` harikathe alla girikathe, - chitraloka.com | Kannada Movie News, Reviews | Image

harikathe alla girikathe,

  • ಇನ್ನೆಂಥ ಬೇವರ್ಸಿ ಇರ್ಬೇಡ ಮನ್ಸ..

    ಇನ್ನೆಂಥ ಬೇವರ್ಸಿ ಇರ್ಬೇಡ ಮನ್ಸ..

    ವಾಸುಕಿ ವೈಭವ್ ಮತ್ತೊಮ್ಮೆ ತಮ್ಮ ಟ್ರಂಪ್ ಕಾರ್ಡ್ನಲ್ಲಿ ಗೆದ್ದಿದ್ದಾರೆ. ಒನ್ಸ್ ಎಗೇನ್ ಈ ಬಾರಿಯೂ ವೇದಾಂತ ಇದೆ. ಈ ಬಾರಿಯ ಹರಿಕಥೆ ಅಲ್ಲ ಗಿರಿಕಥೆಯ ಹಾಡಿನಲ್ಲಿ ಒಂದಿಷ್ಟು ವೇದಾಂತವನ್ನ ಕಥೆಗೆ ತಕ್ಕಂತೆ ತಂದಿಟ್ಟಿದ್ದಾರೆ. ಕೇಳೋಕೆ ಹಿತವಾಗಿದೆ. ಕೇಳುತ್ತಾ ಕೇಳುತ್ತಾ ಮನಸನ್ನ ಮುಟ್ಟಿ ಮುಟ್ಟಿ ನೋಡಿಕೊಳ್ಳುವಂತಿದೆ. ಸಾಹಿತ್ಯ ಯೋಗರಾಜ್ ಭಟ್ಟರದ್ದು.

    ರಿಷಬ್ ಶೆಟ್ಟಿ ಹೀರೋ ಆಗಿರೋ ಚಿತ್ರದ ಈ ಹಾಡಿನಲ್ಲಿ ಬರುವ ಒಂದಷ್ಟು ಸಾಲುಗಳಲ್ಲಿ ಮನುಷ್ಯನ ಜನ್ಮ ಜಾಲಾಡಿದ್ದಾರೆ ಭಟ್ಟರು. ಭಟ್ಟರ ಹಾಡಿಗೆ ಅಷ್ಟೇ ಕೂಲ್ ಆಗಿ ಧ್ವನಿ ಕೊಟ್ಟಿರೋದು ಸಂಗೀತ ನಿರ್ದೇಶಕ ವಾಸುಕಿ ವೈಭವ್. ಸಂಗೀತವೂ ಅವರದ್ಧೇ.

    ಎಲ್ಲಾನೂ ನಶ್ವರ..

    ಹಾಗಂತ ಕಾಸು ಮಾಡ್ದೆ ಇರ್ತರಾ..

    ಇಲ್ಲಿ ಒಳ್ಳೆ ದಾರಿ ನೂರಎಂಟು ಇರ್ತವೆ..

    ಆದ್ರೂ ಕಳ್ಳ ದಾರಿ ಕಡೆಗೆ ಕಾಲು ಓಡ್ತವೆ..

    ಇನ್ನೆಂಥ ಬೇವರ್ಸಿ ಇರ್ಬೇಡ ಮನ್ಸ..

    ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ..

    ಚಂಬು ಹುಡ್ಕಲು ಹೋಗಿ..

    ಹಂಡೆ ಕಳ್ಕಂಡ ಕಥೆಯಾ..

    ಇಂತಹ ಸಾಲುಗಳಿಂದಲೇ ಆಪ್ತವಾಗು ಹಾಡು ಇನ್ನೆಂಥ ಬೇವರ್ಸಿ ಇರಬೇಡ ಮನ್ಸ. ಹಾಡು ರಿಲೀಸ್ ಆಗಿದೆ. ಸಿನಿಮಾ ಜೂನ್ 24ಕ್ಕೆ ರಿಲೀಸ್ ಆಗ್ತಿದೆ. ರಿಷಬ್ ಎದುರು ತಪಸ್ವಿನಿ ಪೂಣಚ್ಚ, ರಚನಾ ಇಂದರ್ ನಾಯಕಿಯರಾಗಿ ನಟಿಸಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕರು.

  • ಈ ವಾರ 4 ಸಿನಿಮಾ ರಿಲೀಸ್ : ಯಾವ್ ಸಿನಿಮಾ ನೋಡ್ತೀರಾ ?

    ಈ ವಾರ 4 ಸಿನಿಮಾ ರಿಲೀಸ್ : ಯಾವ್ ಸಿನಿಮಾ ನೋಡ್ತೀರಾ ?

    ಒಂದು ಕಡೆ 777 ಚಾರ್ಲಿ ಸೂಪರ್ ಹಿಟ್ ಆಗಿದೆ. ಸ್ಟಾರ್ ಸಿನಿಮಾವೊಂದು ಹಿಟ್ ಆದಾಗ ಉಳಿದ ಚಿತ್ರಗಳಿಗೆ ಅದು ಕೊಡುವ ಹುಮ್ಮಸ್ಸೇ ಬೇರೆ. ಅದರಲ್ಲೂ ಚಾರ್ಲಿ ಹೀರೋ ಬೇಸ್ ಇರೋ ಕಮರ್ಷಿಯಲ್ ಎಂಟರ್‍ಟೈನರ್ ಅಲ್ಲ. ಪಕ್ಕಾ ಕಂಟೆಂಟ್ ಸಿನಿಮಾ. ಚಾರ್ಲಿ ಥಿಯೇಟರುಗಳಲ್ಲಿ ಕಚ್ಚಿಕೊಂಡಿರುವ ಹೊತ್ತಿನಲ್ಲೇ ಈ ವಾರ 4 ಸಿನಿಮಾ ರಿಲೀಸ್ ಆಗುತ್ತಿವೆ.

    ತ್ರಿವಿಕ್ರಮ : ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾ ತ್ರಿವಿಕ್ರಮ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ಇದು.  ಪಕ್ಕಾ ಲವ್ ಸ್ಟೋರಿ. ವಿಕ್ರಂ ಎದುರು ಆಕಾಂಕ್ಷಾ ಶರ್ಮಾ ಹೀರೋಯಿನ್ ಆಗಿದ್ದಾರೆ.

    ಹರಿಕಥೆ ಅಲ್ಲ ಗಿರಿಕಥೆ : ಇದು ರಿಷಬ್ ಶೆಟ್ಟಿ ಹೀರೋ ಆಗಿರುವ ಸಿನಿಮಾ. ಗರುಡ ಗಮನದ ನಂತರ ಮತ್ತೊಮ್ಮೆ ತೆರೆ ಮೇಲೆ ಬರುತ್ತಿದ್ದಾರೆ. ಹೀರೋ ಆಗಿ. ಇದೊಂದು ಕಂಪ್ಲೀಟ್ ಎಂಟರ್‍ಟೈನರ್ ಎಂದು ರಿಷಬ್ ಶೆಟ್ಟಿ ಹೇಳಿಬಿಟ್ಟಿದ್ದಾರೆ. ರಿಲೀಸ್ ಆಗಿರುವ ಹಾಡು ಮತ್ತು ಟ್ರೇಲರ್ ಎರಡೂ ಇದೇ ರೀತಿ ಇವೆ.

    ತುರ್ತು ನಿರ್ಗಮನ : ಚಿತ್ರದ ಕಥೆ ಮತ್ತು ಕಂಟೆಂಟ್ ಅಷ್ಟೇ ಅಲ್ಲ, ನಿರೂಪಣೆಯೂ ಕೊಡ ಹೊಸದಾಗಿದೆ ಎನ್ನುವ ಫೀಲ್ ಕೊಡುತ್ತಿದೆ ಚಿತ್ರದ ಟ್ರೇಲರ್. ತಮ್ಮ 36 ವರ್ಷಗಳ ಸಿನಿ ಲೈಫಲ್ಲಿ ಇಂತಾ ಸಿನಿಮಾ ಮಾಡಿಲ್ಲ ಅನ್ನೋ ಕಾಂಪ್ಲಿಮೆಂಟ್ ಕೊಟ್ಟಿರೋದು ಸುಧಾರಾಣಿ. ಸುನಿಲ್ ರಾವ್ ರಿಟನ್ರ್ಸ್ ಅನ್ನೋದು ಚಿತ್ರದ ಇನ್ನೊಂದು ಹೈಲೈಟ್.

    ಬುಡ್ಡೀಸ್ : ಇದು ಒಂದು ರೀತಿ ಹೊಸಬರ ಸಿನಿಮಾ. ಹಾಗಂತ ಸಂಪೂರ್ಣ ಹೊಸಬರೂ ಅಲ್ಲ. ಹೀರೋ ಕಿರಣ್ ರಾಜ್ ಕನ್ನಡತಿ ಧಾರಾವಾಹಿಯ ಮೂಲಕ ಗೊತ್ತು. ನಾಯಕಿ ಸಿರಿ ಪ್ರಹ್ಲಾದ್ ಈಗಾಗಲೇ ಒಂದು ಶಿಕಾರಿಯ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ. ಗುರುತೇಜ್ ಶೆಟ್ಟಿ ಚಿತ್ರದ ನಿರ್ದೇಶಕ. ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ ಅನ್ನೋ ಟ್ಯಾಗ್‍ಲೈನಿನಲ್ಲೇ ಇಡೀ ಚಿತ್ರದ ಬಗ್ಗೆ ಒಂದು ಕಲ್ಪನೆ ಮಾಡಿಕೊಳ್ಳಬಹುದು.

  • ಏಕ್.. ದೋ.. ತೀನ್.. ಚಾರ್.. 4 ಸಿನಿಮಾ ಧನ್‍ಧನಾಧನ್

    ಏಕ್.. ದೋ.. ತೀನ್.. ಚಾರ್.. 4 ಸಿನಿಮಾ ಧನ್‍ಧನಾಧನ್

    ಈ ವಾರ 4 ಸಿನಿಮಾ ಸಖತ್ ಸೌಂಡ್ ಮಾಡುತ್ತಿವೆ. ಒಂದೊಂದು ಚಿತ್ರವೂ ಒಂದೊಂದು ರೀತಿಯಲ್ಲಿ. ಕಾನ್ಸೆಪ್ಟ್ ಬೇರೆ.. ಡೈರೆಕ್ಟರ್ ಬೇರೆ.. ಕಥೆಯ ಆತ್ಮವೇ ಬೇರೆ..

    ಹರಿಕಥೆ ಅಲ್ಲ ಗಿರಿಕಥೆ : ಇದು ರಿಷಬ್ ಶೆಟ್ಟಿ ಸಿನಿಮಾ. ಹಾಗಂತ ಈ ಚಿತ್ರಕ್ಕೆ ಅವರು ಡೈರೆಕ್ಟರ್ ಅಲ್ಲ, ಹೀರೋ ಮಾತ್ರ. ಅನಿರುದ್ಧ್ ಮಹೇಶ್ ಮತ್ತು ಕರಣ್ ಅನಂತ್ ಎಂಬ ಇಬ್ಬರು ಹೊಸಬರಿಗೆ ಡೈರೆಕ್ಟರ್ ಕ್ಯಾಪ್ ತೊಡಿಸಿದ್ದಾರೆ. ವಿಡಂಬನೆ ಮತ್ತು ಹಾಸ್ಯದ ಟ್ರ್ಯಾಕ್‍ನಲ್ಲೇ ಸಾಗುವ ಕಥೆಯಲ್ಲಿ ರಿಷಬ್ ಎದುರು ರಚನಾ ಇಂದರ್ ಮತ್ತು ತಪಸ್ವಿನಿ ಪೂಣಚ್ಚ ಹೀರೋಯಿನ್ಸ್. ಹೊನ್ನವಳ್ಳಿ ಕೃಷ್ಣ ಮತ್ತು ಪ್ರಮೋದ್ ಶೆಟ್ಟಿ ಇನ್ನೆರಡು ಪ್ರಧಾನ ಪಾತ್ರದಲ್ಲಿದ್ದಾರೆ. ವಾಸುಕಿ ವೈಭವ್ ಹಾಡುಗಳು ಸಖತ್ ಹಿಟ್ ಆಗಿವೆ.

    ತುರ್ತು ನಿರ್ಗಮನ : ಒಬ್ಬ ವ್ಯಕ್ತಿ ಸಡನ್ ಆಗಿ ಸಾಯುತ್ತಾನೆ. ಸತ್ತ ಮೇಲೆ ಅವನಿಗೆ ಮತ್ತೆ ಬದುಕುವ ಆದರೆ ಮೂರೇ ಮೂರು ದಿನ ಮಾತ್ರ ಬದುಕುವ ಅವಕಾಶ ಸಿಗುತ್ತದೆ. ಆಗ ಆತ ಏನು ಮಾಡಬಹುದು? ಒಂದು ವಿಭಿನ್ನ ಕಥೆಯನ್ನು ಅಷ್ಟೇ ವಿಭಿನ್ನವಾಗಿ ಕಮರ್ಷಿಯಲ್ ಅಂಶಗಳನ್ನಿಟ್ಟುಕೊಳ್ಳದೆ, ಔಟ್ ಆಫ್ ದಿ ಬಾಕ್ಸ್ ಶೈಲಿಯಲ್ಲಿ ಹೇಳಿರೋದು ಹೇಮಂತ್ ಕುಮಾರ್. ರಾಜ್ ಬಿ.ಶೆಟ್ಟಿ, ಸುನಿಲ್, ಸುಧಾರಾಣಿ.. ಹೀಗೆ ಪ್ರತಿಭಾವಂತರ ದಂಡೇ ಚಿತ್ರದಲ್ಲಿದೆ.

    ತ್ರಿವಿಕ್ರಮ : ಹೀರೋಯಿನ್ ಹೆಸರು ತ್ರಿಷಾ. ಹೀರೋ ವಿಕ್ರಂ. ಅವರಿಬ್ಬರ ಹೆಸರು ಕೂಡಿದಾಗ ಸೃಷ್ಟಿಯಾದ ಕಥೆಯೇ ತ್ರಿವಿಕ್ರಮ. ರವಿಚಂದ್ರನ್ ಅವರ 2ನೇ ಮಗ ವಿಕ್ರಂ ಅವರ ಮೊದಲ ಚಿತ್ರ. ಮಿಡ್ಲ್ ಕ್ಲಾಸ್ ಹುಡುಗನ ಲವ್ ಸ್ಟೋರಿ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾಗೆ ರಾಮ್ಕೋ ಸೋಮಣ್ಣ ಪ್ರೊಡ್ಯೂಸರ್. ರವಿಚಂದ್ರನ್ ಪುತ್ರನ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆ ದೊಡ್ಡದಾಗಿದೆ.

    ಬಡ್ಡೀಸ್ : ಇದು ಕಾಲೇಜ್ ಸ್ಟೂಡೆಂಟ್ಸ್ ಲೈಫ್ ಸ್ಟೋರಿ. ಯೂಥ್‍ಫುಲ್ ಕಥೆ. ಕನ್ನಡತಿ ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ಈ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಗುರುತೇಜ ಶೆಟ್ಟಿ ನಿರ್ದೇಶನದ ಸಿನಿಮಾ ವಿಶೇಷ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ.

  • ಜೂನ್ 23ಕ್ಕೆ ರಿಷಬ್ ಶೆಟ್ರ ಹೊಸ ಕಥೆ..!

    ಜೂನ್ 23ಕ್ಕೆ ರಿಷಬ್ ಶೆಟ್ರ ಹೊಸ ಕಥೆ..!

    2013ರಲ್ಲಿ ರಿಷಬ್ ಶೆಟ್ಟಿ ಅಟ್ಟಹಾಸ ಚಿತ್ರದಲ್ಲಿ ಅಂಡರ್ ಕವರ್ ಕಾಪ್ ಪಾತ್ರದಲ್ಲಿ ಕಾಣಿಸಿಕೊಂಡಾಗ.. ಈ ನಟ ಇಷ್ಟು ದೊಡ್ಡ ಡೈರೆಕ್ಟರ್ ಮತ್ತು ಹೀರೋ ಆಗ್ತಾರೆ ಅನ್ನೋದು ಬಹುಶಃ ಯಾರಿಗೂ ಗೊತ್ತಿರಲಿಲ್ಲ. ಅವರೀಗ ಅನ್‍ಸ್ಟಾಪಬಲ್ ಸ್ಟಾರ್. ನಟಿಸಿದ ಚಿತ್ರಗಳೆಲ್ಲ ಹಿಟ್ ಆಗುತ್ತಿರೋ ಹೊತ್ತಿನಲ್ಲಿ ಹೊಸದದೊಂದು ಚಿತ್ರದೊಂದಿಗೆ ಬರೋದಾಗಿ ಘೋಷಿಸಿದ್ದಾರೆ. ಜೂನ್ 23ಕ್ಕೆ ರಿಷಬ್ ಶೆಟ್ಟಿ ಹೀರೋ ಆಗಿರೋ ಹರಿಕಥೆ ಅಲ್ಲ ಗಿರಿಕಥೆ ರಿಲೀಸ್.

    ರಿಷಬ್ ಶೆಟ್ಟಿಗೆ ಇಲ್ಲಿ ಇಬ್ಬರು ಹೀರೋಯಿನ್ಸ್. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ಹಾಗೂ ತಪಸ್ವಿನಿ. ವೃತ್ತಿಯಲ್ಲಿ ಮೇಲೇರಲು ಕಷ್ಟ ಪಡುವ ಸಿನಮಾ ಡೈರೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ ರಿಷಬ್. ಕಾಮಿಡಿ ಟ್ರ್ಯಾಕ್‍ನಲ್ಲೇ ಸಾಗುವ ಕಥೆಗೆ ಆ್ಯಕ್ಷನ್ ಕಟ್ ಹೇಳಿರೋದು ಅನಿರುದ್ಧ್ ಮಹೇಶ್ ಮತ್ತು ಕರಣ್ ಅನಂತ್. ರಿಷಬ್ ಗರಡಿಯ ಹುಡುಗರೇ. ಸಂದೇಶ್ ನಾಗರಾಜ್ ಚಿತ್ರದ ನಿರ್ಮಾಪಕರು.

  • ಜೂನ್ 23ಕ್ಕೆ ಹೊಸ ಕಥೆ ಹೇಳ್ತಾರೆ ರಿಷಬ್ ಶೆಟ್ಟಿ

    ಜೂನ್ 23ಕ್ಕೆ ಹೊಸ ಕಥೆ ಹೇಳ್ತಾರೆ ರಿಷಬ್ ಶೆಟ್ಟಿ

    ಹರಿಕಥೆ ಅಲ್ಲ ಗಿರಿಕಥೆ. ಇದು ರಿಷಬ್ ಶೆಟ್ಟಿ ಸಿನಿಮಾ. ದಸರಾಗೆ ಕಾಂತಾರದ ಕಥೆ ಹೇಳೋಕೆ ಬರುತ್ತಿರೋ ರಿಷಬ್ ಶೆಟ್ಟಿ, ಅದಕ್ಕೂ ಮೊದಲು ಜೂನ್ 23ಕ್ಕೆ ಈ ಕಥೆ ಹೇಳುತ್ತಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾಗೆ ಕಿರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ಜಂಟಿ ನಿರ್ದೇಶನದ ಸಿನಿಮಾ.

    ರಿಷಬ್ ಶೆಟ್ಟಿ ಎದುರು ತಪಸ್ವಿ ಪೂಣಚ್ಚ ಹಾಗೂ ರಚನಾ ಇಂದರ್ ಇಬ್ಬರು ನಾಯಕಿಯರಿದ್ದಾರೆ. ಪ್ರಮೋದ್ ಶೆಟ್ಟಿ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಎರಡು ಹಾಡುಗಳು ಹೊರಬಂದಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆಯ ಎರಡೂ ಹಾಡುಗಳು ಹಿಟ್.

  • ರಿಷಬ್ ಜೊತೆ ಶರಣ್ : ಕಾಂಚನ ಮಿಣಮಿಣ

    ರಿಷಬ್ ಜೊತೆ ಶರಣ್ : ಕಾಂಚನ ಮಿಣಮಿಣ

    ಕಾಂಚನ ಮಿಣಮಿಣ..

    ಜೇಬಲ್ಲಿ ಕಾಸಿದ್ರೆ ಸ್ಟಾಮಿನಾ..

    ಭಾಗ್ಯದ ಬಾಗ್ಲಿಗೆ..

    ನೋಟಲ್ಲೇ ಕಟ್ಟುವ ತೋರಣ..

    ಇದು ಹರಿಕಥೆ ಅಲ್ಲ ಗಿರಿಕಥೆಯ ಹೊಸ ಹಾಡು. ಬವರಾಚಿ ಸಾಂಗು. ಬವರಾಚಿ ಅಂದ್ರೇನು ಅನ್ನೋದು ಸಿನಿಮಾ ನೋಡಿದ್ಮೇಲೆ ಗೊತ್ತಾಗಬಹುದು. ಅಂದಹಾಗೆ ಈ ಹಾಡು ಹಾಡಿರೋದು ಕಾಮಿಡಿ ಸ್ಟಾರ್ ಶರಣ್. ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯಕ್ಕೆ ಅಷ್ಟೇ ಬವರಾಚಿ ಮ್ಯೂಸಿಕ್ ಕೊಟ್ಟಿರೋದು ವಾಸುಕಿ ವೈಭವ್. ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾಗೆ ಕಿರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಇಬ್ಬರೂ ನಿರ್ದೇಶಕರು.

    ರಿಷಬ್ ಶೆಟ್ಟಿ ಎದುರು ತಪಸ್ವಿ ಪೂಣಚ್ಚ ಹಾಗೂ ರಚನಾ ಇಂದರ್ ಇಬ್ಬರು ನಾಯಕಿಯರಿದ್ದಾರೆ. ಪ್ರಮೋದ್ ಶೆಟ್ಟಿ ಇನ್ನೊಂದು ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ.

  • ಹರಿಕಥೆ ಅಲ್ಲ ಗಿರಿಕಥೆ : ಅಮೆರಿಕದಲ್ಲಿ ರಿಲೀಸ್

    ಹರಿಕಥೆ ಅಲ್ಲ ಗಿರಿಕಥೆ : ಅಮೆರಿಕದಲ್ಲಿ ರಿಲೀಸ್

    ಕಳೆದ ವಾರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಸಿನಿಮಾ ಹರಿಕಥೆ ಅಲ್ಲ ಗಿರಿಕಥೆ. ರಿಷಬ್ ಶೆಟ್ಟಿ ಹೀರೋ ಆಗಿರೋ ಚಿತ್ರ.. ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದೆ. ಸಿನಿಮಾ ಡೈರೆಕ್ಟರ್ ಒಬ್ಬರ ಕಥೆಯನ್ನೇ ವಿಭಿನ್ನವಾಗಿ ಹೇಳಿರುವ ಸಿನಿಮಾ ಹರಿಕಥೆ ಅಲ್ಲ ಗಿರಿಕಥೆ. ಈಗ ಅಮೆರಿಕದಲ್ಲಿ ರಿಲೀಸ್ ಆಗುತ್ತಿದೆ.

    ಕ್ಯಾಲಿಫೋರ್ನಿಯಾ, ಜಾರ್ಜಿಯಾ, ಅಟ್ಲಾಂಟಾ ಸೇರಿದಂತೆ ಹಲವೆಡೆ ಹರಿಕಥೆ ಅಲ್ಲ ಗಿರಿಕಥೆ ರಿಲೀಸ್ ಮಾಡಲಾಗುತ್ತಿದೆ.

    ರಿಷಬ್ ಶೆಟ್ಟಿ ಎದುರು ರಚನಾ ಇಂದರ್, ತಪಸ್ವಿನಿ ಪೂಣಚ್ಚ ನಾಯಕಿಯರಾಗಿ ನಟಿಸಿದ್ದರೆ, ಹೊನ್ನವಳ್ಳಿ ಕೃಷ್ಣ, ಪ್ರಮೋದ್ ಶೆಟ್ಟಿ ಚಿತ್ರದ ಇನ್ನಿತರ ಪ್ರಮುಖ ಪಾತ್ರದಲ್ಲಿದ್ದಾರೆ. ಅನಿರುದ್ಧ್ ಮಹೇಶ್ ಮತ್ತು ಕರಣ್ ಅನಂತ್ ನಿರ್ದೇಶನ ಮಾಡಿರುವ ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕರು.

  • ಹರಿಕಥೆ ಅಲ್ಲ ಗಿರಿಕಥೆ : ಏನ್ ಕ್ವಾಟ್ಲೆ ಗುರೂ..

    ಹರಿಕಥೆ ಅಲ್ಲ ಗಿರಿಕಥೆ : ಏನ್ ಕ್ವಾಟ್ಲೆ ಗುರೂ..

    ಸಾರ್.. ನಾನೊಬ್ಬ ಒಳ್ಳೆ ಡೈರೆಕ್ಟರು.. ಹೀಗೆ ಶುರುವಾಗುವ ಕಥೆಯ ಟ್ರೇಲರ್ 2 ನಿಮಿಷ 40 ಸೆಕೆಂಡ್ ಮುಗಿದ ಮೇಲೂ ಮುಖದ ಮೇಲೊಂದು ಮುಗುಳ್ನಗೆ ಉಳಿಸುತ್ತೆ. ಚಿತ್ರದ ಟ್ರೇಲರಿನ ತಾಕತ್ತೇ ಅದು. ಅವನು ಹೇಳೋ ಯಾವ ಕಥೆ ಸತ್ಯ.. ಯಾವ ಕಥೆ ಸುಳ್ಳು ಅನ್ನೋದು ಅರ್ಥವೇ ಆಗಲ್ಲ.

    ರಿಷಬ್ ಕಥೆ ಹೇಳೋದು ಯೋಗರಾಜ್ ಭಟ್ಟರಿಗೆ. ಆದರೆ, ಆಕ್ಚುಯಲಿ ಕಥೆ ಹೇಳೋದು ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ಜಾಯಿಂಟ್ ಡೈರೆಕ್ಷನ್.

    ಟ್ರೇಲರಿನ ಮಧ್ಯೆ ಇಣುಕಿ ಹೋಗುವ ನಾಯಕಿಯರಾದ ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್ ಮತ್ತೆ ಮತ್ತೆ ನೋಡಬೇಕು ಎನ್ನುವಷ್ಟು ಮುದ್ದಾಗಿ ಕಾಣುತ್ತಾರೆ. ಹೊನ್ನವಳ್ಳಿ ಕೃಷ್ಣ ನಿಜಕ್ಕೂ ಗಿರಿಯ ಅಪ್ಪನಾ? ಪ್ರಮೋದ್ ಶೆಟ್ಟಿ ಅದ್ಯಾಕೆ ಅಷ್ಟು ರಗಡ್ ಆಗ್ತಾರೆ. ಅಷ್ಟು ರಗಡ್ ಆಗಿ ಕಾಣ್ತಿದ್ದರೂ.. ನಮಗ್ಯಾಕೆ ನಗು ಬರುತ್ತೆ.. ಗೊತ್ತಾಗೋಕೆ ಸಿನಿಮಾ ನೋಡಬೇಕಷ್ಟೆ.

    ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಜೂನ್ 23ಕ್ಕೆ ರಿಲೀಸ್ ಆಗುತ್ತಿದೆ.

  • ಹರಿಕಥೆ ಅಲ್ಲ ಗಿರಿಕಥೆಯಲ್ಲಿ ವಾಸುಕಿ ಕಥೆಯೇ ರೋಚಕ.. ರೋಮಾಂಚಕ..

    ಹರಿಕಥೆ ಅಲ್ಲ ಗಿರಿಕಥೆಯಲ್ಲಿ ವಾಸುಕಿ ಕಥೆಯೇ ರೋಚಕ.. ರೋಮಾಂಚಕ..

    ಹರಿಕಥೆ ಅಲ್ಲ ಗಿರಿಕಥೆ. ಪ್ರೇಕ್ಷಕರು ಇದನ್ನಾಗಲೇ ಶಾರ್ಟ್ & ಸ್ವೀಟ್ ಆಗಿ ಹೆಚ್.ಕೆ.ಜಿ.ಕೆ. ಎನ್ನುತ್ತಿದ್ದಾರೆ. ರಿಷಬ್ ಶೆಟ್ಟಿ ನಟಿಸಿರೋ ಚಿತ್ರದಲ್ಲಿ ಕಾಮಿಡಿ ಬ್ಯಾಕ್‍ಗ್ರೌಂಡ್ ಸ್ಟೋರಿ. ಇದೇ ವಾರ ರಿಲೀಸ್ ಆಗುತ್ತಿರೋ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್. ನಿರ್ದೇಶಕರಷ್ಟೇ ಅಲ್ಲ, ನಾಯಕಿಯರೂ ಇಬ್ಬಿಬ್ಬರು. ತಪಸ್ವಿನಿ ಪೂಣಚ್ಚ ಮತ್ತು ರಚನಾ ಇಂದರ್. ಈ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್.

    ಬಿಗ್‍ಬಾಸ್‍ನಲ್ಲಿ ಮನ್ಸಿಂದ ಯಾರೂನೂ ದೊಡ್ಡೋರಲ್ಲ ಅನ್ನೋ ಸೀರಿಯಸ್ ಹಾಡಿನ ಮೂಲಕ ಕನ್ನಡಿಗರ ಮನೆ ಮನ ತಲುಪಿದ ವಾಸುಕಿ ವೈಭವ್, ಇತ್ತೀಚೆಗೆ ಬಡವ ರಾಸ್ಕಲ್ ಚಿತ್ರದಲ್ಲಿ ಮಾಸ್ ಹಾಡುಗಳನ್ನೂ ಕೊಟ್ಟು ಗೆದ್ದಿದ್ದಾರೆ. ಈಗ ಕಾಮಿಡಿ ಟ್ರ್ಯಾಕ್ ಸಿನಿಮಾ.

    ಆ್ಯಕ್ಷನ್ ಮತ್ತು ಎಮೋಷನ್ ಸಿನಿಮಾಗಳಿಗೆ ಸಂಗೀತ ನೀಡುವುದಕ್ಕಿಂತ ದೊಡ್ಡ ಚಾಲೆಂಜ್ ಕಾಮಿಡಿ ಸಿನಿಮಾಗಳಿಗೆ ಮ್ಯೂಸಿಕ್ ನೀಡೋದು. ಜೊತೆಗೆ ಚಿತ್ರದಲ್ಲಿ ಆಗಲೇ ಶೂಟಿಂಗ್ ಆಗಿತ್ತು. ಆ ದೃಶ್ಯಗಳಿಗೆ ತಕ್ಕಂತೆ ಮ್ಯೂಸಿಕ್ ಕೊಡುವುದು ಇನ್ನೂ ದೊಡ್ಡ ಚಾಲೆಂಜ್ ಎನ್ನುವ ವಾಸುಕಿ ವೈಭವ್ ಚಿತ್ರದ ನಿರ್ದೇಶಕರಿಗೆ ಸಂಗೀತದ ಕ್ರೆಡಿಟ್ ಕೊಟ್ಟಿದ್ದಾರೆ. ಅವರಿಗೆ ಏನು ಬೇಕು ಅನ್ನೊದು ಸ್ಪಷ್ಟವಾಗಿ ಗೊತ್ತಿತ್ತು. ಹೀಗಾಗಿ ಕೆಲಸ ಸುಲಭವಾಗುತ್ತಾ ಹೋಯಿತು ಎನ್ನುವ ವಾಸುಕಿ ವೈಭವ್ ಅವರಿಗೆ ಈಗಾಗಲೇ ಚಿತ್ರದ ಎರಡು ಹಾಡುಗಳು ಹಿಟ್ ಆಗಿರೋದು ಖುಷಿ ಕೊಟ್ಟಿದೆ.

    ಜೂ.ಮೊನಾಲಿಸಾ ಮತ್ತು ಬಾವರ್ಚಿ ಹಾಡುಗಳು ಹಿಟ್ ಆಗಿವೆ.

    ಚಿತ್ರದ ಹಾಡುಗಳಿಗೆ ಸಾಹಿತ್ಯ ಕೊಟ್ಟಿರೋದು ಯೋಗರಾಜ್ ಭಟ್, ಸತ್ಯ ಪ್ರಕಾಶ್, ತ್ರಿಲೋಕ್ ವಿಕ್ರಂ ಮತ್ತು ಕಲ್ಯಾಣ್.

  • ಹರಿಕಥೆಯ ಜ್ಯೂ.ಮೊನಾಲಿಸಾ ಹೇಗಿದ್ದಾಳೆ ನೋಡಿದ್ರಾ?

    ಹರಿಕಥೆಯ ಜ್ಯೂ.ಮೊನಾಲಿಸಾ ಹೇಗಿದ್ದಾಳೆ ನೋಡಿದ್ರಾ?

    ರಿಷಬ್ ಶೆಟ್ಟಿ ಚಿತ್ರಗಳಲ್ಲಿ ಕತೆಯ ಜೊತೆಗೆ ಹಾಡುಗಳೂ ಕೇಳುವಂತಿರುತ್ತವೆ ಹಾಗೂ ನೋಡುವಂತಿರುತ್ತವೆ. ಹರಿಕಥೆ ಅಲ್ಲ ಗಿರಿಕಥೆ  ಚಿತ್ರದ ಜ್ಯೂ.ಮೊನಾಲಿಸಾ ಹಾಡು ಕೂಡಾ ಅಷ್ಟೆ.. ನೋಡುವಂತಿದೆ.. ಕೇಳುವಂತಿದೆ. ಮೊನಾಲಿಸಾ ನಗುವಿಗೆ ನೀವೂ ಬಿದ್ದರೆ.. ರಿಷಬ್ ಶೆಟ್ಟರು ಬೇಜಾರಾಗಬಹುದು. ಅವರಾಗಲೇ.. ಲವ್ವಲ್ಲಿ ಬಿದ್ದಾಗಿದೆ..

    ವಾಸುಕಿ ವೈಭವ್ ಸಂಗೀತದ ಜೊತೆಗೆ ಹಾಡನ್ನೂ ಹಾಡಿದ್ದಾರೆ. ಎದೆಗೇ ತಟ್ಟುವಂತೆ. ಚೆಂದದ ಕೊರಿಯೋಗ್ರಫಿಯಲ್ಲಿ ತುಂಟತನವಿದೆ. ಗಿರಿಕನ್ಯೆಗಾಗಿ ದಾರಿ ತಪ್ಪಿದ ಮಗನಾಗುವ ಹರಿಗೆ ಅನುರಾಗ ಅರಳಿದ ಕಥೆ ಹಾಡಿನಲ್ಲಿದೆ. ತ್ರಿಲೋಕ್ ತ್ರಿವಿಕ್ರಮ ಪೆನ್ನಿನಲ್ಲಿ ತುಂಟ ಹುಡುಗನ ಭಾವನೆಗಳನ್ನೆಲ್ಲ ತಂದು ಸುರಿದಿದ್ದಾರೆ.

    ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನವಿದೆ. ರಿಷಬ್ ಶೆಟ್ಟಿ ಹೀರೋ ಆಗಿದ್ದು ತಪಸ್ವಿನಿ ಪೂಣಚ್ಚ, ರಚನಾ ಇಂದರ್ ನಾಯಕಿಯರು.