` srimurali, - chitraloka.com | Kannada Movie News, Reviews | Image

srimurali,

  • Script Pooja For Murali's New Film 'Bharaate' Held

    script pooje for bharathe held

    Murali's new film 'Bharaate' being directed by 'Bahaddur' Chethan is all set to be launched soon. Meanwhile, the script pooja was done on Monday in Bangalore.

    The script pooja was a low key affair and was held at the Panchamukhi Anjaneya Temple in Chandra Layout. Actors Murali and Srileela, director Chethan Kumar, cinematographer Bhuvan Gowda, producer Supreeth and others were present at the occasion.

    Chethan Kumar himself has scripted the film apart from directing it. Supreeth who had distributed many films including 'Bharjari' is the producer. Srileela is the heroine of the film.

  • Second Lyrical Video Of 'Bharaate' Released

    second lyrical video of bharaate released

    The second lyrical video of 'Bharaate' called 'Yo Yo' was released on Thursday through the Anand Audio channel of You Tube.

    The first song of the film was released by actor Murali in Switzerland last month. The second lyrical video was released at the Anjaneya Temple in Nagasandra Circle in Bangalore. The song is already trending in You Tube and is getting good response all over. Vijayprakash has sung the song composed by Arjun Janya. The team was present during the launch of the song.

    'Bharaate' is being directed by 'Bahaddur' Chethan and produced by Supreeth. Murali, Srileela, Saikumar, Ayyappa and Ravishankar play prominent roles. 'Bharaate' is expected to hit the screens in the month of October.

  • Shivarajakumar Lends Voice To 'Bharaate'

    shivarajkumar lends voice to bharaate

    Actor Puneeth Rajkumar had earlier lent his voice to Chethan's debut film 'Bahaddur'. Darshan had given commentary to his second film 'Bharjari'. Now Shivarajakumar has given commentary to his latest directorial 'Bharaate'.

    On Saturday, Shivarajakumar lent his voice to 'Bharaate'. Shivarajakumar will be introducing the characters of the film through his commentary.

    'Bharaate' is being produced by Supreeth and this is his first film as a producer. Srileela is the heroine of the film. Brothers Saikumar, Ayyappa and Ravishankar is seen in prominent roles. Arjun Janya is the music director, while Bhuvan Gowda is the cameraman.

  • Shivarajakumar To Act With Murali In A New Film

    murali shivrajkumar image

    Actor Shivarajakumar has signed yet another film and this time the 'Century Star' will be acting along with his cousin Murali in a new untitled film to be produced by Jayanna and Bhogendra. Earlier, Shivarajakumar had acted with Vijay Raghavendra in 'Rishi' and 'Srikanta'.

    Now he is acting with Vijay's brother Murali in the new film. Murali himself has confirmed this in his Facebook page that Shivarajakumar will be acting with him in the new film.

    'Couldn't have asked anything Bigger than this. I'm the Happiest... and yesss... next'uh... Namm Shivanna (My Maama) Jothe'. Title will be announced soon... thanks for ur patience. Nimma SriiMurali. JaiiiiHind. JaiiiiBhuwaneshwari.

  • Srimurali Is Now "Madagaja" 

    srimurali is now madagaja

    Director Mahesh has called the first press meet of "Madagaja". Mahesh has announced his new film starring Srimurali and produced by Hebbuli fame Umapathi. The official announcement of the film will be made at 2 pm today in a press meet. 

    madagaja_2.jpgMahesh Kumar made his debut as a director with Ayogya starring Ninasam Sathish. The film became a success and opened the doors for more films for Mahesh. The invite for his new film has come from him directly. Another title of the same name Madagaja was registered by producer Praveen Kumar two years ago for Darshan.

  • Ugramm 2 Will Definitely Happen: Srii Murali

    ugramm 2 will definately happen

    Roaring Star Srii Murali who is basking in the success of 'Bharaate', has revealed that Ugramm 2 is definitely on the cards, and it will happen soon after Madaghaja and director Prashanth Neel's present commitments including KGF second chapter followed with the Telugu project.

    "Ugramm gave me a new image. Myself and Prashanth Neel had decided to do a sequel to it. But when we planned to do it after sometime, Prashanth got busy with KGF. After KGF, Prashanth has a Telugu project and I will be busy with 'Madhagaja'. Once we are done with these, Ugramm 2 will definitely happen," says Srii Murali.

  • ಅಕ್ಟೋಬರ್ 18ಕ್ಕೆ ರೋರಿಂಗ್ ಉತ್ಸವದ್ದೇ ಭರಾಟೆ

    bharaate roaring festival on oct 18th

    ಶ್ರೀಮುರಳಿ ಅಭಿನಯದ ಭರಾಟೆಗೆ ಅದೆಂಥಾ ಓಪನಿಂಗ್ ಕೊಡೋಕೆ ಅಭಿಮಾನಿಗಳು ಮುಂದಾಗಿದ್ದಾರೆ ಎಂದರೆ, ಊಹೆಗೂ ನಿಲುಕದ ರೀತಿಯಲ್ಲಿ. ಆ ದಿನ ಭರಾಟೆ ರಿಲೀಸ್ ಆಗುತ್ತಿದೆ. ಅದು ನಭೂತೋ ನಭವಿಷ್ಯತಿ ಎಂಬಂತೆ ಹಬ್ಬವಾಗುತ್ತಿದೆ. ಸುಮ್ಮನೆ ಅಂದಿನ ಭರಾಟೆ ಉತ್ಸವದ ವಿಶೇಷಗಳನ್ನೊಮ್ಮೆ ನೋಡಿ.

    ಭರಾಟೆ ಉತ್ಸವ ಸ್ಪೆಷಲ್ ನಂ.1 :

    ವೀರಗಾಸೆ, ಡೊಳ್ಳು ಕುಣಿತ, ನಗಾರಿ, ತಮಟೆಗಳ ಭರಾಟೆಯೊಂದಿಗೆ ಶ್ರೀಮುರಳಿಯನ್ನು ಹೂವಿನ ಸುರಿಮಳೆಯಲ್ಲಿ ನರ್ತಕಿ ಚಿತ್ರಮಂದಿರಕ್ಕೆ ಕರೆತರಲಾಗುವುದು

    ಭರಾಟೆ ಉತ್ಸವ ಸ್ಪೆಷಲ್ ನಂ.2 :

    ಪಟಾಕಿ, ಸಿಡಿಮದ್ದುಗಳು ಕಿವಿಗಡಚಿಕ್ಕುವಂತೆ ಸದ್ದು ಮಾಡಲಿವೆ

    ಭರಾಟೆ ಉತ್ಸವ ಸ್ಪೆಷಲ್ ನಂ.3 :

    ಸಿನಿಮಾ ನೋಡಲು ಬಂದ ಅಭಿಮಾನಿಗಳು ಊಟಕ್ಕೆ ಪರದಾಡಬೇಕಿಲ್ಲ. ಇಡೀ ದಿನ ಅನ್ನಸಂತರ್ಪಣೆ ಇದೆ.

    ಭರಾಟೆ ಉತ್ಸವ ಸ್ಪೆಷಲ್ ನಂ.4 :

    ಶ್ರೀಮುರಳಿಯವರ 82 ಅಡಿ ಕಟೌಟ್ ಮಾಡಲಾಗಿದೆ. ಅದಕ್ಕೆ ಭಾರಿ ಹೂವಿನ ಹಾರ ಹಾಕುವ ಕಾರ್ಯಕ್ರಮವೂ ಇದೆ.

    ಭರಾಟೆ ಉತ್ಸವ ಸ್ಪೆಷಲ್ ನಂ.5 :

    ಲಡ್ಡು, ಮೈಸೂರ್ ಪಾಕ್ ಸಿಹಿ ವಿತರಣೆ ಇದೆ

    ಭರಾಟೆ ಉತ್ಸವ ಸ್ಪೆಷಲ್ ನಂ.6 :

    ಶ್ರೀಮುರಳಿ, ಶ್ರೀಲೀಲಾ, ಭರ್ಜರಿ ಚೇತನ್ ಹಾಗೂ ನಿರ್ಮಾಪಕ ಸುಪ್ರೀತ್ ಅವರು 25 ಕೆಜಿ ತೂಕದ ಕೇಕ್ ಕಟ್ ಮಾಡಿ ಸಂಭ್ರಮಿಸಲಿದ್ದಾರೆ

    ಇದೆಲ್ಲವೂ ಆ ದಿನ ಬೆಳಗ್ಗೆ 9ರಿಂದಲೇ ಶುರುವಾಗಲಿದೆ.

     

  • ಅರೆರೆ.. ಏನಿದು.. ಒಂದೇ ಕಡೆ ಕಿಚ್ಚ, ಶ್ರೀಮುರಳಿ, ಧ್ರುವ, ಮಹೇಶ್ ಬಾಬು, ಸುನಿಲ್ ಶೆಟ್ಟಿ..!

    stars come under one roof

    ಕಿಚ್ಚ ಸುದೀಪ್ ಜೊತೆ ಶ್ರೀಮುರಳಿ, ತಾರಾ, ಸುನಿಲ್ ಶೆಟ್ಟಿ ಜೊತೆ ಶ್ರೀಮುರಳಿ, ಧ್ರುವ ಸರ್ಜಾ ಜೊತೆ ರೋರಿಂಗ್ ಸ್ಟಾರ್, ಮಹೇಶ್ ಬಾಬು ಜೊತೆ, ಸುನಿಲ್ ಶೆಟ್ಟಿ ಜೊತೆ.. ಎಲ್ಲೆಲ್ಲೂ ಕನ್ನಡ ಸ್ಟಾರುಗಳೇ..

    ಏನಿದು.. ಇವರೆಲ್ಲ ಏನು ಒಟ್ಟಿಗೇ ಸಿನಿಮಾ ಮಾಡ್ತಿದ್ದಾರಾ.. ಅಂದ್ಕೋಬೇಡಿ. 

    ರಾಮೋಜಿ ಫಿಲಂ ಸಿಟಿಯಲ್ಲಿ ಕನ್ನಡ ಸ್ಟಾರ್ಸ್ ಸಮಾಗಮವಾಗಿದೆ. ಸುದೀಪ್ ಅಭಿನಯದ ಪೈಲ್ವಾನ್, ಶ್ರೀಮುರಳಿಯ ಭರಾಟೆ, ಧ್ರುವ ಸರ್ಜಾರ ಪೊಗರು, ಮಹೇಶ್ ಬಾಬುರ ಮಹರ್ಷಿ ಚಿತ್ರಗಳು ಅಕ್ಕ ಪಕ್ಕದಲ್ಲಿಯೇ ಶೂಟಿಂಗ್ ಆಗುತ್ತಿವೆ. ಅವರ ಬಳಿ ಇವರು, ಇವರ ಬಳಿ ಅವರು ಅಪ್ಪಟ ಗೆಳೆಯರಂತೆ ಒಡನಾಡಿಕೊಂಡು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. 

  • ಏನ್ ಡೈಲಾಗ್ ಭರಾಟೆ ಸಿವಾ

    bharaate dialogue special

    ಭರಾಟೆ ಟ್ರೇಲರ್ ಹೊರಬಿದ್ದಿದೆ. ಮೇಕಿಂಗ್, ಅದ್ಧೂರಿತನ, ಮೈ ಝುಮ್ ಎನ್ನಿಸುವ ಸಾಹಸ, ಶ್ರೀಮುರಳಿ ಖಡಕ್ ಲುಕ್ಕು.. ಖಳ ನಾಯಕರ ಮಾತಿನಲ್ಲೇ ಕೊಲ್ಲುವ ಮಾತಿನ ಗತ್ತು.. ಇವೆಲ್ಲದರ ಕಿಮ್ಮತ್ತು ಹೆಚ್ಚಿಸಿರುವುದು ಡೈಲಾಗ್ಸ್.

    ಶ್ರೀಮುರಳಿ.. ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ.. ಈ ಮೂವರದ್ದೂ ಅದ್ಭುತ ಬೇಸ್ ವಾಯ್ಸ್. ಅದಕ್ಕೆ ತಕ್ಕಂತೆ ಖಡಕ್ ಡೈಲಾಗುಗಳೂ ಇದ್ದುಬಿಟ್ಟರೆ.. ಭರ್ಜರಿ ಚೇತನ್ ಗೆದ್ದಿರೋದೇ ಅಲ್ಲಿ. ಟ್ರೇಲರ್ ಹವಾ ಸೃಷ್ಟಿಸಿದೆ. ಸುಪ್ರೀತ್ ಮುಖದಲ್ಲಿ ನಗು ಅರಳುತ್ತಿದೆ.

    ಭರಾಟೆ ಹೈವೋಲ್ಟೇಜ್ ಆ್ಯಕ್ಷನ್ ಸಿನಿಮಾ. ಇಲ್ಲಿ ಶ್ರೀಮುರಳಿಗೆ ಶ್ರೀಲೀಲಾ ಜೋಡಿ. ಚಿತ್ರ ಇದೇ ತಿಂಗಳು ರಿಲೀಸ್ ಆಗಲಿದೆ. ಶ್ರೀಮುರಳಿ ಚಿತ್ರದ ಟ್ರೇಲರ್ ರಿಲೀಸ್‍ಗೆ ಬಂದಿದ್ದ ನಟರು, ನಿರ್ದೇಶಕರು ವೇದಿಕೆ ಮೇಲೆ ಸ್ಟೆಪ್ ಹಾಕಿ ಟ್ರೇಲರ್‍ಗೆ ವೆಲ್‍ಕಂ ಹೇಳಿದ್ದು ಸ್ಪೆಷಲ್ ಆಗಿತ್ತು.

  • ಒಂದಲ್ಲ.. ಎರಡು ಮರ್ಸಿಡಿಸ್ ಬೆಂಜ್ ಖರೀದಿಸಿದ ಶ್ರೀಮುರಳಿ 

    srimurali buys two mercedes benz

    ಮರ್ಸಿಡಿಸ್ ಬೆಂಜ್... ಒಂದು ಕಾರು ಖರೀದಿಸೋದೇ ಎಷ್ಟೋ ಜನರ ಕನಸು. ಅಂಥದ್ದರಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ, ಒಂದೇ ಸಲ ಎರಡು ಮರ್ಸಿಡಿಸ್ ಬೆಂಜ್ ಖರೀದಿಸಿದ್ದಾರೆ. ಒಂದು ಬಿಳಿ ಬಣ್ಣದ ಬೆಂಜ್ ಕಾರಾದರೆ, ಇನ್ನೊಂದು ಆಕಾಶ ನೀಲಿ ಬಣ್ಣದ್ದು. ಅಫ್‍ಕೋರ್ಸ್.. ಅದಕ್ಕೆ ಕಾರಣವೂ ಇದೆ.

    ಅವರ ಪತ್ನಿ ವಿದ್ಯಾಗೆ ಒಂದು ಕಾರ್‍ನ್ನು ಗಿಫ್ಟ್ ಕೊಡಬೇಕು ಎನ್ನುವುದು ಶ್ರೀಮುರಳಿ ಕನಸಾಗಿತ್ತು. ಆ ಕನಸು ಈಗ ಈಡೇರಿದೆ. ನೇವಿ ಬ್ಲೂ ಬೆಂಜ್‍ನ್ನು ಪತ್ನಿಗೆ ಗಿಫ್ಟ್ ಆಗಿ ಕೊಡುತ್ತಿರುವ ಶ್ರೀಮುರಳಿ, ವೈಟ್ ಬೆಂಜ್‍ನ್ನು ತಾವು ಇಟ್ಟುಕೊಳ್ಳಲಿದ್ದಾರಂತೆ.

  • ಕಬ್ಬಿನ ಜಲ್ಲೆಯ ಜ್ವಾಲೆಯಲ್ಲಿ ಶ್ರೀಮುರಳಿ ಫೈಟಿಂಗ್ ಭರಾಟೆ..

    bharaate fighting scene complete

    ರಾಜ್ಯ ಸರ್ಕಾರವನ್ನು ಕಬ್ಬಿನ ಜಲ್ಲೆಯ ಬೆಂಕಿ ಸುಡುತ್ತಿದೆ. ಸಕ್ಕರೆ ರಾಜಕೀಯಕ್ಕೆ ರೈತರು ಕಣ್ಣೀರಿಡುತ್ತಿದ್ದಾರೆ. ಕಬ್ಬು ಬೆಳೆಗಾರರು ಆಕ್ರೋಶಗೊಂಡಿದ್ದಾರೆ. ಈ ನಡುವೆಯೇ ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ 70 ಖಳರೊಂದಿಗೆ ಶ್ರೀಮುರಳಿ ಫೈಟ್ ಮಾಡಿದ್ದಾರೆ. ಹಾಗಂತ.. ರೈತರ ಪ್ರತಿಭಟನೆಗೂ, ಶ್ರೀಮುರಳಿಗೂ ಸಂಬಂಧವೇನಿಲ್ಲ. ಇದು ಭರಾಟೆ ಚಿತ್ರದ ಫೈಟಿಂಗ್ ಸೀನ್ ಚಿತ್ರೀಕರಣ.

    ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ 70ಕ್ಕೂ ಹೆಚ್ಚು ಖಳರೊಂದಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹೊಡೆದಾಡಿದ್ದಾರೆ. ಇದೊಂದು ಸಾಹಸ ದೃಶ್ಯದ ಚಿತ್ರೀಕರಣಕ್ಕೇ 60 ಲಕ್ಷ ರೂ. ಖರ್ಚಾಗಿದೆಯಂತೆ. ಬಹದ್ದೂರ್ ಚೇತನ್ ನಿರ್ದೇಶನದ ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶಕ. ಇದರೊಂದಿಗೆ ಭರಾಟೆ 2ನೇ ಹಂತದ ಚಿತ್ರೀಕರಣ ಮುಗಿಸಿದೆ. ಚಿತ್ರವನ್ನು ಏಪ್ರಿಲ್‍ನಲ್ಲಿ ತೆರೆಗೆ ತರುವ ಪ್ಲಾನ್‍ನಲ್ಲಿದೆ ಭರಾಟೆ ಟೀಂ. ಸುಪ್ರೀತ್ ನಿರ್ಮಾಣದ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ.

  • ಕೆಜಿಎಫ್ ಮುಗಿದ ಕೂಡ್ಲೇ ಉಗ್ರಂ ವೀರಂ

    after kgf its ugram veeram

    ಉಗ್ರಂ. ಕನ್ನಡಕ್ಕೆ ಪ್ರಶಾಂತ್ ನೀಲ್ ಅವರನ್ನು ನಿರ್ದೇಶಕರನ್ನಾಗಿ ಪರಿಚಯಿಸಿದ ಸಿನಿಮಾ. ಈಗ ಪ್ರಶಾಂತ್ ನೀಲ್, ಇಡೀ ದೇಶವೇ ತಿರುಗಿ ನೋಡುವಂತಾ ಕೆಜಿಎಫ್ ಸಿನಿಮಾ ರೆಡಿ ಮಾಡಿದ್ದಾರೆ. ಕೆಜಿಎಫ್ ಮುಗಿದ ನಂತರ ಮಂದೇನು ಎನ್ನುವ ಪ್ರಶ್ನೆಗೆ ಈಗ ಉಗ್ರಂ ವೀರಂ ಎನ್ನುವ ಉತ್ತರ ಸಿಕ್ಕಿದೆ.

    ಉಗ್ರಂ ಹೀರೋ ಶ್ರೀಮುರಳಿಯೇ, ಉಗ್ರಂ ವೀರಂ ಚಿತ್ರಕ್ಕೆ ಹೀರೋ. ಕಥೆ ಅಥವಾ ಉಳಿದ ಯಾವುದೇ ವಿಷಯದ ಬಗ್ಗೆ ಈಗಲೇ ಏನೂ ಹೇಳೋಕಾಗಲ್ಲ. ಪ್ರಶಾಂತ್, ಸದ್ಯಕ್ಕೆ ಕೆಜಿಎಫ್ ರಿಲೀಸ್ ಬ್ಯುಸಿಯಲ್ಲಿದ್ದಾರೆ. ಉಗ್ರಂ ಬೆನ್ನಲ್ಲೇ ಉಗ್ರಂ ವೀರಂ ಸ್ಕ್ರಿಪ್ಟ್ ಕೆಲಸ ಶುರುವಾಗಿತ್ತು. ಕಥೆ ಫೈನಲ್ ಆಗಿದೆ ಎಂದಿದ್ದಾರೆ ಶ್ರೀಮುರಳಿ.

    ಕೆಜಿಎಫ್ ರಿಲೀಸ್ ಸೆಲಬ್ರೇಷನ್ ನೋಡಿ ಸಂಭ್ರಮವಾಗ್ತಿದೆ. ನಾವು ಅಂದುಕೊಂಡಂತೆಯೇ ನಡೆಯುತ್ತಿದೆ. ಪ್ರಶಾಂತ್ ಕನಸು ನನಸಾಗುತ್ತಿದೆ. ಅದನ್ನು ನೋಡಿಯೇ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ ಶ್ರೀಮುರಳಿ.

  • ಗಣೇಶ ಹಬ್ಬಕ್ಕೊಂದು ಹಾಡು ಕೊಟ್ಟ ಭರಾಟೆಗೆ ಥ್ಯಾಂಕ್ಯೂ

    bharaate song is super hit

    ಭರಾಟೆ ಸಿನಿಮಾ ತಂಡ ವರಮಹಾಲಕ್ಷ್ಮಿ ಹಬ್ಬಕ್ಕೆ ಹಾಡು ರಿಲೀಸ್ ಮಾಡಿತ್ತು. ಅಷ್ಟೇ ಅಲ್ಲ, ಹಾಡಿನ ಆದಾಯವನ್ನು ಪ್ರವಾಹ ಪೀಡಿತರಿಗೆ ಬಳಸುವುದಾಗಿ ಘೋಷಿಸಿತ್ತು. ಈಗ `ಭರ ಭರ ಭರಾಟೆ.. ಹಾಡು ಸಂಚಲನವನ್ನೇ ಸೃಷ್ಟಿಸಿಬಿಟ್ಟಿದೆ. ಇದು ಎಲ್ಲ ದುಃಖಿತರಿಗೆ ಅರ್ಪಣೆ ಎಂದೇ ಶುರುವಾಗುವ ಹಾಡು ಮೋಡಿ ಮಾಡಿದೆ.

    ಹಾಡಿರೋದು ಸ್ವತಃ ಶ್ರೀಮುರಳಿ. ಸಾಹಿತ್ಯ ನಿರ್ದೇಶಕ ಚೇತನ್ ಕುಮಾರ್ ಅವರದ್ದು. ಅರ್ಜುನ್ ಜನ್ಯ ಮ್ಯೂಸಿಕ್ಕಿದೆ. ಶ್ರೀಮುರಳಿಗೆ ಚಿತ್ರದಲ್ಲಿ ಶ್ರೀಲೀಲಾ ಜೋಡಿ. ಆದರೆ ಈ ಹಾಡಿನಲ್ಲಿ ರೋರಿಂಗ್ ಸ್ಟಾರ್ ಜೊತೆ ಹೆಜ್ಜೆ ಹಾಕಿರೋದು ಡಿಂಪಲ್ ಕ್ವೀನ್. 

    ಸುಪ್ರೀತ್ ನಿರ್ಮಾಣದ ಬಹುಕೋಟಿ ಬಜೆಟ್‍ನ ಸಿನಿಮಾ ರಿಲೀಸ್‍ಗೆ ರೆಡಿಯಾಗುತ್ತಿದೆ. ಆದರೆ, ವರಮಹಾಲಕ್ಷ್ಮಿ ಹಬ್ಬದ ದಿನ ರಿಲೀಸ್ ಆದ ಈ ಹಾಡು ಗಣೇಶನ ಹಬ್ಬದ ಪೆಂಡಾಲ್‍ನಲ್ಲಿಕುಣಿಯೋಕೆ ಕೊಟ್ಟ ಒಳ್ಳೆ ಟಪ್ಪಾಂಗುಚ್ಚಿ ಎಂದು ರೋರಿಂಗ್ ಫ್ಯಾನ್ಸ್ ಥ್ಯಾಂಕ್ಸ್ ಹೇಳ್ತಿದ್ದಾರೆ.

  • ಚಂಬಲ್ ಚಿತ್ರಕ್ಕೀಗ ರೋರಿಂಗ್ ಪವರ್

    sri murali releases chambal's mass song

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ, ಧನುಷ್ ಅವರಿಂದ ಟೀಸರ್ ರಿಲೀಸ್, ನೆಟ್‍ಫ್ಲಿಕ್ಸ್‍ನವರಿಂದ 10 ಕೋಟಿ ಡಿಮ್ಯಾಂಡ್ ಬಂದರೂ ನೋ ಎಂದಿದ್ದ ಚಿತ್ರತಂಡ.. ಹೀಗೆ ಹಲವು ವಿಶೇಷತೆ ಇಟ್ಟುಕೊಂಡಿರುವ ಚಂಬಲ್ ಚಿತ್ರಕ್ಕೆ ಈಗ ರೋರಿಂಗ್ ಸ್ಟಾರ್ ಶ್ರೀಮುರಳಿ ಪವರ್ ಕೂಡಾ ಸಿಕ್ಕಿದೆ.

    ನೀನಾಸಂ ಸತೀಶ್ ಅವರ ಚಂಬಲ್ ಚಿತ್ರದ ಮಾಸ್ ಸಾಂಗ್‍ನ್ನು ರಿಲೀಸ್ ಮಾಡಿರುವ ಶ್ರೀಮುರಳಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ಕಥೆ ಸ್ಪೆಷಲ್ಲಾಗಿದೆ. ಹಾಡುಗಳಲ್ಲಿ ಜೋಶ್ ಇದೆ ಎಂದಿದ್ದಾರೆ ಶ್ರೀಮುರಳಿ.

    ನೀನಾಸಂ ಸತೀಶ್ ಅವರಿಗೆ ಸೋನು ಗೌಡ ನಾಯಕಿ. ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನದ ಸಿನಿಮಾ, ರಿಲೀಸ್‍ಗೆ ರೆಡಿಯಾಗಿದೆ.

  • ಜ.19ರ ಶುಕ್ರವಾರಕ್ಕೆ ಮಫ್ತಿ ಅರ್ಧಶತಕ

    mufti 50 days celebrations today

    ಬಾಕ್ಸಾಫೀಸ್‍ನಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಶಿವರಾಜ್ ಕುಮಾರ್, ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ಅರ್ಧಶತಕ ಬಾರಿಸುತ್ತಿದೆ. ನರ್ತನ್ ನಿರ್ದೇಶನದ ಚಿತ್ರ, ಅಭಿಮಾನಿಗಳಲ್ಲಿ ಥ್ರಿಲ್ ಮೂಡಿಸಿರುವುದು ನಿಜ. ಹೀಗಾಗಿ ಅಭಿಮಾನಿಗಳೆಲ್ಲ ಸೇರಿ ಶುಕ್ರವಾರ ಶಿವರಾಜ್ ಕುಮಾರ್ ಮನೆಯಲ್ಲೇ ಸಂಭ್ರಮಿಸಲು ನಿರ್ಧರಿಸಿದ್ದಾರೆ.

    ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ, ಶಿವರಾಜ್ ಕುಮಾರ್, ಶ್ರೀಮುರಳಿ, ಶಿವರಾಜ್ ಕುಮಾರ್ ಸೇನಾ ಸಮಿತಿ ಅಧ್ಯಕ್ಷ ಕೆ.ಪಿ.ಶ್ರೀಕಾಂತ್, ಗೌರವಾಧ್ಯಕ್ಷ ತ್ಯಾಗರಾಜ್, ರಾಜ್ಯಾಧ್ಯಕ್ಷ ಟಿ. ನಾರಾಯಣ್, ಎಂ. ಮಲ್ಲ, ಎಂ.ನಾಗರಾಜ್ ಸೇರಿದಂತೆ ಎಲ್ಲರೂ ಸಂಭ್ರಮಾಚರಣೆಯಲ್ಲಿ ಭಾಗವಹಿಸಲಿದ್ಧಾರೆ. 

    ಇಡೀ ಸಂಭ್ರಮದ ಮೂಲ ಸೃಷ್ಟಿಕರ್ತರು ಅಖಿಲ ಕರ್ನಾಟಕ ಡಾ.ಶಿವರಾಜ್ ಕುಮಾರ್ ಸೇವಾ ಸಮಿತಿ ಹಾಗೂ ಗಂಡುಗಲಿ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಕಾರ್ಯಕರ್ತರು, ಶಿವಣ್ಣನ ಅಭಿಮಾನಿಗಳು.

  • ಜೋಧ್‍ಪುರದಲ್ಲಿ ಆಟೋದಲ್ಲೇ ಶ್ರೀಮುರಳಿ ಭರಾಟೆ

    bharaate team bushy shooting in rajasthan

    ಭರಾಟೆ. ಶ್ರೀಮುರಳಿ, ಶ್ರೀಲೀಲಾ ಅಭಿನಯದ ಚಿತ್ರಕ್ಕೆ ಬಹದ್ದೂರ್ ಚೇತನ್ ನಿರ್ದೇಶನವಿದೆ. ಚಿತ್ರದ ಚಿತ್ರೀಕರಣ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆಯುತ್ತಿದೆ. ಇಡೀ ಚಿತ್ರತಂಡ ಜೋಧ್‍ಪುರ್‍ನಲ್ಲಿಯೇ ಬೀಡುಬಿಟ್ಟಿದೆ. 

    ಇದರ ಮಧ್ಯೆ ಶ್ರೀಮುರಳಿ ಸೇರಿದಂತೆ ಇಡೀ ಚಿತ್ರತಂಡ ಓಡಾಟಕ್ಕೆ ನೆಚ್ಚಿಕೊಂಡಿರುವುದು ಆಟೋ ರಿಕ್ಷಾಗಳನ್ನ. ಜೋಧ್‍ಪುರದಲ್ಲಿ ಕಾರುಗಳ ಸಂಖ್ಯೆ ಕಡಿಮೆ. ಹೀಗಾಗಿ ಒಂದಿಷ್ಟು ಆಟೋಗಳನ್ನು ಬುಕ್ ಮಾಡಿಕೊಂಡು ಇಡೀ ಚಿತ್ರತಂಡ ಆಟೋಗಳಲ್ಲಿಯೇ ಓಡಾಡುತ್ತಿದೆ.

    ಜೈಪುರದ ಬಿಸಿಲಿಗೆ ಹೊಂದಿಕೊಳ್ಳೋದು, ಬೆಂಗಳೂರಿನಿಂದ ಬಂದವರಿಗೆ ಸುಲಭದ ಮಾತಲ್ಲ. ಅಷ್ಟೊಂದು ಬಿಸಿಲು. ಆದರೂ ಚಿತ್ರೀಕರಣದ ಮಧ್ಯೆ ಬಿಸಿಲಿನತ್ತ ಗಮನ ಕೊಡೋಕೂ ಪುರುಸೊತ್ತಿಲ್ಲದಂತಾಗಿ ಹೋಗಿದೆ ಎಂದು ಹೇಳಿಕೊಂಡಿದ್ದಾರೆ ಶ್ರೀಮುರಳಿ.

  • ಟಿಕ್ ಟಾಕ್ ಪ್ರಿಯರೇ.. ಭರಾಟೆ ಹಾಡಿಗೆ ರೆಡಿಯಾಗಿ..

    bharathe image

    ಶ್ರೀಮುರಳಿ, ಶ್ರೀಲೀಲಾ ಅಭಿನಯದ ಹೊಸ ಚಿತ್ರ ಮಾರ್ಕೆಟಿಂಗ್‍ನಲ್ಲಿಯೂ ವಿಭಿನ್ನ ಹಾದಿಯಲ್ಲಿ ಹೆಜ್ಜೆಯಿಟ್ಟಿದೆ. ನಿರ್ದೇಶಕ ಚೇತನ್, ಡಿಜಿಟಲ್ ಪ್ರೇಕ್ಷಕರಿಗೆಂದೇ ಹೊಸ ಐಡಿಯಾ ಮಾಡಿದ್ದಾರೆ. ಅದು ಟಿಕ್ ಟಾಕ್ ಐಡಿಯಾ.

    ಚೇತನ್ ಕುಮಾರ್ ಅವರೇ ಬರೆದಿದ್ದ ಏನಮ್ಮಿ.. ಏನಮ್ಮಿ.., ಶ್ಯಾನೇ ಟಾಪಾಗವ್ಳೆ.. ಹಾಡುಗಳು ಟಿಕ್ ಟಾಕ್‍ನಲ್ಲಿ ಹವಾ ಎಬ್ಬಿಸಿದ್ದವು. ಈಗ ಟಿಕ್ ಟಾಕ್ ಪ್ರಿಯರಿಗಾಗಿಯೇ ಒಂದು ಹಾಡು ಬಿಡುಗಡೆ ಮಾಡುತ್ತಿದ್ದಾರೆ ನಿರ್ದೇಶಕ ಚೇತನ್. ಒನ್ಸ್ ಎಗೇಯ್ನ್ ಈ ಹಾಡನ್ನೂ ವಿಜಯ್ ಪ್ರಕಾಶ್ ಅವರೇ ಹಾಡಲಿದ್ದಾರೆ. ಇದು ಯೋ ಯೋ.. ಹಾಡು. 

  • ದರ್ಶನ್ ಮದಗಜ ಆಗ್ತಾರಾ..?

    madagaja title controversy

    ಶ್ರೀಮುರಳಿ ಅವರ ನಾಯಕತ್ವದಲ್ಲಿ, ಶ್ರೀಮುರಳಿ ಮದಗಜ ಅನ್ನೋ ಟೈಟಲ್‍ನಲ್ಲಿ ಸಿನಿಮಾ ಮಾಡೋದಾಗಿ ನಿರ್ದೇಶಕ ಮಹೇಶ್ ಕುಮಾರ್ ಹೇಳಿಕೊಂಡ ಬೆನ್ನಲ್ಲೇ ಇತ್ತ ದರ್ಶನ್ ಅವರ ಹೆಸರಲ್ಲಿ ಮದಗಜ ಸಿನಿಮಾ ಮಾಡೋದಾಗಿ ನಿರ್ಮಾಪಕ ಪ್ರವೀಣ್ ಕುಮಾರ್ ಹೇಳಿಕೊಂಡಿದ್ದಾರೆ. ಶ್ರೀಮುರಳಿ ಮದಗಜ ಸಿನಿಮಾಕ್ಕೆ ಹೆಬ್ಬುಲಿ ಉಮಾಪತಿ ನಿರ್ಮಾಪಕರಾದರೆ, ದರ್ಶನ್ ಮದಗಜ ಸಿನಿಮಾಗೆ ಎಂ.ಜಿ.ರಾಮಮೂರ್ತಿ ನಿರ್ಮಾಪಕರು.

    ಮದಗಜ ಟೈಟಲ್ ರಿಜಿಸ್ಟರ್ ಮಾಡಿಸಿದ್ದವರು ಎಂ.ಜಿ.ರಾಮಮೂರ್ತಿ. ದರ್ಶನ್ ಹೀರೋ ಆಗಿ ಅಭಿನಯಿಸಿದ ಮೊದಲ ಸಿನಿಮಾ ಮೆಜೆಸ್ಟಿಕ್ ನಿರ್ಮಾಪಕ.  ಆ ನಂತರ ದರ್ಶನ್ ಅವರನ್ನೇ ಹಾಕಿಕೊಂಡು ಧರ್ಮ ಚಿತ್ರ ನಿರ್ಮಿಸಿದ್ದ ಎಂ.ಜಿ. ರಾಮಮೂರ್ತಿ, ಮದಗಜ ಅನ್ನೋ ಟೈಟಲ್‍ನ್ನು ದರ್ಶನ್ ಅವರಿಗಾಗಿಯೇ ರಿಜಿಸ್ಟರ್ ಮಾಡಿಸಿದ್ದರಂತೆ.

    ತಮ್ಮ ಮದಗಜ ಟೈಟಲ್‍ನ್ನು ಪ್ರವೀಣ್ ಕುಮಾರ್ ಅವರ ಬ್ಯಾನರ್‍ಗೆ ವರ್ಗಾಯಿಸಿದ್ದೆ ಎಂದಿರುವ ಎಂ.ಜಿ.ರಾಮಮೂರ್ತಿ, ಯಾವುದೇ ಕಾರಣಕ್ಕೂ ಟೈಟಲ್ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ದರ್ಶನ್ ಅವರನ್ನು ಹಾಕಿಕೊಂಡು ಮದಗಜ ಸಿನಿಮಾ ಮಾಡುತ್ತೇನೆ ಎಂದಿದ್ದಾರೆ. ದರ್ಶನ್ ಅವರಿಗೂ ಮದಗಜ ಟೈಟಲ್ ಬಗ್ಗೆ ಗೊತ್ತಿದೆಯಂತೆ. ಕಥೆ ಸಿದ್ಧವಾಗುತ್ತಿದೆಯಂತೆ.

  • ನಗ್ತಾರಂತೆ.. ನಗಿಸ್ತಾರಂತೆ.. ಭರಾಟೆ ಶ್ರೀಮುರಳಿ

    srimurali's different avatr in bharaate

    ಉಗ್ರಂ ನಂತರ ಶ್ರೀಮುರಳಿ ಲುಕ್ ಕಂಪ್ಲೀಟ್ ಚೇಂಜ್ ಆಗಿ ಹೋಯ್ತು. ಅದಾದ ಮೇಲೆ ಶ್ರೀಮುರಳಿ ಕೂಡಾ ಚ್ಯೂಸಿಯಾಗಿಬಿಟ್ರು. ಉಗ್ರಂ, ಐರಾವತ ಹಾಗೂ ಮಫ್ತಿಗಳಲ್ಲಿ ಕಂಡ ಶ್ರೀಮುರಳಿಯೇ ಬೇರೆ. ಮಾತು ಕಡಿಮೆ, ಕಣ್ಣಲ್ಲೇ ಕೊಲ್ಲುವ ನೋಟ, ಬೆಂಕಿಯುಂಡೆಯಂತಹ ಮಾತು.. ಚಂದ್ರಚಕೋರಿಯ ಮುಗ್ಧ ಪ್ರೇಮಿ ನಾಪತ್ತೆಯಾಗಿಬಿಟ್ಟಿದ್ದರು. ಆದರೆ ಭರಾಟೆಯಲ್ಲಿ ಅದೆಲ್ಲವನ್ನೂ ಹೊರತುಪಡಿಸಿದ ಶ್ರೀಮುರಳಿ ಕಾಣಿಸ್ತಾರಂತೆ.

    ಈ ಚಿತ್ರದಲ್ಲಿ ಶ್ರೀಮುರಳಿ ನಗ್ತಾರೆ, ನಗಿಸ್ತಾರೆ, ಅಳಿಸ್ತಾರೆ, ಸರಳವಾಗಿ ಹೇಳಬೇಕಂದರೆ ನವರಸಗಳನ್ನೂ ತೋರಿಸ್ತಾರೆ. ಇದು ಶ್ರೀಮುರಳಿಯ ವಿಭಿನ್ನ ಅವತಾರ. ಈ ಚಿತ್ರ ಅವರಿಗೆ ಬೇರೆಯದೇ ಇಮೇಜ್ ಕೊಡಲಿದೆ ಎನ್ನುತ್ತಾರೆ ನಿರ್ದೇಶಕ ಭರ್ಜರಿ ಚೇತನ್.

    ಭರಾಟೆ ಸಿನಿಮಾ ರಿಲೀಸ್ ಆಗೋಕೆ ರೆಡಿಯಾಗಿದ್ದು, ಶ್ರೀಮುರಳಿಗೆ ಶ್ರೀಲೀಲಾ ಜೋಡಿ. ಭರಾಟೆಯಲ್ಲಿ 47 ಜನ ಪೋಷಕ ನಟರಿದ್ದಾರೆ. ಸುಪ್ರೀತ್ ನಿರ್ಮಾಣದ ಅದ್ಧೂರಿ ಸಿನಿಮಾ, ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ.

  • ನನ್ನ ಹೊಟ್ಟೆ ಉರಿಯುವಂತೆ ಭರಾಟೆ ಹಿಟ್ ಆಗಬೇಕು - ದರ್ಶನ್ ಹಾರೈಕೆ

    darshan wishes sri murali in different way

    `ಸಾಮಾನ್ಯವಾಗಿ ನಾನು ಯಾರ ಚಿತ್ರವನ್ನು ನೋಡಿದರೂ ಹೊಟ್ಟೆ ಉರಿದುಕೊಳ್ಳಲ್ಲ. ಆದರೆ, ಉಗ್ರಂ ನೋಡಿದಾಗ ಹೊಟ್ಟೆ ಉರಿದಿತ್ತು. ಅದನ್ನು ಶ್ರೀಮುರಳಿಗೆ ಫೋನ್ ಮಾಡಿ ಹೇಳಿಕೊಂಡಿದ್ದಾರೆ. ಭರಾಟೆ ಚಿತ್ರವೂ ಅಷ್ಟೇ.. ನಾನು ಹೊಟ್ಟೆ ಉರಿದುಕೊಳ್ಳುವಷ್ಟು ಹಿಟ್ ಆಗಲಿ' ಭರಾಟೆ ಚಿತ್ರದ ಟ್ರೇಲರ್ ರಿಲೀಸ್ ವೇಳೆ ಚಾಲೆಂಜಿಂಗ್ ಸ್ಟಾರ್ ಇಂಥಾದ್ದೊಂದು ಮಾತು ಹೇಳಿದ್ದಾರೆ.

    ಇಂಥಾದ್ದೊಂದು ವಿಶೇಷ ಹಾರೈಕೆ ಮಾಡಿದ ದರ್ಶನ್, ಭರಾಟೆ ಚಿತ್ರದ ನಿರ್ದೇಶಕ ಚೇತನ್‍ರನ್ನು ಹೊಗಳಿದ್ದಾರೆ. ಚೇತನ್‍ರದ್ದು ಮಾತು ಕಡಿಮೆ, ಕೆಲಸ ಜಾಸ್ತಿ. ಅವರ ಸಿನಿಮಾಗಳೆಲ್ಲವೂ ಹಿಟ್ ಆಗಿವೆ. ಭರಾಟೆಯೂ ಸೂಪರ್ ಹಿಟ್ ಆಗಲಿ ಎಂದು ಹಾರೈಸಿದ್ದಾರೆ ದರ್ಶನ್.

    ಇನ್ನು ಮದಗಜ ಟೈಟಲ್ ವಿವಾದ ಕುರಿತಂತೆ ಮಾತನಾಡಿದ ದರ್ಶನ್, ಯಾರು ಮಾಡಿದರೂ ಅದು ಕನ್ನಡ ಸಿನಿಮಾ ತಾನೇ. ಇವರೇ ಮಾಡಬೇಕು ಅಂತಾ ಏನೂ ಇಲ್ಲ. ಚಿತ್ರರಂಗ ಇರೋದೇ ಹಾಗೆ ಎಂದಿದ್ದಾರೆ.