರೋ ಅಭಿಪ್ರಾಯಗಳೆಲ್ಲ ಪಾಸಿಟಿವ್. ಒಂದು ಚಿತ್ರ ಎಷ್ಟು ಕಲೆಕ್ಷನ್ ಮಾಡಿತು ಎನ್ನುವುದಕ್ಕಿಂತ ಎಷ್ಟು ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತು ಎನ್ನುವುದರಲ್ಲೇ ಸಿನಿಮಾ ಸಕ್ಸಸ್ ಇದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಮೇಲೆ ಮಿಕ್ಕ ದಾಖಲೆಗಳೆಲ್ಲ ಹಿಂದ್ ಹಿಂದೇನೇ ಓಡೋಡಿ ಬರ್ತವೆ..

  • ವಿಕ್ರಾಂತ್ ರೋಣ ಲುಲು ಹೈಲೈಟ್ಸ್

    ವಿಕ್ರಾಂತ್ ರೋಣ ಲುಲು ಹೈಲೈಟ್ಸ್

    ವಿಕ್ರಾಂತ್ ರೋಣ ಚಿತ್ರ ದೇಶದೆಲ್ಲೆಡೆ ಈವೆಂಟ್ ಮಾಡಿ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸೋ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಲುಲು ಮಾಲ್‍ನಲ್ಲಿ ವಿಕ್ರಾಂತ್ ರೋಣನ ಈವೆಂಟ್ ನಡೆದಿದ್ದು ವಿಶೇಷ. ಲುಲು ಮಾಲ್‍ನಲ್ಲಿ ನಡೆದ ಮೊದಲ ಈವೆಂಟ್ ಇದು ಎನ್ನುವುದು ಮತ್ತೊಂದು ವಿಶೇಷ.

    ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಡೈರೆಕ್ಟರ್ ಆಗಬೇಕು ಎಂದು ಬಂದವರನ್ನು ಹೀರೋ ಆಗಿ ಎಂದು ಹೇಳಿದ್ದು ನಾನೇ ಎಂದು ಖುಷಿ ಪಟ್ಟು ಹೇಳಿಕೊಂಡರು ಉಪ್ಪಿ. ಯಶ್ ಇಂಡಸ್ಟ್ರಿಯನ್ನು ಪ್ಯಾನ್ ಇಂಡಿಯಾ ಲೆವೆಲ್ಲಿಗೆ ತೆಗೆದುಕೊಂಡು ಹೋದರು. ಈ ಚಿತ್ರ ವಿಶ್ವಮಟ್ಟಕ್ಕೆ ಒಯ್ಯಲಿ ಎಂದು ಹಾರೈಸಿದರು.

    ಸಚಿವ ಮುನಿರತ್ನ, ಶಾಸಕ ಉದಯ್ ಗರುಡಾಚಾರ್ ಕೂಡಾ ವೇದಿಕೆಯಲ್ಲಿದ್ದು. ಕಾರ್ಯಕ್ರಮ ನಡೆಸಿಕೊಟ್ಟಿದ್ದು ಅನುಶ್ರೀ.

    ವೇದಿಕೆಯಲ್ಲಿ ಅಭಿಮಾನಿಯೊಬ್ಬರು ಸುದೀಪ್ ಅವರಿಗಾಗಿ ಸ್ಪೆಷಲ್ ಜಾಕೆಟ್ ವೊಂದನ್ನು ತಂದಿದ್ದರು. ಪ್ರಕಾಶ್ ಥಿಯೇಟರ್ ಮಾಲೀಕರು ತಂದಿದ್ದ ಹ್ಯಾಂಡ್ ಮೇಡ್ ಜಾಕೆಟ್‍ನ್ನು ವೇದಿಕೆ ಮೇಲೆಯೇ ಧರಿಸಿ ಖುಷಿಪಟ್ಟರು ಸುದೀಪ್.

    ಪುಟ್ಟ ಮಕ್ಕಳು ಕಿಚ್ಚನ ಜೊತೆ ರಾರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದರು.

    ಗರಗರ ಗಗ್ಗರ ಡೈಲಾಗ್ ಹೊಡೆದು ವೇದಿಕೆಯಲ್ಲಿ ಮಿಂಚು ಹರಿಸಿದ ಸುದೀಪ್ ನಿರ್ದೇಶಕ ಅನೂಪ್ ಭಂಡಾರಿಯವರನ್ನು ಹೊಗಳಿದರು. ನಿರ್ದೇಶಕರ ಕಲ್ಪನೆಗೆ ತಕ್ಕಂತೆಯೇ ಸಿನಿಮಾ ಬಂದಿದೆ ಎಂದರು.

    ಮಗಳಿಗಾಗಿ ವೇದಿಕೆಯಲ್ಲಿಯೇ ಚಿತ್ರದ ಹಾಡು ಹಾಡಿದ ಸುದೀಪ್ ಪ್ರತಿಯೊಬ್ಬ ಮಗಳೂ ತಮ್ಮ ತಮ್ಮ ತಂದೆಯಂದಿರನ್ನು ಉತ್ತಮ ಮನುಷ್ಯರನ್ನಾಗಿ ರೂಪಿಸುತ್ತಾರೆ ಎಂದಿದ್ದು ವೇದಿಕೆಯಲ್ಲಿದ್ದವರನ್ನು ಭಾವುಕರನ್ನಾಗಿಸಿತು.

  • ವಿಕ್ರಾಂತ್ ರೋಣ ಹೀರೋಗಳು ಇವರೇ..

    ವಿಕ್ರಾಂತ್ ರೋಣ ಹೀರೋಗಳು ಇವರೇ..

    ವಿಕ್ರಾಂತ್ ರೋಣ ರಿಲೀಸ್ ಆಗಿದ್ದಾಯ್ತು. ಪ್ರೇಕ್ಷಕರು ಕಣ್ತುಂಬಿಕೊಂಡಿದ್ದೂ ಆಯ್ತು. ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಮತ್ತು ಕಿಚ್ಚನ ಹೊಡೆದಾಟ ಸಖತ್ತಾಗಿದೆ. ಜಾಕ್ವೆಲಿನ್ ಗ್ಲಾಮರ್ರು.. ಟೆಂಪರೇಚರ್ ಹೆಚ್ಚಿಸುವಲ್ಲಿ ಗೆದ್ದಿದೆ. ಹೆಣ್ಣು ಮಕ್ಕಳಿದ್ದವರಿಗೆ ಸಿನಿಮಾ ಇಷ್ಟವಾಗುತ್ತೆ. ಸಿನಿಮಾ ನೋಡುವವರಿಗೆ ಫುಲ್ ಮೀಲ್ಸ್. ಪೈಸಾ ವಸೂಲ್. ಇದೆಲ್ಲದರ ಮಧ್ಯೆ ಚಿತ್ರದ ಹೀರೋಗಳು ಯಾರ್ ಯಾರು ಎಂದು ನೋಡಿದರೆ.. ಪಟ್ಟಿ ಸ್ವಲ್ಪ ದೊಡ್ಡದೇ ಇದೆ.

    ಚಿತ್ರದ ಗ್ರಾಫಿಕ್ಸ್ ಅದ್ಭುತವಾಗಿದೆ. ನಿರ್ಮಲ್ ಕುಮಾರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದವರು.

    ಈ ಗ್ರಾಫಿಕ್ಸ್‍ಗೆ ಸರಿಯಾದ ಸೆಟ್ ಸಪೋರ್ಟ್ ಸಿಕ್ಕದೇ ಹೋದರೆ ತಾಳಮೇಳವೇ ತಪ್ಪಿಹೋಗುತ್ತಿತ್ತು. ಚಿತ್ರದ ಬಹುತೇಕ ಚಿತ್ರೀಕರಣವಾಗಿರೋದು ಸೆಟ್‍ನಲ್ಲಿ. ಆ ಸೆಟ್‍ನ ಸೃಷ್ಟಿಕರ್ತ ಶಿವಕುಮಾರ್.

    ಸೆಟ್‍ನಲ್ಲಿಯೇ ಬಹುತೇಕ ಸಿನಿಮಾ ಚಿತ್ರೀಕರಣವಾದರೂ ಒಂದೊಂದು ದೃಶ್ಯವೂ ಅದ್ಭುತ ಎನ್ನುವಂತೆ ಸೆರೆ ಹಿಡಿದು ದೃಶ್ಯಕಾವ್ಯ ಸೃಷ್ಟಿಸಿರೋದು ವಿಲಿಯಂ ಡೇವಿಡ್.

    ಆಶಿಕ್ ಕುಸುಗಳ್ಳಿ ಇಡೀ ಚಿತ್ರದ ಎಡಿಟಿಂಗ್ ಮತ್ತು ಕಲರಿಂಗ್ ನೋಡಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಅಂಶವನ್ನೂ ಗುರುತಿಸಿದ್ದಾರೆ.

    ಇವೆಲ್ಲವೂ ಸರಿಯಾಗಿದ್ದಾಗ ಬಿಜಿಎಂ ಕೆಟ್ಟರೆ ಸಕಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ. ಆದರೆ.. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದೆ. ಚಿತ್ರದೊಂದಿಗೇ ಕ್ಯಾರಿ ಆಗುವ ಮ್ಯೂಸಿಕ್ ಪ್ರೇಕ್ಷಕರನ್ನು ನೆತ್ತರ ಪರ್ಬದ ಲೋಕಕ್ಕೆ ನೇರವಾಗಿ ಕೊಂಡೊಯ್ದು ಕೂರಿಸಿ ಬಿಡುತ್ತದೆ.

    ಇವೆಲ್ಲದಕ್ಕೂ ಒಂದು ಕೊಂಡಿಯಾಗಿ ಕುಳಿತು.. ಕನಸು ಕಂಡು.. ಆ ಕನಸು ನನಸಾಗುವ ತಂಡವನ್ನು ರೂಪಿಸಿರುವುದು ಅನೂಪ್ ಭಂಡಾರಿ.

    ಅನೂಪ್ ಭಂಡಾರಿಯ ಎಲ್ಲ ಕನಸುಗಳಿಗೆ ತನುಮನ ಹಾಗೂ ವಿಶೇಷವಾಗಿ ಧನ ನೀಡಿರುವ ಜಾಕ್ ಮಂಜು ಚಿತ್ರದ ರಿಯಲ್ ಹೀರೋ.

    ಈ ಎಲ್ಲ ಹೀರೋಗಳೂ ಒಟ್ಟಾಗಿ ಕೆಲಸ ಮಾಡಿದ ಪ್ರತಿಫಲ ವಿಕ್ರಾಂತ್ ರೋಣ. ಒಂದು ಸಿನಿಮಾವನ್ನು ಯಾರೋ ಒಬ್ಬರು ಗೆಲ್ಲಿಸೋಕೆ ಆಗಲ್ಲ.. ಅದೊಂದು ಟೀಂ ವರ್ಕ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ವಿಕ್ರಾಂತ್ ರೋಣ ಟೀಂ.

  • ವಿಕ್ರಾಂತ್ ರೋಣಕ್ಕೆ ಜಾತಿ ವಿವಾದ ಅಂಟಿಸಿದ ಆ ದಿನಗಳು ಚೇತನ್..!

    ವಿಕ್ರಾಂತ್ ರೋಣಕ್ಕೆ ಜಾತಿ ವಿವಾದ ಅಂಟಿಸಿದ ಆ ದಿನಗಳು ಚೇತನ್..!

    ವಿಕ್ರಾಂತ್ ರೋಣ ಚಿತ್ರ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿದೆ. 150 ಕೋಟಿ ಕ್ಲಬ್ ಸೇರೋಕೆ ದಾಪುಗಾಲಿಡುತ್ತಿದೆ. ಕಿಚ್ಚ ಸುದೀಪ್ ಕೆರಿಯರ್‍ನಲ್ಲಿ ಇದು ಬೇರೆಯದೇ ಸಿನಿಮಾ. ನಿರ್ದೇಶಕ ಅನೂಪ್ ಭಂಡಾರಿ, ನಿರ್ಮಾಪಕ ಜಾಕ್ ಮಂಜು.. ಎಲ್ಲರೂ ಗೆದ್ದಿದ್ದಾರೆ. ಆದರೆ.. ವಿವಾದಗಳೇ ಮುಗಿಯುವಂತೆ ಕಾಣುತ್ತಿಲ್ಲ.

    ಆರಂಭದಲ್ಲಿ ಕೆಲವರು ಚಿತ್ರವೇ ಚೆನ್ನಾಗಿಲ್ಲ ಎಂದರು. ಪ್ರೇಕ್ಷಕರು ಮತ್ತೆ ಮತ್ತೆ ಬಂದು ನೋಡಿ ಅದನ್ನು ಸುಳ್ಳು ಮಾಡಿದರು.

    ರಂಗಿತರಂಗ ಪಾರ್ಟ್ 2 ಎಂದರು. ಹಾಗೆ ಹೇಳಿದವರಿಗೆ ಪ್ರೇಕ್ಷಕರೇ ಏನಿವಾಗ.. ಸಿನಿಮಾ ಚೆನ್ನಾಗಿದ್ಯಲ್ಲ ಎಂದರು.

    ಸುದೀಪ್ ಅವರಿಗೆ ಸ್ಟಾರ್`ಗಿರಿಗೆ ತಕ್ಕಂತೆ ಬಿಲ್ಡಪ್ ಇಲ್ಲ ಎಂದಾಗ ಸ್ವತಃ ಸುದೀಪ್ ಇನ್ನೂ ಎಷ್ಟು ದಿನ ಅದನ್ನೇ ಮಾಡೋದು. ಮುಂದಿನ ಸಿನಿಮಾ ಹಾಗೆಯೇ ಮಾಡೋಣ ಬಿಡಿ ಎಂದು ತೇಲಿಸಿಬಿಟ್ಟರು. ಇದರ ಮಧ್ಯೆ ಸ್ಟಾರ್ ಡಮ್ ಪಕ್ಕಕ್ಕಿಟ್ಟು ನಟಿಸಿದ ಸುದೀಪ್ ಹೊಸ ವರ್ಗದ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡರು.

    ಕನ್ನಡ ಹಿಂದಿ ವಿವಾದ, ಬುರ್ಜ್ ಖಲೀಫಾ ಮೇಲೆ ಬೇಕಿತ್ತಾ ಎಂಬಂತಹ ಚಿತ್ರ ವಿಚಿತ್ರ ವಿವಾದಗಳನ್ನು ಸೃಷ್ಟಿಸಿದವರಿಗೀಗ ಹೊಸ ವಿವಾದ ಕಣ್ಣಿಗೆ ಕಂಡಿದೆ.

    ಚಿತ್ರದಲ್ಲಿ ದಲಿತರನ್ನು ಕ್ರೂರಿಗಳಂತೆ ಪಿಶಾಚಿಗಳಂತೆ ತೋರಿಸಲಾಗಿದೆಯಂತೆ. ಮುಸ್ಲಿಮರನ್ನು ಅದದೇ ರೀತಿಯಲ್ಲಿ ತೋರಿಸಲಾಗಿದೆಯಂತೆ. ಸಿನಿಮಾ ಟೆಕ್ನಿಕಲಿ ಚೆನ್ನಾಗಿದೆ. ಪರ್ಫಾಮೆನ್ಸ್ ಕೂಡಾ ಚೆನ್ನಾಗಿದೆ. ಆದರೆ, ಇಂತಹ ಸೂಕ್ಷ್ಮಗಳನ್ನು ಜಾತಿ/ಧರ್ಮಗಳನ್ನು ಸೂಕ್ಷ್ಮವಾಗಿ ಚಿತ್ರಿಸಬೇಕಿತ್ತು ಎಂದಿದ್ದಾರೆ ನಟ ಚೇತನ್.

    ಆ ದಿನಗಳು ಖ್ಯಾತಿಯ ಚೇತನ್ ಅವರ ಈ ಟೀಕೆಗೆ ಪರ ವಿರೋಧ ಟೀಕೆಗಳಿವೆ. ಕೆಲವರು ಚೇತನ್ ಅವರನ್ನು ಬೆಂಬಲಿಸಿದ್ದರೆ, ಇನ್ನೂ ಕೆಲವರು ಸ್ವತಃ ಚೇತನ್ ಮಾಡಿರೋದು ರೌಡಿಗಳ ಕಥೆಗಳನ್ನು. ಇಂತಹ ಚೇತನ್ ಸೂಕ್ಷ್ಮತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇಷ್ಟಕ್ಕೂ ವಿಕ್ರಾಂತ್ ರೋಣ ಕಾಲ್ಪನಿಕ ಕಥೆ. ಇಲ್ಲದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಬುದ್ದಿ ಹೇಳಿದ್ದಾರೆ.

  • ವಿಕ್ರಾಂತ್ ರೋಣನ ಆ ಸೀಕ್ರೆಟ್ ಹೇಳಿಯೇ ಬಿಟ್ರು ಹೀರೋಯಿನ್..!

    ವಿಕ್ರಾಂತ್ ರೋಣನ ಆ ಸೀಕ್ರೆಟ್ ಹೇಳಿಯೇ ಬಿಟ್ರು ಹೀರೋಯಿನ್..!

    ವಿಕ್ರಾಂತ್ ರೋಣ ಚಿತ್ರದ ಬಗ್ಗೆ ನಿರೀಕ್ಷೆಗಳೇನೂ ಕಡಿಮೆಯಿಲ್ಲ ಬಿಡಿ. ಇಡೀ ವಿಶ್ವದಲ್ಲಿ ಏಕಕಾಲಕ್ಕೆ ಸಾವಿರಾರು ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿರೋ ವಿಕ್ರಾಂತ್ ರೋಣ ಸಿನಿಮಾದ ಕಥೆ ಏನು? ಅನೂಪ್ ಭಂಡಾರಿ ಕುತೂಹಲ ಹೆಚ್ಚಿಸುತ್ತಿದ್ದಾರೆಯೇ ಹೊರತು ಕಥೆ ಹೇಳ್ತಿಲ್ಲ. ಪತ್ರಕರ್ತರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡೋ ಸುದೀಪ್, ಕಥೆಯ ಬಗ್ಗೆ ಕೇಳಿದಾಗ ನಕ್ಕು ನಗಿಸಿ ಸೈಲೆಂಟ್ ಮಾಡಿಸುತ್ತಿದ್ದಾರೆ. ಸುದೀಪ್ ಚಿತ್ರದ ಬಗ್ಗೆ ಹೇಳಿರೋ ಒಂದೇ ಒಂದು ವಿಷಯ ಇಷ್ಟೆ, ಅವರು ಚಿತ್ರದಲ್ಲಿ ದ್ವಿಪಾತ್ರ ಮಾಡಿಲ್ಲ. ಆದರೆ.. ಹೀರೋಯಿನ್ ನೀತಾ ಅಶೋಕ್ ಮಾತ್ರ ಚಿತ್ರದ ಒಂದು ಗುಟ್ಟನ್ನು ಹೇಳಿಬಿಟ್ಟಿದ್ದಾರೆ.

    ನೀತಾ ಅಶೋಕ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಅಕಾ ಪನ್ನಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕಥೆಯನ್ನು ಹೇಳೋ ಸೂತ್ರಧಾರಿಣಿಯೇ ಅಪರ್ಣಾ. ಕನ್ನಡತಿ. ಆದರೆ ಮುಂಬೈನಲ್ಲಿ ಹುಟ್ಟಿ ಬೆಳೆದಿರೋ ಹುಡುಗಿ. ಕನ್ನಡ ಮತ್ತು ಹಿಂದಿಯಲ್ಲಿ ಪಟಪಟನೆ ಮಾತನಾಡುವ.. ಹೊಸ ಹೊಸ ಸ್ಥಳಗಳನ್ನು ಹುಡುಕುವ ಅಡ್ವೆಂಚರಸ್ ಹುಡುಗಿಯ ಪಾತ್ರ ಎಂದೆಲ್ಲ ಹೇಳಿರೋ ನೀತಾ ಅಶೋಕ್ ಚಿತ್ರವನ್ನು ಹೋಲ್ ಸೇಲ್ ಪ್ಯಾಕೇಜ್ ಎಂದಿದ್ದಾರೆ. ಮಿಸ್ಟರಿ, ಥ್ರಿಲ್, ಎಮೋಷನ್ಸ್, ಆ್ಯಕ್ಷನ್.. ಎಲ್ಲವೂ ಇರೋ ಕಂಪ್ಲೀಟ್ ಪ್ಯಾಕೇಜ್ ಎಂದಿದ್ದಾರೆ.

    ನಿರ್ದೇಶಕ, ನಾಯಕರು ತುಟಿಗೇ ಟೇಪ್ ಹಾಕಿಕೊಂಡಿರೋವಾಗ ರಿಲೀಸ್ ಹೊತ್ತಲ್ಲಿ ನಾಯಕಿ ಇಷ್ಟು ಹೇಳಿದರು ಎಂದು ಫ್ಯಾನ್ಸ್ ಖುಷಿಯಾಗಬೇಕಷ್ಟೆ. ಯಾಕಂದ್ರೆ ನೀತಾ ಅಶೋಕ್ ಕೂಡಾ ಪೂರ್ತಿ ಹೇಳಿಲ್ಲ. ಇದ್ದ ಥ್ರಿಲ್ಲಿಂಗ್ ಸಸ್ಪೆನ್ಸ್‍ನ್ನ ಡಬಲ್ ಮಾಡಿ ಹೋಗಿದ್ದಾರೆ. ನೀತಾ ಮಾತು ಕೇಳಿ ಆಕ್ಚುಯಲಿ ಥ್ರಿಲ್ ಆಗಿ ನಗು ಚೆಲ್ಲಿರೋದು ನಿರ್ದೇಶಕ ಅನೂಪ್ ಭಂಡಾರಿ ಮತ್ತು ನಿರ್ಮಾಪಕ ಜಾಕ್ ಮಂಜು. ಚಿತ್ರದ ಕ್ರೇಜ್ ಹೆಚ್ಚಿದಷ್ಟೂ ಥ್ರಿಲ್ ಆಗಬೇಕಾದವರು ಅವರೇ ತಾನೆ..

  • ವಿಕ್ರಾಂತ್ ರೋಣನ ಎದುರೂ ಸೋತ ಆ ಚಿತ್ರಗಳು..!

    ವಿಕ್ರಾಂತ್ ರೋಣನ ಎದುರೂ ಸೋತ ಆ ಚಿತ್ರಗಳು..!

    ದಕ್ಷಿಣದ ಚಿತ್ರಗಳು ಎದುರು ಮತ್ತೊಮ್ಮೆ ಬಾಲಿವುಡ್ ಸೈಲೆಂಟ್ ಆಗಿದೆ. ವಿಕ್ರಾಂತ್ ರೋಣ ಚಿತ್ರದ ಎದುರು ಜಾನ್ ಅಬ್ರಹಾಂ ನಟಿಸಿದ್ದ ಏಕ್ ವಿಲನ್ ರಿಲೀಸ್ ಆಗಿತ್ತು. ಹಿಂದಿ ಮಾರ್ಕೆಟ್‍ನಲ್ಲಿ ಅಷ್ಟೋ ಇಷ್ಟೋ ಉಸಿರಾಡುತ್ತಿದೆಯಾದರೂ ಬೇರೆ ಮಾರ್ಕೆಟ್‍ಗಳಲ್ಲಿ ಢುಂ ಢುಂ ಢುಮ್ಕಿ. ಅತ್ತ ತೆಲುಗಿನಲ್ಲಿ ರವಿತೇಜ ಅಭಿನಯದ ರಾಮರಾವ್ ಆನ್ ಡ್ಯೂಟಿ ಚಿತ್ರ ಕೂಡಾ ನಿರೀಕ್ಷೆಯನ್ನು ರೀಚ್ ಮಾಡೋಕೆ ಆಗಿಲ್ಲ. ಇದರ ನಡುವೆ ಭರ್ಜರಿ ಪ್ರದರ್ಶನ ಕಾಣ್ತಿರೋದು ಒನ್ & ಓನ್ಲಿ ವಿಕ್ರಾಂತ್ ರೋಣ.

    ಈ ಹಿಂದೆ ಕೆಜಿಎಫ್ ಎದುರೂ ಜಾನ್ ಅಬ್ರಹಾಂ ಸಿನಿಮಾ ಸೋತಿತ್ತು. ಪುಷ್ಪ ಚಿತ್ರದ ಎದುರು ಕೆಲವು ಹಿಂದಿ ಚಿತ್ರಗಳು ಮಕಾಡೆ ಮಲಗಿದ್ದವು. ಆರ್.ಆರ್.ಆರ್. ಎದುರು ಬರುವ ಧೈರ್ಯವನ್ನು ಬಾಲಿವುಡ್`ನ ದೊಡ್ಡ ಚಿತ್ರಗಳು ಮಾಡಿರಲಿಲ್ಲ. ತಮಿಳಿನ ವಿಕ್ರಂ ಎದುರೂ ಹಿಂದಿ ಚಿತ್ರಗಳು ಮುಗ್ಗರಿಸಿ ಬಿದ್ದಿದ್ದವು.

    ವಿಶೇಷವೆಂದರೆ ಚಿತ್ರದ ಕಲೆಕ್ಷನ್ ಬಗ್ಗೆ ಅಧಿಕೃತ ಲೆಕ್ಕ ಮಾತ್ರ  ಸಿಗುತ್ತಿಲ್ಲ. ಒಬ್ಬೊಬ್ಬರ ಲೆಕ್ಕ ಒಂದೊಂದು ರೀತಿ. ಅತ್ಯಂತ ಕಡಿಮೆ ಲೆಕ್ಕವೆಂದರೆ 30 ಕೋಟಿ. ಹೆಚ್ಚು ಲೆಕ್ಕವೆಂದರೆ 35 ಕೋಟಿ. ಇದು ವಿಶ್ವದೆಲ್ಲೆಡೆಯ ಲೆಕ್ಕ.

    ತಮಿಳುನಾಡಿನಲ್ಲಿ ಮೊದಲ ದಿನ ಒಂದು ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದ್ದು, 2ನೇ ದಿನ ಇನ್ನೂ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

    ತೆಲುಗಿನ ಎರಡೂ ರಾಜ್ಯಗಳಲ್ಲಿ ಕಲೆಕ್ಷನ್ 2 ಕೋಟಿ ದಾಟಿದ್ದು, 2ನೇ ದಿನ ಆ ಲೆಕ್ಕವನ್ನೂ ಮೀರಿಸುವ ಸೂಚನೆ ಸಿಕ್ಕಿದೆ.

    ಹಿಂದಿ ಮಾರುಕಟ್ಟೆಯಲ್ಲಿ ಎರಡೂವರೆ ಕೋಟಿ ಕಲೆಕ್ಷನ್ ಆಗಿದ್ದು, ಚಿತ್ರದ ಬಗ್ಗೆ ಕೇಳಿ ಬರುತ್ತಿರುವ ಪಾಸಿಟಿವ್ ರೀವ್ಯೂ ಚಿತ್ರದ ಕಲೆಕ್ಷನ್ ಹೆಚ್ಚಿಸುವ ಸೂಚನೆ ಕೊಟ್ಟಿದೆ.

    ಟೋಟ್ಟಲ್ಲಿ.. ವಿಕ್ರಾಂತ್ ರೋಣ ಸಕ್ಸಸ್ ಸ್ಟೋರಿ ಇಷ್ಟೆ.. ರಾರಾ ರಕ್ಕಮ್ಮ.. ಸೂಪರ್ ಹಿಟ್ ಫಿಕ್ಸಮ್ಮ..

  • ವಿಕ್ರಾಂತ್ ರೋಣನಿಗೆ ಹೊಸ ಗುಮ್ಮ ಹಾಡು.. : ಇದು ಫ್ಯಾನ್ಸ್ ಸೃಷ್ಟಿ..!

    ವಿಕ್ರಾಂತ್ ರೋಣನಿಗೆ ಹೊಸ ಗುಮ್ಮ ಹಾಡು.. : ಇದು ಫ್ಯಾನ್ಸ್ ಸೃಷ್ಟಿ..!

    ವಿಕ್ರಾಂತ್ ರೋಣ ಚಿತ್ರದ ಡೆವಿಲ್ ಸಾಂಗ್ ರಿಲೀಸ್ ಆಗಿದ್ದು, ಟ್ರೆಂಡ್ ಆಗಿದ್ದು ಎಲ್ಲ ಓಲ್ಡ್. ಈಗ ಅದನ್ನೂ ಮೀರಿಸುವ ಇನ್ನೊಂದು ಹಾಡು ಬಂದಿದೆ. ಈ ಹಾಡಿನ ಸೃಷ್ಟಿಕರ್ತರು ಜಾಕ್ ಮಂಜು ಅಲ್ಲ. ಅನೂಪ್ ಭಂಡಾರಿ ಅಲ್ಲ. ಅಜನೀಶ್ ಲೋಕನಾಥ್ ಅಲ್ಲ. ಕಿಚ್ಚ ಸುದೀಪ್ ಕೂಡಾ ಅಲ್ಲ. ಫ್ಯಾನ್ಸ್. ಕಿಚ್ಚನ ಫ್ಯಾನ್ಸ್. ಹೀಗಾಗಿಯೇ.. ಇಡೀ ಚಿತ್ರತಂಡ ಡಬಲ್ ಖುಷಿಯಾಗಿದೆ.

    ಎಂ.ಎಸ್.ವಿಕ್ರಂ ಅನ್ನೋ ಕಿಚ್ಚ ಸುದೀಪ್ ಅಭಿಮಾನಿ ಸ್ವತಃ ಒಂದು ಗುಮ್ಮ ಹಾಡನ್ನು ಸೃಷ್ಟಿಸಿದ್ದಾರೆ. ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಲಿಖಿತ್ ಗೌಡ ಈ ಗುಮ್ಮ ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಒಟ್ನಲ್ಲಿ ವಿಕ್ರಾಂತ ಹಬ್ಬ.