ಮನುರಂಜನ್ ನಟಿಸಿರೋ ಪ್ರಾರಂಭ ಸಿನಿಮಾ ಮೇ 13ರಂದು ರಿಲೀಸ್ ಆಗುತ್ತಿದೆ. ಕೀರ್ತಿ ಕಲ್ಕೇರಿ ನಾಯಕಿಯಾಗಿರೋ ಚಿತ್ರದಲ್ಲಿರೋದು ಲವ್ ಸ್ಟೋರಿ. ಚಿತ್ರದ ಕಿಸ್ಸಿಂಗ್ ಸೀನ್, ಮನು ರಂಜನ್ ಲುಕ್ ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿರೋದು ನಿಜ. ಚಿತ್ರದ ಟ್ರೇಲರ್ ಕೂಡಾ ಕಥೆಯಲ್ಲಿ ಹೊಸದೇನೋ ಇದೆ ಎಂಬ ಸುಳಿವು ಕೊಟ್ಟಿದೆ. ಕ್ರೆಡಿಟ್ ನಿರ್ದೇಶಕ ಮನು ಕಲ್ಯಾಡಿ ಅವರಿಗೆ ಸಲ್ಲಬೇಕು.
ಜಗದೀಶ್ ಕಲ್ಯಾಡಿ ನಿರ್ಮಾಪಕರಾಗಿದ್ದು, ರವಿ ವಡ್ಡೇರಹಳ್ಳಿ ಸಹ ನಿರ್ಮಾಪಕರಾಗಿದ್ದಾರೆ. ಸಿನಿಮಾ ಮೇ 13ರಂದು ರಿಲೀಸ್ ಆಗುತ್ತಿದ್ದು, ಇದೀಗ ಚಿತ್ರತಂಡ ಪ್ರಚಾರ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡಿದೆ.