` zaid khan, - chitraloka.com | Kannada Movie News, Reviews | Image

zaid khan,

 • Banaras Movie Review - 3.5/5

  banaras image

  Film: Banaras

  Director: Jayathirtha J

  Cast: Zaid Khan, Sonal Monteiro, Achyuth Kumar, Sujay Shastry, Devaraj  

  Duration: 2 hours 29 minutes

  Certificate: U/A

  Time to Travel 

  Review by S Shyam Prasad

  Director Jayathirtha surely has the travel bug. His films show a strong tendency to explore the new. In Banaras, he not only explores exotic locations but exploits exotic story ideas too. Banaras/Kashi may not be unknown to Kannada audiences, but hosting an entire Kannada film in this location had to come from him. The story too travels boldly to the far reaches of the sci-fi galaxy where few Sandalwood films have travelled so far. A time-loop warped in a romantic tale is a small step forward for the industry but a giant leap of imagination for the audience.

  The film starts like a typical romantic story you weave for a debutant actor (Zaid Khan, more popular as the son of politician Zameer Ahmed Khan). Fun, frolic, songs and youthful banter fill the first half of the film. An emotional touch to an Internet-era evil gives the lead actor a humane touch too. We have already been told the film has a time travel tale. You keep waiting for it till half the film is done with. The first half is not bad, but when you are expecting a sci-fi thriller, you want the action to start as soon as possible. When the action kicks in in the second half, it is riveting and keeps you hooked.

  Banaras is the unexpected film that you will take for granted without watching. The real fun is finding out that it offers more than what was promised. It certainly deserves a visit to the theatres for not being repetitive (pun intended).

  Zaid makes an impressive debut and fits the bill quite well. He seems to have realised quite early that the safe bet in films is to be unusual. The film is unusual and those who watch it will not forget it or Zaid in a hurry. Sonal is just the right amount of glamour and bundle of emotions that a mass-movie heroine is expected to carry to carry on screen. Achyuth continues to raise the bar with every outing while the director gets Sujay Shastry to do more than what was necessary.

  The film is technically sound with the cinematographer Advaitha Gurumurthy and editor KM Prakash deserving special mention. Ajaneesh Loknath cannot do anything wrong and continues his dream run with the music. Banaras takes you on a journey of both the mind and body. It is a free trip to Kashi with a good dose of mind travel for those cerebrally inclined.

 • ಜಮೀರ್ ಪುತ್ರನ 2ನೇ ಚಿತ್ರಕ್ಕೆ ತರುಣ್ ಸುಧೀರ್ ?

  ಜಮೀರ್ ಪುತ್ರನ 2ನೇ ಚಿತ್ರಕ್ಕೆ ತರುಣ್ ಸುಧೀರ್ ?

  ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಅವರ ಪುತ್ರ ಝೈದ್ ಖಾನ್ ಅಭಿನಯದ ಬನಾರಸ್ ಚಿತ್ರ ರಿಲೀಸ್ ಆಗೋಕೆ ಸಿದ್ಧವಾಗಿದೆ. ಜಯತೀರ್ಥ ನಿರ್ದೇಶನದ ಚಿತ್ರವಾದ್ದರಿಂದ ಭಾರಿ ನಿರೀಕ್ಷೆಯೂ ಇದೆ. ಝೈದ್ ಖಾನ್, ಸೋನಲ್ ಮಂಥೆರೋ ಅಭಿನಯಿಸಿರೋ ಚಿತ್ರದಲ್ಲಿರೋದು ಕಾಶಿ ಹಿನ್ನೆಲೆಯಲ್ಲಿ ಬರೋ ಚೆಂದದ ಲವ್ ಸ್ಟೋರಿ. ಈ ಚಿತ್ರ ರಿಲೀಸ್ ಆಗೋಕೆ ಮೊದಲೇ 2ನೇ ಚಿತ್ರಕ್ಕೆ ಸಿದ್ಧವಾಗಿದ್ಧಾರೆ ಝೈದ್ ಖಾನ್.

  ತರುಣ್ ಸುಧೀರ್ ನಿರ್ದೇಶನದಲ್ಲಿ ಝೈದ್ ಖಾನ್ ಅವರ 2ನೇ ಸಿನಿಮಾ ಶುರುವಾಗಲಿದೆ. ಕಥೆ ಓಕೆ ಆಗಿದ್ದು, ಬನಾರಸ್ ರಿಲೀಸ್ ಹೊತ್ತಿಗೆ ತರುಣ್ ಜೊತೆ 2ನೇ ಸಿನಿಮಾ ಅನೌನ್ಸ್ ಆಗುವ ಸಾಧ್ಯತೆ ಇದೆ.ನ

 • ಜಯತೀರ್ಥ ಮೆಚ್ಚಿದ ಝೈದ್ ಖಾನ್

  ಜಯತೀರ್ಥ ಮೆಚ್ಚಿದ ಝೈದ್ ಖಾನ್

  ಝೈದ್ ಖಾನ್ ನಟಿಸಿರೋ ಬನಾರಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಬಹುಶಃ ಸೆಪ್ಟೆಂಬರ್‍ನಲ್ಲಿ ಸಿನಿಮಾ ರಿಲೀಸ್ ಆಗಬಹುದು. ಝೈದ್ ಖಾನ್ ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡುತ್ತಿರೋದು ಖ್ಯಾತ ನಿರ್ದೇಶಕ ಜಯತೀರ್ಥ. ಒಲವೇ ಮಂದಾರ, ಟೋನಿ, ಬ್ಯೂಟಿಫುಲ್ ಮನಸುಗಳು, ಬೆಲ್`ಬಾಟಂ, ಬುಲೆಟ್ ಬಸ್ಯಾ.. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಥೆಗಳ ಚಿತ್ರಗಳನ್ನು ನಿರ್ದೇಶಿಸಿ ಬಾಕ್ಸಾಫೀಸ್‍ನಲ್ಲೂ ಗೆದ್ದಿರುವ ನಿರ್ದೇಶಕ ಜಯತೀರ್ಥ. ಈಗ ಬನಾರಸ್ ಮೂಲಕ ಬರುತ್ತಿದ್ದಾರೆ.

  ಅಂದಹಾಗೆ ಝೈದ್ ಖಾನ್, ಮಾಜಿ ಸಚಿವ ಜಮೀರ್ ಖಾನ್ ಅವರ ಮಗ. ಹೀಗಾಗಿ ಜಯತೀರ್ಥ ಅವರಿಗೂ ಒಂದು ಆತಂಕವಿತ್ತಂತೆ. ಶ್ರೀಮಂತಿಕೆ, ವರ್ಚಸ್ಸು ಎರಡೂ ಇರುವ ಹುಡುಗ. ಆಕ್ಟಿಂಗ್ ಹೇಗೆ ತೆಗೆಸಬೇಕೋ ಅನ್ನೋ ಆತಂಕವಿದ್ದದ್ದು ನಿಜ. ಆದರೆ ಝೈದ್ ಖಾನ್‍ರದ್ದು ಚಪ್ಪಲಿ ದೂರ ಇಟ್ಟು ಹತ್ತಿರ ಕೂರುವ ಸರಳ ಹುಡುಗ. ಆತನ ಸಿನಿಮಾ ಪ್ರೀತಿ ಇಷ್ಟವಾಯಿತು. ಖಂಡಿತಾ ಝೈದ್ ಖಾನ್ ಒಳ್ಳೆಯ ಕಲಾವಿದ ಆಗ್ತಾನೆ ಎಂದು ಮೆಚ್ಚಿಕೊಂಡಿದ್ದಾರೆ ಜಯತೀರ್ಥ.

  ನಟಿ ಸೋನಲ್ ಮಂಥೆರೋ ಕೂಡಾ ಇದೇ ಮಾತು ಹೇಳಿದ್ದಾರೆ. ಬನಾರಸ್ ಚಿತ್ರದ ಹಾಡು ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಚಿತ್ರತಂಡ ಬನಾರಸ್ ಚಿತ್ರದ ವಿಶೇಷತೆಗಳನ್ನೂ ಹಂಚಿಕೊಂಡಿದೆ.

  ನಾನು ಚಿತ್ರರಂಗಕ್ಕೆ ಬರೋದು ಮನೆಯವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ನನಗೆ ಸಪೋರ್ಟ್ ಮಾಡಿದ್ದು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್. ಮುಂಬೈನಲ್ಲಿ ನಟನೆಯ ಸ್ಕೂಲಿಗೆ ಸೇರಿಸಿದ್ದೂ ಅವರೇ. ನನ್ನ ಗಾಡ್‍ಫಾದರ್ ಕೂಡಾ ಅವರೇ ಎಂದರು ಝೈದ್ ಖಾನ್.

 • ತಿರುಪತಿಯಲ್ಲಿ ಪೂಜೆ. ವಾರಾಣಸಿಯಲ್ಲಿ ಗಂಗಾರತಿ : ಝೈದ್ ಖಾನ್-ಸೋನಲ್ ಮಂಥೆರೋ ಬನಾರಸ್ ಪೂಜೆ

  ತಿರುಪತಿಯಲ್ಲಿ ಪೂಜೆ. ವಾರಾಣಸಿಯಲ್ಲಿ ಗಂಗಾರತಿ : ಝೈದ್ ಖಾನ್-ಸೋನಲ್ ಮಂಥೆರೋ ಬನಾರಸ್ ಪೂಜೆ

  ಬನಾರಸ್ ವೈಭವ ಹೀಗಿದೆ. ಚಿತ್ರ ರಿಲೀಸ್ ಆಗುವುದು ಮುಂದಿನ ತಿಂಗಳು. ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 'ಬನಾರಸ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಝೈದ್ಗೆ ನಾಯಕಿಯಾಗಿ ಸೋನಾಲ್ ಮಾಂತೆರೊ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಜಂಟಿಯಾಗಿ ಹಿಂದಿ ಸಿನಿಮಾ ನೋಡುವ ಏರಿಯಾಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.

  ಜಯತೀರ್ಥ ನಿರ್ದೇಶಿಸಿರುವ ಬನಾರಸ್ ಕಥೆ ನಡೆಯುವುದೇ ಗಂಗಾ ನದಿ ತೀರದಲ್ಲಿ. ಚಿತ್ರದ ಬಹುಭಾಗ ಚಿತ್ರೀಕರಣವಾಗಿರುವುದೂ ಕೂಡಾ ಕಾಶಿಯಲ್ಲಿಯೇ. ಚಿತ್ರದ ಪ್ರಚಾರಕ್ಕೆ ತೊಡಗಿಸಿಕೊಂಡಿರುವ ಬನಾರಸ್ ನಾಯಕ, ನಾಯಕಿ ಇಬ್ಬರೂ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುತ್ತಿದ್ದಾರೆ. ಇತ್ತೀಚೆಗೆ ಝೈದ್ ಖಾನ್ ಮತ್ತು ಸೋನಲ್ ಮಂಥೆರೋ ಜೋಡಿ ತಿರುಪತಿಗೆ ಭೇಟಿ ತಿಮ್ಮಪ್ಪನ ಆಶೀರ್ವಾದ ಪಡೆದುಕೊಂಡಿತ್ತು. ಈಗ ಕಾಶಿಯ ಗಂಗಾರತಿಯಲ್ಲಿ ಪಾಲ್ಗೊಂಡಿದೆ. ಜಾತಿ-ಧರ್ಮಗಳ ಭೇದ-ಭಾವವಿಲ್ಲದೆ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ದೇವಸ್ಥಾನ, ಮಸೀದಿಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

  ವಾರಾಣಸಿಯಲ್ಲಿ ಕಾಶಿ ಪುನರುಜ್ಜೀವನದ ನಂತರ ಮೊದಲ ಬಾರಿಗೆ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಂಜಯ್ ಮಿಶ್ರಾ ಝೈದ್-ಸೋನಲ್ ಜೋಡಿಗೆ ಸನ್ಮಾನವನ್ನೂ ಮಾಡಿದ್ದಾರೆ.

  ಟೈಂ ಟ್ರಾವೆಲ್ಲರ್ ಕಥೆಯೊಂದಿಗೆ ಲವ್ ಸ್ಟೋರಿಯಿರುವ ಕಥೆ ಬನಾರಸ್ ಚಿತ್ರದಲ್ಲಿದೆ. ನವೆಂಬರ್ 4ಂದು ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಒಬ್ಬ ಹೀರೋನ ಮೊದಲ ಚಿತ್ರವೇ ಪ್ಯಾನ್ ಇಂಡಿಯಾ ಆಗುತ್ತಿರುವುದು ವಿಶೇಷ.

 • ದೇವಾಲಯ, ದರ್ಗಾ, ಚರ್ಚ್‍ಗೆ ಭೇಟಿ ನೀಡಿದ ಬನಾರಸ್ ಹೀರೋ

  banaras image

  ಬನಾರಸ್ ಮೂಲಕ ಹೀರೋ ಆಗುತ್ತಿರುವ ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ದೇವಾಲಯ, ದರ್ಗಾ, ಚರ್ಚ್‍ಗಳಿಗೆ ಭೇಟಿ ನೀಡಿರುವುದು ವಿಶೇಷ. ಕೋಲಾರಕ್ಕೆ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದ ಝೈದ್ ಖಾನ್, ಕೋಲಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ  ದರ್ಗಾ ಹಾಗೂ ಚರ್ಚ್ಗೆ ಭೇಟಿ ನೀಡಿ ಆಶೀರ್ವಾದ ಪಡೆದರು.

  ಕೋಲಾರದ ಹೊರವಲಯದ ಕೊಂಡರಾಜನಹಳ್ಳಿ ಗೇಟ್ನ ದರ್ಗಾ ಬಳಿ ನಟ ಝೈದ್ ಖಾಖ್ಗೆ ಅದ್ಧೂರಿ ಸ್ವಾಗತ ಸಿಕ್ಕಿತು. ಮಳೆಯಲ್ಲೇ ಕೋಲಾರ ನಗರದ ಹಲವು ಕಡೆ ಬೈಕ್ ರ್ಯಾಲಿ ಮೂಲಕ ಝೈದ್ ಖಾನ್ ರೌಂಡ್ಸ್ ಹಾಕಿದರು. ಮೊದಲಿಗೆ ಕ್ಲಾಕ್ ಟವರ್ ಬಳಿಯ ದರ್ಗಾಗೆ ನಟ ಝೈದ್ ಖಾನ್ ಭೇಟಿ ನೀಡಿದರು. ನಂತರ ಕೋಲಾರ ದೇಗುಲಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಬಳಿಕ ಚರ್ಚ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕೊನೆಯದಾಗಿ ಕೋಲಾರ ನಗರದ ಮಹಿಳಾ ಸಮಾಜ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಬನಾರಸ್ ಪ್ರೀ-ರಿಲೀಸ್ ಈವೆಂಟ್ನಲ್ಲಿ ಭಾಗಿಯಾದರು.

  ಬನಾರಸ್ ಚಿತ್ರದಲ್ಲಿ ಹಾಸ್ಯ, ಥ್ರಿಲ್ಲರ್ ಎಲ್ಲ ಅಂಶಗಳೂ ಇವೆ. ಸಮಾಜಕ್ಕೆ ಒಳ್ಳೆಯ ಸಂದೇಶವೂ ಇದೆ. ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನ ಥಿಯೇಟರಿನಲ್ಲೇ ನೋಡಿ. ಹಾರೈಸಿ ಎಂದು ಝೈದ್ ಖಾನ್ ಮನವಿ ಮಾಡಿದರು. ಝೈದ್ ಖಾನ್ ಜೊತೆ ಕಾಂಗ್ರೆಸ್ ಮುಖಂಡರಾದ ಗೌಸಿ, ಜಿಲ್ಲಾ ಕಾಂಗ್ರೆಸ್ ಮೈನಾರಿಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ಜಾವೀದ್ ಸಚಿನ್, ಮೈನಾರಿಟಿ ಯೂಥ್ ಪ್ರೆಸಿಡೆಂಟ್ ಮೊಹಮ್ಮದ್ ನೂರ್, ಯೂಥ್ ಕಾಂಗ್ರೆಸ್ನ ಸಾಧಿಕ್ ಪಾಷಾ, ಮುಖಂಡರಾದ ಮುಸ್ತಫಾ, ಆಫ್ರಿದ್, ಭರತ್ ರಾಯ್, ಯೂಥ್ ಕಾಂಗ್ರೆಸ್ ಅಧ್ಯಕ್ಷ ನವೀನ್, ಸೈಯದ್ ಗೋರು ಮಹಿಳಾ ಸಮಾಜ ಪ್ರಾಂಶುಪಾಲ ಮಂಜುನಾಥ್, ಮುಫೀದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

  ಬನಾರಸ್ ಝೈದ್ ಖಾನ್ ನಟನೆಯ ಮೊದಲ ಚಿತ್ರ. ಸೋನಲ್ ಮಂಥೆರೋ ನಾಯಕಿ. ಜಯತೀರ್ಥ ನಿರ್ದೇಶನದ ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ.

   

 • ಪುನೀತ್ ರುದ್ರನಾಗ್ ಜೊತೆ ಬನಾರಸ್ ಝೈದ್ 2ನೇ ಸಿನಿಮಾ

  ಪುನೀತ್ ರುದ್ರನಾಗ್ ಜೊತೆ ಬನಾರಸ್ ಝೈದ್ 2ನೇ ಸಿನಿಮಾ

  ಬನಾರಸ್ ಚಿತ್ರ ಬಾಕ್ಸಾಫೀಸಿನಲ್ಲಿ ಬೊಂಬಾಟ್ ಸದ್ದು ಮಾಡದೇ ಹೋದರೂ, ಅಭಿನಯ, ಪ್ರತಿಭೆಗಳಿಂದ ಗಮನ ಸೆಳೆದವರು ಝೈದ್ ಖಾನ್. ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಪುತ್ರ. ನಿರ್ದೇಶಕ ಜಯತೀರ್ಥ ಅವರ ಪಳಗಿದ ಕೈಗಳಲ್ಲಿ ಪ್ರಾಮಿಸಿಂಗ್ ಎನಿಸಿದ್ದರು ಝೈದ್ ಖಾನ್. ಈಗ 2ನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಡೈರೆಕ್ಟರ್ ಯಾರು ಗೊತ್ತೇ.. ಪುನೀತ್ ರುದ್ರನಾಗ್.

  ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವ ರಾಜ್ಕುಮಾರ್ ಮೊದಲು 'ಯುವ ರಣಧೀರ ಕಂಠೀರವ' ಎಂಬ ಸಿನಿಮಾವನ್ನು ಆರಂಭಿಸಬೇಕಿತ್ತು. ಅದರ ಪ್ರೋಮೋ ಕೂಡ ರಿಲೀಸ್ ಆಗಿತ್ತು. ಆ ಸಿನಿಮಾವನ್ನು ನಿರ್ದೇಶನ ಮಾಡಬೇಕಾಗಿದ್ದು ಪುನೀತ್ ರುದ್ರನಾಗ್. ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಟೇಕ್ಆಫ್ ಆಗಲಿಲ್ಲ. ಇದೀಗ ಝೈದ್ ಖಾನ್ ಜತೆಗೆ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ ಪುನೀತ್.

  ಪುನೀತ್, ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದವರು. ಈ ಸಿನಿಮಾಗೆ ಕಥೆ ಬರೆಯುತ್ತಿರುವುದು ಭಗೀರಥ ಎಂಬ ಹುಡುಗ. ವೃತ್ತಿ ಪರತೆಯಿಂದ ಮಾಡುತ್ತಿರುವ ಸಿನಿಮಾ ಇದು. ನನ್ನ ಹಿಂದಿನ ಬನಾರಸ್ ಸಿನಿಮಾಗಿಂತ ತುಂಬ ವಿಭಿನ್ನವಾಗಿ ಇರಲಿದೆ. ಇಂಥದ್ದೊಂದು ಕಮರ್ಷಿಯಲ್ ಕಥೆಯನ್ನು ಸಿನಿಮಾ ಮಾಡುತ್ತಿರುವುದಕ್ಕೆ ಖುಷಿಯಿದೆ. . ಸದ್ಯ ಆರಂಭದ ಮಾತುಕತೆಯಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಿದ್ದೇವೆ' ಎನ್ನುತ್ತಾರೆ ಝೈದ್ ಖಾನ್. ಈ ಸಿನಿಮಾವನ್ನು ಯಾರು ನಿರ್ಮಾಣ ಮಾಡಲಿದ್ದಾರೆ? ಚಿತ್ರದ ಇತರ ತಾರಾಬಳಗದಲ್ಲಿ ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯು ಮುಂದಿನ ದಿನಗಳಲ್ಲಿ ಸಿಗುವ ಸಾಧ್ಯತೆ ಇದೆ.

 • ಬನಾರಸ್ ಝೈದ್ ಖಾನ್ ಹೊಸ ಸಿನಿಮಾ ಯಾವಾಗ?

  ಬನಾರಸ್ ಝೈದ್ ಖಾನ್ ಹೊಸ ಸಿನಿಮಾ ಯಾವಾಗ?

  ಬನಾರಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಆತ್ಮವಿಶ್ವಾಸದ ಎಂಟ್ರಿ ಕೊಟ್ಟ ಝೈದ್ ಖಾನ್ ಭರವಸೆ ಮೂಡಿಸಿದ್ದಾರೆ. ಜಯತೀರ್ಥ ನಿರ್ದೇಶನದ ಚಿತ್ರದಲ್ಲಿ ಕಾನ್ಫಿಡೆಂಟಾಗಿ ನಟಿಸಿದ ಝೈದ್ ಖಾನ್ ಪ್ರೇಕ್ಷಕರ ಮೆಚ್ಚುಗೆಯನ್ನು ಕೂಡಾ ಗಳಿಸಿದ್ದಾರೆ. ಮೊದಲ ಚಿತ್ರದ ಭರವಸೆಯ ಬೆನ್ನಲ್ಲೇ ಝೈದ್ ಖಾನ್‍ಗೆ ಹೊಸ ಹೊಸ ಅವಕಾಶಗಳು ಬರುತ್ತಿವೆ.

  ಮೊದಲ ಚಿತ್ರಕ್ಕೂ ಮೊದಲೇ ಝೈದ್ ಖಾನ್ ಅವರಿಗೆ ವೆಬ್ ಸಿರೀಸ್ ಮತ್ತು ಹಿಂದಿ ಸೀರಿಯಲ್‍ಗಳಲ್ಲಿ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಕನ್ನಡದಲ್ಲಿಯೇ ಮೊದಲ ಸಿನಿಮಾ ಆಗಬೇಕು ಎಂಬ ಕನಸು ಕಂಡಿದ್ದ ಝೈದ್ ಖಾನ್ ಬನಾರಸ್ ಮೂಲಕ ತಾವೊಬ್ಬ ಒಳ್ಳೆಯ ನಟ ಎನ್ನುವುದನ್ನು ಕೂಡಾ ಸಾಬೀತು ಮಾಡಿದ್ದಾರೆ. ಸೋನಲ್ ಮಂಥೆರೋ-ಝೈದ್ ಖಾನ್ ಜೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ.

  ಇದೀಗ ನಿರ್ದೇಶಕ ಎ.ಹರ್ಷ ಝೈದ್ ಖಾನ್ ಅವರಿಗೆ ಮುಂದಿನ ಸಿನಿಮಾ ಡೈರೆಕ್ಟ್ ಮಾಡಲಿದ್ದಾರೆ ಎಂಬ ಸುದ್ದಿ ಹರಡಿದೆ. ಸದ್ಯಕ್ಕೆ ಹರ್ಷ ವೇದ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ. ಡಿಸೆಂಬರ್ ಕೊನೆಗೆ ರಿಲೀಸ್ ಡೇಟ್ ಕೂಡಾ ಘೋಷಿಸಿರುವ ಹರ್ಷ ವೇದ ಚಿತ್ರದ ಎಲ್ಲ ಕೆಲಸಗಳೂ ಮುಗಿಯುತ್ತಿದ್ದಂತೆಯೇ ಝೈದ್ ಖಾನ್ ಸಿನಿಮಾ ಘೋಷಿಸಲಿದ್ದಾರೆ ಎಂದು ಸುದ್ದಿಯಿದೆ.

 • ಬನಾರಸ್ ನೋಡಿ ಮೆಚ್ಚಿಕೊಂಡ ಸಿದ್ದರಾಮಯ್ಯ

  ಬನಾರಸ್ ನೋಡಿ ಮೆಚ್ಚಿಕೊಂಡ ಸಿದ್ದರಾಮಯ್ಯ

  ಇದೇ ವಾರ ರಿಲೀಸ್ ಆಗಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಬನಾರಸ್. ಜಯತೀರ್ಥ ನಿರ್ದೇಶನದ ಚಿತ್ರ ಮೊದಲ ದಿನವೇ ಭರ್ಜರಿ 3 ಕೋಟಿ ಗಳಿಕೆ ಮಾಡಿತ್ತು. ಚಿತ್ರತಂಡವೇ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿತ್ತು. ಆಕ್ಟಿಂಗ್‍ನಲ್ಲಿ ಭರವಸೆ ಹುಟ್ಟಿಸಿದ್ದ ಝೈದ್ ಖಾನ್ ಬಗ್ಗೆ ಚಿತ್ರರಂಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರರಂಗಕ್ಕೆ ವೆಲ್‍ಕಂ ಎಂದು ಸ್ವಾಗತ ಕೋರಿದ್ದರು. ಝೈದ್ ಖಾನ್, ಆಶಿಕಾ ರಂಗನಾಥ್ ಅಭಿನಯ, ಜಯತೀರ್ಥ ನಿರ್ದೇಶನ ಮೆಚ್ಚುಗೆ ಗಳಿಸಿತ್ತು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇತ್ತೀಚೆಗೆ ನಾನು ಸಿನಿಮಾ ನೋಡುತ್ತಿಲ್ಲ. ಜಮೀರ್ ಮಗ ಮಾಡಿದ್ದಾನೆ ಎಂದು ಹೇಳಿ ಕರೆದುತಂದರು. ಜಮೀರ್  ಮಗ ಝೈದ್ ಖಾನ್ ನಟನೆ ನೋಡಿದರೆ ಹೊಸಬ ಅನ್ನಿಸಲ್ಲ. ಆಶಿಕಾ ರಂಗನಾಥ್ ನಿಜಕ್ಕೂ ಚೆನ್ನಾಗಿ ಮಾಡಿದ್ದಾರೆ. ಜಯತೀರ್ಥ ಕಥೆಯನ್ನು ಹೇಳುವ ರೀತಿ, ಡೈರೆಕ್ಷನ್ ಸೊಗಸಾಗಿ ಮೂಡಿ ಬಂದಿದೆ. ಟೋಟಲ್ಲಿ ಇಟ್ಸ್ ಎ ಗುಡ್ ಮೂವಿ ಎಂದಿದ್ದಾರೆ ಸಿದ್ದು. ಸಿದ್ದು ಅವರ ಜೊತೆ ಜಮೀರ್ ಅಹ್ಮದ್ ಕೂಡಾ ಸಿನಿಮಾ ನೋಡಿ ಮಗನಿಗೆ ಶಹಬ್ಬಾಸ್ ಹೇಳಿದರು. ಅಪ್ಪ ಬಂದು ನನ್ನ ಸಿನಿಮಾ ನೋಡಿರುವುದು ಹಾಗೂ ಮೆಚ್ಚಿಕೊಂಡಿರೋದು ಸಿನಿಮಾ ನೂರು ಕೋಟಿ ಮಾಡಿದಷ್ಟೇ ಖುಷಿ ತಂದಿದೆ ಎಂದರು ಝೈದ್ ಖಾನ್. ಇಂದಿನಿಂದ ಝೈದ್ ಖಾನ್ ಸೇರಿದಂತೆ ಇಡೀ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಲಿದೆ. ಮೂಲಗಳ ಪ್ರಕಾರ ಚಿತ್ರ 10 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ. 

 • ಬನಾರಸ್ ಭಾರತ್ ಮಾತಾ ಮಂದಿರದ ಕಥೆ

  banaras image

  ರು ವರ್ಷಗಳ ಹಿಂದೆ ಮೊಘಲರ ದಾಳಿಯಲ್ಲಿ ನಜ್ಜುಗುಜ್ಜಾಗಿದ್ದ ಪುಣ್ಯಕ್ಷೇತ್ರವಿದು. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉ.ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಪುನರುಜ್ಜೀವನಗೊಂಡು ನಳನಳಿಸುತ್ತಿರುವ ಕ್ಷೇತ್ರ ವಾರಾಣಸಿ. ಇಂತಹ ಕ್ಷೇತ್ರದಲ್ಲಿ ಭಾರತ್ ಮಾತಾ ಮಂದಿರವಿದೆ. ಹೌದು, ಭಾರತ್ ಮಾತಾ ಮಂದಿರ.

  ವಾರಾಣಸಿಯಲ್ಲಿ ಭಾರತ್‍ಮಾತಾ ಮಂದಿರವಿದೆ. ಅದು ಸಂಪೂರ್ಣ ಅಮೃತಶಿಲೆಯಲ್ಲಿ ಕೆತ್ತಿದ ಅಖಂಡ ಭಾರತದ ಭೂಪಟ. ಪ್ರತಿದಿನ ಅಲ್ಲಿ ಭೂಪಟಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಕಾಶಿಗೆ ಹೋಗುವ ಬಹುತೇಕರಿಗೆ ಆ ವಿಷಯವೇ ಗೊತ್ತಿಲ್ಲ. ನಮ್ಮ ಚಿತ್ರದಲ್ಲಿ ಅದನ್ನೂ ತೋರಿಸಿದ್ದೇವೆ ಎನ್ನುತ್ತಾರೆ ಬನಾರಸ್ ಚಿತ್ರದ ನಿರ್ದೇಶಕ ಜಯತೀರ್ಥ.

  ಕಾಶಿ ಕಾರಿಡಾರ್ ಆಗುವುದಕ್ಕೂ ಮೊದಲು ಚಿತ್ರೀಕರಣಗೊಂಡಿದ್ದ ಸಿನಿಮಾ ಇದು. ಹಳೆಯ ಕಾಶಿಯ ಓಣಿಓಣಿಗಳನ್ನೂ ನೋಡಬಹುದು. ಚಿತ್ರಕ್ಕೊಂದು ಡಿವೈನ್ ಟಚ್ ಇದೆ. ಕಾಶಿಯಲ್ಲಿ ನಡೆಯುವ ಪ್ರೇಮಕಥೆಗೆ ಆ ಹಿನ್ನೆಲೆ ಬೇಕಿತ್ತು ಎನ್ನುತ್ತಾರೆ ಜಯತೀರ್ಥ. ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹೀರೋ ಆಗಿ ನಟಿಸಿರುವ ಚಿತ್ರದಲ್ಲಿ ಸೋನಲ್ ಮಂಥೆರೋ ನಾಯಕಿ.

 • ಬನಾರಸ್ ಮೊದಲ ಹಾಡು ಬಂತು : ಹೇಗೆ ನಟಿಸಿದ್ದಾರೆ ಜಮೀರ್ ಪುತ್ರ?

  ಬನಾರಸ್ ಮೊದಲ ಹಾಡು ಬಂತು : ಹೇಗೆ ನಟಿಸಿದ್ದಾರೆ ಜಮೀರ್ ಪುತ್ರ?

  ಮಾಯಗಂಗೆ.. ಮಾಯಗಂಗೆ.. ಮೌನಿಯಾದಳೇ..

  ಪವಿತ್ರ ಗಂಗಾನದಿಯ ತಟದ ಮೇಲೆ ಅರಳುವ ಪ್ರೀತಿ.. ನಾಯಕಿ ಪ್ರೀತಿ ಹೇಳುತ್ತಿದ್ದಂತೆ ಗಂಗೆಯಲ್ಲಿ ಮುಳುಗೇಳುವ ನಾಯಕ.. ಅಜನೀಶ್ ಲೋಕನಾಥ್ ಸಂಗೀತ ಗುಂಗು ಹಿಡಿಸೋಕೆ ಶುರು ಮಾಡಿದರೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ಮೋಡಿ ಮಾಡುತ್ತದೆ. ಅರ್ಮಾನ್ ಮಲಿಕ್ ಕಂಠಸಿರಿಗೆ ತಕ್ಕಂತೆ ನಟಿಸಿರುವುದು ಝೈದ್ ಖಾನ್. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಚೆಂದವಾಗಿ ಕಾಣಿಸುತ್ತಾರೆ. ಚೆನ್ನಾಗಿ ನಟಿಸಿದ್ದಾರೆ ಅನ್ನೋ ಭರವಸೆ ಈ ಹಾಡಿನಲ್ಲಿ ಸಿಗುತ್ತದೆ. ಅಫ್‍ಕೋರ್ಸ್.. ನಿರ್ದೇಶಕರಾಗಿರೋದು ಜಯತೀರ್ಥ.

  ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ಚಿತ್ರ ನ್ಯಾಷನಲ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ತೆರೆಗೆ ಬರುತ್ತಿದೆ. ಝೈದ್ ಖಾನ್ ಎದುರು ನಾಯಕಿಯಾಗಿ ನಟಿಸಿರುವುದು ಶೃಂಗಾರದ ಹೊಗೆ ಮರದಲ್ಲಿ ಹೂ ಬಿಡುವಂತೆ ಮಾಡಿದ ಸೋನಲ್ ಮಂಥೆರೋ. ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ದೇವರಾಜ್, ಸಪ್ನಾ ರಾಜ್.. ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಇದೂ ಕೂಡಾ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ.

 • ಬನಾರಸ್ ಹೀರೋ ಕನ್ನಡ ಪ್ರೀತಿ

  ಬನಾರಸ್ ಹೀರೋ ಕನ್ನಡ ಪ್ರೀತಿ

  ಬನಾರಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಹೊಸ ಹೀರೋ ಝೈದ್ ಖಾನ್. ಕಾಂಗ್ರೆಸ್ ರಾಜಕಾರಣಿ ಜಮೀರ್ ಅಹ್ಮದ್ ಪುತ್ರ ಎಂಬುದು ಮೊದಲ ಚಿತ್ರಕ್ಕೆ ಪ್ಲಸ್ಸೂ ಆಯಿತು. ಮೈನಸ್ಸೂ ಆಯಿತು. ಅದೆಲ್ಲವನ್ನೂ ಮೀರಿ ಝೈದ್ ಖಾನ್ ಭರವಸೆ ಹುಟ್ಟಿಸಿದ್ದು ನಟನೆಯ ಮೂಲಕ. ಒಳ್ಳೆಯ ನಟನಾಗುತ್ತಾನೆ ಎನಿಸಿರುವ ಝೈದ್ ಖಾನ್ ಇತ್ತೀಚೆಗೆ ಹಿಂದಿ ಚಿತ್ರವೊಂದರ ಆಫರ್ ಬೇಡ ಎಂದಿದ್ದಾರೆ.

  ಬನಾರಸ್ ನಂತರ ಹಿಂದಿಯ ಖ್ಯಾತ ನಿರ್ದೇಶಕರೊಬ್ಬರು ಝೈದ್ ಖಾನ್ ಅವರಿಗೆ ಸಿನಿಮಾ ಮಾಡೋಕೆ ಮುಂದೆ ಬಂದಿದ್ದರು. ಬಾಲಿವುಡ್‍ನ ಟಾಪ್ ಹೀರೋಯಿನ್ ಆಯ್ಕೆಯಾಗಿದ್ದರು. ಎಲ್ಲವೂ ಓಕೆ ಆಗಿತ್ತು. ಆದರೆ ಝೈದ್ ಖಾನ್ ಕೊನೆಯ ಕ್ಷಣದಲ್ಲಿ ಸಿನಿಮಾ ರಿಜೆಕ್ಟ್ ಮಾಡಿದ್ದಾರೆ.

  ಇಷ್ಟಕ್ಕೂ ಝೈದ್ ಖಾನ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಣ ಎಂದು ಹೇಳಿದ್ದರಂತೆ. ಆದರೆ ಆ ಹಿಂದಿಯ ನಿರ್ದೇಶಕರು ಹಿಂದಿಯಲ್ಲಿ ಮಾತ್ರ ಮಾಡೋದಾಗಿ ಹಠ ಹಿಡಿದರಂತೆ.

  ಆದ್ದರಿಂದ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ ಝೈದ್ ಖಾನ್. ಈ ಬಗ್ಗೆ ಆ ನಿರ್ದೇಶಕರಿಗೆ ಝೈದ್ ಖಾನ್ ಉತ್ತರವನ್ನು ಕೂಡ ನೀಡಿದ್ದಾರಂತೆ. 'ನೀವು ನನ್ನನ್ನು ಅಪ್ರೋಚ್ ಮಾಡಲು ಕಾರಣವಾಗಿರೋದು ಬನಾರಸ್ ಸಿನಿಮಾ. ಆದರೆ ಅದು ಪ್ರಧಾನವಾಗಿ ತಯಾರಾಗಿರುವುದು ಕನ್ನಡದಲ್ಲಿ ಮತ್ತು ಅದು ಗೆದ್ದಿರುವುದು ಕನ್ನಡಿಗರಿಂದ. ನಾನು ಯಾವುದೇ ಕಾರಣಕ್ಕೂ ಕನ್ನಡ ಚಿತ್ರರಂಗವನ್ನು ಬಿಟ್ಟು ಹೋಗಲು ಸಿದ್ಧನಿಲ್ಲ.. ಕನ್ನಡದ ಜೊತೆಗೆ ಮಾಡಿದರೆ ಮಾತ್ರ ಬೇರೆ ಭಾಷೆಯಲ್ಲೂ ಸಿನಿಮಾ ಮಾಡುತ್ತೇನೆ' ಎಂದು ಹೇಳಿದ್ದಾರಂತೆ.

 • ಭರವಸೆ ಮೂಡಿಸಿದ ಬನಾರಸ್ ಝೈದ್ ಖಾನ್

  ಭರವಸೆ ಮೂಡಿಸಿದ ಬನಾರಸ್ ಝೈದ್ ಖಾನ್

  ಬನಾರಸ್ ರಿಲೀಸ್ ಆಗಿದೆ. ಜಯತೀರ್ಥ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೆ ನಿರೀಕ್ಷೆಯಂತೂ ಇತ್ತು. ಜೊತೆಗೆ ಕಾಂಗ್ರೆಸ್ ಮುಖಂಡ ಜಮೀರ್ ಖಾನ್ ಪುತ್ರ ಝೈದ್ ಖಾನ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ ಎಂಬುದು ಕೂಡಾ ಕುತೂಹಲ ಕೆರಳಿಸಿತ್ತು. ಇದರ ಮಧ್ಯೆ ನನ್ನ ಮುಸ್ಲಿಂ ಶೈಲಿಯ ಕನ್ನಡ ಯಾಕೋ ಸರಿ ಹೋಗುತ್ತಿಲ್ಲ ಎನ್ನಿಸಿತು. ಹಾಗಾಗಿ ಬೇರೆಯವರಿಂದ ಡಬ್ ಮಾಡಿಸಿದೆ ಎಂದು ಝೈದ್ ಖಾನ್ ಹೇಳಿಕೆ ಟ್ರೋಲ್ ಕೂಡಾ ಆಗಿತ್ತು. ಆದರೆ ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಝೈದ್ ಖಾನ್ ಬಗ್ಗೆ ಟಾಕ್ ಬೇರೆಯದೇ ಶುರುವಾಗಿದೆ.

  ಝೈದ್ ಖಾನ್ ಸ್ಮಾರ್ಟ್ ಇದ್ದಾರೆ. ಅದರ ಜೊತೆಗೆ ನಟನೆಯಲ್ಲಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹಾಡು, ನಟನೆ, ಭಾವಾಭಿನಯ ನೋಡುತ್ತಿದ್ದರೆ ಝೈದ್ ಖಾನ್ ತಯಾರಿ ಮಾಡಿಕೊಂಡೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನಿಸುವುದು ಸುಳ್ಳಲ್ಲ. ಜಯತೀರ್ಥ ಚಿತ್ರರಂಗಕ್ಕೆ ಒಬ್ಬ ಭರವಸೆಯ ಹೀರೋನನ್ನು ಕೊಡಮಾಡಿದ್ದಾರೆ.

  ಅಂದಹಾಗೆ ರಿಷಬ್ ಶೆಟ್ಟಿಯೊಳಗೊಬ್ಬ ಪ್ರತಿಭಾನ್ವಿತ ಹೀರೋನನ್ನು ಸಖತ್ತಾಗಿ ಹೊರತಂದವರೇ ಜಯತೀರ್ಥ. ಬೆಲ್‍ಬಾಟಂ ಮೂಲಕ. ಈಗ ಇನ್ನೊಬ್ಬ ಹೊಸ ಪ್ರತಿಭೆಯನ್ನು ಬನಾರಸ್ ಮೂಲಕ ಪರಿಚಯಿಸಿದ್ದಾರೆ. ಚಿತ್ರ ಬಿಡುಗಡೆಗೂ ಮೊದಲು ಸೋನಲ್ ಮಂಥೆರೋ ಸೇರಿದಂತೆ ಇಡೀ ಚಿತ್ರತಂಡ ಇದನ್ನೇ ಹೇಳಿತ್ತು. ಆದರೆ ಫೈನಲಿ ಪ್ರೇಕ್ಷಕರ ಮಾತು ಮುಖ್ಯ. ಪ್ರೇಕ್ಷಕರೂ ಕೂಡಾ ಝೈದ್ ಖಾನ್ ಚಿತ್ರರಂಗಕ್ಕೆ ಭರವಸೆ ಮೂಡಿಸಬಲ್ಲ ಹೀರೋ ಎಂದಿದ್ದಾರೆ ಪ್ರೇಕ್ಷಕರು.

 • ವೆಲ್‍ಕಂ ಟು ಬನಾರಸ್ : ಟೈಂ ಟ್ರಾವೆಲಿಂಗ್ ಲವ್ ಸ್ಟೋರಿ

  ಜಯತೀರ್ಥ ಚಿತ್ರ ಎಂದಾಕ್ಷಣ ಕಣ್ಣ ಮುಂದೆ ಬರುವ ಚಿತ್ರಗಳ ಹೆಸರುಗಳಿಂದಲೇ ಬನಾರಸ್ ಮೇಲೆ ನಿರೀಕ್ಷೆಯಿತ್ತು. ನಿರೀಕ್ಷೆ ಹುಸಿ ಮಾಡದಂತೆ ವಿಭಿನ್ನ ಕಥೆಯೊಂದಿಗೇ ಟ್ರೇಲರ್ ಹೊರಬಿಟ್ಟಿದ್ದಾರೆ ಜಯತೀರ್ಥ. ಬನಾರಸ್ ಚಿತ್ರದ ಟ್ರೇಲರ್ ನೋಡಿದವರಿಗೆ ಇದು ಬರಿಯ ಹೊಸ ಮುಖಗಳ ಪ್ರೇಮಕಥೆ ಅಲ್ಲ. ಅಲ್ಲೊಂದು ನಿಗೂಢ ಲೋಕಕ್ಕೆ ಕರೆದುಕೊಂಡು ಹೋಗುವ ಟೈಂ ಟ್ರಾವೆಲ್ ಸ್ಟೋರಿಯೂ ಇದೆ. ಬನಾರಸ್ ಎಂದು ಹಿಂದೂಗಳ ಪವಿತ್ರ ಕ್ಷೇತ್ರ.. ಅಲ್ಲೊಬ್ಬಳು ಚೆಲುವೆ.. ಅವಳಿಗೆ ಮರುಳಾಗುವ ಚೆಲುವ.. ಮಧ್ಯೆ ಟೈಂ ಟ್ರಾವೆಲ್ ಸ್ಟೋರಿ.. ಅದು ಲವ್ ಕಮ್ ಕ್ರೈಂ ಕವ್ ಸೈಂಟಿಫಿಕ್ ಕಂ ಥ್ರಿಲ್ಲರ್ ಸ್ಟೋರಿ.

  ಹೊಸ ಮುಖವಾದ ಝೈದ್ ಖಾನ್ ಹೊಸಬರು ಎನ್ನಿಸಲ್ಲ ಎನ್ನಿಸುವಂತೆ ಕಾಣಿಸುತ್ತಾರೆ. ಸೋನಲ್ ಮಂಥೆರೋ ಅಭಿನಯ ಮತ್ತು ಸೌಂದರ್ಯ ಎರಡರಲ್ಲೂ ಕಂಗೊಳಿಸಿದ್ದಾರೆ. ಅಚ್ಯುತ್, ದೇವರಾಜ್, ಸುಜಯ್ ಶಾಸ್ತ್ರಿ, ಸಪ್ನಾ ರಾಜ್, ಬರ್ಕತ್ ಅಲಿ.. ಎಲ್ಲರೂ ಹುಬ್ಬೇರಿಸುವಂತೆ ನಟಿಸಿದ್ದಾರೆ.

  ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದು ವಿ.ರವಿಚಂದ್ರನ್ ಮತ್ತು ಅರ್ಬಾಜ್ ಖಾನ್. ನಂತರ ಮಾತನಾಡಿದ ಅರ್ಬಾಜ್ ಖಾನ್ ಅಪ್ಪುರನ್ನು ನೆನಪಿಸಿಕೊಂಡರು. ನಿರ್ದೇಶಕ ಜಯತೀರ್ಥ ಅವರಿಗೆ ಧನ್ಯವಾದ ಹೇಳಿದ ಝೈದ್ ಖಾನ್ ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ವಿನೀತರಾದರು. ಇದು ನನ್ನ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂದು ಥ್ರಿಲ್ಲಾದರು ಸೋನಲ್. ಸಿನಿಮಾ ನವೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ.

 • ಹೆಣ್ಣು ಹಡೆಯಲು ಬ್ಯಾಡ.. : ಜಾನಪದ ಹಾಡಿನ ಗುಂಗು ಹತ್ತಿಸಿದ ಬನಾರಸ್..!

  banaras movie image

  ಹೆಣ್ಣು ಹಡೆಯಲು ಬ್ಯಾಡ..

  ಹೆರವರಿಗೆ ಕೊಡಬ್ಯಾಡ..

  ಹೆಣ್ಣು ಹೋಗುವಾಗ ಅಳಬ್ಯಾಡ..

  ಹೆಣ್ಣು ಹೋಗುವಾಗ ಅಳಬ್ಯಾಡ ಹಡೆದವ್ವ..

  ಸಿಟ್ಟಾಗಿ ಶಿವನ ಬೈಬ್ಯಾಡ..

  ಹೀಗೆ ಶುರುವಾಗುವ ಹಾಡು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ. ಮತ್ತು ಅದು ನಮ್ಮದೇ ಲೋಕ ಎನ್ನುವುದು ಈ ಹಾಡಿನ ವಿಶಿಷ್ಟತೆ. ತಾಯಿ ಮತ್ತು ಮಗಳ ಬಾಂಧವ್ಯವನ್ನು.. ಹೆಣ್ಣು ಮಕ್ಕಳನ್ನು ಹಡೆದ ಮೇಲೆ ಅನುಭವಿಸುವ ನೋವು, ತಳಮಳಗಳನ್ನೆಲ್ಲ ಹಾಡಿನಲ್ಲಿ ತಂದಿಟ್ಟಿರೋ ಈ ಜನಪದ ಗೀತೆ ಇರೋದು ಬನಾರಸ್ ಚಿತ್ರದಲ್ಲಿ.

  ಜನಪದ ಗೀತೆಯನ್ನೇ ಯಥಾವತ್ತಾಗಿ ಬಳಸಿಕೊಂಡು ವ್ಹಾವ್ ಎನ್ನುವಂತೆ ಮಾಡಿದ್ದಾರೆ ನಿರ್ದೇಶಕ ಜಯತೀರ್ಥ. ಆ ಜನಪದ ಗೀತೆಯನ್ನು ಅಷ್ಟೇ ಚೆಂದವಾಗಿ ಹೃದಯಕ್ಕೆ ಮುಟ್ಟುವಂತೆ ಹಾಡಿರುವುದು ಹರ್ಷಿಕಾ ದೇವನಾಥ್. ಜನಪದ ಸಂಗೀತವನ್ನೇ ಬಳಸಿಕೊಂಡಿರೋ ಅಜನೀಶ್ ಲೋಕನಾಥ್, ಅದನ್ನು ಪುಟ್ಟ ಪುಟ್ಟ ಕಾರ್ಟೂನುಗಳಲ್ಲಿ ತೋರಿಸಿರೋ ಜಯತೀರ್ಥ ಕೇಳುಗರನ್ನು ಬಾಲ್ಯಕ್ಕೆ ಕೊಂಡೊಯ್ಯುತ್ತಾರೆ. ಅಂದಹಾಗೆ ಇದು ಜಮೀರ್ ಖಾನ್ ಅವರ ಪುತ್ರ ಝೈದ್ ಖಾನ್ ಮತ್ತು ಸೋನಲ್ ಮಂಥೆರೋ ನಟಿಸಿರೋ ಬನಾರಸ್ ಚಿತ್ರದ ಹಾಡು. ಸಿನಿಮಾ ಸಿದ್ಧವಾಗಿದೆ.

  ಝೈದ್-ಸೋನಲ್ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸಪ್ನಾ ರಾಜ್, ಭರತ್ ಅಲಿ ಮೊದಲಾದವರು ನಟಿಸಿದ್ದಾರೆ. ತಿಲಕ್ ರಾಜ್ ಬಲ್ಲಾಳ್ ಮತ್ತು ಮುಝಮಿಲ್ ಅಹ್ಮದ್ ಖಾನ್ ನಿರ್ಮಿಸಿರುವ ಚಿತ್ರ ಬನಾರಸ್ ರಿಲೀಸ್ ಆಗುವುದಕ್ಕೆ ಸಿದ್ಧವಾಗಿದೆ.