` kirik shankar, - chitraloka.com | Kannada Movie News, Reviews | Image

kirik shankar,

 • ಕಿರಿಕ್ ಶಂಕರ್.. ಕಿರಿಕ್ ಮಾಡೋದೇ ಉದ್ಯೋಗ..

  ಕಿರಿಕ್ ಶಂಕರ್.. ಕಿರಿಕ್ ಮಾಡೋದೇ ಉದ್ಯೋಗ..

  ಅವನ ಹೆಸರು ಶಂಕರ್. ಊರಿಗೆಲ್ಲ ಕ್ವಾಟ್ಲೆ ಕೊಡೋ.. ಕಿರಿಕ್ ಮಾಡೋ.. ಹುಡುಗ. ಹೀಗಾಗಿಯೇ ಅವನು ಕಿರಿಕ್ ಶಂಕರ. ಅವಳು ಸಿಕ್ಕಾಪಟ್ಟೆ ಬೋಲ್ಡು. ಲೈಫಲ್ಲಿ ಸೀರಿಯಸ್‍ನೆಸ್ ಇಲ್ಲದೇ ಅವರಿಬ್ಬರೂ ಲವ್ ಮಾಡ್ತಾ ಇರೋವಾಗ ಅದೊಂದು ಘಟನೆ ನಡೆಯುತ್ತೆ. ಅಲ್ಲಿಂದ ಇಡೀ ಕಥೆ ಫುಲ್ ಚೇಂಜ್. ಕಿರಿಕ್ ಶಂಕರನ ಕಥೆಯೇ ಇದು.

  ಚಿತ್ರದಲ್ಲಿ ನನ್ನದು ಸೀರಿಯಸ್‍ನೆಸ್ ಇಲ್ಲದ ಪಾತ್ರ ಎನ್ನುವ ಯೋಗಿ.. ಎಲ್ಲ ಟೈಮೂ ಹಾಗೇ ಇರಲ್ಲ ಎನ್ನುವ ಮೆಸೇಜ್ ಇಟ್ಟುಕೊಂಡೇ ಸಿನಿಮಾ ಮಾಡಿದ್ದೇವೆ. ಒಂದು ನೀಟ್ ಸಿನಿಮಾ ಎನ್ನುತ್ತಾರೆ. ನಾಯಕಿ ಅದ್ವಿಕಾಗೆ ಇದು ಫಸ್ಟ್ ಮೂವಿ. ನಿರ್ದೇಶಕ ಅನಂತರಾಜು ಅವರಿಗೂ ಇದು ಪ್ರಥಮ ಪ್ರಯತ್ನ. ಆದರೆ ಸಿನಿಮಾವನ್ನು ಬಹಳ ನೀಟ್ ಆಗಿ ಮಾಡಿದ್ದಾರೆ ಎನ್ನೋ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಯೋಗಿ.
  ಎಂ.ಎನ್.ಕುಮಾರ್ ನಿರ್ಮಾಣದ ಸಿನಿಮಾ ಇದು. 150ರಿಂದ 200 ಥಿಯೇಟರುಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ ಎಂದಿದ್ದಾರೆ ಕುಮಾರ್. ಅಂದಹಾಗೆ ಚಿತ್ರದಲ್ಲಿ ಸಂಕಲನಕಾರ ನಾಗೇಂದ್ರ ಅರಸ್ ನೆಗೆಟಿವ್ ಶೇಡ್ ಇರೋ ಪಾತ್ರದಲ್ಲಿ ನಟಿಸಿದ್ದಾರೆ. ಅದು ಥ್ರಿಲ್ಲಿಂಗ್ ಎನ್ನುತ್ತಾರೆ ಕುಮಾರ್.ನ

   
 • ಥೆ..ಆ್ಯಕ್ಷನ್..ಕಾಮಿಡಿ..ಮನರಂಜನೆ ಎಲ್ಲವೂ ಚಿತ್ರದಲ್ಲಿದೆ : ಅದ್ವಿಕಾ

  ಥೆ..ಆ್ಯಕ್ಷನ್..ಕಾಮಿಡಿ..ಮನರಂಜನೆ ಎಲ್ಲವೂ ಚಿತ್ರದಲ್ಲಿದೆ : ಅದ್ವಿಕಾ

  ಅದ್ವಿಕಾಗೆ ಇದು ಮೊದಲ ಸಿನಿಮಾ. ನಾಯಕಿ. ಹೀರೋ ಆಗಿರೋದು ಲೂಸ್ ಮಾದ ಯೋಗಿ. ಕಿರಿಕ್ ಶಂಕರ್ ಚಿತ್ರ ಇದೇ ಏಪ್ರಿಲ್ 1ಕ್ಕೆ ಬರುತ್ತಿದೆ. ಅನಂತರಾಜು ನಿರ್ದೇಶನದ ಚಿತ್ರದಲ್ಲಿ ಪಕ್ಕಾ ಕಮರ್ಷಿಯಲ್ ಕಥೆ ಇದೆ ಅನ್ನೋದು ಅದ್ವಿಕಾ ಮಾತು.

  ನಾನು ರಂಗಭೂಮಿಯಿಂದ ಬಂದವಳು. ಇದು ನನಗೆ ಮೊದಲ ಸಿನಿಮಾ. ಈ ಚಿತ್ರ ಒಪ್ಪಿಕೊಂಡ ಮೇಲೆ ರಕ್ತಚಂದನ ಅನ್ನೋ ವೆಬ್ ಸಿರೀಸ್‍ನಲ್ಲಿ ನಟಿಸಿದೆ. ಈ ಚಿತ್ರದಲ್ಲಿ ಒಳ್ಳೆಯ ಕಥೆ ಇದೆ. ಕಾಮಿಡಿ, ಆ್ಯಕ್ಷನ್ ಎಲ್ಲವೂ ಇರೋ ಪಕ್ಕಾ ಕಮರ್ಷಿಯಲ್ ಎಂಟರ್‍ಟೈನರ್ ಎನ್ನುತ್ತಾರೆ ಅದ್ವಿಕಾ.

  ಎಂ.ಎನ್.ಕುಮಾರ್ ನಿರ್ಮಾಣದ ಚಿತ್ರದ ಆಡಿಯೋ ರಿಲೀಸ್ ಆಗಿದ್ದು ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.

 • ಮೇ 27ಕ್ಕೆ ಕಿರಿಕ್ ಶಂಕರ್

  ಮೇ 27ಕ್ಕೆ ಕಿರಿಕ್ ಶಂಕರ್

  ಲೂಸ್ ಮಾದ ಯೋಗಿ ಮತ್ತು ಅದ್ವಿಕಾ ನಟಿಸಿರೋ ಸಿನಿಮಾ ಕಿರಿಕ್ ಶಂಕರ್. ಕಿರಿಕ್ ಶಂಕರ್ ಇದೇ ಮೇ 27ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಟ್ರೇಲರ್‍ನ್ನು ಖ್ಯಾತ ನಿರ್ದೇಶಕ ಆರ್.ಚಂದ್ರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

  ನನ್ನ ಮೊದಲ ಚಿತ್ರದಿಂದಲೂ ನನಗೆ ಬೆನ್ನೆಲುಬಾಗಿ ನಿಂತಿದ್ದವರು ಕುಮಾರಣ್ಣ. ಅವರು ಈಗ ಸಿನಿಮಾ ಮಾಡು ಎಂದರೂ ನಾನು ಮಾಡಲು ಸಿದ್ಧ ಎಂದರು ಆರ್.ಚಂದ್ರು. ಅಂದಹಾಗೆ ಚಂದ್ರು ಈ ಮಾತು ಹೇಳಿದ್ದು ಎಂ.ಎನ್.ಕುಮಾರ್ ಅವರ ಬಗ್ಗೆ. ಕಿರಿಕ್ ಶಂಕರ್ ಚಿತ್ರದ ನಿರ್ಮಾಪಕರು ಅವರೇ.. ಎಂ.ಎನ್.ಕುಮಾರ್.

  ಅಣ್ಣಾವ್ರ ಬ್ಯಾನರ್ ಬಿಟ್ಟರೆ ನಾನು ನಟಿಸಿದ ಅತೀ ದೊಡ್ಡ ಬ್ಯಾನರ್ ಇದೇ ಎಂದವರು ಯೋಗಿ. ಅನಂತರಾಜು ಚಿತ್ರದ ನಿರ್ದೇಶಕರು.

  ಏಪ್ರಿಲ್‍ನಲ್ಲಿಯೇ ರಿಲೀಸ್ ಮಾಡೋಕೆ ಸಿದ್ಧವಾಗಿದ್ದೆ. ಆದರೆ ಒಂದರ ಹಿಂದೊಂದು ತುಂಬಾ ಚಿತ್ರಗಳು ರಿಲೀಸ್ ಆದವು. ಹೀಗಾಗಿ ಮುಂದೆ ಹೋಗಿ ಈಗ ರಿಲೀಸ್ ಮಾಡುತ್ತಿದ್ದೇವೆ ಎಂದರು ಎಂ.ಎನ್.ಕುಮಾರ್. ವೀರ್ ಸಮರ್ಥ್ ನಿರ್ದೇಶನದ ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಈ ಹಾಡುಗಳೇ ಚಿತ್ರವನ್ನು ಪ್ರಮೋಟ್ ಮಾಡುತ್ತಿವೆ.

 • ಲೂಸ್ ಮಾದ ಈಗ "ಕಿರಿಕ್ ಶಂಕರ್". 

  ಲೂಸ್ ಮಾದ ಈಗ "ಕಿರಿಕ್ ಶಂಕರ್". 

   ಹೊಸ ಹುಡುಗಿ ಅದ್ವಿಕ " ಕಿರಿಕ್ ಶಂಕರ್ "ನ ನಾಯಕಿ.  ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರುವ " ಕಿರಿಕ್ ಶಂಕರ್ " ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ನೂತನ ಪ್ರತಿಭೆ ಅದ್ವಿಕ ಈ ಚಿತ್ರದ ನಾಯಕಿಯಾಗಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. 

  ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಎಂ.ಎನ್.ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದು, ಆರ್ ಅನಂತರಾಜು ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.

  ತುಂಬಾ ದಿನಗಳ ನಂತರ ನಮ್ಮ ಭೇಟಿಯಾಗುತ್ತಿದೆ. ಕೊರೋನ ಕಾರ್ಮೋಡ ಕಳೆದು ಸಂಭ್ರಮದ ವಾತಾವರಣ ಮರಳಿ ಬಂದಿದೆ. ಇದೇ ಏಪ್ರಿಲ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಧನ್ಯವಾದ ಎಂದರು ಎಂ.ಎನ್.ಕುಮಾರ್. 

  ಇದೊಂದು ನಗರದ ಹೊರವಲಯದಲ್ಲಿ ನಡೆಯುವ ಕಥೆ. ನಾಯಕನಿಗೆ ಇಬ್ಬರು ತಂಗಿಯರು. ತುಂಬು ಕುಟುಂಬ. ಸಂಸಾರದ ಜವಾಬ್ದಾರಿ ಹೆಗಲ ಮೇಲಿದ್ದರೂ, ಯಾವುದಕ್ಕೂ ತಲೆ ಕೆಡಸಿಕೊಳ್ಳದಾತ. ಆತನ ಜೀವನದಲ್ಲಿ ನಾಯಕಿಯ ಆಗಮನವಾಗುತ್ತಿದಂತೆ ಏನೆಲ್ಲಾ ಆಗುತ್ತದೆ ಎಂಬುದೆ ಕಥಾಸಾರಾಂಶ. ಕಥೆ ಎಲ್ಲರಿಗೂ ಹಿಡಿಸಿದರೆ ಆ ಕ್ರೆಡಿಟ್ ಯೋಗೀಶ್ ಹುಣಸೂರು ಅವರಿಗೆ ಹೋಗಬೇಕು. ಅವರೆ ಈ ಚಿತ್ರದ ಕಥೆಗಾರರು. ತಾಂತ್ರಿಕವರ್ಗದವರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಿಮ್ಮ ಪ್ರೋತ್ಸಾಹವಿರಲಿ ಎನ್ನುತ್ತಾರೆ ನಿರ್ದೇಶಕ ಅನಂತರಾಜು. 

  ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಅವಕಾಶ ನೀಡಿದ ಎಂ.ಎನ್ ಕುಮಾರ್ ಅವರಿಗೆ ಧನ್ಯವಾದ. ಅನಂತರಾಜು ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ಪ್ರತಿಯೊಂದು ಸಿನಿಮಾದಲ್ಲೂ ಕಲಿಯುವುದು ಇರತ್ತೆ. ಈ ಚಿತ್ರದಲ್ಲೂ ಸಾಕಷ್ಟು ಕಲಿತ್ತಿದ್ದೇನೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದರು ಲೂಸ್ ಮಾದ ಯೋಗಿ..

  ನಾನು ರಂಗಭೂಮಿ ಕಲಾವಿದೆ ನಿರ್ದೇಶಕ ಗಿರಿರಾಜ್ ಅವರು ನನ್ನ ಗುರುಗಳು. ಅವರ ಸಾಕಷ್ಟು ನಾಟಕಗಳಲ್ಲಿ ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ಪಾತ್ರ ತುಂಬಾ ಚೆನ್ನಾಗಿದೆ. ಅವಕಾಶ ಕೊಟ್ಟ ನಿರ್ಮಾಪಕ, ನಿರ್ದೇಶಕರಿಗೆ ವಂದನೆಗಳನ್ನು ಸಲ್ಲಿಸಿದರು ನಾಯಕಿ‌ ಅದ್ವಿಕ.  ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ವೀರ ಸಮರ್ಥ್ ಮಾತನಾಡಿದರು. 

  ಅದ್ವಿಕರಿಗೆ ಅಭಿನಯ ತರಭೇತಿ ನೀಡಿದ ನಿರ್ದೇಶಕ ಗಿರಿರಾಜ್ ಅತಿಥಿಯಾಗಿ ಆಗಮಿಸಿ ಶುಭಕೋರಿದರು. ಕಥೆ, ಚಿತ್ರಕಥೆ, ಸಂಭಾಷಣೆ ಬರೆದರುವ ಯೋಗೀಶ್ ಹುಣಸೂರು ಹಾಗೂ 

   ಅಭಿನಯಿಸಿರುವ ರಿತೇಶ್ ಅನುಭವದ ಮಾತುಗಳಾಡಿದರು. ಆನಂದ್ ಆಡಿಯೋ ಶ್ಯಾಮ್ ಹಾಗೂ ಗೀತರಚನೆಕಾರ ಕಿನ್ನಾಳ್ ರಾಜ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.