` love 360, - chitraloka.com | Kannada Movie News, Reviews | Image

love 360,

  • 2ನೇ ವಾರಕ್ಕೆ ಲವ್ 360. 3ನೇ ವಾರಕ್ಕೆ ಗಾಳಿಪಟ 2 : ಮಧ್ಯೆ ಇನ್ನೊಂದು ಗುಡ್ ನ್ಯೂಸ್

    2ನೇ ವಾರಕ್ಕೆ ಲವ್ 360. 3ನೇ ವಾರಕ್ಕೆ ಗಾಳಿಪಟ 2 : ಮಧ್ಯೆ ಇನ್ನೊಂದು ಗುಡ್ ನ್ಯೂಸ್

    ಯೋಗರಾಜ್ ಭಟ್-ಗಣೇಶ್-ವೈಭವಿ-ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ-ದಿಗಂತ್-ನಿಶ್ವಿಕಾ ನಾಯ್ಡು-ಸಂಯುಕ್ತಾ ಮೆನನ್-ಅನಂತನಾಗ್-ರಮೇಶ್ ರೆಡ್ಡಿ-ಜಯಂತ ಕಾಯ್ಕಿಣಿ-ಅರ್ಜುನ್ ಜನ್ಯಾ ಜೋಡಿಯ ಚಿತ್ರ ಗಾಳಿಪಟ 2. ಈ ವರ್ಷದ ಇನ್ನೊಂದು ಹಿಟ್ ಸಿನಿಮಾ. ಈಗಾಗಲೇ ನಿರ್ಮಾಪಕರನ್ನು ಪಾಸ್ ಮಾಡಿರುವ ಚಿತ್ರ ಇಂದು 3ನೇ ವಾರಕ್ಕೆ ಕಾಲಿಟ್ಟಿದೆ.

    ರಿಲೀಸ್ ಆದ ಮಾರನೇ ದಿನದಿಂದಲೇ ಥಿಯೇಟರ್ ಮತ್ತು ಸ್ಕ್ರೀನ್ ಹೆಚ್ಚಿಸಿಕೊಂಡಿದ್ದ ಚಿತ್ರ ಗಾಳಿಪಟ 2. ವಿದೇಶಗಳಲ್ಲಿಯೂ ವ್ಹಾವ್ ಎನ್ನುವ ಶೋ ಕಂಡಿದ್ದ ಗಾಳಿಪಟ 2 ರಾಜ್ಯಾದ್ಯಂತ ಸಕ್ಸಸ್ ಫುಲ್ ಪ್ರದರ್ಶನ ಕಾಣುತ್ತಿದ್ದು ಯಶಸ್ಸಿನ ಗಾಳಿಪಟ ಹಾರಿಸುತ್ತಿದೆ.

    ಕಳೆದ ವಾರ ರಿಲೀಸ್ ಆಗಿದ್ದ ಲವ್ 360 ಗೆಲುವಿನ ಹಾದಿಗೆ ಬಂದಿದೆ. ಮೊದಲ 2 ದಿನ ಚಿತ್ರಕ್ಕೆ ಭರ್ಜರಿ ಎನ್ನುವಂತ ಪ್ರತಿಕ್ರಿಯೆ ಸಿಗಲಿಲ್ಲ. ಆದರೆ ಸಿನಿಮಾ ನೋಡಿದ ಪ್ರೇಕ್ಷಕರೇ ಚಿತ್ರದ ಪ್ರಚಾರದ ರಾಯಭಾರಿಗಳಾಗಿದ್ದು ವಿಶೇಷ. ಶಶಾಂಕ್ ಮತ್ತೊಮ್ಮೆ ಹೊಸಬರೊಂದಿಗೆ ಗೆದ್ದಿದ್ದಾರೆ. ಪ್ರವೀಣ್-ರಚನಾ ಇಂದರ್ ಎಂಬ ಹೊಸ ಪ್ರತಿಭೆಗಳ ಪ್ರೀತಿಗೆ.. ಜಗವೇ ನೀನು ಗೆಳತಿಯೇ ಹಾಡಿಗೆ ಕನ್ನಡಿಗರು ಶರಣಾಗಿದ್ದಾರೆ.

    ಅತ್ತ ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರವೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ಮಧ್ಯೆ ವಿಕ್ರಾಂತ್ ರೋಣ ಒಟಿಟಿಗೆ ಬರುತ್ತಿದ್ದು ಸೆಪ್ಟೆಂಬರ್ 2ಕ್ಕೆ ಮನೆ ಮನೆಯಲ್ಲೂ ಸಿಗಲಿದೆ. ಇದರ ಮಧ್ಯೆ ಇನ್ನೂ ಒಂದು ಗುಡ್ ನ್ಯೂಸ್ ಇದೆ.

    ಗುರುವಾರ ರಿಲೀಸ್ ಆಗಿರುವ ಪುರಿ ಜಗನ್ನಾಥ್-ವಿಜಯ್ ದೇವರಕೊಂಡ ಜೋಡಿಯ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಚಿತ್ರಕ್ಕೆ ಪ್ರೇಕ್ಷಕರ ಅಡ್ಡಡ್ಡ ತಲೆ ಆಡಿಸಿಬಿಟ್ಟಿದ್ದಾನೆ. ಹೀಗಾಗಿ ಸಕ್ಸಸ್ ಗ್ಯಾರಂಟಿ ಎನ್ನುವಂತಿದ್ದ ಸಿನಿಮಾ ನಿರೀಕ್ಷೆಯ ಮಟ್ಟ ತಲುಪಿಲ್ಲ. ಲೈಗರ್ ಚಿತ್ರಕ್ಕೆ ಸಿಕ್ಕ ಮಿಕ್ಸೆಡ್ ರೆಸ್ಪಾನ್ಸ್ ಈಗ ಸಖತ್ತಾಗಿವೆ ಅನ್ನಿಸಿಕೊಂಡಿರೋ ಲವ್ 360, ಗಾಳಿಪಟ 2 ಚಿತ್ರಕ್ಕೆ ವರವಾಗಲಿದೆ. ಜೊತೆಗೆ ಧೀರನ್ ರಾಮಕುಮಾರ್ ಆರಂಗೇಟಂ ಸಿನಿಮಾ ಶಿವ 143 ಚಿತ್ರಕ್ಕೆ ಕೂಡಾ ಇದು ಗುಡ್ ನ್ಯೂಸ್.

  • Love 360 Movie Review, Chitraloka Rating 4/5

    Love 360 Movie Review, Chitraloka Rating 4/5

    Film: Love 360

    Director: Shashank

    Cast: Praveen, Rachana Inder, Gopal Krishna Deshpande, Kavya Shastri, Danny Kuttappa

    Duration: 2 hours 15 minutes

    Stars: 4/5

    Experiencing a full circle 

    Director Shashank carries forward his legacy of narrating the most unusual love stories with Love 360. It is not just the title that is unusual here. What seems like a pretty ordinary love story between a small-time mechanic and a girl who suffers from memory loss turns out to be a unique tale of love, sacrifice and unwavering loyalty.

    Ram’s (newcomer Praveen) is the guardian angel of Jaanu (Rachana Inder). He has taken care of her all his life. Being a person who is suffering from memory loss, she needs constant care and attention. Ram is however averse to getting her admitted to a hospital for fear of her being branded a ‘mental patient’. 

    Till about the interval, the director plays it safe by layering the narrative with characters and details. The plot really becomes evident and begins to unravel post-interval. The plot twists, surprising revelations and raw emotions combine to make Love 360 a unique love story. What true love is capable of is narrated in both a heartwarming and unsettling manner. 

    The biggest star of the film is the story. The director’s faith in the story is proved right even though he is introducing a newcomer in the lead role. Seasoned actors may have brought more nuances, but the director’s grip on the narration is good enough to negate any drawbacks. A couple of scenes in the first half are crappy but since the sole purpose of the pre-interval period is to introduce the characters and story, it somehow passes muster. 

    The film becomes a winner for the simple reason that the story is unpredictable. The story induces the audience to expect some regular twists only to deliver the most unexpected change of track. This suspense is maintained till the very end. Shashank would have been forgiven even if he had put in a couple of tearjerker scenes in the end.

    Music is another big star of Love 360. The songs are of top quality aided by meaningful lyrics and soulful tunes. The film is not extravagant and even the story does not demand lavish sets or money shots. It is technically sound and to the point. 

    Newcomer Praveen makes a promising debut and delivers a decent enough performance. Rachana Inder is innocence personified in her role. She had a character that has ample scope and she makes the best use of it. While Gopal Krishna Deshpande is his usual self, Danny Kuttappa for a change gets to play a larger role than a regular sidekick. His villainous role shows that he is one of the most underutilized actors in negative roles in Sandalwood. 

    Love 360 is not overtly sentimental. It is not unnecessarily loud. It is not brazen. It does not have superfluous frills. It does not believe in buildups. Therefore, and also because it is a tale well told, it is a good film. 

    -S Shyam Prasad 

  • Love 360 To Be remade in Tamil and Telugu

    Love 360 To Be remade in Tamil and Telugu

    Director Shashank has an early festival gift. Love 360 his latest directorial which is also produced under this Shashank Cinemas banner has found takers in Tamil and Telugu. In fact, a big production house has signed on to remake the film in the two languages. 

    This is a big boost for Shashank who showed the guts to produce the film with newcomers. Praveen, the lead actor is a new comer from Hospete. He is from a non-film background whose father was a doctor. Rachana Inder, of the Love Mocktail fame is the leading lady. Love 360 had a tepid start at the box office but went on from strength to strength on the back of very good word of mouth publicity. 

    Shashank has said that the final details of the remake deal is being worked out and details of the production house and cast would be revealed in a few days. 

  • ಈ ವಾರ ತೆರೆಗೆ "ಲವ್ 360". 

    ಈ ವಾರ ತೆರೆಗೆ "ಲವ್ 360". 

    " ಸಿಕ್ಸರ್" , "ಮೊಗ್ಗಿನ ಮನಸ್ಸು", "ಕೃಷ್ಣನ್ ಲವ್ ಸ್ಟೋರಿ" ಯಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಶಶಾಂಕ್ ನಿರ್ದೇಶಿಸಿರುವ "ಲವ್ 360" ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. 

    ಶಶಾಂಕ್ ಸಿನಿಮಾಸ್ ಲಾಂಛನದಲ್ಲಿ ಶಶಾಂಕ್ ಹಾಗೂ ಮಂಜುಳಾಮೂರ್ತಿ ಈ ಚಿತ್ರವನ್ನು  ನಿರ್ಮಿಸಿದ್ದಾರೆ. ನೂತನ ಪ್ರತಿಭೆ ಪ್ರವೀಣ್ ಈ ಚಿತ್ರದ ನಾಯಕನಾಗಿ ಅಭಿನಯಿಸಿದ್ದು, ರಚನಾ ಇಂದರ್ ನಾಯಕಿಯಾಗಿದ್ದಾರೆ. 

    ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದೆ. ಅದರಲ್ಲೂ ಸಿದ್ದ್  ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೆ" ಹಾಡಂತೂ ಭಾರೀ‌ ಮಟ್ಟದಲ್ಲಿ ಜನಪ್ರಿಯವಾಗಿದೆ. ಅಭಿಷೇಕ್ ಕಲ್ಲತ್ತಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗಿರಿಮಹೇಶ್ ಅವರ ಸಂಕಲನವಿದೆ

  • ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

    ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ.

    ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರಿಂದ ಬಿಡುಗಡೆಯಾಗಿದೆ. ಚಿತ್ರ ಇದೇ ಆಗಸ್ಟ್ 19 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

    ಶಶಾಂಕ್ ನನ್ನ ಅಚ್ಚುಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ಅವರ ನಿರ್ದೇಶನದಲ್ಲಿ ನಾನು ನಟಿಸಬೇಕಿತ್ತು. ಕಾರಣಾಂತರದಿಂದ ಆಗಿಲ್ಲ. ಮುಂದೆ ನಮಿಬ್ಬರ ಕಾಂಬಿನೇಶನ್ ನಲ್ಲಿ ಚಿತ್ರ ಬರುತ್ತದೆ. ಸದ್ಯ ಶಶಾಂಕ್ ನಿರ್ದೇಶನದ "ಲವ್ 360" ಚಿತ್ರದ ಟ್ರೇಲರ್ ನೋಡಿದೆ. ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಸುಮಧುರವಾಗಿದೆ. ಅದರಲ್ಲೂ ಸಿದ್ ಶ್ರೀರಾಮ್ ಹಾಡಿರುವ "ಜಗವೇ ನೀನು ಗೆಳತಿಯೆ" ಹಾಡಂತೂ ನನಗೆ ಬಹಳ ಇಷ್ಟ. ನಾಯಕ, ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದಾರೆ. ನಾನು ಬಿಡುಗಡೆ ದಿನದಂದೇ ಈ ಚಿತ್ರವನ್ನು ಚಿತ್ರಮಂದಿರದಲ್ಲಿ ಅಭಿಮಾನಿಗಳ

    ಜೊತೆಗೆ ನೋಡುತ್ತೇನೆ ಎಂದರು ನಟ ಶಿವರಾಜಕುಮಾರ್.

    ಚಿತ್ರದ ಥಿಯೇಟ್ರಿಕಲ್ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದಗಳು. ಚಿತ್ರ ಆಗಸ್ಟ್ ೧೯ರಂದು ತೆರೆ ಕಾಣಲಿದೆ. ಅದಕ್ಕೂ ಮುನ್ನ ನಾವು ಬೇರೆ ಬೇರೆ ಊರುಗಳಿಗೆ ಭೇಟಿ ನೀಡುತ್ತಿದ್ದೇವೆ. ಹೋದ ಕಡೆ ಸಿಗುತ್ತಿರುವ

    ಅಭೂತಪೂರ್ವ ಬೆಂಬಲಕ್ಕೆ‌ ಮನತುಂಬಿ ಬಂದಿದೆ. ಖ್ಯಾತ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಯವರು ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ನೂರೈವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಈಗಾಗಲೇ ಹಾಡುಗಳನ್ನು ಜನಪ್ರಿಯಗೊಳಿಸಿರುವ ಕನ್ನಡ ಕಲಾ ರಸಿಕರು ಚಿತ್ರವನ್ನೂ ಗೆಲಿಸುತ್ತಾರೆಂಬ ನಂಬಿಕೆ ಇದೆ ಎಂದರು ನಿರ್ದೇಶಕ ಶಶಾಂಕ್.

    ನನ್ನ ಸ್ನೇಹಿತನೊಬ್ಬ, "ನೀನು ಹೀರೋ ತರಹ ಇಲ್ಲ. ನಿನ್ನ ಸಿನಿಮಾ ಯಾರು ನೋಡುತ್ತಾರೆ ಅಂದಿದ್ದ". ಆ ಮಾತು‌ ನನ್ನ ಮನಸ್ಸಿನಲ್ಲೇ ಇತ್ತು. ಆದರೆ ಈಗ ಬೇರೆ ಬೇರೆ ಊರುಗಳಿಗೆ, ಅದರಲ್ಲೂ ಕಾಲೇಜುಗಳಿಗೆ ಭೇಟಿ ನೀಡಿದಾಗ ಅಲ್ಲಿನ ವಿದ್ಯಾರ್ಥಿಗಳು ನನ್ನನ್ನು ಗುರುತಿಸುತ್ತಿರುವ ರೀತಿ ಕಂಡು ಆಶ್ಚರ್ಯವಾಗಿದೆ. ಹೆಣ್ಣುಮಕ್ಕಳಂತೂ ನಾವು ನಿಮ್ಮ ಅಭಿಮಾನಿಗಳು. ನಿಮ್ಮ ಚಿತ್ರದ ಹಾಡುಗಳು ತುಂಬಾ ‌ಚೆನ್ನಾಗಿದೆ. ನೀವು ತುಂಬಾ ಚೆನ್ನಾಗಿ ಕಾಣುತ್ತೀರಾ ಎನ್ನುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ನಿರ್ದೇಶಕ ಶಶಾಂಕ್ ಸರ್. ಅವರಿಗೆ ಹಾಗೂ ನನಗೆ ಬೆಂಬಲ ನೀಡುತ್ತಿರುವ ನನ್ನ‌ ತಾಯಿ ಹಾಗೂ ಅಂಕಲ್ ಗೆ ಧನ್ಯವಾದ ಎಂದರು ನಾಯಕ ಪ್ರವೀಣ್.

    ನಾಯಕಿ ರಚನಾ ಇಂದರ್ ಸಹ ಚಿತ್ರಕ್ಕೆ ಬಿಡುಗಡೆ ಪೂರ್ವದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆಗೆ ಸಂತಸಪಟ್ಟರು. ನಟರಾದ ಡ್ಯಾನಿ ಕುಟ್ಟಪ್ಪ ಹಾಗೂ ಮಹಂತೇಶ್ ಸಹ ಚಿತ್ರದ ಕುರಿತು ಮಾತನಾಡಿದರು.

  • ಡಾಕ್ಟರ್ ಮೆಕಾನಿಕ್ ಆದ್ರೆ.. ವಾಲೆ ಝುಮ್ಕಿ ಹಾಕಿದ್ದಕ್ಕೆ ನಾಯಕಿಯಾದ್ರು..!

    ಡಾಕ್ಟರ್ ಮೆಕಾನಿಕ್ ಆದ್ರೆ.. ವಾಲೆ ಝುಮ್ಕಿ ಹಾಕಿದ್ದಕ್ಕೆ ನಾಯಕಿಯಾದ್ರು..!

    ಹೊಸ ಪ್ರತಿಭೆಗಳನ್ನು ಹುಡುಕುವ ವಿಚಾರದಲ್ಲಿ ನಿರ್ದೇಶಕ ಶಶಾಂಕ್ ಇತರರಿಗಿಂತ ಒಂದು ಹೆಜ್ಜೆ ಸದಾ ಮುಂದು. ತಮ್ಮ ಪ್ರತೀ ಚಿತ್ರಗಳಲ್ಲೂ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಲೇ ಇರೋ ಶಶಾಂಕ್ ಅವರ ಅತಿ ದೊಡ್ಡ ಶೋಧ ಯಶ್ ಮತ್ತು ರಾಧಿಕಾ ಪಂಡಿತ್. ಅದೇ ಹಾದಿಯಲ್ಲಿ ಲವ್ 360 ಅನ್ನೋ ಹೊಸ ಸಿನಿಮಾ ಸೃಷ್ಟಿಸಿರೋ ಶಶಾಂಕ್ ಈ ಚಿತ್ರದಲ್ಲೂ ಹೊಸಬರಿಗೆ ಚಾನ್ಸ್ ಕೊಟ್ಟಿದ್ದಾರೆ. ಚಿತ್ರದ ಹೀರೋ ಪ್ರವೀಣ್ ಕಂಪ್ಲೀಟ್ ಹೊಸಬರಾದರೆ, ನಾಯಕಿ ರಚನಾ ಇಂದರ್ ಲವ್ ಮಾಕ್ಟೇಲ್‍ನಲ್ಲಿ ಹೆಂಗೆ ನಾವು ಪಾತ್ರದಿಂದ ಫೇಮಸ್ ಆದವರು.

    ಹೀರೋ ಪ್ರವೀಣ್ ವೃತ್ತಿಯಲ್ಲಿ ಡಾಕ್ಟರ್. ಅವರಷ್ಟೇ ಅಲ್ಲ, ಅವರ ಅಪ್ಪ, ಅಮ್ಮ.. ಇಡೀ ಫ್ಯಾಮಿಲಿಯೇ ಡಾಕ್ಟರ್ಸ್ ಫ್ಯಾಮಿಲಿ. ಎಂಬಿಬಿಎಸ್ ಓದುವಾಗಲೂ ಆದರ್ಶ ಫಿಲಂ ಇನ್ಸ್‍ಟಿಟ್ಯೂಟ್‍ಗೆ ಹೋಗುತ್ತಿದ್ದ ಪ್ರವೀಣ್‍ರ ಸಿನಿಮಾ ಆಸೆ ಅಪ್ಪನಿಗೆ ಇಷ್ಟ ಇರಲಿಲ್ಲ. ಹಾಗಾಗಿ ಆಸೆಯನ್ನೇ ಬಿಟ್ಟಿದ್ದರಂತೆ ಪ್ರವೀಣ್. ಅಪ್ಪ ತೀರಿಕೊಂಡ ಮೇಲೆ ಅಮ್ಮನ ಬಳಿ ಆಸೆ ಹೇಳಿಕೊಂಡಿದ್ದಾರೆ. ಪ್ರವೀಣ್ ಅವರ ತಾಯಿಗೆ ಶಶಾಂಕ್ ಪರಿಚಯವಿತ್ತು. ಮಗನ ಸಿನಿಮಾವನ್ನು ತಾವೇ ನಿರ್ಮಾಣ ಮಾಡೋಕೆ ಮುಂದಾದರು. ಆದರೆ ಹೊಸಪೇಟೆ ಬಳಿಯ ಮಾರಮ್ಮನಹಳ್ಳಿಯಲ್ಲಿ ಆಸ್ಪತ್ರೆಯನ್ನೂ ಹೊಂದಿರೋ ಅವರ ಬಳಿ ಸಿನಿಮಾಗೆ ಬೇಕಾಗುಷ್ಟು ಪೂರ್ತಿ ಹಣ ಇರಲಿಲ್ಲ. ಕಾರಣ ಬೇರೇನಿಲ್ಲ, ಅವರ ಆಸ್ಪತ್ರೆ ವ್ಯವಹಾರಕ್ಕಿಂತ ಹೆಚ್ಚು ಉಚಿತ ಸೇವೆ ನೀಡುತ್ತಿದೆ. ಇದು ಗೊತ್ತಾದ ಶಶಾಂಕ್, ಸಿನಿಮಾ ನಿರ್ಮಾಣಕ್ಕೆ ತಾವೂ ಕೈಜೋಡಿಸಿದ್ದಾರೆ. ಶಶಾಂಕ್ ಸಿನಿಮಾಸ್‍ನಲ್ಲೀಗ ಸಿನಿಮಾ ರೆಡಿಯಾಗಿದೆ.

    ಡಾಕ್ಟರ್ ಪ್ರವೀಣ್ ಆದ ನಾನು ಚಿತ್ರದಲ್ಲಿ ಮೆಕಾನಿಕ್ ಪಾತ್ರ ಮಾಡಿದ್ದೇನೆ. ಸಿನಿಮಾಗೆ ಬರುವ ಮುಂಚೆ ಶಶಾಂಕ್ ಹಲವು ವರ್ಕ್‍ಶಾಪ್ ಮಾಡಿ ತರಬೇತಿ ಕೊಟ್ಟ ಮೇಲೆಯೇ ಕ್ಯಾಮೆರಾ ಮುಂದೆ ನಿಲ್ಲಿಸಿದರು ಎನ್ನುವ ಪ್ರವೀಣ್‍ಗೆ ಸಿನಿಮಾ ಮೇಲೆ ಭರವಸೆ ಇದೆ.

    ಲವ್‍ಮಾಕ್ಟೇಲ್‍ನಲ್ಲಿ ಜನ ಗುರುತಿಸಿದರೂ ಸಿಂಗಲ್ ಹೀರೋಯಿನ್ ಆಗಿ ಇದು ನನಗೆ ಮೊದಲ ಸಿನಿಮಾ. ಸಿನಿಮಾ ಅಡಿಷನ್‍ಗೆ ನನ್ನ ಅಮ್ಮ ಝುಮ್ಕಿ, ಉದ್ದ ಜಡೆ ಹಾಕಿಸಿಕೊಂಡು ಕರೆದುಕೊಂಡು ಹೋಗಿದ್ದರು. ನಾನೇ ಇದೆಲ್ಲ ಯಾಕೆ ಎನ್ನುತ್ತಿದ್ದೆ. ಆದರೆ ಶಶಾಂಕ್ ಅವರಿಗೆ ಅದೇ ಇಷ್ಟವಾಗಿ ಹೀರೋಯಿನ್ ಆಗಿ ಆಯ್ಕೆ ಮಾಡಿದರು ಎನ್ನುತ್ತಾರೆ ರಚನಾ ಇಂದರ್.

    ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಭರವಸೆ ಹುಟ್ಟಿಸಿವೆ. ಶಶಾಂಕ್ ಸಿನಿಮಾ ಆಗಿರೋ ಕಾರಣ ಚೆಂದದ ಕಥೆ ಪಕ್ಕಾ ಇರುತ್ತೆ ಅನ್ನೋದು ಗ್ಯಾರಂಟಿ.

  • ತಮಿಳು, ತೆಲುಗಿಗೆ ಹೊರಟ ಲವ್ 360

    ತಮಿಳು, ತೆಲುಗಿಗೆ ಹೊರಟ ಲವ್ 360

    ಶಶಾಂಕ್ ನಿರ್ದೇಶನದ ಪ್ರವೀಣ್-ರಚನಾ ಇಂದರ್ ನಟನೆಯ ಕ್ಯೂಟ್ ಲವ್ ಸ್ಟೋರಿ ಲವ್ 360. ಇಬ್ಬರು ಮುಗ್ಧ ಪ್ರೇಮಿಗಳ ಪ್ರೇಮಕಥೆಯನ್ನು ಅಷ್ಟೇ ತೇಜೋಹಾರಿಯಾಗಿ ಹೇಳಿ ಗೆದ್ದವರು ಶಶಾಂಕ್. ಆರಂಭದಲ್ಲಿ ಪಿಕ್ ಅಪ್ ಆಗಲು ಸಮಯ ತೆಗೆದುಕೊಂಡರೂ ಸ್ಲೋಮೋಷನ್ ಹಿಟ್ ಹಾದಿಗೆ ಬಂದ ಚಿತ್ರ ಲವ್ 360. ಒಲವೇ ನೀನು ಗೆಳತಿಯೇ.. ಹಾಡಂತೂ ಪ್ರೇಮಿಗಳ ಹೃದಯಗೀತೆಯಾಗಿ ಹೋಗಿದೆ. ರಚನಾ ಇಂದರ್ ಮುಗ್ಧತೆ ಪ್ರವೀಣ್ ಹೃದಯದೊಳಗಿನ ಪ್ರೀತಿಯ ತೀವ್ರತೆಗೆ ಪ್ರೇಕ್ಷಕರೂ ಹಾಡುತ್ತಿದ್ದಾರೆ.. ಒಲವೇ ನೀನು ಗೆಳತಿಯೇ..

    ಹೀಗಿರುವಾಗಲೇ ಚಿತ್ರಕ್ಕೆ ದೊಡ್ಡ ಮಟ್ಟದ ಡಿಮ್ಯಾಂಡ್ ಸೃಷ್ಟಿಯಾಗಿದೆ. ಲವ್ 360ಯನ್ನು ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣದ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ. ಮಾತುಕತೆಯೂ ಶುರುವಾಗಿದೆ. ಅಂದಹಾಗೆ ಈ ಚಿತ್ರವನ್ನು ಗೆಲುವಿನ ಹಾದಿಗೆ ತಂದವರು ಪ್ರೇಕ್ಷಕರೇ. ಸಿನಿಮಾ ನೋಡಿದವರು ಮೆಚ್ಚಿದವರು ಮಾಡಿದ ಬಾಯಿಮಾತಿನ ಪ್ರಚಾರವೇ ಲವ್ 360 ಚಿತ್ರವನ್ನು ಇಡೀ ಚಿತ್ರರಂಗ ಮಾತನಾಡುವಂತೆ ಮಾಡಿದೆ.

    ಈ ಚಿತ್ರದ ಮೂಲಕ ಪ್ರವೀಣ್ ಎಂಬ ಹೊಸ ಹೀರೋ ಕನ್ನಡಕ್ಕೆ ದಕ್ಕಿದ್ದರೆ, ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ತಮ್ಮೊಳಗೆ ಎಂತಹ ಕಲಾವಿದೆ ಇದ್ದಾಳೆ ಅನ್ನೋದನ್ನ ಸಾಬೀತು ಮಾಡಿದ್ದಾರೆ. 

  • ದುನಿಯಾ ಸೂರಿ ಮೆಚ್ಚುಗೆ : ಲವ್ 360 ಶಶಾಂಕ್ ಪ್ರೀತಿಯ ಅಪ್ಪುಗೆ..

    ದುನಿಯಾ ಸೂರಿ ಮೆಚ್ಚುಗೆ : ಲವ್ 360 ಶಶಾಂಕ್ ಪ್ರೀತಿಯ ಅಪ್ಪುಗೆ..

    ಶಶಾಂಕ್ ಮೊದಲಿನಿಂದಲೂ ವಿಭಿನ್ನ ಶೈಲಿಯ ಕಥೆ ಮತ್ತು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವರು. ಅವರ ಚಿತ್ರಗಳಲ್ಲಿ ಅಂತಾದ್ದೊಂದು ವಿಶೇಷವಿದ್ದೇ ಇರುತ್ತೆ. ಲವ್ 360 ಟ್ರೇಲರ್ ಕೂಡಾ ಹಾಗೆಯೇ ಇದೆ. ಏನೋ ವಿಶೇಷವಿದೆ. ನಮ್ಮನ್ನೆಲ್ಲ ಹಳೆಯ ನೆನಪುಗಳಿಗೆ ಕರೆದುಕೊಂಡು ಹೋಗುತ್ತೆ..

    ಇದು ನಿರ್ದೇಶಕ ದುನಿಯಾ ಸೂರಿ ಲವ್ 360 ಚಿತ್ರದ ಟ್ರೇಲರ್ ಬಗ್ಗೆ ಹೇಳಿರೋ ಮಾತು. ಅಫ್‍ಕೋರ್ಸ್.. ದುನಿಯಾ ಸೂರಿ ಯೋಗರಾಜ್ ಭಟ್ಟರ ಗಾಳಿಪಟ ಚಿತ್ರವನ್ನೂ ಹೊಗಳಿದ್ದಾರೆ. ಆದರೆ.. ಭಟ್ಟರು ಮತ್ತು ಸೂರಿಯವರ ಸ್ನೇಹ, ಗುರು-ಶಿಷ್ಯರಂತಹಾ ಬಾಂಧವ್ಯ ನೋಡಿದವರಿಗೆ ಅದು ವಿಶೇಷ ಎನ್ನಿಸೋದಿಲ್ಲ. ಕನ್ನಡದಲ್ಲಿ ಇತ್ತೀಚೆಗೆ ಇಂತಾದ್ದೊಂದು ಅಭಿಮಾನದ ಟ್ರೆಂಡ್ ಶುರುವಾಗಿದೆ. ಒಬ್ಬರ ಚಿತ್ರವನ್ನು ಮತ್ತೊಬ್ಬರು ಹೊಗಳುವ.. ಮೆಚ್ಚುವ ಟ್ರೆಂಡ್. ಹಿಂದಿತ್ತು. ಮಧ್ಯೆ ಸ್ಟಾಪ್ ಆಗಿತ್ತು. ಈಗ ಮತ್ತೆ ಶುರುವಾಗಿದೆ.

    ಸೂರಿಯಂತಹ ತಂತ್ರಜ್ಞ ಹೊಗಳಿದಾಗ ಶಶಾಂಕ್ ಖುಷಿಯಾಗಲೇಬೇಕಲ್ವಾ? ಇದು ನನಗೆ ಸಿಕ್ಕ ಅತಿ ದೊಡ್ಡ ಕೊಡುಗೆ ಎಂದಿದ್ದಾರೆ ಶಶಾಂಕ್. ಈಗಾಗಲೇ ಜಗವೇ ನೀನು ಗೆಳತಿಯೇ ಹಾಡು.. ಯುವ ಪ್ರೇಮಿಗಳ ಹೃದಯಗೀತೆಯಾಗಿದೆ. ರಚನಾ ಇಂದರ್ & ಪ್ರವೀಣ್ ಅವರ ಲವ್ ಸ್ಟೋರಿ ಹೃದಯ ತಟ್ಟುತ್ತಿದೆ. ಆಗಸ್ಟ್ 19ಕ್ಕೆ ಸಿನಿಮಾ ರಿಲೀಸ್. 

  • ಪ್ರೀತಿಯ ಮನವಿಗೆ ತಲೆಬಾಗಿದ ಪ್ರೇಕ್ಷಕ : ಗೆಲುವಿನ ಹಾದಿಯಲ್ಲಿ ಲವ್ 360

    ಪ್ರೀತಿಯ ಮನವಿಗೆ ತಲೆಬಾಗಿದ ಪ್ರೇಕ್ಷಕ : ಗೆಲುವಿನ ಹಾದಿಯಲ್ಲಿ ಲವ್ 360

    ಲವ್ 360. ಇದೇ ಶುಕ್ರವಾರ ರಿಲೀಸ್ ಆಗಿದ್ದ ಸಿನಿಮಾ. ಶಶಾಂಕ್ ನಿರ್ದೇಶನವಿದ್ದ ಕಾರಣಕ್ಕೆ ನಿರೀಕ್ಷೆಯೂ ಜೋರಾಗಿತ್ತು. ಹೊಸಬರಾದ ಪ್ರವೀಣ್ ಮತ್ತು ರಚನಾ ಇಂದರ್ ನಾಯಕ ನಾಯಕಿಯರಾಗಿದ್ದ ಚಿತ್ರ ಲವ್ 360 ಬಗ್ಗೆ ಟ್ರೆಂಡಿಂಗ್ ಕೂಡಾ ಇತ್ತು. ಅದರಲ್ಲೂ ಜಗವೇ ನೀನು ಗೆಳತಿಯೇ.. ಹಾಡು ಪ್ರೇಮಿಗಳ ಹೃದಯಗೀತೆಯಾಗಿತ್ತು. ಆದರೆ ಮೊದಲ 2 ದಿನ ನಿರೀಕ್ಷೆಗೆ ತಕ್ಕಂತೆ ಜನರೇ ಬಂದಿರಲಿಲ್ಲ. ಆಗ ನಿರ್ದೇಶಕ ಶಶಾಂಕ್ ಪ್ರೇಕ್ಷಕರಿಗೆ ಮನವಿ ಮಾಡಿದ್ದರು. ಒಂದೊಳ್ಳೆ ಸಿನಿಮಾ ಮಾಡಿದ್ದೇವೆ. ದಯವಿಟ್ಟು ನೋಡಿ. ನೀವು ಬರದೇ ಹೊದರೆ ಥಿಯೇಟರಿಂದ ತೆಗೆಯುತ್ತಾರೆ. ನೀವು ಖಂಡಿತಾ ಇಷ್ಟಪಡುತ್ತೀರಿ. ಜಗವೇ ನೀನು ಗೆಳತಿಯೇ ಹಾಡು ಇರುವ ಸಿನಿಮಾ ಇದು ಎಂದು ಕೇಳಿಕೊಂಡಿದ್ದರು. ಶಶಾಂಕ್ ಮನವಿ ಕೆಲಸ ಮಾಡಿದೆ. ಈಗ ಚಿತ್ರ ಗೆಲುವಿನ ಹಾದಿಗೆ ಬಂದಿದೆ.

    ನಾನು ಪ್ರೇಕ್ಷಕರನ್ನು ದೂರುವುದಿಲ್ಲ. ಚಿತ್ರ ನೋಡಿದವರೆಲ್ಲ ಮೆಚ್ಚಿಕೊಂಡಿರುವಾಗ ಜನರು ಬಾರದೇ ಇದ್ದದ್ದನ್ನು ನೋಡಿ ನನಗೆ ಆಶ್ಚರ್ಯವಾಗಿದ್ದಂತೂ ನಿಜ. ಆದರೆ ಈಗ ಪಿಕಪ್ ಆಗಿದೆ. ಬೆಂಗಳೂರು, ದಾವಣಗೆರೆ, ವಿಜಯಪುರ ಸೇರಿದಂತೆ ಎಲ್ಲ ಕಡೆ ಉತ್ತಮ ರೆಸ್ಪಾನ್ಸ್ ಇದೆ ಎಂದಿದ್ದಾರೆ ಶಶಾಂಕ್.

    ಸೆಕೆಂಡ್ ಹಾಫ್‍ನಲ್ಲಿ 1.10 ನಿಮಿಷ ಇದೆ. ಆದರೆ ಅಷ್ಟೂ ಅವಧಿಯಲ್ಲಿರೋದು ಕೇವಲ 30 ನಿಮಿಷ ಡೈಲಾಗ್. ಉಳಿದದ್ದೆಲ್ಲವನ್ನೂ ದೃಶ್ಯಗಳೇ ಹೇಳುತ್ತವೆ. ಇದು ಥಿಯೇಟರ್ ಪ್ರೇಕ್ಷಕರಿಗಾಗಿಯೇ ಮಾಡಿರುವ ಸಿನಿಮಾ. ಜನ ನೋಡಲಿಲ್ಲ, ಇಷ್ಟ ಪಡಲಿಲ್ಲ ಎಂದಾಗ ನಾನು ಜನರನ್ನು ದೂರುವುದಿಲ್ಲ. ಆದರೆ ಒಳ್ಳೆಯ ಸಿನಿಮಾ ಬರುತ್ತಿಲ್ಲ ಎಂದು ದೂರುವವರು ಖಂಡಿತಾ ಈ ಚಿತ್ರ ನೋಡಿ ಎಂದಿದ್ದಾರೆ ಶಶಾಂಕ್.

    ಲವ್ 360 ಕೇವಲ ಲವ್ ಸ್ಟೋರಿಯಲ್ಲ. ಅಲ್ಲೊಂದು ಕ್ರೈಂ ಮತ್ತು ಥ್ರಿಲ್ಲರ್ ಸ್ಟೋರಿಯೂ ಇದೆ. ಪ್ರೇಕ್ಷಕರು ನಿಧಾನವಾಗಿಯೇ ಥಿಯೇಟರಿಗೆ ಬರುತ್ತಿದ್ದು, ಚಿತ್ರ ಗೆಲುವಿನ ಹಾದಿಗೆ ಬಂದಿರುವುದು ತಂಡದ ಖುಷಿ ಹೆಚ್ಚಿಸಿದೆ.

    ಇತ್ತೀಚೆಗೆ ಬಾಲಿವುಡ್‍ನಲ್ಲಿ ನಮ್ಮ ಚಿತ್ರ ಇಷ್ಟವಾಗದಿದ್ದರೆ ನೊಡಬೇಡಿ ಎಂಬ ಅಹಂಕಾರ ಮಾತುಗಳನ್ನಾಡಿ ಚಿತ್ರದ ಕಲೆಕ್ಷನ್ ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರೀತಿಯ ಮನವಿಗೆ ಖಂಡಿತಾ ಪ್ರೇಕ್ಷಕರು ಸ್ಪಂದಿಸುತ್ತಾರೆ. ಮತ್ತದು ಒಳ್ಳೆಯ ಸಿನಿಮಾ ಆಗಿದ್ದರೆ ಚಿತ್ರವನ್ನೂ ಗೆಲ್ಲಿಸುತ್ತಾರೆ ಎಂಬುದಕ್ಕೆ ಲವ್ 360 ಸಾಕ್ಷಿ.

  • ಪ್ರೇಮಿಗಳ ಕಥೆಯೋ.. ಸೇಡಿನ ಕಥೆಯೋ.. ಲವ್ 360 ಎಂಥ ಕಥೆ?

    ಪ್ರೇಮಿಗಳ ಕಥೆಯೋ.. ಸೇಡಿನ ಕಥೆಯೋ.. ಲವ್ 360 ಎಂಥ ಕಥೆ?

    ಟ್ರೇಲರ್ ನೋಡಿದವರಿಗೆ ಅಷ್ಟೂ ಕುತೂಹಲ ಹುಟ್ಟಿಸದಿದ್ದರೆ ಹೇಗೆ..? ನಿರ್ದೇಶಕ ಶಶಾಂಕ್ ಟ್ರೇಲರಿನಲ್ಲೇ ಒಂದು ಗಟ್ಟಿ ಕಥೆಯ ಸುಳಿವು ಕೊಟ್ಟಿದ್ದಾರೆ. ಅಲ್ಲಿ ಇಬ್ಬರು ಪ್ರೇಮಿಗಳು. ಅವಳು ಚೆನ್ನಾಗಿದ್ದಾಳೆಯೋ.. ಮಾನಸಿಕ ಅಸ್ವಸ್ಥೆಯೋ.. ಆಥವಾ ಬುದ್ದಿ ಬೆಳವಣಿಗೆಯಾಗದ ಯುವತಿಯೋ.. ಕುತೂಹಲ ಉಳಿಸುತ್ತಾರೆ ಶಶಾಂಕ್. ಮಧ್ಯೆ ಮಧ್ಯೆ ಅವಳನ್ನು ಗುಣಮುಖಳನ್ನಾಗಿ ಮಾಡಿಸಲು ನಾಯಕ ಪಡುವ ಯಾತನೆ.. ಮಧ್ಯದಲ್ಲೊಂದು ಫೈಟ್.. ಅಲ್ಲೇನೋ ನಡೆಯಬಾರದ್ದು ನಡೆದು ಹೀರೋ ಸೇಡು ತೀರಿಸಿಕೊಳ್ಳುತ್ತಿರಬಹುದಾ..? ಮತ್ತೊಂದು ಕುತೂಹಲ..

    ಲವ್ 360 ಚಿತ್ರದ ಟ್ರೇಲರ್.. ಹೀರೋ ಪ್ರವೀಣ್ ಹೊಸಬ. ನಾಯಕಿ ರಚನಾ ಇಂದರ್. ಲವ್ ಮಾಕ್ಟೇಲ್`ನ ಹೆಂಗೆ ನಾವು ಚೆಲುವೆ. ಅಭಿನಯ ಮಾತ್ರ.. ಹೃದಯ ಮುಟ್ಟುವಂತಿದೆ. ಏಕೆಂದರೆ ಅದು ಶಶಾಂಕ್ ಗರಡಿ. ತಮ್ಮದೇ ಬ್ಯಾನರ್‍ನಲ್ಲಿ ಹೊಸ ಹೀರೋನನ್ನು ಪರಿಚಯಿಸುತ್ತಿರೋ ಶಶಾಂಕ್ ಜೊತೆ ನಿರ್ಮಾಣಕ್ಕೆ ಕೈ ಜೋಡಿಸಿರುವುದು ಡಾ.ಮಂಜುಳಾ ಮೂರ್ತಿ. ಈಗಾಗಲೇ ಅರ್ಜುನ್ ಜನ್ಯಾ ಅವರ ಜಗವೇ ನೀನು ಗೆಳತಿಯೇ.. ಹಾಡು ಪ್ರೇಮಿಗಳ ಹೃದಯ ಮುಟ್ಟಿದೆ. ಸಿನಿಮಾ ಆಗಸ್ಟ್ 19ಕ್ಕೆ ಬರುತ್ತಿದೆ. ಕೆಆರ್‍ಜಿ ಸ್ಟುಡಿಯೋಸ್ ಲವ್ 360ಯನ್ನು ದೇಶದಾದ್ಯಂತ ವಿತರಿಸುತ್ತಿದೆ.

  • ಪ್ರೇಮಿಗಳ ಹಬ್ಬ ಲವ್ 360ಗೆ 25 ದಿನ

    ಪ್ರೇಮಿಗಳ ಹಬ್ಬ ಲವ್ 360ಗೆ 25 ದಿನ

    ಶಶಾಂಕ್ ನಿರ್ದೇಶನದ ಪ್ರವೀಣ್-ರಚನಾ ಇಂದರ್ ನಟನೆಯ ಕ್ಯೂಟ್ ಲವ್ ಸ್ಟೋರಿ ಲವ್ 360. ಪ್ರೇಮಿಗಳ ಹಬ್ಬವಾದ ಈ ಲವ್ ಸ್ಟೋರಿ ಯಶಸ್ವಿಯಾಗಿದೆ. ಇಬ್ಬರು ಮುಗ್ಧ ಪ್ರೇಮಿಗಳ ಪ್ರೇಮಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗಿದೆಯಷ್ಟೇ ಅಲ್ಲ, ಯಶಸ್ವಿ 25 ದಿನ ಪೂರೈಸಿದೆ. ಪಿಕ್ ಅಪ್ ಆಗಲು ಸಮಯ ತೆಗೆದುಕೊಂಡರೂ ಸ್ಲೋಮೋಷನ್ ಹಿಟ್ ಹಾದಿಗೆ ಬಂದ ಚಿತ್ರ ಲವ್ 360.

    ಒಲವೇ ನೀನು ಗೆಳತಿಯೇ.. ಹಾಡು, ರಚನಾ ಇಂದರ್ ಮುಗ್ಧತೆ, ಪ್ರವೀಣ್ ಪ್ರೀತಿಯ ತೀವ್ರತೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಚಿತ್ರಕ್ಕೆ ಬೇರೆ ಭಾಷೆಗಳಲ್ಲೂ ಬೇಡಿಕೆ ಸೃಷ್ಟಿಯಾಗಿದ್ದು ರೀಮೇಕ್ ಬೇಡಿಕೆ ಬಂದಿದೆ. ಲವ್ 360ಯನ್ನು ತೆಲುಗು ಹಾಗೂ ತಮಿಳಿನಲ್ಲಿ ನಿರ್ಮಾಣದ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೊಂದು ಆಸಕ್ತಿ ತೋರಿಸಿದೆ.

    ಚಿತ್ರವನ್ನು ಗೆಲುವಿನ ಹಾದಿಗೆ ತಂದವರು ಪ್ರೇಕ್ಷಕರೇ. ಸಿನಿಮಾ ನೋಡಿದವರು ಮೆಚ್ಚಿದವರು ಮಾಡಿದ ಬಾಯಿಮಾತಿನ ಪ್ರಚಾರವೇ ಲವ್ 360 ಚಿತ್ರದ ಬಗ್ಗೆ  ಇಡೀ ಚಿತ್ರರಂಗ ಮಾತನಾಡುವಂತೆ ಮಾಡಿದೆ. ಈಗ ಯಶಸ್ವಿ 25 ದಿನವನ್ನೂ ಪೂರೈಸಿ ಮುನ್ನುಗ್ಗುತ್ತಿದೆ.

  • ಪ್ರೇಮಿಗಳಿಗೆ ಸಮಾಧಾನ ಹೇಳೋ ಸಖಿಯೇ ಸಾವರಿಸು..

    ಪ್ರೇಮಿಗಳಿಗೆ ಸಮಾಧಾನ ಹೇಳೋ ಸಖಿಯೇ ಸಾವರಿಸು..

    ಹೆಂಗೆ ನಾವು ಖ್ಯಾತಿಯ ರಚನಾ ಇಂದರ್.. ಹೊಸ ಪ್ರತಿಭೆ ಪ್ರವೀಣ್ ಪ್ರಧಾನ ಪಾತ್ರದಲ್ಲಿರೋ ಸಿನಿಮಾ ಲವ್ 360. ಶಶಾಂಕ್ ನಿರ್ದೇಶನವಾಗಿರೋ ಕಾರಣ ನಿರೀಕ್ಷೆಯೂ ದೊಡ್ಡದು. ಒಂದೊಳ್ಳೆ ಕಥೆ ಖಂಡಿತಾ ಇರುತ್ತದೆ ಎನ್ನುವ ನಂಬಿಕೆ. ಆ ನಂಬಿಕೆಗೆ ತಕ್ಕಂತೆಯೇ ಬಂದಿದೆ ಲವ್ 360 ಚಿತ್ರದ ಇನ್ನೊಂದು ಹಾಡು.. ಸಖಿಯೇ ಸಾವರಿಸು..

    ಶಶಾಂಕ್ ಅವರೇ ಸಾಹಿತ್ಯ ಬರೆದಿದ್ದು, ಪ್ರೇಮಿಗಳು ಪರಸ್ಪರ ಸಂತೈಸಿಕೊಳ್ಳೋ ರೀತಿ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಹಾಡಿಗೆ ಇನ್ನಷ್ಟು ಶಕ್ತಿ ಕೊಟ್ಟಿದ್ದಾರೆ ಗಾಯಕ ಸಂಜಿತ್ ಹೆಗ್ಡೆ. ಶಶಾಂಕ್ ಸಿನಿಮಾಸ್‍ನಲ್ಲಿಯೇ ಸಿದ್ಧವಾಗುತ್ತಿರೋ ಸಿನಿಮಾ ಬಹುತೇಕ ರೆಡಿಯಾಗಿದೆ. ಡಾ.ಮಂಜುಳಾ ಮೂರ್ತಿ ಮತ್ತು ಶಶಾಂಕ್ ನಿರ್ಮಾಣದಲ್ಲಿ ಬರುತ್ತಿರೋ ಸಿನಿಮಾ ಇದು ಲವ್ 360.

  • ಭಟ್ರ ಹಾಡು ಹಿಟ್ಟಾಗ್ ಹೋಯ್ತು.. ಜಜಾಂಗ್ ಜಾಂಗ್.. : ಲವ್ ಪಾರ್ಟಿಗೊಂದು ಸಾಂಗು..

    ಭಟ್ರ ಹಾಡು ಹಿಟ್ಟಾಗ್ ಹೋಯ್ತು.. ಜಜಾಂಗ್ ಜಾಂಗ್.. : ಲವ್ ಪಾರ್ಟಿಗೊಂದು ಸಾಂಗು..

    ಶಶಾಂಕ್ : ಒಂದು ಪ್ರಮೋಷನಲ್ ಸಾಂಗ್ ಮಾಡೋಣ..

    ಅರ್ಜುನ್ ಜನ್ಯ : ಯಾವ್ ತರ ಸಾಂಗ್ ಸರ್.. ಏನಾದ್ರೂ ಬರೆದಿದ್ದೀರ..

    ಶಶಾಂಕ್ : ಇಂತಹ ಸಾಂಗುಗಳಿಗೆ ವಲ್ರ್ಡ್ ಫೇಮಸ್ ಆಗಿರೋ ಯೋಗರಾಜ್ ಭಟ್ರು ಬರೆದುಕೊಟ್ಟವ್ರೆ..

    ಅರ್ಜುನ್ ಜನ್ಯ : ಜಜಾಂಗ್ ಜಾಂಗ್.. ಏನ್ಸಾರ್ ಇದು.. ಹಿಂಗದ್ರೇನು..?

    ಶಶಾಂಕ್ : ಯಾವನಿಗ್ಗೊತ್ರಿ.. ಭಟ್ರು ಬರೆದುಕೊಡವೆಲ್ಲ ಇಂಥವೇ.. ಸಾಂಗ್ ಹಿಟ್ ಆಯ್ತದೆ.. ಹಾಕಿ..

    ಲವ್ 360 ಚಿತ್ರದ ಹಾಡು ಜಜಾಂಗ್ ಜಾಂಗ್ ಶುರುವಾಗೋ ಮುಂಚಿನ ಸಂಗೀತ ನಿರ್ದೇಶಕರು ಮತ್ತು ನಿರ್ದೇಶಕರ ನಡುವಿನ ಸಂಭಾಷಣೆ ಇದು. ನಂತರ ಶುರುವಾಗೋದು ಹಾಡು.. ಜಜಾಂಗ್ ಜಾಂಗ್..ಜಜಾಂಗ್ ಜಾಂಗ್..

    ಹಾಡಿನಲ್ಲಿ ಹಾಡಿ ಕುಣಿದಿರೋದು ರವಿಶಂಕರ್ ಗೌಡ. ಇದು ಲವ್ ಸಕ್ಸಸ್ ಆಗಿದ್ದಕ್ಕೆ ಪಾರ್ಟಿ ಮಾಡುವವರಿಗೆ ಹೇಳಿ ಮಾಡಿಸಿದಂತಿದೆ. ಹಾಡನ್ನು ಅರ್ಜುನ್ ಜನ್ಯ ಅವರೇ ಹಾಡಿದ್ದಾರೆ..ಜಜಾಂಗ್ ಜಾಂಗ್..

    ಪ್ರವೀಣ್ ಮತ್ತು ರಚನಾ ಇಂದರ್ ಪ್ರಧಾನ ಪಾತ್ರದಲ್ಲಿರೋ ಚಿತ್ರ ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿದೆ. ಜಜಾಂಗ್ ಜಾಂಗ್.. ಜಗವೇ ನೀನು ಗೆಳತಿಯೇ.. ಹಾಗೂ ಭೋರ್ಗರೆದು ಕಡಲು.. ಹಾಡುಗಳ ಮೂಲಕ ಮೆಲೋಡಿ ಮ್ಯಾಜಿಕ್ ಮಾಡಿದ್ದ ಶಶಾಂಕ್-ಅರ್ಜುನ್ ಜೋಡಿ.. ಇಲ್ಲಿ ಟಪ್ಪಾಂಗುಚ್ಚಿ ಮ್ಯಾಜಿಕ್ ಮಾಡಿದೆ.ಜಜಾಂಗ್ ಜಾಂಗ್..

  • ಮತ್ತೆ ಹೃದಯಕ್ಕೆ ಲಗ್ಗೆ ಇಟ್ಟು ಬೋರ್ಗರೆದ ಲವ್ 360

    ಮತ್ತೆ ಹೃದಯಕ್ಕೆ ಲಗ್ಗೆ ಇಟ್ಟು ಬೋರ್ಗರೆದ ಲವ್ 360

    ಶುದ್ಧ ಪ್ರೀತಿಯ ಪಯಣ ಎಂದೂ ಸುಗಮವಾಗಿ ಸಾಗಿಲ್ಲ : ಶೇಕ್ಸ್‍ಪಿಯರ್

    ಈ ಒಂದು ಸಾಲಿನೊಂದಿಗೇ ಶುರುವಾಗುವ ಲವ್ ಸ್ಟೋರಿಯಿದು. ಮೊಗ್ಗಿನ ಮನಸು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಲೀಲಾದಂತಹ ಅಪ್ಪಟ ಪ್ರೇಮಕಥೆಗಳನ್ನು ನೀಡಿ ಗೆದ್ದಿರುವ ಶಶಾಂಕ್ ಈ ಬಾರಿ ಮತ್ತೊಂದು ವಿಭಿನ್ನ ಪ್ರೇಮಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಲವ್ 360. ಆ ಚಿತ್ರದ ಮತ್ತೊಂದು ಹಾಡು ಬೋರ್ಗರೆವ ಕಡಲು..

    ಹಾಡಿನ ಸಾಹಿತ್ಯ ಚೆಂದವಾಗಿದೆ. ಶಶಾಂಕ್ ಅವರದ್ದೇ ಪದಗಳು. ಆ ಪದಗಳನ್ನು ಅರ್ಜುನ್ ಜನ್ಯ ಸಂಗೀತ ಇನ್ನೊಂದು ಲೆವೆಲ್ಲಿಗೆ ಕೊಂಡೊಯ್ದರೆ.. ಇಡೀ ಹಾಡನ್ನು ನೋಡುಗರ ಮತ್ತು ಕೇಳುಗರೆ ಎದೆಗೆ ನಾಟಿಸಿರುವುದು ಗಾಯಕ ಕೀರ್ತನ್ ಹೊಳ್ಳ. ಒಂದು ಕಂಪ್ಲೀಟ್ ಭಾವತೀವ್ರತೆಯ ಹಾಡು..

    ಈ ಚಿತ್ರದಲ್ಲಿ ಶಶಾಂಕ್ ಹೊಸಬರನ್ನಿಟ್ಟುಕೊಂಡೇ ಹೊರಟಿದ್ದಾರೆ. ಹೊಸಬರೆಂದರೆ ಸಂಪೂರ್ಣ ಹೊಸಬರೂ ಅಲ್ಲ. ಹೀರೋ ಪ್ರವೀಣ್ ಹೊಸ ಪರಿಚಯವಾದರೆ.. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ನಾಯಕಿ. ನಿರ್ಮಾಣದಲ್ಲಿ ಡಾ.ಮಂಜುಳಾ ಮೂರ್ತಿ, ಶಶಾಂಕ್ ಅವರೊಂದಿಗೆ ಕೈಜೋಡಿಸಿದ್ದಾರೆ.

  • ಮುಗ್ಧ ಪ್ರೇಮಿಗಳು V/s ಕ್ರೌರ್ಯ : ಪ್ರೇಕ್ಷಕರ ಹೃದಯ ಗೆದ್ದ ಥ್ರಿಲ್ಲರ್ ಕಥೆ

    ಮುಗ್ಧ ಪ್ರೇಮಿಗಳು V/s ಕ್ರೌರ್ಯ : ಪ್ರೇಕ್ಷಕರ ಹೃದಯ ಗೆದ್ದ ಥ್ರಿಲ್ಲರ್ ಕಥೆ

    ಇಬ್ಬರು ಮುಗ್ಧ ಪ್ರೇಮಿಗಳು. ಅನಾಥರು. ಅವಳಿಗೋ ನೆನಪಿನ ಶಕ್ತಿಯೇ ಕಡಿಮೆ. ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದೊಂದೇ ಅವನ ಬದುಕಿನ ಗುರಿ. ಅವನೂ ಮುಗ್ಧ. ಅವಳೂ ಮುಗ್ಧೆ. ಅವರಿಬ್ಬರ ಮಧ್ಯೆ ಕ್ರೌರ್ಯವನ್ನೇ ತಿಂದು..ಕುಡಿದು ತೇಗಿರುವ ವಿಲನ್ಸ್ ಬರುತ್ತಾರೆ. ನಂತರ ಇಡೀ ಕಥೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಾ ಹೋಗುತ್ತೆ. ಪ್ರೇಕ್ಷಕರಿಗೆ ಲವ್ ಸ್ಟೋರಿ ಮೂಲಕ ಎಷ್ಟು ಕಚಗುಳಿ ಕೊಟ್ಟು, ಭಾವುಕರನ್ನಾಗಿಸುವ ಶಶಾಂಕ್.. ಆಮೇಲಾಮೇಲೆ ಭಾವುಕತೆಯ ದರ್ಬಾರ್ ನಡೆಸುತ್ತಾರೆ.

    ಹೆಜ್ಜೆ ಹೆಜ್ಜೆಗೂ ಕುತೂಹಲ ಸೃಷ್ಟಿಸುತ್ತಾರೆ. ನಡುವೆ ಬರುವ ಹಾಡುಗಳು ಹೃದಯಕ್ಕೆ ತಂಪರೆಯುತ್ತವೆ. ಮುಗ್ಧ ಪ್ರೇಮಿಗಳ ಪಾತ್ರದಲ್ಲಿ ಪ್ರವೀಣ್ ಮತ್ತು ರಚನಾ ಇಂದರ್ ಹೃದಯಕ್ಕೇ ಲಗ್ಗೆಯಿಡುತ್ತಾರೆ.

    ಶಶಾಂಕ್ ಅವರ ಲವ್ 360 ಸಿನಿಮಾ ರಿಲೀಸ್ ಆಗಿದ್ದು ಪ್ರೇಕ್ಷಕರ ಮನಸ್ಸು ಗೆದ್ದಿದೆ. ಫ್ಯಾಮಿಲಿ ಸಮೇತ ನೋಡಬಹುದಾದ ಲವ್ ಥ್ರಿಲ್ಲರ್ ಸಿನಿಮಾ ಲವ್ 360.

  • ಮೆಲೋಡಿ ಮೆರವಣಿಗೆ : ಲವ್ 360 ಹಾಡುಗಳ ಮೋಡಿ

    ಮೆಲೋಡಿ ಮೆರವಣಿಗೆ : ಲವ್ 360 ಹಾಡುಗಳ ಮೋಡಿ

    ಶಶಾಂಕ್ ಚಿತ್ರಗಳೇ ಹಾಗೆ.. ಚೆಂದದ ಕಥೆಯ ಜೊತೆ ಜೊತೆಗೇ  ಮೆಲೋಡಿ ಹಾಡುಗಳ ಮೆರವಣಿಗೆಯೂ ಇರುತ್ತದೆ. ಮೊಗ್ಗಿನ ಮನಸ್ಸು ಚಿತ್ರದಿಂದ ಆರಂಭವಾದ ಶಶಾಂಕ್ ಮತ್ತು ಮೆಲೋಡಿ ಹಾಡುಗಳ ಜುಗಲ್‍ಬಂಧಿ ಈಗಲೂ ಮುಂದುವರೆದಿದೆ. ಇದೇ ವಾರ ಬಿಡುಗಡೆಯಾಗುತ್ತಿರೋ ಲವ್ 360 ಚಿತ್ರದ ಹಾಡುಗಳೆಲ್ಲವೂ ಮೆಲೋಡಿ.. ಮೆಲೋಡಿ.. ಮೆಲೋಡಿ.. ಕೇಳುತ್ತಾ ಕೇಳುತ್ತಾ ಗುನುಗುನುಗುಟ್ಟಬೇಕು.. ಮೆಲೋಡಿಗಳ ಶಕ್ತಿಯೇ ಅದು.

    ಸಿದ್ಧ್ ಶ್ರೀರಾಮ್ ಹಾಡಿರುವ ಜಗವೇ ನೀನು.. ಗೆಳತಿಯೇ ಹಾಡು ಗುಂಗು ಹಿಡಿಸಿದ್ದರೆ, ಸಂಜಿತ್ ಹೆಗ್ಡೆ ಹಾಡಿರುವ ಸಖಿಯೇ ಸಾವರಿಸು.. ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತಿದೆ. ಭೋರ್ಗರೆದು ಕಡಲು.. ಹಾಡಿನ ಮ್ಯಾಜಿಕ್ಕೇ ಬೇರೆ.. ಇದರ ಮಧ್ಯೆ ಯೋಗರಾಜ್ ಭಟ್ಟ ಜಜಾಂಗ್ ಜಾಂಗ್ ಹಾಡು ಮಾತ್ರ ಸ್ವಲ್ಪ ಡಿಫರೆಂಟು. ಆದರೆ.. ಲವ್ ಪಾರ್ಟಿಗೆ ಹೇಳಿ ಮಾಡಿಸಿರೋ ಹಾಡು. ಪ್ರೀತಿ ಸಕ್ಸಸ್ ಆದವರಿಗೂ.. ಫೇಲ್ಯೂರ್ ಆದವರಿಗೂ ಏಕಕಾಲಕ್ಕೆ ರೀಚ್ ಆಗಬಲ್ಲ ಗೀತೆ..

    ಇದು ಶಶಾಂಕ್ ಮತ್ತು ಅರ್ಜುನ್ ಜನ್ಯ ಅವರ ಹ್ಯಾಟ್ರಿಕ್ ಮೋಡಿ. ಜರಾಸಂಧ ಮತ್ತು ಮುಂಗಾರುಮಳೆ 2 ನಂತರ ಇಬ್ಬರೂ ಮತ್ತೊಮ್ಮೆ ಜೊತೆಯಾಗಿದ್ದಾರೆ. ಚಿತ್ರದ ಹಾಡುಗಳು ಹಿಟ್ ಆಗಿವೆ. ಅದರಲ್ಲೂ ಜಗವೇ ನೀನು.. ಆ ಹಾಡನ್ನು ಹೇಗೆ ಚಿತ್ರೀಕರಿಸಬಹುದು ಎಂಬ ಕುತೂಹಲ ಹಲವರಲ್ಲಿದೆ. ನಿಮಗೆ ನಿರಾಶೆ ಮಾಡುವುದಿಲ್ಲ. ಇಡೀ ಚಿತ್ರದಲ್ಲಿ ಪ್ರತಿ ಪಾತ್ರಕ್ಕೂ ಒಂದೊಂದು ಥೀಮ್ ಮ್ಯೂಸಿಕ್ ಇದೆ. ಈ ಚಿತ್ರದ ಹಾಡು ಮತ್ತು ಸಂಗೀತದ ಮೂಲಕ ಅರ್ಜುನ್ ಜನ್ಯ ಹೊಸ ಸ್ಟಾಂಡರ್ಡ್ ಸೃಷ್ಟಿಸಲಿದ್ದಾರೆ. ಇಡೀ ಚಿತ್ರ ಒಂದು ಭಾವನೆಗಳ ಪಯಣ ಎನ್ನುವುದು ಶಶಾಂಕ್ ಕೊಡುವ ಭರವಸೆ.

    ಶಶಾಂಕ್ ಕೊಟ್ಟಿರುವ ಯಾವ ಭರವಸೆಗಳೂ ಇದುವರೆಗೆ ಹುಸಿಯಾಗಿಲ್ಲ. ಅದರಲ್ಲೂ ಲವ್ ಸ್ಟೋರಿಗಳದ್ದು. ಈ ಬಾರಿ ಪ್ರವೀಣ್ ಮತ್ತು ರಚನಾ ಇಂದರ್‍ರಂತಹ ಮುದ್ದು ಮುದ್ದಾದ ಜೋಡಿಯೊಂದು ಸಿಕ್ಕಿದೆ. ಚಿತ್ರಕ್ಕೆ ಶಶಾಂಕ್ ಅವರಷ್ಟೇ ಅಲ್ಲ, ಡಾ.ಮಂಜುಳಾ ಮೂರ್ತಿ ಕೂಡಾ ನಿರ್ಮಾಪಕರು

  • ಲವ್ 360 : ಗೆಲುವೇ ನೀನು ಗೆಳತಿಯೇ..

    ಲವ್ 360 : ಗೆಲುವೇ ನೀನು ಗೆಳತಿಯೇ..

    ಜಗವೇ ನೀನು ಗೆಳತಿಯೇ..

    ನನ್ನಾ ಜೀವದ ಒಡತಿಯೇ..

    ಉಸಿರೇ ನೀನು ಗೆಳತಿಯೇ..

    ನನ್ನನ್ನು ನಡೆಸೋ ಸಾಥಿಯೇ..

    ಈ ಹಾಡು.. ಹಾಡಿನ ತೀವ್ರತೆ.. ಸಾಲುಗಳು.. ಪದ ಪದಗಳಲ್ಲೂ ತುಂಬಿದ್ದ ಪ್ರೀತಿಯ ಮಾರ್ದವತೆ ಪ್ರೇಮಿಗಳನ್ನು ಥಿಯೇಟರಿಗೆ ಎಳೆದುಕೊಂಡು ಬಂದಿದೆ.

    ಒಣ ಒಂಟಿ ಜೀವದಾ ಕೂಗಿಗೆ

    ತಂಗಾಳಿ ತಂದ ಓ ದೈವವೇ..

    ನಿನಗೇನು ನಾ ನೀಡಲೇ..

    ಎಂದು ಪದಪದಗಳನ್ನೂ ಮುತ್ತಿನಂತೆ ಪೋಣಿಸಿ ಸ್ವತಃ ನಿರ್ದೇಶಕ ಶಶಾಂಕ್. ಅರ್ಜುನ್ ಜನ್ಯ ಸಂಗೀತದ ಜೊತೆಯಾಗಿದ್ದ ಹಾಡಿಗೆ ಸಿದ್ಧ್ ಶ್ರೀರಾಮ್ ಅಷ್ಟೇ ಮಾಧುರ್ಯ ತುಂಬಿ ಹಾಡಿದ್ದರು.

    ಪ್ರವೀಣ್ ಮತ್ತು ರಚನಾ ಇಂದರ್ ಮುಗ್ಧತೆಯೆಂದರೆ ಇದೇನಾ ಎಂದು ಪ್ರೇಕ್ಷಕರು ಕೇಳಿಕೊಳ್ಳುವಂತೆ ನಟಿಸಿದ್ದರು. ಮುಗ್ಧತೆಯೇ ಮೈವೆತ್ತಂತಿದ್ದ ರಾಮ್-ಜಾನಕಿ ಎಂಬ ಯುವ ಪ್ರೇಮಿಗಳ ಪ್ರೀತಿಗೆ.. ಪ್ರೀತಿಯ ನಡುವೆಯೂ ಸುಳಿದಾಡುವ ಥ್ರಿಲ್ಲರ್ ರೋಮಾಂಚನಕ್ಕೆ ಪ್ರೇಕ್ಷಕರು ಫಿದಾ ಆಗಿ ಹೋಗಿದ್ದಾರೆ. ಜಗವೇ ನೀನು ಗೆಳತಿಯೇ.. ಹೋಗಿ ಗೆಲುವೇ ನನ್ನ ಒಡತಿಯೇ ಆಗಿದೆ. ಸಿನಿಮಾ ಹಿಟ್ ಆಗುತ್ತಿದೆ.

  • ಲವ್ 360 : ಡಾಕ್ಟರ್ ಪ್ರವೀಣ್ ಆಕ್ಟರ್ ಆಗಿದ್ದು ಹೇಗೆ?

    ಲವ್ 360 : ಡಾಕ್ಟರ್ ಪ್ರವೀಣ್ ಆಕ್ಟರ್ ಆಗಿದ್ದು ಹೇಗೆ?

    ಲವ್ 360 ಚಿತ್ರದ ಹೀರೋ ಪ್ರವೀಣ್ ವೃತ್ತಿಯಲ್ಲಿ ವೈದ್ಯ. ಎಂಬಿಬಿಎಸ್ ಓದಿರುವ ಪ್ರವೀಣ್ ನಂತರ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸಿನಿಮಾ ರಂಗವನ್ನ. ಸದ್ಯಕ್ಕೆ ಟ್ರೆಂಡಿಂಗ್‍ನಲ್ಲಿ ಎಲ್ಲರಗೂ ಗೊತ್ತಿರೋ ಹೆಸರು ಡಾ.ಸಾಯಿ ಪಲ್ಲವಿ ಅವರದ್ದು ಮಾತ್ರ. ಅವರು ಡಾಕ್ಟರ್ ಓದಿ ಆಕ್ಟರ್ ಆಗಿರುವ ನಟಿ. ಕಾರ್ಡಿಯಾಲಜಿಸ್ಟ್. ನಟಿ ಶ್ರೀಲೀಲಾ ಕೂಡಾ ಇತ್ತೀಚೆಗೆ ಎಂಬಬಿಎಸ್ ಕಂಪ್ಲೀಟ್ ಮಾಡಿದ್ದಾರೆ. ತೆಲುಗಿನಲ್ಲಿ ಸ್ಟಾರ್ ನಟರಾಗಿರುವ ಡಾ.ರಾಜಶೇಖರ್ ಸೇರಿದಂತೆ ಹಲವರು ಡಾಕ್ಟರ್ ಆಗಿದ್ದವರೇ.

    ಕನ್ನಡದಲ್ಲಿ ಜಯಮ್ಮನ ಮಗ ಚಿತ್ರದಲ್ಲಿ ನಟಿಸಿದ್ದ ಭಾರತಿ ಕೂಡಾ ವೈದ್ಯೆಯೇ. ಈಗ ಮತ್ತೊಬ್ಬ ಡಾಕ್ಟರ್ ಆಗಿ ಆಕ್ಟರ್ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಡಾ.ಪ್ರವೀಣ್. ಡಾ.ಪ್ರವೀಣ್ ವೃತ್ತಿಯಲ್ಲಿ ಡಾಕ್ಟರ್. ಹೊಸಪೇಟೆಯಲ್ಲಿ ಪ್ರವೀಣ್ ಅವರ ತಂದೆ-ತಾಯಿ ಸೇವಾ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಹೊಸಪೇಟೆ ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ಇವರ ಕುಟುಂಬಕ್ಕಿರುವ ಗೌರವವೇ ಬೇರೆ. ಆಕ್ಟರ್ ಆಗುವ ಕನಸೂ ಇತ್ತು. ಅದೀಗ ಲವ್ 360 ಚಿತ್ರದ ಮೂಲಕ ಈಡೇರಿದೆ.

    ನಟಿಸಬೇಕು ಅನ್ನೋ ಆಸೆ ಇತ್ತು. ಹೊಸ ನಿರ್ದೇಶಕರಿಗೆ ಹುಡುಕುತ್ತಿದ್ದೆವು. ನನ್ನ ಅಂಕಲ್ ನಾಗರಾಜ್ ತೆಲುಗಿನಲ್ಲಿ ವಿತರಕರಾಗಿದ್ದಾರೆ. ಅವರು ನನಗೆ ಸಜೆಸ್ಟ್ ಮಾಡಿದ ಹೆಸರು ಶಶಾಂಕ್ ಅವರದ್ದು. ಅವರ ಚಿತ್ರಗಳು ಇಷ್ಟವಾದವು. ಕೃಷ್ಣಲೀಲಾ ನನಗೆ ತುಂಬಾ ಇಷ್ಟ. ಇದಾದ ಮೇಲೆ 2 ವರ್ಷ ನಟನೆಯ ತರಬೇತಿ ತೆಗೆದುಕೊಂಡೆ. ಅದಾದ ಮೇಲೆ ಶಶಾಂಕ್ ಮತ್ತೆರಡು ತಿಂಗಳ ವರ್ಕ್‍ಶಾಪ್ ಮಾಡಿಸಿದರು. ಹೊಸಬರೊಂದಿಗೆ ಶಶಾಂಕ್ ಅವರು ಬೆರೆಯುವ ರೀತಿ ಇಷ್ಟವಾಯಿತು. ನನಗೆ ಸರಿ ಎನ್ನಿಸಿದಂತೆ ಹಾಗೂ  ನಿರ್ದೇಶಕರು ಹೇಳಿದ್ದನ್ನು ಮಾಡಿದ್ದೇನೆ ಎನ್ನುತ್ತಾರೆ ಪ್ರವೀಣ್.

    ಪ್ರವೀಣ್ ಎದುರು ನಾಯಕಿಯಾಗಿರುವುದು ರಚನಾ ಇಂದರ್. ಲವ್ 360 ಇದೇ ವಾರ ರಿಲೀಸ್ ಆಗುತ್ತಿದೆ. ಇದುವರೆಗೆ ಬಂದಿರೋ ಪ್ರೋಮೋ, ಹಾಡುಗಳಲ್ಲಿ ಪ್ರವೀಣ್ ಪ್ರಾಮಿಸಿಂಗ್ ಎನಿಸಿದ್ದಾರೆ.

  • ಲವ್ 360 : ನಿರೀಕ್ಷೆ ಸುಳ್ಳು ಮಾಡಲಿಲ್ಲ ಶಶಾಂಕ್..!

    ಲವ್ 360 : ನಿರೀಕ್ಷೆ ಸುಳ್ಳು ಮಾಡಲಿಲ್ಲ ಶಶಾಂಕ್..!

    ನಿರ್ದೇಶಕ ಶಶಾಂಕ್ ಚಿತ್ರಗಳೆಂದರೆ ಅಲ್ಲೊಂದು ಚೆಂದದ ಕಥೆಯಿದ್ದೇ ಇರುತ್ತದೆ. ಉತ್ಕಟ ಭಾವನೆಗಳ ಸಂಘರ್ಷದ ಜೊತೆ ಜೊತೆಯಲ್ಲೇ ಎಲ್ಲರ ಹೃದಯಕ್ಕೂ ತಟ್ಟುವ ಕಥೆ ಇಟ್ಟುಕೊಂಡೇ ಬರುತ್ತಾರೆ ಶಶಾಂಕ್. ಮೊಗ್ಗಿನ ಮನಸ್ಸು ಚಿತ್ರದಿಂದಲೂ ಶಶಾಂಕ್ ಚಿತ್ರಗಳಲ್ಲಿ ಬ್ಯೂಟಿಫುಲ್ ಸ್ಟೋರಿ.. ಆ ಸ್ಟೋರಿಯೊಳಗೇ ಒಂದು ಹೃದಯ ಮುಟ್ಟುವ ಸಂದೇಶ.. ಇರುತ್ತದೆ. ಲವ್ 360 ಟ್ರೇಲರ್ ನೋಡಿದವರಿಗೆ ಒನ್ಸ್ ಎಗೇನ್ ಅದೇ ಫೀಲಿಂಗ್ ಬರುತ್ತದೆ. ಲವ್ 360ಯ ಪುಟ್ಟ ಟ್ರೇಲರ್‍ನಲ್ಲೇ ಒಂದು ಅದ್ಭುತ ಕಥೆಯಿದೆ.

    ಶುದ್ಧ ಪ್ರೀತಿಯ ಪಯಣ ಎಂದೂ ಸುಗಮನವಾಗಿ ಸಾಗಲ್ಲ ಎಂಬ ಷೇಕ್ಸ್‍ಪಿಯರ್ ಮಾತಿನೊಂದಿಗೇ ಶುರುವಾಗುವ ಟ್ರೇಲರ್.. ತುಂಟಾಟದ ಪ್ರೇಮಿಗಳು.. ಅವರ ನಡುವೆ ಸಂಭವಿಸಿರೋ ವಿಚಿತ್ರವೋ.. ವಿಭಿನ್ನವೋ.. ಎನ್ನಿಸುವ ಘಟನೆ.. ನಾಯಕಿ ಹುಚ್ಚಿಯೇ ಇರಬಹುದೇನೋ ಎನ್ನಿಸುತ್ತಲೇ.. ಇಲ್ಲ ಅವಳು ನಾರ್ಮಲ್ ಆಗಿಯೇ ಇದ್ದಾಳೆ ಎನ್ನಿಸುವ ಸಂಭಾಷಣೆ.. ನಾಯಕಿಯನ್ನು ಪ್ರಾಣದಂತೆ ಪ್ರೀತಿಸುವ ಹುಡುಗ.. ಅಲ್ಲೇನೋ ಸಸ್ಪೆನ್ಸು.. ಹೃದಯ ತಾಕುವ ಸಣ್ಣ ಸಣ್ಣ ದೃಶ್ಯಗಳನ್ನಿಟ್ಟುಕೊಂಡೇ ಕಥೆ ಹೇಳಲು ಹೊರಟಿದ್ದಾರೆ ಶಶಾಂಕ್. ಟ್ರೇಲರ್‍ನಲ್ಲಿ ಗೊತ್ತಾಗೋದೇನಂದರೆ ಇಲ್ಲೊಂದು ಚೆಂದದ ಕಥೆಯಿದೆ ಅನ್ನೋದು.

    ಚಿತ್ರದ ಟ್ರೇಲರ್‍ನ್ನು ರಿಲೀಸ್ ಮಾಡಿರೋ ಡಾಲಿ ಧನಂಜಯ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈ ಚಿತ್ರದ ಮೂಲಕ ಪ್ರವೀಣ್ ಎಂಬ ಹೊಸ ಹುಡುಗನನ್ನು ಪರಿಚಯಿಸುತ್ತಿದ್ದಾರೆ ಶಶಾಂಕ್. ಹೆಂಗೆ ನಾವು ಖ್ಯಾತಿಯ ರಚನಾ ಇಂದರ್ ಇಲ್ಲಿ ಅಕ್ಷರಶಃ ಬೆರಗು ಹುಟ್ಟಿಸುತ್ತಾರೆ.

  • ಲವ್ 360 ಡಿಗ್ರಿ ರೋಡ್ ಶೋ

    ಲವ್ 360 ಡಿಗ್ರಿ ರೋಡ್ ಶೋ

    ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಚಿತ್ರಗಳ ಖ್ಯಾತಿಯ ಶಶಾಂಕ್ ನಿರ್ದೇಶನದ ಹೊಸ ಸಿನಿಮಾ ಲವ್ 360 ಡಿಗ್ರಿ. ಈಗ ರೋಡ್ ಶೋ ಮೂಲಕ ಪ್ರಚಾರ ಹಮ್ಮಿಕೊಂಡಿದೆ. ಒಂದೆಡೆ ನಾಳೆ ಟ್ರೇಲರ್ ಬಿಡುಗಡೆ ಇಟ್ಟುಕೊಂಡಿರೋ ಚಿತ್ರತಂಡ ಇನ್ನೊಂದೆಡೆ ಚಿತ್ರವನ್ನು ಪುಟ್ಟ ಪುಟ್ಟ ನಗರಗಳಿಗೂ ತಲುಪಿಸಿ ಪ್ರಚಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆಯ ಮರಿಯಮ್ಮನಹಳ್ಳಿಯಲ್ಲಿ ನಡೆದ ಪ್ರಚಾರದಲ್ಲಿ ಗ್ರಾಮಸ್ಥರು ಹಾಗೂ ಹೊಸಪೇಟೆ ನಗರದ ಜನ ತೋರಿಸಿದ ಪ್ರೀತಿಗೆ ಶಶಾಂಕ್ ಮೂಕರಾಗಿ ಹೋಗಿದ್ದಾರೆ.

    ಏಕೆಂದರೆ ಚಿತ್ರದ ಹೀರೋ ಪ್ರವೀಣ್ ಇದೇ ಮರಿಯಮ್ಮನಹಳ್ಳಿಯ ಹುಡುಗ. ಇವರ ಕುಟುಂಬ ಹೊಸಪೇಟೆಯಲ್ಲಿ ಆಸ್ಪತ್ರೆ ತೆರೆದು ಜನಸೇವೆ ಮಾಡುತ್ತಿದೆ. ವೈದ್ಯಕೀಯ ಸೇವೆಯನ್ನು ಎಲ್ಲರೂ ಬಿಸಿನೆಸ್ ರೀತಿ ನೋಡುವಾಗ ಇವರ ಕುಟುಂಬ ಅದನ್ನು ಪ್ರೀತಿಯಿಂದ ಸೇವೆಯಂತೆ ನೋಡುತ್ತಿರುವುದೇ ಇಷ್ಟೆಲ್ಲ ಜನರ ಪ್ರೀತಿಗೆ ಕಾರಣ.

    ಹೊಸಪೇಟೆಯಿಂದ ಶುರುವಾದ ರೋಡ್ ಶೋ ಚಿತ್ರದುರ್ಗ, ತುಮಕೂರು, ನೆಲಮಂಗಲ ಮೂಲಕ ರೋಡ್ ಶೋ ಮುಗಿಸಿ ಬಂದಿದೆ.

    ಲವ್ 360 ಚಿತ್ರಕ್ಕೆ ಪ್ರವೀಣ್ ಹೀರೋ. ರಚನಾ ಇಂದರ್ ನಾಯಕಿ. ಮುಗ್ಧ ಹೃದಯಗಳ ಪ್ರೀತಿಯ ಕಥೆ ಹೇಳೋಕೆ ಹೊರಟಿದ್ದಾರೆ ಶಶಾಂಕ್. ಅರ್ಜುನ್ ಜನ್ಯಾ ಸಂಗೀತ ನೀಡಿದ್ದು ಚಿತ್ರದ ಜಗವೇ ನೀನು ಹಾಡು ಈಗಾಗಲೇ 1 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಆಗಸ್ಟ್ 19ಕ್ಕೆ ರಿಲೀಸ್ ಆಗುತ್ತಿರೋ ಚಿತ್ರ ಬೇರೆಯದೇ ಫೀಲ್ ಇರುವ ಅಪ್ಪಟ ಲವ್ ಸ್ಟೋರಿ. ಶಶಾಂಕ್ ಇದುವರೆಗೆ ಪ್ರೇಕ್ಷಕರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನ ಹುಸಿ ಮಾಡಿಲ್ಲ. ಹೀಗಾಗಿ ಕೆಆರ್‍ಜಿ ಸ್ಟುಡಿಯೋಸ್ ಮೂಲಕ ವಿತರಣೆಯಾಗುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆಯಂತೂ ಇದೆ.