ಚಿತ್ರರಂಗ ಬಹುದಿನಗಳಿಂದ ಕಾಯುತ್ತಿದ್ದ ಥಿಯೇಟರುಗಳಲ್ಲಿ 100% ಪ್ರೇಕ್ಷಕರ ಭರ್ತಿ ಮನವಿಗೆ ಕೊನೆಗೂ ಒಪ್ಪಿಗೆ ಸಿಕ್ಕಿದೆ. ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಥಿಯೇಟರುಗಳಲ್ಲಿ 100% ಪ್ರೇಕ್ಷಕರ ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆದರೆ ಥಿಯೇಟುರಗಳಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯ ಎಂದು ಸರ್ಕಾರ ಹೇಳಿದೆ. ಜಿಮ್ ಸ್ವಿಮಿಂಗ್ ಫೂಲ್ ಗೂ 100% ಅವಕಾಶ ನೀಡಲಾಗಿದೆ.
ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಥಿಯೇಟರುಗಳಿಗೆ ಹೊರಗಡೆಯಿಂದ ತಿಂಡಿ ತೆಗೆದುಕೊಂಡು ಹೋಗಲು ಅವಕಾಶ ಇಲ್ಲ. ಫೆಬ್ರವರಿ 11ರಿಂದ ಹಲವು ಚಿತ್ರಗಳ ರಿಲೀಸ್ ಘೋಷಣೆಯಾಗಿದ್ದು, ಚಿತ್ರರಂಗಕ್ಕೆ ಇದು ಶುಭ ಸುದ್ದಿ.