` s s rajamouli, - chitraloka.com | Kannada Movie News, Reviews | Image

s s rajamouli,

  • ಕಾಂತಾರ ನಮಗೆಲ್ಲ ಒಂದು ಪಾಠ ಎಂದ ರಾಜಮೌಳಿ

    ಕಾಂತಾರ ನಮಗೆಲ್ಲ ಒಂದು ಪಾಠ ಎಂದ ರಾಜಮೌಳಿ

    ರಾಜಮೌಳಿ. ಇವತ್ತಿನ ಇಂಡಿಯಾದ ನಂ.1 ನಿರ್ದೇಶಕರೆಂದು ಯಾರಾದರೂ ಇದ್ದರೆ ನಿಸ್ಸಂಶಯವಾಗಿ ರಾಜಮೌಳಿ ಹೆಸರು ಹೇಳಬಹುದು. ಇದುವರೆಗೆ ರಾಜಮೌಳಿಯವರ ಒಂದೇ ಒಂದು ಸಿನಿಮಾ ಸೋತಿಲ್ಲ ಎನ್ನುವುದು ಅವರ ಹೆಗ್ಗಳಿಕೆ. ಈಗ, ಬಾಹುಬಲಿ, ಆರ್.ಆರ್.ಆರ್ ಎಂಬ ಅದ್ಧೂರಿ ಚಿತ್ರಗಳನ್ನೂ ಮಾಡಿದ್ದಾರೆ. ಮರ್ಯಾದಾ ರಾಮಣ್ಣ ಎಂಬಂತಹ ಲೋ ಬಜೆಟ್ ಸಿನಿಮಾ ಮಾಡಿಯೂ ಗೆದ್ದಿದ್ದಾರೆ. ಆದರೆ.. ಒಟ್ಟಾರೆಯಾಗಿ ಹೇಳಬೇಕು ಎಂದರೆ ರಾಜಮೌಳಿ ಚಿತ್ರಗಳ ಬಜೆಟ್ ಮುಗಿಲಲ್ಲೇ ಇರುತ್ತದೆ. ಅಂತಹ ರಾಜಮೌಳಿ ಕಾಂತಾರ ನೋಡಿ ಮೆಚ್ಚಿ ಇದು ನಮಗೆಲ್ಲ ಒಂದು ಪಾಠ ಎಂದಿರುವುದು ಅಚ್ಚರಿ.

    ಹೆಚ್ಚು ಹಣ ಗಳಿಸೋಕೆ ಹೆಚ್ಚು ದುಡ್ಡು ಖರ್ಚು ಮಾಡಬೇಕಿಲ್ಲ. ಸ್ಪೆಷಲ್ ಸಿನಿಮಾಗೆ ಬಿಗ್ ಬಜೆಟ್ ಸಿನಿಮಾಗಳೇ ಆಗಬೇಕೆಂದೇನೂ ಇಲ್ಲ. ಬಿಗ್ ಬಜೆಟ್ ಹಾಕಿಯೋ ಬಿಗ್ ಬ್ಯುಸಿನೆಸ್ ಮಾಡಬೇಕೆಂದೇನೂ ಇಲ್ಲ. ಕಾಂತಾರದ ಮ್ಯಾಜಿಕ್ ನಮ್ಮಂತಹ ದುಬಾರಿ ಚಿತ್ರಗಳ ನಿರ್ಮಾಪಕ, ನಿರ್ದೇಶಕರಿಗೆ ಒಂದು ಪಾಠ ಹೇಳಿದೆ. ಈ ಚಿತ್ರದಿಂದ ನಾವು ಕಲಿಯುವುದು ತುಂಬಾ ಇದೆ. ನಮ್ಮ ದೃಷ್ಟಿಕೋನ ಬದಲಾಗಬೇಕಿದೆ ಎಂದಿದ್ದಾರೆ ರಾಜಮೌಳಿ.

  • ಬಾಲಿವುಡ್ ಮಂದಿಗೆ ಟಾರ್ಗೆಟ್ ಆದರಾ ರಾಜಮೌಳಿ?

    ಬಾಲಿವುಡ್ ಮಂದಿಗೆ ಟಾರ್ಗೆಟ್ ಆದರಾ ರಾಜಮೌಳಿ?

    ಆರ್.ಆರ್.ಆರ್. ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ನಂತರ ಆಸ್ಕರ್ ರೇಸಿನಲ್ಲೂ ಭರವಸೆ ಹುಟ್ಟಿಸಿದೆ ರಾಜಮೌಳಿ-ರಾಮ್ ಚರಣ್-ಎನ್.ಟಿ.ಆರ್. ಅವರ ಆರ್.ಆರ್.ಆರ್. ಇಷ್ಟೇ ಅಲ್ಲ, ಇಡೀ ವರ್ಷ ಸದ್ದು ಮಾಡಿದ ಚಿತ್ರಗಳಾದ ಕೆಜಿಎಫ್, ಕಾಂತಾರ, ವಿಕ್ರಾಂತ್ ರೋಣ, 777 ಚಾರ್ಲಿ, ಪುಷ್ಪ, ಕಾರ್ತಿಕೇಯ 2, ವಿಕ್ರಂ. ಪೊನ್ನಿಯನ್ ಸೆಲ್ವನ್.. ಅಷ್ಟೆಲ್ಲ ಯಾಕೆ ಇದೇ ಬಾಲಿವುಡ್ಡಿನ ಕಾಶ್ಮೀರ್ ಫೈಲ್ಸ್ ಕೂಡಾ ಬಾಲಿವುಡ್ ಮಂದಿಯ ರೆಗ್ಯುಲರ್ ಶೈಲಿಯ ಸಿನಿಮಾ ಅಲ್ಲ. ಅದು ಬೇರೇನೇ. ಈಗ ಆ ಎಲ್ಲ ಚಿತ್ರಗಳೂ ಆಸ್ಕರ್ ರೇಸಿನಲ್ಲಿವೆ. ಅದರ ಜೊತೆಗೆ ಬಾಲಿವುಡ್ ಮಂದಿ ಕೆಲವರ ಮೇಲೆ ಮುಗಿಬೀಳುತ್ತಿರುವುದೂ ಇದೆ.

    ಬಾಲಿವುಡ್ ಮಂದಿ ಈಗ ತಮ್ಮ ಸಿನಿಮಾ ಪ್ರಚಾರಕ್ಕೆ ದಕ್ಷಿಣ ಭಾರತದ ಚಿತ್ರಗಳ ಹೀರೋಗಳನ್ನೂ ಬಳಸಿಕೊಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್, ಕಾಲಿವುಡ್, ಸ್ಯಾಂಡಲ್ ವುಡ್, ಟಾಲಿವುಡು, ಮಾಲಿವುಡ್.. ಎಂದೆಲ್ಲ ಏನಿಲ್ಲ. ಇಂಡಿಯನ್ ಸಿನಿಮಾ ಎನ್ನುತ್ತಿದ್ದಾರೆ. ಮೊದಲೆಲ್ಲ ಹೀಗಿರಲಿಲ್ಲ ಎನ್ನವುದೂ ವಾಸ್ತವ. ಯೇ ಸಪರೇಟ್.. ವೋ ಸಪರೇಟ್ ಎನ್ನುತ್ತಿದ್ದ ಬಾಲಿವುಡ್ ಮಂದಿ ಸತತ  ಸೋಲಿನ ಬಳಿಕ ಬದಲಾಗಿದ್ದಾರೆ. ಆದರೆ ಬಾಲಿವುಡ್ ಎಂಬ ಅಹಂ ಕಡಿಮೆಯಾದಂತಿಲ್ಲ.

    ಇತ್ತೀಚೆಗೆ ಆಂಧ್ರಪ್ರೇಶ ಸಿಎಂ ಜಗನ್ ಮೋಹನ್ ರೆಡ್ಡಿ, ಆರ್.ಆರ್.ಆರ್.ತಂಡಕ್ಕೆ ತೆಲುಗು ಬಾವುಟವನ್ನು ಎತ್ತಿ ಹಿಡಿದಿದ್ದೀರಿ ಎಂದು ಅಭಿನಂದಿಸಿದ್ದಕ್ಕೆ, ಅದ್ನಾನ್ ಸಾಮಿಯಂತಹವರು ತೆಲುಗು ಅಲ್ಲ, ಇಂಡಿಯನ್ ಸಿನಿಮಾ ಎಂದು ಹೇಳಿ ಎಂದು ತಾಕೀತು ಮಾಡಿದ್ದರು. ಅದ್ನಾನ್ ಸಾಮಿಯ ಚಳಿ ಬಿಡಿಸಿದ್ದು ಕನ್ನಡತಿ ರಮ್ಯಾ.

    ಈಗ ಅದೇ ರಾಜಮೌಳಿ ಅಮೆರಿಕದ ಪ್ರೆಸ್ ಮೀಟಿನಲ್ಲಿ ಇದು ಬಾಲಿವುಡ್ ಸಿನಿಮಾನಾ ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾ ಇದು ಬಾಲಿವುಡ್ ಸಿನಿಮಾ ಅಲ್ಲ. ಇದು ದಕ್ಷಿಣ ಭಾರತದ ತೆಲುಗು ಸಿನಿಮಾ ಎಂದಿದ್ದಾರೆ. ಇದು ಒಂದಷ್ಟ ಬಾಲಿವುಡ್ ಮಂದಿಯ ಹೊಟ್ಟೆಗೆ  ಬೆಂಕಿ ಹಾಕಿದ್ದು, ಉರಿ ಕಾಣಿಸೋಕೆ ಶುರುವಾಗಿದೆ.

    ಹಾಗೆಂದು ರಾಜಮೌಳಿ ಇದನ್ನೆಲ್ಲ ಯಾವುದೇ ಸೇಡಿನಿಂದ ಹೇಳಿದ್ದೂ ಅಲ್ಲ. ಕೆಲವು ವರ್ಷಗಳ ಹಿಂದೆ ಪ್ರಭಾಸ್ ಎದುರು ಹೃತಿಕ್ ರೋಷನ್ ಏನೇನೂ ಅಲ್ಲ ಎಂದು ನೀಡಿದ್ದ ಹೇಳಿಕೆಗೆ ಮುಲಾಜಿಲ್ಲದೆ ಸಾರಿ ಎಂದಿದ್ದಾರೆ. ನಾನು ಅಂದು ಬಳಸಿದ್ದ ಆ ಪದ ಸರಿಯಾಗಿರಲಿಲ್ಲ ಎಂದಿದ್ದಾರೆ.

    ಅಂದಹಾಗೆ ಜನವರಿ 17ಕ್ಕೆ ಆಸ್ಕರ್ ನಾಮನಿರ್ದೇಶನ ಪ್ರಕ್ರಿಯೆ ಪೂರ್ಣವಾಗಲಿದೆ.

  • ವಿಕ್ರಾಂತ್ ರೋಣನ ಸಕ್ಸಸ್ ಸಂಭ್ರಮಿಸಿದ ರಾಜಮೌಳಿ

    ವಿಕ್ರಾಂತ್ ರೋಣನ ಸಕ್ಸಸ್ ಸಂಭ್ರಮಿಸಿದ ರಾಜಮೌಳಿ

    ಜುಲೈ 28ಕ್ಕೆ ರಿಲೀಸ್ ಆದ ವಿಕ್ರಾಂತ್ ರೋಣ ಸಿನಿಮಾ ಎಲ್ಲ ದಾಖಲೆಗಳನ್ನೂ ಪುಡಿಗಟ್ಟಿ ಮುನ್ನುಗ್ಗುತ್ತಿದೆ. ಅಮಿತಾಭ್ ಬಚ್ಚನ್, ಮೋಹನ್`ಲಾಲ್ ಅಂತಹ ದಿಗ್ಗಜರು ಶುಭ ಹಾರೈಸಿದ್ದ ಸಿನಿಮಾ ವಿಕ್ರಾಂತ್ ರೋಣ. ಈಗ ಪ್ರೇಕ್ಷಕರು ದಿಬ್ಬಣದಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾ ನೋಡುತ್ತೇನೆ ಎಂದು ಶುಭ ಹಾರೈಸಿದ್ದ ಭಾರತೀಯ ಚಿತ್ರರಂಗದ ದಿಗ್ಗಜ ರಾಜಮೌಳಿ ಸಿನಿಮಾ ನೋಡಿ ಮೆಚ್ಚಿದ್ದಾರೆ. ಜಕ್ಕಣ್ಣ ಏನು ಹೇಳಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ಸುದೀಪ್ ಥ್ರಿಲ್ ಆಗಿದ್ದಾರೆ.

    ವಿಕ್ರಾಂತ್ ರೋಣದಂತಾ ಸಿನಿಮಾ ಮಾಡೋಕೆ ಧೈರ್ಯ ಬೇಕು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಒಂದ್ಸಲ ಸೀಕ್ರೆಟ್ ರಿವೀಲ್ ಆದರೆ ಪ್ರೇಕ್ಷಕರು ಕುತೂಹಲ, ಉತ್ಸಾಹ ಎರಡನ್ನೂ ಕಳೆದುಕೊಳ್ತಾರೆ.ಆದರೆ ಇಲ್ಲಿ ಮಾತ್ರ ಪ್ರೇಕ್ಷಕರು ರಿಪೀಟ್ ಆಗುತ್ತಿದ್ದಾರೆ. ಇದು ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂದಿದ್ದಾರೆ ರಾಜಮೌಳಿ.

    ಕಿಚ್ಚ ಖುಷ್ ಹುವಾ.. ಅನೂಪ್ ಭಂಡಾರಿ ಡಬಲ್ ಖುಷ್ ಹುವಾ.. ರಾಜಮೌಳಿ ಶಹಬ್ಬಾಸ್`ಗಿರಿ ನಂತರ ತೆಲುಗಿನಲ್ಲಿ ಚಿತ್ರಕ್ಕೆ ಡಿಮ್ಯಾಂಡ್ 40 ಪಟ್ಟು ಹೆಚ್ಚಾಗಿದೆ. ಹೀಗಾಗಿ ನಿರ್ಮಾಪಕ ಜಾಕ್ ಮಂಜು ಕೂಡಾ ಖುಷ್ ಹುವಾ.

    ಚಿತ್ರದ ಭಾಸ್ಕರ್ ಪಾತ್ರದ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿರುವ ರಾಜಮೌಳಿ ಇಡೀ ವಿಕ್ರಾಂತ್ ರೋಣ ಚಿತ್ರಕ್ಕೆ ಖುಷಿ ಕೊಟ್ಟಿದ್ದಾರೆ.

  • ಸಿನಿಮಾ ಎನ್ನುವುದು ಧರ್ಮವಾದರೆ ಅದಕ್ಕೆ ಪೀಠಾಧಿಪತಿ ರಾಜಮೌಳಿ : ಚಿರಂಜೀವಿ

    ಸಿನಿಮಾ ಎನ್ನುವುದು ಧರ್ಮವಾದರೆ ಅದಕ್ಕೆ ಪೀಠಾಧಿಪತಿ ರಾಜಮೌಳಿ : ಚಿರಂಜೀವಿ

    ಅವಮಾನಗಳು ಒಬ್ಬರನ್ನು ಹೇಗೆಲ್ಲ ಕಾಡ್ತವೆ ಅನ್ನೋದನ್ನ ಹೇಳಬೇಕಿಲ್ಲ. ಸ್ಟಾರ್‍ಗಳಾದರೂ.. ಹಣ, ಖ್ಯಾತಿ ಎಲ್ಲ ಬಂದರೂ.. ಅನುಭವಿಸಿದ ಅವಮಾನಗಳು ಕಾಡುತ್ತಲೇ ಇರುತ್ತವೆ. ತೆಲುಗು ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ತಮ್ಮ ಆಚಾರ್ಯ ಚಿತ್ರದ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಅಂಥಾದ್ದೊಂದು ಅವಮಾನ ಅನುಭವಿಸಿದ ಕಥೆ ಹೇಳಿಕೊಂಡಿದ್ದಾರೆ.

    ಚಿರು ಹೇಳಿದ ಆ ಅವಮಾನದ ಕಥೆ : ನನಗೆ ರುದ್ರವೀಣಾ ಚಿತ್ರಕ್ಕೆ ನರ್ಗಿಸ್ ದತ್ ಚಿತ್ರ ಪ್ರಶಸ್ತಿ ಬಂದಿತ್ತು. ರಾಷ್ಟ್ರೀಯ ಪ್ರಶಸ್ತಿ. ತಮ್ಮ ನಾಗಬಾಬು ನಿರ್ಮಿಸಿದ್ದ ಚಿತ್ರವದು. ಖುಷಿಯಾಗಿಯೇ ದೆಹಲಿಗೆ ಹೋಗಿದ್ದೆ. ಅಲ್ಲಿ ಎಲ್ಲ ಕಡೆ ಕಲಾವಿದರ ಪೋಸ್ಟರ್ ಇಟ್ಟಿದ್ದರು. ಅಲ್ಲಿ ದಿಲೀಪ್ ಕುಮಾರ್, ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲ ಹಿಂದಿ ನಟರ ಪೋಸ್ಟರ್ ಇದ್ದವು. ಅವೆಲ್ಲವನ್ನೂ ನೋಡುತ್ತಾ ಖುಷಿಯಾಗಿಯೇ ಮುಂದೆ ಹೋದಾಗ ನಮ್ಮ ದಕ್ಷಿಣ ಭಾರತದ ಚಿತ್ರಗಳನ್ನು ನೋಡುವ ಕಾತುರವೂ ಇತ್ತು. ಆದರೆ..

    ಅಲ್ಲಿ ಇದ್ದದ್ದು ಎರಡೇ ಪೋಸ್ಟರ್. ಒಂದು ಎಂಜಿಆರ್ ಮತ್ತು ಜಯಲಲಿತಾ ನೃತ್ಯದ ಭಂಗಿಯಲ್ಲಿದ್ದ ಒಂದು ಪೋಸ್ಟರ್ ಮತ್ತು ಮತ್ತೊಂದು ಮಲಯಾಳಂನಲ್ಲಿ ಗಿನ್ನಿಸ್ ದಾಖಲೆ ಬರೆದಿರುವ ನಟ ಪ್ರೇಮ್ ನಜೀರ್ ಅವರ ಪೋಸ್ಟರ್. ಅಷ್ಟೇನಾ ಸೌಥ್ ಸಿನಿಮಾ ಎನ್ನಿಸಿತ್ತು. ಅಲ್ಲಿ ಕನ್ನಡ ಕಂಠೀರವ ಡಾ.ರಾಜಕುಮಾರ್, ವಿಷ್ಣುವರ್ಧನ್ ಫೋಟೋ ಇರಲಿಲ್ಲ. ನಮ್ಮ ಎನ್‍ಟಿಆರ್, ನಾಗೇಶ್ವರ ರಾವ್, ಶಿವಾಜಿ ಗಣೇಶನ್.. ಯಾರೊಬ್ಬರ ಫೋಟೋಗಳೂ ಇರಲಿಲ್ಲ. ನಂತರ ಚೆನ್ನೈಗೆ ಬಂದು ಪ್ರೆಸ್‍ಮೀಟ್ ಮಾಡಿ ಅದೆಲ್ಲವನ್ನೂ ಹೇಳಿದೆ. ಆದರೆ.. ಅದಕ್ಕೆ ಕನಿಷ್ಠ ಪ್ರತಿಕ್ರಿಯೆಯೂ ಯಾರಿಂದಲೂ ಬರಲಿಲ್ಲ.

    ರಾಜಮೌಳಿ ಗರ್ವದಿಂದ ತಲೆಯೆತ್ತುವಂತೆ ಮಾಡಿದ್ದಾರೆ : ಆ ಅವಮಾನದ ಕಥೆ ಹಾಗೆಯೇ ಇತ್ತು. ಅದಾದ ನಂತರ ಈಗ ಅವರೆಲ್ಲರನ್ನೂ ನಮ್ಮ ತೆಲುಗು ಚಿತ್ರರಂಗದತ್ತ ನೋಡುತ್ತಿದ್ದಾರೆ. ರಾಜಮೌಳಿ ಈಗ ದಕ್ಷಿಣ ಭಾರತದ ಸಿನಿಮಾ ರಂಗವನ್ನು ಗರ್ವದಿಂದ ತಲೆಯೆತ್ತುವಂತೆ ಮಾಡಿದ್ದಾರೆ. ಈಗ ನಾವು ನೋಡುತ್ತಿರೋದು ಇಂಡಿಯನ್ ಸಿನಿಮಾ. ಸಿನಿಮಾ ಎನ್ನುವುದು ಧರ್ಮ ಎನ್ನುವುದಾದರೆ ಆ ಧರ್ಮಕ್ಕೆ ಪೀಠಾಧಿಪತಿ ರಾಜಮೌಳಿ.

    ಅವರೆಲ್ಲರನ್ನೂ ಅಭಿನಂದಿಸಿದ ಚಿರು : ರಾಜಮೌಳಿ ಅಷ್ಟೇ ಅಲ್ಲ, ದಕ್ಷಿಣ ಭಾರತ ಚಿತ್ರರಂಗ ಪುಷ್ಪ ಮಾಡಿದೆ. ಕೆಜಿಎಫ್ ಮಾಡಿದೆ. ಸುಕುಮಾರ್, ಪ್ರಶಾಂತ್ ನೀಲ್, ಅಲ್ಲು ಅರ್ಜುನ್, ರಾಮ್ ಚರಣ್, ಪ್ರಭಾಸ್, ಯಶ್ ಎಲ್ಲರೂ ಈಗ ಪ್ಯಾನ್ ಇಂಡಿಯಾ ಸ್ಟಾರ್‍ಗಳೇ. ನಿಜವಾದ ಇಂಡಿಯನ್ ಸಿನಿಮಾಗಳಿವು.