` gandhadha gudi, - chitraloka.com | Kannada Movie News, Reviews | Image

gandhadha gudi,

 • 2022ರ ಸೂಪರ್ ಹಿಟ್ ಸಂಸ್ಥೆ ಯಾವುದು ಗೊತ್ತಾ?

  2022ರ ಸೂಪರ್ ಹಿಟ್ ಸಂಸ್ಥೆ ಯಾವುದು ಗೊತ್ತಾ?

  2022. ಇಡೀ ವರ್ಷ ಕನ್ನಡ ಚಿತ್ರರಂಗಕ್ಕೆ ಶುಭ ಸುದ್ದಿ. ಒಂದರ ಹಿಂದೊಂದು ಹಿಟ್ ಚಿತ್ರಗಳು ಬರುತ್ತಿವೆ. ಈಗ ಗಂಧಧ ಗುಡಿಯೂ ಹಿಟ್ ಸಿನಿಮಾ ಲಿಸ್ಟಿಗೆ ಸೇರಿದೆ. ಅಂದಹಾಗೆ ಈ ವರ್ಷ ಅತೀ ಹೆಚ್ಚು ಮೆಗಾ ಹಿಟ್ ಕೊಟ್ಟ ಸಂಸ್ಥೆ ಹೊಂಬಾಳೆ. ಅದರಲ್ಲಿ ಅನುಮಾನವಿಲ್ಲ. ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಈ ವರ್ಷದ ಬ್ಲಾಕ್ ಬಸ್ಟರ್ಸ್. ಡಿವೈನ್ ಹಿಟ್ ಸಿನಿಮಾಗಳು.

  2021ರಲ್ಲಿ ಕೂಡಾ ಯುವರತ್ನ, ಬಡವ ರಾಸ್ಕಲ್, ಗರುಡ ಗಮನ ವೃಷಭ ವಾಹನ, ತೆಲುಗಿನ ವಕೀಲ್ ಸಾಬ್ ಚಿತ್ರಗಳನ್ನು ವಿತರಣೆ ಮಾಡಿತ್ತು. ಎಲ್ಲವೂ ಸೂಪರ್ ಹಿಟ್.

  2022ರಲ್ಲಿ ಕೆಜಿಎಫ್ 2 ಚಿತ್ರವನ್ನು ನಿರ್ಮಿಸಿದ್ದು ಹೊಂಬಾಳೆಯೇ ಆದರೂ ಕರ್ನಾಟಕದಲ್ಲಿ ಅದನ್ನು ವಿತರಣೆ ಮಾಡಿದ್ದು ಕೆಆರ್ಜಿ ಸ್ಟುಡಿಯೋಸ್. ಕಾರ್ತಿಕ್ ಗೌಡ ಅವರ ಸಂಸ್ಥೆ. ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ಟೇಲ್ 2, ಕೆಜಿಎಫ್ ಚಾಪ್ಟರ್ 2, ರಕ್ಷಿತ್ ಬ್ಯಾನರ್ನ ಸಕುಟುಂಬ ಸಮೇತ, 777 ಚಾರ್ಲಿ, ಕಾಂತಾರ ಮತ್ತೀಗ ಪುನೀತ್ ರಾಜಕುಮಾರ್ ಅವರ ಗಂಧದ ಗುಡಿ ಚಿತ್ರಗಳನ್ನು ವಿತರಣೆ ಮಾಡಿದ್ದು ಕೂಡಾ ಕೆಆರ್ಜಿ ಸ್ಟುಡಿಯೋಸ್.

  ಇವುಗಳಲ್ಲಿ ಗಂಧದ ಗುಡಿ ಇದೀಗ ತಾನೇ ರಿಲೀಸ್ ಆಗಿದೆ. ಕೆಜಿಎಫ್ ಚಾಪ್ಟರ್ 2 ಬಾಕ್ಸಾಫೀಸಿನಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ. ಕಾಂತಾರ 200 ಕೋಟಿ ಕ್ಲಬ್ ಸೇರಿದೆ. 777 ಚಾರ್ಲಿ ಕೂಡಾ 100 ಕೋಟಿಗೂ ಹೆಚ್ಚು ಗಳಿಸಿದ ಸಿನಿಮಾ. ಒಟ್ಟಿನಲ್ಲಿ ಈ ವರ್ಷವೂ ಕೆಆರ್ಜಿ ಸ್ಟುಡಿಯೋಸ್ ಸೂಪರ್ ಸಕ್ಸಸ್.

 • Gandhadha Gudi Movie Review

  Gandhadha Gudi Movie Review

  Film: Gandhadagudi

  Director: Amoghavarsha

  Cast: Puneeth Rajkumar, Amoghavarsha

  Duration: 97 minutes

  For most people watching Gandhadagudi, this will be their first documentary experience in a theatre. That is the biggest gift Puneeth Rajkumar has left the Kannada film industry with. The enthusiasm, love and cheering of the audience on the first day were all reserved for him and rightly so. This documentary and the reception for it pull at the heart’s strings on what could have been. What new possibilities in movies would he have explored? This is the real Puneeth Rajkumar on screen without his ‘Powerstar’ image. This was his tribute to Karnataka and which paradoxically has become a tribute to him.

  This documentary is a journey across the rich bio-diverse world of Karnataka through the eyes of Puneeth. His journey along with director Amoghavarsha, who made Wild Karnataka, the documentary much applauded earlier, takes us through the rich landscapes of the State. It introduces us to the famous as well as less explored natural wonders. It is not just the journey of the two that makes up the documentar. It also has a lively narrative that mixes anecdotes of people living there, foresters guarding these natural treasures and not least, the wildlife that makes it their home.

  We get to watch Puneeth talk about his experiences, his fears and the way this journey changes his perceptions. We see the world through his curious eyes and feel so sad when he says how he will carry these memories and experiences for the rest of his life. We get to see first-hand the real person behind the superstar personality. As much as this documentary is an exploration of Karnataka’s wild side, it is also an exploration of Puneeth’s true persona. The film captures Karnataka’s forests and Puneeth’s life in the same frames.

  Special mention should be made of the camerawork by Pratheek Shetty and the team that went to great lengths to capture this landmark visual treat. The other highlight is B Ajaneesh Loknath’s background score. It is pure magic.

  Feature films are not the only motion pictures that theatres can depend on forever. We already see them screening cricket matches. A few Hollywood documentary films have already made the cut. Puneeth had embarked on something very special. A big success for Gandhadagudi could open up a vast new avenue for filmmakers as well as artistes.

  -S Shyam Prasad 

 • ಅಭಿಮಾನಿ ದೇವರುಗಳಿಂದ ಗಂಧದ ಗುಡಿ ಅಭಿಯಾನ

  ಅಭಿಮಾನಿ ದೇವರುಗಳಿಂದ ಗಂಧದ ಗುಡಿ ಅಭಿಯಾನ

  ಅಭಿಮಾನಿಗಳೇ ನಮ್ಮನೆ ದೇವ್ರು ಎಂದು ಹಾಡಿ ಕುಣಿದಿದ್ದ ಪುನೀತ್ ರಾಜಕುಮಾರ್ ಈಗ ಅಭಿಮಾನಿಗಳ ಹೃದಯದಲ್ಲಿ ದೇವರಾಗಿಯೇ ಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಓಪನ್ ಆಗುತ್ತಿದ್ದ ಅಪ್ಪು, ಡಾಕ್ಯುಮೆಂಟರಿ ಮೂಲಕ ಕರ್ನಾಟಕವನ್ನು ವಿಭಿನ್ನ ರೀತಿಯಲ್ಲಿ ಕನ್ನಡಿಗರಿಗೆ ಪರಿಚಯಿಸುವ ಕನಸು ಕಂಡಿದ್ದರು. ಸಾಕ್ಷ್ಯಚಿತ್ರವಾದರೂ ಅದನ್ನು ಸಿನಿಮಾದಂತೆಯೇ ಚಿತ್ರಮಂದಿರದಲ್ಲಿ ತೋರಿಸುವ ಹೊಸ ಪ್ರಯೋಗಕ್ಕೆ ಮುಂದಾಗಿದ್ದರು. ಈಗ ಅವರಿಲ್ಲ. ಭೌತಿಕವಾಗಿ ಅವರಿಲ್ಲದೆ ಹೋದರೂ ಆ ಡಾಕ್ಯುಮೆಂಟರಿಯನ್ನು ಅವರ ಕನಸಿನಂತೆಯೇ ಚಿತ್ರಮಂದಿರದಲ್ಲಿ ತೋರಿಸಲು ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಗಿದ್ದಾರೆ. ಗಂಧದ ಗುಡಿ ಅಕ್ಟೋಬರ್ 28ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ. ಅಕ್ಟೋಬರ್ 29ಕ್ಕೆ  ಪುನೀತ್ ಅವರ ಪುಣ್ಯತಿಥಿ. ಪ್ರಚಾರವನ್ನು ಅಭಿಮಾನಿಗಳೇ ಆರಂಭಿಸಿದ್ದಾರೆ.

  ಬೆಂಗಳೂರಿನಲ್ಲಿ ಗಂಧದ ಗುಡಿ ಪ್ರಚಾರದ ಸಲುವಾಗಿ ಬೈಕ್ ರ್ಯಾಲಿ ನಡೆಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಬೈಕ್ ರ್ಯಾಲಿಗೆ ಉದ್ಘಾಟಿಸಿದರು. ಸಚಿವ ಅಶ್ವತ್ಥ್ ನಾರಾಯಣ್ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿದರು. ಎಲ್ಲರೂ ಗಂಧದ ಗುಡಿ ರೈಡ್ ಫಾರ್ ಅಪ್ಪು ಟೀ ಶರ್ಟ್ ಧರಿಸಿ ಗಮನ ಸೆಳೆದರು. ಗಂಧದ ಗುಡಿ ಡಾಕ್ಯುಮೆಂಟರಿ ಡೈರೆಕ್ಟರ್ ಅಮೋಘವರ್ಷ ಈ ಸಂದರ್ಭದಲ್ಲಿ ಹಾಜರಿದ್ದರು.

 • ಅಭಿಮಾನಿಗಳ ಅಭಿಮಾನದ ಗುಡಿಯಲ್ಲಿ ಅಪ್ಪು ಗಂಧದ ಗುಡಿ : ಏನಿದೆ ಇದರಲ್ಲಿ..

  ಅಭಿಮಾನಿಗಳ ಅಭಿಮಾನದ ಗುಡಿಯಲ್ಲಿ ಅಪ್ಪು ಗಂಧದ ಗುಡಿ : ಏನಿದೆ ಇದರಲ್ಲಿ..

  ಈ ಸಿನಿಮಾವನ್ನು ನಾವು ಥಿಯೇಟರಿನಲ್ಲಿಯೇ ನೋಡುತ್ತೇವೆ ಮೇಡಂ. ನಮ್ಮ ಅಪ್ಪುವನ್ನ ನೋಡುವ ಕ್ಷಣ ಮಿಸ್ ಮಾಡಿಕೊಳ್ಳಲ್ಲ.

  ಇದು ಬಹುತೇಕ ಅಭಿಮಾನಿಗಳು ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಸಾಂತ್ವನ ಹೇಳಿದ ರೀತಿ. ಅಕ್ಟೋಬರ್ 28ಕ್ಕೆ ಗಂಧದ ಗುಡಿ ಥಿಯೇಟರಿಗೆ ಬರುತ್ತಿದೆ. ನೋಡಿ. ಹೇಗಿದೆ ಎಂದು ಹೇಳಿ ಎಂಬ ಅಶ್ವಿನಿಯವರ ಒಂದು ಮಾತಿಗೆ ಇಡೀ ಕರುನಾಡು ಭಾವುಕವಾಗಿ ಹೋಗಿತ್ತು. ಸೋಷಿಯಲ್ ಮೀಡಿಯಾಗಳಲ್ಲಿ ಸ್ವತಃ ತಾವು ತಾವೇ ಗಂಧದ ಗುಡಿಯನ್ನು ಟ್ರೇಲರ್ ಪ್ರಮೋಟ್ ಮಾಡಿದರು. ಪುಟ್ಟ ಪುಟ್ಟ ಬರಹಗಳ ಮೂಲಕ ಅಪ್ಪು ಅಭಿಮಾನಿಗಳ ಹೃದಯದಲ್ಲಿದ್ದಾರೆ ಎನ್ನುವುದನ್ನು ಮತ್ತೆ ಸಾಬೀತು ಮಾಡಿದರು. ಜೊತೆಗಿರದ ಜೀವ ಎಂದಿಂಗೂ ಜೀವಂತ.

  ಟ್ರೇಲರ್‍ನ್ನು ರಿಲೀಸ್ ಮಾಡಿದ್ದು ನರ್ತಕಿ ಥಿಯೇಟರಿನಲ್ಲಿ. ಅಶ್ವಿನಿ ಪುನೀತ್, ರಾಘವೇಂದ್ರ ರಾಜಕುಮಾರ್, ವಿನಯ್, ಗುರು(ಯುವರಾಜಕುಮಾರರ್), ಧಿರೇನ್ ಸೇರಿದಂತೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಅಪ್ಪು ಪರ ಅಭಿಮಾನದ ಜೈಕಾರ ಮೊಳಗಿತ್ತು.

  ಪುನೀತ್ ಅವರ ಕನಸು ಗಂಧದ ಗುಡಿ. ಪುನೀತ್ ಅವರ ಕಡೆಯ ಸಿನಿಮಾ ಗಂಧದ ಗುಡಿ. ಇದು ಸಿನಿಮಾ ಅಲ್ಲ. ಅನುಭವ. ಇಲ್ಲಿ ಕಥೆ ಇಲ್ಲ, ಕ್ಲೈಮಾಕ್ಸ್ ಇಲ್ಲ. ಕರ್ನಾಟಕ ದರ್ಶನವಿದೆ. ‘ಗಂಧದ ಗುಡಿಗಾಗಿ

  ಪುನೀತ್ ರಾಜ್ಕುಮಾರ್ ಇಡೀ ಕರ್ನಾಟಕ ಸುತ್ತಿದ್ದಾರೆ.  ರಾಜ್ಯದ ವನ್ಯಜೀವಿಗಳು, ಪಕ್ಷಿಗಳು, ಸಮುದ್ರ ಜೀವಿಗಳು ಕುರಿತ ಸಾಕ್ಷ್ಯಚಿತ್ರ ಇದ. 90 ನಿಮಿಷಗಳ ಈ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ಪುನೀತ್ ರಾಜ್ಕುಮಾರ್ ಕೆಲ ಕಾಡುಗಳಿಗೆ ತೆರಳಿದ್ದರು, ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ಕೂಡ ಮಾಡಿದ್ದರು.

  ಈ ಸಿನಿಮಾ ಟ್ರೇಲರ್ ನೋಡಿ ಎಲ್ಲೋ ಒಂದು ಕಡೆ ನನ್ನ ಜವಾಬ್ದಾರಿಯನ್ನು ತೀರಿಸಿದ್ದೇನೆ ಎಂದು ಭಾವಿಸಿರುವೆ. ನಮ್ಮ ನಾಡು ತುಂಬ ಸುಂದರವಾಗಿದೆ, ನಮ್ಮ ಬಳಿ ಎಲ್ಲವೂ ಇದೆ, ಅದನ್ನು ಉಳಿಸಿಕೊಂಡು ಹೋಗಬೇಕು. ಗಾಜನೂರು ಪಕ್ಕ ಒಂದು ದೊಡ್ಡ ಬೆಟ್ಟ ಇರೋದು ನನಗೆ ಗೊತ್ತಿರಲಿಲ್ಲ ಎಂದು ಅಪ್ಪು ಹೇಳಿದ್ದರು. ಅಪ್ಪು ಸರ್ ಪುಟ್ಟ ಮಗು ಇದ್ದಹಾಗೆ, ಎಲ್ಲೇ ಹೋದರೂ ಪ್ರೀತಿಯಿಂದ ಕೊಟ್ಟರೆ ಏನೂ ಬೇಕಿದ್ರೂ ತಿನ್ನುತ್ತಿದ್ದರು. ಅವರು ಎಲ್ಲ ಲೋಕಲ್ ಫುಡ್ ಕೂಡ ತಿನ್ನುತ್ತಿದ್ದರು. ಅವರ ಜೊತೆ ಒಂದು ವರ್ಷ ಕಳೆದಿದ್ದು ಮಾತ್ರ ಮರೆಯೋಕೆ ಆಗೋದಿಲ್ಲ. ಊಟ ತಿಂಡಿಯಿಂದ ಹಿಡಿದು ಎಲ್ಲ ವಿಷಯಕ್ಕೂ ಅವರು ಖುಷಿಪಡುತ್ತಿದ್ದರು. ನಿರ್ದೇಶಕ ಅಮೋಘವರ್ಷ ಮಾತನಾಡಿದ್ದು ಹೀಗೆ. ಇದು ಅಪ್ಪು ನನಗೆ ಕೊಟ್ಟ ಕಡೆಯ ಗಿಫ್ಟ್ ಎಂದ ಭಾವುಕರಾದರು. ಟ್ರೇಲರ್ ನೋಡಿ ಅಭಿನಂದಿಸಿದವರು ಒಬ್ಬಿಬ್ಬರಲ್ಲ.

  ಇದು ಪ್ರಕೃತಿ ಮಾತೆಗೆ ಕರ್ನಾಟಕದ ಸೌಂದರ್ಯಕ್ಕೆ ನೀಡಿದ ಗೌರವ. ಅಪ್ಪು ಲಕ್ಷಾಂತರ ಹೃದಯಗಳಲ್ಲಿ ಜೀವಂತವಾಗಿದ್ದಾರೆ. ಉತ್ತಮ ವ್ಯಕ್ತಿತ್ವ ಮತ್ತು ಉತ್ತಮ ತೇಜಸ್ಸು ಅವರಲ್ಲಿ ತುಂಬಿತ್ತು.

  ನರೇಂದ್ರ ಮೋದಿ, ಪ್ರಧಾನ ಮಂತ್ರಿ

 • ಕಡೆಯ 5 ನಿಮಿಷ ಉಳಿಯುವುದು ಕಣ್ಣೀರು ಮಾತ್ರ : ಹೀಗಿದೆ ಗಂಧದ ಗುಡಿ

  ಕಡೆಯ 5 ನಿಮಿಷ ಉಳಿಯುವುದು ಕಣ್ಣೀರು ಮಾತ್ರ : ಹೀಗಿದೆ ಗಂಧದ ಗುಡಿ

  ಗಂಧದ ಗುಡಿ ಸಿನಿಮಾ ಅಲ್ಲ ಡಾಕ್ಯುಮೆಂಟರಿ ರಿಲೀಸ್ ಆಗಿದೆ. ಬೆಳಗ್ಗಿನಿಂದಲೇ ಶೋಗಳು ಶುರುವಾಗಿವೆ. ಇಡೀ ಕುಟುಂಬ ಸಿನಿಮಾವನ್ನು ನೋಡುತ್ತಿರುವುದು ವಿಶೇಷ. ಇಡೀ ಚಿತ್ರರಂಗ ಸಿನಿಮಾ ನೋಡಿ ಮೆಚ್ಚಿಕೊಂಡಿದೆ. ಅಂದಹಾಗೆ ಚಿತ್ರ ನೋಡಿದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಿರಿಯ ಪತ್ರಕರ್ತ ಜೋಗಿ ಅವರ ಪ್ರಕಾರ ಸಿನಿಮಾ ಹೀರೋ ಅಲ್ಲ. ನೋಡುಗರಾದ ನಾವೇ ಹೀರೋ. ಏಕೆಂದರೆ ಡಾಕ್ಯುಮೆಂಟರಿ ನೋಡುವಾಗ ಅಪ್ಪು ಪಯಣದಲ್ಲಿ ನಾವು ಅವರ ಅಕ್ಕಪಕ್ಕ ಇದ್ದಂತೆ ಅಣ್ಣನೋ..ತಮ್ಮನೋ..ಚಿಕ್ಕಪ್ಪನೋ.. ಮಾವನೋ ಜೊತೆಯಲ್ಲಿ ಕರೆದುಕೊಂಡು ಹೋಗುವ ಅನುಭವವಾಗುತ್ತದೆ. ಸುಮ್ಮನ ನೋಡಿ ಸುಮ್ಮಾನ ನಿಮ್ಮದಾಗುತ್ತದೆ. ನೋಡಿದ ಮೇಲೆ ಅಂತರಂಗದಲ್ಲೊಂದು ಪಯಣ ಶುರುವಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

  ಚಿತ್ರದಲ್ಲಿ ಹಾವು ಕಂಡರೆ ಅಪ್ಪು ಭಯ ಪಡುವಾಗ ಬೇಡ ಬೇಡವೆಂದರೂ ಭಕ್ತ ಪ್ರಹ್ಲಾದದ ಹಾವನ್ನು ಮೈಮೇಲೆ ಹತ್ತಿಸಿಕೊಳ್ಳೋ ದೃಶ್ಯ ನೆನಪಾಗುತ್ತದೆ. ಅಮೋಘವರ್ಷ ಹಾವುಗಳಿವೆ ಎಂದಾಗ ಅಯ್ಯೋ.. 3 ಸಿನಿಮಾ ಒಪ್ಕೊಂಡಿದ್ದೀನಿ. ಹೆಂಡ್ತಿ ಮಕ್ಕಳಿದ್ದಾರೆ. ಸೇಫಾಗಿ ಮನೆ ತಲುಪ್ತೀವಿ ತಾನೇ ಎನ್ನುವಾಗ ಕಣ್ಣಂಚು ಒದ್ದೆಯಾಗುತ್ತದೆ. ಇಡೀ ಚಿತ್ರದಲ್ಲಿ ಕರುನಾಡಿನ ಪ್ರಕೃತಿ ದೃಶ್ಯವೈಭವ ಕಣ್ಮನ ಸೆಳೆಯುತ್ತದೆ. ಅಶ್ವಿನಿ ಪುನೀತ್ ರಾಜಕುಮಾರ್ ಡಾಕ್ಯುಮೆಂಟರಿಯಲ್ಲಿದ್ದಾರೆ. ಬೆಟ್ಟದ ಹೂವಿನಿಂದ ಆರಂಭವಾಗಿ ಬೆಟ್ಟದ ಹೂವು ನೀರಿನಲ್ಲಿ ತೇಲಿ ಹೋಗುವ ದೃಶ್ಯದೊಂದಿಗೆ ಚಿತ್ರ ಕೊನೆಯಾಗುತ್ತದೆ. ಕೊನೆಯ 5 ನಿಮಿಷದಲ್ಲಿ ಪ್ರೇಕ್ಷಕರಿಗೆ ಕಣ್ಣೀರು ತರಿಸುತ್ತಾರೆ. ಅಪ್ಪು ಗಂಧದ ಗುಡಿಯಲ್ಲಿ ಸಂದೇಶವನ್ನೂ ನೀಡಿದ್ದಾರೆ. ಸಿನಿಮಾ ನೋಡಿದ ನಂತರ ಅವನ್ನು ಅಳವಡಿಸಿಕೊಂಡರೆ ಅದು ಅಪ್ಪುಗೆ ಸಲ್ಲಿಸುವ ಗೌರವವೂ ಹೌದು.

 • ಗಂಧದ ಗುಡಿ ನೋಡಿದ ಶಿವಣ್ಣ ಅಶ್ವಿನಿ ಬಗ್ಗೆ ಹೇಳಿದ ಮಾತಿದು

  ಗಂಧದ ಗುಡಿ ನೋಡಿದ ಶಿವಣ್ಣ ಅಶ್ವಿನಿ ಬಗ್ಗೆ ಹೇಳಿದ ಮಾತಿದು

  ಗಂಧದ ಗುಡಿ ಟೀಸರ್ ಹೊರಬಿದ್ದಿದೆ. ಪಾರ್ವತಮ್ಮ ರಾಜ್‍ಕುಮಾರ್ ಜನ್ಮದಿನದಂದೇ ಟೀಸರ್ ರಿಲೀಸ್ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ರಾಜ್ಯೋತ್ಸವದ ದಿನ ರಿಲೀಸ್ ಆಗಬೇಕಿದ್ದ ಟೀಸರ್ ಇದು. ಅಮೋಘವರ್ಷ ಅವರ ಕೈಚಳಕ, ಪರಿಕಲ್ಪನೆ, ಸಾಹಸ.. ಅದೆಲ್ಲದಕ್ಕೂ ಬೆನ್ನೆಲುಬಾಗಿ ನಿಂತಿದ್ದ ಪುನೀತ್.. ಇವೆಲ್ಲದರ ಸಂಗಮವೇ ಗಂಧದ ಗುಡಿ. ಈ ಗಂಧದ ಗುಡಿಗಾಗಿ ಒಂದು ವರ್ಷ ಅವರ ಜೊತೆ ಇದ್ದೆ. ಅದೇ ಖುಷಿ. ಈ ಗಂಧದ ಗುಡಿಯಲ್ಲಿ ಪುನೀತ್ ಮೇಕಪ್ ಇಲ್ಲದೆ, ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಒಂದು ಚೆಂದದ ಕಥೆ ಹೇಳಲಿದ್ದೇವೆ ಎಂದಿದ್ದಾರೆ ಅಮೋಘವರ್ಷ.

  ಟೀಸರ್ ನೋಡಿದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿರುವಾಗ ಶಿವಣ್ಣ ಅಶ್ವಿನಿಯವರ ಬಗ್ಗೆ ಮಾತನಾಡಿದ್ದಾರೆ. ಅಶ್ವಿನಿ ಮೊನ್ನೆ ಕರೆ ಮಾಡಿದ್ದರು. ಪಿಆರ್‍ಕೆ ಕಚೇರಿಗೆ ಹೋಗಬೇಕು ಅಂದ್ಕೊಂಡಿದ್ದೇನೆ ಅಂದ್ರು. ನಾವೆಲ್ಲ ನಿನ್ನ ಜಒತೆ ಇದ್ದೇವೆ ಎಂದೆ. ಗೊತ್ತಿದೆ ಶಿವಣ್ಣ, ನಿಮಗೆ ಒಂದು ಮಾತು ಹೇಳೋಣ ಎಂದುಕೊಂಡು ಫೋನ್ ಮಾಡಿದೆ ಎಂದರು. ಅಶ್ವಿನಿಗೆ ಒಂದು ಪವರ್ ಇದೆ. ಅಪ್ಪು ಮತ್ತು ಅಶ್ವಿನಿ ಗಂಡ ಹೆಂಡತಿ ಅನ್ನೋದಕ್ಕಿಂತ ಹೆಚ್ಚಾಗಿ ಒಳ್ಳೆ ಫ್ರೆಂಡ್ಸ್ ರೀತಿ ಇದ್ದರು. ಅವರನ್ನು ಮದುವೆಗೆ ಮೊದಲಿನಿಂದಲೂ ನೋಡಿದ್ದೇನೆ. ಅಶ್ವಿನಿ ಎಷ್ಟು ಧೈರ್ಯವಂತೆ ಅಂದ್ರೆ, ಆಕೆಗೆ ನಮ್ಮ ಬೆಂಬಲ ಬೇಕಾಗದೆಯೇ ಇರಬಹುದು. ಆದರೂ.. ನಾವೆಲ್ಲರೂ ಅವರ ಜೊತೆಗೆ ಇರುತ್ತೇವೆ ಎಂದಿದ್ದಾರೆ ಶಿವಣ್ಣ.

  ಅಂದಹಾಗೆ ಈ ಗಂಧದ ಗುಡಿ ಸಿನಿಮಾ ಅಲ್ಲ. ಸಿನಿಮಾ ಶೈಲಿಯಲ್ಲಿಯೇ ಇರೋ ಡಾಕ್ಯುಮೆಂಟರಿ. ಆದರೆ, ಇದನ್ನು ರಾಜ್ಯಾದ್ಯಂತ ಥಿಯೇಟರಿಗೇ ರಿಲೀಸ್ ಮಾಡುತ್ತಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್.

 • ಗಂಧದ ಗುಡಿ ರಿಲೀಸ್.. ಅಪ್ಪು ಪುಣ್ಯತಿಥಿ.. ಕರ್ನಾಟಕ ರತ್ನ.. ಎಲ್ಲ ಬೆನ್ನು ಬೆನ್ನಿಗೆ..

  ಗಂಧದ ಗುಡಿ ರಿಲೀಸ್.. ಅಪ್ಪು ಪುಣ್ಯತಿಥಿ.. ಕರ್ನಾಟಕ ರತ್ನ.. ಎಲ್ಲ ಬೆನ್ನು ಬೆನ್ನಿಗೆ..

  ಅಕ್ಟೋಬರ್ 29. ಕನ್ನಡಿಗರನ್ನು ಅಪ್ಪು ಅಗಲಿದ ದಿನ. ಅಭಿಮಾನಿಗಳು ಈಗಲೂ ಇದು ನಿಜವೋ.. ಸುಳ್ಳೋ.. ಎಂಬ ಗೊಂದಲದಲ್ಲಿರುವಾಗಲೇ.. ಒಂದು ವರ್ಷವಾಗುತ್ತಾ ಬಂದಿದೆ. ಅಪ್ಪು ಸಮಾಧಿ ಪುಣ್ಯಕ್ಷೇತ್ರವಾಗಿ ಹೋಗಿದೆ. ದಿನ ದಿನವೂ ಸಾವಿರಾರು ಅಭಿಮಾನಿಗಳು ಬಂದು ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಇದರ ಜೊತೆಯಲ್ಲೇ ಅಕ್ಟೋಬರ್ ತಿಂಗಳ ಕೊನೆಯ ವಾರ ಅಪ್ಪು ವಾರವಾಗುತ್ತಿದೆ.

  ಅಕ್ಟೋಬರ್ 28ಕ್ಕೆ ವಿಶ್ವದಾದ್ಯಂತ ಗಂಧದ ಗುಡಿ ಟ್ರೇಲರ್ ಬಿಡುಗಡೆಯಾಗುತ್ತಿದೆ. ಆ ದಿನವನ್ನು ಹಬ್ಬ ಮಾಡಲು ಅಭಿಮಾನಿಗಳು ನಿರ್ಧರಿಸಿಬಿಟ್ಟಿದ್ದಾರೆ.

  ಅಕ್ಟೋಬರ್ 26ರಂದು ಅಪ್ಪು ಸಮಾಧಿ ಬಳಿ 75 ಕಟೌಟ್ ನಿಲ್ಲಿಸಲಾಗುತ್ತಿದೆ. 27ನೇ ತಾರೀಕು ಸ್ಮಾರಕದ ಸುತ್ತಮುತ್ತ ಒಂದು ಕಿ.ಮೀ. ಅಂತರದಲ್ಲಿ ದಸರಾ ರೀತಿ ದೀಪಾಲಂಕಾರ ಮಾಡಲಾಗುತ್ತಿದೆ. 28ರಂದು ಗಂಧದ ಗುಡಿ ಬಿಡುಗಡೆ ದಿನ ಕೆಜಿ ರಸ್ತೆ ಹಾಗೂ ಮಾಗಡಿ ರಸ್ತೆಗಳಲ್ಲಿ ಸಂಭ್ರಮಾಚರಣೆ. 29ರಂದು ಪುಣ್ಯತಿಥಿ. ಆ ದಿನ ಅಪ್ಪು ಸ್ಮಾರಕದ ಎದುರು ಅನ್ನದಾಸೋಹವಿದೆ.

  ಅಕ್ಟೋಬರ್ 21ರಂದು ಗಂಧದ ಗುಡಿ ಪ್ರಿ-ರಿಲೀಸ್ ಈವೆಂಟ್ ಇದೆ. ರಾಜ್ ಕುಟುಂಬ, ಮುಖ್ಯಮಂತ್ರಿ ಬೊಮ್ಮಾಯಿ, ರಜನಿಕಾಂತ್ ಸೇರಿದಂತೆ ಸಮಸ್ತ ಚಿತ್ರರಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ.

  ಅದಾದ ನಂತರ ನವೆಂಬರ್ 1ರಂದು ಕರ್ನಾಟಕ ರತ್ನ ಗೌರವ ಪ್ರದಾನ. ರಾಜ್ಯೋತ್ಸವದ ದಿನ ಕನ್ನಡಿಗರ ರಾಜಕುಮಾರನಿಗೆ ಕರ್ನಾಟಕದ ಅತಿ ದೊಡ್ಡ ಪುರಸ್ಕಾರ.

 • ಗಂಧದ ಗುಡಿಗೆ ತೆರಿಗೆ ವಿನಾಯಿತಿ : ಬೊಮ್ಮಾಯಿ ಘೋಷಣೆ

  ಗಂಧದ ಗುಡಿಗೆ ತೆರಿಗೆ ವಿನಾಯಿತಿ : ಬೊಮ್ಮಾಯಿ ಘೋಷಣೆ

  ಪುನೀತ್ ರಾಜ್ ಕುಮಾರ್ ಕನ್ನಡಿಗರ ಹೃದಯದಲ್ಲಿ ಎಂದಿಗೂ ಚಿರಸ್ಥಾಯಿ. ಪರಿಸರ ಕಾಳಜಿಯಿಂದ ನಿರ್ಮಿಸಿದ ಗಂಧದ ಗುಡಿಗೆ ಎಲ್ಲ ರೀತಿಯ ಟ್ಯಾಕ್ಸ್ ಫ್ರೀ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ..

  ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಡೆಯ ಸಿನಿಮಾ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

  ಇಂತಹದ್ದನ್ನೆಲ್ಲ ಅಪ್ಪು ಮಾತ್ರ ಮಾಡೋಕೆ ಸಾಧ್ಯ. ನಿಸರ್ಗದ ಬಗ್ಗೆ ಪ್ರಕೃತಿ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅತ್ಯಗತ್ಯ ಅನಿವಾರ್ಯತೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪುನೀತ್ ಗಂಧದ ಗುಡಿಯಲ್ಲಿ ಮಾಡಿದ್ದಾರೆ ಎಂದು ಹೊಗಳಿದರು ಬೊಮ್ಮಾಯಿ.

  ಗಂಧದ ಗುಡಿ ಚಿತ್ರಕ್ಕಾಗಿ ಪುನೀತ್ ಕಾಡು ಮೇಡು ಸುತ್ತಿದ್ದಾರೆ. ನಿರ್ದೇಶಕ ಅಮೋಘವರ್ಷ ಅವರೊಂದಿಗೆ ಇಡೀ ಕರುನಾಡಿನ ಪ್ರಕೃತಿ ಹಾಗೂ ವನ್ಯಜೀವಿಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಇದೊಂದು ವಿಶೇಷ ಪ್ರಯೋಗವೂ ಹೌದು. ಸಚಿನ್ ತೆಂಡೂಲ್ಕರ್ ಕುರಿತ ಡಾಕ್ಯುಮೆಂಟರಿ ಬಿಟ್ಟರೆ ಮಿಕ್ಕಾವ ಡಾಕ್ಯುಮೆಂಟರಿಯೂ ಸಿನಿಮಾ ರೀತಿ ಥಿಯೇಟರಿಗೆ ಬಿಡುಗಡೆಯಾಗಿಲ್ಲ. ಅಂತಹದ್ದೊಂದು ವಿಶೇಷ ಪ್ರಯೋಗ ಮಾಡಲು ಹೊರಟಿದ್ದರು ಪುನೀತ್. ಪುನೀತ್ ಅವರ ಆ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ಅಶ್ವಿನಿ ಅವರೊಂದಿಗೆ ಇಡೀ ಕರುನಾಡಿನ ಚಿತ್ರರಂಗವೇ ನಿಂತಿದ್ದು ಇದೇ 28ರಂದು ರಿಲೀಸ್ ಆಗುತ್ತಿದೆ.

  ಸಾಕ್ಷ್ಯಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು 4 ಹಾಡುಗಳೂ ಇವೆ. ಡಾ.ರಾಜ್ ಕುಮಾರ್ ಅವರ ಗಂಧದ ಗುಡಿಯ ನಾವಾಡುವ ನುಡಿಯೇ ಕನ್ನಡ ನುಡಿ ಹಾಡನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಇನ್ನೂ 3 ಹಾಡುಗಳಿವೆ. ಸಾಹಿತ್ಯ ಸಂತೋಷ್ ಆನಂದರಾಮ್ ಅವರದ್ದು.

 • ಪುನೀತ್ ಅವರ ಎಲ್ಲ ಚಿತ್ರಗಳಿಗೂ ಒಂದು ಗಂಧದ ಗುಡಿ ಸಮ : ಪ್ರತೀಕ್ ಶೆಟ್ಟಿ

  ಪುನೀತ್ ಅವರ ಎಲ್ಲ ಚಿತ್ರಗಳಿಗೂ ಒಂದು ಗಂಧದ ಗುಡಿ ಸಮ : ಪ್ರತೀಕ್ ಶೆಟ್ಟಿ

  ಗಂಧದ ಗುಡಿ. ಇದೇ 28ರಂದು ರಿಲೀಸ್ ಆಗುತ್ತಿರುವ ಪುನೀತ್ ರಾಜಕುಮಾರ್ ಅಭಿನಯದ ಕಟ್ಟಕಡೆಯ ಸಿನಿಮಾ. ಕಡೆಯ ಚಿತ್ರದಲ್ಲಿ ಪುನೀತ್ ನಟಿಸಿಲ್ಲ. ಪುನೀತ್ ಆಗಿಯೇ ಜೀವಿಸಿದ್ದಾರೆ. ಅಮೋಘವರ್ಷ ನಿರ್ದೇಶನದಲ್ಲಿ ಪುನೀತ್ ಅವರ 108 ದಿನಗಳ ಕರ್ನಾಟಕದ ಜರ್ನಿಯೇ ಈ ಗಂಧದ ಗುಡಿ. ಪುನೀತ್ ಅವರಿಗೆ ಕರ್ನಾಟಕದ ವನಸಂಪತ್ತು, ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ವಿಭಿನ್ನವಾಗಿ ತೋರಿಸುವ ಹಂಬಲವಿತ್ತು. ಆ ಕಾರಣಕ್ಕಾಗಿಯೇ ಕಮರ್ಷಿಯಲ್ ಚಿತ್ರಗಳನ್ನೆಲ್ಲ ಬದಿಗಿಟ್ಟು ಗಂಧದ ಗುಡಿ ಕೈಗೆತ್ತಿಕೊಂಡರು. ಆ ಚಿತ್ರದ ಸಂಕಲನಕಾರ ಪ್ರತೀಕ್ ಶೆಟ್ಟಿ.

  ನಾನು ಮಂಗಳೂರಿನವನು. ರಾಜ್ ಬಿ.ಶೆಟ್ಟಿಯವರ ಜೊತೆಗೆ ಬಂದವನು. ಸಂಕಲನಕಾರನಾಗಿ ಕೆಲಸ ಮಾಡುತ್ತಾ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲೂ ಕೆಲಸ ಮಾಡಿದವನು. ಅಮೋಘವರ್ಷ ಮತ್ತು ರಿಕಿ ಕೇಜ್ ಜೊತೆಗೂಡಿದಾಗ ಅವರ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ್ದೆ. ಕೆಲವು ಜಾಹೀರಾತುಗಳಿಗೂ ಕೆಲಸ ಮಾಡಿದ್ದೆ. ಇದರ ಮಧ್ಯೆ ಅಮೋಘವರ್ಷ ಅವರಿಗೆ ಈ ಪ್ರಾಜೆಕ್ಟ್ ಸಿಕ್ಕಿತು. ಅವರು ಪುನೀತ್ ಅವರಿಗೆ ನನ್ನನ್ನು ಪರಿಚಯಿಸಿದರು ಎಂದು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ ಪ್ರತೀಕ್ ಶೆಟ್ಟಿ. 777 ಚಾರ್ಲಿ ಚಿತ್ರಕ್ಕೂ ಇವರೇ ಸಂಕಲನಕಾರ.

  ಇದು ಸಿನಿಮಾ ತರ ಅಲ್ಲ. ಸ್ಕ್ರಿಪ್ಟ್ ಇಲ್ಲ. ಅಮೋಘವರ್ಷ ಮತ್ತು ಪುನೀತ್ ನಡುವೆ ನಡೆಯುವ ಎಲ್ಲವನ್ನೂ ಶೂಟ್ ಮಾಡಿಕೊಂಡು ಇದನ್ನು ರೂಪಿಸಿದ್ದೇವೆ. ಇದನ್ನು ಶೂಟ್ ಮಾಡಿದ್ದು ಬೆಳಗ್ಗೆ 6ರಿಂದ 9 ಗಂಟೆಯ ಮಧ್ಯೆಯೇ ಹೆಚ್ಚು. ಅದಕ್ಕಾಗಿ ನಾವು ರಾತ್ರಿ 2 ಗಂಟೆಗೇ ಏಳುತ್ತಿದ್ದೆವು. ಪುನೀತ್ ಕೂಡಾ ಜೊತೆಗಿರುತ್ತಿದ್ದರು. ಅವರ ಉತ್ಸಾಹ, ಡೆಡಿಕೇಷನ್ ನೋಡುತ್ತಾ ಥ್ರಿಲ್ ಆಗಿದ್ದೇನೆ. ಜೊತೆಗೆ ಕೆಲಸ ಮಾಡುತ್ತಾ ಮಾಡುತ್ತಾ ಕರ್ನಾಟಕದ ಪ್ರಕೃತಿ, ವನ್ಯಜೀವಿ, ಕಾಡುಗಳು ಹಾಗೂ ಪುನೀತ್ ಅವರು ಹೆಚ್ಚು ಪರಿಚಯವಾದರು. ಅವರು ನಮ್ಮೊಂದಿಗೆ ಸ್ಟಾರ್ ಎಂಬ ಯಾವ ಹಮ್ಮುಬಿಮ್ಮು ಇಲ್ಲದೆ ಬೆರೆಯುತ್ತಿದ್ದರು. ಮೊದಲ ಭೇಟಿಗೆ ಮುನ್ನ ಇದ್ದ ಆತಂಕವೇ ಬೇರೆ. ಮುಗಿದಾಗ ಹತ್ತಿರವಾಗಿದ್ದ ಅಪ್ಪುನೇ ಬೇರೆ. ಅಷ್ಟೂ ದಿನಗಳ ಜರ್ನಿಯಲ್ಲಿ ಪುನೀತ್ ಸರ್ ಹತ್ತಿರವಾದರು ಎನ್ನುತ್ತಾರೆ ಪ್ರತೀಕ್.

  ಇದು ರೆಗ್ಯುಲರ್ ಸಿನಿಮಾ ಅಲ್ಲ. ಪುನೀತ್ ಸರ್ ಇದುವರೆಗೆ ಮಾಡಿರುವ ಎಲ್ಲ ಚಿತ್ರಗಳೂ ಈ ಒಂದು ಗಂಧದ ಗುಡಿಗೆ ಸಮ ಎನ್ನುವುದು ಪ್ರತೀಕ್ ಶೆಟ್ಟಿ ಕೊಡುವ ಸರ್ಟಿಫಿಕೇಟ್.