` cm basavraj bommaiah, - chitraloka.com | Kannada Movie News, Reviews | Image

cm basavraj bommaiah,

 • 100% ಪ್ರೇಕ್ಷಕರಿಗೆ ಅವಕಾಶ : ಸಿಎಂ ಹೇಳಿದ್ದೇನು?

  100% ಪ್ರೇಕ್ಷಕರಿಗೆ ಅವಕಾಶ : ಶಿವಣ್ಣ ಮನವಿಗೆ ಸಿಎಂ ಹೇಳಿದ್ದೇನು?

  ಸದ್ಯಕ್ಕೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರ ಭರ್ತಿಗೆ ಅವಕಾಶವಿದೆ. ಆದರೆ, 50% ಪ್ರೇಕ್ಷಕರಿಗಷ್ಟೇ ಅವಕಾಶ ಇರುವ ಕಾರಣ ದೊಡ್ಡ ದೊಡ್ಡ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಈ ವಾರ ರಿಲೀಸ್ ಆದ ಕಲಿವೀರ ಚಿತ್ರಕ್ಕೆ ಪರವಾಗಿಲ್ಲ ಎನ್ನುವ ರೆಸ್ಪಾನ್ಸ್ ಇದ್ದರೂ, ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳ ಕಡೆ ತಲೆ ಹಾಕುತ್ತಿಲ್ಲ. ಅದು ಆಗಬೇಕೆಂದರೆ ದೊಡ್ಡ ಚಿತ್ರಗಳು ರಿಲೀಸ್ ಆಗಬೇಕು.

  50% ಭರ್ತಿಗಷ್ಟೇ ಅವಕಾಶ ಇರೋದ್ರಿಂದ ಹೊಸ ಸಿನಿಮಾ ರಿಲೀಸ್ ಆಗುತ್ತಿಲ್ಲ. ದಯವಿಟ್ಟು 100% ಅವಕಾಶ ಕೊಡಿ ಎಂದು ಶಿವಣ್ಣ ನೇತೃತ್ವದ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದೆ. ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚೇಂಜಬರ್ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ಎನ್‍ಎಂ ಸುರೇಶ್, ಉಮೇಶ್ ಬಣಕಾರ್, ನಾಗಣ್ಣ, ಕೆ.ಮಂಜು, ಶಾಸಕಿ ತಾರಾ ಅನುರಾಧಾ ಬೊಮ್ಮಾಯಿ ಅವರ ಬಳಿಗೆ ತೆರಳಿದ ನಿಯೋಗದಲ್ಲಿದ್ದರು.

  ತಜ್ಞರ ಸಮಿತಿ ವರದಿ ನೋಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ.  ತಜ್ಞರ ಸಮಿತಿ ಶಿಫಾರಸಿನ ಆಧಾರದಲ್ಲೇ ಕ್ರಮ ಎಂದಿದ್ದಾರೆ ಸಿಎಂ ಬೊಮ್ಮಾಯಿ. ಈ ಮಾತು ಕೇಳಿದರೆ, ಬಹುತೇಕ 2021ರಲ್ಲಿ ಸಿನಿಮಾ ಮಂದಿರಗಳಿಗೆ 100% ಅವಕಾಶ ಸಿಗುವ ಸಾಧ್ಯತೆ ಇಲ್ಲ.

 • 100%ಗೆ ಡಿಮ್ಯಾಂಡ್ : ಚಿತ್ರರಂಗದ ನಿಯೋಗಕ್ಕೆ ಸಿಕ್ಕ ಭರವಸೆಯೇನು?

  100%ಗೆ ಡಿಮ್ಯಾಂಡ್ : ಚಿತ್ರರಂಗದ ನಿಯೋಗಕ್ಕೆ ಸಿಕ್ಕ ಭರವಸೆಯೇನು?

  ಯಾವಾಗ 100% ಪ್ರೇಕ್ಷಕರ ಭರ್ತಿಗೆ ಅವಕಾಶ ಸಿಗುವುದೋ ಕಾಯುತ್ತಿರುವ ಚಿತ್ರರಂಗ ಮತ್ತು ಚಿತ್ರಮಂದಿರ ಮಾಲೀಕರ ಮನವಿಗೆ ಇನ್ನೂ ಪುರಸ್ಕಾರ ಸಿಕ್ಕಿಲ್ಲ. ಎಲ್ಲವನ್ನೂ ಓಪನ್ ಮಾಡಿರುವ ಸರ್ಕಾರ, ಚಿತ್ರಮಂದಿರಗಳನ್ನು ಮಾತ್ರ 50:50ಯಲ್ಲೇ ಇಟ್ಟಿದೆ. ಹಲವು ಬಾರಿ ಸಚಿವರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗಿದೆ. ಸೋಮವಾರ ಮತ್ತೊಮ್ಮೆ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ 100% ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ.

  ಫಿಲಮ್ ಚೇಂಬರ್ ಅಧ್ಯಕ್ಷ ಜೈರಾಜ್, ನಿರ್ಮಾಪಕ ಸಾ.ರಾ.ಗೋವಿಂದು, ಕಾರ್ಯದರ್ಶಿ ಎನ್.ಎಂ.ಸುರೇಶ್ ಸೇರಿದಂತೆ ವಾಣಿಜ್ಯ ಮಂಡಳಿಯ ನಿಯೋಗ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿತು. ಬಿಡುಗಡೆಗೆ ಕಾದಿರುವ ಚಿತ್ರಗಳು, ಸಿನಿಮಾ ರಿಲೀಸ್ ಲೇಟ್ ಆದರೆ, ಸಂಪೂರ್ಣ ಅವಕಾಶ ಸಿಗದೇ ಇದ್ದರೆ ಎದುರಾಗುವ ಸಮಸ್ಯೆಗಳು, ಆಗುವ ನಷ್ಟ, ಕೊವಿಡ್ ಮಾರ್ಗಸೂಚಿ ಪಾಲನೆಯ ಭರವಸೆ.. ಎಲ್ಲವನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

  ನಿಯೋಗದಲ್ಲಿ ಹೋಗಿ ಬಂದವರ ಪ್ರಕಾರ ಚಿತ್ರಮಂದಿರಗಳಿಗೆ 100% ಅವಕಾಶ ಈ ವಾರ ಅರ್ಥಾತ್ ಈ ಶುಕ್ರವಾರದಿಂದ ಸಿಗಬಹುದು. ಅಕಸ್ಮಾತ್.. ಈ ವಾರ ಸಿಗದೇ ಹೋದರೆ ಫೆಬ್ರವರಿ 2ನೇ ವಾರದಿಂದ 1995 ಪ್ರೇಕ್ಷಕರ ಭರ್ತಿಘೆ ಅವಕಾಶ ಸಿಗುವುದು ಶತಃಸಿದ್ಧ. ಚಿತ್ರಗಳ ಬಿಡುಗಡೆಗೆ ಪ್ಲಾನ್ ಮಾಡಿಕೊಳ್ಳುವವರು ಮಾಡಿಕೊಳ್ಳಬಹುದು.

 • 777 ಚಾರ್ಲಿ ನೋಡಿದ ಸಿಎಂ ಬೊಮ್ಮಾಯಿ & ಟೀಂ

  777 ಚಾರ್ಲಿ ನೋಡಿದ ಸಿಎಂ ಬೊಮ್ಮಾಯಿ & ಟೀಂ

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ವಾನ ಪ್ರಿಯರು. ಅವರ ಮನೆಯಲ್ಲಿ ಸಾಕಿದ್ದ ನಾಯಿ ಮೃತಪಟ್ಟಾಗ ಅವರು ಮಗುವನ್ನೇ ಕಳೆದುಕೊಂಡವರಂತೆ ಕಣ್ಣೀರಿಟ್ಟಿದ್ದನ್ನು ಕರ್ನಾಟಕ ನೋಡಿದೆ. ಇದೇ ಪ್ರೀತಿಯಿಂದ 777 ಚಾರ್ಲಿ ನೋಡಿದ್ದಾರೆ ಸಿಎಂ ಬೊಮ್ಮಾಯಿ. ಬೊಮ್ಮಾಯಿ ಜೊತೆ ಸಚಿವರಾದ ಆರ್.ಅಶೋಕ್, ಡಿ.ಸುಧಾಕರ್, ಬಿ.ಸಿ.ನಾಗೇಶ್, ಶಾಸಕ ರಘುಪತಿ ಭಟ್ ಸೇರಿದಂತೆ ಹಲವರು ಸಿನಿಮಾ ನೋಡಿದರು.

  ನನಗೆ ನಾಯಿಗಳೆಂದರೆ ಪ್ರೀತಿ. ನನ್ನ ಮನೆಯಲ್ಲೀಗ ದಿಯಾ ಅನ್ನೋ ಹೆಸರಿನ ನಾಯಿ ಇದೆ. ಸಿನಿಮಾದಲ್ಲಿ ಚಾರ್ಲಿ ಹೇಗೆ ಅಪ್ಪಿಕೊಳ್ಳುತ್ತದೋ.. ನಾನು ಮನೆಗೆ ಹೋದಾಗ ನನ್ನ ದಿಯಾ ಕೂಡಾ ಹಾಗೆಯೇ ಅಪ್ಪಿಕೊಳ್ಳುತ್ತದೆ ಎಂದರು ಬೊಮ್ಮಾಯಿ. ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಕರೆಯನ್ನೂ ಕೊಟ್ಟರು. ನಿರ್ದೇಶಕ ಕಿರಣ್ ರಾಜ್, ರಕ್ಷಿತ್ ಶೆಟ್ಟಿಯವರನ್ನು ಬಾಯ್ತುಂಬಾ ಹೊಗಳಿದರು.

 • 777 ಚಾರ್ಲಿಗೆ ಟ್ಯಾಕ್ಸ್ ಫ್ರೀ : ಮಂಸೋರೆ ವಿರೋಧ

  777 ಚಾರ್ಲಿಗೆ ಟ್ಯಾಕ್ಸ್ ಫ್ರೀ : ಮಂಸೋರೆ ವಿರೋಧ

  777 ಚಾರ್ಲಿ ಚಿತ್ರಕ್ಕೆ ಮನರಂಜನಾ ತೆರಿಗೆ ವಿನಾಯಿತಿ ನೀಡಿದ್ದಕ್ಕೆ ನಿರ್ದೇಶಕ ಮಂಸೋರೆ ವಿರೋಧ ವ್ಯಕ್ತಪಡಿಸಿದ್ದಾರೆ. ಆಕ್ಟ್ 1978, ನಾತಿಚರಾಮಿಯಂತಾ ಚಿತ್ರಗಳನ್ನು ಕೊಟ್ಟಿರುವ ಮಂಸೋರೆ ಚಾರ್ಲಿಗೆ ತೆರಿಗೆ ವಿನಾಯಿತಿ ನೀಡಿದ್ದನ್ನು ಖಂಡಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಸಾರಾಂಶ ಇಷ್ಟು.

  ಈ ಹಿಂದೆ ರಾಜ್ಯ ಸರ್ಕಾರ ಕನ್ನಡದ ಎಲ್ಲ ಚಿತ್ರಗಳಿಗೆ ತೆರಿಗೆ ವಿನಾಯಿತಿ ನೀಡುತ್ತಿತ್ತು. ಕರ್ನಾಟಕದಲ್ಲಿಯೇ ಚಿತ್ರೀಕರಣವಾಗಿರಬೇಕು ಎಂಬ ಷರತ್ತಿನ ಮೇರೆಗೆ ಇದ್ದ ಅನುಕೂಲ ಅದು. ಅದಕ್ಕೂ ಮುನ್ನ ರಾಮಕೃಷ್ಣ ಹೆಗಡೆ ಕಾಲದಲ್ಲಿ ಕನ್ನಡ ಚಿತ್ರಗಳಿಗೆ ತೆರಿಗೆ ವಿಧಿಸುವ ನಿರ್ಧಾರ ಮಾಡಿದ್ದಾಗ ಡಾ.ರಾಜ್ ಕುಮಾರ್ ವಿರೋಧಿಸಿದ್ದರು. ಚಿತ್ರರಂಗವನ್ನೇ ತೊರೆದು ಹಳ್ಳಿಯಲ್ಲಿ ನೆಲೆಸುವ ನಿರ್ಧಾರ ತೆಗೆದುಕೊಂಡಿದ್ದರು. ಆಗ ಖುದ್ದು ಹೆಗಡೆಯವರೇ ರಾಜ್ ಅವರ ಮನವೊಲಿಸಿ, ತಮ್ಮ ನಿರ್ಧಾರ ಹಿಂತೆಗೆದುಕೊಂಡಿದ್ದರು. ಈಗಲೂ ಅಷ್ಟೆ, ಕನ್ನಡ ಚಿತ್ರಗಳಿಗೆ ತೆರಿಗೆ ವಿನಾಯಿತಿಯನ್ನು ಜಿಎಸ್‍ಟಿ ಹೆಸರಲ್ಲಿ ಹೇರಿರುವುದು ನಿಮ್ಮದೇ ಬಿಜೆಪಿ ಸರ್ಕಾರ. ಈಗ ವಿನಾಯಿತಿ ಘೋಷಿಸೋದ್ಯಾಕೆ? ಕೇವಲ ಒಂದು ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸುವುದು ಸರಿಯಲ್ಲ. ಈ ಹಿಂದೆ ನೀವು ಅನ್ಯಭಾಷೆಯ ಚಿತ್ರಕ್ಕೂ ತೆರಿಗೆ ವಿನಾಯಿತಿ ನೀಡಿದ ನೆನಪು ಇದೆ. (ಕಾಶ್ಮೀರ್ ಫೈಲ್ಸ್)

  ಕನ್ನಡದಲ್ಲಿ ಒಳ್ಳೆಯ ಮೌಲ್ಯ ಸಾರುವ ಹಲವು ಚಿತ್ರಗಳು ಬರುತ್ತಿವೆ. ಪೆಡ್ರೋ, ಕೋಳಿತಾಲ್, ಡೊಳ್ಳು, ದಾರಿ ಯಾವುದಯ್ಯಾ ವೈಕುಂಠಕೆ, ಅಮೃತಮತಿ, ನೀಲಿ ಹಕ್ಕಿ.. ಹೀಗೆ ಹಲವು ಚಿತ್ರಗಳಿವೆ. ಎಲ್ಲ ಚಿತ್ರಗಳಿಗೂ ಇದೇ ಅನೂಕೂಲ ನೀಡಿ. ತೆರಿಗೆ ವಿಧಿಸುವುದು ಅಣ್ಣಾವ್ರ ಆಶಯಕ್ಕೆ ವಿರುದ್ಧ.

  ಇದಿಷ್ಟೂ ಮಂಸೋರೆ ಅವರ ಪತ್ರದ ಸಾರಾಂಶ. 

 • ಏಕ್ ಲವ್ ಯಾ ನೋಡಲಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

  ಏಕ್ ಲವ್ ಯಾ ನೋಡಲಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

  ಏಕ್ ಲವ್ ಯಾ ಚಿತ್ರದ ಪ್ರಚಾರ ಜೋರಾಗುತ್ತಿದೆ. ನಿರೀಕ್ಷೆಯಂತೆಯೇ ಪ್ರೇಮ್ ತಮ್ಮ ಚಿತ್ರವನ್ನು ಅದ್ಧೂರಿಯಾಗಿ ಪ್ರಮೋಟ್ ಮಾಡುತ್ತಿದ್ದಾರೆ.  ಈ ಬಾರಿ ಅವರು ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು. ತೆರೆಗೆ ತರುತ್ತಿರೋದು ತಮ್ಮ ಪತ್ನಿ ರಕ್ಷಿತಾ ಅವರ ತಮ್ಮ ರಾಣಾನನ್ನು. ಹೀಗಾಗಿ ಚಿತ್ರದ ಬಗ್ಗೆ ಅದ್ಧೂರಿ ಪ್ರಚಾರ ಕೈಗೊಂಡಿದ್ದಾರೆ.

  ಚಿತ್ರದ ಪ್ರೀಮಿಯರ್ ಷೋವನ್ನು ಫೆಬ್ರವರಿ 23ರಂದು ಇಟ್ಟುಕೊಂಡಿದ್ದಾರೆ. 24ಕ್ಕೆ ರಾಜ್ಯಾದ್ಯಂತ ರಿಲೀಸ್. ಆ ಪ್ರೀಮಿಯರ್ ಶೋಗೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಿದ್ದಾರೆ  ಪ್ರೇಮ್. ಜೊತೆಗೆ ಎಂದಿನಂತೆ ಪ್ರೇಮ್ ಅವರ ಚಿತ್ರರಂಗದ ಬಳಗ ಇರಲಿದೆ.

  ಏಕ್ ಲವ್ ಯಾ ಚಿತ್ರಕ್ಕೆ ರಾಣಾ ಹೀರೋ. ರಚಿತಾ ರಾಮ್ ಮತ್ತು ರೀಷ್ಮಾ ನಾಣಯ್ಯ ಹೀರೋಯಿನ್ಸ್. ರಕ್ಷಿತಾ ಪ್ರೇಮ್ ನಿರ್ಮಾಪಕಿ. ಪ್ರೇಮ್ ಅವರೇ ಹೇಳಿರೋ ಹಾಗೆ ಚಿತ್ರದ ಇನ್ನೊಬ್ಬ ಹೀರೋ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ. ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೂ ಪ್ರೇಮ್ ಆಹ್ವಾನ ನೀಡಿದ್ದಾರೆ.

 • ಗಂಧದ ಗುಡಿಗೆ ತೆರಿಗೆ ವಿನಾಯಿತಿ : ಬೊಮ್ಮಾಯಿ ಘೋಷಣೆ

  ಗಂಧದ ಗುಡಿಗೆ ತೆರಿಗೆ ವಿನಾಯಿತಿ : ಬೊಮ್ಮಾಯಿ ಘೋಷಣೆ

  ಪುನೀತ್ ರಾಜ್ ಕುಮಾರ್ ಕನ್ನಡಿಗರ ಹೃದಯದಲ್ಲಿ ಎಂದಿಗೂ ಚಿರಸ್ಥಾಯಿ. ಪರಿಸರ ಕಾಳಜಿಯಿಂದ ನಿರ್ಮಿಸಿದ ಗಂಧದ ಗುಡಿಗೆ ಎಲ್ಲ ರೀತಿಯ ಟ್ಯಾಕ್ಸ್ ಫ್ರೀ ಮಾಡುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ..

  ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಡೆಯ ಸಿನಿಮಾ ಗಂಧದ ಗುಡಿ ಅಕ್ಟೋಬರ್ 28 ರಂದು ಬಿಡುಗಡೆಯಾಗಲಿದೆ. ಪುನೀತ ಪರ್ವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

  ಇಂತಹದ್ದನ್ನೆಲ್ಲ ಅಪ್ಪು ಮಾತ್ರ ಮಾಡೋಕೆ ಸಾಧ್ಯ. ನಿಸರ್ಗದ ಬಗ್ಗೆ ಪ್ರಕೃತಿ ಕುರಿತು ಜಾಗೃತಿ ಮೂಡಿಸುವುದು ಇಂದಿನ ಅತ್ಯಗತ್ಯ ಅನಿವಾರ್ಯತೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪುನೀತ್ ಗಂಧದ ಗುಡಿಯಲ್ಲಿ ಮಾಡಿದ್ದಾರೆ ಎಂದು ಹೊಗಳಿದರು ಬೊಮ್ಮಾಯಿ.

  ಗಂಧದ ಗುಡಿ ಚಿತ್ರಕ್ಕಾಗಿ ಪುನೀತ್ ಕಾಡು ಮೇಡು ಸುತ್ತಿದ್ದಾರೆ. ನಿರ್ದೇಶಕ ಅಮೋಘವರ್ಷ ಅವರೊಂದಿಗೆ ಇಡೀ ಕರುನಾಡಿನ ಪ್ರಕೃತಿ ಹಾಗೂ ವನ್ಯಜೀವಿಗಳನ್ನು ಪರಿಚಯಿಸುವ ಕೆಲಸ ಮಾಡಿದ್ದಾರೆ. ಇದೊಂದು ವಿಶೇಷ ಪ್ರಯೋಗವೂ ಹೌದು. ಸಚಿನ್ ತೆಂಡೂಲ್ಕರ್ ಕುರಿತ ಡಾಕ್ಯುಮೆಂಟರಿ ಬಿಟ್ಟರೆ ಮಿಕ್ಕಾವ ಡಾಕ್ಯುಮೆಂಟರಿಯೂ ಸಿನಿಮಾ ರೀತಿ ಥಿಯೇಟರಿಗೆ ಬಿಡುಗಡೆಯಾಗಿಲ್ಲ. ಅಂತಹದ್ದೊಂದು ವಿಶೇಷ ಪ್ರಯೋಗ ಮಾಡಲು ಹೊರಟಿದ್ದರು ಪುನೀತ್. ಪುನೀತ್ ಅವರ ಆ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ಅಶ್ವಿನಿ ಅವರೊಂದಿಗೆ ಇಡೀ ಕರುನಾಡಿನ ಚಿತ್ರರಂಗವೇ ನಿಂತಿದ್ದು ಇದೇ 28ರಂದು ರಿಲೀಸ್ ಆಗುತ್ತಿದೆ.

  ಸಾಕ್ಷ್ಯಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು 4 ಹಾಡುಗಳೂ ಇವೆ. ಡಾ.ರಾಜ್ ಕುಮಾರ್ ಅವರ ಗಂಧದ ಗುಡಿಯ ನಾವಾಡುವ ನುಡಿಯೇ ಕನ್ನಡ ನುಡಿ ಹಾಡನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದರ ಜೊತೆಗೆ ಇನ್ನೂ 3 ಹಾಡುಗಳಿವೆ. ಸಾಹಿತ್ಯ ಸಂತೋಷ್ ಆನಂದರಾಮ್ ಅವರದ್ದು.

 • ಗುರು ಶಿಷ್ಯರ ಖೋಖೋ ಮೆಚ್ಚಿಕೊಂಡ ಬಸವರಾಜ ಬೊಮ್ಮಾಯಿ

  ಗುರು ಶಿಷ್ಯರ ಖೋಖೋ ಮೆಚ್ಚಿಕೊಂಡ ಬಸವರಾಜ ಬೊಮ್ಮಾಯಿ

  ಗುರು ಶಿಷ್ಯರು ಚಿತ್ರ ಇಷ್ಟವಾಗೋಕೆ ಹಲವು ಕಾರಣಗಳಿವೆ. ಚೆಂದದ ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ.. ಶರಣ್, ನಿಶ್ವಿಕಾ ಹಾಗೂ 12 ಹುಡುಗರ ಗತ್ತು ಗೈರತ್ತಿನ ಅಭಿನಯ.. ಇವೆಲ್ಲವನ್ನೂ ಮೀರಿ ಇಷ್ಟವಾಗಿದ್ದು ಖೋಖೋ ಆಟದ ಹಿನ್ನೆಲೆಯ ಕಥೆ ಇರುವ ಕಾರಣಕ್ಕೆ. ಚಿತ್ರವನ್ನು ಪ್ರೇಕ್ಷಕರು ಕೈಚಾಚಿ ಮನದುಂಬಿ ಅಪ್ಪಿಕೊಂಡಿದ್ದಾರೆ. ಮೆಚ್ಚಿಕೊಂಡಿದ್ದಾರೆ. ಇಂಥಾದ್ದೊಂದು ಚಿತ್ರ ಕನ್ನಡದಲ್ಲಿ ಬರಬೇಕಿತ್ತು. ಇನ್ನು ಮುಂದೆಯೂ ಇಂತಹ ಚಿತ್ರಗಳು ಬರಲಿ ಎಂದು ಹಾರೈಸುತ್ತಿದ್ದಾರೆ.

  ನಿರ್ದೇಶಕ ಜಡೇಶ್ ಕುಮಾರ್ ಹಂಪಿ, ಶರಣ್, ನಿಶ್ವಿಕಾ  ನಾಯ್ಡು, ತರುಣ್ ಸುಧೀರ್ ಎಲ್ಲರೂ ಮೆಚ್ಚುಗೆಯ ಸುರಿಮಳೆಯಲ್ಲಿ ಮಿಂದೇಳುತ್ತಿದ್ದಾರೆ. ಚಿತ್ರ ಬಿಡುಗಡೆ ದಿನವೇ ಚಿತ್ರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವರಿಗೆ ತೋರಿಸುವುದಾಗಿ ಶರಣ್ ಹೇಳಿಕೊಂಡಿದ್ದರು. ಇದೀಗ ಶರಣ್ ಖುದ್ದು ಮುಖ್ಯಮಂತ್ರಿಗಳನ್ನು  ಭೇಟಿ ಸಿನಿಮಾ ನೋಡಲು ಆಹ್ವಾನ ಕೊಟ್ಟಿದ್ದಾರೆ.

  ಸಿನಿಮಾ ಬಗ್ಗೆ ಕೇಳಿದ್ದೇನೆ. ಖೋಖೋ ಆಟವನ್ನು ಹೈಲೈಟ್ ಮಾಡಿ ತೋರಿಸಿದ್ದೀರಂತೆ. ಖಂಡಿತಾ ಬಿಡುವು ಮಾಡಿಕೊಂಡು ಈ ಸಿನಿಮಾ ನೋಡುತ್ತೇನೆ. ಇಂತಹ ಇನ್ನಷ್ಟು ಚಿತ್ರಗಳು ಬರಲಿ ಎಂದಿದ್ದಾರೆ ಬಸವರಾಜ ಬೊಮ್ಮಾಯಿ. ಬಿಡುವಿಲ್ಲದ ಕೆಲಸಗಳ ಮಧ್ಯೆಯೂ ನಮ್ಮ ಚಿತ್ರತಂಡದ ಭೇಟಿಗೆ ಸಮಯ ನೀಡಿದ ಮುಖ್ಯಮಂತ್ರಿಗಳಿಗೆ ನಟ ಶರಣ್, ತರುಣ್ ಸುಧೀರ್, ಜಡೇಶ್ ಕುಮಾರ್ ಹಂಪಿ ಹಾಗೂ ಗುರು ಶಿಷ್ಯರು ಚಿತ್ರತಂಡ ಧನ್ಯವಾದ ಅರ್ಪಿಸಿದೆ.

 • ನಿರ್ಮಾಪಕರ ಮೀಟಿಂಗ್ ಇಂಪ್ಯಾಕ್ಟ್ : ದೊಡ್ಡ ಚಿತ್ರಗಳ ರಿಲೀಸ್‍ಗೆ  ಮುಹೂರ್ತ ಫಿಕ್ಸ್ ಆಯ್ತಾ?

  ನಿರ್ಮಾಪಕರ ಮೀಟಿಂಗ್ ಇಂಪ್ಯಾಕ್ಟ್ : ದೊಡ್ಡ ಚಿತ್ರಗಳ ರಿಲೀಸ್‍ಗೆ  ಮುಹೂರ್ತ ಫಿಕ್ಸ್ ಆಯ್ತಾ?

  ಎಲ್ಲವೂ ಪ್ಲಾನ್ ಪ್ರಕಾರವೇ ಆಗಿದ್ದರೆ, ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ ಸಲಗ, ವರಮಹಾಲಕ್ಷ್ಮಿ ಹಬ್ಬಕ್ಕೇ ರಿಲೀಸ್ ಆಗಬೇಕಿತ್ತು. ಆಗಲಿಲ್ಲ. ಗಣೇಶ ಹಬ್ಬಕ್ಕೂ ಬರಲಿಲ್ಲ. ಆದರೀಗ ಮುಹೂರ್ತ ಫಿಕ್ಸ್ ಮಾಡಿಕೊಂಡಿರೋ ಹಾಗಿದೆ. ಜೊತೆಯಲ್ಲೋ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಕೂಡಾ ರಿಲೀಸ್ ಡೇಟ್ ಫೈನಲ್ ಮಾಡಿಕೊಂಡಿರೋ ಹಾಗಿದೆ.

  ಶುಕ್ರವಾರದ ಸಿನಿಮಾ ಜಾಹೀರಾತುಗಳಲ್ಲಿ ಎರಡೂ ಚಿತ್ರಗಳು ಈ ರೀತಿಯದ್ದೊಂದು ಹಿಂಟ್ ನೀಡಿವೆ.

  ವಿಶೇಷವೆಂದರೆ ಸಲಗ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ಭಜರಂಗಿ 2 ನಿರ್ಮಾಪಕ ಜಯಣ್ಣ ಸೇರಿದಂತೆ ಕೆಲವು ನಿರ್ಮಾಪಕರು ಸೆ.21ರಂದು ಆರೋಗ್ಯ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ್ದರು. ಅದಾದ ನಂತರ ಇಂದು ಅಂದರೆ ಸೆ.24ರಂದು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಇಂದು ಥಿಯೇಟರ್‍ಗಳಿಗೆ 100% ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ.

 • ನೈಟ್ ಕಫ್ರ್ಯೂ ಪ್ರಾಬ್ಲಂ ಸರಿ ಮಾಡುತ್ತಾ ಸರ್ಕಾರ?

  ನೈಟ್ ಕಫ್ರ್ಯೂ ಪ್ರಾಬ್ಲಂ ಸರಿ ಮಾಡುತ್ತಾ ಸರ್ಕಾರ?

  ಥಿಯೇಟರುಗಳು ಓಪನ್ ಆಗಿವೆ. 100% ಭರ್ತಿಗೆ ಅವಕಾಶಗಳೂ ಇವೆ. ಜನರೂ ಥಿಯೇಟರಿಗೆ ಬಂದಿದ್ದಾರೆ. ಹಬ್ಬದ ದಿನ ರಿಲೀಸ್ ಆದ ಸಲಗ ಮತ್ತು ಕೋಟಿಗೊಬ್ಬ 3 ಎರಡೂ ಚಿತ್ರಗಳು ಭರ್ಜರಿ ಪ್ರದರ್ಶನ ಕಾಣುತ್ತಿವೆ. ಆದರೆ.. ಈಗಲೂ ಸಮಸ್ಯೆ ಬಗೆಹರಿದಿಲ್ಲ. ನೈಟ್ ಕಫ್ರ್ಯೂ ಜಾರಿಯಲ್ಲಿದ್ದು, ಥಿಯೇಟರ್ ಮಾಲೀಕರು ಮತ್ತು ಚಿತ್ರಮಂದಿರ ಮಾಲೀಕರನ್ನು ಸಂಕಷ್ಟಕ್ಕೆ ನೂಕಿದೆ.

  ರಾತ್ರಿ 10 ಗಂಟೆ ನಂತರ ನೈಟ್ ಕಫ್ರ್ಯೂ ಜಾರಿಯಲ್ಲಿದೆ. ಹೀಗಾಗಿ ಹಲವೆಡೆ ಸೆಕೆಂಡ್ ಶೋ ಸಾಧ್ಯವಾಗುತ್ತಿಲ್ಲ. ರಾತ್ರಿ 10 ಗಂಟೆ ನಂತರವೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಶೋಗಳಿರುತ್ತಿದ್ದವು. ನೈಟ್ ಕಫ್ರ್ಯೂನಿಂದಾಗಿ ರಾಜ್ಯದಲ್ಲಿರೋ 60+ ಮಲ್ಟಿಪ್ಲೆಕ್ಸ್‍ಗಳಲ್ಲಿ 10 ಗಂಟೆ ಶೋ ಇಲ್ಲ. 10 ಗಂಟೆ ಶೋಗಳಿದ್ದರೆ ಚಿತ್ರಗಳು 12 ರಿಂದ 13 ಕೋಟಿ ಬ್ಯುಸಿನೆಸ್ ಮಾಡುತ್ತಿದ್ದವು. ನಿರ್ಮಾಪಕರಿಗೆ 2ರಿಂದ 3 ಕೋಟಿ ಲಾಭ ಸಿಗುತ್ತಿತ್ತು. ದಯವಿಟ್ಟು ನೈಟ್ ಕಫ್ರ್ಯೂ ನಿರ್ಬಂಧ ತೆಗೆಯಿರಿ ಎನ್ನುವುದು ನಿರ್ಮಾಪಕರ ಮನವಿ.

  ಮುಖ್ಯಮಂತ್ರಿಗಳು ಬೈ ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿ ಇರೋದ್ರಿಂದ ನೇರವಾಗಿ ಮನವಿ ಸಲ್ಲಿಸೋಕೆ ಆಗುತ್ತಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕವೇ ಮನವಿ ಮಾಡುತ್ತಿದ್ದೇವೆ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು.

 • ಸಿನಿಮಾ ಸಬ್ಸಿಡಿ : ಇನ್ ಮುಂದೆ 200 ಚಿತ್ರಗಳಿಗೆ..

  ಸಿನಿಮಾ ಸಬ್ಸಿಡಿ : ಇನ್ ಮುಂದೆ 200 ಚಿತ್ರಗಳಿಗೆ..

  ಇದು ಬೊಮ್ಮಾಯಿ ಬಜೆಟ್ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ. ಇದೂವರೆಗೆ ವರ್ಷಕ್ಕೆ 125 ಚಿತ್ರಗಳಿಗೆ ಸಬ್ಸಿಡಿ ಕೊಡಲಾಗುತ್ತಿತ್ತು. ಈಗ ಅದನ್ನು 200 ಚಿತ್ರಗಳಿಗೆ ನೀಡಲಾಗುವುದು ಎಂದು ಬೊಮ್ಮಾಯಿ ಬಜೆಟ್‍ನಲ್ಲಿಯೇ ಅಧಿಕೃತವಾಗಿ ಘೋಷಿಸಿದ್ದಾರೆ. ವಿಶೇಷ ಅಂದ್ರೆ 175 ಚಿತ್ರಗಳಿಗೆ ಸಬ್ಸಿಡಿ ನೀಡುವಂತೆ ಚಿತ್ರರಂಗ ಮನವಿ ಮಾಡಿತ್ತು. ಅದಕ್ಕೆ ಇನ್ನೂ 25 ಚಿತ್ರಗಳನ್ನು ಸೇರಿಸಿ ಸಬ್ಸಿಡಿ ನೀಡುವುದಾಗಿ ಘೋಷಿಸಿದ್ದಾರೆ ಬೊಮ್ಮಾಯಿ.

  ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಿನಿಮೋತ್ಸವದಲ್ಲಿ ಸಚಿವ ಮುನಿರತ್ನ ಈ ಬಗ್ಗೆ ಸುಳಿವು ಕೊಟ್ಟಿದ್ದರು. ಚಿತ್ರರಂಗಕ್ಕೆ ಬೊಮ್ಮಾಯಿ ಎಂದೂ ಮರೆಯಲಾಗದ ಕೊಡುಗೆ ಕೊಡಲಿದ್ದಾರೆ ಎಂದು ತಿಳಿಸಿದ್ದರು.

  ಸಬ್ಸಿಡಿ ನಿಯಮ ಮಾತ್ರ ಹಿಂದಿನಂತೆಯೇ ಇರಲಿದೆ. ಕಾದಂಬರಿ ಅಧರಿತ, ಸಂಸ್ಕøತಿ ಬಿಂಬಿಸುವ ಚಿತ್ರಗಳಿಗೆ 25 ಲಕ್ಷ. ಮಕ್ಕಳ ಸಿನಿಮಾ, ಬ್ಯಾರಿ, ಕೊಂಕಣಿ, ತುಳು ಭಾಷೆಯ ಚಿತ್ರಗಳಿಗೆ 15 ಲಕ್ಷ, ಮಿಕ್ಕ ಚಿತ್ರಗಳಿಗೆ 10 ಲಕ್ಷ ನೀಡಲಾಗುತ್ತದೆ. ಡಬ್ ಆದ ಚಿತ್ರಗಳು, ಅಶ್ಲೀಲ ಚಿತ್ರಗಳಿಗೆ ಸಬ್ಸಿಡಿ ಇರಲ್ಲ.