ಭರಾಟೆ. ಶ್ರೀಮುರಳಿ-ಚೇತನ್ ಕುಮಾರ್ ಕಾಂಬಿನೇಷನ್ ಸಿನಿಮಾ. ಈ ಚಿತ್ರದ ನಾಯಕಿ ಶ್ರೀಲೀಲಾ. ಅವರಿಗೆ ಇದು 2ನೇ ಸಿನಿಮಾ. ಮೊದಲ ಸಿನಿಮಾ ಕಿಸ್. ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವಾಗಲೇ 2ನೇ ಚಿತ್ರ ಸಿಕ್ಕಿದೆ. ಅದೂ ಶ್ರೀಮುರಳಿ ಜೊತೆ ನಾಯಕಿಯಾಗಿ. ಅದಕ್ಕಿಂತ ಬೆರಗು ಹುಟ್ಟಿಸುವುದು ಶ್ರೀಲೀಲಾರ ಸಾಧನೆಗಳು.
ಶ್ರೀಲೀಲಾ ಮೂರೂವರೆ ವರ್ಷದ ಹುಡುಗಿಯಾಗಿದ್ದಾಗಿನಿಂದ ಶಾಸ್ತ್ರೀಯ ಸಂಗೀತ, ನೃತ್ಯದ ತರಬೇತಿ ಪಡೆದಿದ್ದಾರೆ. ಬ್ಯಾಲೆ ನೃತ್ಯದ ತರಬೇತಿಯೂ ಆಗಿದೆ. 8ನೇ ವಯಸ್ಸಿಗೇ ರಂಗ ಪ್ರವೇಶ ಮಾಡಿರುವ ಶ್ರೀಲೀಲಾ, ಸತತ ಎರಡೂವರೆ ಗಂಟೆ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ್ದಾರೆ.
ಶ್ರೀಲೀಲಾ ಕುದುರೆ ಸವಾರಿ ಚೆನ್ನಾಗಿ ಮಾಡ್ತಾರೆ. ಈಜಿಗೆ ಬಿದ್ದರೆ ಮೀನಿನಂತೆ ಈಜುತ್ತಾರೆ. ರನ್ನಿಂಗ್ ರೇಸ್‍ನಲ್ಲಿ ಕಾಲೇಜಿಗೆ ಹಲವು ಪದಕಗಳನ್ನು ಗೆದ್ದು ಕೊಟ್ಟಿರುವ ಕೀರ್ತಿ ಶ್ರೀಲೀಲಾಗೆ ಇದೆ. ಹಾಕಿ ಸ್ಟಿಕ್ ಆಡಿದರೆ, ಅಲ್ಲಿಯೂ ಸೈ ಎನ್ನಿಸಿಕೊಳ್ತಾರೆ ಶ್ರೀಲೀಲಾ.
ಇಷ್ಟೆಲ್ಲ ಆಡ್ತಾರೆ ಅಂದ್ರೆ, ಓದಿನಲ್ಲಿ ಡಲ್ ಇರಬೇಕು ಅಂದ್ಕೊಂಡ್ರಾ.. ನೋ ಚಾನ್ಸ್. ಶ್ರೀಲೀಲಾ ಅವರ ಮಾರ್ಕುಗಳಲ್ಲಿ ಅತೀ ಕಡಿಮೆ 100/85. ಶೇ.85ಕ್ಕಿಂತ ಕಡಿಮೆ ಮಾರ್ಕು ತೆಗೆದವರೇ ಅಲ್ಲ ಶ್ರೀಲೀಲಾ.
ನಿಮಗೆ ಎ.ಬಿ.ಡಿವಿಲಿಯರ್ಸ್ ನೆನಪಾದ್ರಾ..? ಅವರೂ ಹಾಗೇ.. ಕ್ರಿಕೆಟ್, ಆಥ್ಲೆಟ್, ಕುಸ್ತಿ ಪಟು, ರಗ್ಬಿ, ಈಜು, ಬೇಸ್‍ಬಾಲ್, ಸಿಂಗರ್, ಮ್ಯೂಸಿಕ್ ಡೈರೆಕ್ಟರ್ ಎಲ್ಲವೂ ಆಗಿರುವವರು. ಸ್ಸೋ.. ಶ್ರೀಲೀಲಾರನ್ನು ಚಿತ್ರಂಗದ ಎಬಿಡಿ ಅನ್ನಬಹುದೇನೋ..