ಡಾರ್ಲಿಂಗ್ ಕೃಷ್ಣ ಇತ್ತೀಚೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಚಿತ್ರಕ್ಕೆ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದರು. ಶಿವತೇಜಸ್ ನಿರ್ದೇಶನದ ಸಿನಿಮಾದ ಟೈಟಲ್ ಏನು ಅನ್ನೋದು ಸಸ್ಪೆನ್ಸ್ ಆಗಿಯೇ ಇತ್ತು. ರೊಮ್ಯಾಂಟಿಕ್ ಕಾಮಿಡಿ ಚಿತ್ರ ಎಂದಿದ್ದ ಶಿವತೇಜಸ್ ಈಗ ಟೈಟಲ್ ಸೀಕ್ರೆಟ್ ಓಪನ್ ಮಾಡಿದ್ದಾರೆ.
ಈ ಚಿತ್ರದ ಟೈಟಲ್ ದಿಲ್ ಪಸಂದ್. ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿರೋದು ಸೆಲಬ್ರಿಟಿ ಕಾಪ್ ರವಿ ಡಿ.ಚನ್ನಣ್ಣವರ್. ದಿಲ್ ಪಸಂದ್‍ನಲ್ಲಿ ಹೇಗೆ ವೆರೈಟಿ ವೆರೈಟಿ ಹಣ್ಣುಗಳಿರುತ್ತವೋ.. ಹಾಗೆಯೇ ಇಲ್ಲಿ ಚೆಂದದ ಹೀರೋ.. ಚೆಂದದ ನಾಯಕಿಯರ ಜೊತೆ ಹಾಸ್ಯ ಕಲಾವಿದರ ದಂಡನ್ನೇ ಹಾಕಿಕೊಂಡಿದ್ದಾರೆ ಶಿವತೇಜಸ್.