ಅಮೆರಿಕದ ಜಾರ್ಜಿಯಾ ಪ್ರಾಂತ್ಯದಲ್ಲಿ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ನಡೆಯಲಿದೆ. ಅದರಲ್ಲೇನಿದೆ ವಿಶೇಷ ಅಂತೀರಾ.. ನವೆಂಬರ್ 1ನ್ನು ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ ಎಂದು ಜಾರ್ಜಿಯಾ ಸರ್ಕಾರ ಘೋಷಣೆ ಮಾಡಿದೆ. ಈ ಪತ್ರಕ್ಕೆ ಜಾರ್ಜಿಯಾ ಗವರ್ನರ್ ಬ್ರಿಯಾನ್ ಪಿ. ಕೆಂಪ್ ಅಧಿಕೃತ ಸಹಿ ಮಾಡಿದ್ದಾರೆ.
ಜಾರ್ಜಿಯಾದಲ್ಲಿರೋ ಕನ್ನಡಿಗರು ಗ್ರೇಟರ್ ಅಟ್ಲಾಂಟಾದಲ್ಲಿ 3 ಸ್ಥಳೀಯ ಶಾಲೆಗಳಲ್ಲಿ ಕನ್ನಡ ಕಲಿಸುತ್ತಿದ್ದಾರೆ. ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲು ಜಾರ್ಜಿಯಾದಲ್ಲಿ ಅವಕಾಶವಿದೆ. ಇದೆಲ್ಲದರ ಜೊತೆಗೆ ಅಲ್ಲಿರುವ ಕನ್ನಡಿಗರು ಜಾರ್ಜಿಯಾದ ಭಾಷೆ, ಸಂಸ್ಕøತಿಗೆ ನೀಡುತ್ತಿರುವ ಕೊಡುಗೆಗಳನ್ನೂ ಸ್ಮರಿಸಿ, ನವೆಂಬರ್ 1ನ್ನು ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ ಎಂದು ಅಧಿಕೃತವಾಗಿ ಘೋಷಿಸಿದೆ ಜಾರ್ಜಿಯಾ ಸರ್ಕಾರ.