` wheel chair romeo, - chitraloka.com | Kannada Movie News, Reviews | Image

wheel chair romeo,

  • ನಮ್ಮೂರಲ್ಲಿ ಅರಳೋ ಹೂವೆಲ್ಲ ಗುಡಿಯ ಸೇರಲ್ಲ..

    ನಮ್ಮೂರಲ್ಲಿ ಅರಳೋ ಹೂವೆಲ್ಲ ಗುಡಿಯ ಸೇರಲ್ಲ..

    ನಮ್ಮೂರಲ್ಲಿ ಅರಳೋ ಹೂವೆಲ್ಲ ಗುಡಿಯ ಸೇರಲ್ಲ..

    ನಮ್ಮೂರಲ್ಲಿ ಹಗಲು ಇರುಳನ್ನೋ ಭೇದಾ ಏನಿಲ್ಲ..

    ಸಂಗೀತಾ ಕಟ್ಟಿಯವರ ಈ ಹಾಡು ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಹಾಡಿಗೆ ಸಾಹಿತ್ಯ ಬರೆದಿರೋದು ಡಾ.ವಿ.ನಾಗೇಂದ್ರ ಪ್ರಸಾದ್. ಸಂಗೀತ ಬಿ.ಜೆ.ಭರತ್ ಅವರದ್ದು. ಇದು ವೀಲ್‍ಚೇರ್ ರೋಮಿಯೋ ಚಿತ್ರದ ಹಾಡು.

    ಸಿನಿಮಾ ನೋಡಿದ ಪ್ರೇಕ್ಷಕರಿಗೆ ಕಥೆ ಇಷ್ಟವಾಗಿದೆ. ಕಥೆ ಮತ್ತು ಟ್ರೀಟ್‍ಮೆಂಟ್ ವಿಭಿನ್ನವಾಗಿದ್ದರೆ ಏನಾಗಬೇಕಿತ್ತೋ.. ಅದೇ ಆಗಿದೆ. ಚಿತ್ರವನ್ನು ಕ್ಲಾಸ್ ಪ್ರೇಕ್ಷಕರು ಇಷ್ಪಪಟ್ಟು ನೋಡುತ್ತಿದ್ದಾರೆ.

    ಅಂಧ ವೇಶ್ಯೆಯೊಬ್ಬಳನ್ನು ಪ್ರೀತಿಸುವ ವಿಕಲಾಂಗ ನಾಯಕನ ವಿಭಿನ್ನ ಲವ್ ಸ್ಟೋರಿ ಇದು. ರಾಮ್ ಚೇತನ್ ಮತ್ತು ಮಯೂರಿ ನಟಿಸಿರೋ ಚಿತ್ರಕ್ಕೆ ನಟರಾಜ್ ನಿರ್ದೇಶಕ. ಅವರಿಗಿದು ಮೊದಲ ಸಿನಿಮಾ. ಫಸ್ಟ್ ಸಿನಿಮಾದಲ್ಲೇ ಬೊಂಬಾಟ್ ಆಟವಾಡಿದ್ದಾರೆ. ತಿಮ್ಮಪ್ಪ ವೆಂಕಟಾಚಲಯ್ಯ ನಿರ್ಮಾಣದ ಸಿನಿಮಾ ಥಿಯೇಟರುಗಳಲ್ಲಿ ಪ್ರೇಕ್ಷಕರನ್ನು ಕರೆದು ತರುವಲ್ಲಿ ಯಶಸ್ವಿಯಾಗಿದೆ.

  • ರೋಮಿಯೋಗೆ ಹೊಸ ಜಗತ್ತು ತೋರಿಸೋ ಜಾಕ್ ಮಾಮಾ ರಘು

    ರೋಮಿಯೋಗೆ ಹೊಸ ಜಗತ್ತು ತೋರಿಸೋ ಜಾಕ್ ಮಾಮಾ ರಘು

    ರಂಗಾಯಣ ರಘು ರಂಗಭೂಮಿಯಿಂದ ಬಂದವರು. ವೆರೈಟಿ ಮ್ಯಾನರಿಸಂಗಳಿಗೆ ಕೊರತೆಯೇ ಇಲ್ಲ. ರಂಗಾಯಣ ರಘು ಅವರ ಪಾತ್ರಕ್ಕೊಂದು ಫೋರ್ಸ್ ಇದ್ದರೆ ಸಾಕು, ಉಳಿದದ್ದನ್ನು ಅವರೇ ಮಾಡಿಕೊಳ್ತಾರೆ. ಅಷ್ಟರಮಟ್ಟಿಗೆ ಪಾತ್ರವನ್ನು ಮೆರೆಸುವ ಶಕ್ತಿಯಿರೋ ರಂಗಾಯಣ ರಘು ಈ ಬಾರಿ ಜಾಕ್ ಮಾಮಾ ಆಗಿದ್ದಾರೆ.

    ಮಾಮಾ ಎಂದರೆ ಯಾರು.. ಅವರೇನು ಮಾಡ್ತಾರೆ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ. ತಲೆಹಿಡುಕನ ಪಾತ್ರ. ಹೃದಯದ ಮಾತನ್ನೂ ಕೇಳುವವನ ಪಾತ್ರವದು. ವೀಲ್ ಚೇರ್ ರೋಮಿಯೋದಲ್ಲಿ ರಂಗಾಯಣ ರಘು ಆ ಪಾತ್ರ ಮಾಡಿದ್ದಾರೆ.

    ಈ ಪಾತ್ರವನ್ನು ಡಿಸೈನ್ ಮಾಡುವಾಗಲೇ ನನ್ನ ಕಣ್ಣ ಮುಂದೆ ಇದ್ದವರು ರಂಗಾಯಣ ರಘು. ನನಗೆ ಈ ಪಾತ್ರ ಹೀಗೆ ಬರಬೇಕು ಅನ್ನೋ ಕಲ್ಪನೆಯಿತ್ತು. ಅದನ್ನು ಮೀರಿಸಿ ರಂಗಾಯಣ ರಘು ಪಾತ್ರವನ್ನು ಮೈಮೇಲೆ ಆವಾಹಿಸಿಕೊಂಡು ನಟಿಸಿದ್ದಾರೆ ಎನ್ನುವುದು ನಿರ್ದೇಶಕ ನಟರಾಜ್ ಕೊಡುವ ಸರ್ಟಿಫಿಕೇಟ್.

    ರಾಮ್ ಚೇತನ್ ಅಂಗವಿಕಲನಾಗಿ, ಮಯೂರಿ ಅಂಧ ವೇಶ್ಯೆಯಾಗಿ ನಟಿಸಿರುವ ವಿಭಿನ್ನ ಕಥಾಹಂದರದ ಚಿತ್ರ ವೀಲ್ ಚೇರ್ ರೋಮಿಯೋ. ಇದೇ ವಾರ ರಿಲೀಸ್ ಆಗುತ್ತಿದೆ.

  • ವೀಲ್ ಚೇರ್ ರೋಮಿಯೋ ಬೆನ್ನುತಟ್ಟಿದ ಕಿಚ್ಚ

    ವೀಲ್ ಚೇರ್ ರೋಮಿಯೋ ಬೆನ್ನುತಟ್ಟಿದ ಕಿಚ್ಚ

    ಒಂದೊಳ್ಳೆ ಸಿನಿಮಾ ಎಲ್ಲೇ ಇದ್ದರೂ ಬೆಂಬಲಿಸುವ ಕಿಚ್ಚ ಸುದೀಪ್ ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ಬೆನ್ನು ತಟ್ಟಿದ್ದಾರೆ. ಒಂದೊಳ್ಳೆ ಕಥಾ ಹಂದರದ ಚಿತ್ರಕ್ಕೆ ಸಿಗುತ್ತಿರುವ ವಿಮರ್ಶೆಯೇ ಕಿಚ್ಚ ಇಷ್ಟಪಡುವಂತೆ ಮಾಡಿದೆ. ಚಿತ್ರದ ಬಗ್ಗೆ ಒಳ್ಳೆ ಮಾತುಗಳು ಕೇಳಿ ಬರುತ್ತಿವೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಸುದೀಪ್. ಸುದೀಪ್ ಅವರ ಹಾರೈಕೆಯ ಫಲವೇನೋ ಎಂಬಂತೆ ಬಾಕ್ಸಾಫೀಸ್ ಕಳೆಗಟ್ಟುವುದುಕ್ಕೆ ಶುರು ಮಾಡಿದೆ.

    ಅಂಧ ವೇಶ್ಯೆಯೊಬ್ಬಳನ್ನು ಪ್ರೀತಿಸುವ ವಿಕಲಾಂಗ ನಾಯಕನ ವಿಭಿನ್ನ ಲವ್ ಸ್ಟೋರಿ ಇದು. ರಾಮ್ ಚೇತನ್ ಮತ್ತು ಮಯೂರಿ ನಟಿಸಿರೋ ಚಿತ್ರಕ್ಕೆ ನಟರಾಜ್ ನಿರ್ದೇಶಕ. ಅವರಿಗಿದು ಮೊದಲ ಸಿನಿಮಾ. ಫಸ್ಟ್ ಸಿನಿಮಾದಲ್ಲೇ ಬೊಂಬಾಟ್ ಆಟವಾಡಿದ್ದಾರೆ. ತಿಮ್ಮಪ್ಪ ವೆಂಕಟಾಚಲಯ್ಯ ನಿರ್ಮಾಣದ ಸಿನಿಮಾ ಥಿಯೇಟರುಗಳಲ್ಲಿ ಪ್ರೇಕ್ಷಕರನ್ನು ಕರೆದು ತರುವಲ್ಲಿ ಯಶಸ್ವಿಯಾಗಿದೆ.ನ