` bond ravi, - chitraloka.com | Kannada Movie News, Reviews | Image

bond ravi,

 • ಬಾಂಡ್ ರವಿ ಅವತಾರದಲ್ಲಿ ಪ್ರಮೋದ್

  ಬಾಂಡ್ ರವಿ ಅವತಾರದಲ್ಲಿ ಪ್ರಮೋದ್

  ಪ್ರೀಮಿಯರ್ ಪದ್ಮಿನಿ, ರತ್ನನ್ ಪ್ರಪಂಚ ಚಿತ್ರಗಳ ಮೂಲಕ ಬೇರೆಯದೇ ಶೈಲಿಯ ನಟನೆ, ಖಡಕ್ ಡೈಲಾಗ್‍ಗಳಿಂದ ಖ್ಯಾತರಾಗುತ್ತಿರೋ ನಟ ಪ್ರಮೋದ್. ಈಗ ಬಾಂಡ್ ರವಿ ಆಗಿದ್ದಾರೆ.

  ಪ್ರಜ್ವಲ್ ಎಸ್.ಪಿ. ನಿರ್ದೇಶನದಲ್ಲಿ ಬರುತ್ತಿರೋ ಚಿತ್ರದಲ್ಲಿ ಮಾಸ್ ಕಮರ್ಷಿಯಲ್ ಕಥಾನಕವಿದೆ. ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಜೈಲಿನೊಳಗೆ ಬೇಡಿ ಹಾಕಿಕೊಂಡು ರಕ್ತ ಸುರಿಸುತ್ತಿರೋ ಪೋಸ್ಟರ್ ಹೊರಬಿದ್ದಿದೆ.

  ಇದೊಂದು ಎಮೋಷನಲ್ ಥ್ರಿಲ್ಲರ್ ಮೂವಿ ಎನ್ನಲಾಗಿದ್ದು, ನರಸಿಂಹ ಮೂರ್ತಿ ಎಂಬುವವರು ಚಿತ್ರದ ನಿರ್ಮಾಪಕರು. ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರಾಗಿದ್ದಾರೆ.

 • ಮಾಸ್..ಕ್ಲಾಸ್..ಹದವಾಗಿ ಬೆರೆತ ಬಾಂಡ್ ರವಿ ಟ್ರೇಲರ್

  ಮಾಸ್..ಕ್ಲಾಸ್..ಹದವಾಗಿ ಬೆರೆತ ಬಾಂಡ್ ರವಿ ಟ್ರೇಲರ್

  ಇವನು ಒಳ್ಳೆಯವನ ತರಾ ಇರೋ ಕೆಟ್ಟವನೋ.. ಕೆಟ್ಟವನ ತರಾ ಇರೋ ಒಳ್ಳೆಯವನೋ.. ಡೈಲಾಗ್‍ನೊಂದಿಗೆ ಟ್ರೇಲರ್ ಮುಗಿಯುತ್ತದೆ. ಟ್ರೇಲರ್ ನೋಡಿದವರಿಗೂ ಕಥೆಯ ಬಗ್ಗೆ ಅಂಥಾದ್ದೊಂದು ಕುತೂಹಲ ಹುಟ್ಟಿಸುವಲ್ಲಿ ಗೆಲ್ಲುತ್ತದೆ ಬಾಂಡ್ ರವಿ ಟ್ರೇಲರ್. ಪ್ರಮೋದ್ ನಟಿಸಿರೋ ಚಿತ್ರಕ್ಕೆ ಎಸ್.ಪಿ.ಪ್ರಜ್ವಲ್ ಎಂಬುವರು ನಿರ್ದೇಶನ ಮಾಡಿದ್ದಾರೆ. ಡಿ.9ಕ್ಕೆ ಬಿಡುಗಡೆಯಾಗುತ್ತಿರೋ ಬಾಂಡ್ ರವಿ ಚಿತ್ರಕ್ಕೆ ನರಸಿಂಹ ಮೂರ್ತಿ ನಿರ್ಮಾಪಕರು.

  ಚಿತ್ರದಲ್ಲಿ ಪ್ರಮೋದ್, ಪುನೀತ್ ರಾಜಕುಮಾರ್ ಅಭಿಮಾನಿಯಾಗಿ ನಟಿಸಿದ್ದಾರೆ. ಜೈಲಿನಲ್ಲಿ ಖೈದಿ, ಬೀದಿಯಲ್ಲಿ ರೌಡಿ, ರಾಜಕಾರಣಿಗಳು ಆಫೀಸರುಗಳಿಗೂ ನಡುಕ ಹುಟ್ಟಿಸುವ ಬಾಂಡ್ ರವಿ, ಜೈಲಿನಲ್ಲಿ ದಂಧೆಯನ್ನೇ ನಡೆಸುತ್ತಾನೆ. ಆದರೆ ಪ್ರೀತಿಯ ಎದುರು ಶರಣಾಗುವ ರವಿಯ ವ್ಯಕ್ತಿತ್ವ ನಿಜಕ್ಕೂ ಏನು ಎನ್ನುವ ಕುತೂಹಲ ಸೃಷ್ಟಿಸಿ ಟ್ರೇಲರ್ ಮುಗಿಸುತ್ತಾರೆ ಪ್ರಜ್ವಲ್.

  ರತ್ನನ್ ಪ್ರಪಂಚ ನಂತರ ಪ್ರಮೋದ್ ಸೋಲೋ ಆ್ಯಕ್ಷನ್ ಹೀರೋ ಆಗಿ ನಟಿಸಿರೋ ಸಿನಿಮಾ ಬಾಂಡ್ ರವಿ. ಪ್ರಮೋದ್ ಎದುರು ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ. ರವಿಕಾಳೆ, ಧರ್ಮ, ವಿಜಯ್ ಚೆಂಡೂರು, ಶೋಭರಾಜ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.

 • ಸೆಂಟಿಮೆಂಟ್ ಅಲ್ಲ.. ಸೆಟ್ಲ್‍ಮೆಂಟೇ ಮುಖ್ಯ ಅನ್ನೋ ಬಾಂಡ್ ರವಿ

  ಸೆಂಟಿಮೆಂಟ್ ಅಲ್ಲ.. ಸೆಟ್ಲ್‍ಮೆಂಟೇ ಮುಖ್ಯ ಅನ್ನೋ ಬಾಂಡ್ ರವಿ

  ಬಾಂಡ್ ರವಿ ಟೀಸರ್ ಹೊರಬಂದಿದೆ. ಉಡಾಳ್ ಬಾಬು ಆಗಿ ಮಿಂಚು ಹರಿಸಿದ್ದ ಪ್ರಮೋಸ್ ಬಾಂಡ್ ರವಿಯಾಗಿ ಬೊಂಬಾಟ್ ಆಗಿ ಮಿಂಚಲು ಸಜ್ಜಾಗಿದ್ದಾರೆ. ಬಾಂಡ್ ರವಿ ಲವ್ ಸ್ಟೋರಿ ಇರೋ ಆ್ಯಕ್ಷನ್ ಸಿನಿಮಾ. ಈ  ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲ್ಲುವ ವಿಶ್ವಾಸ ಪ್ರಮೋದ್ ಅವರಲ್ಲಿದೆ.

  ಇದುವರೆಗೆ ಪ್ರೇಮಕಥೆ ಆಧರಿತ ಚಿತ್ರಗಳಿಗೇ ಹೆಚ್ಚು ಸಂಗೀತ ನೀಡುತ್ತಿದ್ದ ಮನೋಮೂರ್ತಿ ಬಾಂಡ್ ರವಿಗೆ ಮ್ಯೂಸಿಕ್ ಕೊಟ್ಟಿರುವುದೇ ವಿಶೇಷ. ಪ್ರಜ್ವಲ್ ನಿರ್ದೇಶನದ ಚಿತ್ರವಿದು. ಚಿತ್ರದ ಹೀರೋ ಪ್ರಮೋದ್ ಮತ್ತು  ಹೀರೋಯಿನ್ ಕಾಜಲ್ ಕುಂದರ್ ಬಗ್ಗೆ ಮೆಚ್ಚುಗೆಯ ಮಾತನನಾಡಿದ್ದಾರೆ ಮನೋಮೂರ್ತಿ.

  11 ವರ್ಷಗಳಿಂದ ಸಿನಿಮಾ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ  ಕೆಲಸ ಮಾಡಿರುವ ಪ್ರಜ್ವಲ್ ಅವರಿಗೆ ಇದು ಮೊದಲ ಸಿನಿಮಾ. ಪ್ರಮೋದ್ ನನಗೆ ಸಿಕ್ಕಿದ್ದು ನನ್ನ ಅದೃಷ್ಟ ಎನ್ನುವ ಪ್ರಜ್ವಲ್ ಒಳ್ಳೆಯ ಸಿನಿಮಾ ಮಾಡಿರುವ ತೃಪ್ತಿ ಇದೆ ಎಂದಿದ್ದಾರೆ.

  ನರಸಿಂಹ ಮೂರ್ತಿ ನಿರ್ಮಾಪಕರಾಗಿದ್ದಾರೆ. ಮಲ್ಲಿಕಾರ್ಜುನ್ ಕಾಶಿ, ಝೇವಿಯರ್ ಫರ್ನಾಂಡಿಸ್ ಸಹ ನಿರ್ಮಾಪಕರು. ಸಿನಿಮಾ ನವೆಂಬರಲ್ಲಿ  ರಿಲೀಸ್ ಆಗುವ ಸಾಧ್ಯತೆ ಇದೆ.