ದಿಲ್ ಪಸಂದ್. ಡಾರ್ಲಿಂಗ್ ಕೃಷ್ಣ ಮತ್ತು ನಿಶ್ವಿಕಾ ನಾಯ್ಡು ಹಾಗೂ ಮೇಘಾ ಶೆಟ್ಟಿ ಅಭಿನಯದ ಹೊಸ ಸಿನಿಮಾ. ಶಿವತೇಜಸ್ ನಿರ್ದೇಶನದ ಚಿತ್ರದಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿ ಇದೆ. ಚಿತ್ರದ ಫಸ್ಟ್ ಲುಕ್ ಈಗ ಹೊರಬಿದ್ದಿದೆ. ಫಸ್ಟ್ ಲುಕ್ ನೋಡಿದವರ ಮೈಮನಗಳನ್ನೆಲ್ಲ ಬೆಚ್ಚಗಾಗಿಸುವಂತೆ ಒಂದೇ ಒಂದು ಫೋಟೋ ಹೊರಬಿಟ್ಟಿದ್ದಾರೆ ಶಿವತೇಜಸ್.
ಲವ್ ಮಾಕ್‍ಟೇಲ್ ನಂತರ ರೊಮ್ಯಾಂಟಿಕ್ ಚಿತ್ರಗಳಲ್ಲೇ ನಟಿಸುತ್ತಿರೋ ಡಾರ್ಲಿಂಗ್ ಕೃಷ್ಣ, ಈ ಚಿತ್ರದಲ್ಲಿ ಇಬ್ಬರು ಚೆಲುವೆಯರ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ತಬಲಾ ನಾಣಿ, ಅರುಣ್ ಬಾಲರಾಜ್ ಮೊದಲಾದವರು ನಟಿಸುತ್ತಿರೋ ಚಿತ್ರದಲ್ಲಿ ಕಾಮಿಡಿಯೂ ಭರಪೂರ ಇರುವ ಸೂಚನೆ ಇದೆ.