ನನ್ನದು ಈ ಚಿತ್ರದಲ್ಲಿ ಕಾಲೇಜು ಹುಡುಗಿಯ ಪಾತ್ರ. ಹೆಸರು ಅಲಮೇಲು. ಅಪ್ಪನ ಆಸೆಯಂತೆ ಬೆಂಗಳೂರಿಗೆ ಓದಲು ಬಂದವಳು ಪ್ರೀತಿಯಲ್ಲಿ ಬೀಳ್ತೇನೆ. ಹುಡುಗರ ಜೊತೆ ಸುತ್ತೋದನ್ನು ಎಂಜಾಯ್ ಮಾಡೋ ಹುಡುಗಿಯ ಪಾತ್ರ. ಆಗ ಸಡನ್ನಾಗಿ ನನ್ನ ತಾಯಿ ವಿಜಯಪುರದಲ್ಲಿಸಾವನ್ನಪ್ಪುತ್ತಾರೆ. ಊರಿಗೆ ವಾಪಸ್ ಹೋಗುತ್ತೇನೆ. ಅಲ್ಲಿ ನನ್ನ ತಂದೆ ಅಚ್ಯುತ್ ಕುಮಾರ್, ಪ್ರಿನ್ಸಿಪಾಲ್.. ಇಬ್ಬರೂ ಜೊತೆಯಾಗುತ್ತಾರೆ. ಅದು ಹೇಗೆ ಆಗುತ್ತೆ ಅನ್ನೋದೇ ಸಖತ್ ಫನ್ನಿಯಾಗಿದೆ. ಸಿನಿಮಾ ಶುರುವಾದಾಗಿನಿಂದ ಕೊನೆಯವರೆಗೆ ಕಾಮಿಡಿ.. ಕಾಮಿಡಿ.. ಕಾಮಿಡಿ.
ಇದು ಗೋವಿಂದ ಗೋವಿಂದ ಚಿತ್ರದ ನಾಯಕಿ ಅಲಮೇಲು ಅಲಿಯಾಸ್ ಕವಿತಾ ಗೌಡ ಹೇಳಿದ ಕಥೆ. ತಿಲಕ್ ನಿರ್ದೇಶನದ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.
ನಿರ್ಮಾಪಕ ಕಿಶೋರ್ ಮಧುಗಿರಿ ವಿತರಕರಾಗಿದ್ದವರು. ಚಿತ್ರರಂಗದಲ್ಲಿ 30 ವರ್ಷದ ಅನುಭವ ಬೆನ್ನಿಗಿಟ್ಟುಕೊಂಡು ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಶೈಲೇಂದ್ರ ಬಾಬು, ರವಿ ಆರ್.ಗರಣಿ ಕೂಡಾ ಕೈಜೋಡಿಸಿದ್ದಾರೆ.
#chitraloka #govindagovinda #tilak #kavithagowda #sumanthshailendra